ವಿದ್ಯುಚ್ಛಕ್ತಿ, 10th standard science question answer

SSLC science question answer, ಪಾಠ 5, NCERT chapter 11,

10ನೇ ತರಗತಿ ವಿಜ್ಞಾನ ಅಧ್ಯಾಯ-11 ವಿದ್ಯುಚ್ಛಕ್ತಿ ನೋಟ್ಸ್‌ | 10th Class Science Chapter 11 Notes,

10ನೇ ತರಗತಿ ‌ವಿಜ್ಞಾನ ವಿದ್ಯುಚ್ಛಕ್ತಿ ನೋಟ್ಸ್ ಪ್ರಶ್ನೋತ್ತರಗಳು, 10th standard  Science Chapter 12 Notes Question Answer Pdf 10th Science Vidyuchakti Notes 10th Class Science Electricity Notes Kseeb Solution For Class For 10 Chapter 12 Notes Class 10 Science Chapter 12 Question Answer in Kannada 2024 10th Science Vidyut Shakti Question Answer in Kannada

ವಿದ್ಯುಚ್ಛಕ್ತಿ

ಪ್ರಮುಖ ಅಂಶಗಳು:

 

ವಿದ್ಯುತ್ಆವೇಶ : ವಸ್ತುವಿನ ಮೂಲಭೂತ ಕಣವಾಗಿದೆ. ಇದು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು.

 

ವಿದ್ಯುತ್ ಪ್ರವಾಹ :ವಾಹಕದಲ್ಲಿ ವಿದ್ಯುತ್ ಆವೇಶಗಳ ಹರಿಯುವಿಕೆಯನ್ನು ವಿದ್ಯುತ್ ಪ್ರವಾಹ ಎನ್ನುವರು. ಏಕಮಾನ

ಅಂಪಿಯರ್(A)

 

ವಿಭಾವಂತರ : ವಿದ್ಯುತ್ ಮಂಡಲದಲ್ಲಿ ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಮತ್ತೊಂದು

ಬಿಂದುವಿಗೆ ತರುವಲ್ಲಿ ಆಗುವ ಕೆಲಸ. ವಿಭವಾಂತರವನ್ನು ವೋಲ್ಟ್ ಅಳೆಯುತ್ತಾರೆ.

 

ಓಮನ ನಿಯಮ: ವಿಭಾವಂತರ (V) ವಿದ್ಯುತ್ ಪ್ರವಾಹ (I) ಮತ್ತು ರೋಧ(R) ಗಳ ನಡುವೆ ಸಂಬಂಧ ಹೊಂದಿದೆ.

 

* ರೋಧ ಮತ್ತು ರೋಧಶೀಲತೆ

 

* ರೋಧ : ವಿದ್ಯುತ್ ಪ್ರವಾಹದ ಚಲನೆಗೆ ಒಡ್ಡುವ ಅಡ್ಡಿಯನ್ನು ರೋಧ ಎನ್ನುವರು. ಇದನ್ನು ಓಮ್ ನಿಂದ ಅಳೆಯುತ್ತೇವೆ.

 

* ರೋಧಶೀಲತೆ : ವಸ್ತುವಿನ ವಿಶಿಷ್ಟ ಗುಣವು ಅದರ ರೋಧ ಮೇಲೆ ಬೀರುವ ಪರಿಣಾಮ.

 

ವಾಹಕದ ರೋಧ ಅವಲಂಬಿಸಿರುವ ಅಂಶಗಳು :

 

ವಾಹಕದ ಉದ್ದ: ಉದ್ದದೊಂದಿಗೆ ರೋದದ ಹೆಚ್ಚಳ

 

ವಾಹಕದ ಅಡ್ಡ ಕೊಯ್ತ: ರೋದ ಕಡಿಮೆಯಾದಂತೆ ವಿಸ್ತೀರ್ಣದಲ್ಲಿ ಹೆಚ್ಚಳ.

 

ವಾಹಕದ ವಾಹಕತೆ: ವಿವಿಧ ರೀತಿಯ ಲೋಹಗಳು ವಿವಿಧ ರೀತಿಯ ರೋದಗಳನ್ನು ಹೊಂದಿದೆ.

 

ಉಷ್ಣತೆ : ರೋಧವು ಹೆಚ್ಚಿದಂತೆ ಉಷ್ಣತೆಯು ಹೆಚಾ ್ಚಗುತ್ತದೆ.

ಸರಣಿ ಮತ್ತು ಸಮಾಂತರ ಮಂಡಲ.

 

ಸರಣಿ ಮಂಡಲ : ಘಟಕಗಳು ಒಂದರ ತುದಿಗೆ ಒಂದರಂತೆ ಜೋಡಿಸುತ್ತಾರೆ. ಒಂದೇ ರೀತಿಯ ವಿದ್ಯುತ್ ಪ್ರವಾಹವು

ಎಲ್ಲಾ ಘಟಕಗಳಲ್ಲಿ ಹರಿಯುತ್ತದೆ ಆದರೆ ಇದು ವಿದ್ಯುತ್ ಶಕ್ತಿಯ ಪ್ರಮಾಣವನ್ನು ವಿಭಜಿಸುತ್ತದೆ.

 

ಸಮಾಂತರ ಮಂಡಲ: ಎಲ್ಲಾ ಘಟಕಗಳು ಒಂದು ಸಾಮಾನ್ಯ ಬಿಂದುವಿಗೆ ಜೋಡಿಸುತ್ತಾರೆ. ಶಕ್ತಿಯ ಪ್ರಮಾಣ ಎಲ್ಲಾ

ಘಟಕಗಳು ಒಂದೇ ಆಗಿರುತ್ತದೆ. ಆದರೆ ಸಮಾಂತರ ಮಂಡಲದಲ್ಲಿ ವಿದ್ಯುತ್ ಪ್ರವಾಹ ವಿಭಜನೆಗೊಳ್ಳುತ್ತದೆ.

 

ವಿದ್ಯುತ್ ಸಾಮರ್ಥ್ಯ ಮತ್ತು ಶಕ್ತಿ

 

ವಿದ್ಯುತ್ ಸಾಮರ್ಥ್ಯ (P): ಒಂದು ಮಂಡಲದಲ್ಲಿ ಬಳಕೆಯಾಗುವ ವಿದ್ಯುತ್ ಶಕ್ತಿಯ ದರ P=VI ಸಾಮರ್ಥ್ಯವನ್ನು

ಬ್ಯಾಟ್ ನಿಂದ ಅಳೆಯುತ್ತಾರೆ.

 

ವಿದ್ಯುತ್ ಶಕ್ತಿ (E): ಒಟ್ಟು ಬಳಕೆಯಾದ ಶಕ್ತಿ E=Pt ವಿದ್ಯುತ್ ಶಕ್ತಿಯನ್ನು ಜೌಲ್ or kwh ನಿಂದ ಅಳೆಯುತ್ತಾರೆ.

 

ವಿದ್ಯುತ್ ನ ಉಷ್ಣ ಉತ್ಪಾದನೆ ಪರಿಣಾಮಗಳು :

ವಿದ್ಯುತ್ಕೋಶ ಶುಷ್ಕ ಕೋಶ ರೋಧಕವನ್ನು ಸಂಪರ್ಕಿಸಿದಾಗ ವಿದ್ಯುತ್ ಶಕ್ತಿಯ ಸ್ವಲ್ಪ ಭಾಗವೂ ನಿರಂತರವಾಗಿ

ಉಷ್ಣ ಶಕ್ತಿಯಾಗಿ ವ್ಯಯವಾಗಿದೆ. ಇದನ್ನು ವಿದ್ಯುತ್ ವಾಹದ ಉಷ್ಣೋತ್ಪಾದನೆ ಪರಿಣಾಮ ಎನ್ನುವರು.

