ಕುತೂಹಲ 6ನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ 7 ಪ್ರಶ್ನೋತ್ತರಗಳು ನೋಟ್ಸ್.
ಕುತೂಹಲ 6ನೇ ತರಗತಿ ವಿಜ್ಞಾನ ಭಾಗ-2 ನೋಟ್ಸ್ ಪ್ರಶ್ನೋತ್ತರಗಳು Pdf, kutoohala 6th Standard Science Notes Question Answer Guide Pdf Download in Kannada Medium 2025 Kseeb Solutions For Class 6 kutuhala Science Notes in Kannada Pdf 6th Standard Vignana notes Question Answer 6th Class Science Notes 6th Standard Science Kannada Medium Question and Answer state Syllabus Class 6 Science Notes Pdf karnataka State Board 6th Science Notes 6th Std Science Notes
pdf click below blue letters
6ನೇ ತರಗತಿ ವಿಜ್ಞಾನ ಭಾಗ-2 ಪ್ರಶ್ನೋತ್ತರಗಳು
ಕುತೂಹಲ ವಿಜ್ಞಾನ ಪಠ್ಯಪುಸ್ತಕ
ಅಧ್ಯಾಯ 7
ತಾಪ ಮತ್ತು ಅದರ ಮಾಪನ
ನಮ್ಮ ಕಲಿಕೆಯನ್ನು ವಿಸ್ತರಿಸಿಕೊಳ್ಳೋಣ
೧. ಆರೋಗ್ಯವಂತ ಮನುಷ್ಯನ ಸಾಮಾನ್ಯ ತಾಪವು 37.0 °C ಕ್ಕೆ ಸಮೀಪದಲ್ಲಿದೆ.
(i) 98.6 °C (ii) 37.0 °C
(iii) 32.0 °C (iv) 27.0 °C
2. 37 °C ತಾಪಕ್ಕೆ ಸಮನಾದ ತಾಪ ..98.6 °F
(i) 97.4 °F (ii) 97.6 °F
(iii) 98.4 °F (iv) 98.6 °F
೩. ಖಾಲಿ ಜಾಗಗಳನ್ನು ಭರ್ತಿ ಮಾಡಿ.
(i) ಒಂದು ವ್ಯವಸ್ಥೆಯ ಬಿಸಿ ಅಥವಾ ತಂಪನ್ನು ಅದರ ತಾಪ ವು ನಿರ್ಧರಿಸುತ್ತದೆ.
(ii) ಮಂಜುಗಡ್ಡೆಯಷ್ಟು ತಣ್ಣನೆಯ ನೀರಿನ ತಾಪವನ್ನು ವೈದ್ಯಕೀಯ ತಾಪಮಾಪಕದಿಂದ ಅಳೆಯಲು
ಸಾಧ್ಯವಿಲ್ಲ.
(iii) ತಾಪದ ಏಕಮಾನ ಡಿಗ್ರಿ ಸೆಲ್ಸಿಯಸ್ ಆಗಿದೆ.
೪) ಪ್ರಯೋಗಶಾಲಾ ತಾಪಮಾಪಕದ ವ್ಯಾಪ್ತಿಯು ಸಾಮಾನ್ಯವಾಗಿ -10 °C ಯಿಂದ 110 °C.
(i) 10 °C ¬ಯಿಂದ 100 °C (ii) -10 °C ¬ಯಿಂದ 110 °C
(iii) 32 °C ¬ಯಿಂದ 45 °C (iv) 35 °C ¬ಯಿಂದ 42 °C
೫. ಚಿತ್ರ 7.6 ರಲ್ಲಿ ತೋರಿಸಿರುವಂತೆ ನೀರಿನ ತಾಪವನ್ನು ಅಳೆಯಲು ನಾಲ್ವರು ವಿದ್ಯಾರ್ಥಿಗಳು ಪ್ರಯೋಗಶಾಲಾ ತಾಪಮಾಪಕವನ್ನು ಬಳಸಿದರು – ತಾಪವನ್ನು ಅಳೆಯಲು ಯಾರು ಸರಿಯಾದ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ನೀವು ಭಾವಿಸುತ್ತೀರಿ?
(i) ವಿದ್ಯಾರ್ಥಿ ೧ (ii) ವಿದ್ಯಾರ್ಥಿ ೨
(iii) ವಿದ್ಯಾರ್ಥಿ ೩ (iv) ವಿದ್ಯಾರ್ಥಿ ೪
ಉತ್ತರ
(ii) ವಿದ್ಯಾರ್ಥಿ ೨
೬. ಕೆಳಗೆ ಬರೆಯಲಾದ ತಾಪಕ್ಕೆ ಅನುಗುಣವಾಗಿ ತಾಪಮಾಪಕಗಳ ರೇಖಾಚಿತ್ರಗಳ ಮೇಲೆ ಕೆಂಪು
ಸ್ತಂಭವನ್ನು ತೋರಿಸಲು ಬಣ್ಣ ಹಾಕಿರಿ (ಚಿತ್ರ 7.7).
