6ನೇ ತರಗತಿ ವಿಜ್ಞಾನ ಭಾಗ-2 ಎಲ್ಲಾ ಅಧ್ಯಾಯಗಳಪ್ರಶ್ನೋತ್ತರಗಳು
ಕುತೂಹಲ ವಿಜ್ಞಾನ ಪಠ್ಯಪುಸ್ತಕ
Science Kannada Medium Question and Answer state Syllabus Class 6 Science Notes Pdf karnataka State Board 6th Science Notes 6th Std Science Notes, 6ನೇ ತರಗತಿ ವಿಜ್ಞಾನ ಭಾಗ-2 ಎಲ್ಲಾ ಅಧ್ಯಾಯಗಳ ನೋಟ್ಸ್ ಪ್ರಶ್ನೋತ್ತರಗಳು,
technicalmohamed1980.com ನ ಪರಿಣಿತ ಶಿಕ್ಷಕರು 6 ನೇ ತರಗತಿಯ ವಿಜ್ಞಾನ ಪಿಡಿಎಫ್‌ಗಾಗಿ technical Mohamed ಪರಿಹಾರಗಳನ್ನು ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ. 6 ನೇ ತರಗತಿಯ ಕರ್ನಾಟಕ ವಿಜ್ಞಾನ ಪಠ್ಯಪುಸ್ತಕ ಪರಿಹಾರಗಳ ಉತ್ತರ ಮಾರ್ಗದರ್ಶಿ, ಪಠ್ಯಪುಸ್ತಕ ಪ್ರಶ್ನೆಗಳು ಮತ್ತು ಉತ್ತರಗಳು, ಟಿಪ್ಪಣಿಗಳು ಪಿಡಿಎಫ್, ಉತ್ತರಗಳೊಂದಿಗೆ 6 ನೇ ತರಗತಿಯ science ಪರಿಹಾರಗಳ ಭಾಗವಾಗಿದೆ. ಇಲ್ಲಿ ನಾವು NCERT ಪಠ್ಯಕ್ರಮದ ಆಧಾರದ ಮೇಲೆ 6 ನೇ ತರಗತಿಯ ವಿಜ್ಞಾನ ಭಾಗ 2 ಪಠ್ಯಪುಸ್ತಕ ಪರಿಹಾರಗಳಿಗಾಗಿ KTBS ಕರ್ನಾಟಕ ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ನೀಡಿದ್ದೇವೆ.
ಅಧ್ಯಾಯ 7
ತಾಪ ಮತ್ತು ಅದರ ಮಾಪನ
ನಮ್ಮ ಕಲಿಕೆಯನ್ನು ವಿಸ್ತರಿಸಿಕೊಳ್ಳೋಣ
೧. ಆರೋಗ್ಯವಂತ ಮನುಷ್ಯನ ಸಾಮಾನ್ಯ ತಾಪವು 37.0 °Cಕ್ಕೆ ಸಮೀಪದಲ್ಲಿದೆ.
(i) 98.6 °C (ii) 37.0 °C
(iii) 32.0 °C (iv) 27.0 °C
2. 37 °C ತಾಪಕ್ಕೆ ಸಮನಾದ ತಾಪ ..98.6 °F
(i) 97.4 °F (ii) 97.6 °F
(iii) 98.4 °F (iv) 98.6 °F
೩. ಖಾಲಿ ಜಾಗಗಳನ್ನು ಭರ್ತಿ ಮಾಡಿ.
(i) ಒಂದು ವ್ಯವಸ್ಥೆಯ ಬಿಸಿ ಅಥವಾ ತಂಪನ್ನು ಅದರ ತಾಪವು ನಿರ್ಧರಿಸುತ್ತದೆ.
(ii) ಮಂಜುಗಡ್ಡೆಯಷ್ಟು ತಣ್ಣನೆಯ ನೀರಿನ ತಾಪವನ್ನು ವೈದ್ಯಕೀಯತಾಪಮಾಪಕದಿಂದ ಅಳೆಯಲು
ಸಾಧ್ಯವಿಲ್ಲ.
(iii) ತಾಪದ ಏಕಮಾನ ಡಿಗ್ರಿ ಸೆಲ್ಸಿಯಸ್ ಆಗಿದೆ.
೪) ಪ್ರಯೋಗಶಾಲಾ ತಾಪಮಾಪಕದ ವ್ಯಾಪ್ತಿಯು ಸಾಮಾನ್ಯವಾಗಿ -10 °C ಯಿಂದ 110 °C.
(i) 10 °C ¬ಯಿಂದ 100 °C (ii) -10 °C ¬ಯಿಂದ 110 °C
(iii) 32 °C ¬ಯಿಂದ 45 °C (iv) 35 °C ¬ಯಿಂದ 42 °C
೫. ಚಿತ್ರ 7.6 ರಲ್ಲಿ ತೋರಿಸಿರುವಂತೆ ನೀರಿನ ತಾಪವನ್ನು ಅಳೆಯಲು ನಾಲ್ವರು ವಿದ್ಯಾರ್ಥಿಗಳು ಪ್ರಯೋಗಶಾಲಾ ತಾಪಮಾಪಕವನ್ನು ಬಳಸಿದರು – ತಾಪವನ್ನು ಅಳೆಯಲು ಯಾರು ಸರಿಯಾದ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ನೀವು ಭಾವಿಸುತ್ತೀರಿ?
(i) ವಿದ್ಯಾರ್ಥಿ ೧ (ii) ವಿದ್ಯಾರ್ಥಿ ೨
(iii) ವಿದ್ಯಾರ್ಥಿ ೩ (iv) ವಿದ್ಯಾರ್ಥಿ ೪
ಉತ್ತರ
(ii) ವಿದ್ಯಾರ್ಥಿ ೨
೬. ಕೆಳಗೆ ಬರೆಯಲಾದ ತಾಪಕ್ಕೆ ಅನುಗುಣವಾಗಿ ತಾಪಮಾಪಕಗಳ ರೇಖಾಚಿತ್ರಗಳ ಮೇಲೆ ಕೆಂಪು
ಸ್ತಂಭವನ್ನು ತೋರಿಸಲು ಬಣ್ಣ ಹಾಕಿರಿ (ಚಿತ್ರ 7.7).
೭. ಚಿತ್ರ ೭.೮ರಲ್ಲಿ ತೋರಿಸಿರುವ ತಾಪಮಾಪಕದ ಭಾಗವನ್ನು ಗಮನಿಸಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
ಚಿತ್ರ ೭.೮
(i) ಇದು ಯಾವ ರೀತಿಯ ತಾಪಮಾಪಕ?
ಉತ್ತರ
ಇದು ಪ್ರಯೋಗ ಶಾಲಾ ತಾಪಮಾಪಕ
(ii) ಈ ತಾಪಮಾಪಕದಲ್ಲಿನ ತಾಪದ ಅಳತೆ ಎಷ್ಟು?
ಉತ್ತರ
ಈ ತಾಪಮಾಪಕದಲ್ಲಿನ ತಾಪದ ಅಳತೆ
26⁰C.
(iii) ಈ ತಾಪಮಾಪಕ ಅಳೆಯಬಹುದಾದ ಅತ್ಯಂತ ಚಿಕ್ಕ ಮೌಲ್ಯ ಯಾವುದು?
ಉತ್ತರ
-10 °C
೮. ನಮ್ಮ ದೇಹದ ಉಷ್ಣತೆಯನ್ನು ಅಳೆಯಲು ಪ್ರಯೋಗಶಾಲಾ ತಾಪಮಾಪಕವನ್ನು ಬಳಸಲಾಗುವುದಿಲ್ಲ. ಇದಕ್ಕೆ ಕಾರಣವನ್ನು ಕೊಡಿ.
ಏಕೆಂದರೆ ಪ್ರಯೋಗ ಶಾಲಾ ತಾಪಮಾಪಕದಲ್ಲಿ ಪಾದರಸವು ಬಹಳಷ್ಟು ಸಮಯ ಕೊಳವೆಯಲ್ಲಿ ಉಳಿಯುವುದಿಲ್ಲ. ವೈದ್ಯಕೀಯ ತಾಪಮಾಪಕದಲ್ಲಿ ಬುರುಡೆಯಿಂದ ಪ್ರಾರಂಭದಲ್ಲಿ ಕೊಳವೆಯಲ್ಲಿ ಡೊಂಕು ಇರುತ್ತದೆ. ಇದರಿಂದ ಪಾದರಸವು ಬೇಗನೆ ಕೆಳಗೆ ಇಳಿಯುವುದಿಲ್ಲ. ವೈದ್ಯರು ರೋಗಿಯ ಉಷ್ಣತೆಯನ್ನು ನಿಖರವಾಗಿ ಪತ್ತೆ ಹಚ್ಚುವುದು ಸಾಧ್ಯವಾಗುತ್ತದೆ. ಆದರೆ ಪ್ರಯೋಗ ಶಾಲಾ ತಾಪಮಾಪಕದಲ್ಲಿ ಈ ವ್ಯವಸ್ಥೆ ಇರುವುದಿಲ್ಲ.
೯. ಅನಾರೋಗ್ಯದಿಂದಾಗಿ ವೈಷ್ಣವಿಯು ಶಾಲೆಗೆ ಹೋಗಿಲ್ಲ. ಕೋಷ್ಟಕ 7.4 ರಲ್ಲಿ ತೋರಿಸಿರುವಂತೆ ಅವಳ
ತಾಯಿ ಮೂರು ದಿನಗಳವರೆಗೆ ಅವಳ ದೇಹದ ತಾಪಮಾನದ ದಾಖಲೆಯನ್ನು ಇಟ್ಟುಕೊಂಡಿದ್ದಾರೆ.
i) ವೈಷ್ಣವಿಯ ದಾಖಲಾದ ಅತಿ ಹೆಚ್ಚು ತಾಪ ಯಾವುದು?
ವೈಷ್ಣವಿಯ ದಾಖಲಾದ ಅತಿ ಹೆಚ್ಚು ತಾಪ 40⁰ C.
ii) ವೈಷ್ಣವಿಯ ಗರಿಷ್ಟ ತಾಪವು ಯಾವ ದಿನ ಮತ್ತು ಯಾವ ಸಮಯದಲ್ಲಿ ದಾಖಲಾಗಿದೆ?
ವೈಷ್ಣವಿಯ ಗರಿಷ್ಟ ತಾಪವು ದಿನ ಒಂದರಂದು ಸಂಜೆ 7:00 ಕ್ಕೆ ದಾಖಲಾಗಿದೆ.
iii) ಯಾವ ದಿನದಂದು ವೈಷ್ಣವಿಯ ತಾಪವು ಸಾಮಾನ್ಯ ಸ್ಥಿತಿಗೆ ಮರಳಿದೆ?
ದಿನ ಮೂರರಂದು ವೈಷ್ಣವಿಯ ತಾಪವು ಸಾಮಾನ್ಯ ಸ್ಥಿತಿಗೆ ಮರಳಿದೆ.
10. ನೀವು 25.5 °C ತಾಪಮಾನವನ್ನು ಅಳೆಯಬೇಕಾದರೆ, ಈ ಕೆಳಗಿನ ಮೂರು ತಾಪಮಾಪಕಗಳಲ್ಲಿ ಯಾವುದನ್ನು ನೀವು ಬಳಸುತ್ತೀರಿ (ಚಿತ್ರ 7.9)? ವಿವರಿಸಿ.
ಚಿತ್ರ 7.9 ಬಿ ತಾಪಮಾಪಕವನ್ನು ಬಳಸುತ್ತೇವೆ.
೧೧. ಚಿತ್ರ 7.10 ರಲ್ಲಿನ ತಾಪಮಾಪಕದಲ್ಲಿ ತೋರಿಸಲಾದ ತಾಪಮಾನ.
i) 28.0 °C
ii) 27.5 °C
iii) 26.5 °C
iv) 25.3 °C
ಉತ್ತರ
ii) 27.5 °C
೧೨. ಒಂದು ಪ್ರಯೋಗಶಾಲಾ ತಾಪಮಾಪಕವು 0⁰C ಮತ್ತು 100 °C ನಡುವೆ 50ವಿಭಾಗಗಳನ್ನು ಹೊಂದಿದೆ.
ಈ ಪ್ರತಿಯೊಂದು ವಿಭಾಗವು ಎಷ್ಟು ತಾಪವನ್ನು ಅಳೆಯುತ್ತದೆ?
ಪ್ರತಿಯೊಂದು ವಿಭಾಗವು 2⁰C ತಾಪವನ್ನು ಅಳೆಯುತ್ತದೆ.
೧೩. ಅತ್ಯಂತ ಚಿಕ್ಕ ವಿಭಾಗವು ೦.೫ ಲಿಅ ಅನ್ನು ಅಳೆಯಬಹುದಾದ ತಾಪಮಾಪಕದ ಮಾಪನವನ್ನು ಬರೆಯಿರಿ. ನೀವು 10⁰C ಮತ್ತು 20⁰C ನಡುವಿನ ಭಾಗವನ್ನು ಮಾತ್ರ ಬರೆಯಬಹುದು.
೧೪. ಆಕೆಗೆ 101 ಡಿಗ್ರಿ ಜ್ವರವಿದೆ ಎಂದು ಯಾರೋ ಒಬ್ಬರು ನಿಮಗೆ ಹೇಳುತ್ತಾರೆ. ಅದು ಸೆಲ್ಸಿಯಸ್ ಮಾಪಕದಲ್ಲೋ ಅಥವಾ ಫ್ಯಾರನ್‌ಹೀಟ್ ಮಾಪಕದಲ್ಲೋ? ನೀವು ಹೇಗೆ ಅರ್ಥೈಸಿಕೊಳ್ಳುವಿರಿ?