ಇದನ್ನು ಜೌಲ್‌ನ ಉತ್ಪಾದನಾ ಪರಿಣಾಮದಿಂದ ವಿವರಿಸಲಾಗುತ್ತದೆ H=I²Rt

 

ಪ್ರಾಯೋಗಿಕ ಅನ್ವಯಗಳು: ಫ್ಯೂಸ್‌ನ ಉಪಯೋಗ, ಸರ್ಕ್ಯೂಟ್ ಬ್ರೇಕರ್‌ಗಳು, ಗೃಹಬಳಕೆಯ ವೈರಿಂಗ್‌ನಲ್ಲಿ

ಸುರಕ್ಷತಾ ಕ್ರಮಗಳ ಬಳಕೆ ಶಕ್ತಿಯ ಪ್ರಮಾಣ ಸರಿಯಾದ ವೈರಿಂಗ್‌ನ ಪ್ರಾಮುಖ್ಯತೆ .

 

ಗೃಹ ಬಳಕೆಯ ವಿದ್ಯುತ್ ಮಂಡಲ: ಮನೆಯ ವೈರಿಂಗ್ ವ್ಯವಸ್ಥೆಗಳ ಮೂಲಭೂತ ತಿಳುವಳಿಕೆ, ಅರ‍್ಥಿಂಗ್ ,

ಸರಿಯಾದ ವೈರಿಂಗ್ ಪ್ರಾಮುಖ್ಯತೆ ವಿದ್ಯುತ್ ಆಘಾತಗಳು ಮತ್ತು ಅಪಘಾತ ತಡೆಯುವುದು.

 

 

ಈ ಪಾಠವು ವಿದ್ಯುತ್ ಶಕ್ತಿಯು ಹೇಗೆ ಕಾರ್ಯನಿರ್ವಹಿಸುತ್ತದೆ, ದೈನಂದಿನ ಅನ್ವಯಗಳಲ್ಲಿ ಅದನ್ನು ಹೇಗೆ

ಬಳಸಲಾಗುತ್ತದೆ, ವಿದ್ಯುತ್ ಮಂಡಲಗಳು ಮತ್ತು ಸಾಧನಗಳನ್ನು ನಿಯಂತ್ರಿಸುವ ತತ್ವಗಳನ್ನು ಅರ್ಥ

ಮಾಡಿಕೊಳ್ಳಲು ಅಡಿಪಾಯವನ್ನು ಒದಗಿಸುತ್ತದೆ.

 

 

೧-ಅಂಕದ ಪ್ರಶ್ನೆಗಳು

 

೧. ವಿದ್ಯುದಾವೇಶದ ಅಂತರಾಷ್ಟ್ರೀಯ ಏಕಮಾನ ಯಾವುದು?

ಉ: ಕೂಲಮ್ (C).

 

೨. ವಿಭವಾಂತರವನ್ನು ಅಳೆಯಲು ಬಳಸುವ ಉಪಕರಣ ತಿಳಿಸಿ.

ಉ: ವೋಲ್ಟ್ ಮೀಟರ್.

 

೩. ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಯಾವುದು?

ಉ: ಆಂಪಿಯರ್(A).

 

೪. ಓಮ್ ನ ನಿಯಮವನ್ನು ತಿಳಿಸಿ.

ಉ: ವಿಭವಾಂತರ = ವಿದ್ಯುತ್ ಪ್ರವಾಹ * ರೋಧ (V=I xR)

 

೫. ವಿದ್ಯುತ್ ರೋಧದ ವಿಲೋಮಾಂಶವನ್ನು ತಿಳಿಸಿ.

ಉ: ವಿದ್ಯುತ್ ವಹನ.

 

೬. ವಾಹಕಗಳಲ್ಲಿ ವಿದ್ಯುತ್ ಪ್ರವಾಹಕ್ಕೆ ಕಾರಣವಾಗುವ ಕಣ ಯಾವುದು?

ಉ: ಎಲೆಕ್ಟ್ರಾನ್ .

 

೭. ವಿದ್ಯುತ್ ಸಾಮರ್ಥ್ಯದ ಅಂತರಾಷ್ಟ್ರೀಯ ಏಕಮಾನ ಯಾವುದು?

ಉ: ವ್ಯಾಟ್ (W).

 

೮. ವಿದ್ಯುತ್ ಸಾಮರ್ಥ್ಯ, ವಿಭವಾಂತರ ಮತ್ತು ವಿದ್ಯುತ್ ಪ್ರವಾಹಕ್ಕೆ ಇರುವ ಗಣಿತೀಯ ಸಂಬಂಧವನ್ನು ತಿಳಿಸಿ.

ಉ: ವಿದ್ಯುತ್ ಸಾಮರ್ಥ್ಯ = ವಿಭವಾಂತರ * ವಿದ್ಯುತ್ ಪ್ರವಾಹ

P = V x I.

 

೯. ವೋಲ್ಟ್ ಮೀಟರ್ ನ ವಿದ್ಯುತ್ ರೋಧ ಎಷ್ಟು ?

ಉ: ಅಪರಿಮಿತ.

 

೧೦. ಒಂದು ಆದರ್ಶ ಆಮ್ಮೀಟರ್ ನ ವಿದ್ಯುತ್ ರೋಧ ಎಷ್ಟು?

ಉ: ಸೊನ್ನೆ (೦).

 

೧೧. ಒಂದು ವಾಹಕದ ರೋಧವು ತಾಪಮಾನದೊಂದಿಗೆ ಹೇಗೆ ಬದಲಾಗುತ್ತದೆ?

ಉ: ತಾಪವು ಹೆಚ್ಚಾದಂತೆ ವಾಹಕದ ರೋಧವು ಹೆಚ್ಚಾ ಗುತ್ತದೆ.

 

೧೨. ರೋಧಶೀಲತೆಯ ಅಂತರಾಷ್ಟ್ರೀಯ ಏಕಮಾನ ಯಾವುದು?

ಉ. ಓಮ್‌ಮೀಟರ್ (Ωm)

 

೧೩. R1,R2,R3 ಮತ್ತು R4 ರೋಧಗಳ ಸರಣಿ ಮತ್ತು ಸಮಾಂತರ ಜೋಡಣೆಗಳಿಂದ ಉಂಟಾಗುವ ಒಟ್ಟು

ರೋಧವನ್ನು ಕಂಡುಹಿಡಿಯುವ ಸೂತ್ರ ತಿಳಿಸಿ.

ಉ: ಸರಣಿ ಜೋಡಣೆ, Rs= R1+R2+R3 + R4

ಸಮಾಂತರ ಜೋಡಣೆ, Rp = 1/R1+1/R2+1/R3+1/R4

 

 

೧೪. ವಿದ್ಯುತ್ ಶಕ್ತಿ ಕಂಡುಹಿಡಿಯುವ ಸೂತ್ರ ತಿಳಿಸಿ.

