ಜಾಗತಿಕ ಸಂಸ್ಥೆಗಳು
- 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-22
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ..1945 ಅಕ್ಟೋಬರ್ 24 .
೨. ವಿಶ್ವಸಂಸ್ಥೆಯ ಮುಖ್ಯ ಕಚೇರಿ _ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿದೆ.
೩. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಮಂಡಳಿ.
೪. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿ 9 ವರ್ಷಗಳು
೫. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಇಟಲಿ ದೇಶದ ರೋಮ್ ಎಂಬಲ್ಲಿ ಇದೆ.
೬. ಅಂತರಾಷ್ಟ್ರೀಯ ನ್ಯಾಯಾಲಯವು ನೆದರ್ಲ್ಯಾಂಡಿನ ಹೇಗ್ ನಗರ ಎಂಬಲ್ಲಿ ಇದೆ.
೭. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯವರ ಹೆಸರು ಶ್ರೀ ಆಂಟೋನಿಯೊ ಗುಟೆರೆಸ್ .
೮. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ1948 .
೯. ಸಾರ್ಕ್ ಸ್ಥಾಪನೆಯಾದ ವರ್ಷ 1985.
II. ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಗುಂಪುಗಳಲ್ಲಿ ಚರ್ಚಿಸಿ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧೦. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ಪ್ರಮುಖ ನಾಯಕರುಗಳ ಹೆಸರುಗಳನ್ನು ತಿಳಿಸಿ.
ಇಂಗ್ಲೆಂಡಿನ ಅಂದಿನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್, ರಷ್ಯಾದ ಅಂದಿನ ಅಧ್ಯಕ್ಷರಾಗಿದ್ದ
ಜೋಸೆಫ್ ಸ್ಟಾಲಿನ್ ಹಾಗೂ ಅಮೇರಿಕಾದ ಅಂದಿನ
ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಎಫ್.ಡಿ. ರೂಸ್‌ವೆಲ್ಟ್.
೧೧. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವು?
ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವೆಂದರೆ,
ಸಾಮಾನ್ಯ ಸಭೆ
ಸಚಿವಾಲಯ
ಭದ್ರತಾ ಮಂಡಳಿ
ಅಂತರರಾಷ್ಟ್ರೀಯ ನ್ಯಾಯಾಲಯ
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
ದತ್ತಿ ಸಮಿತಿ
೧೨. ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?
ಅಮೆರಿಕ ಸಂಯುಕ್ತ ಸಂಸ್ಥಾನ, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಯುನೈಟೆಡ್ ಕಿಂಗ್‌ಡಂ ಈ ಐದು
ರಾಷ್ಟ್ರಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.
೧೩. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾವುವು?
ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು, ಅಪೌಷ್ಟಿಕತೆ ಮುಂತಾದ ವಿಷಯಗಳು ಈ ಸಂಸ್ಥೆಯ
ಕಾರ್ಯ ಸೂಚಿಯಲ್ಲಿವೆ. ಜನರ ಆರೋಗ್ಯ ಸುಧಾರಿಸುವುದು ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮತ್ತು ಅಪಾಯಕಾರಿ ಇತರ ರೋಗಗಳನ್ನು ಹೋಗಲಾಡಿಸುವುದು ಕೂಡ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯವಾಗಿದೆ.
೧೪. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.
ಇದು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆಯಾಗಿದೆ.ಕಾರ್ಮಿಕ ವರ್ಗದ ಸಾಮಾಜಿಕ ಭದ್ರತೆ, ಆರೋಗ್ಯ ಸಂರಕ್ಷಣೆ, ಉತ್ತಮ ಜೀವನ ಮಟ್ಟ, ಮಹಿಳಾ ಕಾರ್ಮಿಕರ ಹೆರಿಗೆ ಸೌಲಭ್ಯ, ಕನಿಷ್ಠ ವೇತನ ಜಾರಿ, ವಸತಿ ನಿರ್ಮಾಣ ಇತ್ಯಾದಿ ವಿಚಾರಗಳು ಈ ಸಂಸ್ಥೆಯ ಕಾರ್ಯ ಪರಿಧಿಯೊಳಗೆ ಸೇರಿವೆ.
