ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
ಹತ್ತನೇ ತರಗತಿ ವಿಜ್ಞಾನ ಅಧ್ಯಾಯ ಒಂದರ ಪ್ರಶ್ನೋತ್ತರಗಳು,
10ನೇ ತರಗತಿ ವಿಜ್ಞಾನ ಪಾಠ 1 ಎಲ್ಲಾ ನೋಟ್ಸ್ ಪ್ರಶ್ನೋತ್ತರ,10th Standard Science Chapter 1 Notes Question Answer 10th Class Science Notes in Kannada Pdf 2025, Kseeb Solution For Class 10 Science Notes 10th class science Guide 10th Standard Vigyan Notes 10th Std science Notes in Kannada Medium sslc science notes pdf 10th science notes in kannada pdf 2025
ಆತ್ಮೀಯ ವಿದ್ಯಾರ್ಥಿಗಳೇ!…… ಇಲ್ಲಿ ನಾವು 10ನೇ ತರಗತಿ ಪಾಠ 1 ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದೇ ಇಲ್ಲಿ 10ನೇ ತರಗತಿ ವಿಜ್ಞಾನ ನೋಟ್ಸ್ ನ್ನು ನೀಡಿರುತ್ತೇವೆ…..10ನೇ ತರಗತಿ ವಿದ್ಯಾರ್ಥಿಗಳ ಓದಿನ ಸಹಾಯಕ್ಕೆಂದೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಈ ಕೆಳಗೆ ಡೌನ್ಲೋಡ್ ಲಿಂಕ್ ನ್ನು ಕೊಟ್ಟಿರುತ್ತೇವೆ ಇದರ ಮುಖಾಂತರ ನೇರವಾಗಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್ ನ್ನು ಸುಲಭವಾಗಿ ವೀಕ್ಷಿಸಬಹುದು,
೧. ಈ ಕೆಳಗಿನ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ?
2PbO(s) + C(s) → 2Pb(s) + CO2(g)
(a) ಸೀಸ ಅಪಕರ್ಷಣಗೊಂಡಿದೆ.
(b) ಕಾರ್ಬನ್ ಡೈಆಕ್ಸೈಡ್ ಉತ್ಕರ್ಷಣಗೊಂಡಿದೆ.
(c) ಕಾರ್ಬನ್ ಉತ್ಕರ್ಷಣಗೊಂಡಿದೆ.
(d) ಸೀಸದ ಆಕ್ಸೈಡ್ ಅಪಕರ್ಷಣಗೊಂಡಿದೆ.
(i) (a) ಮತ್ತು (b)
(ii) (a) ಮತ್ತು (c)
(iii) (a), (b) ಮತ್ತು (c)
(iv) ಎಲ್ಲವೂ
ಉತ್ತರ
(i) (a) ಮತ್ತು (b)
2. Fe2O3 + 2Al → Al2O3 + 2Fe
ಮೇಲಿನ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ
(a) ಸಂಯೋಗ ಕ್ರಿಯೆ. (b) ದ್ವಿಸ್ಥಾನಪಲ್ಲಟ ಕ್ರಿಯೆ.
(c) ವಿಭಜನ ಕ್ರಿಯೆ. (d) ಸ್ಥಾನಪಲ್ಲಟ ಕ್ರಿಯೆ<span;>.
ಉತ್ತರ
(d) ಸ್ಥಾನಪಲ್ಲಟ ಕ್ರಿಯೆ.
೩. ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?
ಸರಿಯಾದ ಉತ್ತರಕ್ಕೆ ಗುರುತು ಹಾಕಿ.
(a) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ.
(b) ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್ ಉಂಟಾಗುತ್ತವೆ.
(c) ಯಾವುದೇ ಕ್ರಿಯೆ ನಡೆಯುವುದಿಲ್ಲ.
(d) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ.
ಉತ್ತರ
(a) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ.
೪. ಸರಿದೂಗಿಸಿದ ರಾಸಾಯನಿಕ ಸಮೀಕರಣ ಎಂದರೇನು? ರಾಸಾಯನಿಕ ಸಮೀಕರಣಗಳನ್ನು ಏಕೆ
ಸರಿದೂಗಿಸಬೇಕು?