ಉ: ವಿದ್ಯುತ್ ಶಕ್ತಿ = ಸಾಮರ್ಥ್ಯ * ಕಾಲ

E = P x t

 

 

೧೫. ವಿದ್ಯುತ್ ಶಕ್ತಿಯ ಅಂತರಾಷ್ಟಿçÃಯ ಏಕಮಾನ ಯಾವುದು?

ಉ: ಜೌಲ್(J)

 

೧೬. ಉತ್ತಮ ವಿದ್ಯುತ್ ವಾಹಕಕ್ಕೆ ಒಂದು ಉದಾಹರಣೆ ಕೊಡಿ.

ಉ: ತಾಮ್ರ

೧೭. 120V ವಿಭವಾಂತರದಲ್ಲಿ 2A ವಿದ್ಯುತ್ ಪ್ರವಾಹ ಹೊಂದಿರುವ ಉಪಕರಣವು ಬಳಸುವ ವಿದ್ಯುತ್ ಸಾಮರ್ಥ್ಯ

ಎಷ್ಟು?

ಉ: 240W (P = VI)

 

೧೮. ಒಂದು ವಾಹಕ ತಂತಿಯ ಉದ್ದವನ್ನು ದ್ವಿಗುಣಗೊಳಿಸಿದಾಗ ವಾಹಕ ರೋಧದಲ್ಲಿ ಉಂಟಾಗುವ ಬದಲಾವಣೆ ಏನು?

ಉ: ರೋಧವು ದ್ವಿಗುಣಗೊಳ್ಳುತ್ತದೆ.

 

೧೯. ಪರ್ಯಾಯ ವಿದ್ಯುತ್ತನ್ನು ನೇರ ವಿದ್ಯುತ್ತನ್ನಾಗಿ ಪರಿವರ್ತಿಸುವ ಸಾಧನ ತಿಳಿಸಿ.

ಉ: ದಿಕ್ಪರಿವರ್ತಕ

 

೨೦.ಯಾವ ವಿಧದ ಮಂಡಲದಲ್ಲಿ , ಮಂಡಲದ ಒಟ್ಟು ರೋಧವು ಮಂಡಲದಲ್ಲಿ ಇರುವ ಕಡಿಮೆ ರೋಧ ಹೊಂದಿರುವ ರೋಧಕಕ್ಕಿಂತ ಕಡಿಮೆ ಇರುತ್ತದೆ.

 

ಉ: ಸಮಾಂತರ ಜೋಡಣೆ ಹೊಂದಿರುವ ಮಂಡಲದಲ್ಲಿ.

 

ಎರಡು ಅಂಕದ ಪ್ರಶ್ನೋತ್ತರಗಳು:

 

೧. ವಿದ್ಯುತ್ ಪ್ರವಾಹ ಎಂದರೇನು? ವಿದ್ಯುತ್ ಪ್ರವಾಹದ SI ಏಕಮಾನ ಬರೆಯಿರಿ ?

ಉ: ವಿದ್ಯುತ್ ಆವೇಶಗಳ ಚಲನೆಯ ದರವೇ ವಿದ್ಯುತ್ ಪ್ರವಾಹದ SI ಏಕಮಾನ ಆಂಪಿಯರ್(A).

 

೨. ವಿದ್ಯುತ್ ಸಾಮರ್ಥ್ಯವನ್ನು ಲೆಕ್ಕಚಾರ ಮಾಡುವ ಸೂತ್ರ ಬರೆಯಿರಿ?ಹಾಗೂ ವಿದ್ಯುತ್ ಸಾಮರ್ಥ್ಯದ ಏಕಮಾನ

ಬರೆಯಿರಿ ?

ಉ. ವಿದ್ಯುತ್ ಸಾಮರ್ಥ್ಯ ಲೆಕ್ಕಿಸುವ ಸೂತ್ರ P=VI

ಇಲ್ಲಿ V – ವಿಭಾಂತರ

I – ವಿದ್ಯುತ್ ಪ್ರವಾಹ

ವಿದ್ಯುತ್ ಸಾಮರ್ಥ್ಯದ ಏಕಮಾನ – “ವ್ಯಾಟ್” (W)

 

೩. ಓಮ್ ನಿಯಮ ನಿರೂಪಿಸಿ?

ಉ: ಸ್ಥಿರ ತಾಪದಲ್ಲಿ ವಾಹಕ ತಂತಿಯ ತುದಿಗಳ ನಡುವಿನ ವಿಭವಾಂತರವು ಅದರ ಮೂಲಕ ಹರಿಯುವ

ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ.

V = IR

 

V – ವಿಭವಾಂತರ

I – ವಿದ್ಯುತ್ ಪ್ರವಾಹ

R – ರೋಧ

 

೪. ಒಂದು ವಸ್ತುವಿನ ರೋಧಶೀಲತೆ ಎಂದರೇನು ? ವಿದ್ಯುತ್ ರೋಧದಿಂದ ಇದು ಹೇಗೆ ಭಿನ್ನವಾಗಿದೆ ?

 

ಉ: ಒಂದು ಮೀಟರ್ ಉದ್ದ ಮತ್ತು ಒಂದು ಚದರಮೀಟರ್ ಅಡ್ಡಕೊಯ್ತ ವಿಸ್ತೀರ್ಣ ಹೊಂದಿರುವ ಒಂದು

ವಾಹಕವು ಒಡ್ಡುವ ವಿದ್ಯುತ್ ರೋಧವನ್ನು ರೋಧಶೀಲತೆ ಎನ್ನುವರು. ಇದನ್ನು (𝜌,rho) ಯಿಂದ

ಸೂಚಿಸಲಾಗುತ್ತದೆ.ಇದರ ಏಕಮಾನ ಓಮ್-ಮೀಟರ್.( Ω m)

 

 

ವಾಹಕದ ರೋಧವು ವಾಹಕದ ಉದ್ದ, ವಾಹಕದ ಅಡ್ಡ ಸೆಲೆ, ವಾಹಕದ ಪಾಕೃತಿಕ ಗುಣ, ವಾಹಕದ ತಾಪ ಇವುಗಳೊಂದಿಗೆ ಬದಲಾಗುತ್ತದೆ ಆದರೆ ರೋಧಶೀಲತೆಯು ಪ್ರತಿಯೊಂದು ವಸ್ತುವಿಗೂ ಸ್ಥಿರವಾಗುತ್ತದೆ.

 

 

೫.ವಿದ್ಯುತ್ ಮಂಡಲದ ವಿಭಾಂತರವನ್ನು ಹೇಗೆ ಅಳೆಯುವಿರಿ? ವಿಭಾಂತರವನ್ನು ಅಳೆಯಲು ಬಳಸುವ ಸಾಧನ ಯಾವುದು?

 

ಉ. ಮಂಡಲದಲ್ಲಿನ ಎರಡು ಬಿಂದುಗಳಿಗೆ ಸಮಾಂತರವಾಗಿ ಜೋಡಿಸಿ ವಿಭಾಂತರವನ್ನು ಅಳೆಯಲಾಗುತ್ತದೆ.

ವಿಭವಾಂತರವನ್ನು ಅಳೆಯಲು ವೋಲ್ಟ್ ಮೀ ಟರ್ ಬಳಸಲಾಗುತ್ತದೆ.

 

೬.ವಿದ್ಯುತ್ ವಿಭವ ಮತ್ತು ವಿಭವಾಂತರವನ್ನು ವ್ಯಾಖ್ಯಾನಿಸಿ.