101 ಡಿಗ್ರಿ ಜ್ವರವಿದೆ ಎಂದು ಫಾರಂ ಹೀಟ್ ಮಾಪನದಲ್ಲಿ ಹೇಳಿದ್ದಾರೆ. ಮಾನವನ ದೇಹದ ಸಾಮಾನ್ಯ ಉಷ್ಣತೆ 37 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದಕ್ಕೆ ಸಮಾನವಾಗಿ ಫ್ಯಾರನ್ ಹೀಟ್ ಮಾಪಕದಲ್ಲಿ 98.6 ಡಿಗ್ರಿ ಫ್ಯಾರನ್ ಹೀಟ್ ಆಗಿರುತ್ತದೆ. ಇದರ ಪ್ರಕಾರ 101 ಡಿಗ್ರಿ ಫ್ಯಾರನ್ ಹೀಟ್ ಎಂದರೆ ಸೆಲ್ಸಿಯಸ್ ಮಾಪಕದಲ್ಲಿ 39.4 ಡಿಗ್ರಿ ಜ್ವರವಿದೆ ಎಂದು ಅರ್ಥವಾಗುತ್ತದೆ.
ನೀರಿನ ಸ್ಥಿತಿಗಳ ಮೂಲಕ ಒಂದು ಪಯಣ
6ನೇ ತರಗತಿ ವಿಜ್ಞಾನ ಕುತೂಹಲ
ಅಧ್ಯಾಯ 8ರ ಪ್ರಶ್ನೋತ್ತರಗಳು ನೋಟ್ಸ್
೧. ಈ ಕೆಳಗಿನವುಗಳಲ್ಲಿ ಯಾವುದು ಘನೀಕರಣವನ್ನು ಅತ್ಯುತ್ತಮವಾಗಿ ವಿವರಿಸುತ್ತದೆ?
i) ನೀರನ್ನು ಅದರ ಆವಿ ಸ್ಥಿತಿಗೆ ಪರಿವರ್ತಿಸುವುದು.
ii) ದ್ರವದಿಂದ ಅನಿಲಸ್ಥಿತಿಗೆ ನೀರು ಬದಲಾಗುವ ಪ್ರಕ್ರಿಯೆ.
iii) ನೀರಿನ ಸಣ್ಣ ಹನಿಗಳಿಂದ ಮೋಡಗಳ ರಚನೆ.
iv) ನೀರಾವಿಯನ್ನು ಅದರ ದ್ರವಸ್ಥಿತಿಗೆ ಪರಿವರ್ತಿಸುವುದು.
ಉತ್ತರ
iii) ನೀರಿನ ಸಣ್ಣ ಹನಿಗಳಿಂದ ಮೋಡಗಳ ರಚನೆ.
೨. ಈ ಕೆಳಗೆ ಕೊಟ್ಟಿರುವ ಯಾವ ಪ್ರಕ್ರಿಯೆಗಳಲ್ಲಿ ಆವೀಕರಣವು ಅತಿ ಪ್ರಮುಖವೆಂಬುದನ್ನು ಗುರುತಿಸಿ.
i) ಬಣ್ಣ ಹಚ್ಚುವಾಗ ಇವುಗಳನ್ನು ಬಳಸಿ.
ಚಿ) ಕ್ರೆಯಾನ್‌ಗಳು b) ಜಲವಿಲೀನವಾಗುವ ಬಣ್ಣಗಳು
ಛಿ) ಅಕ್ರಿಲಿಕ್ ಬಣ್ಣಗಳು ಜ) ಪೆನ್ಸಿಲ್ ಬಣ್ಣಗಳು
i) ಬಣ್ಣ ಹಚ್ಚುವಾಗ ಜಲವಿಲೀನವಾಗುವ ಬಣ್ಣಗಳನ್ನು ಬಳಸಿ.
ii) ಕಾಗದದ ಮೇಲೆ ಬರೆಯುವಾಗ.
ಚಿ) ಪೆನ್ಸಿಲ್ b) ಇಂಕ್ ಪೆನ್
ಛಿ) ಬಾಲ್ ಪಾಯಿಂಟ್ ಪೆನ್
ii) ಕಾಗದದ ಮೇಲೆ ಇಂಕ್ ಪೆನ್ ನಿಂದ ಬರೆಯುವಾಗ
೩. ಇಂದಿನ ದಿನಗಳಲ್ಲಿ ನಾವು ಅನೇಕ ಸ್ಥಳಗಳಲ್ಲಿ ಹಸಿರು ಬಣ್ಣದ ಪ್ಲಾಸ್ಟಿಕ್ ಹುಲ್ಲು ನೋಡುತ್ತೇವೆ. ನೈಸರ್ಗಿಕ ಹುಲ್ಲಿನ ಸುತ್ತಲಿನ ಪ್ರದೇಶವು ಪ್ಲಾಸ್ಟಿಕ್ ಹುಲ್ಲಿನ ಸುತ್ತಲಿನ ಪ್ರದೇಶಕ್ಕಿಂತ ತಂಪಾಗಿರುತ್ತದೆ ಏಕೆ ಎಂದು ನೀವು ಕಂಡುಕೊಳ್ಳಬಲ್ಲಿರಾ?
ನೈಸರ್ಗಿಕ ಹುಲ್ಲು ಭಾಷ್ಪೀಭವನ ಕ್ರಿಯೆಯನ್ನು ನಡೆಸುತ್ತದೆ. ಜೊತೆಗೆ ಆವೀಕರಣ ನಡೆಯಲು ಸಹಕರಿಸುತ್ತದೆ. ಈ ಕ್ರಿಯೆಯಲ್ಲಿ ಅದು ತಂಪಾದ ನೀರಾವಿಯನ್ನು ಹೊರ ಹಾಕುತ್ತದೆ. ಇದರಿಂದ ಸುತ್ತಲಿನ ವಾತಾವರಣ ತಂಪಾಗಿರುತ್ತದೆ. ಇದಕ್ಕೆ ಎದುರಾಗಿ ಪ್ಲಾಸ್ಟಿಕ್ ಹುಲ್ಲು ಈ ಗುಣವನ್ನು ಹೊಂದಿಲ್ಲ. ಹಾಗಾಗಿ ಪ್ಲಾಸ್ಟಿಕ್ ಹುಲ್ಲಿನ ಸುತ್ತ ತಂಪಾದ ವಾತಾವರಣ ಇರುವುದಿಲ್ಲ.
೪. ನೀರನ್ನು ಹೊರತುಪಡಿಸಿ, ಆವಿಯಾಗುವ ಇತರೆ ದ್ರವಗಳಿಗೆ ಉದಾಹರಣೆಗಳನ್ನು ನೀಡಿ.
ನೀರನ್ನು ಹೊರತುಪಡಿಸಿ, ಆವಿಯಾಗುವ ಇತರೆ ದ್ರವಗಳಿಗೆ ಉದಾಹರಣೆಗಳೆಂದರೆ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ, ಹಾಲು, ಮಜ್ಜಿಗೆ, ಆಲ್ಕೋಹಾಲ್
೫. ಫ್ಯಾನ್‌ಗಳು ಗಾಳಿಯನ್ನು ಸುತ್ತಲೂ ಚಲಿಸುವಂತೆ ಮಾಡಿ ತಂಪಿನ ಅನುಭವವನ್ನು ಸೃಷ್ಟಿಸುತ್ತವೆ. ಒದ್ದೆಬಟ್ಟೆಗಳನ್ನು ಒಣಗಿಸಲು ಫ್ಯಾನ್ ಬಳಸುವುದು ವಿಚಿತ್ರವಾಗಿ ಕಾಣಿಸಬಹುದು. ಏಕೆಂದರೆ ಫ್ಯಾನ್‌ಗಳು ಸಾಮಾನ್ಯವಾಗಿ ವಸ್ತುಗಳನ್ನು ಬೆಚ್ಚಗಿಡುವುದಿಲ್ಲ ಬದಲಿಗೆ ತಂಪಾಗಿಸುತ್ತವೆ. ಸಾಮಾನ್ಯವಾಗಿ, ನೀರು ಆವಿಯಾಗಲು ಅದಕ್ಕೆ ಉಷ್ಣದ ಅಗತ್ಯವಿರುತ್ತದೆ, ತಂಪಾದ ಗಾಳಿಯಲ್ಲ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಫ್ಯಾನ್‌ಗಳು ಒದ್ದೆಯಾದ ಬಟ್ಟೆಗಳ ಮೇಲೆ ಗಾಳಿಯನ್ನು ಹಾಯಿಸುವ ಮೂಲಕ ಒಣಗಿಸಲು ಸಹಾಯ ಮಾಡುತ್ತವೆ. ಇದು ಆವಿಯಾಗುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಫ್ಯಾನ್‌ಗಳು ತಂಪಾಗಿಸುವ ಸಂವೇದನೆಯನ್ನು ಉಂಟುಮಾಡಿದರೂ, ಅವು ಬಟ್ಟೆಯ ಮೇಲ್ಮೈಯಿಂದ ತೇವಾಂಶವುಳ್ಳ ಗಾಳಿಯನ್ನು ದೂರ ಸರಿಸಿ, ಅದನ್ನು ಒಣ ಗಾಳಿಯಿಂದ ಬದಲಾಯಿಸುವ ಮೂಲಕ ಆವಿಯಾಗುವಿಕೆಗೆ ಸಹಾಯ ಮಾಡುತ್ತವೆ. ಹೀಗಾಗಿ ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
೬. ಒಳಚರಂಡಿಗಳಿಂದ ಕೆಸರು ತೆಗೆಯುವಾಗ ಚರಂಡಿಯ ಅಕ್ಕ ಪಕ್ಕದಲ್ಲಿ ರಾಶಿ ಹಾಕಿ, 3-4 ದಿನಗಳವರೆಗೆ ಹಾಗೆಯೇ ಬಿಟ್ಟಿರುತ್ತಾರೆ. ನಂತರ, ಅದನ್ನು ಗೊಬ್ಬರವಾಗಿ ಬಳಸಲು ತೋಟ ಅಥವಾ ಗದ್ದೆಗೆ ಸಾಗಿಸಲಾಗುತ್ತದೆ. ಈ ವಿಧಾನವು ಕೆಸರಿನ ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇದನ್ನು ನಿರ್ವಹಿಸುವ ವ್ಯಕ್ತಿಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಆಲೋಚಿಸಿ ಮತ್ತು ಹೇಗೆಂದು ವಿವರಿಸಿ.
ಕೆಸರನ್ನು 3-4 ದಿನಗಳವರೆಗೆ ರಾಶಿಗಳಲ್ಲಿ ಬಿಡುವುದರಿಂದ ನೀರಿನ ಅಂಶವು ಸ್ವಲ್ಪ ಆವಿಯಾಗುತ್ತದೆ, ಇದರಿಂದಾಗಿ ಕೆಸರಿನ ಪ್ರಮಾಣ ಮತ್ತು ತೂಕ ಕಡಿಮೆಯಾಗುತ್ತದೆ. ಇದು ಸಾಗಿಸಲು ಸುಲಭ ಮತ್ತು ಕಡಿಮೆ ವೆಚ್ಚದಾಯಕವಾಗುತ್ತದೆ. ಮೇಲಾಗಿ, ಒಣಗಿದ ಕೆಸರನ್ನು ನಿರ್ವಹಿಸುವುದು ವ್ಯಕ್ತಿಗಳಿಗೆ ಸುರಕ್ಷಿತವಾಗಿದೆ. ಏಕೆಂದರೆ ಇದು ಮಾಲಿನ್ಯಕಾರಕಗಳನ್ನು ಚೆಲ್ಲುವ ಅಥವಾ ಹರಡುವ ಸಾಧ್ಯತೆ ಕಡಿಮೆ.
೭. ಒಂದು ದಿನದ ಮಟ್ಟಿಗೆ ನಿಮ್ಮ ಮನೆಯಲ್ಲಿನ ಚಟುವಟಿಕೆಗಳನ್ನು ಗಮನಿಸಿ. ಆವೀಕರಣವನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಗುರುತಿಸಿ, ಆವೀಕರಣ ಪ್ರಕ್ರಿಯೆಯ ಅರಿವು ದೈನಂದಿನ ಚಟುವಟಿಕೆಗಳಲ್ಲಿ ನಮಗೆ ಹೇಗೆ ಸಹಾಯ ಮಾಡುತ್ತದೆ?
ಆವಿಯಾಗುವಿಕೆಯನ್ನು ಒಳಗೊಂಡಿರುವ ಚಟುವಟಿಕೆಗಳಲ್ಲಿ ಬಟ್ಟೆಗಳನ್ನು ಒಣಗಿಸುವುದು, ಅಡುಗೆ ಮಾಡುವುದು (ಕುದಿಯುವ ನೀರು), ಬೆವರುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವುದು ಸೇರಿವೆ. ಆವಿಯಾಗುವಿಕೆಯನ್ನು ಅರ್ಥಮಾಡಿಕೊಳ್ಳುವುದು ಈ ಪ್ರಕ್ರಿಯೆಗಳನ್ನು ಅತ್ಯುತ್ತಮವಾಗಿಸಲು ನಮಗೆ ಸಹಾಯ ಮಾಡುತ್ತದೆ, ಉದಾಹರಣೆಗೆ ಬಟ್ಟೆಗಳನ್ನು ಹರಡುವುದರಿಂದ ಅವು ವೇಗವಾಗಿ ಒಣಗುತ್ತವೆ ಅಥವಾ ಫ್ಯಾನ್‌ಗಳು ಒಣಗಿಸುವಿಕೆಯನ್ನು ವೇಗಗೊಳಿಸಬಹುದು ಎಂದು ತಿಳಿದುಕೊಳ್ಳುವುದು.
೮. ಪ್ರಕೃತಿಯಲ್ಲಿ ಘನಸ್ಥಿತಿಯಲ್ಲಿ ನೀರು ಹೇಗಿರುತ್ತದೆ?
ನೀರು ಪ್ರಕೃತಿಯಲ್ಲಿ ಘನ ಸ್ಥಿತಿಯಲ್ಲಿ ಈ ಕೆಳಗಿನಂತೆ ಇರುತ್ತದೆ:
ಧ್ರುವ ಪ್ರದೇಶಗಳು… ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ತಾಪ ಬಹಳ ಕಡಿಮೆ <span;>ಇದ್ದು ಅಲ್ಲಿನ ನೀರು ಮಂಜುಗಡ್ಡೆಯಾಗಿ ಮಾರ್ಪಟ್ಟಿದೆ. ಧ್ರುವ ಪ್ರದೇಶಕ್ಕೆ ತಾಗಿರುವ ಸಮುದ್ರದಲ್ಲಿನ ಮೇಲ್ಮೈ ನೀರು ಮಂಜುಗಡ್ಡೆಯಾಗಿ ಮಾರ್ಪಟ್ಟಿದೆ.