ಬಾಣದ ಗುರುತಿನ ಎರಡೂ ಬದಿಯಲ್ಲಿರುವ ಪ್ರತಿ ಧಾತುವಿನ ಪರಮಾಣುಗಳ ಸಂಖ್ಯೆ ಒಂದೇ
ಆಗಿರುವ ಸಮೀಕರಣವು ಸರಿದೂಗಿಸಿದ ರಾಸಾಯನಿಕ ಸಮೀಕರಣವಾಗಿದೆ. ಅಥವಾ ಪ್ರತಿ ಧಾತುವಿನ ಪರಮಾಣುಗಳ ಸಂಖ್ಯೆ ರಾಸಾಯನಿಕ ಕ್ರಿಯೆಯ ಮೊದಲು ಮತ್ತು ನಂತರ ಒಂದೇ ಆಗಿರಬೇಕು.
ರಾಶಿ ಸಂರಕ್ಷಣಾ ನಿಯಮದ ಪ್ರಕಾರ ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಾಗಲೀ, ಲಯಗೊಳಿಸುವುದಾಗಲೀ ಸಾಧ್ಯವಿಲ್ಲ. ಆದ್ದರಿಂದ ರಾಸಾಯನಿಕ ಕ್ರಿಯೆಯ ಉತ್ಪನ್ನಗಳಲ್ಲಿರುವ ಧಾತುಗಳ ಒಟ್ಟು ರಾಶಿಯು ಪ್ರತಿವರ್ತಕದಲ್ಲಿರುವ ಧಾತುಗಳ ಒಟ್ಟು ರಾಶಿಗೆ ಸಮನಾಗಿರಬೇಕು.
೫. ಈ ಕೆಳಗಿನ ಹೇಳಿಕೆಗಳನ್ನು ರಾಸಾಯನಿಕ ಸಮೀಕರಣಗಳ ರೂಪಕ್ಕೆ ಪರಿವರ್ತಿಸಿ ಮತ್ತು ನಂತರ
ಅವುಗಳನ್ನು ಸರಿದೂಗಿಸಿ.
(a) ಹೈಡ್ರೋಜನ್ ಅನಿಲ ನೈಟ್ರೋಜನ್‌ನೊಂದಿಗೆ ಸೇರಿ ಅಮೋನಿಯಾ ಆಗುತ್ತದೆ.
3H2+N2→2NH3
(b) ಹೈಡ್ರೋಜನ್ ಸಲ್ಫೈಡ್ ಅನಿಲ ಗಾಳಿಯಲ್ಲಿ ಉರಿದು ನೀರು ಮತ್ತು ಸಲ್ಫರ್ ಡೈಆಕ್ಸೈಡ್ ಉಂಟುಮಾಡುತ್ತದೆ.
2H2S+3O2→2H2O+2SO2
(b) ಬೇರಿಯಂ ಕ್ಲೋರೈಡ್, ಅಲ್ಯುಮಿನಿಯಂ ಸಲ್ಫೇಟ್‌ನೊಂದಿಗೆ ವರ್ತಿಸಿ ಅಲ್ಯುಮಿನಿಯಂ
ಕ್ಲೋರೈಡ್ ಮತ್ತು ಬೇರಿಯಂ ಸಲ್ಫೇಟ್‌ನ ಪ್ರಕ್ಷೇಪ ಉಂಟುಮಾಡುತ್ತದೆ.
3BaCl2 + Al2(SO4)3 → 3BaSO4 + 2AlCl3
(c) ಪೊಟ್ಯಾಸಿಯಂ ಲೋಹ ನೀರಿನೊಂದಿಗೆ ವರ್ತಿಸಿ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಜನ್ ಅನಿಲ ಉತ್ಪತ್ತಿ ಮಾಡುತ್ತದೆ.
2K2 + 2H2O→ 2KOH + H2
೬. ಈ ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ.
(a) HNO3+ Ca(OH)2→ Ca(NO3)2+ H2O
ಉತ್ತರ
2HNO3+ Ca(OH)2→ Ca(NO3)2+ 2H2O
(b) NaOH + H2SO4→ Na2SO4+ H2O
ಉತ್ತರ
2NaOH + H2SO4→ Na2SO4+ 2H2O
(c) NaCl + AgNO3→ AgCl + NaNO3
ಉತ್ತರ
NaCl + AgNO3→ AgCl + NaNO3
(d) BaCl2 + H2SO4→ BaSO4+ HCl
ಉತ್ತರ
BaCl2 + H2SO4→ BaSO4+ 2HCl
೭. ಈ ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.
