ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 1  ಎಲ್ಲಾ ಅಧ್ಯಾಯಗಳ ಉತ್ತರಗಳು

If you looking for social science 8th standard question answers this is the website that provides you all answers to all the chapters in the social science class 8 Karnataka state syllabus good luck.

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 1

ಎಲ್ಲಾ ಅಧ್ಯಾಯಗಳ ಉತ್ತರಗಳು

ಪಾಠ 1

ಆಧಾರಗಳು.

1. ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ

1. ಸಾಹಿತ್ಯ ಆಧಾರಗಳಲ್ಲಿ ಸಾಹಿತ್ಯಕ ಆಧಾರಗಳು ಮತ್ತು ಪ್ರಾಕ್ತನ ಆಧಾರಗಳು ಎಂಬ ಎರಡು ವಿಧಗಳಿವೆ.

2. ಅಶ್ವಘೋಷನ ಬುದ್ಧ ಚರಿತ ವು ಸಾಹಿತ್ಯಕ ಆಧಾರವಾಗಿದೆ.

3. ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ ಹಲ್ಮಿಡಿ ಶಾಸನ

II. ಸಂಕ್ಷಿಪ್ತವಾಗಿ ಉತ್ತರಿಸಿ

4. ಆಧಾರ ಎಂದರೇನು?

ಉತ್ತರ:-  ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳು. ಇವುಗಳು ಆ ಕಾಲಮಾನದ ವಿವರವನ್ನು ನೀಡುತ್ತವೆ.

5. ಇತಿಹಾಸಕ್ಕೆ ಸಂಬಂಧಿಸಿದ ದೇಶಿ ಮತ್ತು ವಿದೇಶಿ ಸಾಹಿತ್ಯಕ ಆಧಾರಗಳಿಗೆ ಎರಡು ಉದಾಹರಣೆಗಳನ್ನು ನೀಡಿ.

ಉತ್ತರ :-ದೇಶಿ ಸಾಹಿತ್ಯಕ ಆಧಾರಗಳಿಗೆ ಉದಾಹರಣೆಗಳು—ವಿಶಾಖದತ್ತನ “ಮುದ್ರ ರಾಕ್ಷಸ” ಕಲ್ಹಣನ “ರಾಜತರಂಗಿಣಿ”.
ವಿದೇಶಿ ಸಾಹಿತ್ಯಕ ಆಧಾರಗಳಿಗೆ ಉದಾಹರಣೆಗಳು—–ಮೆಗಸ್ತಾನಿಸನ “ಇಂಡಿಕಾ”, ಹ್ಯೂ ಯನ್ ತ್ಸಾಂಗನ “ಸಿ-ಯು-ಕಿ.

6. ಪ್ರಾಕ್ತನ ಆಧಾರ ಎಂದರೇನು? ಉದಾಹರಣೆ ಸಹಿತ ವಿವರಿಸಿ.

ಉತ್ತರ:- ಸಂಶೋಧನೆ ಮತ್ತು ಉತ್ಖನನಗಳಿಂದ ದೊರೆತಿರುವ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ-ಕುಡಿಕೆ ಹಾಗೂ ಇನ್ನಿತರ ಪಳೆಯುಳಿಕೆಗಳನ್ನು ಪ್ರಾಕ್ತನ ಆಧಾರಗಳೆಂದು ಕರೆಯುತ್ತೇವೆ.
ಉದಾಹರಣೆಗೆ, ಮೌರ್ಯ ವಂಶದ ರಾಜ ಅಶೋಕ ಕಲ್ಲು ಬಂಡೆಗಳ ಮೇಲೆ, ಕಲ್ಲು ಹಾಸಿನ ಮೇಲೆ ಶಾಸನಗಳನ್ನು ಕೆತ್ತಿಸಿದ್ದಾನೆ. ಈ ಶಾಸನಗಳಿಂದ ಅನೇಕ ಸಂಗತಿಗಳು ತಿಳಿದು ಬರುತ್ತದೆ.

ಎಂಟನೇ ತರಗತಿ

ಅಧ್ಯಾಯ 2,

“ಭರತ ವರ್ಷ” ಅಭ್ಯಾಸ-ಪ್ರಶ್ನೋತ್ತರಗಳು

ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ

1 ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.

2 ಬೂದಿಯ ಕುರುಹುಗಳು ಕರ್ನೂಲಿನ ಗವಿಗಳಲ್ಲಿ  ದೊರೆತಿವೆ.

3 ಮಧ್ಯಶಿಲಾಯುಗದ ಪರಿಕರಗಳನ್ನು ಸೂಕ್ಷ್ಮ ಶಿಲಾಪರಿಕರಗಳು  ಎಂದು ಕರೆಯುತ್ತಾರೆ.

|| ಸಂಕ್ಷಿಪ್ತವಾಗಿ ಉತ್ತರಿಸಿ.

4 ಭಾರತದ ಭೂ ಮೇಲ್ಮೈ ರಚನೆಯನ್ನು ಸ್ಕೂಲವಾಗಿ ತಿಳಿಸಿ ?

ಉತ್ತರ:- ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ಭಾರತವು ಒಂದು ಉಪಖಂಡ. ಮೂರು ಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತವಾಗಿರುವುದರಿಂದ ಇದೊಂದು ಪರ್ಯಾಯ ದ್ವೀಪವಾಗಿದೆ.

5 ಭಾರತದ ಮೇಲೆ ದಾಳಿಗಳು ಯಾವ ಕಣಿವೆಗಳ ಮೂಲಕ ಸಂಭವಿಸಿವೆ ?

ಉತ್ತರ:- ಭಾರತದ ಮೇಲೆ ದಾಳಿಗಳು ವಾಯುವ್ಯ ಭಾರತದಲ್ಲಿನ ಬೊಲಾನ್ ಮತ್ತು ಖೈಬರ್ ಕಣಿವೆಗಳ ಮೂಲಕ ಸಂಭವಿಸಿವೆ.

6 ಪ್ರಾಗೈತಿಹಾಸಿಕ ಕಾಲ ಎಂದರೇನು ?

ಉತ್ತರ:- ಮಾನವನು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು ಪ್ರಾಗೈತಿಹಾಸಿಕ ಕಾಲ ಎನ್ನುತ್ತಾರೆ.

7 ಪಶು ಸಂಗೋಪನೆ ಮತ್ತು ಹೈನುಗಾರಿಕೆಯು ಹೇಗೆ ಪ್ರಾರಂಭವಾಯಿತು ?

ಉತ್ತರ:- ಸುಮಾರು 12 ಸಾವಿರ ವರ್ಷಗಳ ಹಿಂದೆ ಭೂಮಿಯ ತಾಪಮಾನ ಹೆಚ್ಚಾಗಿ ಇದು ಹಲವೆಡೆ ಹುಲ್ಲುಗಾವಲುಗಳು ಬೆಳೆಯಲು ಕಾರಣವಾಯಿತು. ಪ್ರಾಣಿ ಪಕ್ಷಿಗಳು ಹಿಂದೆಂದೂ ಇಲ್ಲದಂತೆ ಸಂತಾನಾಭಿವೃದ್ಧಿ ಯಲ್ಲಿ ತೊಡಗಿ ಅವುಗಳ ಸಂತತಿ ಹೆಚ್ಚಾಗ ತೊಡಗಿದವು. ಈ ಸಂಕುಲಗಳ ಜೊತೆಯಲ್ಲಿಯೇ ಜಿಂಕೆ, ಕಡವೆ, ಕುರಿ, ಮೇಕೆ ಮುಂತಾದವುಗಳು ಹುಲ್ಲುಗಾವಲು ಪ್ರದೇಶದಲ್ಲಿ ಸಮೃದ್ಧಿಯಿಂದ ಬೆಳೆಯಲು ಕಾರಣವಾಯಿತು. ಇವನ್ನೇ ಬೇಟೆಯಾಡಿ ತಿನ್ನುತ್ತಿದ್ದ ಮಾನವನು ಅವುಗಳ ಸ್ವಭಾವ ಆಹಾರ ರೀತಿ ಮತ್ತು ಸಂತತಿಯ ವೃದ್ಧಿಯ ಬಗ್ಗೆ ತಿಳಿದುಕೊಂಡು ಅವುಗಳನ್ನು ತಂದು ಪೋಷಿಸತೊಡಗಿದನು. ಹೀಗೆ ಪಶು ಸಂಗೋಪನೆ ಮತ್ತು ಹೈನುಗಾರಿಕೆಯು ಪ್ರಾರಂಭವಾಯಿತು.

8. ಪ್ರಾಗೈತಿಹಾಸಿಕ ಕಾಲಘಟ್ಟವನ್ನು ವಿದ್ವಾಂಸರು ವಿವಿಧ ಹೆಸರುಗಳಿಂದ ಕರೆದಿದ್ದಾರೆ. ಅವು ಯಾವುವು?

ಉತ್ತರ:- ಪ್ರಾಗೈತಿಹಾಸಿಕ  ಕಾಲಘಟ್ಟವನ್ನು ವಿದ್ವಾಂಸರು 3 ವಿಭಾಗಗಳಾಗಿ ಮಾಡಿದ್ದಾರೆ.
1.ಹಳೆಯ ಶಿಲಾಯುಗ
2.ಮದ್ಯ ಶಿಲಾಯುಗ ಮತ್ತು
3.ನವ ಶಿಲಾಯುಗ
ಹಳೆಯ ಶಿಲಾಯುಗದ ಕಾಲಘಟ್ಟವನ್ನು ಮತ್ತೆ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಆದಿ,ಮಧ್ಯ ಮತ್ತು ಅಂತ್ಯ ಹಳೆ ಶಿಲಾಯುಗ.

ಅಧ್ಯಾಯ 3

ಸಿಂಧು ಸರಸ್ವತಿ ನಾಗರಿಕತೆ ಅಭ್ಯಾಸ ಪ್ರಶ್ನೋತ್ತರಗಳು

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1.   ಋಗ್ವೇದವು ಇಂದಿಗೆ ಎಷ್ಟು ವರ್ಷ ಹಿಂದಿನದು?

ಉತ್ತರ:- ಋಗ್ವೇದವು ಇಂದಿಗೆ ಸುಮಾರು 5000 ವರ್ಷ ಹಿಂದಿನದು.

2. ಸಪ್ತ ಸಿಂಧೂಗಳು ಯಾವುವು?

ಸಿಂಧೂ, ವಿತಸ್ತಾ(ಝೇಲಂ),ಅಸಿಕ್ನೀ(ಚೇನಾಬ್), ಪರುಷ್ಣೀ (ರಾವಿ), ವಿಪಾಶಾ(ಬಿಯಾಸ್), ಶುತುದ್ರಿ(ಸಟ್ಲೆಜ್), ಮತ್ತು ಸರಸ್ವತಿ ನದಿಗಳು ಸಪ್ತ ಸಿಂಧೂಗಳು.

3.   ಸಿಂಧೂ ನಾಗರಿಕತೆಯು ಯಾವ ವರ್ಷ ಪತ್ತೆಯಾಯಿತು?

ಉತ್ತರ:- ಕಾಲಿ ಬಂಗನ್ ಪ್ರದೇಶದಲ್ಲಿ ಸಿಂಧೂ ನಾಗರಿಕತೆಯು 1917ರಲ್ಲಿ ಪತ್ತೆಯಾಯಿತು.

4. ಹರಪ್ಪದಲ್ಲಿ ಪ್ರಾಚೀನ ನಾಗರಿಕತೆಯ ಕುರುಹುಗಳು ಯಾವ ವರ್ಷ ಪತ್ತೆಯಾದವು?

ಉತ್ತರ:- ಹರಪ್ಪದಲ್ಲಿ ಪ್ರಾಚೀನ ನಾಗರಿಕತೆಯ ಕುರುಹುಗಳು 1921ರ ಸುಮಾರಿನಲ್ಲಿ ಪತ್ತೆಯಾದವು.

5.  ಸಿಂಧೂ ನಾಗರಿಕತೆಯ ಮುದ್ರೆಗಳ ಮೇಲೆ ಕಂಡುಬಂದಿರುವ ಚಿಹ್ನೆಗಳು ಯಾವುವು?

ಉತ್ತರ:-  ವೃಷಭ, ಅಶ್ವತ್ಥದ ಎಲೆ, ಯೋಗ ಮತ್ತು ಇದುವರೆಗೂ ಓದಲಾಗದೆ ಇರುವ ಲಿಪಿ—-ಈ ಚಿಹ್ನೆಗಳು ಸಿಂಧೂ ನಾಗರಿಕತೆಯ ಮುದ್ರೆಗಳ ಮೇಲೆ ಕಂಡುಬಂದಿವೆ.

6. ಸಮುದ್ರವಾಣಿಜ್ಯದ ಪ್ರಮುಖ ಕೇಂದ್ರ ಯಾವುದಾಗಿತ್ತು?

ಉತ್ತರ:- ಲೋಥಾಲ್ ಸಮುದ್ರ ವಾಣಿಜ್ಯದ ಪ್ರಮುಖ ಕೇಂದ್ರವಾಗಿತ್ತು.

7.  ಆಗ ಇದ್ದ ಬಡಕಟ್ಟುಗಳನ್ನು ಪಟ್ಟಿಮಾಡಿ .

ಉತ್ತರ:- ಆಗ ಭರತ, ಪುರು, ಆನು, ದ್ರುಹ್ಯು, ತುರ್ವಶ ಮತ್ತು ಯದು  ಎಂಬ ಬುಡಕಟ್ಟುಗಳು ಇದ್ದವು.

8.  ಯಾವ ತಾಣದಲ್ಲಿ ಮಳೆನೀರನ್ನು ಸಂಗ್ರಹಿಸುವ ವ್ಯವಸ್ಥೆ ಇತ್ತು?
ಉತ್ತರ:- ಧೋಲಾವೀರಾ ಎಂಬ ತಾಣದಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಇತ್ತು.

9. ಆರ್ಯರ ಆಗಮನದ ಸಿದ್ಧಾಂತವನ್ನು ತಪ್ಪೆಂದು ಹೇಳಿದವರು ಯಾರು?

ಉತ್ತರ:- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆರ್ಯರ ಆಗಮನದ ಸಿದ್ಧಾಂತವನ್ನು ತಪ್ಪೆಂದು ಹೇಳಿದ್ದಾರೆ.

10. ಸಿಂಧೂ-ಸರಸ್ವತಿ ನಾಗರಿಕತೆಯ ನಗರಗಳ ಉದ್ದಳತೆಗಳು ಯಾವ ಗ್ರಂಥಗಳ ಉಲ್ಲೇಖಗಳಿಗೆ ಹೊಂದಿಕೊಳ್ಳುತ್ತವೆ?

ಉತ್ತರ:-  ಶತಪಥಬ್ರಾಹ್ಮಣ, ಶುಲ್ಬಸೂತ್ರಗಳೇ ಮೊದಲಾದ ವೈದಿಕ ಗ್ರಂಥಗಳು, ಬೃಹತ್ಸಂಹಿತೆಯಂಥ ವಿಶ್ವಕೋಶ—ಈ ಗ್ರಂಥಗಳಲ್ಲಿನ ಉಲ್ಲೇಖಗಳಿಗೆ ಸಿಂಧೂ ಸರಸ್ವತಿ ನಾಗರಿಕತೆಯ ನಗರಗಳ ಉದ್ದಳತೆಗಳು ಹೊಂದಿಕೊಳ್ಳುತ್ತವೆ.

ಕೆಳಗಿನ ಪ್ರಶ್ನೆಗಳಿಗೆ ಮೂರ್ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1.   ಸಿಂಧೂ-ಸರಸ್ವತಿ ನಾಗರಿಕತೆಯ ಕುರುಹುಗಳು ಹೇಗೆ ಪತ್ತೆಯಾದವು?

1921ರ ಸುಮಾರಿಗೆ ಪಂಜಾಬಿನ ಸಿಂಧೂಕಣಿವೆ ಪ್ರದೇಶದಲ್ಲಿ ರೈಲಿನ ಹಳಿಗಳನ್ನು ಜೋಡಿಸುವಾಗ ಅಲ್ಲಿಯ ತಂತ್ರಜ್ಞರು ಹರಪ್ಪದ ಪ್ರಾಚೀನ ನೆಲೆಗಳನ್ನು ಕಂಡರು. ಇದೇ ರೀತಿಯಲ್ಲಿ ಅಲ್ಲಿ ಹುದುಗಿಹೋಗಿದ್ದ ಅನೇಕ ಕಟ್ಟಡಗಳು ಪತ್ತೆಯಾದವು. ಅನಂತರ ಪಾಕ್ತನಶಾಸ್ತ್ರಜ್ಞರು ಈ ಪ್ರದೇಶದ ಬಗ್ಗೆ ಸಂಶೋಧನೆಯನ್ನು ಕೈಗೊಂಡರು.  ಅಲ್ಲಿ ಕಂಡುಬಂದ ಮತ್ತಿತರ ನೆಲೆಗಳಿಗೂ ಈ ಮೊದಲು ಸಿಕ್ಕ ನೆಲೆಗಳಿಗೂ ಸಾಮ್ಯವಿದ್ದ ಕಾರಣ ಅವುಗಳನ್ನು ಒಟ್ಟಾಗಿ ಹರಪ್ಪದ ನಾಗರಿಕತೆಯೆಂದು ಕರೆಯಲಾಯಿತು.

2.  ಸಿಂಧೂ-ಸರಸ್ವತಿ ನಾಗರಿಕತೆಯ ಉತ್ಖನನದಲ್ಲಿ ಯಾವ ಯಾವ ವಸ್ತುಗಳು ಸಿಕ್ಕಿವೆ?

ಉತ್ತರ:- ಸುಟ್ಟ ಇಟ್ಟಿಗೆಗಳು, ಬೆಂಕಿಯ ಒಲೆಗಳು,  ನೃತ್ಯ ಭಂಗಿಯ ಸ್ತ್ರೀ ವಿಗ್ರಹಗಳು, ಡೋಲು ಮತ್ತು  ತಂತಿ ವಾದ್ಯಗಳು, ಹಲವು ಬಗೆಯ ಮುಖವಾಡಗಳು, , ಲೋಹ ಮತ್ತು ಬೆಲೆ ಬಾಳುವ ಹರಳುಗಳು, ಬಗೆ ಬಗೆಯ ಚಿತ್ತಾರಗಳುಳ್ಳ ಮಡಕೆಗಳು , ಲೋಹ, ಶಂಖ ಮತ್ತಿತರ ಪದಾರ್ಥಗಳಿಂದ ಮಾಡಿದ ಬಳೆಗಳು, ಸ್ತ್ರೀಯರ ಮೂರ್ತಿಗಳು, ಮಣಿಗಳು, ಮುದ್ರೆಗಳು, ಪೂಜಾ ವೇದಿಕೆಗಳು,ಮಕ್ಕಳ ಆಟಿಕೆಗಳ ಪೈಕಿ ಬಂಡಿಗಳು, ಬುಗುರಿಗಳು, ಶಿಳ್ಳೆಗಳು—–ಈ ವಸ್ತುಗಳು ಸಿಂಧೂ-ಸರಸ್ವತಿ ನಾಗರಿಕತೆಯ ಉತ್ಖನನದಲ್ಲಿ ಸಿಕ್ಕಿವೆ.

3.  ಈ ನಾಗರೀಕತೆಯ ಸ್ನಾನದ ಕೊಳಗಳು ಹೇಗೆ ರಚನೆಯಾಗಿದ್ದವು?

ಉತ್ತರ:-
ಮೋಹೆಂಜೊದಾರೊ ಎಂಬ ಪಟ್ಟಣದಲ್ಲಿ  ಒಂದು ಸ್ನಾನದ ಕೊಳವು ದೊರೆತಿದ್ದು ಅದನ್ನು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಕೊಳದಿಂದ ನೀರಿನ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದರ ಎರಡೂ ಕಡೆಗಳಲ್ಲಿ ಇಳಿಯುವ ಮೆಟ್ಟಿಲುಗಳಿದ್ದು ಸುತ್ತಲೂ ಕೊಠಡಿಗಳಿವೆ.

