ಜೀವ ಜಗತ್ತಿನಲ್ಲಿ ವೈವಿಧ್ಯತೆ
6ನೇ ತರಗತಿ ವಿಜ್ಞಾನ ಅಧ್ಯಾಯ 2 ಪ್ರಶ್ನೋತ್ತರಗಳು ನೋಟ್ಸ್
1. ಇಲ್ಲಿ ಎರಡು ವಿಧದ ಬೀಜಗಳಿವೆ. ಈ ಸಸ್ಯಗಳ ಬೇರುಗಳು ಮತ್ತು ಎಲೆಗಳ ನಾಳವಿನ್ಯಾಸದ ನಡುವೆ ನೀವು ಯಾವ ವ್ಯತ್ಯಾಸಗಳನ್ನು ಕಂಡುಕೊಳ್ಳುತ್ತೀರಿ?
ಗೋಧಿ ಸಸ್ಯಗಳು ಸಾಮಾನ್ಯವಾಗಿ ತಮ್ಮ ಎಲೆಗಳಲ್ಲಿ ಸಮಾಂತರ ನಾಳವಿನ್ಯಾಸ ಮತ್ತು ತಂತುಬೇರು
ಹೊಂದಿದ್ದರೆ, ರಾಜ್ಮಾ/ಕಿಡ್ನಿ ಬೀನ್ಸ್ ಸಸ್ಯಗಳಲ್ಲಿ ಎಲೆಗಳು ಸಾಮಾನ್ಯವಾಗಿ ಜಾಲಬಂಧ ನಾಳವಿನ್ಯಾಸವನ್ನು ಮತ್ತು
<span;>ತಾಯಿಬೇರುಗಳನ್ನು ಹೊಂದಿರುತ್ತವೆ.
<span;>2. ಕೆಲವು ಪ್ರಾಣಿಗಳ ಹೆಸರುಗಳನ್ನು ಕೆಳಗೆ ನೀಡಲಾಗಿದೆ. ಆವಾಸ : ದೆ. ಆವಾಸ ಸ್ಥಾನಗಳ ಆಧಾರದ ಮೇಲೆ ಅವುಗಳನ್ನು ಗುಂಪು ಮಾಡಿ. ‘A’ ಎಂದು ಗುರುತಿಸಲಾದ ಜಾಗದಲ್ಲಿ ಜಲವಾಸಿಗಳ ಹೆಸರುಗಳನ್ನು ಬರೆಯಿರಿ ಮತ್ತು ‘B’ ಎಂದು ಗುರುತಿಸಲಾದ ಜಾಗದಲ್ಲಿ ನೆಲವಾಸಿ ಪ್ರಾಣಿಗಳ ಹೆಸರನ್ನು ಬರೆಯಿರಿ. ‘C’ ಭಾಗದಲ್ಲಿ ಎರಡೂ ಆವಾಸಸ್ಥಾನಗಳಲ್ಲಿ ವಾಸಿಸುವ ಪ್ರಾಣಿಗಳ ಹೆಸರನ್ನು ನಮೂದಿಸಿ.
<span;>ಕುದುರೆ, ಡಾಲ್ಫಿನ್, ಕಪ್ಪೆ, ಕುರಿ, ಮೊಸಳೆ, ಅಳಿಲು, ತಿಮಿಂಗಿಲ, ಎರೆಹುಳು, ಪಾರಿವಾಳ, ಆಮೆ.
<span;>A…..ಡಾಲ್ಫಿನ್,ತಿಮಿಂಗಿಲ,
<span;>C….ಮೊಸಳೆ,ಕಪ್ಪೆ,ಆಮೆ.
<span;>B….ಅಳಿಲು,ಕುದುರೆ,ಕುರಿ,ಎರೆಹುಳು,ಪಾರಿವಾಳ
<span;>3. ಮನುವಿನ ತಾಯಿ ಕೈತೋಟವನ್ನು ನಿರ್ವಹಿಸುತ್ತಾರೆ. ಒಂದು ದಿನ, ಅವರು ಮಣ್ಣಿನಿಂದ ಮೂಲಂಗಿಯನ್ನು ಅಗೆಯುತ್ತಿದ್ದರು. ಮೂಲಂಗಿ ಒಂದು ರೀತಿಯ ಬೇರು ಎಂದು ಮನುವಿಗೆ ಹೇಳಿದರು. ಮೂಲಂಗಿಯನ್ನು ಪರೀಕ್ಷಿಸಿ ಮತ್ತು ಅದು ಯಾವ ರೀತಿಯ ಬೇರು ಎಂದು ಬರೆಯಿರಿ. ಮೂಲಂಗಿ ಸಸ್ಯದ ಎಲೆಗಳಲ್ಲಿ ಯಾವ ರೀತಿಯ ನಾಳವಿನ್ಯಾಸವನ್ನು ನೀವು ವೀಕ್ಷಿಸಬಹುದು?
<span;>ಮೂಲಂಗಿಯ ಬೇರು ತಾಯಿಬೇರಿನ ವ್ಯವಸ್ಥೆಯಾಗಿದೆ.
<span;>ಆದರೆ ಬೇರಿನಲ್ಲಿ ಆಹಾರ ಸಂಗ್ರಹಣೆ ಇದ್ದು ಇದೊಂದು ವಿಶೇಷ ಬೇರಿನ ವ್ಯವಸ್ಥೆಯಾಗಿದೆ.