(a) ಕ್ಯಾಲ್ಸಿಯಂ ಹೈಡ್ರಾಕ್ಸೈಡ್ + ಕಾರ್ಬನ್ ಡೈಆಕ್ಸೈಡ್→ ಕ್ಯಾಲ್ಸಿಯಂ ಕಾರ್ಬೋನೇಟ್ + ನೀರು
Ca(OH)2 + CO2 →CaCO3 + H2O
(b) ಸತು + ಬೆಳ್ಳಿಯ ನೈಟ್ರೇಟ್ → ಸತುವಿನ ನೈಟ್ರೇಟ್ + ಬೆಳ್ಳಿ.
Zn + 2AgNO3 → Zn(NO3)2 + 2Ag
(c) ಅಲ್ಯುಮಿನಿಯಂ + ತಾಮ್ರದ ಕ್ಲೋರೈಡ್ → ಅಲ್ಯುಮಿನಿಯಂ ಕ್ಲೋರೈಡ್ + ತಾಮ್ರ
2Al + 3CuCl2 → 2AlCl3 + 3Cu
(d) ಬೇರಿಯಂ ಕ್ಲೋರೈಡ್ + ಪೊಟ್ಯಾಸಿಯಂ ಸಲ್ಫೇಟ್ → ಬೇರಿಯಂ ಸಲ್ಫೇಟ್ + ಪೊಟ್ಯಾಸಿಯಂ ಕ್ಲೋರೈಡ್
BaCl2 + K2SO4 →BaSO4 + 2KCl
೮. ಈ ಕೆಳಗಿನವುಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ ಮತ್ತು ಪ್ರತಿಯೊಂದು
ಕ್ರಿಯೆಯ ವಿಧವನ್ನು ಗುರುತಿಸಿ.
(a) ಪೊಟ್ಯಾಸಿಯಂ ಬ್ರೋಮೈಡ್(aq) + ಬೇರಿಯಂ ಅಯೋಡೈಡ್(aq) → ಪೊಟ್ಯಾಸಿಯಂ ಅಯೋಡೈಡ್(aq) + ಬೇರಿಯಂ ಬ್ರೋಮೈಡ್(s)
2KBr + BaI2 →2KI + BaBr2
ದ್ವಿ ಸ್ಥಾನ ಪಲ್ಲಟ ರಾಸಾಯನಿಕ ಕ್ರಿಯೆ.
(b) ಸತುವಿನ ಕಾರ್ಬೋನೇಟ್(s) → ಸತುವಿನ ಆಕ್ಸೈಡ್(s) + ಕಾರ್ಬನ್ ಡೈಆಕ್ಸೈಡ್(g)
ZnCO3 → ZnO + CO2
ವಿಭಜನಾ ಕ್ರಿಯೆ.
(c) ಹೈಡ್ರೋಜನ್(g) + ಕ್ಲೋರಿನ್(g) →ಹೈಡ್ರೋಜನ್ ಕ್ಲೋರೈಡ್(g)
H2 + Cl2 → 2HCl
ಸಂಯೋಗ ಕ್ರಿಯೆ
(ಜ) ಮೆಗ್ನೀಸಿಯಂ(s) + ಹೈಡ್ರೋಕ್ಲೋರಿಕ್ ಆಮ್ಲ(aq) → ಮೆಗ್ನೀಸಿಯಂ ಕ್ಲೋರೈಡ್(aq) + ಹೈಡ್ರೋಜನ್(g)
Mg + 2HCl → MgCl + H2
ಸ್ಥಾನಪಲ್ಲಟ ಕ್ರಿಯೆ
೯. ಅಂತರುಷ್ಣಕ ಕ್ರಿಯೆಗಳು ಮತ್ತು ಬಹಿರುಷ್ಣಕ ಕ್ರಿಯೆಗಳು ಎಂದರೇನು? ಉದಾಹರಣೆ ಕೊಡಿ.
ಶಕ್ತಿ ಹೀರಿಕೆಯಾಗುವ ಕ್ರಿಯೆಗಳನ್ನು ಅಂತರುಷ್ಣಕ ಕ್ರಿಯೆಗಳು ಎನ್ನುವರು.
