ಗದ್ಯ ಪಾಠ-1 : ನಮ್ಮ ಭಾಷೆ
ಲೇಖಕರ ಪರಿಚಯ : ಎಂ. ಮರಿಯಪ್ಪಭಟ್ಟ
* ಎಂ. ಮರಿಯಪ್ಪಭಟ್ಟರು ಸಾ.ಶ. 1906 ರಲ್ಲಿ ಕಬಕ ಗ್ರಾಮದಲ್ಲಿ ಜನಿಸಿದರು.
ಇವರು ಕನ್ನಡ ಸಂಸ್ಕೃತಿ, ಛಂದಸ್ಸಾರ, ಜಾತಕತಿಲಕಂ ಮತ್ತು ತುಳು-ಇಂಗ್ಲಿಷ್ ನಿಘಂಟು ರಚಿಸಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಭಾಷೆ ಯಾವುದಕ್ಕೆ ಸಾಧನವಾಗಿದೆ?
ಉ : ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಸಾಧನವಾಗಿದೆ.
೨. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ ?
ಉ : ಪ್ರಾಣಿಗಳು ಚಲನವಲನ ಮತ್ತು ಆಹಾರಗಳ ವಿಚಾರವಾಗಿ ತಮ್ಮ ಮಕ್ಕಳಿಗೆ ತರಹೇತು ಕೊಡುತ್ತವೆ.
೩. ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು ?
ಉ : ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟಾಗ ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.
೪. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು ?
ಉ : ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ನಯಸೇನ.
೫. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು ?
ಉ : ಮಹಮ್ಮದೀಯರ ಆಳ್ವಿಕೆಯ ಕಾಲದಲ್ಲಿ ಪರ್ಷಿಯನ್ ಶಬ್ದಗಳು ಕನ್ನಡಕ್ಕೆ ಬಂದವು.
ಆ] ಕೆಳಗಿನ ಪ್ರಶ್ನೆಗಳಿಗೆ ೨-೩ ವಾಕ್ಯಗಳಲ್ಲಿ ಉತ್ತರಿಸಿ
೧. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
ಉ: ವ್ಯಾವಹಾರಿಕವೆಂದರೆ ಜೀವದ್ಭಾಷೆ. ಅದರಲ್ಲಿ ಜನರು ಮಾತನಾಡುತ್ತಾರೆ. ವ್ಯವಹರಿಸುತ್ತಾರೆ. ಉದಾ : ಕನ್ನಡ, ತಮಿಳು, ತೆಲುಗು ಇತ್ಯಾದಿ.
* ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ. ಉದಾ : ಸಂಸ್ಕೃತ, ಕನ್ನಡ, ಇಂಗ್ಲಿಷ್ ಇತ್ಯಾದಿ.
೨. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ ?
ಉ: ಮಾನವ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟಾಗ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.
* ಮನುಷ್ಯ ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ಪ್ರತಿದಿನ ಒಂದೊಂದು ಗೆರೆ ಎಳೆದು ಗುರುತಿಸಿ ಲೆಕ್ಕವಿಟ್ಟನು.
* ಹೀಗೆ ಲಿಪಿಯ ಜಾಡು ಆರಂಭಗೊಂಡಿತು.
೩. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು ?
: * ಮಾನವನಿಗೆ ಸಮಯ ಸಿಕ್ಕಾಗ ತನ್ನ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ತನ್ನ ಬುದ್ಧಿವಂತೆಕೆಯಿಂದ ಕಂಡುಹಿಡಿದೆ.
* ಸಂದರವಾದ ಸಾಹಿತ್ಯವನ್ನು ರಚಿಸಿದ. ಹೀಗೆ ಸಾಹಿತ್ಯ ವಿವಿಧ ರೂಪದಲ್ಲಿ ಬೆಳೆಯಿತು.
* ಇದರಿಂದ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು.
* ಆ ಮೂಲಕ ಜ್ಞಾನ ಭಂಡಾರ ಭದ್ರವಾಯಿತು.
೪. ಕನ್ನಡ ಭಾಷೆ ಹದಗೊಂಡದ್ದು ಹೇಗೆ ?