 

ಉ. ವಿದ್ಯುತ್ ಕ್ಷೇತ್ರದಲ್ಲಿನ ಒಂದು ಧನ ಆವೇಶ ಬಿಂದುವನ್ನು ಅನಂತರ ದೂರದ ಬಿಂದುವಿನಿಂದ ನಿರ್ಧಿಷ್ಟ

ಬಿಂದುವಿಗೆ ತರಲು ನಡೆದ ಕೆಲಸವೇ ವಿದ್ಯುತ್ ವಿಭವ.

ವಿದ್ಯುತ್ ಕ್ಷೇತ್ರದಲ್ಲಿನ ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಒಂದು ಏಕಮಾನ ಧನ ಆವೇಶವನ್ನು ವರ್ಗಾಯಿಸಲು ನಡೆದ ಕೆಲಸವೇ ವಿಭವಾಂತರ.

 

೭. ವಿದ್ಯುತ್ ಆವೇಶದ ಏಕಮಾನ ಯಾವುದು? ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಸಾಧನ ಯಾವುದು ?

 

ಉ. ವಿದ್ಯುತ್ ಆವೇಶದ ಏಕಮಾನ ಕೊಲಾಮ್ (C) ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಸಾಧನ

ಅಮ್ಮೀಟರ್.

೮. ಸಾಮರ್ಥ್ಯ ಮತ್ತು ಬಳಸಿದ ವಿದ್ಯುತ್ ಶಕ್ತಿಗಳ ಸಂಬಂಧ ನಿರೂಪಿಸಿ.

ಉ. ಬಳಸಿದ ವಿದ್ಯುತ್ ಶಕ್ತಿ E = P/t

ಇಲ್ಲಿ E = ಶಕ್ತಿ ಜೌಲ್ ಗಳಲ್ಲಿ

P = ಸಾಮರ್ಥ್ಯ ವ್ಯಾಟ್

t = ಕಾಲ ಸೆಕೆಂಡ್ ಗಳಲ್ಲಿ

 

೯.ವಿದ್ಯುತ್ತಿನ ಉಷ್ಣೋತ್ಪಾದನ ಪರಿಣಾಮ ವಿವರಿಸಿ.

 

ಉ. ವಿದ್ಯುತ್ ಕೋಶಕ್ಕೆ ರೋಧವನ್ನು ಸಂಪರ್ಕಿಸಿದಾಗ ವಿದ್ಯುಚ್ಛಕ್ತಿಯ ಸ್ವಲ್ಪ ಭಾಗವು ನಿರಂತರವಾಗಿ ಉಷ್ಣ

ಶಕ್ತಿಯಾಗಿ ವ್ಯಯವಾಗುತ್ತದೆ. ಇದನ್ನು ವಿದ್ಯುತ್ ಪ್ರವಾಹದ ಉಷ್ಣೋತ್ಪಾದನ ಪರಿಣಾಮ ಎನ್ನುವರು.

 

೧೦. ಕಬ್ಬಿಣದ ಹೊದಿಕೆ ಇರುವ ವಿದ್ಯುತ್ ಸಾಧನಗಳನ್ನು ಸಾಮಾನ್ಯವಾಗಿ ಭೂಸಂಪರ್ಕಗೊಳಿಸಿರುತ್ತಾರೆ ಏಕೆ?

 

ಉ. * ವಿದ್ಯುತ್ ಆಘಾತವನ್ನು ತಪ್ಪಿಸಲು

* ಯಾವುದೇ ವಿದ್ಯುತ್ ಅವಘಡ ಸಂಭಂವಿಸಿದಾಗ ಭೂ ಸಂಪರ್ಕದಿಂದ ಕಡಿಮೆ ರೋಧವಿರುವ ರೋಧಕದಿಂದ ಹೆಚ್ಚಿನ ವಿದ್ಯುತ್ ಪ್ರವಾಹವು ಹರಿಯದಂತೆ ರಕ್ಷಿಸುತ್ತದೆ.

 

೧೧. ವಿದ್ಯುತ್ ಮಂಡಲದಲ್ಲಿ ಪ್ಯೂಸ್‌ನ ಕಾರ್ಯವೇನು?

ಉ. ಪ್ಯೂಸ್ ಎಂಬುದು ಒಂದು ಸುರಕ್ಷಾ ಸಾಧನ ಪ್ಯೂಸ್ ತೆಳುವಾದ ತಂತಿಯನ್ನು ಹೊಂದಿದ್ದು, ಇದು ಕಡಿಮೆ

ರೋಧವಿರುವ ರೋಧಕವಾಗಿದ್ದು, ವಿದ್ಯುತ್ ಅವಘಡ ಸಂಭವಿಸಿದಾಗ ಪ್ಯೂಸ್ ತಂತಿ ಕರಗಿ ಮಂಡಲವನ್ನು

ರಕ್ಷಿಸುತ್ತದೆ.

 

 

೧೨.ಒಂದು ವಾಹಕದ ರೋಧವು ಅದರ ಉದ್ದ ಮತ್ತು ಅಡ್ಡಕೊಯ್ತ (ವಿಸ್ತೀರ್ಣ)ಕ್ಕೆ ಹೇಗೆ ಅವಲಂಬಿತವಾಗಿದೆ?

ಉ. ಒಂದು ವಾಹಕ ತಂತಿಯ ರೋಧವು ಅದರ ಉದ್ದಕ್ಕೆ ನೇರಾನುಪಾತದಲ್ಲಿಯೂ ಮತ್ತು ಅದರ ಅಡ್ಡಕೊಯ ್ತದ

ವಿಸ್ತೀರ್ಣ ವಿಲೋಮಾನುಪಾತದಲ್ಲಿಯೂ ಇರುತ್ತದೆ.

ಗಣಿತೀಯವಾಗಿ (𝑅 =𝜌𝑙/𝐴) ಇಲ್ಲಿ 𝜌 ಯು ವಾಹಕದ ರೋಧಕತೆ.

 

೧೩. ಹ್ರಸ್ವಮಂಡಲ ಎಂದರೇನು?

ಉ. ಸಜೀವ ಮತ್ತು ತಟಸ್ಥ ತಂತಿಗಳು ಸಮಿಪಕ್ಕೆ÷ ಬಂದಾಗ ಮಂಡಲದಲ್ಲಿ ಹಠಾತ್ತಾಗಿ ವಿದ್ಯುತ್ ಪ್ರವಾಹ ಹೆಚ್ಚಾಗುವುದೇ ಹ್ರಸ್ವಮಂಡಲ.

 

೧೪. ಸರಣಿ ಮಂಡಲ ಮತ್ತು ಸಮಾಂತರ ಮಂಡಲಗಳಿರುವ ವ್ಯತ್ಯಾಸವೇನು ?

 

ಉ. ಸರಣಿ ಮಂಡಲದಲ್ಲಿ ಒಂದರ ತುದಿಯನ್ನು ಇನ್ನೊಂದರ ತುದಿಗಳಿಗೆ ಸೇರಿಸುವ ಮೂಲಕ ಜೋಡಿಸಲಾಗಿದೆ,

ಮಂಡಲದಲ್ಲಿ ಪ್ರತಿಯೊಂದು ಭಾಗದಲ್ಲಿ ಸಮನಾದ ವಿದ್ಯುತ್ ಪ್ರವಾಹವಿರುತ್ತದೆ. ಸಮಾಂತರ ಮಂಡಲದಲ್ಲಿ ವಿದ್ಯುತ್ ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ವಿಭಜಿಸುತ್ತದೆ. ಮಂಡಲದಲ್ಲಿ ವಿದ್ಯುತ್ ಪ್ರವಾಹ ಒಂದೇ ಆಗಿರುತ್ತದೆ.