೧೫.SAARCಅನ್ನು ವಿಸ್ತರಿಸಿ.
ಸಾರ್ಕ್- ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ
South Asian Association for Regional Cooperation.
III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ, ಆರರಿಂದ ಎಂಟು ವಾಕ್ಯಗಳಲ್ಲಿ ಉತ್ತರಿಸಿ.
೧೬. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿಮಾಡಿರಿ.
ವಿಶ್ವ ಸಂಸ್ಥೆಯ ಧ್ಯೇಯೋದ್ಧೇಶಗಳು ಈ ಕೆಳಗಿನಂತಿವೆ. :
(೧) ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವುದು.
(೨) ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು.
(೩) ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು.
(೪) ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ನೆಲೆಯ
ಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
(೫) ಅಂತರರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮಾನ್ಯತೆ
ದೊರಕಿಸುವುದು.
(೬) ರಾಷ್ಟ್ರಗಳುಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.
೧೭. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆ ಇದಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವು 5 ಪ್ರತಿನಿಧಿಗಳನ್ನು ಸಾಮಾನ್ಯ ಸಭೆಗೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ಸದಸ್ಯ
ರಾಷ್ಟ್ರಕ್ಕೆ ಒಂದೇ ಒಂದು ಮತದ ಹಕ್ಕು
ಮಾತ್ರ ಇರುತ್ತದೆ. ಈ ಸಾಮಾನ್ಯ ಸಭೆ ತನ್ನ ಪ್ರಥಮ ಅಧಿವೇಶನದಲ್ಲಿಯೇ ಒಂದು ವರ್ಷದ ಅವಧಿಗೆ ಒಬ್ಬರು ಅಧ್ಯಕ್ಷರನ್ನು ಆರಿಸುತ್ತದೆ. ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ 7 ಮಂದಿ ಅಧ್ಯಕ್ಷರನ್ನು ಇಲ್ಲಿ ಆರಿಸಲಾಗುತ್ತದೆ. ಈ ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ ಆರಂಭಗೊಂಡು ಡಿಸೆಂಬರ್ ಮಧ್ಯ ಭಾಗದವರೆಗೆ ಜರುಗುತ್ತದೆ. ಎಲ್ಲಾ ಹೆಚ್ಚಿನ ಪ್ರಮುಖ ನಿರ್ಧಾರಗಳಿಗೆ ಮೂರನೇ ಎರಡಂಶದಷ್ಟು ಹಾಜರಾದ ಸದಸ್ಯರ ಅನುಮೋದನೆ ಅವಶ್ಯಕ ಆಗಿರುತ್ತದೆ
೧೮. ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಕಾರ್ಯಗಳಾವುವು?
ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಮುಖ್ಯ ಕಾರ್ಯಗಳು:
i) ಅಂತರರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ
ಹಾಗೂ ಇನ್ನಿತರ ಸಂಬAಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ.
ii) ನಿರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ಹಲವಾರು ವಿಚಾರಗಳು ಈ ಮಂಡಳಿಯ ಕಾರ್ಯವ್ಯಾಪ್ತಿಯೊಳಗೆ ಬರುತ್ತವೆ.
iii) ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಬಗೆಗೂ ಈ ಮಂಡಳಿಯು ಶಿಫಾರಸ್ಸು ಮಾಡುತ್ತದೆ.
iv) ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುತ್ತದೆ.
v) ವಿಶೇಷ ಪ್ರಾವೀಣ್ಯತೆಯ ಅಂಗ ಸಂಸ್ಥೆಗಳಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಘ,(ಐ.ಎಲ್.ಒ.), ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ.), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಹೆಚ್.ಒ.) ಮುಂತಾದವುಗಳ ಕಾರ್ಯಗಳನ್ನು ಸಮನ್ವಯ ಮಾಡುತ್ತದೆ.
೧೯. ವಿಶ್ವಸಂಸ್ಥೆಯ ಸಾಧನೆಗಳನ್ನು ಪಟ್ಟಿ ಮಾಡಿ.