೭. ಚಿತ್ರ ೭.೮ರಲ್ಲಿ ತೋರಿಸಿರುವ ತಾಪಮಾಪಕದ ಭಾಗವನ್ನು ಗಮನಿಸಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
ಚಿತ್ರ ೭.೮
(i) ಇದು ಯಾವ ರೀತಿಯ ತಾಪಮಾಪಕ?
ಉತ್ತರ
ಇದು ಪ್ರಯೋಗ ಶಾಲಾ ತಾಪಮಾಪಕ
(ii) ಈ ತಾಪಮಾಪಕದಲ್ಲಿನ ತಾಪದ ಅಳತೆ ಎಷ್ಟು?
ಉತ್ತರ
ಈ ತಾಪಮಾಪಕದಲ್ಲಿನ ತಾಪದ ಅಳತೆ
26⁰C.
(iii) ಈ ತಾಪಮಾಪಕ ಅಳೆಯಬಹುದಾದ ಅತ್ಯಂತ ಚಿಕ್ಕ ಮೌಲ್ಯ ಯಾವುದು?
ಉತ್ತರ
-10 °C
೮. ನಮ್ಮ ದೇಹದ ಉಷ್ಣತೆಯನ್ನು ಅಳೆಯಲು ಪ್ರಯೋಗಶಾಲಾ ತಾಪಮಾಪಕವನ್ನು ಬಳಸಲಾಗುವುದಿಲ್ಲ. ಇದಕ್ಕೆ ಕಾರಣವನ್ನು ಕೊಡಿ.
ಏಕೆಂದರೆ ಪ್ರಯೋಗ ಶಾಲಾ ತಾಪಮಾಪಕದಲ್ಲಿ ಪಾದರಸವು ಬಹಳಷ್ಟು ಸಮಯ ಕೊಳವೆಯಲ್ಲಿ ಉಳಿಯುವುದಿಲ್ಲ. ವೈದ್ಯಕೀಯ ತಾಪಮಾಪಕದಲ್ಲಿ ಬುರುಡೆಯಿಂದ ಪ್ರಾರಂಭದಲ್ಲಿ ಕೊಳವೆಯಲ್ಲಿ ಡೊಂಕು ಇರುತ್ತದೆ. ಇದರಿಂದ ಪಾದರಸವು ಬೇಗನೆ ಕೆಳಗೆ ಇಳಿಯುವುದಿಲ್ಲ. ವೈದ್ಯರು ರೋಗಿಯ ಉಷ್ಣತೆಯನ್ನು ನಿಖರವಾಗಿ ಪತ್ತೆ ಹಚ್ಚುವುದು ಸಾಧ್ಯವಾಗುತ್ತದೆ. ಆದರೆ ಪ್ರಯೋಗ ಶಾಲಾ ತಾಪಮಾಪಕದಲ್ಲಿ ಈ ವ್ಯವಸ್ಥೆ ಇರುವುದಿಲ್ಲ.
೯. ಅನಾರೋಗ್ಯದಿಂದಾಗಿ ವೈಷ್ಣವಿಯು ಶಾಲೆಗೆ ಹೋಗಿಲ್ಲ. ಕೋಷ್ಟಕ 7.4 ರಲ್ಲಿ ತೋರಿಸಿರುವಂತೆ ಅವಳ
ತಾಯಿ ಮೂರು ದಿನಗಳವರೆಗೆ ಅವಳ ದೇಹದ ತಾಪಮಾನದ ದಾಖಲೆಯನ್ನು ಇಟ್ಟುಕೊಂಡಿದ್ದಾರೆ.
i) ವೈಷ್ಣವಿಯ ದಾಖಲಾದ ಅತಿ ಹೆಚ್ಚು ತಾಪ ಯಾವುದು?
ವೈಷ್ಣವಿಯ ದಾಖಲಾದ ಅತಿ ಹೆಚ್ಚು ತಾಪ 40⁰ C.
ii) ವೈಷ್ಣವಿಯ ಗರಿಷ್ಟ ತಾಪವು ಯಾವ ದಿನ ಮತ್ತು ಯಾವ ಸಮಯದಲ್ಲಿ ದಾಖಲಾಗಿದೆ?