 

೧೫. ವಿದ್ಯುತ್ ಉಪಕರಣಗಳ ಪವರ್ ರೇಟಿಂಗ್ ನ ಪ್ರಾಮುಖ್ಯತೆ ಏನು?

 

ಉ. * ಏಕಮಾನಕಾಲದಲ್ಲಿ ವಿದ್ಯುತ್ ಸಾಧನದಲ್ಲಿ ಬಳಕೆಯಾದ ಶಕ್ತಿಯನ್ನು ಸೂಚಿಸುತ್ತದೆ.?

 

* ವಿದ್ಯುತ್ ಸಾಧನದಲ್ಲಿ ವಿದ್ಯುತ್ ಜೋಡಣೆಯ ಶಕ್ತಿಯ ದರ ಮತ್ತು ಸಾಮರ್ಥ್ಯವನ್ನು ಸೂಚಿಸುತ್ತದೆ.

 

೧೬. ವಿದ್ಯುತ್ ಮಂಡಲ ವ್ಯಾಖ್ಯಾನಿಸಿರಿ?

ಉ. ವಿದ್ಯುತ್ ಆವೇಶಗಳ ಚಲನೆಗೆ ಇರುವ ಆವೃತ ಪಥವೇ ವಿದ್ಯುತ್ ಮಂಡಲ.

 

೧೭. ವಿದ್ಯುತ್ ಬಲ್ಪ್ನಲ್ಲಿ ಟಂಗ್‌ಸ್ಟನ್‌ನನ್ನು ತಂತುವಾಗಿ ಬಳಸುತ್ತಾರೆ, ಕಾರಣವೇನು?

 

ಉ. ಟಂಗ್‌ಸ್ಟನ್‌ನನ್ನು ತಂತುವಾಗಿ ಬಳಸುತ್ತಾರೆ. ಏಕೆಂದರೆ

* ಉತ್ತಮ ವಿದ್ಯುತ್ ವಾಹಕತೆ ಹೊಂದಿದೆ.

* ಹೆಚ್ಚಿನ ಕರಗುವ ಬಿಂದು ಹೊಂದಿದೆ.

* ಉಷ್ಣಶಕ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವುದರ ಮೂಲಕ ಹೆಚ್ಚಿನ ತಾಪಮಾನದಲ್ಲಿ ಕರಗುವುದಿಲ್ಲ.

 

೧೮. ಒಂದು ವಾಹಕದ ರೋದವು ಅದರ ಉಷ್ಣತೆ ಹೆಚ್ಚಾದಾಗ ಏನಾಗುತ್ತದೆ?

 

ಒಂದು ವಾಹಕದಲ್ಲಿನ ರೋಧ ಹೆಚ್ಚಾದಂತೆ ಅದರ ಉಷ್ಣತೆ ಹೆಚ್ಚಾಗುತ್ತದೆ ಆದ್ದರಿಂದ ವಾಹಕದಲ್ಲಿ ಅಣುಗಳು ಹೆಚ್ಚು

ಕಂಪಿಸಿ ಘ಼ರ್ಷಣೆ ಹೆಚ್ಚಾಗಿ ಎಲೆಕ್ಟ್ರಾನ್ ಗಳು ಪ್ರವಹಿಸುವಂತೆ ಮಾಡುತ್ತದೆ.

 

 

೩- ಅಂಕದ ಪ್ರಶ್ನೆಗಳು

 

೧.ಓಮ್ ನ ನಿಯಮವನ್ನು ಮಂಡಲ ಚಿತ್ರ ಸಹಿತ ವಿವರಿಸಿ.

ಉ: ಓಮ್ ನ ನಿಯಮದ ಪ್ರಕಾರ, “ಒಂದು ವಾಹಕದ ಎರಡು ಬಿಂದುಗಳ ನಡುವಿನ ವಿದ್ಯುತ್ ಪ್ರವಾಹವು

ಆ ಬಿಂದುಗಳ ನಡುವಿನ ವಿಭವಾಂತರಕ್ಕೆ ನೇರ ಅನುಪಾತದಲ್ಲಿರುತ್ತದೆ.”

 

ಇದನ್ನು ಗಣಿತೀಯವಾಗಿ ಹೀಗೆ ಸೂಚಿಸಬಹುದು

V= I xR

• V – ವಿಭವಾಂತರ

• I – ವಿದ್ಯುತ್ ಪ್ರವಾಹ

• R – ವಿದ್ಯುತ್ ರೋಧ

 

೨.ಒಂದು ವಿದ್ಯುತ್ ಉಪಕರಣದ ವಿದ್ಯುತ್ ಸಾಮರ್ಥ್ಯ ಮತ್ತು ಆ ಉಪಕರಣದ ರೋಧಗಳ ನಡುವಿನ ಸಂಬಂಧವನ್ನು ತಿಳಿಸಿ.

 

ಉ: ಒಂದು ಸ್ಥಿರ ವಿಭವಾಂತರದಲ್ಲಿ ಉಪಕರಣದ ವಿದ್ಯುತ್ ಸಾಮರ್ಥ್ಯವು ಆ ಉಪಕರಣದ ವಿದ್ಯುತ್ ರೋಧಕ್ಕೆ ನೇರ ಅನುಪಾತದಲ್ಲಿರುತ್ತದೆ. ಇದನ್ನು ಗಣಿತೀಯವಾಗಿ ಹೀಗೆ ವ್ಯಕ್ತಪಡಿಸಬಹುದು

P = V²/R

 

• P – ವಿದ್ಯುತ್ ಸಾಮರ್ಥ್ಯ

• V – ವಿಭವಾಂತರ

• R – ವಿದ್ಯುತ್ ಪ್ರವಾಹ

 

೩.ಜೌಲ್ ನ ಉಷ್ಣೋತ್ಪಾದನ ಪರಿಣಾಮವನ್ನು ವ್ಯಾಖ್ಯಾನಿಸಿ ಮತ್ತು ವಿವರಿಸಿ.

 

ಉ: ಜೌಲ್ ನ ಉಷ್ಣೋತ್ಪಾದನ ಪರಿಣಾಮದ ಪ್ರಕಾರ , “ರೋಧಕದಲ್ಲಿ ಉತ್ಪತ್ತಿಯಾಗುವ ಉಷ್ಣವು

ರೋಧಕದಲ್ಲಿ ಹರಿಯುವ ವಿದ್ಯುತ್ ಪ್ರವಾಹದ ವರ್ಗಕ್ಕೆ, ರೋಧಕದ ರೋಧಕ್ಕೆ ಮತ್ತು ರೋಧದಲ್ಲಿ

ವಿದ್ಯುತ್ ಪ್ರವಾಹದ ಕಾಲಕ್ಕೆ ನೇರ ಅನುಪಾತದಲ್ಲಿ ಇರುತ್ತದೆ. ಇದನ್ನು ಕೆಳಕಂಡ ಸೂತ್ರದಂತೆ

ವ್ಯಕ್ತಪಡಿಸಬಹುದು.