4.   ಅವರು ಯಾವ ಯಾವ ಲೋಹಗಳನ್ನು  ಬಳಸುತ್ತಿದ್ದರು? ಅವುಗಳ ಕುರುಹುಗಳೇನು?

ಉತ್ತರ:-
ಕಂಚು, ತಾಮ್ರ ಮತ್ತು ಇತರ ಬೆಲೆಬಾಳುವ ಆಭರಣಗಳನ್ನು ಬಳಸಿದ್ದಿರಬೇಕು. ಇದರ ಕುರುಹುಗಳೆಂದರೆ ಅಲ್ಲಿ ದೊರೆತಿರುವ ನೃತ್ಯ ಭಂಗಿಯ ಸ್ತ್ರೀ ವಿಗ್ರಹಗಳು,  ತಂತಿ ವಾದ್ಯಗಳು, ಲೋಹ ಮತ್ತು ಬೆಲೆ ಬಾಳುವ ಹರಳುಗಳು,   ಲೋಹ, ಶಂಖ ಮತ್ತಿತರ ಪದಾರ್ಥಗಳಿಂದ ಮಾಡಿದ ಬಳೆಗಳು, ಸ್ತ್ರೀಯರ ಮೂರ್ತಿಗಳು.

5.   ಆರ್ಯ-ದ್ರಾವಿಡ ಮಿಥ್ಯೆಯನ್ನು ಯಾರು ಸೃಷ್ಟಿಸಿದರು?

ಉತ್ತರ:-
ಆರ್ಯ-ದ್ರಾವಿಡ ಮಿಥ್ಯೆಯನ್ನು ಬ್ರಿಟಿಷರು ಸೃಷ್ಟಿಸಿದರು. ಹೇಗೆಂದರೆ ಹತ್ತೊಂಬತ್ತನೆ ಶತಮಾನದ ಉತ್ತರಾರ್ಧದಲ್ಲಿ ಭಾರತೀಯರನ್ನು ಜಾತಿ-ಧರ್ಮಗಳ ಆಧಾರದಲ್ಲಿ ಒಡೆದು ಆಳುವ ಅನಿವಾರ್ಯತೆ ಬ್ರಿಟಿಷರಿಗೆ ಬಂತು. ಅದಕ್ಕಾಗಿ ಆರ್ಯ-ದ್ರಾವಿಡ ಎಂಬ ವಿಭಾಗವನ್ನು ಸೃಷ್ಟಿಸಲಾಯಿತು. ಕ್ರೈಸ್ತ ಮಿಷನರಿಗಳು ದ್ರಾವಿಡ ಎಂಬುದು ಜನಾಂಗಸೂಚಕ ಎಂದು ಮೊದಲು ಪ್ರತಿಪಾದಿಸಿದರು. ನಂತರ ಬಂದ ಕೆಲವು ಇತಿಹಾಸಕಾರರು ಇದನ್ನು ಪ್ರಚಾರಮಾಡುತ್ತ ಹೋದರು.

ಕೆಳಗಿನ ಪ್ರಶ್ನೆಗಳಿಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ.

1.  ಸಿಂಧೂ ಸರಸ್ವತಿ ನಾಗರಿಕತೆಯ ನಗರ ನಿರ್ಮಾಣ ಹೇಗಿತ್ತು ಎಂಬುದನ್ನು ವಿವರಿಸಿ.

ಉತ್ತರ:
ನಗರವನ್ನು ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಕ್ರಮಬದ್ಧವಾಗಿಯೂ ಉತ್ತಮ ರಸ್ತೆ ಹಾಗೂ ಚರಂಡಿಗಳನ್ನು ಕಾಣಬಹುದಾಗಿದೆ. ಒಂದು ಅಥವಾ ಎರಡು ಅಂತಸ್ತಿನ ಮನೆಯನ್ನು ಇಟ್ಟಿಗೆಯಿಂದ ಕಟ್ಟಿದ್ದು ಭದ್ರವಾಗಿದ್ದವು.

ಒಳಾಂಗಣದ ಸುತ್ತ ಕೊಠಡಿಗಳು ಹಾಗೂ ಸ್ನಾನದ ಇದ್ದವು, ಕೆಲವು ಮನೆಯಲ್ಲಿ ಬಾವಿಯೂ ಇತ್ತು . ಒಳಚರಂಡಿ ವ್ಯವಸ್ಥೆ ಚೆನ್ನಾಗಿತ್ತು. ಚಪ್ಪಡಿ ಕಲ್ಲುಗಳಿಂದ ಮುಚ್ಚಿದ್ದರು. ಮನೆಯ ಮೋರಿಯ ನೀರು ಸರಾಗವಾಗಿ ಹೊರ ಚರಂಡಿಗೆ ಹೋಗುವಂತೆ ಆಗಾಗ ಚರಂಡಿಯನ್ನು ಶುಚಿ ಮಾಡಲು ಅಲ್ಲಲ್ಲಿ ಸಣ್ಣ ಸಣ್ಣ ರಂಧ್ರಗಳ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

17. ಸಿಂಧೂ-ಸರಸ್ವತಿ ನಾಗರಿಕತೆಯ ಕುರುಹುಗಳು ವೈದಿಕ ಪರಂಪರೆಯ ಅವಿಚ್ಛಿನ್ನತೆಯನ್ನು ತೋರಿಸುತ್ತವೆ. ಹೇಗೆ ಎಂಬುದನ್ನು ವಿವರಿಸಿ

ಉತ್ತರ:
ಸಿಂಧು ಸರಸ್ವತಿ ನಾಗರಿಕತೆಯ ಸ್ಥಳಗಳಲ್ಲಿ ಹಲವಾರು ಚಿಹ್ನೆಗಳನ್ನು ಹೊಂದಿರುವ ಮುದ್ರೆಗಳು ದೊರೆತಿವೆ. ಆ ಮುದ್ರೆಗಳಲ್ಲಿ ಯೋಗದ ವಿವಿಧ ಆಸನಗಳನ್ನು, ನಮಸ್ಕಾರ ಮುದ್ರೆಯನ್ನು ತಳೆದಿರುವ ಅನೇಕ ಮೂರ್ತಿಗಳು ದೊರೆತಿವೆ. ಶಿವನ ವಾಹನವಾಗಿ, ಧರ್ಮದ ಪ್ರತೀಕವಾಗಿ ನಿಲ್ಲುವ ವೃಷಭ; ಯಜ್ಞವೃಕ್ಷ ಎಂದು, ಜಗದ್‌ವೃಕ್ಷ ಎಂದು ಪ್ರಸಿದ್ಧವಾದ ಅಶ್ವತ್ಥದ ಎಲೆ; ವೈದಿಕ ದರ್ಶನಗಳಲ್ಲಿ ಒಂದಾದ ಯೋಗವೇ ಮೊದಲಾದ ಸಂಗತಿಗಳು ಸಿಂಧೂ-ಸರಸ್ವತೀ ನಾಗರಿಕತೆಯಲ್ಲಿ ಕಂಡುಬರುವುದು ವೈದಿಕ ಪರಂಪರೆಯ ಅವಿಚ್ಛಿನ್ನತೆಯನ್ನು ತೋರಿಸುತ್ತದೆ.

18. ವೇದಕಾಲದ ಸಮಾಜವ್ಯವಸ್ಥೆ ಹೇಗಿತ್ತು?

ಉತ್ತರ:-
ವೇದಕಾಲದಲ್ಲಿ ಹಲವು ರೀತಿಯ ಮನೋಭಾವಗಳಿಗೆ, ಜೀವಿಕೆಯ ವಿಧಾನಗಳಿಗೆ ಅನುಸಾರವಾಗಿ ಬ್ರಾಹ್ಮಣ ಮತ್ತು ಕ್ಷತ್ರಿಯ ಎಂಬ ವರ್ಣಗಳಿದ್ದವು. ವಿದ್ಯೆಯ ಕಲಿಕೆ ಮತ್ತು ಕಲಿಸುವಿಕೆಗಳಲ್ಲಿ ಪ್ರಧಾನವಾಗಿ ತೊಡಗಿದ್ದವರು ಬ್ರಾಹ್ಮಣರಾದರೆ ಪಾಲನೆ ಮತ್ತು ರಕ್ಷಣೆಗಳ ಬಾಧ್ಯತೆ ಹೊತ್ತವರು ಕ್ಷತ್ರಿಯರು. ಮಿಕ್ಕಂತೆ ಸಾಮಾನ್ಯ ಜನರನ್ನು ‘ವಿಶಃ’ ಎಂದು ಕರೆಯಲಾಗುತ್ತಿತ್ತು. ವ್ಯಾಪಾರ-ವಾಣಿಜ್ಯಗಳಲ್ಲಿ ತೊಡಗಿದ ವೈಶ್ಯರು ಹಾಗೂ ಎಲ್ಲ ಹಂತಗಳಲ್ಲಿಯೂ ದುಡಿಯುವ ಶೂದ್ರರು ಮಿಕ್ಕೆರಡು ವರ್ಣಗಳು, ಆಳ್ವಿಕೆಯಲ್ಲಿ ಸೂಕ್ತ ಸಲಹೆ ನೀಡಲು ಸಭಾ ಮತ್ತು ಸಮಿತಿ ಎಂಬ ವ್ಯವಸ್ಥೆಗಳಿದ್ದವು, ಸಭೆಯು ಅನೇಕ ಜನಪ್ರತಿನಿಧಿಗಳನ್ನು ಹೊಂದಿದ್ದರೆ ಸಮಿತಿಯು ನಿರ್ದಿಷ್ಟರಾದ ಕೆಲವೇ ತಜ್ಞರನ್ನು ಹೊಂದಿರುತ್ತಿತ್ತು.ಪುರೋಹಿತ, ಸೇನಾನಿ, ಗ್ರಾಮಣಿ ಮೊದಲಾದವರು ರಾಜ್ಯಭಾರದಲ್ಲಿ ನೆರವಾಗುತ್ತಿದ್ದರು. ಪುರೋಹಿತರು ರಾಜನ ಗುರು ಮತ್ತು ಮಾರ್ಗದರ್ಶಿಗಳಾಗಿರುತ್ತಿದ್ದರು. ಸೇನಾನಿಗಳು ಹೆಚ್ಚಾಗಿ ಆಡಳಿತದಲ್ಲಿ, ಸಂಗ್ರಾಮದ ವ್ಯವಸ್ಥೆಯಲ್ಲಿ ತೊಡಗಿರುತ್ತಿದ್ದರು. ಗ್ರಾಮಣಿಗಳು ಆಡಳಿತದ ಮೂಲ ಘಟಕವಾದ ಹಳ್ಳಿಗಳಲ್ಲಿಯ ಜನಸಾಮಾನ್ಯರ ಹಿತವನ್ನು ನೋಡಿಕೊಳ್ಳುತ್ತಿದ್ದರು.

19.  ವೇದಕಾಲದ ಕೃಷಿ ಮತ್ತು ವ್ಯಾಪಾರಗಳ ಬದುಕು ಹೇಗಿತ್ತು?

ಉತ್ತರ:-
ಋಗ್ವೇದ ಕಾಲದಲ್ಲಿ ಬೇಸಾಯ ಪ್ರಮುಖ ವೃತ್ತಿಯಾಗಿತ್ತು. “ ಪಶು ಸಂಗೋಪನೆ” ಪೂರಕ ವೃತ್ತಿಯಾಗಿತ್ತು.
* ಅವರ ಆಹಾರ ಬಾರ್ಲಿ, ಅಕ್ಕಿ, ಮೀನು, ಮಾಂಸ ಅವರ ಆಹಾರವಾಗಿತ್ತು.
ಉತ್ತರ ವೇದಗಳ ಕಾಲದಲ್ಲಿ
ಪಶು ಸಂಗೋಪನೆ ಪ್ರಮುಖ ಕಸುಬಾಗಿತ್ತು.
* ಕುಶಲ ಕಸುಬುಗಳಾದ ಮರಗೆಲಸ, ಲೋಹಗಾರಿಕೆ, ನೇಯ್ಗೇ, ಮಡಕೆ ತಯಾರಿಕೆ, ಋಗ್ವೇದ ಕಾಲದಿಂದ ಬಳಕೆಯಲ್ಲಿತ್ತು.
* ಕಮ್ಮಾರ- ಆಯಾಸ್, ಅಕ್ಕಸಾಲಿಕ -ಹಿರಣ್ಯಕಾರ, ಕ್ಷೌರಿಕ- ವ್ಯಾಪ್ತ್ರಿ, ವೈದ್ಯ – ಬೀಷಿಕ ಎಂದು ಕರೆಯುತ್ತಿದ್ದರು.
* ಸಂಪತ್ತಿನ ಮೌಲ್ಯವಾದ ದನಗಳು ವ್ಯಾಪಾರ ವಿನಿಮಯದ ಮೂಲವಾಗಿದ್ದವು.
* ವಸ್ತು ವಿನಿಮಯ ವ್ಯಾಪರವೇ ಹೆಚ್ಚು ಪ್ರಚಲಿತದಲ್ಲಿತ್ತು.
* ಭತ್ತ ( ವ್ರಿಹಿ), ಬಾರ್ಲಿ( ಯವ), ದ್ವಿದಳ ಧಾನ್ಯಗಳು, ಎಳ್ಳು(ತಿಲ) ಮತ್ತು ಗೋಧಿಯನ್ನು ( ಗೋದಾಮ) ಬೆಳೆಯುತ್ತಿದ್ದರು. ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿತ್ತು.

ಅಧ್ಯಾಯ 4

ಜಗತ್ತಿನ ಕೆಲವು ಪ್ರಮುಖ ನಾಗರಿಕತೆಗಳು ಪ್ರಶ್ನೆ ಉತ್ತರಗಳು

ಅಭ್ಯಾಸಗಳು

I ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1 ಹಿರೋಗ್ಲೈಫಿಕ್ಸ್‌ನ್ನು  ಪವಿತ್ರ ಬರವಣಿಗೆ ಎಂದು ಕರೆಯುತ್ತಾರೆ.

2 ಈಜಿಪ್ಟನ್ನು ಆಳಿದ ರಾಜರುಗಳನ್ನು  ಫ್ಯಾರೋ ಎಂದು ಕರೆಯುತ್ತಿದ್ದರು.

3 ಗ್ರೀಕರು ಮೆಸಪಟೋಮಿಯವನ್ನು ನದಿಗಳ ನಡುವಿನ ನಾಡು ಎಂದು ಕರೆದರು.

4 ಅಮೊರೈಟರ ಸುಪ್ರಸಿದ್ಧ ದೊರೆ ಹಮ್ಮುರಬಿ

5 ‘ಪ್ರಿನ್ಸೆಪ್’ ಎಂದರೆ ರಾಜ್ಯದ ಮೊದಲ ನಾಗರಿಕ.

6. ರೋಮನ್ನರ ಭಾಷೆ ಲ್ಯಾಟಿನ್

7 ಟೆಕ್ಸ್‌ಕೊಕೊ ಎಂಬುದು ಮೆಕ್ಸಿಕೋದಲ್ಲಿನ ಒಂದು ಸರೋವರ

8. ಇಂಕಾಗಳ ಆರಾಧ್ಯ ದೈವ ಸೂರ್ಯದೇವ

II ಹೊಂದಿಸಿ ಬರೆಯಿರಿ.

ಉತ್ತರಗಳು

ಎ ಪಟ್ಟಿ.                                             ಬಿ ಪಟ್ಟಿ

9 ಹವಾಂಗೋ ನದಿ                      ಚೀನಾ

10 ಕ್ಯೂನಿಫಾರ್ಮ್.                     ಮೆಸಪಟೊಮಿಯ

II ಕ್ಲಿಯೋಪಾತ್ರ.                             ಈಜಿಪ್ಟಿನ ಕಡೆಯ ರಾಣಿ

12 ಹಮ್ಮುರಬಿ.                              ಅಮೊರೈಟರ ದೊರೆ

13 ಚೀನಾದ ಮನೆತನ.                  ಶಾಂಗ್

III ಸಂಕ್ಷಿಪ್ತವಾಗಿ ಉತ್ತರಿಸಿ.

14 ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳಾವುವು ?

ಉತ್ತರ:-
ಮಾಯ, ಆಸ್ಟೆಕ್ ಮತ್ತು ಇಂಕಾ ಇವು ಅಮೆರಿಕದಲ್ಲಿನ ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳು.

15 ‘ಮಾಯ’ ನ್ನರು ಯಾರು ?

ಉತ್ತರ:-
ಮೆಕ್ಸಿಕೋದ ಯುಕಟೆನ್ ಪ್ರದೇಶದಲ್ಲಿನ ಅಮೆರಿಕಾದ ಇಂಡಿಯನ್ ಮೂಲ ನಿವಾಸಿಗಳಿಗೆ “ಮಾಯ” ಎನ್ನುವರು.

16 ‘ಮಮ್ಮಿ’ಗಳನ್ನು ಹೇಗೆ ಸಂರಕ್ಷಿಸುತ್ತಿದ್ದರು ?

ಉತ್ತರ:-
ಸತ್ತವರ ದೇಹಗಳನ್ನು ರಾಸಾಯನಿಕಗಳಿಂದ ಲೇಪಿಸಿ ತೆಳುವಾದ ಬಟ್ಟೆಯಿಂದ ಸುತ್ತಿಡುತ್ತಿದ್ದರು. ಈ ದೇಹವನ್ನು ವಿಶೇಷವಾಗಿ ತಯಾರಿಸಿದ ಶವಪೆಟ್ಟಿಗೆ ಗಳಲ್ಲಿ ಇರಿಸಲಾಗುತ್ತಿತ್ತು.

17 ಪಿರಮಿಡ್‌ಗಳ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

ಉತ್ತರ:-
ಈಜಪ್ಟಿಯನ್ನರು, ಉತ್ತರಕ್ಕೆ ಸಾಗಿದಂತೆಲ್ಲ ಮರುಭೂಮಿ ಯಲ್ಲಿಯೇ ಸಮಾಧಿಯನ್ನು ಕಟ್ಟಬೇಕಿತ್ತು. ಚಿರ ನಿದ್ರೆಯಲ್ಲಿ ರುವವರನ್ನು ಯಾರು ಬಾಧಿಸದಂತೆ ಬೃಹತ್ ಶಿಲೆಗಳನ್ನು ಬಳಸಿ ಗೋಪುರದಂತೆ ಸಮಾಧಿಯ ಮೇಲೆ ಕಟ್ಟಡವನ್ನು ಕಟ್ಟಲಾಯಿತು. ಸ್ಪರ್ಧೆಯಂತೆ ಶ್ರೀಮಂತರು ಹಾಗೂ ದೊರೆಗಳು ಅತ್ಯಂತ ಎತ್ತರದ ಗೋಪುರದ ಶಿಖರವನ್ನು ಕಟ್ಟಿದರು. ಗ್ರೀಕರು ಇದನ್ನು ‘ಪಿರಮಿಡ್’ ಎಂದು ಕರೆದರು.

18 ಹವಾಂಗೋ ನದಿಯು ‘ಚೀನಾದ ದುಗುಡ’ ಹೇಗೆ?

ಉತ್ತರ:-
ಹವಾಂಗೋ ನದಿಯು ಚೀನಾದಲ್ಲಿ ಪ್ರವಾಹದ ನಂತರ  ಆಗಿಂದಾಗ್ಗೆ ತನ್ನ ಹಾದಿಯನ್ನು ಬದಲಿಸುವುದರಿಂದ ಮನೆಗಳು ಹಾಗೂ ಕೃಷಿಭೂಮಿ ಈ ನೆರೆಗೆ ಆಹುತಿಯಾಗುತ್ತಿದ್ದವು. ಇದು ಅಲ್ಲಿನ ಕಾಲುವೆಗಳನ್ನೆಲ್ಲ ನಿಷ್ಕ್ರಿಯಗೊಳಿಸುತಿತ್ತು. ಈ ಕಾರಣಕ್ಕಾಗಿಯೆ ಚೀನಾದ ಜನ ಈ ನದಿಯನ್ನು ದುಃಖದ ಪ್ರತೀಕ ಅಥವಾ ಚೀನಾದ ದುಗುಡವೆಂದು ಕರೆಯುತ್ತಾರೆ.