ಅತಿ ಹೆಚ್ಚು ಎತ್ತರದ ಪ್ರದೇಶಗಳು…. ಉಷ್ಣಾಂಶ ಕಡಿಮೆ ಇದ್ದು ಅಂತಹ ಪ್ರದೇಶಗಳಲ್ಲಿ ನೀರು ಮಂಜುಗಡ್ಡೆಯಾಗಿ ಕಂಡುಬರುತ್ತದೆ. ಉದಾಹರಣೆ ಹಿಮಾಲಯ ಪರ್ವತ ಪ್ರದೇಶ.
ಆಲಿಕಲ್ಲು ಮಳೆ….. ಕೆಲವೊಮ್ಮೆ ಮಳೆಯು ಘನ ರೂಪದಲ್ಲಿ ಬೀಳುತ್ತದೆ.
೯. “ನೀರು ನಮ್ಮ ಹಕ್ಕು ಎನ್ನುವ ಮೊದಲು ನೀರು ನಮ್ಮ ಜವಾಬ್ದಾರಿ ಎನ್ನಿ” ಎಂಬ ಹೇಳಿಕೆಯ ಕುರಿತು ಆಲೋಚಿಸಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.
ನೀರು ಸಾಮಾನ್ಯವಾಗಿ ಎಲ್ಲಾ ಜನರಿಗೆ ಬದುಕಲು ಅತ್ಯಗತ್ಯ ವಾಗಿ ಬೇಕಾಗಿರುವ ವಸ್ತುವಾಗಿದೆ. ಆದುದರಿಂದ ನೀರು ಎಲ್ಲರಿಗೆ ಸಿಗುವಂತಾಗಲು ನೀರನ್ನು ಪೋಲು ಮಾಡದಂತೆ ಬಳಸುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿಯಾಗಿದೆ. ನೀರನ್ನು ಬೇಕಾಬಿಟ್ಟಿಯಾಗಿ ಬಳಸದೆ ಹಿತಮಿತವಾಗಿ ಬಳಸಿ ಜಲಚಕ್ರವನ್ನು ಕಾಪಾಡುವುದು ಮನುಷ್ಯನ ಕರ್ತವ್ಯ ವಾಗಿದೆ. ತನ್ನಂತೆ ಇತರರೂ ಕೂಡ ನೀರನ್ನು ಉಳಿಸಿ ಬಳಸುವುದನ್ನು ಪ್ರೋತ್ಸಾಹಿಸುವುದು ಬಹು ಮುಖ್ಯವಾಗಿದೆ.
೧೦. ನಿಲ್ಲಿಸಿದ ದ್ವಿಚಕ್ರ ವಾಹನದ ಆಸನವು ಬಿಸಿಲಿನ ಝಳಕ್ಕೆ ತುಂಬಾ ಬಿಸಿಯಾಗಿರುತ್ತದೆ. ನೀವು ಅದನ್ನು
ಹೇಗೆ ತಂಪಾಗಿಸಬಹುದು?
ದ್ವಿಚಕ್ರವಾಹನವನ್ನು ಬಿಸಿಲಿನ ಜಾಗದಿಂದ ನೆರಳಿನ ಜಾಗಕ್ಕೆ ಸಾಗಿಸಿ, ಸ್ವಲ್ಪ ಹೊತ್ತು ಬಿಟ್ಟರೆ ಆಸನವು ತಣ್ಣಗಾಗುವುದು.
ಅಥವಾ ಬಿಸಿಯಾದ ಆಸನದ ಮೇಲೆ ತಣ್ಣೀರನ್ನು ಚುಮುಕಿಸಿ. ಅವಸರದ ಪ್ರಯಾಣವಿದ್ದಲ್ಲಿ ಒಂದು ಬಟ್ಟೆಯನ್ನು ಆಸನದ ಮೇಲೆ ಹಾಕಿ ಕುಳಿತುಕೊಂಡು ಪ್ರಯಾಣ ಮಾಡಿ.
ದೈನಂದಿನ ಜೀವನದಲ್ಲಿ ಬೇರ್ಪಡಿಸುವಿಕೆಯ ವಿಧಾನಗಳು
6ನೇ ತರಗತಿ ವಿಜ್ಞಾನ ಕುತೂಹಲ ಅಧ್ಯಾಯ 9ರ ಪ್ರಶ್ನೋತ್ತರಗಳು ನೋಟ್ಸ್
1. ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಕೈಯಿಂದ ಆರಿಸುವಿಕೆಯು ಯಾವ ಉದ್ದೇಶವನ್ನು ಈಡೇರಿಸುತ್ತದೆ?
i) ಸೋಸುವಿಕೆ ii) ವಿಂಗಡಣೆ
iii) ಆವೀಕರಣ iv) ಬಸಿಯುವಿಕೆ
ಉತ್ತರ
ii) ವಿಂಗಡಣೆ
೨. ಕಡೆಯುವಿಕೆ (churning) ವಿಧಾನವನ್ನು ಬಳಸಿಕೊಂಡು ಈ ಕೆಳಗಿನವುಗಳಲ್ಲಿ ಯಾವ ವಸ್ತುಗಳನ್ನು ಸಾಮಾನ್ಯವಾಗಿ ಬೇರ್ಪಡಿಸಲಾಗುತ್ತದೆ?
i) ನೀರಿನಿಂದ ಎಣ್ಣೆ ii) ನೀರಿನಿಂದ ಮರಳು
iii) ಹಾಲಿನಿಂದ ಕೆನೆ iv) ಗಾಳಿಯಿಂದ ಆಕ್ಸಿಜನ್
ಉತ್ತರ
iii) ಹಾಲಿನಿಂದ ಕೆನೆ
೩. ಸೋಸುವಿಕೆಗೆ ಸಾಮಾನ್ಯವಾಗಿ ಯಾವ ಅಂಶವು ಅವಶ್ಯಕವಾಗಿದೆ?
i) ಉಪಕರಣದ ಗಾತ್ರ ii) ಗಾಳಿಯ ಉಪಸ್ಥಿತಿ
iii) ರಂಧ್ರದ ಗಾತ್ರ iv) ಮಿಶ್ರಣದ ಉಷ್ಣತೆ
ಉತ್ತರ
iii) ರಂಧ್ರದ ಗಾತ್ರ
೪. ಈ ಕೆಳಗಿನ ಹೇಳಿಕೆಗಳು ಸರಿಯೇ [T] ಅಥವಾ ತಪ್ಪೇ [F] ಎಂದು ಕಾರಣಗಳೊಂದಿಗೆ ತಿಳಿಸಿ. ಅಲ್ಲದೆ, ತಪ್ಪಾದ ಹೇಳಿಕೆಗಳನ್ನು ಸರಿಪಡಿಸಿ.
i) ಉಪ್ಪಿನ ದ್ರಾವಣವನ್ನು ಸೂರ್ಯನ ಬಿಸಿಲಿನಲ್ಲಿರಿಸುವ ಮೂಲಕ ಉಪ್ಪನ್ನು ಬೇರ್ಪಡಿಸಬಹುದು.
[ T]
ii) ಕೈಯಿಂದ ಆರಿಸುವಿಕೆಯನ್ನು ಒಂದು ಘಟಕದ ಪ್ರಮಾಣ ಕಡಿಮೆಯಿದ್ದಾಗ ಮಾತ್ರ ಬಳಸಬೇಕು.
[ T]
iii) ಅವಲಕ್ಕಿ ಮತ್ತು ಅಕ್ಕಿ ಕಾಳುಗಳ ಮಿಶ್ರಣವನ್ನು ಬಡಿಯುವಿಕೆ ಮೂಲಕ ಬೇರ್ಪಡಿಸಬಹುದು.
[F ]
ಸರಿಯಾದ ಹೇಳಿಕೆ
ಅವಲಕ್ಕಿ ಮತ್ತು ಅಕ್ಕಿ ಕಾಳುಗಳ ಮಿಶ್ರಣವನ್ನು ತೂರುವಿಕೆ ಮೂಲಕ ಬೇರ್ಪಡಿಸಬಹುದು.
iv) ಸಾಸಿವೆಎಣ್ಣೆ ಮತ್ತು ನಿಂಬೆರಸದ ಮಿಶ್ರಣವನ್ನು ಬಸಿಯುವಿಕೆ ಮೂಲಕ ಬೇರ್ಪಡಿಸಬಹುದು.
[ T]
v) ಅಕ್ಕಿಹಿಟ್ಟು ಮತ್ತು ನೀರಿನ ಮಿಶ್ರಣವನ್ನು ಬೇರ್ಪಡಿಸಲು ಜರಡಿ ಹಿಡಿಯುವಿಕೆಯನ್ನು ಬಳಸಲಾಗುತ್ತದೆ. [F ]
ಸರಿಯಾದ ಹೇಳಿಕೆ
ಅಕ್ಕಿಹಿಟ್ಟು ಮತ್ತು ನೀರಿನ ಮಿಶ್ರಣವನ್ನು ಬೇರ್ಪಡಿಸಲು ಬಸಿಯುವಿಕೆಯನ್ನು ಬಳಸಲಾಗುತ್ತದೆ.
೫. ಕಂಬಸಾಲು I ರಲ್ಲಿನ ಮಿಶ್ರಣಗಳನ್ನು ಕಂಬಸಾಲು II ರಲ್ಲಿ ಅವುಗಳ ಬೇರ್ಪಡಿಸುವಿಕೆ ವಿಧಾನದೊಂದಿಗೆ ಹೊಂದಿಸಿ.
ಕಂಬಸಾಲು I ಕಂಬಸಾಲು II
i) ಕರಿ ಉದ್ದಿನ ಜೊತೆ ಬೆರೆತ ಕಡಲೆಹಿಟ್ಟು…ಜ) ಜರಡಿ ಹಿಡಿಯುವಿಕೆ
ii) ನೀರಿನೊಂದಿಗೆ ಬೆರೆತ ಸೀಮೆಸುಣ್ಣದ ಪುಡಿ……e) ಸೋಸುವಿಕೆ
iii) ಆಲೂಗಡ್ಡೆಯೊಂದಿಗೆ ಬೆರೆತ ಮುಸುಕಿನ ಜೋಳ….ಚಿ) ಕೈಯಿಂದ ಆರಿಸುವಿಕೆ
iv) ಮರದ ಹೊಟ್ಟಿನೊಂದಿಗೆ ಬೆರೆತ ಕಬ್ಬಿಣದ ಪುಡಿ….b) ಕಾಂತೀಯ ಬೇರ್ಪಡಿಸುವಿಕೆ
v) ನೀರಿನೊಂದಿಗೆ ಬೆರೆತ ಎಣ್ಣೆ…………ಛಿ) ಬಸಿಯುವಿಕೆ
೬. ಯಾವ ಸಂದರ್ಭಗಳಲ್ಲಿ ನೀವು ದ್ರವಗಳಿಂದ ಘನವಸ್ತುಗಳನ್ನು ಬೇರ್ಪಡಿಸಲು ಸೋಸುವಿಕೆಯ ಬದಲು ಬಸಿಯುವಿಕೆಯನ್ನು ಬಳಸುತ್ತೀರಿ?
ಘನ ವಸ್ತುವಿನ ಕಣಗಳು ಭಾರವಾಗಿದ್ದು ಪಾತ್ರೆಯ ಕೆಳಭಾಗದಲ್ಲಿ ನೆಲೆಗೊಂಡಾಗ, ಘನ ವಸ್ತುವಿನ ಕಣಗಳನ್ನು ವಿಚಲಿತಗೊಳಿಸದೆ, ಮೇಲುಗಡೆ ತೇಲುವ ಶುದ್ಧವಾದ ದ್ರವವನ್ನು ಸುರಿಯಲು ಅನುವು ಮಾಡಿಕೊಡಲು ಬಸಿಯುವಿಕೆಯನ್ನು ಬಳಸಲಾಗುತ್ತದೆ. ಉದಾಹರಣೆಗೆ, ಮರಳನ್ನು ನೀರಿನಿಂದ ಬೇರ್ಪಡಿಸುವುದು.
೭. ನಾಸಿಕದಲ್ಲಿನ ರೋಮಗಳನ್ನು ಯಾವುದಾದರೂ ಬೇರ್ಪಡಿಸುವ ಪ್ರಕ್ರಿಯೆಗೆ ನೀವು ಸಂಬಂಧಿಸಬಹುದೇ?
ಹೌದು ಸೋಸುವಿಕೆಗೆ ಸಂಬಂಧಿಸಬಹುದು. ಮೂಗಿನಲ್ಲಿರುವ ರೋಮಗಳು ನೈಸರ್ಗಿಕವಾದ ಸೋಸುಕದಂತೆ ಕಾರ್ಯನಿರ್ವಹಿಸುತ್ತವೆ. ನಾವು ಮೂಗಿನಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳುವಾಗ ಗಾಳಿಯಲ್ಲಿರುವ ಧೂಳು, ಪರಾಗ ಮತ್ತಿತರ ಕಣಗಳನ್ನು ಹಿಡಿದಿಟ್ಟುಕೊಂಡು ಶುದ್ಧವಾದ ಗಾಳಿಯನ್ನು ಒಳಬಿಡುತ್ತದೆ.
೮. ಕೋವಿಡ್-೧೯ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ, ನಾವೆಲ್ಲರೂ ಮಾಸ್ಕ್ಗಳನ್ನು ಧರಿಸಿದ್ದೇವೆ. ಸಾಮಾನ್ಯವಾಗಿ, ಅವು ಯಾವ ವಸ್ತುವಿನಿಂದ ಮಾಡಲ್ಪಟ್ಟಿವೆ? ಈ ಮಾಸ್ಕ್ಗಳ ಕೆಲಸವೇನು?