ಉತ್ಪನ್ನಗಳೊಂದಿಗೆ ಉಷ್ಣ ಬಿಡುಗಡೆಯಾಗುವ ಕ್ರಿಯೆಗಳನ್ನು ಬಹಿರುಷ್ಣಕ ಕ್ರಿಯೆಗಳು ಎನ್ನುವರು.
ಉದಾಹರಣೆ
(i) ನೈಸರ್ಗಿಕ ಅನಿಲದ ದಹನ
CH4 (g) + 2O2(g) → CO2(g) + 2H2
(ii) ಉಸಿರಾಟ ಒಂದು ಬಹಿರುಷ್ಣಕ ಪ್ರಕ್ರಿಯೆ.ಗ್ಲುಕೋಸ್
ನಮ್ಮ ದೇಹದ ಜೀವಕೋಶಗಳಲ್ಲಿ ಆಕ್ಸಿಜನ್‌ನೊಂದಿಗೆ ಸಂಯೋಗವಾಗುತ್ತದೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.
C6H12O6(aq) + 6O2(aq) →6CO2(aq)+6H2O(l) + ಶಕ್ತಿ
೧೦. ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎಂದು ಏಕೆ ಪರಿಗಣಿಸಲಾಗಿದೆ? ವಿವರಿಸಿ.
ಜೀವಂತವಾಗಿರಲು ನಮಗೆ ಶಕ್ತಿಯ ಅಗತ್ಯವಿದೆ. ಈ ಶಕ್ತಿಯನ್ನು ನಾವು ಸೇವಿಸುವ ಆಹಾರದಿಂದ ಪಡೆಯುತ್ತೇವೆ. ಜೀರ್ಣಕ್ರಿಯೆಯಲ್ಲಿ ಆಹಾರವು ಗ್ಲುಕೋಸ್ ಎಂಬ ಸರಳ ವಸ್ತುಗಳಾಗಿ ವಿಭಜನೆ ಹೊಂದುತ್ತದೆ. ಗ್ಲುಕೋಸ್ ನಮ್ಮ ದೇಹದ ಜೀವಕೋಶಗಳಲ್ಲಿ ಆಕ್ಸಿಜನ್‌ನೊಂದಿಗೆ ಸಂಯೋಗವಾಗುತ್ತದೆ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಈ ಕ್ರಿಯೆಯ ವಿಶೇಷ ಹೆಸರೇ ಉಸಿರಾಟ.ಒಟ್ಟಾರೆಯಾಗಿ ಶಕ್ತಿ ಬಿಡುಗಡೆಯಾಗುವುದರಿಂದ ಇದು ಬಹಿರುಷ್ಣಕ ಕ್ರಿಯೆ.
ಗ್ಲುಕೋಸ್ + ಆಕ್ಸಿಜನ್ →ಕಾರ್ಬನ್ ಡೈಯಾಕ್ಸೈಡ್+ನೀರು + ಶಕ್ತಿ
೧೧. ವಿಭಜನ ಕ್ರಿಯೆಗಳು, ಸಂಯೋಗ ಕ್ರಿಯೆಗಳಿಗೆ ವಿರುದ್ಧವಾಗಿವೆ ಎನ್ನುತ್ತಾರೆ ಏಕೆ? ಈ ಕ್ರಿಯೆಗಳಿಗೆ
ಸಮೀಕರಣಗಳನ್ನು ಬರೆಯಿರಿ.
ಸಂಯೋಗ ಕ್ರಿಯೆಯಲ್ಲಿ ಎರಡು ಅಥವಾ ಹೆಚ್ಚು ವಸ್ತುಗಳು ಸಂಯೋಗವಾಗಿ ಒಂದೇ ಹೊಸ
ಉತ್ಪನ್ನ ಉಂಟಾಗುತ್ತದೆ.
ವಿಭಜನ ಕ್ರಿಯೆಗಳು ಸಂಯೋಗ ಕ್ರಿಯೆಗಳಿಗೆ ವಿರುದ್ಧವಾಗಿವೆ. ವಿಭಜನ ಕ್ರಿಯೆಯಲ್ಲಿ, ಒಂದು ವಸ್ತು
ವಿಭಜನೆಗೊಂಡು ಎರಡು ಅಥವಾ ಹೆಚ್ಚು ವಸ್ತುಗಳನ್ನು ಉಂಟುಮಾಡುತ್ತದೆ.