ಅಧ್ಯಾಯ 5

ಸನಾತನ ಧರ್ಮ

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ ಒಂದು ನೋಟ್ಸ್

ಅಭ್ಯಾಸಗಳು

1 ಕೆಳಗಿನ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1. ಸನಾತನ ಧರ್ಮದ ಇನ್ನೊಂದು ಹೆಸರು ಹಿಂದೂ ಧರ್ಮ

2. ಉಪನಿಷತ್ತು ಎಂಬುದು ವೇದ ಸಾಹಿತ್ಯದ ಒಂದು ಭಾಗ.

3. ವೇದ ಎಂಬ ಶಬ್ದವು ವಿದ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ.

4. ವಿದ್ ಎಂದರೆ ಜ್ಞಾನ ಎಂದರ್ಥ

5. ಕೇಳಿಸಿಕೊಂಡದ್ದು ಶೃತಿ ಆದರೆ ಜ್ಞಾಪಿಸಿಕೊಂಡದ್ದು ಸ್ಮೃತಿ ಆಯಿತು.

6. ಭಾರತದ ಎರಡು ಪ್ರಮುಖ ಇತಿಹಾಸ ಕೃತಿಗಳೆಂದರೆ -ರಾಮಾಯಣ ಹಾಗೂ ಮಹಾಭಾರತ.

7. ಷಡ್ದರ್ಶನಗಳು ಎಂಬುದು ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳು,

8. ಶಾಕ್ತಾಗಮವು ತಂತ್ರ ಎಂಬ ವಿಸ್ತಾರವಾದ ಕ್ಷೇತ್ರಕ್ಕೆ ಮುನ್ನುಡಿ ಬರೆಯಿತು.

II ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

9. ವೇದ ಎಂದರೇನು?

ವೇದ ಎಂಬ ಶಬ್ದವು “ವಿದ್” ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ವಿದ್ ಎಂದರೆ ಜ್ಞಾನ ಎಂದರ್ಥ. ಅಂದರೆ ವೇದಗಳು ಒಂದಿಡೀ ಸಮುದಾಯದ ಸಮಗ್ರ ಜ್ಞಾನ-ಅನುಭವಗಳ ಸಂಗ್ರಹರೂಪ.

10. ಋಗ್ವೇದದಲ್ಲಿ ಎಷ್ಟು ಮಂತ್ರಗಳಿವೆ? ಅವನ್ನು ಹೇಗೆ ವಿಭಾಗಿಸಲಾಗಿದೆ?
ಉತ್ತರ:-
ಋಗ್ವದ ಸಂಹಿತೆಯಲ್ಲಿ  10,552 ಮಂತ್ರಗಳಿವೆ. ಈ ಮಂತ್ರಗಳೆಲ್ಲ ಛಂದೋಬದ್ಧವಾಗಿ ಗಾಯತ್ರೀ, ಉಷ್ಣಿಕ್, ಪುರ ಉಷ್ಣಿಕ್, ಕಕುಪ್, ಅನುಷ್ಟುಪ್, ಬೃಹತಿ ಮುಂತಾದ ಹಲವು ಛಂದಸ್ಸುಗಳಲ್ಲಿವೆ.

II. ಋಗ್ವೇದದಲ್ಲಿ ಬಳಸಿರುವ ಯಾವುದಾದರೂ ಎರಡು ಛಂದಸ್ಸುಗಳನ್ನು ಹೆಸರಿಸಿ
ಗಾಯತ್ರೀ, ಉಷ್ಣಿಕ್, ಇವರು ವೇದದಲ್ಲಿ ಬಳಸಿರುವ ಎರಡು ಛಂದಸ್ಸುಗಳು.
12. ವೇದಗಳ ನಾಲ್ಕು ಸ್ಕಂದಗಳನ್ನು ಹೆಸರಿಸಿ,

ವೇದಗಳನ್ನು ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು ಹಾಗೂ ಉಪನಿಷತ್ತುಗಳೆಂದು ನಾಲ್ಕು ಸ್ಕಂದಗಳಾಗಿ ವಿಭಾಗಿಸಿದ್ದಾರೆ.

13, ವೇದಗಳನ್ನು ವಿಭಜಿಸಿದವರು ಯಾರು? ಯಾಕೆ ವಿಭಜಿಸಿದರು?
ಆ ಕಾಲದಲ್ಲಿ ಲಭ್ಯವಿದ್ದ ಅಪಾರವಾದ ವೇದರಾಶಿಯನ್ನು ಮಾನವನ ಆಯುಸ್ಸಿನ ಮಿತಿಯಲ್ಲಿ ಪೂರ್ಣವಾಗಿ ಅಧ್ಯಯನ ಮಾಡಲು ಮತ್ತು ಶಿಷ್ಯರಿಗೆ ಕಲಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಕೃಷ್ಣಪಾಯನರೆಂಬ ಋಷಿಗಳು ಅಗಾಧ ವೇದಮಂತ್ರ ಸಮೂಹ ವಿಭಜನೆ (ಅಂದರೆ ವ್ಯಾಸ) ಮಾಡಿ ವೇದವ್ಯಾಸರೆನಿಸಿಕೊಂಡರು.

14. ಶಕ್ತಿ ವಿಶಿಷ್ಟಾದ್ವೈತದ ಪರಂಪರೆಯಲ್ಲಿ ಬಂದ ನಾಲ್ಕು ಪಂಥಗಳನ್ನು ಹೆಸರಿಸಿ,
ಉತ್ತರ:-
ಇವುಗಳ ಪೈಕಿ ಶಕ್ತಿವಿಶಿಷ್ಟಾದ್ವತವು ಶಿವಪರವಾದುದು. ಇದರ ಪರಂಪರೆಯಲ್ಲಿ ಬಂದ ಕಾಶ್ಮೀರ ಶೈವದರ್ಶನ, ಶೈವಸಿದ್ಧಾಂತ, ವೀರಶೈವ ಮತಗಳು ಮುಖ್ಯವಾದವು. ಶೈವಪಂಥದಲ್ಲಿರುವ ಇತರ ಪಂಗಡಗಳೆಂದರೆ ಪಾಶುಪತ, ಕಾಳಾಮುಖ, ಕಾಪಾಲಿಕ, ಮಾಹೇಶ್ವರ ಲಾಕುಲಿಸ ಮುಂತಾದವು.

15. ಆಸ್ತಿಕ ಸಾಹಿತ್ಯ ಎಂದರೇನು? ಯಾವುದಾದರೂ ಎರಡು ಆಸ್ತಿಕ ಸಾಹಿತ್ಯಗಳನ್ನು ಹೆಸರಿಸಿ.
ಉತ್ತರ:-
ವೇದಪ್ರಾಮಾಣ್ಯ, ಕರ್ಮಫಲ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ – ಈ ಮೂರನ್ನು – ಒಪ್ಪಿರುವ ಎಲ್ಲರೂ ಆಸ್ತಿಕರು; ಈ ಮೂರನ್ನು ಒಪ್ಪಿರುವ ಎಲ್ಲ ಸಾಹಿತ್ಯವೂ ಆಸ್ತಿಕವೇ. ಹಾಗಾಗಿ ಈ ಮೂರನ್ನು ಒಪ್ಪಿಕೊಂಡಿರುವ ಆದರೆ ದೇವರ ಇರುವಿಕೆಯ ಅಗತ್ಯವೇ ಇಲ್ಲದೆ ಬೆಳೆದುಬಂದ ಸಾಂಖ್ಯ ಮತ್ತು ಪೂರ್ವ ಮೀಮಾಂಸಾ ದರ್ಶನಗಳು  ಆಸ್ತಿಕ ಸಾಹಿತ್ಯ ಎಂದೇ ಕರೆಯಲ್ಪಡುತ್ತವೆ.
ಉದಾಹರಣೆಗೆ— ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ರಾಮಾಯಣ, ಮಹಾಭಾರತ.

16. ಸೂತ್ರ ಎಂದರೇನು? ಸೂತ್ರಸಾಹಿತ್ಯಕ್ಕೆ ಉದಾಹರಣೆ ಕೊಡಿ.
ಉತ್ತರ:-
ಅಸಂದಿಗ್ಧವಾದ, ಅಲ್ಪಾಕ್ಷರಗಳಿರುವ, ಸಮಗ್ರ ಅರ್ಥವನ್ನು ಕೊಡುವ, ವಿಶ್ವಾತ್ಮಕವಾದ ಸಾಲುಗಳೇ ಸೂತ್ರಗಳು.ಇವನ್ನು ಆಧುನಿಕ ಜಗತ್ತಿನ ಈಕ್ವೆಷನ್, ಫಾರ್ಮ್ಯುಲಾ ಇತ್ಯಾದಿಗಳಿಗೆ ಸಮೀಕರಿಸಬಹುದು. ಪತಂಜಲಿ ಮುನಿಗಳ ಯೋಗಸೂತ್ರ, ಗೌತಮ ಮುನಿಗಳ ನ್ಯಾಯಸೂತ್ರ ಮುಂತಾದವೆಲ್ಲ ಸೂತ್ರಸಾಹಿತ್ಯಗಳೇ,

17, ಸನಾತನ ಧರ್ಮ ಮತ್ತು ಸೆಮೆಟಿಕ್ ರಿಲಿಜನ್‌ಗಳ ನಡುವಿನ ವ್ಯತ್ಯಾಸ ಏನು?
ಉತ್ತರ:-ಸೆಮೆಟಿಕ್ ರಿಲಿಜನ್‌ಗಳ ಅನುಯಾಯಿಗಳು ಒಬ್ಬರು ದೇವದೂತ (ಪ್ರವಾದಿ), ಒಂದು ದೇವರು, ಒಂದು ಧರ್ಮಗ್ರಂಥ – ಇವಿಷ್ಟನ್ನು ನಂಬಬೇಕು ಹಾಗೂ ದೇವದೂತರ ಮೂಲಕ ದೇವರು ವಿಧಿಸಿದ ನಿರ್ದಿಷ್ಟವಾದ ಕಟ್ಟಳೆಗಳನ್ನು ಅನುಸರಿಸಬೇಕು, ಆದರೆ ಸನಾತನ ಧರ್ಮದ ದೇವದೂತ, ಏಕ ದೇವ, ಏಕ ಗ್ರಂಥ ಹಾಗೂ ನಿರ್ದಿಷ್ಟ ಕಟ್ಟಳೆ, ಈ ಪರಿಕಲ್ಪನೆ ಇಲ್ಲ.

ಅಧ್ಯಾಯ 6

ಜೈನ ಮತ್ತು ಬೌದ್ಧ ಮತಗಳು

ಬಿಟ್ಟ ಸ್ಥಳಗಳಲ್ಲಿ ಸೂಕ್ತ ಪದಗಳಿಂದ ಭರ್ತಿ ಮಾಡಿ.

1. ಜೈನರ ಮೊದಲ ತೀರ್ಥಂಕರನು ಋಷಭ.

2 ವರ್ಧಮಾನನು ಜನಿಸಿದ ಸ್ಥಳ ವೈಶಾಲಿಯ ಕುಂಡಲ ಗ್ರಾಮ ದಲ್ಲಿ.

3. ಮಹಾವೀರನು ತನ್ನ 18 ವಯಸ್ಸಿನಲ್ಲಿ ಕೈವಲ್ಯ ಜ್ಞಾನವನ್ನು ಪಡೆದನು.

4 ಮಹಾವೀರನು ತನ್ನ 72 ನೆಯ ವಯಸ್ಸಿನಲ್ಲಿ ಬಿಹಾರದ ಪಾವಾಪುರಿಎಂಬಲ್ಲಿ ನಿರ್ವಾಣ     ಹೊಂದಿದನು.

5 ಗೌತಮ ಬುದ್ಧನ ಮೊದಲ ಹೆಸರು ಸಿದ್ದಾರ್ಥ

6 ಬುದ್ಧನು ತನ್ನ ಮೊದಲ ಬೋಧನೆಯನ್ನು – ವಾರಣಸಿಯ ಸಮೀಪ ಸಾರನಾಥದಲ್ಲಿನ ಜಿಂಕೆ ವನದಲ್ಲಿ ಮಾಡಿದನು.

7 ಬುದ್ಧನ ಮೊದಲ ಬೋಧನೆಯನ್ನು ಧರ್ಮ ಚಕ್ರ ಪ್ರವರ್ತನ ಎಂದು ಕರೆಯಲಾಗಿದೆ.

ಈ ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ,

8.ಮಹಾವೀರನ ಜೀವನ ಕುರಿತು ಬರೆಯಿರಿ.
ವರ್ಧಮಾನ ಮಹಾವೀರ(… 599-527)

ವರ್ಧಮಾನನು ಗಣರಾಜ್ಯಗಳಲ್ಲೊಂದಾದ ವೈಶಾಲಿಯ ಕುಂಡಲಗ್ರಾಮದಲ್ಲಿ ಜನಿಸಿದನು. ಇವನ ತಂದೆ ಸಿದ್ಧಾರ್ಥ, ಜ್ಞಾತ್ವಿಕ ಎಂಬ ಬುಡಕಟ್ಟಿನ ರಾಜ.ತಾಯಿ ತ್ರಿಶಲಾದೇವಿ, ಪ್ರಬಲ ಗಣರಾಜ್ಯವಾಗಿದ್ದ ಲಿಚ್ಛವಿಗಳ ಯುವರಾಣಿ.

ತನ್ನ 30ನೆಯ ವಯಸ್ಸಿನಲ್ಲಿ ಸತ್ಯಾನ್ವೇಷಣೆಯ ಹುಡುಕಾಟದಲ್ಲಿ ತೊಡಗಿದ ಈತ ಮನೆಯನ್ನು, ಸಂಸಾರವನ್ನೂ ತ್ಯಜಿಸಿದನು. ನಂತರ ಇವನು 12 ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ, ತಪಸ್ಸು ಮಾಡಿದ. ಇವನು ಉಪವಾಸ ಮಾಡುವ ಮೂಲಕ ಸ್ವತಃ ತನ್ನ ದೇಹವನ್ನು ದಂಡಿಸಿ ಕೊಂಡನು. 42ನೆಯ ವಯಸ್ಸಿನಲ್ಲಿ ಕೈವಲ್ಯ ಜ್ಞಾನವನ್ನು ಪಡೆದನು. ಕೈವಲ್ಯ ಜ್ಞಾನವೆಂದರೆ ಜ್ಞಾನೋದಯವೆಂದರ್ಥ. ಇವನು ಇಂದ್ರಿಯಗಳನ್ನು ನಿಗ್ರಹಿಸಿ ಸುಖ ಹಾಗೂ ಯಾತನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡ. ಈ ಸಾಧನೆಗಾಗಿ ಇವನು ‘ಮಹಾವೀರ’ನೆಂದು ಕರೆಸಿಕೊಂಡು ‘ಜಿನ’ನಾದನು. ‘ಜಿನ’ನೆಂದರೆ ಎಲ್ಲವನ್ನು ನಿಗ್ರಹಿಸಿದವನು, ಜಯಿಸಿದವನು ಎಂದರ್ಥ. ಹೀಗಾಗಿಯೇ ಇವನ ಅನುಯಾಯಿಗಳನ್ನು ಜೈನರೆಂದು ಕರೆಯುತ್ತಾರೆ.

ಮಹಾವೀರನು ತನ್ನ ಉಳಿದ 30 ವರ್ಷಗಳ ಬದುಕನ್ನು ಗಂಗಾ ಮತ್ತು ಯಮುನಾ ನದಿಗಳ ಪ್ರದೇಶದ ಜನತೆಗೆ ತನ್ನ ತಿಳಿವನ್ನು ಬೋಧಿಸುತ್ತಾ ಕಳೆದನು. ಇವನು ಪಶ್ಚಿಮ ಭಾರತಕ್ಕೂ ಬೋಧಿಸುತ್ತಾ ಪ್ರಯಾಣಿಸಿದ. ತನ್ನ 72ನೆಯ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ ನಿರ್ವಾಣವನ್ನು ಹೊಂದಿದನು.

9. ತಿರತ್ನಗಳೆಂದರೇನು ?

ಮಹಾವೀರನು ನಡವಳಿಕೆಯ ಮೂರು ನಿಯಮಗಳನ್ನು ಬೋಧಿಸಿದ್ದಾನೆ. ಅವುಗಳನ್ನು ತ್ರಿರತ್ನಗಳೆಂದು ಕರೆಯಲಾಗಿದೆ. ಅವುಗಳೆಂದರೆ ಸಮ್ಯಕ್ ಜ್ಞಾನ,ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯ

10 ಜೈನರ ಪಂಗಡಗಳನ್ನು ಹೆಸರಿಸಿರಿ.

ಜೈನರ ಎರಡು ಮುಖ್ಯ ಪಂಗಡಗಳೆಂದರೆ,
1. ಶ್ವೇತಾಂಬರರು ಮತ್ತು
2. ದಿಗಂಬರರು.

II ಮಧ್ಯಮ ಪಥವೆಂದರೇನು ?

ಲೋಕವೆಲ್ಲ ದುಃಖ ಹಾಗೂ ನೋವಿನಿಂದ ಅವರಿಸಿದೆ.  ಆಸೆಯೇ ದುಃಖಕ್ಕೆ ಮೂಲಕಾರಣ ಎಂಬ ಸತ್ಯವನ್ನು ಬುದ್ಧನು ಕಂಡನು. ಅತಿಯಾದ ಆಸೆಯ ವಿಮುಕ್ತಿಯಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಆಸೆಯ ವಿಮುಕ್ತಿಗಾಗಿ ಅಷ್ಟಾಂಗಿಕ ಮಾರ್ಗವನ್ನು ಬುದ್ಧನು ಬೋಧಿಸಿದನು. ಇದನ್ನು ಮಧ್ಯಮ ಪಥವೆಂದು ಕರೆಯುವರು.

ಅಷ್ಟಾಂಗಿಕ ಮಾರ್ಗ

1. ಒಳ್ಳೆಯ ನಡತೆ 2. ಮಾತು 3. ನೋಟ (ದೃಷ್ಟಿ) 4. ಬದುಕು 5. ಪ್ರಯತ್ನ 6. ನೆನಪು 7. ನಿರ್ಧಾರ 8. ಚಿಂತನೆ

12 ಹೊಸ ಧರ್ಮದಿಂದ ಪ್ರೇರಿತರಾದವರು ಯಾರು ?

ಶ್ರೀಮಂತ ವರ್ತಕರು, ಕುಶಲಕರ್ಮಿಗಳು, ಜನಸಾಮಾನ್ಯರು ಹೊಸ ಧರ್ಮದಿಂದ ಪ್ರೇರಿತರಾದರು.

13 ತ್ರಿಪಿಟಕಗಳ ಬಗ್ಗೆ ಟಿಪ್ಪಣಿ ಬರೆಯಿರಿ.

ಬುದ್ಧನ ಮರಣದ ನಂತರ ಅವನ ಅನುಯಾಯಿಗಳು ಬುದ್ಧನ ಬೋಧನೆ ಹಾಗೂ ಸಂಪ್ರದಾಯವನ್ನು ತ್ರಿಪಿಟಕಗಳಲ್ಲಿ ಕ್ರೋಡೀಕರಿಸಿದರು.ಇವೇ ವಿನಯ, ಸುತ್ತ ಹಾಗೂ ಅಭಿಧಮ್ಮ ಪಿಟಕವೆಂದು ಕರೆಯಲ್ಪಟ್ಟಿವೆ. ಇವುಗಳನ್ನೇ ತ್ರಿಪಿಟಕಗಳೆಂದು ಕರೆಯುವರು.