ವಿಶ್ವಸಂಸ್ಥೆಯ ಪ್ರಮುಖ ಸಾಧನೆಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.
೧) ಕೊರಿಯಾ ವಿವಾದ, ಸೂಯೆಜ್ ಕಾಲುವೆ ಬಿಕ್ಕಟ್ಟು ಮತ್ತು ವಿಯೆಟ್ನಾಂ ಸಮಸ್ಯೆಗಳನ್ನು ಬಗೆಹರಿಸಿದೆ.
೨) ಕಾಶ್ಮೀರ ಸಮಸ್ಯೆ ಮತ್ತು ಪ್ಯಾಲಿಸ್ತೀನ್-ಇಸ್ರೇಲ್ ವಿವಾದದ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.
೩) ನಿಶಸ್ತ್ರೀಕರಣದ ಸಾಧನೆಯ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿದೆ.
೪) ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ವ್ಯಾಪಾರ ಸಂಘಟನೆಗಳ ಮೂಲಕ ಆರ್ಥಿಕ, ಹಣಕಾಸಿನ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ.
೫) ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ.
೬) ಮಾನವನ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ ವಿಶ್ವದಾದ್ಯಂತ ಮಾನವ ಹಕ್ಕುಗಳ ಜಾರಿಗೆ ಪ್ರಯತ್ನಿಸುತ್ತಿದೆ.
೭) ವರ್ಣಬೇಧನೀತಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವಗಳನ್ನು ಅಂತ್ಯವಾಗಿಸಲು ಶ್ರಮಿಸುತ್ತಿದೆ.
೮) ಜಾಗತಿಕ ತಾಪಮಾನ ಹೆಚ್ಚಳದಿಂದಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಶ್ರಮಿಸುತ್ತಿದೆ.
೨೦. ಯುನೆಸ್ಕೋದ ಕಾರ್ಯಗಳಾವುವು?
ಇದು ವಿಶ್ವದಾದ್ಯಂತ ಶಿಕ್ಷಣ ವಿಜ್ಞಾನ ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯಸಂಸ್ಥೆಯಾಗಿದೆ. ತಾಂತ್ರಿಕ ಶಿಕ್ಷಣ, ಮಾಧ್ಯಮ ತಂತ್ರಗಾರಿಕೆ, ರಚನಾತ್ಮಕ ಚಿಂತನೆ, ಸಾಂಸ್ಕೃತಿಕ ವಿಚಾರಗಳು ಹಾಗೂ ಪರಿಸರ ವಿಜ್ಞಾನದ ಬಗೆಗೆ ಇದು ಕಾರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ.
೨೧. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳ ಪರಿಹಾರದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪಾತ್ರವನ್ನು ವಿಶ್ಲೇಷಿಸಿ.
ಎರಡನೇ ಮಹಾ ಯುದ್ಧದ ನಂತರ ಜಗತ್ತಿನ ಆರ್ಥಿಕತೆಯನ್ನು ಪುನರ್‌ನಿರ್ಮಾಣ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಈ ಸಂಸ್ಥೆ ಸ್ಥಾಪನೆ ಆಯಿತು.
.
ಇದು ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.
ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶೀ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಕರಿಸುತ್ತದೆ. ವಿವಿಧ ರಾಷ್ಟ್ರಗಳ ‘ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು’ ಎಂಬುದಾಗಿ ಇದನ್ನು ಕರೆಯಬಹುದಾಗಿದೆ. ಆರ್ಥಿಕವಾಗಿ ಮುಂದುವರಿದ ಹಾಗೂ ಹಿಂದುಳಿದ ರಾಷ್ಟ್ರಗಳ ಪರಸ್ಪರ ಸಂಬಂಧವನ್ನು ಬೆಸೆಯುವಲ್ಲಿ ಇದು ಪೂರಕ ಪಾತ್ರ ವಹಿಸುತ್ತಿದೆ.