H = I² x R x t

• H – ಉತ್ಪತ್ತಿಯಾಗುವ ಉಷ್ಣ

• I – ವಿದ್ಯುತ್ ಪ್ರವಾಹ

• R – ವಿದ್ಯುತ್ ರೋಧ

• t- ವಿದ್ಯುತ್ ಪ್ರವಾಹದ ಕಾಲ

ಈ ನಿಯಮವು ವಿದ್ಯುತ್ ಶಕ್ತಿಯನ್ನು ಹೇಗೆ ಉಷ್ಣ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.

 

 

೪.ವೋಲ್ಟ್ ಮೀಟರನ್ನು ವಿದ್ಯುತ್ ಮಂಡಲದಲ್ಲಿ ಹೇಗೆ ಜೋಡಿಸಲಾಗುತ್ತದೆ? ಮತ್ತು ಏಕೆ?

 

ಉ: ಮಂಡಲದಲ್ಲಿರುವ ಯಾವ ಉಪಕರಣದ ವಿಭವಾಂತರವನ್ನು ಅಳೆಯಬೇಕಿರುತ್ತದೋ ಆ ಉಪಕರಣಕ್ಕೆ

ಸಮಾಂತರವಾಗಿ ವೋಲ್ಟ್ ಮೀಟರನ್ನು ಜೋಡಿಸಲಾಗುತ್ತದೆ. ಏಕೆಂದರೆ ವೋಲ್ಟಮೀಟರ್ ಅನ್ನು ಅತಿ

ಹೆಚ್ಚು ವಿದ್ಯುತ್ ರೋಧ ಹೊಂದಿರುವಂತೆ ತಯಾರಿಸಲಾಗಿರುತ್ತದೆ. ಇದನ್ನು ಸಮಾಂತರವಾಗಿ

ಜೋಡಿಸುವುದರಿಂದ ಮಂಡಲದ ಮೇಲೆ ಯಾವುದೇ ಪ್ರಭಾವವನ್ನು ಉಂಟುಮಾಡುವುದಿಲ್ಲ.

 

೫.ವಿದ್ಯುತ್ ವಾಹಕದ ಉದ್ದ ಮತ್ತು ಅಡ್ಡಕೊಯ್ತ ವಿಸ್ತೀರ್ಣವನ್ನು ದ್ವಿಗುಣಗೊಳಿಸಿದಾಗ ಅ ವಾಹಕದ ರೋಧದಲ್ಲಿ ಉಂಟಾಗುವ ಬದಲಾವಣೆಯನ್ನು ವಿವರಿಸಿ.

 

ಉ: ವಾಹಕದ ರೋಧವು ವಾಹಕದ ಉದ್ದಕ್ಕೆ ನೇರ ಅನುಪಾತದಲ್ಲಿದೆ(R L ). ವಾಹಕದ ಉದ್ದವನ್ನು

ದ್ವಿಗುಣಗೊಳಿಸಿದಾಗ ರೋಧವು ದ್ವಿಗುಣಗೊಳ್ಳುತ್ತದೆ. ಆದ್ದರಿಂದ L→ 2Lಆದರೆ R→2R ಆಗುತ್ತದೆ.

ವಾಹಕದ ರೋಧವು ಅದರ ಅಡ್ಡಕೊಯ್ತ ವಿಸ್ತೀರ್ಣಕ್ಕೆ ವಿಲೋಮ ಅನುಪಾತದಲ್ಲಿದೆ (R α 1/A).

ವಾಹಕದ ಅಡ್ಡಕೊಯ್ತ ವಿಸ್ತೀರ್ಣವನ್ನು ದ್ವಿಗುಣಗೊಳಿಸಿದಾಗ ರೋಧವು ಅರ್ಧದಷ್ಟಾಗುತ್ತದೆ. ಆದ್ದರಿಂದ

A→ 2A ಆದರೆ R →R/2 ಆಗುತ್ತದೆ.

 

 

೬.ರೋಧಕಗಳ ಸರಣಿ ಜೋಡಣೆಯ ಪ್ರಾಮುಖ್ಯತೆಯನ್ನು ವಿವರಣಾತ್ಮಕವಾಗಿ ತಿಳಿಸಿ.

 

ಉ: ರೋಧಕಗಳ ಸರಣಿ ಜೋಡಣೆಯಲ್ಲಿ, ರೋಧಕಗಳು ತುದಿಯಿಂದ ತುದಿಗೆ ನೇರವಾಗಿ ಜೋಡಿಸಲ್ಪಟ್ಟಿರುತ್ತವೆ. ಇದರಿಂದ ವಿದ್ಯುತ್ ಪ್ರವಾಹವು ಒಂದೇ ಪಥದಲ್ಲಿ ಹರಿಯುತ್ತದೆ. ಇದರಿಂದುಂಟಾಗುವ ಒಟ್ಟು ರೋಧವು ಪ್ರತಿ ರೋಧಕಗಳ ರೋಧದ ಮೊತ್ತಕ್ಕೆ ಸಮನಾಗಿರುತ್ತದೆ.

 

Rtotal = R1 + R2 + R3 + …

 

ಹೆಚ್ಚು ರೋಧದ ಅವಶ್ಯಕತೆ ಇರುವ ಕಡೆ ರೋಧಕಗಳ ಸರಣಿ ಜೋಡಣೆಯನ್ನು ಬಳಸುತ್ತಾರೆ. ಇದರಲ್ಲಿ ಪ್ರತಿ

ರೋಧಕಗಳ ರೋಧವು ಬದಲಾಗುವುದಿಲ್ಲ.

 

 

೭.ರೋಧಕಗಳ ಸಮಾಂತರ ಜೋಡಣೆಯ ಪ್ರಾಮುಖ್ಯತೆಯನ್ನು ವಿವರಣಾತ್ಮಕವಾಗಿ ತಿಳಿಸಿ.

 

 

ಉ: ರೋಧಕಗಳ ಸರಣಿ ಜೋಡಣೆಯಲ್ಲಿ, ರೋಧಕಗಳು ಒಂದು ತುದಿಯಿಂದ ಮತ್ತೊಂದು ತುದಿಗೆ ಪರಸ್ಪರ

ಸಮಾಂತರವಾಗಿರುವಂತೆ ಜೋಡಿಸಲಾಗಿರುತ್ತದೆ. ಇದರಿಂದ ವಿದ್ಯುತ್ ಪ್ರವಾಹವು ಹರಿಯಲು ಒಂದಕ್ಕಿAತ

ಹೆಚ್ಚು ಪಥಗಳು ದೊರೆಯುತ್ತವೆ. ಇದರಿಂದುAಟಾಗುವ ಒಟ್ಟು ರೋಧವು ಪ್ರತಿ ರೋಧಕದ ರೋಧಕ್ಕಿಂತ

ಕಡಿಮೆಯಾಗುತ್ತದೆ.

1 / Rtotal = 1 / R1 + 1 / R2 + 1 / R3 + …

ಕೊಟ್ಟಿರುವ ರೋಧಕ್ಕಿಂತ ಕಡಿಮೆ ರೋಧದ ಅವಶ್ಯಕತೆ ಇರುವ ಕಡೆ ರೋಧಕಗಳ ಸಮಾಂತರ

ಜೋಡಣೆಯನ್ನು ಬಳಸುತ್ತಾರೆ. ಇಲ್ಲಿ ಪ್ರತಿ ರೋಧಕದ ನಡುವಿನ ವಿಭವಾಂತರವು ಸ್ಥಿರವಾಗಿರುತ್ತದೆ.