ಅಧ್ಯಾಯ 7

 ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ

1 ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1.ಪಾಲಿಟಿಕ್ಸ್ ಎಂಬ ಪದವು ಪೊಲಿಸ್ ಎಂಬ ಗ್ರೀಕಪದದಿಂದ ಉತ್ಪತ್ತಿಗೊಂಡಿದೆ.

2 ರಿಪಬ್ಲಿಕ್’ ಗಂಥದ ಕರ್ತೃ ಸಾಕ್ರೆಟಿಸ್ ನ ಶಿಷ್ಯ ಪ್ಲೇಟೋ.

3 ಅರಿಸ್ಟಾಟಲ್, ರಾಜ್ಯಶಾಸ್ತ್ರವನ್ನು ಕುರಿತು ರಚಿಸಿದ ಕೃತಿ ಪಾಲಿಟಿಕ್ಸ್.

4 ರಾಜ್ಯಶಾಸ್ತ್ರದ ಬಗೆಗಿನ ಮಾಹಿತಿ ಹೊಂದಿರುವ ಕೌಟಿಲ್ಯನ ಕೃತಿ ಅರ್ಥಶಾಸ್ತ್ರ.

|| ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

5.ರಾಜ್ಯಶಾಸ್ತ್ರ ಎಂದರೇನು?
ರಾಜ್ಯ, ಸರ್ಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ವಿಷಯವೇ ರಾಜ್ಯಶಾಸ್ತ್ರ.

6. ರಾಜ್ಯಶಾಸ್ತ್ರದ ಕ್ರಮಬದ್ಧ ಅಧ್ಯಯನ ಯಾರಿಂದ ಪ್ರಾರಂಭವಾಯಿತು?
ರಾಜ್ಯಶಾಸ್ತ್ರದ ಕ್ರಮಬದ್ಧವಾದ ಅಧ್ಯಯನ ಗ್ರೀಕರಿಂದ ಪ್ರಾರಂಭವಾಯಿತು.

7.ರಾಜ್ಯಶಾಸ್ತ್ರದ ಪಿತಾಮಹರೆಂದು ಯಾರನ್ನು ಕರೆಯುತ್ತಾರೆ?
ಗ್ರೀಸ್ ದೇಶದ ದಾರ್ಶನಿಕ ‘ಅರಿಸ್ಟಾಟಲ್’ ರನ್ನು ರಾಜ್ಯಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

8.ರಾಜ್ಯಶಾಸ್ತ್ರದ ಒಂದು ವ್ಯಾಖ್ಯೆ ನೀಡಿ
ಸರ್ ಜಾನ್ ಶಿಲೆ ರವರು  “ಅರ್ಥಶಾಸ್ತ್ರವು ಹಣ, ಸಂಪತ್ತನ್ನು, ಜೀವಶಾಸ್ತ್ರವು ಸಕಲ ಜೀವರಾಶಿಗಳ ಜೀವನವನ್ನು, ಸಂಖ್ಯಾಶಾಸ್ತ್ರವು ಅಂಕಿಸಂಖ್ಯೆಗಳನ್ನು ಅಧ್ಯಯನ ಮಾಡುವಂತೆ, ಸರ್ಕಾರದ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ” ಎಂದಿದ್ದಾರೆ.

9.ರಾಜ್ಯಶಾಸ್ತ್ರದ ಅಧ್ಯಯನದ ಯಾವುದಾದರೊಂದು ಪ್ರಯೋಜನ ತಿಳಿಸಿ?
ರಾಜ್ಯಶಾಸ್ತ್ರವು ರಾಜ್ಯದ ಸಂವಿಧಾನ ಮತ್ತು ಕಾನೂನುಗಳ ಬಗೆಗಿನ ಜ್ಞಾನವನ್ನು ಒದಗಿಸುತ್ತದೆ.

ಅಧ್ಯಾಯ 8

ಪೌರ ಮತ್ತು ಪೌರತ್ವ

ಅಭ್ಯಾಸಗಳು

ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1.ಬ್ರಿಟೀಷರ ಆಳ್ವಿಕೆಯಲ್ಲಿ ಭಾರತದಲ್ಲಿ ವಾಸವಿದ್ದ ಜನರನ್ನು ಬ್ರಿಟಿಷ್ ಆಳ್ವಿಕೆಯಲ್ಲಿನ ಪ್ರಜೆಗಳು ಎಂದು ಕರೆಯಲಾಗುತ್ತದೆ.

2.ನಮ್ಮ ದೇಶದಲ್ಲಿ ಪರದೇಶದವರು ತಾತ್ಕಲಿಕವಾಗಿ ವಾಸವಾಗಿದ್ದರೆ ಅವರನ್ನು  ವಿದೇಶಿಯರು     ಎಂದು      ಕರೆಯಲಾಗುತ್ತದೆ.

3. ಪೌರತ್ವ ಕಾಯಿದೆಯು ಜಾರಿಗೆ ಬಂದ ವರ್ಷ 1955.

4. ನೀವು ಪೌರತ್ವ ಪಡೆದಿರುವ ವಿಧಾನವೆಂದರೆ ಅದು ಜನ್ಮದತ್ತ ಪೌರತ್ವ ವಿಧವಾಗಿದೆ.

|l. ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

5 ಪೌರತ್ವ ಎಂದರೇನು ?

ಒಂದು ಸಂಘಟನೆ ಅಥವಾ ರಾಜ್ಯ ಅಥವಾ ರಾಷ್ಟ್ರದ ಜವಾಬ್ದಾರಿಯುತ ಸದಸ್ಯತ್ವವನ್ನು ಪೌರತ್ವ ಎನ್ನುವರು.
ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ.

6 ಪೌರ ಅನುಭೋಗಿಸುವ ಲಾಭಗಳಾವುವು?

ಪೌರನಾದವನು ಒಂದು ದೇಶದ ಸದಸ್ಯ ಪ್ರಜೆಯಾಗಿ ಆ ದೇಶದಲ್ಲಿ ಹಲವಾರು ಅನುಕೂಲಗಳನ್ನು ಹಾಗೂ ಸೌಲಭ್ಯತೆಗಳನ್ನು ಅನುಭೋಗಿಸುತ್ತಾನೆ. ಅವುಗಳೆಂದರೆ
1.ರಾಷ್ಟ್ರದಿಂದ ಭದ್ರತೆ ಮತ್ತು ರಕ್ಷಣೆಗಳನ್ನು ಪಡೆಯುತ್ತಾನೆ.

2.ರಾಷ್ಟ್ರವು ಕಾನೂನು ಮತ್ತು ಸುವ್ಯವಸ್ಥೆಯನ್ನು ನೀಡುವುದರಿಂದ ಅವನು ಶಾಂತಿಯುತ ಜೀವನ ನಡೆಸುತ್ತಾನೆ.

3.ಇಂದಿನ ಸಮಾಜ ಕಲ್ಯಾಣ ಯೋಜನೆಗಳ ಅಡಿಯಲ್ಲಿ ರಾಜ್ಯ ಒದಗಿಸುವ ಶಿಕ್ಷಣ, ಆರೋಗ್ಯ, ವಿಮೆ, ಆಶ್ರಯ, ಉದ್ಯೋಗ ಹಾಗೂ ಇತರೆ ಸೌಲಭ್ಯಗಳನ್ನು ಅನುಭವಿಸುತ್ತಾನೆ.

4.ಪೌರನು ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಅನುಭೋಗಿಸುತ್ತಾನೆ.

5.ರಾಜ್ಯ ನೀಡುವ ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತಾನೆ.

6.ಚುನಾವಣೆಗಳಲ್ಲಿ ಪ್ರತಿನಿಧಿಸುವ, ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ರಾಜಕೀಯ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯುತ್ತಾನೆ.

7.ರಾಷ್ಟ್ರಾಧ್ಯಕ್ಷ, ಉಪರಾಷಾಧ್ಯಕ್ಷ, ಸರ್ವೋಚ್ಚ ಹಾಗೂ ಶ್ರೇಷ್ಠ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ಇತರೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅರ್ಹ ತೆಗಳನ್ನು ಪಡೆಯುತ್ತಾನೆ.

8.ಎಲ್ಲಾ ಸಾರ್ವಜನಿಕ ಸೇವೆಗಳಿಗೆ ನೇಮಕಾತಿ ಪಡೆಯುವ ಅರ್ಹತೆ ಹೊಂದಿರುತ್ತಾನೆ.

7 ಭಾರತದಲ್ಲಿ ಪೌರತ್ವದ ಕಾನೂನು ಮತ್ತು ಶಾಸನಗಳನ್ನು ರೂಪಿಸುವ ಅಧಿಕಾರ ಹೊಂದಿರುವ ಅಂಗವನ್ನು ಹೆಸರಿಸಿ.
ಭಾರತದೇಶದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಶಾಸನಗಳನ್ನು ನಿರ್ಮಿಸುವ ಅಧಿಕಾರವನ್ನು ಸಂಸತ್ತು ಹೊಂದಿರುತ್ತದೆ.

8 ಪೌರತ್ವ ಪಡೆಯುವ ವಿಧಾನಗಳನ್ನು ತಿಳಿಸಿ.
ಪೌರತ್ವ ಪಡೆಯುವಲ್ಲಿ ಎರಡು ವಿಧಾನಗಳಿವೆ. ಅವುಗಳೆಂದರೆ :

1.ಜನನ ಸ್ಥಾನ 2. ದೇಶೀಕರಣ

1. ಜನನ ಸ್ಥಾನ: ಒಂದು ರಾಜ್ಯದಲ್ಲಿ ಜನನವಾದರೆ ಪೌರತ್ವ ಪಡೆಯಲು ಅರ್ಹನಾಗುತ್ತಾನೆ.

2. ದೇಶೀಕರಣ (Naturalisation) : ಯಾವುದೇ ದೇಶವು ವಿಧಿಸುವ ಕರಾರು ಹಾಗೂ ನಿಯಮಗಳನ್ನು ಈಡೇರಿಸಿದಾಗಿ ಆ ದೇಶದ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ದೇಶೀಕರಣದ ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುವುದಾದರೂ ಅದರ ಸಾಮಾನ್ಯ ನಿಯಮಗಳು ಈ ಕೆಳಗಿನಂತಿವೆ :

ಎ) ವಾಸಸ್ಥಳ : ಒಂದು ದೇಶದ ಪೌರನು ಬೇರೊಂದು ದೇಶದಲ್ಲಿ  ದೀರ್ಘಕಾಲ ವಾಸವಾಗಿದ್ದರೆ ಆ ದೇಶದ ಪೌರತ್ವ ವನ್ನು ಪಡೆಯಬಹುದು.

ಬಿ) ವಿವಾಹ : ಒಂದು ದೇಶದ ಮಹಿಳೆ ವಿದೇಶದ ಪುರುಷನೊಂದಿಗೆ ವಿವಾಹವಾದರೆ ಅವಳು ತನ್ನ ಪತಿಯ ದೇಶದ ಪೌರತ್ವ ಪಡೆಯುತ್ತಾಳೆ.

ಸಿ) ವಿದೇಶಿ ಸರ್ಕಾರಿ ಸೇವೆ : ಒಂದು ದೇಶದ ಪೌರನು ವಿದೇಶಿ ಸರ್ಕಾರ ಸೇವೆಗೆ ಸೇರಿದರೆ ಆ ದೇಶದ ಪೌರತ್ವವನ್ನು ಪಡೆಯಬಹುದು.

ಡಿ) ಆಸ್ತಿ ಸಂಪಾದನೆಯ ಮೂಲಕ : ಒರ್ವ ವ್ಯಕ್ತಿಯು ಬೇರೆ ದೇಶದಲ್ಲಿ ಆಸ್ತಿಯ ಆ ದೇಶವು ಆತನಿಗೆ ಪೌರತ್ವ ನೀಡಬಹುದು.

ಇ) ಮನವಿಯ ಮೂಲಕ : ನಿಗದಿತ ಅರ್ಜಿ ಅಥವಾ ಮನವಿ ಸಲ್ಲಿಸುವ ಮೂಲಕ ಬೇರೆ ದೇಶದ ಪೌರತ್ವವನ್ನು ಪಡೆಯಬಹುದು.

9 ಪರಕೀಯರ ಪೌರತ್ವ ಸಂಪಾದನೆಯ ವಿಧಾನವನ್ನು ವಿವರಿಸಿ.

ಎ) ವಾಸಸ್ಥಳ : ಒಂದು ದೇಶದ ಪೌರನು ಬೇರೊಂದು ದೇಶದಲ್ಲಿ  ದೀರ್ಘಕಾಲ ವಾಸವಾಗಿದ್ದರೆ ಆ ದೇಶದ ಪೌರತ್ವ ವನ್ನು ಪಡೆಯಬಹುದು.

ಬಿ) ವಿವಾಹ : ಒಂದು ದೇಶದ ಮಹಿಳೆ ವಿದೇಶದ ಪುರುಷನೊಂದಿಗೆ ವಿವಾಹವಾದರೆ ಅವಳು ತನ್ನ ಪತಿಯ ದೇಶದ ಪೌರತ್ವ ಪಡೆಯುತ್ತಾಳೆ.

ಸಿ) ವಿದೇಶಿ ಸರ್ಕಾರಿ ಸೇವೆ : ಒಂದು ದೇಶದ ಪೌರನು ವಿದೇಶಿ ಸರ್ಕಾರ ಸೇವೆಗೆ ಸೇರಿದರೆ ಆ ದೇಶದ ಪೌರತ್ವವನ್ನು ಪಡೆಯಬಹುದು.

ಡಿ) ಆಸ್ತಿ ಸಂಪಾದನೆಯ ಮೂಲಕ : ಒರ್ವ ವ್ಯಕ್ತಿಯು ಬೇರೆ ದೇಶದಲ್ಲಿ ಆಸ್ತಿಯ ಆ ದೇಶವು ಆತನಿಗೆ ಪೌರತ್ವ ನೀಡಬಹುದು.

ಇ) ಮನವಿಯ ಮೂಲಕ : ನಿಗದಿತ ಅರ್ಜಿ ಅಥವಾ ಮನವಿ ಸಲ್ಲಿಸುವ ಮೂಲಕ ಬೇರೆ ದೇಶದ ಪೌರತ್ವವನ್ನು ಪಡೆಯಬಹುದು.

10 ಪೌರತ್ವವನ್ನು ಕಳೆದುಕೊಳ್ಳುವ ವಿಧಾನಗಳಾವುವು?

ಪೌರತ್ವವನ್ನು  ಹಲವು ಕಾರಣಗಳಿಂದಾಗಿ ಕಳೆದುಕೊಳ್ಳಬಹುದು. ಅಂತಹ ಕಾರಣಗಳೆಂದರೆ :

1. ಪರಿತ್ಯಾಗ (Renunciation) : ಯಾವುದೇ ರಾಷ್ಟ್ರದ ಪೌರ, ಮತ್ತೊಂದು ರಾಷ್ಟ್ರದ ಪೌರತ್ವ ಪಡೆದರೆ ಸ್ವ-ಇಚ್ಛೆಯಿಂದ ನೋಂದಣಿಯ ಮೂಲಕ ಪ್ರಕಟಿಸಿ ತನ್ನ ರಾಷ್ಟ್ರ ದ ಪೌರತ್ವವನ್ನು ತ್ಯಾಗಮಾಡಬಹುದು.

2. ಅಂತ್ಯಗೊಳ್ಳುವಿಕೆ (Termination) : ದೇಶದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೆ ಕಾನೂನು ಬದ್ಧವಾಗಿ ಆತನ ದೇಶದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ.

3. ಪದಚ್ಯುತಿ (By Deprivation) : ಯಾರಾದರು ವ್ಯಕ್ತಿಯೊಬ್ಬ ವಂಚನೆಯ ಮೂಲಕ ರಾಷ್ಟ್ರ ದ ಪೌರತ್ವವನ್ನು ಹೊಂದಿದ್ದರೆ ಅಥವಾ ಅವನು / ಅವಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ರಾಷ್ಟ್ರ ದ ಸಂವಿಧಾನಕ್ಕೆ ಅವಿಧೇಯನಾಗಿ ನಡೆದುಕೊಂಡರೆ ಅಂತಹವರನ್ನು  ಸರ್ಕಾರವು ಪೌರತ್ವದಿಂದ ರದ್ದುಗೊಳಿಸಬಹುದು. ಇದು ಬಲವಂತದ ಪದಚ್ಯುತಿಯಾಗಿದೆ.

!! ಪೌರತ್ವವನ್ನು ಮುಕ್ತಗೊಳಿಸುವ ಸನ್ನಿವೇಶವೊಂದನ್ನು ತಿಳಿಸಿ.
ದೇಶದ ದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೆ ಕಾನೂನು ಬದ್ಧವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ.

ಯಾರಾದರು ವ್ಯಕ್ತಿಯೊಬ್ಬ ವಂಚನೆಯ ಮೂಲಕ ರಾಷ್ಟ್ರ ದ ಪೌರತ್ವವನ್ನು ಹೊಂದಿದ್ದರೆ ಅಥವಾ ಅವನು / ಅವಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ರಾಷ್ಟ್ರ ದ ಸಂವಿಧಾನಕ್ಕೆ ಅವಿಧೇಯನಾಗಿ ನಡೆದುಕೊಂಡರೆ ಅಂತಹವರನ್ನು  ಸರ್ಕಾರವು ಪೌರತ್ವದಿಂದ ರದ್ದುಗೊಳಿಸಬಹುದು. ಇದು ಬಲವಂತದ ಪದಚ್ಯುತಿಯಾಗಿದೆ.

12: ಪೌರತ್ವದ ವಿಧಗಳನ್ನು ತಿಳಿಸಿ ಹಾಗೂ ಆವುಗಳಿಗಿರುವ ವ್ಯತ್ಯಾಸಗಳನ್ನು ಬರೆಯಿರಿ.
ಪೌರತ್ವದಲ್ಲಿ ಎರಡು ವಿಧಗಳಿವೆ.
1.ಏಕ ಪೌರತ್ವ ಮತ್ತು
2. ದ್ವಿ ಪೌರತ್ವ.

ಏಕ ಪೌರತ್ವದಲ್ಲಿ ವ್ಯಕ್ತಿಯೊಬ್ಬ ತಾನು ವಾಸಿಸುವ ದೇಶದ ಯಾವುದೇ ರಾಜ್ಯದವನಾಗಿದ್ದರೂ ರಾಷ್ಟ್ರೀಯ ಪೌರತ್ವವನ್ನು ಹೊಂದುವುದಾಗಿದೆ. ಇಂತಹ ಸಂಧರ್ಭದಲ್ಲಿ ರಾಜ್ಯಗಳ ಪೌರತ್ವ ಎಂಬುದಿರುವುದಿಲ್ಲ. ಉದಾಹರಣೆಗೆ ಭಾರತ ದೇಶದ ಪೌರರು ಏಕ ಪೌರತ್ವ ಹೊಂದಿರುತ್ತಾರೆ.
ಒಕ್ಕೂಟ ರಾಜ್ಯ ವ್ಯವಸ್ಥೆಯಿರುವ ಅಮೆರಿಕಾ ಮತ್ತು ಸಿಟ್ಲರ್‌ಲೆಂಡ್‌ಗಳಲ್ಲಿ ದ್ವಿ ಪೌರತ್ವ ವ್ಯವಸ್ಥೆ ಜಾರಿಯಲ್ಲಿದೆ. ಇದರಲ್ಲಿ ರಾಜ್ಯ ಹಾಗೂ ರಾಷ್ಟ್ರಗಳಿಗೆ ಪ್ರತ್ಯೇಕವಾಗಿ ಪೌರತ್ವ ಹೊಂದಿರುತ್ತಾರೆ.

13 ಪೌರನ ಕರ್ತವ್ಯಗಳಾವುವು?
ಪೌರನು  ಕೆಳಗಿನ ಕೆಲವು ಕರ್ತವ್ಯಗಳನ್ನು ನೆರವೇರಿಸಬೇಕಾಗುತ್ತದೆ.

*ಪೌರನು ಸರ್ಕಾರದ ಕಾನೂನುಗಳಿಗೆ ವಿಧೇಯನಾಗಿದ್ದು ಸಂವಿಧಾನವನ್ನು ಗೌರವಿಸಬೇಕು.