೨೨. ಕಾಮನ್‌ವೆಲ್ತ್ ರಾಷ್ಟ್ರಗಳ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
ಪ್ರಜಾತಂತ್ರವನ್ನು ಎತ್ತಿ ಹಿಡಿಯುವುದು, ಸ್ವಾತಂತ್ರ್ಯದ ಸಂರಕ್ಷಣೆ, ಬಡತನ ನಿರ್ಮೂಲನೆ, ವಿಶ್ವಶಾಂತಿ ನೆಲೆಗೊಳಿಸುವಿಕೆ, ಕ್ರೀಡೆ, ವಿಜ್ಞಾನ, ಹಾಗೂ ಕಲೆಯ ಬೆಳವಣಿಗೆಗೆ ಹಾಗೂ ಆ ಬಗೆಗೆ ಸಂಬಂಧಗಳ ವೃದ್ಧಿ- ಇವು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ. ಪರಸ್ಪರ ಸದಸ್ಯರಾಷ್ಟ್ರಗಳ ಮೈತ್ರಿಯನ್ನು ಈ ಸಂಸ್ಥೆ ಬಲಪಡಿಸುತ್ತದೆ.
೨೩. ಯುರೋಪಿಯನ್ ಯೂನಿಯನ್ ಸಂಸ್ಥೆಯನ್ನು ಕುರಿತು ವಿವರಿಸಿ.
ಈ ಸಂಸ್ಥೆಯು ಯುರೋಪ್ ಖಂಡದ 27 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಮ್ಯಾಸ್ಟ್ರಿಚ್ ಎಂಬಲ್ಲಿ ನಡೆದ ಯುರೋಪಿಯನ್ ಯೂನಿಯನ್ ಒಪ್ಪಂದಕ್ಕೆ ಅನುಗುಣವಾಗಿ 1992ರಲ್ಲಿ ಇದು ಉದಯವಾಯಿತು. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿನ ಮುಖ್ಯ ಅಂಗ ಸಂಸ್ಥೆಗಳೆAದರೆ (೧) ಯುರೋಪಿಯನ್ ಸಮಿತಿ (೨) ಯುರೋಪಿಯನ್ ಆಯೋಗ (೩) ಯುರೋಪಿಯನ್ ಸಂಸತ್ತು (೪) ಯುರೋಪಿಯನ್ ನ್ಯಾಯಾಲಯ (೫) ಯುರೋಪಿಯನ್ ಕೇಂದ್ರ ಬ್ಯಾಂಕ್. ಐರೋಪ್ಯ ಒಕ್ಕೂಟವು ಒಂದು ಸಂಯುಕ್ತ ರಾಜ್ಯವನ್ನು ಹೋಲುವಂತಿದೆ. ಇದರ ಪ್ರತಿಪಾದಕರು ಹೇಳುವಂತೆ ಈ ಸಂಸ್ಥೆ ಶಾಂತಿ ಮತ್ತು ಪ್ರಜಾತಂತ್ರಕ್ಕಾಗಿ ಕಾರ್ಯ ನಿರ್ವಹಿಸುತ್ತದೆ.ಈ ಸಂಸ್ಥೆಯ ಕೇಂದ್ರ ಕಛೇರಿ ಬೆಲ್ಜಿಯಂ ದೇಶದ ಬ್ರುಸೆಲ್ಸ್ನಲ್ಲಿದೆ.
Iಗಿ. ಚಟುವಟಿಕೆ :
೧. ೨೦೨೩ರಲ್ಲಿ ಯುನೆಸ್ಕೋ ಸಂಸ್ಥೆಯ ವಿಶ್ವಪರಂಪರೆ ಪಟ್ಟಿಗೆ ಸೇರಿದ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಸಂಗ್ರಹಿಸಿ ಅವುಗಳ ವಾಸ್ತುಶಿಲ್ಪದ ವೈಶಿಷ್ಟ್ಯತೆಗಳನ್ನು ಪಟ್ಟಿಮಾಡಿ.
ಗಿ. ಯೋಜಿತ ಕಾರ್ಯ :
೧. ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯು ನಿರ್ವಹಿಸಿರುವ ಶಾಂತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವೃತ್ತ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿಗಳನ್ನು ಸಂಗ್ರಹಿಸಿ