ಮಾಸ್ಕ್‌ಗಳನ್ನು ಸಾಮಾನ್ಯವಾಗಿ ಹತ್ತಿ, ಪಾಲಿಪ್ರೊಪಿಲೀನ್ ಅಥವಾ ಪಾಲಿಯೆಸ್ಟರ್‌ನಂತಹ ಬಹು ಪದರಗಳ ಬಟ್ಟೆ ಅಥವಾ ವಸ್ತುಗಳಿಂದ ತಯಾರಿಸಲಾಗುತ್ತದೆ. ದ್ರವಗಳಿಂದ ಕಲ್ಮಶಗಳನ್ನು ತೆಗೆದುಹಾಕಲು ಸೋಸುವಿಕೆ ಪ್ರಕ್ರಿಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆಯೋ ಹಾಗೆಯೇ, ನಾವು ಉಸಿರಾಡುವ ಗಾಳಿಯಿಂದ ವೈರಸ್‌ಗಳು ಸೇರಿದಂತೆ ಹಾನಿಕಾರಕ ಕಣಗಳನ್ನು ಸೋಸುವುದು, ಮತ್ತು ಅವುಗಳನ್ನು ಹೊರಗಡೆ ತಡೆಗಟ್ಟಿ ಶುದ್ಧವಾದ ಒಳ್ಳೆಯ ಗಾಳಿಯನ್ನು ಒಳ ಬಿಡುವುದು ಅವುಗಳ ಪಾತ್ರವಾಗಿದೆ.
೯. ಆಲೂಗಡ್ಡೆ, ಉಪ್ಪು ಮತ್ತು ಮರದ ಹೊಟ್ಟನ್ನು ಒಳಗೊಂಡಿರುವ ಮಿಶ್ರಣವನ್ನು ನಿಮಗೆ ನೀಡಲಾಗಿದೆ. ಈ ಮಿಶ್ರಣದಿಂದ ಪ್ರತಿಯೊಂದು ಘಟಕವನ್ನು ಬೇರ್ಪಡಿಸಲು ಅಳವಡಿಸುವ ಹಂತಗಳ ರೂಪುರೇಷೆಯನ್ನು ಸಿದ್ಧಪಡಿಸಿ.
ಮೊದಲು ಕೈಗಳಿಂದ ಆರಿಸುವುದರ ಮೂಲಕ ಆಲೂಗಡ್ಡೆಯನ್ನು ಬೇರ್ಪಡಿಸಬಹುದು.
ನಂತರ ಉಳಿದ ಉಪ್ಪು ಮತ್ತು ಮರದ ಹೊಟ್ಟಿನ ಮಿಶ್ರಣವನ್ನು ಶುದ್ಧವಾದ ನೀರಿನಲ್ಲಿ ಹಾಕಿದರೆ ಉಪ್ಪು ನೀರಿನಲ್ಲಿ ಕರಗುತ್ತದೆ.
ಸೋಸುವಿಕೆ….ಸೋಸುಕದಿಂದ ಆ ನೀರಿನ ಮಿಶ್ರಣವನ್ನು ಸೋಸಿದರೆ ಮರದ ಹೊಟ್ಟು ನಮಗೆ ದೊರೆಯುತ್ತದೆ.
ಆವೀಕರಣ… ಈಗ ಸೋಸಿರುವ ಉಪ್ಪಿನ ನೀರನ್ನು ಕಾಯಿಸಿದಾಗ ನೀರು ಆವಿಯಾಗಿ ತಳದಲ್ಲಿ ಉಪ್ಪು ಉಳಿಯುತ್ತದೆ. ಹೀಗೆ ನಾವು ಆಲೂಗಡ್ಡೆ ಉಪ್ಪು ಮತ್ತು ಮರದ ಹೊಟ್ಟಿನ ಮಿಶ್ರಣದಿಂದ ಘಟಕಗಳನ್ನು ಬೇರ್ಪಡಿಸಬಹುದು.
೧೦. “ಬುದ್ದಿವಂತೆ ಲೀಲಾ” ಎಂಬ ಶೀರ್ಷಿಕೆಯ ಈ ಕೆಳಗಿನ ಕಥೆಯನ್ನು ಓದಿ ಮತ್ತು ಅತ್ಯಂತ ಸೂಕ್ತವಾದ ಆಯ್ಕೆಗಳನ್ನು ಗುರುತು ಮಾಡಿ. ಈ ವಾಕ್ಯವೃಂದಕ್ಕೆ ನಿಮ್ಮ ಆಯ್ಕೆಯ ಸೂಕ್ತ ಶೀರ್ಷಿಕೆಯನ್ನು ನೀಡಿ.
ಲೀಲಾ ತನ್ನ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಕುಡಿಯುವ ನೀರನ್ನು ಮನೆಯಲ್ಲಿ ಬಿಟ್ಟು ಬಂದಿರುವುದನ್ನು ನೆನಪಿಸಿಕೊಂಡಳು. ಅವಳ ತಂದೆಗೆ ಬಾಯಾರಿಕೆ/ಹಸಿವಾಗುವ ಮೊದಲು, ಅವಳು ಸ್ವಲ್ಪ ನೀರು/ ಧಾನ್ಯಗಳನ್ನು ತರಲು ಹತ್ತಿರದ ಕೊಳಕ್ಕೆ ಹೋದಳು. ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತುಂಬಿದ ನಂತರ, ನೀರು ಕೆಸರುಮಯವಾಗಿದೆ ಮತ್ತು ಕುಡಿಯಲು ಯೋಗ್ಯವಾಗಿದೆ/ಯೋಗ್ಯವಾಗಿಲ್ಲ ಎಂಬುದನ್ನು ಅವಳು ಗಮನಿಸಿದಳು. ನೀರನ್ನು ಶುದ್ಧೀಕರಿಸಲು, ಅವಳು ಅದನ್ನು ಸ್ವಲ್ಪ ಸಮಯದವರೆಗೆ ಇಟ್ಟಳು ಮತ್ತು ನಂತರ ಅವಳು ಕಾಗದ/ಮಸ್ಲಿನ್ ಬಟ್ಟೆಯ ಚೂರನ್ನು ಬಳಸಿಕೊಂಡು ಕೆಸರು ನೀರನ್ನು ಸೋಸಿದಳು/ಕಡೆದಳು. ನಂತರ, ಲೀಲಾ ಮುಚ್ಚಿದ ಪಾತ್ರೆಯಲ್ಲಿ ಸುಮಾರು ೧೦ ನಿಮಿಷಗಳ ಕಾಲ ನೀರನ್ನು ತಣ್ಣಗಾಗಿಸಿದಳು/ಕುದಿಸಿದಳು. ತಣ್ಣಗಾದ/ಕುದಿಸಿದ ನಂತರ, ಅವಳು ಅದನ್ನು ಮತ್ತೆ ಸೋಸಿದಳು/ಕಡೆದಳು ಹಾಗೂ ಕುಡಿಯಲು ಯೋಗ್ಯವಾಗುವಂತೆ/ಯೋಗ್ಯವಲ್ಲದಂತೆ ಮಾಡಿದಳು. ತಂದೆಯು ಆಹಾರವನ್ನು ಸೇವಿಸುವಾಗ ಈ ನೀರನ್ನು ಅವರಿಗೆ ನೀಡಿದಳು, ಅವರು ಅವಳನ್ನು ಆಶೀರ್ವದಿಸಿದರು ಮತ್ತು ಅವಳ ಪ್ರಯತ್ನಗಳನ್ನು ಶ್ಲಾಘಿಸಿದರು.
ಉತ್ತರ
ಲೀಲಾ ಳ ಸಮಯೋಚಿತ ನೀರಿನ ಶುದ್ಧೀಕರಣ
ಲೀಲಾ ತನ್ನ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಕುಡಿಯುವ ನೀರನ್ನು ಮನೆಯಲ್ಲಿ ಬಿಟ್ಟು ಬಂದಿರುವುದನ್ನು ನೆನಪಿಸಿಕೊಂಡಳು. ಅವಳ ತಂದೆಗೆ ಬಾಯಾರಿಕೆ ಯಾಗುವಮೊದಲು, ಅವಳು ಸ್ವಲ್ಪ ನೀರನ್ನುತರಲು ಹತ್ತಿರದ ಕೊಳಕ್ಕೆ ಹೋದಳು. ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತುಂಬಿದ ನಂತರ, ನೀರು ಕೆಸರುಮಯವಾಗಿದೆ ಮತ್ತು ಕುಡಿಯಲು ಯೋಗ್ಯವಾಗಿಲ್ಲ ಎಂಬುದನ್ನು ಅವಳು ಗಮನಿಸಿದಳು. ನೀರನ್ನು ಶುದ್ಧೀಕರಿಸಲು, ಅವಳು ಅದನ್ನು ಸ್ವಲ್ಪ ಸಮಯದವರೆಗೆ ಇಟ್ಟಳು ಮತ್ತು ನಂತರ ಅವಳು ಕಾಗದದ ಚೂರನ್ನು ಬಳಸಿಕೊಂಡು ಕೆಸರು ನೀರನ್ನು ಸೋಸಿದಳು. ನಂತರ, ಲೀಲಾ ಮುಚ್ಚಿದ ಪಾತ್ರೆಯಲ್ಲಿ ಸುಮಾರು ೧೦ ನಿಮಿಷಗಳ ಕಾಲ ನೀರನ್ನು ಕುದಿಸಿದಳು ಕುದಿಸಿದ ನಂತರ, ಅವಳು ಅದನ್ನು ಮತ್ತೆ ಸೋಸಿದಳು ಹಾಗೂ ಕುಡಿಯಲು ಯೋಗ್ಯವಾಗುವಂತೆ ಮಾಡಿದಳು. ತಂದೆಯು ಆಹಾರವನ್ನು ಸೇವಿಸುವಾಗ ಈ ನೀರನ್ನು ಅವರಿಗೆ ನೀಡಿದಳು, ಅವರು ಅವಳನ್ನು ಆಶೀರ್ವದಿಸಿದರು ಮತ್ತು ಅವಳ ಪ್ರಯತ್ನಗಳನ್ನು ಶ್ಲಾಘಿಸಿದರು.
ಜೀವಿಗಳು: ಅವುಗಳ ಗುಣಗಳ ಅನ್ವೇಷಣೆ,
6ನೇ ತರಗತಿ ವಿಜ್ಞಾನ ಕುತೂಹಲ ಅಧ್ಯಾಯ 10ರ ಪ್ರಶ್ನೋತ್ತರಗಳು ನೋಟ್ಸ್
೧. ಸಸ್ಯಗಳು ಮತ್ತು ಪ್ರಾಣಿಗಳ ಜೀವನ ಚಕ್ರಗಳಲ್ಲಿನ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಸಸ್ಯಗಳು ಮತ್ತು ಪ್ರಾಣಿಗಳ ಜೀವನ ಚಕ್ರಗಳಲ್ಲಿನ ಹೋಲಿಕೆಗಳು ಮತ್ತು ವ್ಯತ್ಯಾಸಗಳು:
ಸಾಮ್ಯತೆಗಳು
ಸಸ್ಯಗಳು ಮತ್ತು ಪ್ರಾಣಿಗಳು ಹುಟ್ಟು ಮತ್ತು ಸಾವನ್ನು ಹೊಂದಿವೆ. ಎರಡೂ ಸಣ್ಣ ಆರಂಭಿಕ ಹಂತದಿಂದ ಬೆಳೆದು ಪ್ರೌಢ ಹಂತಕ್ಕೆ ತಲುಪುತ್ತವೆ. ಎರಡೂ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಮತ್ತು ವಂಶವನ್ನು ವೃದ್ಧಿ ಮಾಡುತ್ತವೆ. ಎರಡೂ ಆಹಾರ ಸೇವನೆಯನ್ನು ಮಾಡುತ್ತವೆ ಮತ್ತು ವಿಸರ್ಜನೆಯನ್ನು ಮಾಡುತ್ತವೆ. ಎರಡೂ ಉಸಿರಾಟ ನಡೆಸುತ್ತವೆ ಆಮ್ಲಜನಕವನ್ನು ಒಳಗೆ ತೆಗೆದುಕೊಂಡು ಕಾರ್ಬನ್ ಡೈಯಾಕ್ಸೈಡ್ ಅನ್ನು ಹೊರಗೆ ಬಿಡುತ್ತವೆ.
ವ್ಯತ್ಯಾಸಗಳು
ಸಸ್ಯಗಳು ಹಸಿರಾಗಿರುತ್ತವೆ ಮತ್ತು ಪತ್ರಹರಿತ್ತನ್ನು ಹೊಂದಿರುತ್ತವೆ. ಪ್ರಾಣಿಗಳು ಹಸಿರಾಗಿರುವುದಿಲ್ಲ ಮತ್ತು ಪತ್ರಹರಿತನ್ನು ಹೊಂದಿರುವುದಿಲ್ಲ ಹಾಗಾಗಿ ಆಹಾರ ತಯಾರಿಸುವುದಿಲ್ಲ. ಪ್ರಾಣಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ ಸಸ್ಯಗಳು ಚಲಿಸುವುದಿಲ್ಲ.
ಸಸ್ಯಗಳು ತಮ್ಮ ಜೀವನದ ಉದ್ದಕ್ಕೂ ಬೆಳವಣಿಗೆಯನ್ನು ತೋರಿಸುತ್ತವೆ. ಪ್ರಾಣಿಗಳು ಪ್ರಬುದ್ಧ ಹಂತಕ್ಕೆ ತಲುಪಿದ ಮೇಲೆ ಬೆಳೆಯುವುದಿಲ್ಲ.
೨. ಮುಂದಿನ ಪುಟದಲ್ಲಿರುವ ಕೋಷ್ಟಕವು ಕೆಲವು ಅಂಕಿಅಂಶಗಳನ್ನು ತೋರಿಸುತ್ತದೆ. ಅವುಗಳನ್ನು ಅಧ್ಯಯನ ಮಾಡಿ ಮತ್ತು ಎರಡನೇ ಮತ್ತು ಮೂರನೇ ಕಂಬಸಾಲಿನಲ್ಲಿ ನೀಡಲಾದ ಪರಿಸ್ಥಿತಿಗಳಿಗೆ ಸೂಕ್ತವಾದ ಉದಾಹರಣೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಕೆಳಗೆ ನೀಡಲಾದ ಯಾವುದೇ ಪರಿಸ್ಥಿತಿಗಳಿಗೆ ಉದಾಹರಣೆ ನೀಡಲು ಸಾಧ್ಯವಿಲ್ಲವೆಂದಾದರೆ ಕಾರಣ ಕೊಡಿ.
