9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ‘ ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು
೨. ಸಂವಿಧಾನದ ೭೩ ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ
ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ.
೩. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
೪. ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಮಹಿಳಾ ಸ್ವಸಹಾಯ ಸಂಘ (ಸ್ತ್ರೀಶಕ್ತಿ ಸಂಘ) ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

೫. ಗ್ರಾಮೀಣಾಭಿವೃದ್ಧಿಯ ಅರ್ಥ ತಿಳಿಸಿ.

ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವುದನ್ನು ಗ್ರಾಮೀಣಾಭಿವೃದ್ಧಿ ಎಂದು ಕರೆಯಬಹುದಾಗಿದೆ.

೬. ಅಧಿಕಾರ ವಿಕೇಂದ್ರೀಕರಣ ಎಂದರೇನು?

ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ.

೭. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿ.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್.

೮. ಯಾವುದಾದರೂ ಎರಡು ವಸತಿ ಯೋಜನೆಗಳನ್ನು ತಿಳಿಸಿ.

‘ಇಂದಿರಾ ಆವಾಸ್ ಯೋಜನೆ’, ‘ಅಂಬೇಡ್ಕರ್-
ವಾಲ್ಮೀಕಿ ವಸತಿ ಯೋಜನೆ ‘, ಆಶ್ರಯ ಯೋಜನೆ,

೯. ಮಹಿಳೆಯರ ಯಾವ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ?

ಮಹಿಳೆಯರು ಮನೆಯಲ್ಲಿ ಮಾಡುವ ಕೂಲಿರಹಿತ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ.

III. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧೦. ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹೇಗಿದೆ?

ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಇವರಲ್ಲಿ ಮೂರನೇ ಒಂದು ಭಾಗದ ಜನರು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಗ್ರಾಮೀಣ ಗುಡಿಕೈಗಾರಿಕೆಗಳು ನಶಿಸಿಹೋಗಿವೆ. ಅತ್ಯಂತ ಹೆಚ್ಚು ಜನರು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದರೂ  ರಾಷ್ಟ್ರೀಯ ಆದಾಯಕ್ಕೆ ಈ ವಲಯದ ಕೊಡುಗೆ ಅತ್ಯಂತ ಕಡಿಮೆಯಿದ್ದು, ಅದು ನಿರಂತರವಾಗಿ ಕಡಿಮೆಯಾಗುತ್ತಿದೆ.

೧೧. ಗ್ರಾಮೀಣ ಅಭಿವೃದ್ಧಿಯ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.

ನಗರಗಳಲ್ಲಿನ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಮತ್ತು ಅವಕಾಶಗಳು ಗ್ರಾಮೀಣ ಜನರಿಗೂ
ದೊರೆಯುವಂತಾಗಬೇಕು. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಹಳ್ಳಿಗರೂ ಭಾಗವಹಿಸುವಂತಾಗಬೇಕು.
ಅಭಿವೃದ್ಧಿಯ ಫಲ ಇವರಿಗೂ ಸಮಾನವಾಗಿ ದೊರೆಯಬೇಕು. ಗ್ರಾಮೀಣಾಭಿವೃದ್ಧಿಯ ಮೂಲಕ
ಇದನ್ನು ಸಾಧಿಸಬೇಕಾಗಿದೆ.ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮಗಳಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಗ್ರಾಮೀಣ ಭಾರತವನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸಬೇಕಾದ
ಅವಶ್ಯಕತೆಯಿದೆ.

ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಿ, ಅವರ ಜ್ಞಾನ, ಕೌಶಲ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿಯ ಜೊತೆಗೆ ಪಶುಪಾಲನೆ, ಮೀನುಗಾರಿಕೆ, ರೇಷ್ಮೆಕೃಷಿ, ಕೋಳಿಸಾಕಣೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ, ಕೃಷಿಯನ್ನು ಒಂದು ಲಾಭದಾಯಕ ಹಾಗೂ ಆಕರ್ಷಕ ಉದ್ಯೋಗವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಇದರಿಂದ ಗ್ರಾಮೀಣ ಜನರು ನಗರಗಳಿಗೆ ವಲಸೆಹೋಗುವುದನ್ನು ತಪ್ಪಿಸಬಹುದಾಗಿದೆ.

೧೨. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯನ್ನು ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ತಿಳಿಸಿ.

ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು
ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ. ವಿಕೇಂದ್ರೀಕರಣದಿಂದ
ಸ್ವಾವಲಂಬಿ, ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು. ಇದನ್ನೇ
ಗಾಂಧೀಜಿಯವರು ‘ಗ್ರಾಮ ಸ್ವರಾಜ್ಯ’ ಎಂದು ಕರೆದಿದ್ದರು. ವಿಕೇಂದ್ರೀಕರಣವು ಎಲ್ಲ ರೀತಿಯ ಶೋಷಣೆಗಳನ್ನು ತಡೆಯುತ್ತದೆ, ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ ಹಾಗೂ
ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ.ಗ್ರಾಮ ಪಂಚಾಯ್ತಿ,
ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ.
ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ
ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

೧೩. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಬರೆಯಿರಿ.

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು
ಪಾಲ್ಗೊಳ್ಳುವಂತೆ ಮಾಡುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು. ಇವು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಶಾಲೆ ಮತ್ತು ಆಸ್ಪತ್ರೆ ಕಟ್ಟಡಗಳು ಮುಂತಾದ ಸಮುದಾಯಕ್ಕೆ ಉಪಯೋಗವಾಗುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ವಯಸ್ಕ ಶಿಕ್ಷಣ, ತಾಂತ್ರಿಕ ಹಾಗೂ ವೃತ್ತಿ ತರಬೇತಿಗೆ ಪ್ರೋತ್ಸಾಹ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ವಿಸ್ತರಣೆ ಮೂಲಕ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿಯೂ ಪಂಚಾಯತ್ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ.

ಗ್ರಾಮೀಣ ಉತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ದುಡಿಯುವ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ, ಅಲ್ಲಿನ ಬಡತನ ಅಲ್ಲಿನ ಬಡತನ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸುವಲ್ಲಿ ಸ್ವಾವಲಂಬಿ ಮತ್ತು ಸಮೃದ್ಧ ಬದುಕನ್ನು ಕಟ್ಟಿಕೊಡುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

Iಗಿ. ಚಟುವಟಿಕೆಗಳು.

೧. ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಅದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ನಿರ್ವಹಿಸುತ್ತಿರುವ ಕಾರ್ಯಗಳನ್ನು ಪಟ್ಟಿಮಾಡಿರಿ.

ಗ್ರಾಮದಲ್ಲಿ ಯಾರಿಗೆ ಮನೆ ಇರುವುದಲ್ಲವೋ ಅವರಿಗೆ ಮನೆ ಕಟ್ಟಿಕೊಡಲಾಗಿದೆ. ಗಲ್ಲಿ ಗಲ್ಲಿಗೂ ಚರಂಡಿ ಮತ್ತು ಸಿಮೆಂಟ್ ರೋಡನ್ನು ಮಾಡಿಕೊಳ್ಳಲಾಗಿದೆ. ಗುಡಿಸಲು ಮುಕ್ತ ಗ್ರಾಮ ಮಾಡಲು ಗುಡಿಸಲು ಯಾರಿಗೆ ಇವೆಯೋ ಅವರಿಗೆ ಮನೆ ಕೊಟ್ಟಿಕೊಡಲು ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯದ ಸೌಲಭ್ಯವನ್ನು ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ತಿಂಗಳಿಗೊಮ್ಮೆ ಗ್ರಾಮ ಸಭೆ ನಡೆಸಿ ಗ್ರಾಮದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಿಣಿ ಹೆಣ್ಣು ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಆರೋಗ್ಯ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ. ವಯೋವೃದ್ಧರಿಗೆ ವಿಧವೆಯರಿಗೆ ಅಜ್ಜ ಅಜ್ಜಿಯರಿಗೆ ಸಂಬಳ ಬರುವ ವ್ಯವಸ್ಥೆ ಮಾಡಲಾಗಿದೆ.

೨. ನಿಮ್ಮ ಹತ್ತಿರದಲ್ಲಿರುವ ಮಹಿಳಾ ಸ್ವಸಹಾಯ ಸಂಘಕ್ಕೆ ಭೇಟಿ ನೀಡಿ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಅವುಗಳ ಪಾತ್ರವನ್ನು ಕುರಿತು ಮಾಹಿತಿ ಪಡೆದು ತರಗತಿಯಲ್ಲಿ ಚರ್ಚಿಸಿ.

ಮಹಿಳಾ ಸಂಘಗಳ ಮೂಲಕ ಆಯಾ ಮಹಿಳೆಯರಿಗೆ ಅವರ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಆರ್ಥಿಕ ಸಹಾಯವನ್ನು ವಿಸ್ತರಿಸಲಾಗಿದೆ.

Leave a Comment