• ಪೌರನು ರಾಷ್ಟ್ರದ ಗೌರವ ಮತ್ತು ಘನತೆಗಳನ್ನು ರಕ್ಷಿಸಿಕೊಂಡು ವಚನಬದ್ಧನಾಗಿರಬೇಕು.

* ಪೌರನು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು.

*ಪೌರನು ಭ್ರಷ್ಟಾಚಾರ, ಪಕ್ಷಪಾತ, ವರದಕ್ಷಿಣೆ, ಬಾಲ್ಯವಿವಾಹ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಅವುಗಳನ್ನು ತಡೆಯಲು ಸಂವಿಧಾನಾತ್ಮಕ ಮಾರ್ಗೋಪಾಯಗಳನ್ನು ಪಾಲಿಸಬೇಕು.

*ಸರ್ಕಾರದ ಗುಣಮಟ್ಟವು ಅಲ್ಲಿನ ಪೌರರ ಗುಣಮಟ್ಟದ ಮೇಲೆ ಆವಲಂಬಿತವಾಗಿರುವುದರಿಂದ ಪೌರರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳಬೇಕು.

• ಪೌರನು ತನ್ನ ವೈಯಕ್ತಿಕ ಆಸಕ್ತಿಗಿಂತ ರಾಷ್ಟ್ರದ ಆಸಕ್ತಿಯನ್ನು ಎತ್ತಿ ಹಿಡಿದು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕು.

• ಪೌರನು ಸ್ವಾರ್ಥಿಯಾಗದೆ ಸೇವಾಮನೋಭಾವನೆಯನ್ನು ರೂಢಿಸಿಕೊಂಡು ದೇಶಕ್ಕಾಗಿ ತ್ಯಾಗಮಾಡುವುದಕ್ಕೂ ಸಿದ್ಧನಿರಬೇಕು.

*ಪೌರನು ರಾಷ್ಟ್ರ ರಕ್ಷಣೆ ಹಾಗೂ ತೆರಿಗೆ ಪಾವತಿಸುವ ಜವಾಬ್ದಾರಿಗಳನ್ನು ಹೊಂದಿರಬೇಕು.

ಅಧ್ಯಾಯ 9

ಮಾನವ ಮತ್ತು ಸಮಾಜ,

ಎಂಟನೇ ತರಗತಿ ಸಮಾಜ ನೋಟ್ಸ್ /ಪ್ರಶ್ನೋತ್ತರಗಳು

ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1.ಮಾನವನು ಸಮಾಜ ಜೀವಿ

2 ಔಪಾಚಾರಿಕ ಶಿಕ್ಷಣ ಶಾಲೆಯಲ್ಲಿ ದೊರೆಯುತ್ತದೆ.

3 ಸಮಾಜಶಾಸ್ತ್ರದ ಪಿತಾಮಹ ಆಗಸ್ಟ್ ಕಾಮ್ಟೆ.

4. ಮಾನವನು ಮಾನವನಂತಾಗಲು  ಸಾಮಾಜಿಕ ಜೀವನ ಅಗತ್ಯ

5 ಮಾನವನು ತಮ್ಮ ಭಾವನೆಯನ್ನು ತಮ್ಮ ಭಾಷೆಯ ಮೂಲಕ ಭಾವನೆ ವ್ಯಕ್ತಪಡಿಸುತ್ತಾರೆ.

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

6 ಮಾನವ ಸಮಾಜ ಜೀವಿ ಹೇಗೆ?
ಉತ್ತರ:-
ಮಾನವ ಸಂಘಜೀವಿ, ಎಲ್ಲರೊಟ್ಟಿಗೂ ಬದುಕಲು ಪ್ರಯತ್ನಿಸುತ್ತಾನೆ. ನಮ್ಮೆಲ್ಲರ ಬೆಳವಣಿಗೆಗೆ ಸಮಾಜ ಅಗತ್ಯ. ಏಕೆಂದರೆ, ಮಾನವನ ಅಸ್ತಿತ್ವಕ್ಕೆ ಸಾಮಾಜಿಕ ಸಂಬಂಧಗಳು ಅಗತ್ಯವಾಗಿವೆ. ಆದುದರಿಂದಲೇ ಮಾನವ ಸಮಾಜವನ್ನು ಸಾಮಾಜಿಕ ಸಂಬಂಧಗಳ ಬಲೆ ಎಂದು ಕರೆಯಲಾಗುತ್ತದೆ. ಮಾನವನನ್ನು ಸಮಾಜ ಜೀವಿ ಎಂದು ಕರೆಯಲಾಗುತ್ತದೆ.

7 ಸಾಮಾಜೀಕರಣ ಎಂದರೇನು?
ಉತ್ತರ:-
ನಾವು ಸಮಾಜದ ಸದಸ್ಯರಾಗಿ, ಸಮಾಜದಿಂದ  ಭಾಷೆ, ಓದು, ಆಟ, ಯೋಚನಾ  ಮತ್ತು ನಮ್ಮ ದೈಹಿಕ ಭಾಷೆ ಮೊದಲಾದವುಗಳನ್ನು ಕುಳಿತುಕೊಳ್ಳುವ ಕ್ರಿಯೆಯನ್ನು ಸಾಮಾಜೀಕರಣ ಎನ್ನುತ್ತಾರೆ.

8 ಮಿಡ್ನಾಪುರದಲ್ಲಿ ಸಿಕ್ಕ ಕಮಲೆಯು ಹೇಗಿದ್ದಳು?
ಉತ್ತರ:-
1920ರಲ್ಲಿ ಮಿಡ್ನಾಪುರದಲ್ಲಿ ಸಿಕ್ಕ ಕಮಲ ಎಂಬ ಹುಡುಗಿಯು 9 ವರ್ಷಗಳನ್ನು ಕಾಡಿನಲ್ಲಿ ಪಾಣಿಗಳೊಂದಿಗೆ ಕಳೆದಿದ್ದಳು. ಅಲ್ಲಿ ಹಸಿ ಮಾಂಸ ತಿನ್ನುತ್ತಾ ಪಶುಗಳಂತೆ ನಾಲ್ಕು ಕಾಲುಗಳಲ್ಲಿ ನಡೆಯುತ್ತಿದ್ದಳು.ಅವಳಿಗೆ ಸ್ವಂತ ಪ್ರಜ್ಞೆ ಇರಲಿಲ್ಲ.

9 ಆರಂಭಿಕ ಸಮಾಜಶಾಸ್ತ್ರಜ್ಞರನ್ನು ಹೆಸರಿಸಿ,
ಉತ್ತರ:-
ಆಗಸ್ಟ್ ಕಾಮ್ಟೆ, ಹರ್ಬರ್ಟ್ ಸ್ಪೆನ್ಸರ್ ಮತ್ತು ಎಮಿಲಿ ಡರ್ಕಿಮ್ ಇವರು ಆರಂಭಿಕ ಸಮಾಜಶಾಸ್ತ್ರಜ್ಞರು.

ಕೆಳಗಿನ ಪ್ರಶ್ನೆಗಳಿಗೆ ನಾಲೈದು ವಾಕ್ಯಗಳಲ್ಲಿ ಉತ್ತರಿಸಿ.

10 ಮಾನವನು ಸಮಾಜ ಜೀವಿ ಎಂಬುದನ್ನು ವಿವರಿಸಿ
ಉತ್ತರ:-
ಮಾನವ ಸಂಘಜೀವಿ, ಎಲ್ಲರೊಟ್ಟಿಗೂ ಬದುಕಲು ಪ್ರಯತ್ನಿಸುತ್ತಾನೆ. ನಮ್ಮೆಲ್ಲರ ಬೆಳವಣಿಗೆಗೆ ಸಮಾಜ ಅಗತ್ಯ. ಏಕೆಂದರೆ, ಮಾನವನ ಅಸ್ತಿತ್ವಕ್ಕೆ ಸಾಮಾಜಿಕ ಸಂಬಂಧಗಳು ಅಗತ್ಯವಾಗಿವೆ. ಆದುದರಿಂದಲೇ ಮಾನವ ಸಮಾಜವನ್ನು ಸಾಮಾಜಿಕ ಸಂಬಂಧಗಳ ಬಲೆ ಎಂದು ಕರೆಯಲಾಗುತ್ತದೆ. ಮಾನವನನ್ನು ಸಮಾಜ ಜೀವಿ ಎಂದು ಕರೆಯಲಾಗುತ್ತದೆ.

11 ಮಾನವರಿಗೂ ಭಾಷೆಗೂ ಇರುವ ಸಂಬಂಧವನ್ನು ಬರೆಯಿರಿ.
ಉತ್ತರ:-
ಮಾನವರು ತಮ್ಮ ಈ ಎಲ್ಲಾ ಭಾವನೆಗಳನ್ನು  ತಿಳಿಸಲು ಭಾಷೆಯು ಅನಿವಾರ್ಯವಾಗುತ್ತದೆ.ನಿರ್ದಿಷ್ಟವಾಗಿ ಸಂಬಂಧಗಳನ್ನು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಭಾಷೆಯು ಬಹಳ ಮುಖ್ಯ.ಮನುಷ್ಯನಿಗೆ ಭಾಷೆಯಿದೆ. ಪಾಣಿಗಳಿಗೆ ಭಾಷೆಯಿಲ್ಲ. ಅದೇ ಮನುಷ್ಯನಿಗೂ ಮತ್ತು ಪ್ರಾಣಿಗೂ ಇರುವ ವ್ಯತ್ಯಾಸ,
12 ಮಾನವ ಸಮಾಜಕ್ಕೂ ಪ್ರಾಣಿ ಸಮಾಜಕ್ಕೂ ಇರುವ ವ್ಯತ್ಯಾಸ ತಿಳಿಸಿ.
ಉತ್ತರ:-
ಮನುಷ್ಯನಿಗೆ ಭಾಷೆಯಿದೆ. ಪಾಣಿಗಳಿಗೆ ಭಾಷೆಯಿಲ್ಲ. ಅದೇ ಮನುಷ್ಯನಿಗೂ ಮತ್ತು ಪ್ರಾಣಿಗೂ ಇರುವ ವ್ಯತ್ಯಾಸ, ಭಾಷೆ ಇಲ್ಲದೆ ಹೋದರೆ ಪಠ್ಯಪುಸ್ತಕಗಳಾಗಲಿ, ಶಾಲೆಗಳಾಗಲಿ, ಸಮೂಹ ಮಾಧ್ಯಮಗಳಾಗಲಿ ನಾಗರಿಕತೆಯಾಗಲಿ ಅಸ್ತಿತ್ವದಲ್ಲಿರುತ್ತಿರಲಿಲ್ಲ.ಮಾನವ ಇತರ ಪ್ರಾಣಿಗಳಿಗಿಂತ ಭಿನ್ನ. ಅವನು ನಾಗರಿಕತೆ ಮತ್ತು ವಿಕಾಸದಲ್ಲಿ ಮುಂದುವರೆದಿದ್ದಾನೆ. ಮಾನವನು ಸೃಜನಶೀಲ.

13 ಸಮಾಜಶಾಸ್ತ್ರವು ಏನನ್ನು ಅಧ್ಯಯನ ಮಾಡುತ್ತದೆ?
ಉತ್ತರ:-
ಸಮಾಜ, ಸ್ಥಿತಿ, ವರ್ತನೆ, ಸಾಮಾಜಿಕ ಸಂಬಂಧಗಳು ಮೊದಲಾದವುಗಳನ್ನು ಕುರಿತು  ಸಮಾಜಶಾಸ್ತ್ರವು ಅಧ್ಯಯನ ಮಾಡುತ್ತದೆ.ಆಗಸ್ಟ್ ಕಾಮ್ಟೆ ಅವರು ಸಮಾಜವನ್ನು ಅಧ್ಯಯನ ಮಾಡುವ ವಿಜ್ಞಾನಕ್ಕೆ ‘ಸಮಾಜ ಶಾಸ್ತ್ರ’ ಎಂದು ಕರೆದರು. ಸಮೂಹ ಸಮೂಹಗಳ ನಡುವಿನ ವ್ಯತ್ಯಾಸ, ಜನರನ್ನು ಮತ್ತು ಸಮೂಹಗಳನ್ನು ಒಂದುಗೂಡಿಸುವ ಶಕ್ತಿ, ಸಮಾಜದಲ್ಲಿ ನಡೆಯುವ ನಿರಂತರ ಬದಲಾವಣೆಗಳು, ಮಾನವ ಒಬ್ಬ ಸಮಾಜ ಜೀವಿ, ಮುಂತಾದ ವಿಷಯಗಳ ಕುರಿತು ಸಮಾಜಶಾಸ್ತ್ರವು ಅಧ್ಯಯನ ಮಾಡುತ್ತದೆ.

ಅಧ್ಯಾಯ12

 ಶಿಲಾಗೋಳ

ಎಂಟನೇ ತರಗತಿ ಭಾಗ ಒಂದು ಸಮಾಜ ವಿಜ್ಞಾನ

| ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.

1 .“ಭೂಖಂಡಗಳ ಮೇಲ್ಪದರು” ಎಂದು ಭೂಕವಚ/ ಶಿಲಾಗೋಳ/ ಸಿಯಾಲ್   ನ್ನು ಕರೆಯುತ್ತಾರೆ.

2 .ತಗ್ಗಾದ, ವಿಸ್ತಾರವಾದ, ಜ್ವಾಲಾಮುಖಿ ದ್ವಾರವನ್ನು
ಕಾಲ್ಡೆರಾ(caldera) ಎನ್ನುವರು.

3 .ಹೆಚ್ಚು ಹಾನಿಕಾರಕ ಭೂಕಂಪನ ಅಲೆಗಳೆಂದರೆ ಮೇಲ್ಮೈ ಅಲೆಗಳು.
4. ಆರೋಹಿ ಮತ್ತು ಅವರೋಹಿ ಶಂಕುಗಳು – ಅಂತರ್ಜಲ ಕಾರ್ಯಗಳಲ್ಲಿ ಸಾಮಾನ್ಯವಾಗಿರುತ್ತವೆ.

5.ಮರಳು ದಂಡೆಗಳು  ಸಮುದ್ರದ ಅಲೆಗಳ ಕಾರ್ಯದಿಂದ ನಿರ್ಮಿತವಾಗುತ್ತವೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

6.ಭೂಮಿಯ ಅಂತರಾಳದ ಮೂರು ಪ್ರಮುಖ ಪದರುಗಳನ್ನು ತಿಳಿಸಿ.
ವಸ್ತುಗಳ ಸಾಂದ್ರತೆ, ರಾಸಾಯನಿಕ ಸಂಯೋಜನೆ ಮತ್ತು ಭೌತದ್ರವ್ಯಗಳ ರೂಪದ ಆಧಾರದ ಮೇಲೆ ಭೂಮಿಯ ಅಂತರಾಳವನ್ನು 3 ಪ್ರಮುಖ ಪದರುಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ- ಭೂಕವಚ, ಮ್ಯಾಂಟಲ್ ಮತ್ತು ಕೇಂದ್ರ ಗೋಳ,

1.ಭೂಕವಚ: (Crust) ಇದು ಭೂಮಿಯ ಅಂತ್ಯಂತ ಮೇಲ್ಬಾಗದ ಪದರಾಗಿದೆ. ಇದು ಹೆಚ್ಚಾಗಿ ಸಿಲಿಕ, ಅಲ್ಯೂಮಿನಿಯಂ ಮತ್ತು ಮ್ಯಾಗ್ನಿಷಿಯಂಗಳಿಂದ ಕೂಡಿದೆ. ಇದನ್ನು ಸಾಮಾನ್ಯವಾಗಿ ‘ಶಿಲಾಗೋಳವೆಂದೂ ಕರೆಯಲಾಗಿದೆ.
2.ಮ್ಯಾಂಟಲ್: ಇದು ಭೂಮಿಯ ಅಂತರಾಳದ ಎರಡನೆಯ ಹಾಗೂ ಮಧ್ಯಭಾಗದ ಪದರು. ಮ್ಯಾಂಟಲ್ ವಲಯವು ಭೂ ಮೇಲೈನಿಂದ ಸುಮಾರು 2900 ಕಿ ಮೀಗಳ ಆಳದವರೆಗೆ ಇರುವುದು. ಇದರ ಮೇಲ್ಪದರದಲ್ಲಿನ ವಸ್ತುಗಳು ಭಾಗಶ: ದ್ರವೀಕರಿಸಿದ ಸ್ಥಿತಿಯಲ್ಲಿರುವುದರಿಂದ, ಇದನ್ನು ‘ಶಿಲಾಪಾಕ’ (ಮ್ಯಾಗ್ಮಾ) ಎಂದು ಕರೆಯುವರು.
3.ಕೇಂದ್ರ ಗೋಳ (ಭೂ ತಿರುಳು): ಇದು ಭೂಮಿಯ ಅತ್ಯಂತ ಒಳಭಾಗ, ಇದು ಭೂಮಿಯ ಮೇಲೈನಿಂದ 6,371 ಕಿ.ಮಿ ಆಳದವರೆಗೆ ಇರುವುದು, ಕೇಂದ್ರಗೋಳವು ನಿಕ್ಕಲ್‌ (Ni) ಮತ್ತು ಕಬ್ಬಿಣ (Fe) ದ ವಸ್ತುಗಳಿಂದ ಕೂಡಿರುವುದು,

7 ಕಾರ್ಯಾಚರಣೆ ಮಾಡುವ ಅವಧಿಯ ಆಧಾರದ ಮೇಲೆ ಜ್ವಾಲಾಮುಖಿಯ ವಿಧಗಳನ್ನು ಹೆಸರಿಸಿ.
ಜ್ವಾಲಾಮುಖಿಗಳನ್ನು ಅವುಗಳ ಕಾರ್ಯಾಚರಣೆ ಆಧರಿಸಿ ಮೂರು ವಿಧಗಳಾಗಿ ವಿಂಗಡಿಸಬಹುದು.

1.ಜಾಗೃತ ಜ್ವಾಲಾಮುಖಿಗಳು (Active Volcanoes)
3.ಸುಪ್ತ ಜ್ವಾಲಾಮುಖಿಗಳು(dormant volcanoes)
2.ಲುಪ್ತ ಜ್ವಾಲಾಮುಖಿಗಳು.( Extinct volcanoes)

8 ಪ್ರಪಂಚದ ಪ್ರಮುಖ ಭೂಕಂಪ ವಲಯಗಳನ್ನು ತಿಳಿಸಿ.
ಭೂಕಂಪನದ ಹಂಚಿಕೆ : ಭೂಕಂಪನದ ಹಂಚಿಕೆಯು ಈ ಕೆಳಕಂಡಂತೆ ಇದೆ. ಅವುಗಳೆಂದರೆ:

1. ಪೆಸೆಫಿಕ್ ಸಾಗರದ ಸುತ್ತಲಿನ ತೀರ ಪ್ರದೇಶ. ಇದು ನ್ಯೂಜಿಲ್ಯಾಂಡ್, ಫಿಲಿಫೈನ್ಸ್, ‘ಯು.ಎಸ್‌.ಎ, ಜಪಾನ್ ಪೆರು, ಮೊದಲಾದವುಗಳನ್ನು ಒಳಗೊಂಡಿದೆ.

2.ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ತೀರ ಪ್ರದೇಶ.

3.ಭಾರತದ ಹಿಮಾಲಯ ಪರ್ವತ ಪ್ರದೇಶ. (ಸಿವಾಲಿಕ್ ಪ್ರದೇಶ).