ಸಂಯೋಗ ಕ್ರಿಯೆಯ ಸಮೀಕರಣ
CaO(s) + H2O(l) → Ca(OH)2(aq)
ವಿಭಜನ ಕ್ರಿಯೆಯ ಸಮೀಕರಣ
CaCO3(s)→ CaO(s)+CO2(g)
೧೨. ಉಷ್ಣ, ಬೆಳಕು ಮತ್ತು ವಿದ್ಯುಚ್ಛಕ್ತಿಯ ರೂಪದಲ್ಲಿ ಶಕ್ತಿಯನ್ನು ಒದಗಿಸುವ ಮೂಲಕ ನಡೆಸುವ ವಿಭಜನ ಕ್ರಿಯೆಗಳಿಗೆ ತಲಾ ಒಂದೊಂದು ಸಮೀಕರಣ ಬರೆಯಿರಿ.
(a) ಉಷ್ಣದಿಂದ ವಿಭಜನೆ
ಫೆರಸ್ ಸಲ್ಫೇಟ್ ಹರಳುಗಳನ್ನು ಕಾಸಿದಾಗ ಇದು ನಂತರ
ಫೆರಿಕ್ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಸಲ್ಫರ್ ಟ್ರೈ ಆಕ್ಸೈಡ್ ಗಳಾಗಿ ವಿಭಜನೆ ಹೊಂದುತ್ತದೆ.
2 FeSO 4 → Fe2O3+ SO2 + SO3
ಫೆರಸ್ ಸಲ್ಫೇಟ್ → ಫೆರಿಕ್ ಆಕ್ಸೈಡ್ + ಸಲ್ಫರ್ ಡೈಆಕ್ಸೈಡ್ + ಸಲ್ಫರ್ ಟ್ರೈಆಕ್ಸೈಡ್
(b) ಬೆಳಕಿನಿಂದ ವಿಭಜನೆ:
ಬೆಳ್ಳಿಯ ಕ್ಲೋರೈಡ್‌ನ ಬಿಳಿ ಬಣ್ಣವು ಸೂರ್ಯನ ಬೆಳಕಿನಲ್ಲಿ ಬೂದು ಬಣ್ಣಕ್ಕೆ ತಿರುಗತ್ತದೆ. ಇದಕ್ಕೆ ಕಾರಣ ಬೆಳಕು ಬೆಳ್ಳಿಯ ಕ್ಲೋರೈಡ್‌ಅನ್ನು ಬೆಳ್ಳಿ ಮತ್ತು ಕ್ಲೋರಿನ್ ಅಗಿ ವಿಭಜಿಸುವುದು.
2 AgCl → 2Ag() +Cl2(g)
ಬೆಳ್ಳಿಯ ಕ್ಲೋರೈಡ್ → ಬೆಳ್ಳಿ + ಕ್ಲೋರಿನ್
(c) ವಿದ್ಯುತ್ ಶಕ್ತಿಯಿಂದ ವಿಭಜನೆ:
2Al2O3 → 4Al + 302
ಅಲ್ಯೂಮಿನಿಯಂ ಆಕ್ಸೈಡ್ → ಅಲ್ಯೂಮಿನಿಯಂ + ಆಮ್ಲಜನಕ
೧೩. ಸ್ಥಾನಪಲ್ಲಟ ಕ್ರಿಯೆ ಮತ್ತು ದ್ವಿಸ್ಥಾನಪಲ್ಲಟ ಕ್ರಿಯೆಗಳ ನಡುವಿನ ವ್ಯತ್ಯಾಸವೇನು? ಈ ಕ್ರಿಯೆಗಳಿಗೆ
ಸಮೀಕರಣಗಳನ್ನು ಬರೆಯಿರಿ.
ಒಂದು ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಪಲ್ಲಟಗೊಳಿಸಿದಾಗ, ಸ್ಥಾನಪಲ್ಲಟ ಕ್ರಿಯೆ ನಡೆಯುತ್ತದೆ.