ಉ: * ಅನೇಕ ಕವಿಗಳು ಕನ್ನಡ ಭಾಷೆ ಅಭಿವೃದ್ದಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ತಿಳಿಸಿದರು.
* ಬಸವೇಶ್ವರ, ಅಲ್ಲಮಪ್ರಭು, ಚಾಮರಸ, ಕುಮಾರವ್ಯಾಸ ಪುರಂದರದಾಸ, ಕನಕದಾಸರು
* ತಮ್ಮ ತಮ್ಮ ಅನುಭವವನ್ನು ಸುಲಭ, ಸುಂದರ, ಸಹಜವಾದ ಮಾತುಗಳಿಂದ ತಿಳಿಸಿದರು.
ಹೀಗೆ ಕನ್ನಡ ಭಾಷೆ ಹದಗೊಂಡಿತು.
೫. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು ?
ಉ: ದೇಶ ವಿದೇಶಗಳ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಿದರು.
* ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಮಹಾ ಮೇಧಾವಿಗಳು ಹೀಗೆ ಎಲ್ಲರೂ ತಮ್ಮ ಆಸೆ, ಆಕಾಂಕ್ಷೆಗಳನ್ನು
* ತಮ್ಮ ಭಾಷೆಯ ಮೂಲಕ ತಿಳಿಸಿದರು. ಇದರ ಪರಿಣಾಮವಾಗಿ ಆಂಗ್ಲ ಭಾಷೆ ಬೆಳೆದು ವಿಶ್ವವ್ಯಾಪಿಯಾಯಿತು.
ಇ) ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿ.
೧. “ಸಂಸ್ಕೃತಿಯ ಇತಿಹಾಸ ಉಳಿಯಿತು”
೨. “ತಕ್ಕುದೆ ಬೆರಸ ಧೃತಮುಮಂ ತೈಲಮುಮಂ’
೩. “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ”
೪. “ಒಬ್ಬ ತಾಯಿಯ ಗಾನದ ಶ್ರುತಿಯಂತೆ ”
ಆಯ್ಕೆ :
ಈ ವಾಕ್ಯವನ್ನು ಎಂ. ಮರಿಯಪ್ಪ ಭಟ್ಟರ ‘ಕನ್ನಡ ಸಂಸ್ಕೃತಿ’ ಕೃತಿಯಿಂದ ಆಯ್ದ ‘ನಮ್ಮ ಭಾಷೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :
ಲಿಪಿಯ ಆರಂಭ, ಲಿಪಿಯಮಹತ್ವ, ಭಾಷೆ ಮತ್ತು ಸಾಹಿತ್ಯದ ಉಗಮ, ಬೆಳವಣಿಗೆ, ಕನ್ನಡ ಭಾಷೆ ಮತ್ತು ಸಾಹಿತ್ಯ ಹದಗೊಂಡ ಬಗೆ ಪ್ರತಿಭಾಷೆಗೂ ಸಿಗಬೇಕಾದ ಗೌರವವನ್ನು ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ :
ಭಾಷೆಯ ಸೊಗಸು ಮತ್ತು ಅದರ ಮಹತ್ವವು ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.
ಈ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
೧. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ ?
ಉ:
ಒಂದು ಭಾಷೆ ಸತ್ವಪೂರ್ಣವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ, ಬುದ್ಧಿಶಾಲಿಗಳೂ, ಪ್ರಯೋಗಶೀಲರೂ ಆಗಿರಬೇಕು.
* ನೆರೆಹೊರೆಯ ಭಾಷೆಯೊಂದಿಗೆ ಕೊಡು ಕೊಳ್ಳುವಿಕೆಯ ವ್ಯವಹಾರ ಹೊಂದಿರಬೇಕು.
* ದೇಶ ವಿದೇಶಗಳ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಬೇಕು.
* ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಮಹಾ ಮೇಧಾವಿಗಳು ಹೀಗೆ ಎಲ್ಲರೂ ತಮ್ಮ ಆಸೆ, ಆಕಾಂಕ್ಷೆಗಳನ್ನು ತಮ್ಮ ಭಾಷೆಯ ಮೂಲಕವೇ ತಿಳಿಸಬೇಕು.