9 ಶಿಥಿಲೀಕರಣ ಎಂದರೇನು ? ಶಿಥಿಲೀಕರಣದ ಮೂರು ಮುಖ್ಯ ವಿಧಗಳನ್ನು ಹೆಸರಿಸಿ.
ಶಿಲೆಗಳು ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆಯೇ ಶಿಥಿಲೀಕರಣ.ಇದು ವಾಯುಮಂಡಲದಲ್ಲಿನ ಉಷ್ಣಾಂಶ, ಮಳೆ, ಗಾಳಿ ಮುಂತಾದವುಗಳಿಂದ ನಡೆಯುತ್ತದೆ. ಶಿಥಿಲೀಕರಣದ ವಿಧಗಳೆಂದರೆ:
1.ಭೌತಿಕ ಶಿಥಿಲೀಕರಣ,
2.ರಾಸಾಯನಿಕ ಶಿಥಿಲೀಕರಣ ಮತ್ತು
3. ಜೈವಿಕ ಶಿಥಿಲೀಕರಣ.

10) ಭೂ ಸವಕಳಿ ಕರಣದ ಕರ್ತೃವಾಗಿ ನದಿಗಳು ನಿರ್ಮಿಸುವ ಭೂಸ್ವರೂಪಗಳನ್ನು ಹೆಸರಿಸಿ.
1.ನದಿಯು ಮೇಲ್ಕಣಿವೆ ಪಾತ್ರದ ಹಂತದಲ್ಲಿ ಎತ್ತರ ಭಾಗದಲ್ಲಿದ್ದು ಮುಖ್ಯವಾಗಿ ಸವೆತ ಕಾರ್ಯವನ್ನು ನಿರ್ವಹಿಸುವುದು.ಇದರಿಂದ ಆಳವಾದ ಕಂದರಗಳು, ಮಹಾಕಂದರ ‘V’ ಆಕಾರದ ಕಣವೆಗಳು, ಜಲಪಾತಗಳು, (ಏಂಜಲ್ ಜಲಪಾತ, ನಯಾಗರ ಜಲಪಾತ, ಜೋಗ್‌ ಜಲಪಾತ ಇತ್ಯಾದಿ) ಮತ್ತು ಕುಂಭಕಗಳು ಮೊದಲಾದ ಭೂಸ್ವರೂಪಗಳು ನಿರ್ಮಾಣವಾಗುತ್ತವೆ.
2.ಮಧ್ಯಕಣಿವೆ ಪಾತ್ರ: ಈ ಹಂತದಲ್ಲಿ ನದಿಯು ಮೈದಾನವನ್ನು ಪ್ರವೇಶಿಸುವುದು.ಇಲ್ಲಿ ನದಿಯ ಪಾತ್ರದ ಇಳಿಜಾರು ಕಡಿಮೆಯಾಗುವುದರಿಂದ ನೀರಿನ ವೇಗವೂ ಸಹ ಕಡಿಮೆಯಾಗುವುದು.ಇದರಿಂದ ಹಲವು ವಿಶಿಷ್ಟ ಭೂ ಸ್ವರೂಪಗಳು ನಿರ್ಮಿತವಾಗುತ್ತವೆ. ಅವುಗಳೆಂದರೆ ಮೆಕ್ಕಲು ಬೀಸಣಿಗೆ, ನದಿಯ ತಿರುವುಗಳು ಮೊದಲಾದವು.
3.ಕೆಳಕಣಿವೆ ಪಾತ್ರದಲ್ಲಿ ನದಿಯು ಪ್ರವಾಹ ಮೈದಾನ, ಸ್ವಾಭಾವಿಕ ದಡಕಟ್ಟೆ, ಶೃಂಗ ಸರೋವರ, ಸುಂದರಬನ್ ಮುಖಜಭೂಮಿ, ನೈಲ್‌ನದಿ ಮುಖಜಭೂಮಿ ಮೊದಲಾದ ಭೂ ಸ್ವರೂಪಗಳು ನಿರ್ಮಿತವಾಗುತ್ತವೆ.

|||.ಹೊಂದಿಸಿ ಬರೆಯಿರಿ,
ಸಿಮಾ ……………ಸಾಗರಿಕ ವಲಯದ ಮೇಲ್ಪದರು
ಮರಳುಗಲ್ಲು ……….ಕಣಶಿಲೆ
ಹೊರ ಕೇಂದ್ರ ………ಭೂಕಂಪ
ಬಿಸಿ  ನೀರ ಬುಗ್ಗೆ………..ಅಂತರ್ಜಲ
ಲೋಯಸ್,………..ಹಳದಿ ಮಣ್ಣು

IV ಈ ಕೆಳಗಿನವುಗಳನ್ನು ಅರ್ಥೈಸಿ

16, ಜಲಶಿಲೆಗಳು: ಕಣ ಶಿಲೆಗಳನ್ನೇ ಜಲಶಿಲೆಗಳೆಂದು ಕರೆಯುವರು.ನೀರು, ಗಾಳಿ ಮತ್ತು ಹಿಮ ಮುಂತಾದ ಕರ್ತೃಗಳು ಅಗ್ನಿಶಿಲೆಗಳನ್ನು ಚೂರುಚೂರಾಗಿ ಒಡೆದು ಸವೆಸುತ್ತವೆ. ಒಡೆದ ಶಿಲಾಚೂರುಗಳು ಸಾಗಿಸಲ್ಪಟ್ಟು ಕೆಲವು ಸ್ಥಳಗಳಲ್ಲಿ ಸಂಚಯಗೊಳ್ಳುತ್ತವೆ. ಸಾಮಾನ್ಯವಾಗಿ ಇವು ಸಮುದ್ರ, ಸಾಗರ, ಮೊದಲಾದ ಜಲರಾಶಿಗಳಲ್ಲಿ ಸಂಚಯಿತವಾಗಿ ನಿರ್ಮಿತವಾಗುವುದರಿಂದ ಇವುಗಳನ್ನು ‘ಜಲಶಿಲೆ’ಗಳೆಂದೂ ಕರೆಯುವರು. ಇವುಗಳ ನಿರ್ಮಾಣದಲ್ಲಿ ನೀರು ಮುಖ್ಯ ಪಾತ್ರ ವಹಿಸುವುದು.

17. ಪೆಸಿಫಿಕ್ ಅಗ್ನಿವೃತ್ತ: ಇದು ಜ್ವಾಲಾಮುಖಿ ಕಂಡುಬರುವ ಪ್ರಮುಖ ಪ್ರದೇಶವಾಗಿದೆ. ಪೆಸಿಪಿಕ್ ಸಾಗರ ಕರಾವಳಿ ತೀರಗಳಲ್ಲಿ ಅಂದರೆ ಫಿಲಿಫೈನ್ಸ್, ಜಪಾನ್, ಯುಎಸ್‌ಎ, ಮಧ್ಯಅಮೇರಿಕಾ, ದಕ್ಷಿಣ ಅಮೇರಿಕಾ ಇತ್ಯಾದಿಗಳಲ್ಲಿ ಜ್ವಾಲಾಮುಖಿಗಳಿವೆ.

18. ಭೌತಿಕ ಶಿಥಿಲೀಕರಣ:ಶಿಲೆಗಳು ಯಾವುದೇ ರಾಸಾಯನಿಕ ಬದಲಾವಣೆಯಾಗದೇ ಒಡೆದು ಚೂರಾಗುವ ಮತ್ತು ಕ್ಷೀಣಿಸುವ ಕ್ರಿಯೆಯನ್ನು ಭೌತಿಕ ಶಿಥಿಲೀಕರಣವೆನ್ನುವರು. ಪ್ರಮುಖ ಭೌತಿಕ ಶಿಥಿಲೀಕರಣದ ಕ್ರಿಯೆಗಳೆಂದರೆ ಕಣವಿಭಜನೆ, ಶಿಲಾವಿಭಜನೆ, ಪದರುವಿಭಜನೆ, ಭೌತಿಕ ಶಿಥಿಲೀಕರಣಕ್ಕೆ ಉಷ್ಣಾಂಶ, ಮಳೆ, ಹಿಮ ಇತ್ಯಾದಿ ಮುಖ್ಯಕಾರಣ.

19. ಶಿಲಾನಿಚಯಗಳು’ಶಿಲಾನಿಚಯ’ಗಳು ಹಿಮನದಿ ಸವಕಳಿಕರಣ ಪ್ರದೇಶದಲ್ಲಿ ಕಂಡುಬರುವ ಅತಿ ಮುಖ್ಯ ಭೂ ಸ್ವರೂಪಗಳು. ಇವು ಹಿಮನದಿಯಿಂದ  ಸಂಚಯಿತವಾಗಿರುವ ವಿವಿಧ ಆಕಾರ, ಗಾತ್ರದ ಅಗಾಧ ಪ್ರಮಾಣದ ಶಿಲಾವಸ್ತುಗಳು,

20, ಇಂಗಾಲಾಧಿಕ್ಯ ಶಿಲೆಗಳು: ಜೀವಾವಶೇಷಗಳಾದ ಜಲಚರಗಳ ಚಿಪ್ಪುಗಳು, ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಪಳೆಯುಳಿಕೆಗಳು  ಮಣ್ಣಿನಲ್ಲಿ ಸೇರಿ ಗಟ್ಟಿಯಾಗಿ ಜೈವಿಕ ಕಣಶಿಲೆಗಳಾಗುತ್ತವೆ. ಉದಾಹರಣೆಗೆ ಕಲ್ಲಿದ್ದಲು (ಇಂಗಾಲಾಧಿಕ್ಯಶಿಲೆ)

21. ಸುನಾಮಿ:ಸಮುದ್ರ ಮತ್ತು ಸಾಗರ ತಳದಲ್ಲಿ ಉಂಟಾಗುವ ಭೂಕಂಪನಗಳಿಂದ ಸಾಗರಗಳಲ್ಲಿ ಅತಿ ಎತ್ತರವಾದ ಭೀಕರ ಅಲೆಗಳು ತೀರಕ್ಕೆ ಅಪ್ಪಳಿಸುತ್ತವೆ. ಇವುಗಳನ್ನು ಸುನಾಮಿ ಎಂದು ಕರೆಯುವರು. ಇದು ಜಪಾನ್ ಭಾಷೆಯ ಪದವಾಗಿದ್ದು, ಇದರ ಅರ್ಥ ತೀರಕ್ಕೆ ಅಪ್ಪಳಿಸುವ ಎತ್ತರದ ಅಲೆಗಳು (ಬಂದರು ಅಲೆಗಳು).

22. ಭೂಖಂಡ ಹಿಮನದಿ:ಪರ್ವತದ ಅತಿ ಎತ್ತರ ಭಾಗಗಳಲ್ಲಿ ಮತ್ತು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ಆಗಾಧವಾದ ಹಿಮರಾಶಿ ಕಂಡುಬರುತ್ತದೆ. ಹಿಮರಾಶಿಯು ಅದರ ಭಾರ ಹಾಗೂ ಗುರುತ್ವಾಕರ್ಷಣ ಬಲದಿಂದ ಇಳಿಜಾರಿನವರೆಗೆ ಜಾರುವುದನ್ನು ಹಿಮನದಿ ಎನ್ನುವರು.
ಧ್ರುವಪ್ರದೇಶಗಳಲ್ಲಿರುವ ವಿಸ್ತಾರವಾದ ಮಂಜುಗಡ್ಡೆಯ ಹಾಳೆಯನ್ನು ಖಂಡಾಂತರ ಹಿಮನದಿ ಎನ್ನುವರು. ಉದಾ : ಗ್ರೀನ್‌ ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾ

23. ಬಿಸಿನೀರ ಚಿಲುಮೆ: ಈ ಚಿಲುಮೆಗಳಲ್ಲಿ ಬಿಸಿನೀರು ಹೊರ ಬೀಳುವುದು. ಇವುಗಳು ಸಾಮಾನ್ಯವಾಗಿ ಜ್ವಾಲಾಮುಖಿ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಅಧ್ಯಾಯ 13

ವಾಯುಗೋಳ

ಎಂಟನೇ ತರಗತಿ ಭಾಗ-1

ಅಭ್ಯಾಸಗಳು

ಬಿಟ್ಟಿರುವ ಸ್ಥಳವನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.

1 ವಾಯುಮಂಡಲದ ಎರಡು ಪ್ರಮುಖ ಅನಿಲಗಳೆಂದರೆ ನೈಟ್ರೋಜನ್ ಮತ್ತು ಆಕ್ಸಿಜನ್.

2 ವಾಯುಮಂಡಲದ ಅತ್ಯಂತ ಕೆಳ ಸ್ತರ ಪರಿವರ್ತನಾ ಮಂಡಲ ಆಗಿದೆ.

3 ಸಮುದ್ರ ಮಟ್ಟದಲ್ಲಿ ವಾಯುಮಂಡಲದ ಸರಾಸರಿ ಒತ್ತಡವು …1013.25 ಮಿಲಿ ಬಾರ್ ಗಳಷ್ಟು ಆಗಿದೆ.

4 ಪಶ್ಚಿಮ ಮಾರುತಗಳನ್ನು ಪ್ರತಿ ವಾಣಿಜ್ಯ ಮಾರುತಗಳು ಎಂದೂ ಕರೆಯುತ್ತಾರೆ.

5 ಹವಾಮಾನದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ -ಪವನ ವಿಜ್ಞಾನ ಶಾಸ್ತ್ರ ಆಗಿದೆ.

|| ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

6. ವಾಯುಗೋಳ ಎಂದರೇನು ?
ಭೂಮಿಯನ್ನು ಸುತ್ತುವರಿದಿರುವ ಅನಿಲಗಳು, ಧೂಳಿನಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ವಾಯುಗೋಳವೆಂದು ಕರೆಯುತ್ತೇವೆ.

7.ವಾಯುಗೋಳದ ಪ್ರಮುಖ ಪದರುಗಳನ್ನು ಹೆಸರಿಸಿ.
ವಾಯುಗೋಳವನ್ನು ಐದು ಪದರುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪರಿವರ್ತನಾಮಂಡಲ, ಸಮೋಷ್ಣಮಂಡಲ, ಮಧ್ಯಂತರಮಂಡಲ, ಅಯಾನ್‌ಮಂಡಲ ಮತ್ತು ಬಾಹ್ಯಮಂಡಲ.

8.ಓಜೋನ್ ಪದರದ ಪ್ರಾಮುಖ್ಯತೆಯೇನು?
ಓಜೋನ್  ಪದರವು ಸೂರ್ಯನಿಂದ ಬರುವ ಅತಿನೇರಳೆ  (ಆಲ್ಟ್ರಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ.

9.ಶಾಂತವಲಯ ಎಂದರೇನು? ಅದು ಎಲ್ಲಿ ಕಂಡುಬರುತ್ತದೆ.
ಗಾಳಿಯ ಚಲನೆ ಕಡಿಮೆ ಇರುವ, ಪ್ರಶಾಂತತೆಯನ್ನು ಹೊಂದಿರುವ ವಲಯವೇ ಶಾಂತ ವಲಯ. ಈ ವಲಯವು ಸಮಭಾಜಕವೃತ್ತದಿಂದ 5° ಉತ್ತರ ಮತ್ತು 5°ದಕ್ಷಿಣ ಅಕ್ಷಾಂಶದವರೆಗೆ ಕಂಡು ಬರುವುದು. ಈ ಭಾಗವು ವರ್ಷವೆಲ್ಲಾ ಸೂರ್ಯನ ನೇರವಾದ ಕಿರಣಗಳನ್ನು ಪಡೆಯುವುದು. ಇದರಿಂದ ಗಾಳಿಯು ಹೆಚ್ಚು ಉಷ್ಣಾಂಶದಿಂದ ಕೂಡಿದ್ದು, ಬಿಸಿಯಾಗಿರುತ್ತದೆ ಹಾಗೂ ಅದರ ಚಲನೆ ಕಡಿಮೆಯಾಗಿರುತ್ತದೆ.

10.ನಿರಂತರ ಮಾರುತಗಳ ವಿಧಗಳನ್ನು ಹೆಸರಿಸಿ.
ನಿರಂತರ ಮಾರುತಗಳಲ್ಲಿ ಮೂರು ವಿಧ.
1.ವಾಣಿಜ್ಯ ಮಾರುತಗಳು,
2. ಪ್ರತಿ ವಾಣಿಜ್ಯ ಮಾರುತಗಳು
3. ಧ್ರುವೀಯ ಮಾರುತಗಳು.

||.ಸ್ಥಳೀಯ ಮಾರುತಗಳೆಂದರೇನು ? ಯಾವುದಾದರೂ ಎರಡು ಉದಾಹರಣೆ ಕೊಡಿ?
ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ, ತೇವಾಂಶದಲ್ಲಿ ವ್ಯತ್ಯಾಸಗಳ ಪರಿಣಾಮವಾಗಿ ಸ್ಥಳೀಯ ಮಾರುತಗಳುಂಟಾಗುತ್ತವೆ.  ಪ್ರಮುಖ ಸ್ಥಳೀಯ ಮಾರುತಗಳಾವುವೆಂದರೆ, ಭೂಗಾಳಿ, ಸಮುದ್ರಗಾಳಿ, ಪರ್ವತಗಾಳಿ, ಕಣಿವೆಗಾಳಿ.

12 ಮೋಡಗಳ ವಿಧಗಳನ್ನು ತಿಳಿಸಿ.
ಮೋಡಗಳನ್ನು ಅವುಗಳ ಆಕಾರ, ಎತ್ತರ ಮತ್ತು ಇತರ ಲಕ್ಷಣಗಳ ಆಧಾರದಿಂದ ಮೂರು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ :
1.ಪದರು ಮೋಡಗಳು (Stratus Clouds): ಇವುಗಳು ವಾಯುಮಂಡಲದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುತ್ತವೆ. ಭೂಮಿಯ ಮೇಲ್ಮೈ ನಿಂದ 2.ಕಿ.ಮೀ. ಗಳಷ್ಟು ಎತ್ತರದವರೆಗೆ ಇವುಗಳು ಕಂಡು ಬರುತ್ತವೆ. ಇವು ತೆಳುವಾದ ಹಾಳೆ ಅಥವಾ ವಿಸ್ತಾರವಾದ ಪದರುಗಳಂತೆ ಕಾಣುತ್ತವೆ. ಪದರು ಮೋಡಗಳು ಉತ್ತಮ ಹವಾಮಾನಕ್ಕೆ ಸಹಕಾರಿಯಾಗಿದ್ದು ಅಲ್ಪ ಮಳೆಯನ್ನು ಸುರಿಸುತ್ತದೆ.
2.ರಾಶಿ ಮೋಡಗಳು (Cumulus Clouds): ರಾಶಿ ಮೋಡಗಳು ಊರ್ಧ್ವಮುಖವಾಗಿ ಬೆಳೆದಿದ್ದು ಇದರ ಮೇಲೆ ಗೋಪುರಾ, ಬಾಗಿರುವುದರಿಂದ ಹೂಕೋಸಿನ ರಚನೆಯನ್ನು ಹೋಲುತ್ತದೆ. ಇವುಗಳು ಮಳೆತರುವ ಮೋಡಗಳಾಗಿವೆ.

3.ಹಿಮಕಣ ಮೋಡಗಳು (Cirrus Clouds): ಇವುಗಳು ವಾಯುಮಂಡಲದಲ್ಲಿ ಅತಿ ಹೆಚ್ಚು ಎತ್ತರದಲ್ಲಿ ಅಂದರೆ 6 ಕಿ.ಮೀ.ಗಳಿಗಿಂತ ಎತ್ತರದಲ್ಲಿರುತ್ತವೆ. ಈ ಮೋಡಗಳು ‘ಗುಂಗುರುಕೂದಲ’ನ್ನು ಹೋಲುತ್ತಿದ್ದು ರೆಕ್ಕೆ ಅಥವಾ ನಾರನ್ನು ಹೊಂದಿರುವಂತೆ ಕಾಣುತ್ತವೆ. ಇದು ಹಿತಕರವಾದ ಹವಾಮಾನ ಸ್ಥಿತಿಯನ್ನು ಸೂಚಿಸುತ್ತದೆ ಹಾಗೂ ಈ ಮೋಡಗಳಲ್ಲಿ ಪ್ರಕಾಶಮಾನವಾಗಿ ಸೂರ್ಯ ಬೆಳಗುತ್ತಾನೆ. ಗಾಳಿಯಲ್ಲಿ ಈ ಮೋಡಗಳು ಹಿಂಜಿದ ಅರಳೆಯಂತೆ ತೇಲುತ್ತವೆ.