 

 

 

೮.ವಿದ್ಯುತ್ ಮಂಡಲದಲ್ಲಿ ‘ಫ್ಯೂಸ್’ನ ಕಾರ್ಯವನ್ನು ವಿವರಿಸಿ.

ಉ: ಫ್ಯೂಸ್ ಎಂಬುದು ವಿದ್ಯುತ್ ಮಂಡಲದಲ್ಲಿ ನಿರ್ಧಿಷ್ಟ ಮಿತಿಗಿಂತ ಅಧಿಕ ವಿದ್ಯುತ್ ಹರಿಯುವುದನ್ನು

ತಡೆಯಲು ಬಳಸುವ ಸುರಕ್ಷಾ ಸಾಧನ. ಇದು ಲೆಡ್ ಮತ್ತು ಟಿನ್‌ಗಳ ಮಿಶ್ರಲೋಹದಿಂದ ಮಾಡಿದ ತೆಳುವಾದ

ತಂತಿಯಾಗಿದೆ. ಇದು ಕಡಿಮೆ ದ್ರವನ ಬಿಂದು ಹೊಂದಿದ್ದು ಹೆಚ್ಚಿನ ವಿದ್ಯುತ್ ಹರಿದಾಗ ತಂತಿ ಕರಗಿ ಮಂಡಲವನ್ನು ತುಂಡರಿಸುತ್ತದೆ. ಈ ಮೂಲಕ ಮಂಡಲದ ಸಂಪರ್ಕಲ್ಲಿದ್ದ ಇತರ ವಿದ್ಯುತ್ ಉಪಕರಣಗಳು ಹಾಳಾಗುವುದನ್ನು ತಪ್ಪಿಸುತ್ತದೆ.

 

 

೯.200 ಸೆ ತಾಪಮಾನದಲ್ಲಿ ೧ m ಉದ್ದದ ಮ್ಯಾಂಗನೀಸ್ ತಂತಿಯ ರೋಧಶೀಲತೆಯು 1.54x 10-6 Ωm ಆಗಿದೆ.

ತಂತಿಯ ವ್ಯಾಸವು 3×10-4 m ಆದರೆ ಈ ತಾಪಮಾನದಲ್ಲಿ ತಂತಿಯ ರೋಧವನ್ನು ಕಂಡುಹಿಡಿಯಿರಿ.

 

ಉ: ರೋಧಶೀಲತೆ = ρ=1.84×10-6 Ω m

ಉದ್ದ= l = 1 m

ವ್ಯಾಸ = d=3 x 10 -4m

ಅಡ್ಡಕೊಯ್ತದ ವಿಸ್ತೀರ್ಣ A = 𝜋𝑑²/4

=22×3𝑥10−4 𝑥3𝑥10−4/7×4

= 7.07×10 -8 m²

ರೋಧ R = 𝜌 𝑥 𝑙/𝐴

=1.84𝑥10−6/7.07𝑥10−8 𝑥1

= 26.02 Ω

 

 

 

 

 

೧೦.ಕೊಟ್ಟಿರುವ ವಿದ್ಯುನ್ಮಂಡಲದಲ್ಲಿ, ಮಂಡಲದ ಒಟ್ಟು ರೋಧಶೀಲತೆಯು ಮತ್ತು ಒಟ್ಟು ವಿದ್ಯುತ್ ಪ್ರವಾಹವನ್ನು ಕಂಡುಹಿಡಿಯಿರಿ.

 

R1= 2Ω, R2= 4Ω & R3= 4Ω ಮತ್ತು V=6V

ಉ: ಸಮಾಂತರ ಜೋಡಣೆಯಲ್ಲಿ,

1/Rp = 1/R1 +1/R2 + 1/R3

1/Rp= 1/2 + ¼ + ¼

1/Rp = 1

1/Rp= 1 Ω

ವಿದ್ಯುತ್ ಪ್ರವಾಹ = I =V/Rp =6/1= 6A

 

೧೧.ವಿದ್ಯುತ್ ಉಪಕರಣಗಳನ್ನು ಸರಣಿ ಕ್ರಮದಲ್ಲಿ ಜೋಡಿಸುವದಕ್ಕಿಂತ ಸಮಾಂತರವಾಗಿ ಜೋಡಿಸುವುದು

ಅನುಕೂಲಕರ. ಏಕೆ?

 

ಉತ್ತರ:

❖ ಸರಣಿಕ್ರಮದಲ್ಲಿ ಜೋಡಿಸಿದ ಉಪಕರಣಗಳು ಕಾರ್ಯನಿರ್ವಹಿಸಲು ವ್ಯಾಪಕವಾಗಿ ವಿಭಿನ್ನ ಮೌಲ್ಯಗಳ

ವಿದ್ಯುತ್ ಪ್ರವಾಹದ ಅಗತ್ಯವಿದೆ.

❖ ಯಾವುದಾದರೂ ಒಂದು ಘಟಕ ವಿಫಲವಾದರೆ ಮಂಡಲವು ಮುರಿದು ಹೋಗುತ್ತದೆ ಮತ್ತು ಉಳಿದ

ಯಾವುದೇ ಘಟಕಗಳು ಕಾರ್ಯನಿರ್ವಹಿಸುವುದಿಲ್ಲ.

❖ ಸಮಾಂತರ ಮಂಡಲವು ವಿದ್ಯುತ್ ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ವಿಭಜಿಸುತ್ತದೆ.

❖ ನಿರ್ದಿಷ್ಟವಾಗಿ ಪ್ರತಿಯೊಂದು ವಿದ್ಯುತ್‌ಉಪಕರನವು ವಿಭಿನ್ನರೋಧವನ್ನು ಹೊಂದಿರುವಾಗ ಮತ್ತು

ಸರಿಯಾಗಿಕಾರ್ಯನಿರ್ವಹಿಸಲು ವಿಭಿನ್ನ ವಿದ್ಯುತ್ ಪ್ರವಾಹದ ಅಗತ್ಯವಿರುವ ಸಂದರ್ಭದಲ್ಲಿ ಸಮಾಂತರ ಜೋಡಣೆಯು ಸಹಕಾರಿಯಾಗಿದೆ. ಸಮಾಂತರ ಜೋಡಣೆಯಲ್ಲಿ ಪ್ರತಿಯೊಂದು

ವಿದ್ಯುತ್‌ಉಪಕರಣವನ್ನು ಪ್ರತ್ಯೇಕವಾಗಿ ಉಪಯೋಗಿಸಬಹುದು.

 

೧೨.ಜೌಲನ ಉಷ್ಣೋತ್ಪಾದನಾ ನಿಯಮವನ್ನು ನಿರೂಪಿಸಿ. ವಿದ್ಯುತ್ ತಂತು ದೀಪದ ಕಾರ್ಯವನ್ನು ವಿವರಿಸಿ.

 

ಉ: ಜೌಲನ ಉಷ್ಣೋತ್ಪಾದನಾ ನಿಯಮದ ಪ್ರಕಾರ ರೋಧಕದಲ್ಲಿ ಉತ್ಪತ್ತಿಯಾಗುವ ಉಷ್ಣವು,

• ಕೊಟ್ಟಿರುವ ರೋಧಕದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ಪ್ರವಾಹದ ವರ್ಗಕ್ಕೆ ನೇರ ಅನುಪಾತದಲ್ಲಿದೆ.