ಕ್ರ.ಸಂ.
ಇದು ಬೆಳೆಯುತ್ತದೆಯೇ?
ಇದು
ಉಸಿರಾಡುತ್ತದೆಯೇ? ಉದಾಹರಣೆ ಷರಾ
೧. ಇಲ್ಲ ಇಲ್ಲ…… ಕಲ್ಲು…. ಇದು ನಿರ್ಜೀವಿ ನಿರ್ಜೀವಿಗಳು ಬೆಳೆಯುವುದೂ ಇಲ್ಲ ಉಸಿರಾಡುವುದೂ ಇಲ್ಲ.
೨. ಇಲ್ಲ ಹೌದು….. ವೈರಸ್ ಗಳು….. ಇವು ಹೊರಗಡೆ ನಿರ್ಜೀವಿಗಳು. ಜೀವಿಯ ಒಳಗಡೆ ಸಜೀವಿಗಳಾಗುತ್ತವೆ ಉಸಿರಾಡುತ್ತವೆ.
೩. ಹೌದು ಇಲ್ಲ…. ಚಳಿಗಾಲದ ಹಿಮಗಡ್ಡೆಗಳು… ಚಳಿಗಾಲದಲ್ಲಿ ಹಿಮ್ಮಗಡ್ಡೆಗಳು ಬೆಳೆಯುತ್ತವೆ. ಆದರೆ ಉಸಿರಾಡುವುದಿಲ್ಲ.
೪. ಹೌದು ಹೌದು… ಮನುಷ್ಯ, ಆಲದ ಮರ… ಮನುಷ್ಯ ಬೆಳೆಯುತ್ತಾನೆ ಮತ್ತು ಉಸಿರಾಡುತ್ತಾನೆ. ಆಲದ ಮರ ಬೆಳೆಯುತ್ತದೆ ಮತ್ತು ಉಸಿರಾಡುತ್ತದೆ.
೩. ಬೀಜ ಮೊಳೆಯಲು ವಿಭಿನ್ನ ಪರಿಸ್ಥಿತಿಗಳು ಬೇಕಾಗುತ್ತವೆ ಎಂದು ನೀವು ಕಲಿತಿದ್ದೀರಿ. ಧಾನ್ಯಗಳು ಮತ್ತು ಬೇಳೆಕಾಳುಗಳ ಸೂಕ್ತ ಸಂಗ್ರಹಣೆಗಾಗಿ ನಾವು ಈ ಜ್ಞಾನವನ್ನು ಹೇಗೆ ಬಳಸಬಹುದು?
ನೀರಿನಲ್ಲಿ ನೆನೆದರೆ ಬೀಜಗಳು ಮೊಳಕೆ ಯೊಡೆಯುತ್ತವೆ. ಆದುದರಿಂದ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ನೀರಿನ ಸಂಪರ್ಕಕ್ಕೆ ತರದಂತೆ ಇಡಬೇಕು. ಮಣ್ಣಿನಲ್ಲಿ ಬೀಜಗಳು ಮೊಳಕೆ ಯೊಡೆಯುತ್ತವೆ. ಆದುದರಿಂದ ಧಾನ್ಯಗಳು ಮತ್ತು ಬೆಳೆಕಾಳುಗಳನ್ನು ಮಣ್ಣಿನ ಸಂಪರ್ಕಕ್ಕೆ ಬರದಂತೆ ಜೋಪಾನ ಮಾಡಬೇಕು. ತೇವಾಂಶ ಭರಿತ ಗಾಳಿಯ ಸ್ಪರ್ಶದಿಂದ ಬೀಜಗಳು ಮೊಳಕೆ ಒಡೆಯಬಹುದು. ಆದುದರಿಂದ ಧಾನ್ಯಗಳು ಮತ್ತು ಬೆಳೆ ಕಾಳುಗಳನ್ನು ಒಣಗಿದ ಧಾರಕಗಳಲ್ಲಿ ಸಂಗ್ರಹಿಸಿಡಬೇಕು. ರೆಫ್ರಿಜರೇಟರ್ ಗಳಲ್ಲಿ ಕೂಡ ಸಂಗ್ರಹಿಸಬಹುದು.
೪. ಗೊದಮೊಟ್ಟೆಗಳಲ್ಲಿ ಬಾಲವಿದೆ ಎಂದು ನೀವು ಕಲಿತಿದ್ದೀರಿ. ಆದರೆ, ಅದು ಕಪ್ಪೆಯಾಗಿ ಬೆಳೆದಂತೆ ಕಣ್ಮರೆಯಾಗುತ್ತದೆ. ಗೊದಮೊಟ್ಟೆ ಹಂತದಲ್ಲಿ ಬಾಲವನ್ನು ಹೊಂದುವ ಪ್ರಯೋಜನವೇನು?
ಗೊದ ಮೊಟ್ಟೆ ಹಂತದಲ್ಲಿ ಕಪ್ಪೆಯು ನೀರಿನಲ್ಲಿ ಇರುತ್ತದೆ ಮತ್ತು ಅದಕ್ಕೆ ಕಾಲುಗಳು ಇನ್ನೂ ಬೆಳೆದಿರುವುದಿಲ್ಲ. ಕಾಲುಗಳು ಸಂಪೂರ್ಣವಾಗಿ ಬೆಳೆಯುವವರೆಗೆ ಅದು ನೀರಿನಲ್ಲಿ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀರಿನಲ್ಲಿ ಈಜಲು ಬಾಲವು ಸಹಾಯ ಮಾಡುತ್ತವೆ.
೫. ಮರದ ದಿಮ್ಮಿ ಚಲಿಸಲು ಸಾಧ್ಯವಿಲ್ಲದ ಕಾರಣ ಅದು ನಿರ್ಜೀವವಾಗಿದೆ ಎಂದು ಚರಣ್ ಹೇಳುತ್ತಾನೆ. ಮರಗಳಿಂದ ದಿಮ್ಮಿ ಪಡೆಯುವುದರಿಂದ ಅದು ಜೀವಂತವಾಗಿದೆ ಎಂದು ಚಾರು ತಿರುಗಿಸಿ ಹೇಳುತ್ತಾಳೆ. ಚರಣ್ ಮತ್ತು ಚಾರು ನೀಡಿದ ಎರಡು ಹೇಳಿಕೆಗಳ ಪರವಾಗಿ ಅಥವಾ ವಿರುದ್ಧವಾಗಿ ನಿಮ್ಮ ವಾದವನ್ನು ಮಂಡಿಸಿ.
ಚರಣ್ ಹೇಳಿರುವುದು ವಿರುದ್ಧ ಹೇಳಿಕೆಯಾಗಿದೆ. ಮರದ ದಿಮ್ಮಿ ನಿರ್ಜೀವವಾಗಿರುವುದರಿಂದ ಅದು ಚಲಿಸಲು ಸಾಧ್ಯವಿಲ್ಲ. ಜೊತೆಗೆ ಮರದ ದಿಮ್ಮಿ ಮರದಲ್ಲಿ ಇರಲಿ ಅಥವಾ ಅದನ್ನು ಕಡಿದು ಹಾಕಿರಲಿ ಅದು ಚಲಿಸುವುದಿಲ್ಲ. ಮರದಲ್ಲಿದ್ದರೆ ಬೆಳೆಯುತ್ತದೆ. ಮತ್ತು ಅದರಲ್ಲಿ ಸಾಗಾಣಿಕೆ ನಡೆಯುತ್ತದೆ. ಆದರೆ ಒಂದೇ ಕಡೆ ಇರುತ್ತದೆಯೇ ಹೊರತು ಚಲಿಸುವುದಿಲ್ಲ.
ಚಾರು ಹೇಳಿರುವುದು ಕೂಡ ತಪ್ಪು, ಮರ ಗಳನ್ನು ಕಡಿದು ಹೊರ ತೆಗೆದ ದಿಮ್ಮಿ ಯು ನಿರ್ಜೀವ ವಾಗಿರುತ್ತದೆ.
೬. ಸೊಳ್ಳೆ ಮತ್ತು ಕಪ್ಪೆಯ ಜೀವನ ಚಕ್ರಗಳಲ್ಲಿನ ಹೋಲಿಕೆಗಳು ಮತ್ತು ವ್ಯತ್ಯಾಸಗಳು ಯಾವುವು?
ಸೊಳ್ಳೆ ಮತ್ತು ಕಪ್ಪೆ ಗಳ ಜೀವನ ಚಕ್ರಗಳು ಎರಡೂ ಮೊಟ್ಟೆಗಳಿಂದ ಆರಂಭವಾಗುತ್ತದೆ. ಮತ್ತು ಎರಡೂ ಮೊಟ್ಟೆಗಳು ನೀರಿನಲ್ಲಿ ಮುಂದಿನ ಹಂತ ತಲುಪುತ್ತವೆ.
ವ್ಯತ್ಯಾಸಗಳು
ಸೊಳ್ಳೆಯ ಜೀವನ ಚಕ್ರದಲ್ಲಿನ ಹಂತಗಳು
ಮೊಟ್ಟೆ… ಲಾರ್ವಾ… ಪ್ಯೂಪಾ..ಸೊಳ್ಳೆ
ಕಪ್ಪೆಯ ಜೀವನ ಚಕ್ರದಲ್ಲಿನ ಹಂತಗಳು
ಮೊಟ್ಟೆ….ಗೊದಮೊಟ್ಟೆ…. ಮರಿಕಪ್ಪೆ ….ಪ್ರೌಢ ಕಪ್ಪೆ
ಸೊಳ್ಳೆಗಳಿಗೆ ಆರು ಕಾಲುಗಳು ಬೆಳೆಯುತ್ತವೆ. ಕಪ್ಪೆಗಳಿಗೆ ನಾಲ್ಕು ಕಾಲುಗಳು ಬೆಳೆಯುತ್ತವೆ. ಸೊಳ್ಳೆಗಳಿಗೆ ರೆಕ್ಕೆಗಳು ಬೆಳೆದು ಅವು ಹಾರಲು ಪ್ರಾರಂಭಿಸುತ್ತವೆ. ಕಪ್ಪೆಗಳು ನೀರಿನಲ್ಲಿ ನೆಲದ ಮೇಲು ಕುಪ್ಪಳಿಸುತ್ತವೆ. ಸೊಳ್ಳೆಯ ಜೀವನ ಸಮಯ ಪ್ರತಿ ಹಂತದಲ್ಲೂ ಕಪ್ಪೆಗಿಂತಲೂ ಕಡಿಮೆ.
೭. ಒಂದು ಸಸ್ಯಕ್ಕೆ ಅದರ ಬೆಳವಣಿಗೆಗೆ ಬೇಕಾದ ಎಲ್ಲಾ ಪರಿಸ್ಥಿತಿಗಳನ್ನು ಒದಗಿಸಲಾಗಿದೆ (ಚಿತ್ರ ೧೦.೯). ಒಂದು ವಾರದ ನಂತರ ಸಸ್ಯದ ಕಾಂಡ ಮತ್ತು ಬೇರಿನಲ್ಲಿ ನೀವು ಏನನ್ನು ನೋಡಬೇಕೆಂದು ನಿರೀಕ್ಷಿಸುತ್ತೀರೋ ಚಿತ್ರಿಸಿ. ಕಾರಣಗಳನ್ನು ಕೊಡಿ.
ಬೇರುಭೂಮಿಯ ಕಡೆಗೆ ಬೆಳೆಯುತ್ತದೆ ಅಂದರೆ ಕೆಳಗಿನ ದಿಕ್ಕಿನ ಕಡೆಗೆ ಚಲಿಸುತ್ತದೆ. ಹಾಗೂ ಕಾಂಡವು ಮತ್ತು ಎಲೆಗಳು ಸೂರ್ಯನ ಬೆಳಕಿನ ಕಡೆಗೆ ಚಲಿಸುತ್ತವೆ ಅಂದರೆ ಮೇಲ್ಮುಖವಾಗಿ ಬೆಳೆಯುತ್ತದೆ. ಯಾವಾಗಲೂ ಸಸ್ಯದ ಬೇರುಗಳು ಭೂಮಿಯ ಒಳಗಡೆ ಕೆಳಮುಖವಾಗಿ ಬೆಳೆಯುತ್ತವೆ ಮತ್ತು ಕಾಂಡದ ಚಿಗುರು ಎಲೆಗಳು ಸೂರ್ಯನ ಬೆಳಕಿನ ಕಡೆ ಎಂದರೆ ಮೇಲ್ಮುಖವಾಗಿ ಬೆಳೆಯುತ್ತವೆ.
೮. ಚಿತ್ರ ೧೦.೧೦ ರಲ್ಲಿ ತೋರಿಸಿರುವಂತೆ ತಾರ ಮತ್ತು ವಿಜಯ್ ಪ್ರಯೋಗವನ್ನು ಕೈಗೊಂಡರು. ಅವರು ಏನು ಕಂಡುಹಿಡಿಯಲು ಬಯಸಿದ್ದಾರೆ ಎಂದು ನೀವು ಭಾವಿಸುತ್ತೀರಿ? ಅವು ಸರಿಯಾಗಿವೆಯೇ ಎಂದು ಅವರಿಗೆ ಹೇಗೆ ತಿಳಿಯುತ್ತದೆ?
ತಾರಾ ಮತ್ತು ವಿಜಯ್ ಯಾವಾಗಲೂ ಸಸ್ಯದ ಕಾಂಡ ಭಾಗವು ಮೇಲ್ಭಾಗಕ್ಕೆ ಬೆಳೆಯುತ್ತದೆ ಮತ್ತು ಬೇರಿನ ವ್ಯೂಹವು ಭೂಮಿಯ ಕಡೆಗೆ ಕೆಳ ದಿಕ್ಕಿನಲ್ಲಿ ಚಲಿಸುತ್ತದೆ ಎಂಬ ಸತ್ಯವನ್ನು ಪರೀಕ್ಷಿಸಲು ಈ ಮೂರು ಪ್ರಯೋಗಗಳನ್ನು ಮಾಡಿದ್ದಾರೆ. ಮೊದಲನೇ ಚಿತ್ರದಲ್ಲಿ ಕುಂಡವನ್ನು ಅಡ್ಡಲಾಗಿ ಇಟ್ಟಿದ್ದಾರೆ. ಇದರಲ್ಲಿ ಕಾಂಡ ಮತ್ತು ಬೇರಿನ ವ್ಯೂಹವು ಭೂಮಿಗೆ ಅಡ್ಡಲಾಗಿ ಬೆಳೆಯುತ್ತಿವೆ. ಎರಡನೇ ಚಿತ್ರದಲ್ಲಿ ಕಾಂಡವ್ಯೂಹವು ಕೆಳ ದಿಕ್ಕಿಗೆ ಮತ್ತು ಬೇರಿನ ವ್ಯೂಹವು ಮೇಲಿನ ದಿಕ್ಕಿಗಿದೆ. ಮೂರನೇ ಚಿತ್ರದಲ್ಲಿ ಕಾಂಡವ್ಯೂಹವು ಮೇಲು ದಿಕ್ಕಿಗೆ ಮತ್ತು ಬೇರಿನವ್ಯೂಹವು ಕೆಳ ದಿಕ್ಕಿಗೆ ಇದೆ.