4.ರಾಶಿವೃಷ್ಟಿ ಮೋಡಗಳು (Nimbus) : ಈ ಮೋಡಗಳು ಮಳೆತರುವ ಮೋಡಗಳಾಗಿದ್ದು ಕೆಳಮಟ್ಟದಲ್ಲಿರುತ್ತವೆ. ಈ ಮೋಡಗಳು ಪದರು ಅಥವಾ ರಾಶಿಮೋಡಗಳ ಆಕಾರದಲ್ಲಿರುತ್ತವೆ. ಇವು ಹೆಚ್ಚು ಮಳೆ ಮತ್ತು ಹಿಮಮಳೆಯನ್ನು ಸುರಿಸುತ್ತವೆ.

13 ಹವಾಗುಣ ಮತ್ತು ವಾಯುಗುಣಕ್ಕಿರುವ ವ್ಯತ್ಯಾಸಗಳೇನು?
ಒಂದು ಸ್ಥಳದ ಅಲ್ಪಾವಧಿಯ ವಾಯುಮಂಡಲದ ಪರಿಸ್ಥಿತಿಯನ್ನು ಹವಾವಾನ ಎನ್ನುವರು. ಉದಾ: ಮೋಡಯುಕ್ತ ಪ್ರಖರ ಬಿಸಿಲು, ಶುಭ್ರಹವಾಮಾನ.

ಒಂದು ಪ್ರದೇಶದ ದೀರ್ಘಾವಧಿಯ ಹವಾಮಾನದ ಸರಾಸರಿಯನ್ನು ವಾಯುಗುಣವೆನ್ನುವರು. ಉದಾ: ಸಮಭಾಜಕ ವೃತ್ತದ ವಾಯುಗುಣ, ಟಂಡ್ರಾ ವಾಯುಗುಣ, ಮರುಭೂಮಿ ವಾಯುಗುಣ, ಮೆಡಿಟರೇನಿಯನ್ ವಾಯುಗುಣ ಮೊದಲಾದವು.

III ಈ ಕೆಳಗಿನವುಗಳನ್ನು ಅರ್ಥೈಸಿ.

14 ಆಯಾನವಲಯ
ವಾಯುಗೋಳದಲ್ಲಿ ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ. ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ. ಈ ಪದರದಲ್ಲಿನ ಅತ್ಯಧಿಕ ಈ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು ಆಯಾನುಮಂಡಲ’ವೆಂದು ಕರೆಯುವರು. ಈ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ರೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.

15 ಸಾಮಾನ್ಯ ಇಳಿಕೆಯದರ
ಎತ್ತರಕ್ಕೆ ಹೋದಂತೆ ಅನಿಲಗಳು ಕಡಿಮೆಯಾಗುವುದರಿಂದ ಸಾಂದ್ರತೆ ಕಡಿಮೆಯಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ. ಇದನ್ನು ಉಷ್ಣಾಂಶದ ಸಾಮಾನ್ಯ ಇಳಿಕೆ ದರ ಎನ್ನುವರು.

16 ಶೀತವಲಯ
ಶೀತವಲಯ (Frigid Zone): ಇದು ಅತ್ಯಂತ ಶೀತ ಪ್ರದೇಶ. ಇದು 66%2° (ಆರ್ಕ್ಟಿಕ್ ವೃತ್ತ) ಉತ್ತರದಿಂದ 90% ಉತ್ತರ ಧ್ರುವದವರೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ 66% ದಕ್ಷಿಣದಿಂದ (ಅಂಟಾರ್ಕ್ಟಿಕ್ ವೃತ್ತ) 90 ದಕ್ಷಿಣ ಧ್ರುವದವರೆಗಿರುವುದು. ಈ ಅತ್ಯಂತ ಓರೆಯಾಗಿ ಬೀಳುವುದರಿಂದ, ಉಷ್ಣಾಂಶ ಅತಿ ಸ್ವಲ್ಪ ಹೆಚ್ಚಾಗುತ್ತದೆ ಮತ್ತು ಚಳಿಗಾಲದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ. ಸೂರ್ಯನ ಕಿರಣಗಳು ಬೇಸಿಗೆಯಲ್ಲಿ ಉಷ್ಣಾಂಶ

17 ಅಶ್ವಅಕ್ಷಾಂಶ
ಉತ್ತರ ಉಪ-ಉಷ್ಣವಲಯದ ಅಧಿಕ ಒತ್ತಡ  ಪಟ್ಟಿಗಳು 30 ಉ, ದಿಂದ 35 ಉ. ಅಕ್ಷಾಂಶಗಳವರೆಗೆ ಕಂಡು ಬರುತ್ತವೆ. ಈ ವಲಯವನ್ನು ಅಶ್ವ ಅಕ್ಷಾಂಶ ಗಳೆಂದು ಸಹ ಕರೆಯುವರು.

18 ಆರೋಹಮಳೆ (ಪರ್ವತಮಳೆ)
ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನಿಕರೀಸಿ ಮಳೆ ಬೀಳುವುದು. ಹೀಗೆ ಪರ್ವತಗಳಿಂದ ಉಂಟಾಗುವ ಮಳೆಯೇ ಪರ್ವತ ಮಳೆ ಅಥವಾ ಆರೋಹ ಮಳೆ.

19 ವಾಯುಗುಣ ಶಾಸ್ತ್ರ
ವಾಯುಗುಣದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರವನ್ನು ವಾಯುಗುಣ ಶಾಸ್ತ್ರ ಎನ್ನುವರು.

ಅಧ್ಯಾಯ  14

ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ

ಖಾಲಿ ಜಾಗಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1 ಅರ್ಥಶಾಸ್ತ್ರದ ಮೂಲ ಪದವು ಗ್ರೀಕ್ ಭಾಷೆಯ . ಓಕೊಸ್ ಮತ್ತು ನೊಮೊಸ್ ಎಂಬ ಎರಡು ಪದಗಳಿಂದಾಗಿದೆ.

2. ಮೌರ್ಯರ ಆಸ್ಥಾನದಲ್ಲಿದ್ದ ಕೌಟಿಲ್ಯನು ರಚಿಸಿದ ಗ್ರಂಥ ಅರ್ಥಶಾಸ್ತ್ರ.

3 ಸರಕು-ಸೇವೆಗಳಲ್ಲಿರುವ ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ಗುಣಕ್ಕೆ ತುಷ್ಟಿಗುಣಎನ್ನುವರು.

4 ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಬೌದ್ಧಿಕ ಕೆಲಸಕ್ಕೆ ಆರ್ಥಿಕ ಚಟುವಟಿಕೆಗಳು ಎಂದು ಕರೆಯುತ್ತಾರೆ.

|| ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

5 .ಅರ್ಥಶಾಸ್ತ್ರ ಎಂದರೇನು ?
ಮಾನವನ ದಿನನಿತ್ಯದ ಆರ್ಥಿಕ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ಅರ್ಥಶಾಸ್ತ್ರ.

6 ಅರ್ಥಶಾಸ್ತ್ರದ ಪಿತಾಮಹ ಎಂದು ಯಾರನ್ನು ಗುರುತಿಸಲಾಗಿದೆ ?
‘ಆಡಂ ಸ್ಮಿತ್’ ಅವರನ್ನು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

7 .ಆರ್ಥಿಕ ಚಟುವಟಿಕೆಗಳು ಎಂದರೇನು ?
ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಬೌದ್ಧಿಕ ಕೆಲಸಕ್ಕೆ  ಆರ್ಥಿಕ ಚಟುವಟಿಕೆಗಳು ಎಂದು ಕರೆಯುತ್ತಾರೆ.

8. ವಿದ್ಯಾರ್ಥಿಯೊಬ್ಬ ಪೆನ್ನು ಕೊಂಡು ಬಳಸುತ್ತಾನೆ. ಇದು ಯಾವ ಬಗೆಯ ಆರ್ಥಿಕ ಚಟುವಟಿಕೆ ?
ಅನುಭೋಗಿ ಚಟುವಟಿಕೆ.

|| ಕೆಳಗಿನ ಪ್ರಶ್ನೆಗಳಿಗೆ ನಾಲೈದು ವಾಕ್ಯಗಳಲ್ಲಿ ಉತ್ತರಿಸಿ.

9 ಮಾನವನ ಆರ್ಥಿಕ ಚಟುವಟಿಕೆಗಳಾವುವು ?
ಮಾನವನ ಆರ್ಥಿಕ ಚಟುವಟಿಕೆಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದ್ದಾರೆ.
1. ಉತ್ಪಾದಕ ಚಟುವಟಿಕೆಗಳು: ಸರಕು ಸೇವೆಗಳನ್ನು ಉತ್ಪಾದಿಸಲು ಕೈಗೊಳ್ಳಲಾಗುವ ಚಟುವಟಿಕೆಗಳೆ, ಉತ್ಪಾದಕ ಚಟುವಟಿಕೆಗಳು.
2.ಅನುಭೋಗಿ ಚಟುವಟಿಕೆಗಳು: ಮಾನವನು ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಸರಕು ಸೇವೆಗಳನ್ನು ಬಳಸಿಕೊಳ್ಳುವ ಚಟುವಟಿಕೆಗಳೆ ಅನುಭೋಗಿ ಚಟುವಟಿಕೆಗಳು.
3.ವಿನಿಮಯ ಚಟುವಟಿಕೆಗಳು: ಸರಕುಗಳ ಸಂಗ್ರಹಣೆ, ಸಾಗಾಟ, ಮಾರುವ ಮತ್ತು ಕೊಳ್ಳುವ ಚಟುವಟಿಕೆಗಳು ಇವು ವಿನಿಮಯ ಚಟುವಟಿಕೆಯಲ್ಲಿ ಬರುತ್ತವೆ.
4.ವಿತರಣೆ ಚಟುವಟಿಕೆಗಳು: ಉತ್ಪಾದನೆಯಿಂದ ಬಂದ ಆದಾಯವನ್ನು ಉತ್ಪಾದನೆಯಲ್ಲಿ ಸಹಾಯ ಮಾಡಿದ ಉತ್ಪಾದನಾಂಗಗಳಿಗೆ ಹಂಚಬೇಕಾದ ಚಟುವಟಿಕೆಯೇ ವಿತರಣಾ ಚಟುವಟಿಕೆ.
10 ಅರ್ಥಶಾಸ್ತ್ರವನ್ನು ನಾವೇಕೆ ಅಧ್ಯಯನ ಮಾಡಬೇಕು ?
ಅರ್ಥಶಾಸ್ತ್ರವನ್ನು ನಾವು ಅಧ್ಯಯನ ಮಾಡಬೇಕು ಏಕೆಂದರೆ,
1.ಅರ್ಥಶಾಸ್ತ್ರವು ನಮ್ಮ ಸುತ್ತಮುತ್ತ ಕಂಡುಬರುವ ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ ಮುಂತಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
2.ನಮ್ಮಲ್ಲಿರುವ ಮಿತವಾದ ಸಂಪನ್ಮೂಲಗಳಿಂದ ಅಮಿತವಾದ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಮುಂದಾದಾಗ ಉಂಟಾಗುವ ಆಯ್ಕೆಯ ಸಮಸ್ಯೆಗಳಿಗೆ ಅರ್ಥಶಾಸ್ತ್ರ ಪರಿಹಾರಗಳನ್ನು ಒದಗಿಸುತ್ತದೆ.
3. ಅರ್ಥಶಾಸ್ತ್ರವು ಬೆಲೆಗಳ ಏರಿಳಿತದ ಕಾರಣಗಳು ಮತ್ತು ಪರಿಣಾಮಗಳನ್ನು ಗುರುತಿಸಿ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಉಪಾಯಗಳನ್ನು ಸೂಚಿಸುತ್ತದೆ.
4. ಭೂಮಿ, ನೀರು, ಅರಣ್ಯ, ಖನಿಜಗಳು ಮುಂತಾದ ನೈಸರ್ಗಿಕ ಸಂಪತ್ತುಗಳು ಮಿತವಾಗಿದ್ದು ಅವುಗಳನ್ನು ಮಿತವಾಗಿ ಮತ್ತು ದಕ್ಷವಾಗಿ ಬಳಸಿಕೊಳ್ಳುವುದನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಅರ್ಥಶಾಸ್ತ್ರವು ಸೂಚಿಸುತ್ತದೆ.

II ಕಾಲದಿಂದ ಕಾಲಕ್ಕೆ ಅರ್ಥಶಾಸ್ತ್ರದ ಅರ್ಥ ಹೇಗೆ ಬದಲಾಗಿದೆ ?
18ನೇ ಶತಮಾನದಲ್ಲಿ ಆಡಂಸ್ಮಿತ್ ಅವರು ಅರ್ಥಶಾಸ್ತ್ರವು ‘ಸಂಪತ್ತನ್ನು ಕುರಿತು ಅಧ್ಯಯನ ಮಾಡುತ್ತದೆ’ ಎಂದು ಹೇಳಿದ್ದಾರೆ. ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ಕುಟುಂಬದ ಎಲ್ಲಾ ಸದಸ್ಯರು ಸುಖ ನೆಮ್ಮದಿಯಿಂದ ಬದುಕುವಂತೆ ನಿರ್ವಹಿಸುವುದು ಎಂದು ಅರ್ಥ. ಕಾಲಕ್ರಮೇಣ ಅರ್ಥಶಾಸ್ತ್ರದ ವ್ಯಾಪ್ತಿ ವಿಸ್ತರಣೆಗೊಂಡು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದವರೆಗೆ ವ್ಯಾಪಿಸಿದೆ. ಮೌರ್ಯರ ಕಾಲದಲ್ಲಿ ರಾಜ್ಯಡಳಿತದ ವಿವರಗಳ ಜೊತೆಗೆ ಹಣಕಾಸು ನಿರ್ವಹಣೆ ಹಾಗೂ ಸಾರ್ವಜನಿಕ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ ಸಿಗುತ್ತದೆ.

IV ಚಟುವಟಿಕೆಗಳು :

12 ನಿಮ್ಮ ಕುಟು೦ಬದ ಸದಸ್ಯರು ಕೈಗೊಂಡಿರುವ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿಮಾಡಿರಿ.
ನಮ್ಮ ಕುಟುಂಬದಲ್ಲಿ ನಮ್ಮ ತಂದೆಯವರು ಶಿಕ್ಷಕರಾಗಿದ್ದು ಅವರು ಸರ್ಕಾರಿ ಶಿಕ್ಷಕರಾಗಿದ್ದಾರೆ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಸಂಬಳ ಬರುತ್ತದೆ. ಆ ಸಂಬಳದಿಂದ ನಮ್ಮ ಮನೆಯ ಖರ್ಚು ವೆಚ್ಚಗಳು ನಡೆಯುತ್ತಿವೆ. ನಮ್ಮ ತಾಯಿ ಕೂಡ ಶಿಕ್ಷಕಿಯಾಗಿದ್ದು ಅವರ ಸಂಬಳವೂ ಕೂಡ ನಮ್ಮ ಮನೆಯ ಖರ್ಚು ವೆಚ್ಚಕ್ಕೆ ಸಾಕಾಗುತ್ತಿದೆ.

13 ನಿಮ್ಮ ಸುತ್ತಮುತ್ತಲಿನ ಅಥವಾ ನಿಮ್ಮ ಗ್ರಾಮದಲ್ಲಿನ ಜನರು ಮಾಡುತ್ತಿರುವ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗುರುತಿಸಿ.
ನಮ್ಮ ಗ್ರಾಮದಲ್ಲಿ ಮುಖ್ಯವಾಗಿ ಕೃಷಿ ಚಟುವಟಿಕೆಯೇ ಹೆಚ್ಚು ಆರ್ಥಿಕ ಚಟುವಟಿಕೆಯಾಗಿದೆ, ಜಮೀನು ಇರುವವರು ತೋಟ, ತರಕಾರಿ ಮತ್ತು ಮೆಕ್ಕೆಜೋಳ ಬೆಳೆಯುವ ಮೂಲಕ ತಮ್ಮ ಆರ್ಥಿಕ ಚಟುವಟಿಕೆಯನ್ನು ಮುಂದುವರಿಸುತ್ತಿದ್ದಾರೆ. ಜಮೀನು ಇಲ್ಲದವರು, ಬೇರೆ ಬೇರೆ ಕಡೆ ಕೆಲಸ ಮಾಡಿ ಕೂಲಿ ಕೆಲಸ ಮಾಡಿ ತಮ್ಮ ಆರ್ಥಿಕ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತಿದ್ದಾರೆ.

14 ಪ್ರತಿದಿನ ನೀವು ಅನುಭೋಗಿಸುವ ವಸ್ತುಗಳನ್ನು ಪಟ್ಟಿಮಾಡಿರಿ.
ಅಕ್ಕಿ, ಗೋಧಿ, ಬೇಳೆ ,ತರಕಾರಿ, ಹಣ್ಣು ಹಂಪಲು, ಸಾರಿಗೆ, ಕಂಪ್ಯೂಟರ್, ಮೊಬೈಲ್, ವಿದ್ಯುತ್ ಶಕ್ತಿ, ಟಿವಿ ಇತ್ಯಾದಿ

15 ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ಹೇಗೆ ನಿರ್ಧರಿಸುತ್ತಾರೆಂಬುದನ್ನು ಗಮನಿಸಿ.
ಪ್ರತಿ ವರ್ಷವೂ ಮಳೆ ಕಾಲದಲ್ಲಿ ಬೆಳೆಯುವ ಬೆಳೆಯನ್ನು ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಾರೆ. ನೀರಾವರಿ ಸೌಲಭ್ಯವಿರುವ ಹೊಲಗಳಲ್ಲಿ ತೋಟ ಮಾಡುತ್ತಾರೆ. ತರಕಾರಿ ಬೆಳೆಯುತ್ತಾರೆ. ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುತ್ತಾರೆ.

ವ್ಯವಹಾರ ಅರ್ಥ ಮತ್ತು ಪ್ರಾಮುಖ್ಯ ಅಧ್ಯಾಯ 15

ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸರಿಯಾದ ಪದಗಳಿಂದ ತುಂಬಿ

1.ಪುನರ್ ರಫ್ತು ವ್ಯಾಪಾರಕ್ಕೆ ಸಿಂಗಪುರಒಂದು ಮುಖ್ಯ ನಿದರ್ಶನವಾಗಿದೆ.

2.ಗೃಹ ಕೈಗಾರಿಕೆಗಳು ಸಾಮಾನ್ಯವಾಗಿ –ಹಳ್ಳಿಗಳಲ್ಲಿ ಕೇಂದ್ರಿಕೃತವಾಗಿರುತ್ತವೆ

3. ರಾಸಾಯನಿಕ ವಸ್ತುಗಳ ತಯಾರಿಕೆ ಸಾಮಾನ್ಯವಾಗಿ – ಸಣ್ಣ ಪ್ರಮಾಣದ- ಕೈಗಾರಿಕೆಗಳಲ್ಲಿ ಆಗುತ್ತದೆ.

4.ವ್ಯಾಪಾರದ ಮುಖ್ಯ ಉದ್ದೇಶ ನ್ಯಾಯಯುಕ್ತಲಾಭಗಳಿಸುವುದಾಗಿರಬೇಕು.

5 ಪದಾರ್ಥಗಳ ಗುಣಮಟ್ಟ ಕಾಪಾಡಲು ಭಾರತೀಯ ಮಾನಕ( bureau of Indian standards)ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

|| ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ,

6. ಸಂಚಾರಿ ಅಂಗಡಿಗಳ ವಿವಿಧ ವಿಧಗಳಾವುವು?
ಸಂಚಾರಿ ವ್ಯಾಪಾರಿಗಳು ಒಂದು ನಿರ್ದಿಷ್ಟ ಜಾಗದಲ್ಲಿ ವ್ಯಾಪಾರ ಮಾಡುವುದಿಲ್ಲ.ಇವ‌ರಲ್ಲಿ ಮುಖ್ಯವಾದವರೆಂದರೆ, ತಲೆ ಹೊರೆ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು (ಮಾರುಕಟ್ಟೆ ವ್ಯಾಪಾರಿಗಳು) ಮತ್ತು ಸಂತೆ ವ್ಯಾಪಾರಿಗಳು.