* ಆ ಭಾಷೆಯ ಸಾಮಾಗ್ರಿಗಳಾದ ಗಾದೆ, ನುಡಿಗಟ್ಟು, ನಾಣ್ಣುಡಿ ಹಾಗೂ ಪದಗಳ ಬಳಕೆ ಹೆಚ್ಚಾಗಬೇಕು.
* ಹೀಗೆ ಆದಾಗ ಮಾತ್ರ ಭಾಷೆ ಸತ್ವಪೂರ್ಣವಾಗಿ ವಿಕಾಸವಾಗುತ್ತದೆ.
೨. ಕನ್ನಡಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ ? ವಿವರಿಸಿ,
ಉ: * ಕನ್ನಡ ಭಾಷೆಗೆ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
* ಕನ್ನಡದ ಪಂಡಿತರು ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು ಕನ್ನಡದಲ್ಲಿ ವಿವರಿಸುವ ಉದ್ದೇಶದಿಂದ ಕಾವ್ಯವನ್ನು ರಚಿಸಿದರು.
* ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ತಿಳಿಸಿದರು.
ಬಸವೇಶ್ವರ, ಅಲ್ಲಮಪ್ರಭು, ಚಾಮರಸ, ಕುಮಾರವ್ಯಾಸ ಪುರಂದರದಾಸ, ಕನಕದಾಸರು ತಮ್ಮ ತಮ್ಮ ಅನುಭವವನ್ನು ಸುಲಭ, ಸುಂದರ, ಸಹಜವಾದ ಮಾತುಗಳಿಂದ ತಿಳಿಸಿದರು.
* ಸಂಸ್ಕೃತ, ಪ್ರಾಕೃತ ಭಾಷೆಗಳಿಂದ ಅನೇಕ ಶಬ್ದಗಳನ್ನು ಕನ್ನಡಕ್ಕೆ ಬಂದವು.
* ಪರ್ಷಿಯನ್, ಇಂಗ್ಲಿಷ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದವು ಹೀಗೆ ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡಿತು.
ಗದ್ಯ ಪಾಠ-2 : ವ್ಯಾಘ್ರಗೀತೆ
ಲೇಖಕರ ಪರಿಚಯ.. ವಿ. ಎನ್ ಮೂರ್ತಿರಾವ್
ವಿ ಎನ್ ಮೂರ್ತಿರಾವ್ ಸಾ. ಶ. 1900 ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು.
* ಇವರು ಹಗಲುಗನಸುಗಳು, ಚಿತ್ರಗಳು-ಪತ್ರಗಳು, ಚಂಡಮಾರುತ, ದೇವರು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
* ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿದೆ.
ಅ). ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಭಗವದ್ಗೀತೆಯನ್ನು ರಚಿಸಿದವರು ಯಾರು?
ಉ : ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.
2. ಹುಲಿಗೆ ಪರಮಾನಂದವಾಗಲು ಕಾರಣವೇನು?
ಉ : ಶಾನುಭೋಗರ ದುಂಡದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.
3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಉ : ಮುಖದರ್ಶನವಾಗದಂತೆ ಹುಲಿಯಿಂದ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
4. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
ಉ : ಶಾನುಭೋಗರ ಬ್ರಹ್ಮಾಸ್ತ್ರ ಖಿರ್ದಿ ಪುಸ್ತಕ.
5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಉ : ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
ಅ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಉ: * ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು.* ಕಾಡುದಾರಿ, ಆದರೂ ಬೆಳದಿಂಗಳ ದಿನ ಸ್ವಲ್ಪ ದೊಡ್ಡ ಹೆಜ್ಜೆಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.
2. ಹುಲಿಯು ಹಿಂದಿನಿಂದ ಹಾరి ಕೊಲ್ಲದಿರಲು ಕಾರಣವೇನು?
ಉ: ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.
* ಏಕೆಂದರೆ ಶತ್ರುಗಳಾದರೂ ಸರಿಯೆ, ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ,
* ಆದ್ದರಿಂದ ಹುಲಿಯು ಶಾನುಭೋಗರನ್ನು ಬೆನ್ನ ಹಿಂದಿನಿಂದ ಹಾರಿ ಕೊಲ್ಲಲಿಲ್ಲ.