ಅವು ಹೇಗೆ ಇರಲಿ ಒಂದು ವಾರದ ನಂತರ ಗಮನಿಸಿದರೆ ಎಲ್ಲಾ ಮೂರು ಗಿಡಗಳ ಕಾಂಡಗಳು ಮತ್ತು ಎಲೆಗಳು ಸೂರ್ಯನ ಬೆಳಕಿನ ಕಡೆ ಎಂದರೆ ಆಕಾಶದ ದಿಕ್ಕಿನ ಕಡೆ ಮೇಲು ದಿಕ್ಕಿಗೆ ಬೆಳೆಯುತ್ತವೆ ಮತ್ತು ಬೇರಿನ ವ್ಯೂಹಗಳು ಭೂಮಿಯ ಕಡೆಗೆ ಕೆಳ ದಿಕ್ಕಿನ ಕಡೆಗೆ ಬೆಳೆಯುತ್ತವೆ.
೯. ಬೀಜ ಮೊಳೆಯುವಿಕೆಯ ಮೇಲೆ ತಾಪಮಾನವು ಪರಿಣಾಮ ಬೀರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಒಂದು ಪ್ರಯೋಗವನ್ನು ವಿನ್ಯಾಸಗೊಳಿಸಿ.
ಬೀಜ ಮೊಳೆಯುವಿಕೆಯ ಮೇಲೆ ತಾಪಮಾನದ ಪರಿಣಾಮವನ್ನು ಪರೀಕ್ಷಿಸಲು ಪ್ರಯೋಗ
ಸಾಮಗ್ರಿಗಳು
ಒಂದೇ ರೀತಿಯ ಮಡಕೆಗಳು, ಮಣ್ಣು, ಬೀಜಗಳು, ಥರ್ಮಾಮೀಟರ್‌ಗಳು ಮತ್ತು ವಿಭಿನ್ನ ತಾಪಮಾನ-ನಿಯಂತ್ರಿತ ಪರಿಸರಗಳು (ಉದಾ. ರೆಫ್ರಿಜರೇಟರ್, ಕೋಣೆಯ ಉಷ್ಣಾಂಶ, ಬಿಸಿಯಾದ ಪರಿಸರ).
ಕಾರ್ಯವಿಧಾನ
ಪ್ರತಿ ಮಡಕೆಯನ್ನು ಒಂದೇ ರೀತಿಯ ಮಣ್ಣಿನಿಂದ ತುಂಬಿಸಿ.
ಪ್ರತಿ ಮಡಕೆಯಲ್ಲಿ ಬೀಜಗಳನ್ನು ನೆಡಿ.
ನಿಯಂತ್ರಿತ ತಾಪಮಾನದೊಂದಿಗೆ ವಿಭಿನ್ನ ಪರಿಸರದಲ್ಲಿ ಪ್ರತಿ ಮಡಕೆಯನ್ನು ಇರಿಸಿ (ಉದಾ. ಶೀತ, ಕೋಣೆಯ ಉಷ್ಣಾಂಶ, ಬೆಚ್ಚಗಿನ).
ಪ್ರತಿ ಮಡಕೆಗೆ ಸಮಾನವಾಗಿ ನೀರು ಹಾಕಿ.
ಎರಡು ವಾರಗಳವರೆಗೆ ಪ್ರತಿದಿನ ಪ್ರತಿ ಪರಿಸರದಲ್ಲಿ ಮೊಳಕೆಯೊಡೆದ ಬೀಜಗಳ ಸಂಖ್ಯೆಯನ್ನು ದಾಖಲಿಸಿ.
ವೀಕ್ಷಣೆ
ವಿಭಿನ್ನ ತಾಪಮಾನಗಳಲ್ಲಿ ಮೊಳಕೆಯೊಡೆಯುವಿಕೆ ಮತ್ತು ಬೆಳವಣಿಗೆಯ ದರವನ್ನು ಅಳೆಯಿರಿ ಮತ್ತು ಹೋಲಿಕೆ ಮಾಡಿ.
ತೀರ್ಮಾನ
ವೀಕ್ಷಣೆಗಳ ಆಧಾರದ ಮೇಲೆ ಬೀಜ ಮೊಳಕೆಯೊಡೆಯಲು ಸೂಕ್ತವಾದ ತಾಪಮಾನವನ್ನು ನಿರ್ಧರಿಸಿ.
ನಿಸರ್ಗದ ಸಂಪತ್ತು
6ನೇ ತರಗತಿ ವಿಜ್ಞಾನ ಕುತೂಹಲ ಭಾಗ-2 ಅಧ್ಯಾಯ 11 ರ ಪ್ರಶ್ನೋತ್ತರಗಳು ನೋಟ್ಸ್
೧. ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಚಿತ್ರ ೧೧.೯ ಕೆಲವು ವಸ್ತುಗಳನ್ನು ತೋರಿಸುತ್ತದೆ. ಕಲಸಿದ ಅಕ್ಷರಗಳುಳ್ಳ ಹೆಸರುಗಳೊಂದಿಗೆ ಆ ಚಿತ್ರಗಳನ್ನು ಹೊಂದಿಸಿ. ಈ ಸಂಪನ್ಮೂಲಗಳ ಹೆಸರನ್ನು ಬರೆದು ಇನ್ನೊಂದು ಕೋಷ್ಟಕ ಮಾಡಿ. ಇವುಗಳನ್ನು ನವೀಕರಿಸಬಹುದಾದ ಅಥವಾ ನವೀಕರಿಸಲಾಗದ ಸಂಪನ್ಮೂಲಗಳೆಂದು ವರ್ಗೀಕರಿಸಿ.
ನೀರು
ಗಾಳಿ ಯಂತ್ರ
ಅರಣ್ಯ
ಬಂಡೆಗಳು
ನವೀಕರಿಸಬಹುದಾದ ಸಂಪನ್ಮೂಲಗಳು….ನೀರು, ಗಾಳಿ ಯಂತ್ರ, ಅರಣ್ಯ .
ನವೀಕರಿಸಲಾಗದ ಸಂಪನ್ಮೂಲಗಳು….ಬಂಡೆಗಳು
೨. ಈ ಕೆಳಗಿನ ಹೇಳಿಕೆಗಳು ಸರಿಯೇ (ಸ), ತಪ್ಪೇ (ತ) ಎಂಬುದನ್ನು ತಿಳಿಸಿ ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಿ ಬರೆಯಿರಿ.
(i) ಮಾನವರ ಅಗತ್ಯಗಳನ್ನು ಪೂರೈಸಲು ನಿಸರ್ಗವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ.
[ ಸ]
(ii) ಯಂತ್ರಗಳು ನಿಸರ್ಗದಲ್ಲಿ ಕಂಡುಬರುವ ಸಂಪನ್ಮೂಲವಾಗಿದೆ. [ತ ]
(iii) ನೈಸರ್ಗಿಕ ಅನಿಲವು ಒಂದು ನವೀಕರಿಸಲಾಗದ ಸಂಪನ್ಮೂಲ. [ಸ ]
(iv) ಗಾಳಿ ಒಂದು ನವೀಕರಿಸಬಹುದಾದ ಸಂಪನ್ಮೂಲ. [ ಸ]
೩. ಅತ್ಯಂತ ಸೂಕ್ತವಾದ ಆಯ್ಕೆಯನ್ನು ಬಳಸಿಕೊಂಡು ಖಾಲಿ ಜಾಗಗಳನ್ನು ಭರ್ತಿ ಮಾಡಿ.
(i) ಸ್ಕೂಟರ್ ಅಥವಾ ಬೈಕ್‌ಗಳಂತಹ ದ್ವಿಚಕ್ರ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸುವ ಇಂಧನ….
a) ಸೀಮೆಎಣ್ಣೆ
b) ಪೆಟ್ರೋಲ್
c) ಡೀಸೆಲ್
d) LPG
ಉತ್ತರ
b) ಪೆಟ್ರೋಲ್
(ii) ನವೀಕರಿಸಬಹುದಾದ ಸಂಪನ್ಮೂಲಕ್ಕೆ ಒಂದು ಉದಾಹರಣೆ………….
ಚಿ) ಕಲ್ಲಿದ್ದಲು
b) ನೀರು
ಛಿ) ನೈಸರ್ಗಿಕ ಅನಿಲ
ಜ) ಪೆಟ್ರೋಲ್
ಉತ್ತರ
b) ನೀರು
೪. ಈ ಕೆಳಗಿನವುಗಳನ್ನು ನವೀಕರಿಸಬಹುದಾದ ಅಥವಾ ನವೀಕರಿಸಲಾಗದ ಸಂಪನ್ಮೂಲಗಳಾಗಿ ವರ್ಗೀಕರಿಸಿ. ಕಲ್ಲಿದ್ದಲು, ನೈಸರ್ಗಿಕ ಅನಿಲ, ಅರಣ್ಯಗಳು ಮತ್ತು ಖನಿಜಗಳು.
1.ನವೀಕರಿಸಬಹುದಾದ ಸಂಪನ್ಮೂಲಗಳು …….ಅರಣ್ಯಗಳು.
2.ನವೀಕರಿಸಲಾಗದ ಸಂಪನ್ಮೂಲಗಳು ….ಕಲ್ಲಿದ್ದಲು ಖನಿಜಗಳು, ನೈಸರ್ಗಿಕ ಅನಿಲ.
೫. ಪೆಟ್ರೋಲಿಯಂ ಅನ್ನು ನವೀಕರಿಸಲಾಗದ ಸಂಪನ್ಮೂಲ ಎಂದು ನಾವು ಏಕೆ ಹೇಳುತ್ತೇವೆ?
ಪೆಟ್ರೋಲಿಯಂ ಒಂದು ಪಳೆಯುಳಿಕೆ ಇಂಧನವಾಗಿದ್ದು, ನಿರಂತರವಾಗಿ ಬಳಸಿದರೆ ಅದು ಮುಗಿದು ಹೋಗುತ್ತದೆ. ಮತ್ತೆ ಹೊಸದಾಗಿ ಉತ್ಪತ್ತಿ ಸಾಧ್ಯವಿಲ್ಲ. ಏಕೆಂದರೆ ಅದು ಉತ್ಪತ್ತಿಯಾಗಲು ಲಕ್ಷಾಂತರ ವರ್ಷಗಳನ್ನು ತೆಗೆದುಕೊಂಡಿದೆ. ಇದು ಸೀಮಿತ ಪ್ರಮಾಣದಲ್ಲಿ ಭೂಮಿಯ ಒಳಗೆ ಲಭ್ಯವಿದ್ದು ಮುಗಿದು ಹೋದರೆ ಮರುಪೂರ್ಣಗೊಳಿಸಲು ಆಗುವುದಿಲ್ಲ. ಆದುದರಿಂದ ಪೆಟ್ರೋಲಿಯಂ ಅನ್ನು ನವೀಕರಿಸಲಾಗದ ಸಂಪನ್ಮೂಲ ಎಂದು ಕರೆಯುತ್ತಾರೆ.
೬. ಕಾಡುಗಳನ್ನು ಪುನಃ ಬೆಳೆಸುವುದು ಕಷ್ಟ. ಈ ಹೇಳಿಕೆಯನ್ನು ಸ್ಪಷ್ಟೀಕರಿಸಿ.
ಹೊಸ ಕಾಡು ಬೆಳೆಯಲು ಅಥವಾ ನಾಶವಾದ ಅರಣ್ಯವನ್ನು ಪುನರುಜ್ಜೀವನಗೊಳಿಸಲು ಹತ್ತಾರು ವರ್ಷಗಳು ಬೇಕಾಗುತ್ತವೆ. ಇದಲ್ಲದೆ ಬೇರೆ ಬೇರೆ ಅಡಚಣೆಗಳಿಂದ ಕಾಡನ್ನು ಬೆಳೆಸುವುದು ಕಷ್ಟವಾಗುತ್ತದೆ. ಉದಾಹರಣೆಗೆ ಮರಗಳರಿಂದ ಮರಗಳನ್ನು ರಕ್ಷಿಸುವುದು, ಮತ್ತು ವಿವಿಧ ಉದ್ದೇಶಗಳಿಗಾಗಿ ಕಾಡುಗಳ ಮರಗಳನ್ನು ಕಡಿಯುವುದು ಇವುಗಳಿಂದ ರಕ್ಷಿಸಿ ಕಾಡನ್ನು ಬೆಳೆಸುವುದು ಸವಾಲಿನ ಕೆಲಸವಾಗಿದೆ.
೭. ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡುವ ನಿಮ್ಮ ದೈನಂದಿನ ಐದು ಚಟುವಟಿಕೆಗಳನ್ನು ಪಟ್ಟಿ ಮಾಡಿ.
ನೀರನ್ನು ಕುಡಿಯುತ್ತೇವೆ.
ಗಾಳಿಯಿಂದ ಉಸಿರಾಡುತ್ತೇವೆ.
ಸೂರ್ಯನಿಂದ ಶಾಖ ಮತ್ತು ಬೆಳಕನ್ನು ಪಡೆಯುತ್ತೇವೆ.
ಸಸ್ಯಗಳಿಂದ ಮತ್ತು ಪ್ರಾಣಿಗಳಿಂದ ಆಹಾರವನ್ನು ಪಡೆಯುತ್ತೇವೆ.