7 .ಸಗಟು ವ್ಯಾಪಾರಿಗಳೆಂದರೆ ಯಾರು?
ಸಗಟು ವ್ಯಾಪಾರಿಗಳು ಸರಕುಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಕರಿಂದ ಕೊಂಡು, ಸಣ್ಣ ಪ್ರಮಾಣದಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾರೆ. ಇವರು ಚಿಲ್ಲರೆ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಇವರು ಉತ್ಪಾದಕರ ಮತ್ತು ಚಿಲ್ಲರೆ ವ್ಯಾಪಾರಿಗಳ ನಡುವಿನ ಕೊಂಡಿಯಾಗಿದ್ದಾರೆ.

8. ವಿದೇಶ ವ್ಯಾಪಾರದ ಮೂರು ವಿಧಗಳನ್ನು ತಿಳಿಸಿ,
ವಿದೇಶಿ ವ್ಯಾಪಾರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಯಾವುವೆಂದರೆ, ಆಮದು, ರಫ್ತು ಮತ್ತು ಪುನರ್ ರಫ್ತು.

9.ಗೃಹ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳನ್ನು ತಿಳಿಸಿ.
ಗೃಹ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ಕೆಲವು ವಸ್ತುಗಳಿಗೆ ಉದಾಹರಣೆಗಳೆಂದರೆ ರಾಸಾಯನಿಕ ವಸ್ತುಗಳು, ಇಂಜಿನಿಯರಿಂಗ್ ವಸ್ತುಗಳು, ಪಾದರಕ್ಷೆಗಳು, ಬೈಸಿಕಲ್ಲುಗಳು, ರೇಡಿಯೋ, ಹೊಲಿಗೆಯಂತ್ರಗಳು ಮುಂತಾದವು.

10. ಸ್ಥಳದ ಅಭಾವ ಮತ್ತು ನಷ್ಟ ಭಯ ನಿವಾರಿಸಲು ಸ್ಥಾಪಿತವಾಗಿರುವ ಸೇವೆಗಳಾವುವು?
ಸ್ಥಳದ ಅಡಚಣೆಯನ್ನು ನಿವಾರಿಸಲು ಸಾಗಾಟದ ವ್ಯವಸ್ಥೆಯ ಸಾರಿಗೆ ಸೇವೆಗಳನ್ನು ಬಳಸಲಾಗುತ್ತದೆ.ನಷ್ಟದ ತೊಡಕುಗಳನ್ನು ನಿವಾರಿಸಲು ವಿಮಾ ಸೌಲಭ್ಯಗಳಿವೆ. ಇವುಗಳಲ್ಲಿ ಮುಖ್ಯವಾದುವು. ಅಗ್ನಿವಿಮೆ ಮತ್ತು ಜಲವಿಮೆ.
II. ಲಾಭದ ಆಸೆಯಿಂದ ಕೆಲವು ವ್ಯಾಪಾರಗಾರರು ಕೆಲವು ಅಹಿತಕರ ಪದ್ದತಿಗಳನ್ನು ಅನುಸರಿಸುತ್ತಾರೆ. ಇವು ಯಾವುವು?
ಕೆಲವು ವ್ಯಾಪಾರಗಾರರು ಅಹಿತಕರ ವ್ಯವಹಾರ ಪದ್ಧತಿಗಳನ್ನು ಅನುಸರಿಸುತ್ತಾರೆ. ಈ ಅಹಿತಕರ ಪದ್ಧತಿಗಳಲ್ಲಿ ಮುಖ್ಯವಾದುವು ವಸ್ತುಗಳ ಕಲಬೆರಕೆ, ಹೆಚ್ಚು ಲಾಭ, ತೂಕ ಮತ್ತು ಅಳತೆಗಳಲ್ಲಿ ಮೋಸ, ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಪರಿಸ್ಥಿತಿ ಏರ್ಪಡಿಸುವುದು, ಕಾಳ ಸಂತೆ (Black Market) ಯಲ್ಲಿ ವಸ್ತುಗಳನ್ನು ಮಾರುವುದು ಮುಂತಾದುವು.

||| ಈ ಕೆಳಗಿನ ಪ್ರಶ್ನೆಗಳಿಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ,

13 ವ್ಯವಹಾರದ ಆರ್ಥಿಕ ಉದ್ದೇಶಗಳೇನು?
ವ್ಯವಹಾರದ ಆರ್ಥಿಕ ಉದ್ದೇಶಗಳು
1.ವ್ಯವಹಾರದ ಉದ್ದೇಶ ಒಂದು ನ್ಯಾಯಯುಕ್ತ ಲಾಭಗಳಿಕೆಯಾಗಿದ್ದು ಇದು ವ್ಯವಹಾರವು ಸಮರ್ಪಕವಾಗಿ ನಡೆಯಲು ಸಾಕಾಗುವ ವೆಚ್ಚವನ್ನು  ಭರಿಸಿ ವ್ಯವಹಾರಸ್ಥನು ಸುಖಮಯ ಜೀವನ ಸಾಗಿಸುವಷ್ಟಿರಬೇಕು.
2. ವ್ಯವಹಾರವು ವಸ್ತುಗಳನ್ನು ಮತ್ತು ಸೇವೆಗಳನ್ನು ಗ್ರಾಹಕರಿಗೆ ಪೂರೈಸುತ್ತದೆ ಮತ್ತು ಗ್ರಾಹಕರನ್ನು ಸೃಷ್ಟಿಸುತ್ತದೆ.
3. ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತದೆ.
4. ಗ್ರಾಹಕರಿಗೆ ಕಾಲಕಾಲಕ್ಕೆ ಬೇಕಾದ ಹೊಸ ಹೊಸ ಬದಲಾವಣೆಗಳಿಗನುಸಾರವಾಗಿ ವಸ್ತುಗಳನ್ನು ಉತ್ಪಾದಿಸಿ ಪೂರೈಸುತ್ತದೆ.
5. ಹೊಸ ಹೊಸ ಸಂಶೋಧನೆಗಳ ಮೂಲಕ ಉತ್ಪಾದನೆಯಲ್ಲಿ ಬದಲಾವಣೆಗಳನ್ನು ತರುತ್ತದೆ.
6. ಹೊಸ ಉತ್ಪಾದನೆಗಳ ಬಗ್ಗೆ ಗ್ರಾಹಕರಿಗೆ ಜಾಹಿರಾತಿನ ಮೂಲಕ ತಿಳಿಸುತ್ತದೆ.

14 ವ್ಯವಹಾರದ ಸಾಮಾಜಿಕ ಉದ್ದೇಶಗಳೇನು?

ಸಾಮಾಜಿಕ ಉದ್ದೇಶಗಳು
1.ವ್ಯವಹಾರವು ದೇಶದ ಪ್ರಗತಿಗೆ ಬೇಕಾದ ವಸ್ತುಗಳನ್ನು ಉತ್ಪಾದಿಸುತ್ತದೆ ಮತ್ತು ಒದಗಿಸುತ್ತದೆ.
2.ಆನೇಕ ಜನರಿಗೆ ಉದ್ಯೋಗಗಳನ್ನು ಕಲ್ಪಿಸಿ, ಅವರಿಗೆ ಸಂಬಳ ಅಥವಾ ಮಜೂರಿಗಳ ಮೂಲಕ ವರಮಾನ ಕೊಟ್ಟು ಅವರ ಜೀವನ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.
3. ಕರ ಮತ್ತು ತೆರಿಗೆಗಳನ್ನು ಪಾವತಿ ಮಾಡುವದರ ಮೂಲಕ ಸರ್ಕಾರದ ಆದಾಯ ಹೆಚ್ಚಿ ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
4.ಶಾಲಾ ಕಾಲೇಜುಗಳನ್ನು, ಆಸ್ಪತ್ರೆಗಳನ್ನು, ಸಮುದಾಯ ಭವನಗಳನ್ನು ಪ್ರಾರಂಭಿಸಿ, ಅವುಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ.
5. ಉದ್ಯಾನವನ, ಕ್ರೀಡಾಂಗಣಗಳ ನಿರ್ವಹಣೆ ಮುಂತಾದವುಗಳ ಮೂಲಕ ಸಮಾಜ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ.

15 ಚಿಲ್ಲರೆ ವ್ಯಾಪಾರಿಗಳಿಂದಾಗುವ ಸೇವೆಗಳನ್ನು ತಿಳಿಸಿ
ಚಿಲ್ಲರೆ ವ್ಯಾಪಾರಿಗಳು ಸಾಮಾನ್ಯವಾಗಿ ಗ್ರಾಹಕರು ನೆಲೆಸಿರುವ ಜಾಗಗಳಲ್ಲಿ ತಮ್ಮ ವ್ಯಾಪಾರ ನಡೆಸುತ್ತಾರೆ. ಇವರು ಸಗಟು ವ್ಯಾಪಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ವಸ್ತುಗಳನ್ನು ಅವುಗಳ ಕೊಂಡು ಸಣ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಮಾರುತ್ತಾರೆ. ಇವರಿಂದ ನಮಗೆ ಅನೇಕ ಉಪಯೋಗಗಳಿವೆ. ಅವುಗಳು ಯಾವುವೆಂದರೆ, ಚಿಲ್ಲರೆ ವ್ಯಾಪಾರಿಗಳು ವಸ್ತುಗಳ ವಿತರಣೆಯ ಕೊನೆಯ ಕೊಂಡಿಯಾಗಿದ್ದಾರೆ, ಬೇರೆ ಬೇರೆ ಉತ್ಪಾದಕರಿಂದ ಉತ್ಪಾದನೆಯಾಗುವ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಅನೇಕ ಸಾರಿ ಉಂಟಾಗುವ ನಷ್ಟಗಳನ್ನು ತಾವೇ ಭರಿಸುತ್ತಾರೆ. ವಸ್ತುಗಳನ್ನು ಅವುಗಳ ಪ್ರಮಾಣಕ್ಕನುಗುಣವಾಗಿ ವಿಂಗಡಿಸಿ ಗ್ರಾಹಕರ ಇಷ್ಟದಂತೆ ಅವರಿಗೆ ಒದಗಿಸುತ್ತಾರೆ. ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ಕೊಡುತ್ತಾರೆ. ಮಾರುಕಟ್ಟೆಗೆ ಹೊಸದಾಗಿ ಬಂದ ವಸ್ತುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಮತ್ತು ಯಾವುದೇ ಒಂದು ನಿರ್ದಿಷ್ಟ ವಸ್ತು ದೊರೆಯದಿದ್ದಲ್ಲಿ ಪರ್ಯಾಯ ವಸ್ತುಗಳ ಬಗ್ಗೆ ತಿಳಿಸುತ್ತಾರೆ.

16 ವಿವಿಧ ರೀತಿಯ ಚಿಲ್ಲರೆ ವ್ಯಾಪಾರಿಗಳನ್ನು ಪಟ್ಟಿ ಮಾಡಿ ಪ್ರತಿಯೊಂದಕ್ಕೂ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
1.ತಲೆಹೊರೆ ವ್ಯಾಪಾರಿಗಳು: ಇವರು ಸರಕುಗಳನ್ನು ತಲೆಯ ಮೇಲೆ ಹೊತ್ತು ಬೀದಿ ಬೀದಿಗಳಲ್ಲಿ ಸುತ್ತಿ ಮನೆ ಬಾಗಿಲುಗಳಿಗೆ ಬಂದು ಸರಕುಗಳನ್ನು ಮಾರುತ್ತಾರೆ. ಇವರು ಸಾಮಾನ್ಯವಾಗಿ ಒಂದೇ ರೀತಿಯ ಸರಕುಗಳನ್ನು ಮಾರುತ್ತಾರೆ. ಉದಾ: ತರಕಾರಿ ಮಾರುವವರು, ಹೂ ಮಾರುವವರು,
2.ತಳ್ಳುಗಾಡಿ ವ್ಯಾಪಾರಿಗಳು: ಇವರು ಅನೇಕ ಸರಕುಗಳನ್ನು ತಳ್ಳು ಗಾಡಿಗಳಲ್ಲಿ ತುಂಬಿ ಬೀದಿ ಬೀದಿಗಳಲ್ಲಿ ಸುತ್ತಿ ಮನೆ ಬಾಗಿಲುಗಳಿಗೆ ಬಂದು ಸರಕುಗಳನ್ನು ಮಾರುತ್ತಾರೆ.
3.ರಸ್ತೆ ಬದಿ ವ್ಯಾಪಾರಿಗಳು: ಇವರು ಹೆಚ್ಚು ಜನಜಂಗುಳಿ ಇರುವ ಬೀದಿಗಳ ಮೂಲೆಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ತಮ್ಮ ಸರಕುಗಳನ್ನು ಹರಡಿಕೊಂಡು ವ್ಯಾಪಾರ ಮಾಡುತ್ತಾರೆ.
ಮತ್ತು
4. ಸಂತೆ ವ್ಯಾಪಾರಿಗಳು: ಕೆಲವು ಊರುಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ವಿವಿಧ ವಸ್ತುಗಳ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಸಂತೆಗಳಿಗೆ ಕೊಂಡೊಯ್ದು ಅಲ್ಲಿಗೆ ಬರುವ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ ವಸ್ತುಗಳನ್ನು ಮಾರುತ್ತಾರೆ.

17 ಉದ್ಯಮಗಳು ಅಥವಾ ಕೈಗಾರಿಕೆಗಳ ಎರಡು ವಿಧಗಳನ್ನು ಸ್ಕೂಲವಾಗಿ ಪರಿಚಯಿಸಿ.
ಉದ್ಯಮ ಅಥವಾ ಕೈಗಾರಿಕೆಗಳನ್ನು ಪ್ರಾಥಮಿಕ ಉದ್ಯಮಗಳು ಮತ್ತು ದ್ವಿತೀಯಕ ಉದ್ಯಮಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಪ್ರಾಥಮಿಕ ಉದ್ಯಮಗಳು: ಈ ಉದ್ಯಮಗಳು ನಿಸರ್ಗದ ನೆರವಿನಿಂದ ವಸ್ತುಗಳನ್ನು ಉತ್ಪಾದಿಸುತ್ತವೆ. ಉದಾ: ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಗಣಿಗಾರಿಕೆ ಮುಂತಾದವು.
ಈ ಉದ್ಯಮಗಳನ್ನು ತಳಿವೈಜ್ಞಾನಿಕ (Genetic) ಮತ್ತು ಕಚ್ಚಾವಸ್ತುಗಳನ್ನು ಹೊರತೆಗೆಯುವ ಗಣಿ ಉದ್ಯಮಗಳೆಂದು ವಿಭಾಗಿಸಬಹುದು.
(ಅ) ತಳಿ ವೈಜ್ಞಾನಿಕ ಉದ್ಯಮಗಳು: ಈ ಉದ್ಯಮ ಕೆಲವು ವಿಧದ ಧಾನ್ಯಗಳು, ಸಸ್ಯಗಳು ಹಾಗೂ ಪ್ರಾಣಿಗಳ ಪುನರ್ ಉತ್ಪಾದನೆಯಲ್ಲಿ ತೊಡಗಿರುತ್ತವೆ.  ಉದಾಃ ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಮುಂತಾದವು.

(ಆ) ಗಣಿ ಉದ್ಯಮಗಳು: ಈ ಉದ್ಯಮವು ಭೂಮಿಯ ಮೇಲೆಯ ತಳದಿಂದ ವಿವಿಧ ರೂಪದ ಕಚ್ಚಾವಸ್ತುಗಳನ್ನು ಹೊರತೆಗೆಯುವುದರಲ್ಲಿ ನಿರತವಾಗಿರುತ್ತದೆ. ಉದಾ: ವಿವಿಧ ಅದಿರುಗಳನ್ನು ಹೊರತೆಗೆಯುವುದು, ತೈಲ ಭಾವಿಗಳು ಮುಂತಾದವು.

ದ್ವಿತೀಯ ಉದ್ಯಮಗಳು: ಈ ಉದ್ಯಮಗಳು ಶ್ರಮ ಪ್ರಧಾನವಾಗಿದ್ದು ಮಾನವನ ಪಾತ್ರ ಮುಖ್ಯವಾಗಿರುತ್ತದೆ. ಈ ಉದ್ಯಮಗಳನ್ನು ಉತ್ಪಾದನಾ ಉದ್ಯಮಗಳು ಮತ್ತು ನಿರ್ವಹಣ ಉದ್ಯಮಗಳೆಂದು ವಿಭಾಗಿಸಬಹುದು.

(ಅ) ಉತ್ಪಾದನ ಉದ್ಯಮಗಳು: ಈ ಉದ್ಯಮಗಳು ಕಚ್ಚಾ ಪದಾರ್ಥಗಳನ್ನು ಅಥವಾ ತಯಾರಿಸಿದ ವಸ್ತುಗಳನ್ನು ಅಂತಿಮ ಉತ್ಪನ್ನವಾಗಿ ಪರಿವರ್ತಿಸುತ್ತವೆ. ಉದಾಹರಣೆ ಕಬ್ಬಿಣದ ಅದಿರನ್ನು ಉಕ್ಕಾಗಿ ಪರಿವರ್ತಿಸುವುದು.ಕಬ್ಬನ್ನು ಸಕ್ಕರೆಯಾಗಿ ಪರಿವರ್ತಿಸುವುದು ಇತ್ಯಾದಿ.

(ಆ) ನಿರ್ಮಾಣ ಉದ್ಯಮಗಳು: ಈ ಉದ್ಯಮಗಳು ಕಾಲುವೆ, ಸೇತುವೆ ಮುಂತಾದ ಮೂಲ ಸೌಕರ್ಯಗಳನ್ನು ನಿರ್ಮಿಸಲು ಶ್ರಮಿಸುತ್ತವೆ.

18 ಒಂದು ದೇಶಕ್ಕೆ ವಿದೇಶಿ ವ್ಯಾಪಾರದ ಆವಶ್ಯಕತೆಯನ್ನು ಕುರಿತು ವಿವರಿಸಿ.

ಪ್ರಪಂಚದ ಯಾವುದೇ ದೇಶವಾಗಲಿ ಎಲ್ಲ ಸಂಪನ್ಮೂಲಗಳಲ್ಲೂ ಸ್ವಯಂಪೂರ್ಣತೆ ಹೊಂದಿಲ್ಲ. ಕೆಲವು ದೇಶಗಳಲ್ಲಿ ಕೆಲವು ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತವೆ. ಆ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕೆಲವೇ ವಸ್ತುಗಳನ್ನು ಅಧಿಕವಾಗಿ ಉತ್ಪಾದನೆ ಮಾಡುತ್ತಾರೆ. ದೇಶದ ಬೇಡಿಕೆಯು ಮುಗಿದ ಬಳಿಕ ಉಳಿದ ವಸ್ತುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಾರೆ.ಹಾಗೆಯೇ ಯಾವ ದೇಶಗಳಲ್ಲಿ ಸಂಪನ್ಮೂಲಗಳ ಅಭಾವವಿದೆಯೋ ಆ ದೇಶಗಳು ತಮಗೆ ಅಭಾವವಿರುವ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಪ್ರತಿ ದೇಶಕ್ಕೂ ವಿದೇಶಿ ವ್ಯಾಪಾರದ ಅವಶ್ಯಕತೆ ಇದೆ ಹಾಗೂ ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು  ಅವಶ್ಯಕತೆ ಪಡೆದಿದೆ. ವಿದೇಶ ವ್ಯಾಪಾರವು ದೇಶಗಳ ಪರಸ್ಪರ ಸೌಹಾರ್ದಯುತ ಸಂಬಂಧ ಸಹಾಯ ಮಾಡುತ್ತದೆ.

Leave a Comment