Fe + CuSO4 → FeSO4 + Cu
ದ್ವಿಸ್ಥಾನಪಲ್ಲಟ ಕ್ರಿಯೆಯಲ್ಲಿ ಎರಡು ವಿಭಿನ್ನ ಅಣುಗಳು ಅಥವಾ ಅಣುಗಳ ಗುಂಪುಗಳು(ಅಯಾನುಗಳು) ವಿನಿಮಯಗೊಳ್ಳುತ್ತವೆ.
Na2SO4 + BaCl2 → BaSO4 + 2NaCl
೧೪. ಬೆಳ್ಳಿಯ ಶುದ್ಧೀಕರಣ ಕ್ರಿಯೆಯು ಬೆಳ್ಳಿಯ ನೈಟ್ರೇಟ್ ದ್ರಾವಣದಿಂದ ಬೆಳ್ಳಿಯು ತಾಮ್ರದಿಂದ ಸ್ಥಾನಪಲ್ಲಟಗೊಳ್ಳುವುದನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ನಡೆಯುವ ಕ್ರಿಯೆಯನ್ನು ಬರೆಯಿರಿ.
2AgNO3 + Cu →Cu(NO3)2 + 2Ag
ಬೆಳ್ಳಿಯ ನೈಟ್ರೇಟ್ + ತಾಮ್ರ → ತಾಮ್ರದ ನೈಟ್ರೇಟ್ + ಬೆಳ್ಳಿ.
೧೫. ಪ್ರಕ್ಷೇಪನ ಕ್ರಿಯೆ ಎಂದರೇನು? ಉದಾಹರಣೆಗಳೊಂದಿಗೆ ವಿವರಿಸಿ.
ಸೋಡಿಯಂ ಸಲ್ಫೇಟ್ ಮತ್ತು ಬೇರಿಯಂ ಕ್ಲೋರೈಡ್ ದ್ರಾವಣಗಳನ್ನು ಮಿಶ್ರಗೊಳಿಸಿದಾಗ ಬೇರಿಯಂ ಸಲ್ಫೇಟ್ ಎಂಬ ಬಿಳಿಯ ಪ್ರಕ್ಷೇಪ ಮತ್ತು ಸೋಡಿಯಂ ಕ್ಲೋರೈಡ್ ದ್ರಾವಣ ಉಂಟಾಗುತ್ತದೆ.
ಈ ಕ್ರಿಯೆಯಲ್ಲಿ ಜಲವಿಲೀನಗೊಳ್ಳದ ಬಿಳಿವಸ್ತು ಬೇರಿಯಂ ಸಲ್ಫೇಟ್ ಉಂಟಾಗುತ್ತದೆ . ಹೀಗೆ ಉಂಟಾದ ವಿಲೀನಗೊಳ್ಳದ ವಸ್ತುವನ್ನು ಪ್ರಕ್ಷೇಪ ಎನ್ನುವರು. ಪ್ರಕ್ಷೇಪವನ್ನು ಉತ್ಪತ್ತಿ ಮಾಡುವ ಯಾವುದೇ ಕ್ರಿಯೆಯನ್ನು ಪ್ರಕ್ಷೇಪನ ಕ್ರಿಯೆ ಎನ್ನುವರು.
Na2SO4(aq) + BaCl2(aq) → BaSO4(s) + 2NaCl(aq)
೧೬. ಆಕ್ಸಿಜನ್ ಪಡೆದುಕೊಳ್ಳುವುದು ಅಥವಾ ಕಳೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೆಳಗಿನ
ಪ್ರತಿಯೊಂದನ್ನೂ ಎರಡೆರಡು ಉದಾಹರಣೆಗಳೊಂದಿಗೆ ವಿವರಿಸಿ.
(a) ಉತ್ಕರ್ಷಣ (b) ಅಪಕರ್ಷಣ
a. ಉತ್ಕರ್ಷಣ ಎಂದರೆ ಆಕ್ಸಿಜನ್ ಅನ್ನು ಪಡೆಯುವುದು.
ಉದಾಹರಣೆ .1
2Cu + O2 → 2CuO
ಇಲ್ಲಿ ತಾಮ್ರವು, ಆಕ್ಸಿಜನ್ ಅನ್ನು ಪಡೆದುಕೊಂಡು, ಉತ್ಕರ್ಷಣಗೊಂಡಿದೆ.