ಬೇರೆ ಬೇರೆ ಲೋಹಗಳಿಂದ ಮಾಡಿದ ಪಾತ್ರೆ ಇತರ ಸಾಮಗ್ರಿಗಳನ್ನು ಬಳಸುತ್ತೇವೆ.
೮. ಗಾಳಿಯ ಉಪಸ್ಥಿತಿಯಿಂದ ಸಾಧ್ಯವಾಗುವ ನಾಲ್ಕು ಚಟುವಟಿಕೆಗಳನ್ನು ಪಟ್ಟಿ ಮಾಡಿ.
ಗಾಳಿಪಟವನ್ನು ಹಾರಿಸಬಹುದು.
ಗಾಳಿಯಂತ್ರಗಳು ಚಲಿಸಿ ವಿದ್ಯುತ್ ತಯಾರಿಕೆ ಆಗುತ್ತದೆ.
ಉಸಿರಾಟ ಸಾಧ್ಯವಾಗಿದೆ.
ವಾಹನಗಳ ಟೈರ್‌ಗಳಲ್ಲಿ ಗಾಡಿಯನ್ನು ತುಂಬಿ ವಾಹನಗಳು ಚಲಿಸುವುದು ಸಾಧ್ಯವಾಗಿದೆ.
೯. ನೀವು ವಾಸಿಸುವ ಪ್ರದೇಶದ ಸುತ್ತಲಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ನಿಮ್ಮ ಕೊಡುಗೆ ಏನು?
ನೀವು ಕೈಗೊಳ್ಳಬಹುದಾದ ಕ್ರಮಗಳನ್ನು ಪಟ್ಟಿ ಮಾಡಿ.
ಮನೆಯ ಮುಂದೆ ಇರುವ ಜಾಗದಲ್ಲಿ ಹಾಕಬಹುದಾದ ಗಿಡ ಅಥವಾ ಮರಗಳನ್ನು ಹಾಕಬಹುದು. ನೆರಳು ಕೊಡುವ ಮರಗಳನ್ನು ಬೆಳೆಸಬಹುದು ಅಥವಾ ಹಣ್ಣುಗಳನ್ನು ಕೊಡುವ ಗಿಡಮರಗಳನ್ನು ಹಾಕಬಹುದು. ದೀರ್ಘಕಾಲ ಜೀವಿಸುವ ಬಳ್ಳಿಗಳನ್ನು ಹಾಕಿ ಹಸಿರು ಮಾಡಬಹುದು. ವಿವಿಧ ಕುಂಡಗಳನ್ನು ಧರಿಸಿ ಅದರಲ್ಲಿ ಗಿಡಗಳನ್ನು ಹಾಕಿ ಆರೈಕೆ ಮಾಡಬಹುದು. ಹಳ್ಳಿಗಳಲ್ಲಾದರೆ ರಸ್ತೆಯ ಪಕ್ಕ ಗಿಡಗಳನ್ನು ತಂದು ಹಾಕಬಹುದು.
೧೦. ಆಹಾರ ತಯಾರಿಸುತ್ತಿರುವುದನ್ನು ಕೊಟ್ಟಿರುವ ಚಿತ್ರದಲ್ಲಿ ನಾವು ಗಮನಿಸಬಹುದು. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಅ) ಆಹಾರವನ್ನು ತಯಾರಿಸಲು ಯಾವ ರೀತಿಯ ಶಕ್ತಿಯನ್ನು ಬಳಸಲಾಗುತ್ತಿದೆ.
ಸೌರಶಕ್ತಿಯನ್ನು ಬಳಸಲಾಗುತ್ತಿದೆ.
ಆ) ಆಹಾರ ತಯಾರಿಸಲು ಈ ರೀತಿಯ ಶಕ್ತಿಯನ್ನು ಬಳಸುವುದರ ಒಂದು ಅನುಕೂಲ ಮತ್ತು ಒಂದು ಅನನುಕೂಲವನ್ನು ಬರೆಯಿರಿ.
ಅನುಕೂಲ … ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು ಇದರ ಬಳಕೆಯಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ.
ಅನಾನುಕೂಲ… ಸೂರ್ಯನ ಶಾಖ ಇಲ್ಲದ ಸಮಯದಲ್ಲಿ ಅಡುಗೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.
೧೧. ಮರಗಳನ್ನು ಬೃಹತ್ ಪ್ರಮಾಣದಲ್ಲಿ ಕಡಿಯುವುದರಿಂದ ಮಣ್ಣಿನ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದೇಕೆ ನೀವು ಯೋಚಿಸುವಿರಿ?
ಮರಗಳನ್ನು ಬೃಹತ್ ಪ್ರಮಾಣದಲ್ಲಿ ಕಡಿಯುವುದರಿಂದ ಮಳೆ ನೀರು ಇಂಗುವುದು ನಿಲ್ಲುತ್ತದೆ. ಮತ್ತು ಮಳೆ ನೀರು ಫಲವತ್ತಾದ ಮೇಲ್ಮಣ್ಣನ್ನು ಕೊಂಡೊಯ್ದು ತಗ್ಗು ಪ್ರದೇಶಗಳಿಗೆ ಅಥವಾ ಕೆರೆ ನದಿಗಳ ತಳಗಳಿಗೆ ಸೇರಿಸುತ್ತದೆ. ಇದರಿಂದ ಫಲವತ್ತಾದ ಮೇಲ್ಮಣ್ಣು ನಷ್ಟವಾಗಿ ಭೂಮಿಯು ಬರಡಾಗುತ್ತದೆ. ನೆಲದ ಮೇಲ್ಮೈಯಲ್ಲಿ ಕೊರಕಲುಗಳು ಕಾಣುತ್ತವೆ. ಪ್ರವಾಹಗಳು ಹೆಚ್ಚಾಗುತ್ತವೆ.
೧೨. ಗಾಳಿಯನ್ನು ಕಲುಷಿತಗೊಳಿಸುವ ಎರಡು ಮಾನವ ಚಟುವಟಿಕೆಗಳನ್ನು ವಿವರಿಸಿ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಒಂದು ಕ್ರಮವನ್ನು ಸೂಚಿಸಿ.
ವಾಹನಗಳು ಮತ್ತು ಕಾರ್ಖಾನೆಗಳಲ್ಲಿ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ಹಾನಿಕಾರಕ ಮಾಲಿನ್ಯಕಾರಕಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ.
ಅರಣ್ಯನಾಶವು ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಹಸಿರುಮನೆ ಅನಿಲಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮ
ರಸ್ತೆಯಲ್ಲಿ ಇಂಧನ ಚಾಲಿತ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ , ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು.
೧೩. ಒಂದು ಕುಟುಂಬವು ವಿದ್ಯುತ್ ಉತ್ಪಾದಿಸಲು ಸೌರ ಫಲಕಗಳನ್ನು, ಅಡುಗೆ ಮಾಡಲು ಅನಿಲ ಒಲೆಯನ್ನು
ಮತ್ತು ಬಾವಿಯಿಂದ ನೀರನ್ನು ಮೇಲೆತ್ತಲು ಗಾಳಿಯಂತ್ರವನ್ನು ಬಳಸುತ್ತದೆ. ಒಂದು ವಾರ ಸೂರ್ಯನ
ಬೆಳಕು ಇಲ್ಲದಿದ್ದರೆ ಏನಾಗುತ್ತದೆ?
<span;>ಒಂದು ವಾರ ಸೂರ್ಯನ ಬೆಳಕು ಇಲ್ಲದಿದ್ದರೆ, ಸೌರ ಫಲಕಗಳು ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಕುಟುಂಬವು ಪರ್ಯಾಯ ವಿದ್ಯುತ್ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ. ಅಡುಗೆ ಮಾಡಲು ಅನಿಲ ಒಲೆಯನ್ನು ಬಳಸುತ್ತಿರುವುದರಿಂದ ಏನು ತೊಂದರೆ ಆಗುವುದಿಲ್ಲ. ರಾತ್ರಿ ಬೆಳಕಿಗಾಗಿ ಯಾವುದಾದರೂ ಎಣ್ಣೆ ದೀಪಗಳನ್ನು ಬಳಸಬಹುದು. ಬಾವಿಯಿಂದ ನೀರನ್ನು ಎತ್ತಲು ಸೂರ್ಯನ ಬೆಳಕು ಇಲ್ಲದಿರುವುದು ಏನು ಸಮಸ್ಯೆ ಆಗುವುದಿಲ್ಲ.
೧೪. ಕೆಳಗೆ ನೀಡಿರುವ ಪದಗಳನ್ನು ಬಳಸಿಕೊಂಡು ಖಾಲಿ ಜಾಗಗಳನ್ನು ಭರ್ತಿ ಮಾಡಿ.
(ಪಳೆಯುಳಿಕೆ ಇಂಧನಗಳು, ಅರಣ್ಯ, ಗಾಳಿ, ಪೆಟ್ರೋಲಿಯಂ, ಕಲ್ಲಿದ್ದಲು, ನೀರು ಮತ್ತು ನವೀಕರಿಸಲಾಗದ
ಸಂಪನ್ಮೂಲಗಳು.)
೧೫. ಕೈಗಾರಿಕೆಗಳು ಮತ್ತು ವಸತಿಗಳ ಅವಶ್ಯಕತೆಗಳನ್ನು ಪೂರೈಸಲು ಮರಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿಯೇ ನಿರಂತರವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಇದನ್ನು ಸಮರ್ಥಿಸಬಹುದೇ? ಚರ್ಚಿಸಿ ಮತ್ತು ಸಂಕ್ಷಿಪ್ತ ವರದಿಯನ್ನು ತಯಾರಿಸಿ.
ಕೈಗಾರಿಕೆಗಳು ಮತ್ತು ವಸತಿಗಳ ಅಗತ್ಯಗಳನ್ನು ಪೂರೈಸಲು ಮರಗಳಿಗೆ ಹೆಚ್ಚುತ್ತಿರುವ ಬೇಡಿಕೆ ಅರ್ಥವಾಗುವಂತಹದ್ದೇ ಆದರೆ ಸಮರ್ಥನೀಯವಲ್ಲ. ಆಮ್ಲಜನಕವನ್ನು ಒದಗಿಸುವ ಮೂಲಕ, ವನ್ಯಜೀವಿಗಳಿಗೆ ಆಶ್ರಯ ನೀಡುವ ಮೂಲಕ ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮರಗಳು ಮಹತ್ತರ ಪಾತ್ರ ವಹಿಸುತ್ತವೆ. ದೊಡ್ಡ ಪ್ರಮಾಣದ ಅರಣ್ಯನಾಶವು ಜೀವವೈವಿಧ್ಯತೆಯ ನಷ್ಟ, ಹವಾಮಾನ ಬದಲಾವಣೆ ಮತ್ತು ಜಲ ಚಕ್ರಗಳ ಏರುಪೇರಿಗೆ ಕಾರಣವಾಗಬಹುದು. ಪರ್ಯಾಯ ವಸ್ತುಗಳನ್ನು ಬಳಸುವುದು, ಮರ ಕಡಿಯುವುದರ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತರುವುದು ಮತ್ತು ಮರು ಅರಣ್ಯೀಕರಣವನ್ನು ಪ್ರೋತ್ಸಾಹಿಸುವಂತಹ ಸುಸ್ಥಿರ ಅಭ್ಯಾಸಗಳು ಆರ್ಥಿಕ ಅಭಿವೃದ್ಧಿಯನ್ನು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
೧೬. ನಿಮ್ಮ ಶಾಲೆಯಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಒಂದು ಯೋಜನೆಯನ್ನು ರೂಪಿಸಿ. ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ಅದು ಪರಿಸರಕ್ಕೆ ಹೇಗೆ ಸಹಾಯಮಾಡುತ್ತದೆ?
ಕಡಿಮೆ ನೀರನ್ನು ಬಳಸಲು ಯೋಜನೆ
ನೀರಿನ-ಸಮರ್ಥ ನಲ್ಲಿಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಿ.
ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಸೋರಿಕೆಯನ್ನು ತಕ್ಷಣ ಮಳೆ ನೀರು ಸರಿಪಡಿಸಿ.
ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನೀರಿನ ಸಂರಕ್ಷಣಾ ಕ್ರಮಗಳ ಬಗ್ಗೆ ಶಿಕ್ಷಣ ನೀಡಿ.
ಗಿಡಮರಗಳನ್ನು ಬೆಳೆಸಲು ಉಪಯೋಗಿಸಿದ ವ್ಯರ್ಥವಾದ ನೀರನ್ನು ಬಳಸಿ.
ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮಗಳು
ನೀರು ಪೋಲಾಗುವ ಸ್ಥಳಗಳನ್ನು ಗುರುತಿಸಲು ಶೋಧನೆ ನಡೆಸಿ.
ನೀರನ್ನು ಸಂರಕ್ಷಿಸುವ ಸಾಧನಗಳನ್ನು ಸ್ಥಾಪಿಸಲು ಸ್ಥಳೀಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಹಕರಿಸಿ.
ಜಾಗೃತಿ ಮೂಡಿಸಲು ಕಾರ್ಯಾಗಾರಗಳು ಮತ್ತು ಜಾಥಾ ಗಳನ್ನು ಆಯೋಜಿಸಿ.
ನಿಯಮಿತವಾಗಿ ನೀರಿನ ಬಳಕೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಬಳಕೆ ನಿಯಂತ್ರಣ ಗುರಿಗಳನ್ನು ಗೊತ್ತು ಮಾಡಿ.
ನೀರಿನ ಸಂರಕ್ಷಣೆಗಾಗಿ ವಿದ್ಯಾರ್ಥಿಗಳ ನೇತೃತ್ವದ ಸಂಘಗಳನ್ನು ಪ್ರೋತ್ಸಾಹಿಸಿ.
ಪರಿಸರ ಪ್ರಯೋಜನಗಳು
ಸ್ಥಳೀಯ ನೀರಿನ ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ನೀರಿನ ಸಂಸ್ಕರಣೆ ಮತ್ತು ವಿತರಣೆಯಲ್ಲಿ ಬಳಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಸಮುದಾಯದಲ್ಲಿ ಸುಸ್ಥಿರತೆ ಮತ್ತು ಜವಾಬ್ದಾರಿಯುತ ನೀರಿನ ಬಳಕೆಯನ್ನು ಉತ್ತೇಜಿಸುತ್ತದೆ.