ವೈಷ್ಣವಿಯ ಗರಿಷ್ಟ ತಾಪವು ದಿನ ಒಂದರಂದು ಸಂಜೆ 7:00 ಕ್ಕೆ ದಾಖಲಾಗಿದೆ.
iii) ಯಾವ ದಿನದಂದು ವೈಷ್ಣವಿಯ ತಾಪವು ಸಾಮಾನ್ಯ ಸ್ಥಿತಿಗೆ ಮರಳಿದೆ?
ದಿನ ಮೂರರಂದು ವೈಷ್ಣವಿಯ ತಾಪವು ಸಾಮಾನ್ಯ ಸ್ಥಿತಿಗೆ ಮರಳಿದೆ.
10. ನೀವು 25.5 °C ತಾಪಮಾನವನ್ನು ಅಳೆಯಬೇಕಾದರೆ, ಈ ಕೆಳಗಿನ ಮೂರು ತಾಪಮಾಪಕಗಳಲ್ಲಿ ಯಾವುದನ್ನು ನೀವು ಬಳಸುತ್ತೀರಿ (ಚಿತ್ರ 7.9)? ವಿವರಿಸಿ.
ಚಿತ್ರ 7.9 ಬಿ ತಾಪಮಾಪಕವನ್ನು ಬಳಸುತ್ತೇವೆ.
೧೧. ಚಿತ್ರ 7.10 ರಲ್ಲಿನ ತಾಪಮಾಪಕದಲ್ಲಿ ತೋರಿಸಲಾದ ತಾಪಮಾನ.
i) 28.0 °C
ii) 27.5 °C
iii) 26.5 °C
iv) 25.3 °C
ಉತ್ತರ
ii) 27.5 °C
೧೨. ಒಂದು ಪ್ರಯೋಗಶಾಲಾ ತಾಪಮಾಪಕವು 0⁰C ಮತ್ತು 100 °C ನಡುವೆ 50ವಿಭಾಗಗಳನ್ನು ಹೊಂದಿದೆ.
ಈ ಪ್ರತಿಯೊಂದು ವಿಭಾಗವು ಎಷ್ಟು ತಾಪವನ್ನು ಅಳೆಯುತ್ತದೆ?
ಪ್ರತಿಯೊಂದು ವಿಭಾಗವು 2⁰C ತಾಪವನ್ನು ಅಳೆಯುತ್ತದೆ.
೧೩. ಅತ್ಯಂತ ಚಿಕ್ಕ ವಿಭಾಗವು ೦.೫ ಲಿಅ ಅನ್ನು ಅಳೆಯಬಹುದಾದ ತಾಪಮಾಪಕದ ಮಾಪನವನ್ನು ಬರೆಯಿರಿ. ನೀವು 10⁰C ಮತ್ತು 20⁰C ನಡುವಿನ ಭಾಗವನ್ನು ಮಾತ್ರ ಬರೆಯಬಹುದು.
೧೪. ಆಕೆಗೆ 101 ಡಿಗ್ರಿ ಜ್ವರವಿದೆ ಎಂದು ಯಾರೋ ಒಬ್ಬರು ನಿಮಗೆ ಹೇಳುತ್ತಾರೆ. ಅದು ಸೆಲ್ಸಿಯಸ್ ಮಾಪಕದಲ್ಲೋ ಅಥವಾ ಫ್ಯಾರನ್ಹೀಟ್ ಮಾಪಕದಲ್ಲೋ? ನೀವು ಹೇಗೆ ಅರ್ಥೈಸಿಕೊಳ್ಳುವಿರಿ?
101 ಡಿಗ್ರಿ ಜ್ವರವಿದೆ ಎಂದು ಫಾರಂ ಹೀಟ್ ಮಾಪನದಲ್ಲಿ ಹೇಳಿದ್ದಾರೆ. ಮಾನವನ ದೇಹದ ಸಾಮಾನ್ಯ ಉಷ್ಣತೆ 37 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದಕ್ಕೆ ಸಮಾನವಾಗಿ ಫ್ಯಾರನ್ ಹೀಟ್ ಮಾಪಕದಲ್ಲಿ 98.6 ಡಿಗ್ರಿ ಫ್ಯಾರನ್ ಹೀಟ್ ಆಗಿರುತ್ತದೆ. ಇದರ ಪ್ರಕಾರ 101 ಡಿಗ್ರಿ ಫ್ಯಾರನ್ ಹೀಟ್ ಎಂದರೆ ಸೆಲ್ಸಿಯಸ್ ಮಾಪಕದಲ್ಲಿ 39.4 ಡಿಗ್ರಿ ಜ್ವರವಿದೆ ಎಂದು ಅರ್ಥವಾಗುತ್ತದೆ.