3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
ಉ: ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ರೈತರ ಗಾಡಿಯ ಎತ್ತುಗಳು ಮುಂದೆ ಹೋಗದೆ ನಿಂತವು.
* ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಗಂಟೆಯ ಸದ್ದನ್ನು ಕೇಳಿದ ಹುಲಿಯು ಕೆಲವು ನಿಮಿಷ ತಡೆಯಿತು.
* ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದ ಪಲಾಯನ ಮಾಡಿತು.ಆನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ,* ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದೆ ಬಂದರು.
* ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು, ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.
ಇ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”
2. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
3. “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?”
4. “ಹುಲಿ ಈಗ ಎಷ್ಟು ಹಸಿದಿರಬೇಕು.”
ಆಯ್ಕೆ: ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ‘ಸಮಗ್ರ ಲಲಿತ ಪ್ರಬಂಧಗಳು’ ಸಂಕಲನದಿಂದ ಆಯ್ಕೆ ‘ವ್ಯಾಘ್ರಗೀತ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹಿಂಸ್ರಪಶುಗಳು ಸಹ ಬದುಕುವುದಕ್ಕೆ ಒಂದು ಆದರ್ಶವನ್ನು ಪಾಲಿಸುವಾಗ ಪುಣ್ಯಭೂಮಿ ಭಾರತದಲ್ಲಿರುವ ಮನುಷ್ಯರು ಹಿರಿಯರ ಆದರ್ಶವನ್ನು ಪಾಲಿಸಿದರಾಗದೆ ಎಂಬುದನ್ನು ವಿಡಂಬಿಸುವ ಸಂದರ್ಭವೇ ಆಗಿದೆ.
ಸ್ವಾರಸ್ಯ: ಹುಲಿಯ ಧರ್ಮಶ್ರದ್ಧೆ ಹಾಗೂ ಶಾನುಭೋಗರು ಸಾವಿನ ಸಂಕಟದಿಂದ ಪಾರಾಗುವ ರೀತಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ.
ಈ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಉ: *. ಸಸ್ಯಾಹಾರವನ್ನು ತಿನ್ನಬಲ್ಲ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಆಹಾರಕ್ಕಾಗಿ ಹುಲಿ ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ.
*. ಆದರೆ ಧರ್ಮವನ್ನು ಅನುಸರಿಸಿ ಕೊಲ್ಲುತ್ತವೆಯೋ ಅಥವಾ ಇಷ್ಟಬಂದಂತೆ ಕೊಲ್ಲುತ್ತದೆಯೋ ಎಂಬುದೇ ಮುಖ್ಯ ಪ್ರಶ್ನೆ.
.. ಬೇರೆ ಬೇರೆ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ಗೊತ್ತಿಲ್ಲ. ಆದರೆ ಭಾರತದ ಹುಲಿಗಳು ಹಾಗಲ್ಲ.
*. ಶ್ರೀರಾಮನಂತ ದೊರೆಗಳು ಆಳಿದ. ಭಗವದ್ಗೀತೆಯಂಥ ಗ್ರಂಥ ಹುಟ್ಟಿದ ಭರತ ಭೂಮಿಯಲ್ಲಿ ಹುಲಿಗಳು ಆ ರೀತಿ ಮಾಡುವುದಿಲ್ಲ.
*. ಭರತಖಂಡದ ಹುಲಿಗಳು ಶತ್ರುಗಳನ್ನಾದರೂ ಸರಿಯೇ ಹಿಂದಿನಿಂದ ಕೊಲ್ಲುವುದಿಲ್ಲ.
* ತನ್ನ ಬಡಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿದು ಅವರ ಮುಂಭಾಗಕ್ಕೆ ಬರಲು ಪ್ರಯತ್ನಿಸುತ್ತದೆ. ಹೀಗೆ ಧರ್ಮಮಾರ್ಗದಲ್ಲಿ ತಾನುಭೋಗರನ್ನು ತಿನ್ನಲು ಪ್ರತಿಸಲವೂ ಪ್ರಯತ್ನಿಸುತ್ತದೆ.
*. ಭಗವದ್ಗೀತೆಯ ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬ ಮಾತಿನಂತೆ ಹುಲಿಗಳು ಧರ್ಮದಿಂದ ಬೇಟೆಯಾಡುತ್ತವೆ.