ಭೂಮಿಯಿಂದ ಆಚೆಗೆ
ಆರನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ 12 ರ ಪ್ರಶ್ನೋತ್ತರಗಳು ನೋಟ್ಸ್
೧. ಹೊಂದಿಸಿ ಬರೆಯಿರಿ.
ಕಂಬಸಾಲು I ………………………..ಕಂಬಸಾಲು II
(i) ಭೂಮಿಯ ಉಪಗ್ರಹ………… ಚಂದ್ರ
(ii) ಕೆಂಪು ಗ್ರಹ………………….,.. ಮಂಗಳ
(iii) ನಕ್ಷತ್ರಪುಂಜ .,……………….. ಓರಿಯನ್
(iv) ಸಂಜೆಯ ನಕ್ಷತ್ರವೆಂದು ಸಾಮಾನ್ಯವಾಗಿ
ಕರೆಯಲಾಗುವ ಗ್ರಹ ………………..ಶುಕ್ರ
೨. (i) ಕೆಳಗಿನ ಒಗಟನ್ನು ಬಿಡಿಸಿ.
ನನ್ನ ಮೊದಲ ಅಕ್ಷರ MAN ನಲ್ಲಿದೆ. ಆದರೆ CAN ನಲ್ಲಿ ಇಲ್ಲ.
ನನ್ನ ಎರಡನೆ ಅಕ್ಷರ ACE ನಲ್ಲಿದೆ ಮತ್ತು FAN ನಲ್ಲೂ ಇದೆ.
ನನ್ನ ಮೂರನೇ ಅಕ್ಷರ RAT ನಲ್ಲಿದೆ ಮತ್ತು CAT ನಲ್ಲಿ ಇಲ್ಲ.
ನನ್ನ ನಾಲ್ಕನೇ ಅಕ್ಷರ SUN ನಲ್ಲಿದೆ ಮತ್ತು FUN ನಲ್ಲಿ ಇಲ್ಲ.
ನಾನು ಸೂರ್ಯನ ಸುತ್ತ ಸುತ್ತುವ ಗ್ರಹ.
ಉತ್ತರ
MARS(ಮಂಗಳ)
ii) ಇದೇ ರೀತಿಯ ಎರಡು ಒಗಟುಗಳನ್ನು ನೀವು ರಚಿಸಿ.
1.ನನ್ನ ಮೇಲೆ ಜೀವಿಗಳು ಜೀವಿಸಲು ಅವಕಾಶ ಇದೆ ಬೇರೆ ಯಾವ ಗ್ರಹದಲ್ಲೂ ಇಲ್ಲ ನಾನು ಯಾರು?
ಉತ್ತರ
ಭೂಮಿ
2. ನನ್ನ ಮೊದಲ ಎರಡು ಅಕ್ಷರ heat ನಲ್ಲಿ ಇವೆ. Hit ನಲ್ಲಿ ಇಲ್ಲ.
ನನ್ನ ಮೂರನೇ ಅಕ್ಷರ car ನಲ್ಲಿ ಇದೆ. Cab ನಲ್ಲಿ ಇಲ್ಲ.
ನನ್ನ ಕೊನೆಯ ಎರಡು ಅಕ್ಷರ truth ನಲ್ಲಿ ಇವೆ. Myth ನಲ್ಲೂ ಇವೆ.
ನಾನು ಒಂದು ಗ್ರಹ.
ನಾನು ಯಾರು?
ಉತ್ತರ
(EARTH) ಭೂಮಿ
೩. ಈ ಕೆಳಗಿನವುಗಳಲ್ಲಿ ಯಾವುದು ನಮ್ಮ ಸೌರವ್ಯೂಹದ ಸದಸ್ಯ ಅಲ್ಲ ?
(i) ಸಿರಿಯಸ್ (ii) ಧೂಮಕೇತುಗಳು
(iii) ಕ್ಷುದ್ರಗ್ರಹಗಳು (iv) ಪ್ಲುಟೋ
ಉತ್ತರ
(i) ಸಿರಿಯಸ್
ಇದು ಒಂದು ನಕ್ಷತ್ರವಾಗಿದೆ.
೪. ಈ ಕೆಳಗಿನವುಗಳಲ್ಲಿ ಯಾವುದು ಸೂರ್ಯನ ಗ್ರಹವಲ್ಲ?
i) ಗುರು (ii) ಪ್ಲುಟೋ
(ii) ನೆಪ್ಚೂನ್ (iv) ಶನಿ
ಉತ್ತರ
(ii) ಪ್ಲುಟೋ
೫. ಧ್ರುವನಕ್ಷತ್ರ ಮತ್ತು ಸಿರಿಯಸ್ ಇವುಗಳಲ್ಲಿ ಯಾವುದು ಪ್ರಕಾಶಮಾನವಾದ ನಕ್ಷತ್ರ?
ಉತ್ತರ
ಸಿರಿಯಸ್ ಅತ್ಯಂತ ಪ್ರಕಾಶಮಾನವಾದ ನಕ್ಷತ್ರವಾಗಿದೆ.
೬. ಕಲಾಕಾರನೊಬ್ಬನು ರಚಿಸಿದ ಸೌರವ್ಯೂಹದ ಚಿತ್ರವನ್ನು ಚಿತ್ರ ೧೨.೧೨ ರಲ್ಲಿ ನೀಡಲಾಗಿದೆ. ಗ್ರಹಗಳ ಅನುಕ್ರಮ ಜೋಡಣೆ ಸರಿಯಾಗಿದೆಯೇ? ಸರಿಯಾಗಿಲ್ಲದಿದ್ದಲ್ಲಿ, ಕೊಟ್ಟಿರುವ ಬಾಕ್ಸ್ನಲ್ಲಿ ಚಿತ್ರದಲ್ಲಿನ ಸರಿಯಾದ ಕ್ರಮವನ್ನು ಬರೆಯಿರಿ.
ಗ್ರಹಗಳ ಅನುಕ್ರಮ ಜೋಡಣೆ ಸರಿಯಾಗಿಲ್ಲ. ಸರಿಯಾದ ಕ್ರಮ ಈ ಕೆಳಗಿನ ಚಿತ್ರದಲ್ಲಿದೆ.
೭. ನಕ್ಷತ್ರಗಳಿರುವ ರಾತ್ರಿಯಾಕಾಶದ ಒಂದು ಭಾಗವನ್ನು ಚಿತ್ರ ೧೨.೧೩ ರಲ್ಲಿ ತೋರಿಸಲಾಗಿದೆ. ಎಚ್ಚರಿಕೆಯಿಂದ ನೋಡಿ ಮತ್ತು ವಿನ್ಯಾಸಗಳನ್ನು ರೂಪಿಸುವ ನಕ್ಷತ್ರಗಳ ಗುಂಪುಗಳನ್ನು ಗುರುತಿಸಿ. – ಬಿಗ್ ಡಿಪ್ಪರ್ ಮತ್ತು ಲಿಟಲ್ ಡಿಪ್ಪರ್ ಈ ವಿನ್ಯಾಸಗಳಲ್ಲಿನ ನಕ್ಷತ್ರಗಳನ್ನು ಸೇರಿಸಲು ಗೆರೆಗಳನ್ನು ಎಳೆಯಿರಿ. ಮತ್ತು ಅವುಗಳನ್ನು ಹೆಸರಿಸಿ. ಧ್ರುವ ನಕ್ಷತ್ರವನ್ನು ಗುರುತಿಸಿ ಮತ್ತು ಹೆಸರು ಬರೆಯಿರಿ. ಸಹಾಯಕ್ಕಾಗಿ ನೀವು ಚಿತ್ರ ೧೨.೪ ನ್ನು ಪರಾಮರ್ಶಿಸಬಹುದು.
೮. ರಾತ್ರಿಯಾಕಾಶದ ಒಂದು ಭಾಗವನ್ನು ೧೨.೧೪ ರಲ್ಲಿ ತೋರಿಸಲಾಗಿದೆ. ಓರಿಯನ್‌ಗಾಗಿ ರೇಖೆಗಳನ್ನು ಎಳೆದು ನಕ್ಷತ್ರಗಳನ್ನು ಸೇರಿಸಿ ಮತ್ತು ಸಿರಿಯಸ್ ನಕ್ಷತ್ರವನ್ನು ಗುರುತಿಸಿ, ಹೆಸರು ಬರೆಯಿರಿ. ಇದಕ್ಕಾಗಿ ನೀವು ಚಿತ್ರ ೧೨.೩ ನ್ನು ಪರಾಮರ್ಶಿಸಬಹುದು.
೯. ನಕ್ಷತ್ರಗಳು ಮುಂಜಾನೆ ಮರೆಯಾಗುವುದನ್ನು ಮತ್ತು ಮುಸ್ಸಂಜೆಯಲ್ಲಿ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು. ಹಗಲಿನಲ್ಲಿ ನಾವು ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ. ಏಕೆ ಎಂದು ವಿವರಿಸಿ.
ಹಗಲಿನ ಸಮಯದಲ್ಲಿ ಸೂರ್ಯನ ತೀವ್ರ ಪ್ರಖರತೆಯಿಂದಾಗಿ ಇತರ ನಕ್ಷತ್ರಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಸೂರ್ಯ ಇತರ ನಕ್ಷತ್ರಗಳಿಗಿಂತ ನಮಗೆ ಹೆಚ್ಚು ಹತ್ತಿರವಾಗಿರುವುದರಿಂದ ಅದು ನಕ್ಷತ್ರಗಳಿಗಿಂತ ದೊಡ್ಡದಾಗಿ ಕಾಣುತ್ತದೆ. ಹೆಚ್ಚು ಹತ್ತಿರವಿರುವ ಈ ಸೂರ್ಯ ಎಂಬ ನಕ್ಷತ್ರವು ಬೇರೆ ಕೆಲವು ನಕ್ಷತ್ರಗಳಿಗಿಂತ ಚಿಕ್ಕದಾಗಿದ್ದರೂ, ಅದು ನಮಗೆ ಹತ್ತಿರವಿರುವುದರಿಂದ ಅದರ ಉಜ್ವಲ ಬೆಳಕಿನಿಂದಾಗಿ ಬೇರೆ ನಕ್ಷತ್ರಗಳು ನಮಗೆ ಕಾಣುವುದಿಲ್ಲ. ಮುಸ್ಸಂಜೆಯಲ್ಲಿ, ಸೂರ್ಯ ಮುಳುಗಿ ಆಕಾಶವು ಕತ್ತಲೆಯಾದಾಗ, ನಕ್ಷತ್ರಗಳು ಮತ್ತೆ ಗೋಚರಿಸುತ್ತವೆ.
೧೦. ನಿರ್ಮಲ ರಾತ್ರಿಯಾಕಾಶದಲ್ಲಿ ೨-೩ ಗಂಟೆಗಳ ಅವಧಿಯಲ್ಲಿ ೩-೪ ಬಾರಿ ಬಿಗ್ ಡಿಪ್ಪರ್‌ನ್ನು ವೀಕ್ಷಿಸಲು ಪ್ರಯತ್ನಿಸಿ. ಪ್ರತೀ ಬಾರಿಯೂ ಧ್ರುವನಕ್ಷತ್ರವನ್ನು ಗುರುತಿಸಿ. ಬಿಗ್ ಡಿಪ್ಪರ್ ಚಲಿಸಿದ ಹಾಗೆ ಕಾಣುತ್ತಿದೆಯೇ? ಪ್ರತೀ ಬಾರಿಯೂ ಸಮಯವನ್ನು ನಮೂದಿಸಿ, ಇದನ್ನು ವಿವರಿಸುವ ರೇಖಾಚಿತ್ರವನ್ನು ಬರೆಯಿರಿ.
ಭೂಮಿಯ ತಿರುಗುವಿಕೆಯಿಂದಾಗಿ ಬಿಗ್ ಡಿಪ್ಪರ್ ಧ್ರುವ ನಕ್ಷತ್ರದ ಸುತ್ತಲೂ ಚಲಿಸುವಂತೆ ಕಾಣುತ್ತದೆ. ರೇಖಾಚಿತ್ರವು ಬಿಗ್ ಡಿಪ್ಪರ್ ಅನ್ನು ಆಕಾಶದಲ್ಲಿ ವಿಭಿನ್ನ ಸ್ಥಾನಗಳಲ್ಲಿ ತೋರಿಸುತ್ತದೆ, ಇದು ಧ್ರುವ ನಕ್ಷತ್ರದ ಸುತ್ತ ಅದರ ಸ್ಪಷ್ಟ ಚಲನೆಯನ್ನು ಸೂಚಿಸುತ್ತದೆ.
೧೧. ರಾತ್ರಿಯಾಕಾಶವನ್ನು ಕಲ್ಪಿಸಿಕೊಂಡು ಒಂದು ಕವನ ಅಥವಾ ಕಥೆ ಬರೆಯಿರಿ.
ಹೊಲದಲಿ ರೈತನು ಬೆಳೆಯನು
ಕಾಯುತ ಮಲಗಿಹನು
ಮಲಗುತ ಆಕಾಶವ ನೋಡುತ
ನಕ್ಷತ್ರಗಳನ್ನು ಎಣಿಸಿಹನು
ಚುಕ್ಕಿಗಳ ಅಂದದ ಆಕಾಶವ
ಕಣ್ಣಲಿ ತುಂಬಿಹನು
ಚುಕ್ಕಿ ಗಳ ನಡುವೆ ಇರುವ ಚಂದ್ರ
ಬೆಳದಿಂಗಳನು ಚೆಲ್ಲಿಹನು
ಮಿನುಗುವ ಚುಕ್ಕಿ ಓಡುವ ಚುಕ್ಕಿ
ಗುಂಪಿನಚುಕ್ಕಿ ಸಣ್ಣ ಚುಕ್ಕಿ ದೊಡ್ಡ ಚುಕ್ಕಿ
ರಾತ್ರಿಯ ಆಕಾಶವ ಬೆಳಗಿಹರು
ಜಗತ್ತೇ ವಿಸ್ಮಯ ಆಕಾಶವು ವಿಸ್ಮಯ