• ಕೊಟ್ಟಿರುವ ವಿದ್ಯುತ್ಪ್ರವಾಹಕ್ಕೆ ರೋಧವು ನೇರ ಅನುಪಾತದಲ್ಲಿರುತ್ತದೆ.

• ರೋಧಕಗಳ ಮೂಲಕ ಹರಿಯುವ ವಿದ್ಯುತ್ಪ್ರವಾಹದ ಕಾಲಕ್ಕೆ ನೇರ ಅನುಪಾತದಲ್ಲಿರುತ್ತದೆ.

ವಿದ್ಯುತ್ ತಂತು ದೀಪದ ಕಾರ್ಯ

❖ ಒಂದು ಪ್ರಬಲವಾದ ಮತ್ತು ಹೆಚ್ಚಿನ ದ್ರವನ ಬಿಂದು ಹೊಂದಿರುವ ಲೋಹವಾದ ಟಂಗ್ ಸ್ಟನ್‌ಅನ್ನು

ಬಲ್ಬ್ನ ತಂತು ತಯಾರಿಕೆಯಲ್ಲಿ ಬಳಸುತ್ತಾರೆ.

❖ ತಂತಿಯ ದೀರ್ಘಕಾಲ ಬಾಳಿಕೆಗಾಗಿ ಬಲ್ಬ್ ಒಳಗೆ ನೈಟ್ರೋಜನ್ ಮತ್ತು ಆರ್ಗಾನ್ ನಂತಹ ಕಡಿಮೆ

ಕ್ರಿಯಾಶೀಲ ಅನಿಲಗಳನ್ನು ತುಂಬಿರುತ್ತಾರೆ.

❖ ಬಳಸಿಕೊಂಡ ಗರಿಷ್ಟ ಶಕ್ತಿಯು ಶಾಖದ ರೂಪದಲ್ಲಿ ಕಂಡುಬರುತ್ತದೆ. ಆದರೆ ಅದರ ಸ್ವಲ್ಪ ಭಾಗವು

ಬೆಳಕಿನ ರೂಪದಲ್ಲಿ ಹೊರಹೊಮ್ಮುತ್ತದೆ.

 

 

೧೩.ವಿದ್ಯುತ್ ಮಂಡಲದಲ್ಲಿ 51Ω ರೋಧವಿರುವ ಒಂದು ವಿದ್ಯುತ್ ಬಲ್ಬ್ಅನ್ನು 10V ಬ್ಯಾಟರಿಗೆ ಸಂಪರ್ಕಿಸಲಾಗಿದೆ.

ವಿದ್ಯುತ್ ಬಲ್ಬ್ನ ಮೂಲಕ ಹರಿಯುವ ವಿದ್ಯುತ್ ಪ್ರವಾಹ ಮತ್ತು ಬಲ್ಬ್ ನ ಸಾಮರ್ಥ್ಯವನ್ನು ಕಂಡುಹಿಡಿಯಿರಿ.

ಉತ್ತರ : R=50 Ω , ˅ =10˅ , l= ? , P= ?

¸ಸೂತ್ರ: V=IR

I =𝑽/𝑹= 𝟏𝟎/𝟓𝟎 = 0.2 A

ವಿದ್ಯುತ್ ಬಲ್ಬ್ನ ಮೂಲಕ ಹರಿಯುವ ವಿದ್ಯುತ್ ಪ್ರವಾಹ =0.2 A

P=VI

P= 10 X 0.2

P= 2 W

ವಿದ್ಯುತ್ ಬಲ್ಬ್ ನ ಸಾಮರ್ಥ್ಯ = 2 ವ್ಯಾಟ್ = 2 W

 

 

೧೪.ಕೊಟ್ಟಿರುವ ವಿದ್ಯುನ್ಮಂಡಲದ ಚಿತ್ರವನ್ನು ಗಮನಿಸಿ.ವಿದ್ಯುನ್ಮಂಡಲದ ಒಟ್ಟುರೋಧ ಮತ್ತು ಮಂಡಲದ ಮೂಲಕ ಹರಿಯುವ ಒಟ್ಟು ವಿದ್ಯುತ್ಪ್ರವಾಹವನ್ನು ಲೆಕ್ಕಚಾರ ಮಾಡಿ.

 

 

ಉತ್ತರ: ಇಲ್ಲಿ R1= 5 Ω, R2 = 4 Ω, R3= 12 Ω , V =24V

ಮಂಡಲದ ಒಟ್ಟು ರೋಧ Rt = ?

ಒಟ್ಟು ವಿದ್ಯುತ್ಪ್ರವಾಹ I= ?

1/ Rp = 1/R2 + 1/R3

= 1/4 + 1/12

= 3+1/12

= 4/12

= 1/3

Rp = 3 Ω

ಒಟ್ಟು ರೋಧ RT = R1 +Rp

= 5 Ω + 3 Ω = 8 Ω

ಮಂಡಲದ ಮೂಲಕ ಹರಿಯುವ ಒಟ್ಟು ವಿದ್ಯುತ್ಪ್ರವಾಹ

I = V/ RT

= 24V/8 Ω

I = 3A

 

೧೫.ಓಮನ ನಿಯಮವನ್ನು ನಿರೂಪಿಸಿ. ಗೃಹಬಳಕೆ ವಿದ್ಯುತ್ ಮಂಡಲದಲ್ಲಿ ವಿದ್ಯುತ್‌ಉಪಕರಣಗಳನ್ನು ಸರಣಿ ಕ್ರಮದಲ್ಲಿ

ಸಂಪರ್ಕಗೊಳಿಸುವುದಿಲ್ಲ, ಏಕೆ? ವಾಹಕವೊಂದರ ರೋಧವು ಅವಲಂಬಿಸಿರುವ ಅಂಶಗಳನ್ನು ಬರೆಯಿರಿ.

 

ಉತ್ತರ: ಓಮನ ನಿಯಮ:-ಹೆಚ್ಚು ಸ್ಥಿರ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದತಂತಿಯ ನಡುವಿನ

ವಿಭವಾಂತರವು ಅದರ ಮೂಲಕ ಹರಿಯುವವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ.

❖ ಸರಣಿಕ್ರಮದ ಜೋಡಣೆಯಲ್ಲಿ ಮಂಡಲದಲ್ಲಿ ಹರಿಯುವ ವಿದ್ಯುತ್ ಪ್ರವಾಹವು ಮಂಡಲದ ಎಲ್ಲಾ

ಭಾಗದಲ್ಲಿಯೂ ಸ್ಥಿರವಾಗಿರುತ್ತದೆ. ಆದಕಾರಣ ವಿದ್ಯುತ್ ಪ್ರವಾಹದ ಒಂದೇ ಮೌಲ್ಯದಲ್ಲಿ ಎಲ್ಲಾ

ಉಪಕರಣಗಳು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ.

❖ ಯಾವುದಾದರೂ ಒಂದು ಘಟಕ/ಉಪಕರಣ ವಿಫಲವಾದರೆ ಮಂಡಲವು ಮುರಿದು ಹೋಗುತ್ತದೆ.

ವಾಹಕದ ರೋಧವು ಅವಲಂಬಿಸಿರುವ ಅಂಶಗಳು:

ವಾಹಕದಉದ್ದ, ವಾಹಕದ ಅಡ್ಡಕೊಯ್ತ ವಿಸ್ತೀರ್ಣ, ವಸ್ತುವಿನ ಪ್ರಾಕೃತಿಕ ಗುಣ ಮತ್ತು ತಾಪ.

Leave a Comment