*. ಎಂದು ಮೂರ್ತಿರಾಯರು ಅಭಿಪ್ರಾಯ ಪಡುತ್ತಾರೆ.
2. ಶಾನುಭೋಗರನ್ನು ರಕ್ಷಿಸಿದ್ದು ಖರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.
ಉ:* ಶಾನುಭೋಗರು ಉಳಿದಿದ್ದು ಖರ್ದಿ ಪುಸ್ತಕದಿಂದಲ್ಲ, ಹುಲಿಯ ಧರ್ಮಶ್ರದ್ಧೆಯಿಂದ ಎಂದು ಹೇಳಬಹುದು.
*. ಅವರ ದುಂಡು ದುಂಡಾದ ಶರೀರವನ್ನು ನೋಡಿದ ಹುಲಿ ಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ.
* ಶಾನುಭೋಗರು ಎಚ್ಚರ ತಪ್ಪಿ ಕೆಳಗೆ ಬಿದ್ದಾಗ ಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು, ಆದರೆ ಅದು ಹಾಗೆ ಮಾಡಲಿಲ್ಲ.
* ಭರತ ಖಂಡದ ಹುಲಿಗಳು ಶತ್ರುಗಳಾದರೂ ಸರಿ ಬೆನ್ನ ಹಿಂದಿನಿಂದ ಹಾರಿ ಕೊಲ್ಲುವುದು ಧರ್ಮವಲ್ಲವೆಂದು ತಿಳಿದಿದ್ದವು.
*. ಶಾನುಭೋಗರು ಬೆನ್ನು ಮೇಲೆ ಮಾಡಿ ಬಿದ್ದಿದ್ದರಿಂದ ಹುಲಿಯು ಅವರನ್ನು ತಿನ್ನದೆ ಬಿಟ್ಟಿತ್ತು.
*. ಅದು ಕೊನೆವರೆಗೂ ತನ್ನ ಧರ್ಮಶ್ರದ್ಧೆಯನ್ನು ಅನುಸರಿಸಿತು.
* ಆದ್ದರಿಂದ ಶಾನುಭೋಗರನ್ನು ರಕ್ಷಿಸಿದ್ದು ಹುಲಿಯ ಧರ್ಮವೇ ಎಂದು ಸಮರ್ಥವಾಗಿ ಹೇಳಬಹುದು.
ಪದ್ಯ ಪಾಠ-3 : ‘ಕೌರವೇಂದ್ರನ ಕೊಂದೆ ನೀನು’
ಕವಿ ಪರಿಚಯ: _ಕುಮಾರವ್ಯಾಸ
ಕುಮಾರವ್ಯಾಸ ಕವಿಯು ಸಾ.ಶ ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದನು.
* ಇವನು ಕುಮಾರವ್ಯಾಸ ಭಾರತ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾನೆ.
* ಈತನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದು ಇದೆ.
ಅ) ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು?
ಉ: ಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸದಿಂದ ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿದನು.
2. ಕುಮಾರವ್ಯಾಸನ ಆರಾಧ್ಯ ದೈವ ಯಾರು?
ಉ: ಕುಮಾರವ್ಯಾಸನ ಆರಾಧ್ಯ ದೈವ ಗದುಗಿನ ವೀರನಾರಾಯಣ.
3. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
ಉ: ಅಶ್ವಿನೀ ದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ
4. ಕುಮಾರವ್ಯಾಸನಿಗಿರುವ ಬಿರುದು ಯಾವುದು?
ಉ: ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದುಇದೆ.
5. ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು?
ಉ: ನಾರಣಪ್ಪನು ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕರ್ಣಾಟ ಭಾರತ ಕಥಾಮಂಜರಿ ಎಂದು ಕನ್ನಡದಲ್ಲಿ ರಚಿಸಿದ್ದರಿಂದ ಕುಮಾರವ್ಯಾಸ ಎಂಬ ಹೆಸರು ಬಂದಿತು.
ಅ] ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?
ಉ .ಕೃಷ್ಣನು “ಕರ್ಣ ನಿಮಗೂ ಯಾದವ ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ…ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ” ಎಂದು ಹೇಳುತ ಕರ್ಣನ ಕಿವಿಯಲ್ಲಿ ಭಯವನ್ನು ಬಿತ್ತಿದನು.
