ದಾವಣಗೆರೆ ಮಹಾನಗರ ಪಾಲಿಕೆಯು ಸ್ಥಿರಾಸ್ತಿಗಳನ್ನು ಈ ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ಈ ಖಾತೆಗಳನ್ನು ನೀಡುವ ನಿಟ್ಟಿನಲ್ಲಿ ಫೆಬ್ರವರಿ 13 ರಿಂದ 15 ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಈ ಆಸ್ತಿ ಖಾತಾ ಆಂದೋಲನ ಹಾಗೂ ಆಸ್ತಿ ತೆರಿಗೆ ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ಕಾರ್ಯಕ್ರಮ ಆಯೋಜಿಸಿದೆ.
ಸಾರ್ವಜನಿಕರು ಈ ಆಸ್ತಿ ಖಾತೆಗಳನ್ನು ಪಡೆಯಲು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮನೆಯ ಜಿಪಿಎಸ್ ಪತ್ರ ನೋಂದಣಿ ಕ್ರಯ ಪತ್ರ 202324ನೇ ಸಾಲಿನವರೆಗಿನ ಇಸಿ ಆಸ್ತಿ ನೀರು ಮತ್ತು ಒಳಚರಂಡಿ ಶುಲ್ಕದ ಚಲನ್ ಗಳು ಭೂ ಪರಿವರ್ತನೆಯ ಆದೇಶ ಇಲ್ಲದಿದ್ದಲ್ಲಿ ಪಹಣಿ ಅನುಮೋದಿತ ಬಡಾವಣೆ ನಕ್ಷೆ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಪರವಾನಗಿ ವಿದ್ಯುತ್ ಬಿಲ್ ಹಾರರ್ ನಂಬರ್ ಗಳನ್ನು ಸಲ್ಲಿಸಬೇಕಾಗುತ್ತದೆ ತಮ್ಮ ವಾರ್ಡ್ ವ್ಯಾಪ್ತಿಯ ಕಚೇರಿ ಹಾಗೂ ವಾರ್ಡ್ನಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ನೇರವಾಗಿ ಇ-ಖಾತೆಗಳನ್ನು ಪಡೆದುಕೊಳ್ಳಬಹುದು.
ಮಾಹಿತಿಗೆ ವಲಯ ಕಚೇರಿ ಒಂದರ ಆಯುಕ್ತ ಸವಿತಾ ಎಂಜಿ ಮೊಬೈಲ್ ಸಂಖ್ಯೆ 9880809146.
ವಲಯ ಕಛೇರಿ ಎರಡರ ನಾಶೀರ್ ಭಾಷಾ 9448565904 ವಲಯ ಕಛೇರಿ ಮೂರರ ನಾಗರಾಜ್ ಕೆ 948268675 ಅವರನ್ನು ಸಂಪರ್ಕಿಸಬಹುದು.