ಉದಾಹರಣೆ 2
CuO + H2 → Cu + H2O
ಇಲ್ಲಿ ಹೈಡ್ರೋಜನ್ ಆಕ್ಸಿಜನನ್ನು ಪಡೆದುಕೊಂಡು ಉತ್ಕರ್ಷಣಗೊಂಡಿದೆ.
b. ಅಪಕರ್ಷಣವೆಂದರೆ ಆಕ್ಸಿಜನನ್ನು ಕಳೆದುಕೊಳ್ಳುವುದು.
ಉದಾಹರಣೆ 1
ZnO + C → Zn + CO
ಇಲ್ಲಿ ಸತುವು ಆಕ್ಸಿಜನನ್ನು ಕಳೆದುಕೊಂಡು ಅಪಕರ್ಷಣಗೊಂಡಿದೆ.
ಉದಾಹರಣೆ 2
CuO + H2 → Cu + H2O
ಇಲ್ಲಿ ತಾಮ್ರವು ಆಕ್ಸಿಜನನ್ನು ಕಳೆದುಕೊಂಡು ಅಪಕರ್ಷಣಗೊಂಡಿದೆ.
೧೭. ಹೊಳಪುಳ್ಳ ಕಂದು ಬಣ್ಣದ ‘X’ ಧಾತುವನ್ನು ಗಾಳಿಯಲ್ಲಿ ಕಾಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
‘X’ ಧಾತು ಮತ್ತು ಉಂಟಾದ ಕಪ್ಪು ಬಣ್ಣದ ಸಂಯುಕ್ತವನ್ನು ಹೆಸರಿಸಿ.
X ಧಾತು ತಾಮ್ರವಾಗಿದೆ. ಗಾಳಿಯಲ್ಲಿ ಕಾಸಿದಾಗ ಅದು ಆಮ್ಲಜನಕದೊಂದಿಗೆ ಸಂಯೋಗಗೊಂಡು ಕಪ್ಪು ಬಣ್ಣದ ಕಾರ್ಬನ್ ಆಕ್ಸೈಡ್ ಆಗಿ ಪರಿವರ್ತನೆ ಹೊಂದುತ್ತದೆ.
2Cu + O2 →2CuO
೧೮. ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದೇಕೆ?
ಕಬ್ಬಿಣವು ತೇವ ಯುಕ್ತ ಗಾಳಿಯಲ್ಲಿ ಆಮ್ಲಜನಕದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಎಂಬ ಕಂದು ಬಣ್ಣದ ಪುಡಿಯಾಗಿ ಪರಿವರ್ತನೆಯಾಗುತ್ತದೆ. ಕಬ್ಬಿಣ ದ ಗುಣವು ಉಳಿಯುವುದಿಲ್ಲ ಮತ್ತು ಅದು ಯಾವುದೇ ಕೆಲಸಕ್ಕೆ ಬರುವುದಿಲ್ಲ. ಇದನ್ನು ತುಕ್ಕು ಹಿಡಿಯುವಿಕೆ ಎನ್ನುತ್ತಾರೆ. ಈ ತುಕ್ಕು ಹಿಡಿಯುವಿಕೆಯನ್ನು ತಪ್ಪಿಸಲು ಕಬ್ಬಿಣಕ್ಕೆ ಬಣ್ಣ ಬಳಿಯುತ್ತಾರೆ.
೧೯. ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳ ಮೂಲಕ ನೈಟ್ರೋಜನ್ ಅನಿಲವನ್ನು
ಹಾಯಿಸುತ್ತಾರೆ ಏಕೆ?