2.ಕುಂತಿ, ಮಾದ್ರಿಯರು ಯಾರ್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?
ಉ:.ಕುಂತಿಯು ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನು, ಇಂದ್ರನ ಅನುಗ್ರಹದಿಂದ ಅರ್ಜುನನನ್ನು ಪಡೆದಳು.
.ಮಾದ್ರಿಯು ಅಶ್ವಿನೀ ದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು.
3. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ?
ಉ: * ಕರ್ಣನಿಗೆ ಕೊರಳಸೆರೆ ಹಿಗ್ಗಿ, ಕಂಬನಿಯು ಸುರಿದು ಮನಸ್ಸಿನಲ್ಲಿಯೇ “ಅಯ್ಯೋ, ದುರ್ಯೋಧನನಿಗೆ ಕೇಡಾಯಿತು” ಎಂದನು.
* ಹರಿಯ ಹಗೆತನವು ಹೊಗೆ ತೋರದೆ ಸುಡುತ್ತದೆ. ಕೃಷ್ಣನು “ನನ್ನ ವಂಶದ ರಹಸ್ಯವನ್ನು ತಿಳಿಸಿ ಕೊಂದನು” ಎಂದು ಮನದಲ್ಲಿ ನೊಂದು ಕೊಂಡನು.
4. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು ?
ಉ: * ಕರ್ಣನು ಕೃಷ್ಣನಿಗೆ “ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ,
* ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ.
* ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು.
* ಆದರೆ ನೀನು ನನ್ನ ಜನ್ಮರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ” ಎಂದನು.
5. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?
ಉ: ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರು ಪಾಂಡವರ ನಡುವಿನ ಭಾರತ ಯುದ್ಧದಲ್ಲಿ ಮೃತ್ಯುದೇವತೆಗೆ ಔತಣಕೂಟ ಏರ್ಪಡಿಸುತ್ತೇನೆ.
ಕೌರವನ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರ ಕೊಲ್ಲುತ್ತಾ,
* ಅಗತ್ಯ ಬಂದರೆ ದುರ್ಯೋಧನನಿಗಾಗಿ ಪ್ರಾಣವನ್ನು ಬಿಡುವೆನು. ಆದರೆ ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.
ಇ) ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ.
1. “ರವಿಸುತನ ಕಿವಿಯಲಿ ಬಿತ್ತಿದನು ಭಯವ.”
2. “ಬಾಯ್ದಂಬುಲಕೆ ಕೈಯಾನುವರೆ.”
3. “ಜೀಯ ಹಸಾದವೆಂಬುದು ಕಷ್ಟ”
4. “ನಿನ್ನಪದೆಸೆಯ ಬಯಸುವನಲ್ಲ”
ಆಯ್ಕೆ: ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕುಮಾರವ್ಯಾಸ ಭಾರತ’ ಕೃತಿಯಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯದಿಂದ
ಸಂದರ್ಭ: ಕೃಷಣ್ಣು ಪಾಂಡವ ಕೌರವರ ನಡುವೆ ಸಂಧಾನ ಮಾಡಲು ಬಂದು ವಿಫಲನಾಗಿ ಹಿಂದಿರುಗುವಾಗ ಕರ್ಣನೊಂದಿಗೆ ಮೈಮನತನದ ಸರಸದಲ್ಲಿ ಮಾತನಾಡಿಸುತ್ತಾ ಜನ್ಮರಹಸ್ಯ ತಿಳಿಸಿ, ಆಮಿಷಗಳನ್ನು ಒಡ್ಡುವ ಕೃಷ್ಣ ಕರ್ಣರ ನಡುವಿನ ಸಂವಾದದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಕೃಷ್ಣನ ಆಮಿಷ ಹಾಗೂ ಕರ್ಣನ ಸ್ವಾಮಿನಿಷ್ಠ ವ್ಯಕ್ತಿತ್ವ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
5. “ಮಾರಿಗೌತಣವಾಯ್ತು ನಾಳಿನ ಭಾರತವು”
ಆಯ್ಕೆ: ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕುಮಾರವ್ಯಾಸ ಭಾರತ’ ಕೃತಿಯಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯದಿಂದ
ಸಂದರ್ಭ: “ನಾಳಿನ ಕೌರವರು ಪಾಂಡವರ ನಡುವಿನ ಭಾರತ ಯುದ್ಧದಲ್ಲಿ ಮೃತ್ಯುದೇವತೆಗೆ ಔತಣಕೂಟ ಏರ್ಪಡಿಸುತ್ತೇನೆ ಎಂದು ಹೇಳುವಾಗ ಕರ್ಣ ಕೃಷ್ಣನಿಗೆ ಹೇಳುವಾಗ ಈ ಮಾತು ಬಂದಿದೆ.
ಸ್ವಾರಸ್ಯ: ಕರ್ಣನ ಸ್ವಾಮಿನಿಷ್ಠ ವ್ಯಕ್ತಿತ್ವ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
ಈ) ಮೌಲ್ಯವನ್ನಾಧರಿಸಿ ಭಾವಾರ್ಥ ಬರೆಯಿರಿ:
* ಈ ಪದ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕೌರವೇಂದ್ರನ ಕೊಂದೆ ನೀನು” ಎಂಬ ಪದ್ಯದಿಂದ ಆರಿಸಲಾಗಿದೆ.
* ಮೌಲ್ಯ: ಇಲ್ಲಿ ಕರ್ಣನನ್ನು ಮನವೊಲಿಸುವ ಕೃಷ್ಣನ ಮಾತುಗಳು ಮತ್ತು ಕರ್ಣನ ಸ್ವಾಮಿನಿಷ್ಠೆ, ಪ್ರಾಮಾಣಿಕತೆ ಮೂಡಿಬಂದಿದೆ.
* ಕರ್ಣ ನಿಮಗೂ ಯಾದವ ಕೌರವರಿಗೂ ಭೇದವಿಲ್ಲ. ನಿನ್ನನ್ನು ರಾಜನನ್ನಾಗಿ ಮಾಡುವೆನು.
ಕೌರವರು, ಪಾಂಡವರು, ಮಾದ್ರ, ಮಾಗಧ, ಯಾದವರು ನಿನ್ನ ಸೇವೆ ಮಾಡುವರು.
* ಅದನ್ನು ಬಿಟ್ಟು ನೀನು ದುರ್ಯೋಧನನ ಬಾಯೆಂಜಲಿಗೆ ಕೈಯೊಡ್ಡುವುದೇ?
* ದುರ್ಯೋಧನ ಹೇಳಿದ ಮಾತಿಗೆಲ್ಲಾ ‘ಒಡೆಯ ಪ್ರಸಾದ’ ಎಂಬುದು ನಿನಗೆ ಹೀನವೆನಿಸುವುದಿಲ್ಲವೇ?” ಎಂದು ಆಮಿಷಗಳನ್ನು ಒಡ್ಡಿದನು.
* ಆಗ ಕರ್ಣನು, “ನಾನು ಈ ರಾಜ್ಯಕ್ಕೆ ಸೋಲುವವನಲ್ಲ. ಪಾಂಡವರು ಮತ್ತು ಕೌರವರಿಂದ ಸೇವೆ ಮಾಡಿಕೊಳ್ಳುವುದುನನಗೆ ಇಷ್ಟವಿಲ್ಲ.
* ನನ್ನನ್ನು ಕಾಪಾಡಿದ ಒಡೆಯನಿಗೆ ಶತ್ರುಗಳ ತಲೆಯನ್ನು ಕತ್ತರಿಸಿ ಒಪ್ಪಿಸುತ್ತೇನೆಂಬ ಉತ್ಸಾಹದಲ್ಲಿದ್ದೆ.
* ಆದರೆ ನೀನು ನನ್ನ ಜನ್ಮ ರಹಸ್ಯವನ್ನು ಹೇಳಿ ಕೌರವನನ್ನು ಕೊಂದೆ” ಎಂದು ಕರ್ಣನು ದುಃಖಿಸುತ್ತಾನೆ.
ಪದ್ಯ ಕಂಠಪಾಠ ಮಾಡಿ
ಕೊರಳ ಸೆರೆ ಹಿಗ್ಗಿದವು ಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
ಅಥವಾ
ಭಾರತವು
ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ 5
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