ನೈಟ್ರೋಜನ್ ಅನಿಲವು ಜಡ ಅನಿಲವಾಗಿದ್ದು, ಈ ಪದಾರ್ಥಗಳೊಂದಿಗೆ ಸುಲಭವಾಗಿ ಪ್ರತಿಕ್ರಿಯಿಸುವುದಿಲ್ಲ. ಮತ್ತೊಂದೆಡೆ, ಆಮ್ಲಜನಕವು ಆಹಾರ ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸಿ ಅವುಗಳನ್ನು ಕಮಟು ವಾಸನೆಯನ್ನಾಗಿ ಮಾಡುತ್ತದೆ. ಹೀಗಾಗಿ, ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವಲ್ಲಿ ಬಳಸುವ ಚೀಲಗಳಲ್ಲಿ ನೈಟ್ರೋಜನ್ ಅನಿಲವನ್ನು ಬಳಸಿ ಪ್ಯಾಕ್‌ನೊಳಗಿನ ಆಮ್ಲಜನಕವನ್ನು ತೆಗೆದುಹಾಕಲಾಗುತ್ತದೆ. ಪ್ಯಾಕ್ ಒಳಗೆ ಆಮ್ಲಜನಕ ಇಲ್ಲದಿದ್ದಾಗ, ಎಣ್ಣೆ ಮತ್ತು ಕೊಬ್ಬನ್ನು ಹೊಂದಿರುವ ಆಹಾರ ಪದಾರ್ಥಗಳ ಕಮಟು ವಾಸನೆಯನ್ನು ತಪ್ಪಿಸಲಾಗುತ್ತದೆ.
೨೦. ಒಂದೊಂದು ಉದಾಹರಣೆಯೊಂದಿಗೆ ಕೆಳಗಿನ ಪದಗಳನ್ನು ವಿವರಿಸಿ.
(a) ಕೊರೆಯುವಿಕೆ (b) ಕಮಟುವಿಕೆ
(a) ಕೊರೆಯುವಿಕೆ
ಕೊರೆಯುವಿಕೆ ಎಂದರೆ ಗಾಳಿ, ತೇವಾಂಶ, ರಾಸಾಯನಿಕಗಳು ಇತ್ಯಾದಿಗಳೊಂದಿಗಿನ ರಾಸಾಯನಿಕ ಕ್ರಿಯೆಯ ಪರಿಣಾಮವಾಗಿ ವಸ್ತುಗಳು, ಸಾಮಾನ್ಯವಾಗಿ ಲೋಹಗಳು ಹದಗೆಡುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಲಾಗಿದೆ.
ಉದಾಹರಣೆಗೆ, ಕಬ್ಬಿಣವು ತೇವಾಂಶದ ಉಪಸ್ಥಿತಿಯಲ್ಲಿ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ಹೈಡ್ರೀಕರಿಸಿದ ಕಬ್ಬಿಣದ ಆಕ್ಸೈಡ್ ಅನ್ನು ರೂಪಿಸುತ್ತದೆ.
ಈ ಹೈಡ್ರೀಕರಿಸಿದ ಕಬ್ಬಿಣದ ಆಕ್ಸೈಡ್ ಅನ್ನು ತುಕ್ಕು ಎನ್ನುತ್ತಾರೆ.
ಕಮಟುವಿಕೆ:
ರುಚಿ ಮತ್ತು ವಾಸನೆಯಲ್ಲಿನ ಬದಲಾವಣೆಯಿಂದ ಸುಲಭವಾಗಿ ಗಮನಿಸಬಹುದಾದ ಕೊಬ್ಬು ಮತ್ತು ಎಣ್ಣೆಗಳ ಆಕ್ಸಿಡೀಕರಣ ಪ್ರಕ್ರಿಯೆಯನ್ನು ಕಮಟುವಿಕೆ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ, ಬೆಣ್ಣೆಯ ರುಚಿ ಮತ್ತು ವಾಸನೆಯು ದೀರ್ಘಕಾಲದವರೆಗೆ ಇರಿಸಿದಾಗ ಬದಲಾಗುತ್ತದೆ.
ಕಮಟುವಿಕೆಯನ್ನು ಈ ಕೆಳಗಿನ ವಿಧಾನಗಳಿಂದ ತಪ್ಪಿಸಬಹುದು:
1. ಗಾಳಿಯಾಡದ ಪಾತ್ರೆಗಳಲ್ಲಿ ಆಹಾರವನ್ನು ಸಂಗ್ರಹಿಸುವುದು.
2. ರೆಫ್ರಿಜರೇಟರ್‌ಗಳಲ್ಲಿ ಆಹಾರವನ್ನು ಸಂಗ್ರಹಿಸುವುದು.
3. ಉತ್ಕರ್ಷಣ ನಿರೋಧಕಗಳನ್ನು ಸೇರಿಸುವುದು.
4. ನೈಟ್ರೋಜನ್ ವಾತಾವರಣದಲ್ಲಿ ಆಹಾರವನ್ನು ಸಂಗ್ರಹಿಸುವುದು.