<span;>ಮೂಲಂಗಿಯ ಎಲೆಗಳು ಜಾಲ ಬಂಧ ನಾಳವಿನ್ಯಾಸವನ್ನು ಹೊಂದಿವೆ.
<span;>4. ಬಯಲು ಪ್ರದೇಶದಲ್ಲಿ ಕಂಡುಬರುವ ಮೇಕೆ ಮತ್ತು ಪರ್ವತ ಮೇಕೆಯ ಚಿತ್ರಗಳನ್ನು ನೋಡಿ. ಅವುಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿ. ಈ ವ್ಯತ್ಯಾಸಗಳಿಗೆ ಕಾರಣಗಳೇನು?
<span;>1. ತುಪ್ಪಳ: ಪರ್ವತದ ಮೇಕೆಗಳು ಕಠಿಣ, ಶೀತ ಹವಾಮಾನದಿಂದ ರಕ್ಷಿಸಲು ದಪ್ಪ, ಉಣ್ಣೆಯ ಕೋಟುಗಳನ್ನು ಹೊಂದಿರುತ್ತವೆ, ಆದರೆ ಬಯಲು ಪ್ರದೇಶದ ಮೇಕೆ ಗಳು ಬೆಚ್ಚಗಿನ ಪರಿಸರಕ್ಕೆ ಸೂಕ್ತವಾದ ಹಗುರವಾದ, ಕಡಿಮೆ ತುಪ್ಪಳವನ್ನು ಹೊಂದಿರುತ್ತವೆ.
<span;>2. ಗೊರಸುಗಳು: ಪರ್ವತ ದ ಮೇಕೆಗಳ ಗೊರಸುಗಳು ತೀಕ್ಷ್ಣ ಮತ್ತು ಬಲವಾಗಿರುತ್ತವೆ, ಹತ್ತಲು ಮತ್ತು ಕಲ್ಲಿನ ಮೇಲ್ಮೈಗಳನ್ನು ಹಿಡಿಯಲು ಹೊಂದಿಕೊಳ್ಳುತ್ತವೆ, ಆದರೆ ಬಯಲು ಪ್ರದೇಶದ ಮೇಕೆ ಗಳು ಅಗಲವಾದ, ಮೃದುವಾದ ಗೊರಸುಗಳನ್ನು ಹೊಂದಿರುತ್ತವೆ, ಹುಲ್ಲು ಅಥವಾ ಮರಳು ಮಣ್ಣಿನಲ್ಲಿ ನಡೆಯಲು ಸೂಕ್ತವಾಗಿವೆ.
<span;>3. ಕಾಲಿನ ಉದ್ದ: ಪರ್ವತ ದ ಮೇಕೆಗಳು ಚಿಕ್ಕದಾದ, ದೃಢವಾದ ಕಾಲುಗಳನ್ನು ಹೊಂದಿರುತ್ತವೆ, ಅಸಮ ಭೂಪ್ರದೇಶದಲ್ಲಿ ಸ್ಥಿರತೆಯನ್ನು ಒದಗಿಸುತ್ತವೆ, ಆದರೆ ಬಯಲು ಪ್ರದೇಶದ ಮೇಕೆಗಳು ಉದ್ದವಾದ ಕಾಲುಗಳನ್ನು ಹೊಂದಿರುತ್ತವೆ, ಅವುಗಳಿಗೆ ವೇಗ ಮತ್ತು ಚುರುಕುತನವನ್ನು ನೀಡುತ್ತವೆ.
<span;>4. ನಡವಳಿಕೆ: ಪರ್ವತದ ಮೇಕೆಗಳು ಒಂಟಿಯಾಗಿರುತ್ತವೆ ಮತ್ತು ಹೆಚ್ಚು ಪ್ರಾದೇಶಿಕವಾಗಿರುತ್ತವೆ, ಆದರೆ ಬಯಲು ಪ್ರದೇಶದ ಮೇಕೆಗಳು ರಕ್ಷಣೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಹಿಂಡುಗಳಲ್ಲಿ ವಾಸಿಸುತ್ತವೆ.
<span;>5. ಅಧ್ಯಾಯದಲ್ಲಿ ಚರ್ಚಿಸಲಾದ ಗುಣಗಳನ್ನು ಬಿಟ್ಟು ಇತರ ಯಾವುದೇ ಗುಣವನ್ನು ಆಧರಿಸಿ ಈ ಕೆಳಗಿನ ಪ್ರಾಣಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಿ,
<span;>ಹಸು, ಜಿರಳೆ, ಪಾರಿವಾಳ, ಬಾವಲಿ, ಆಮೆ, ತಿಮಿಂಗಿಲ, ಮೀನು. ಮಿಡತೆ. ಮಿಡತೆ, ಹಲ್ಲಿ.
<span;>ಮರಿ ಹಾಕುವ ಪ್ರಾಣಿಗಳು …ಹಸು,ಬಾವಲಿ,ತಿಮಿಂಗಿಲ
<span;>ಮೊಟ್ಟೆ ಇಡುವ ಪ್ರಾಣಿಗಳು…ಜಿರಳೆ,ಪಾರಿವಾಳ,ಆಮೆ,ಮೀನು, ಮಿಡತೆ, ಹಲ್ಲಿ.
<span;>6. ಜನಸಂಖ್ಯೆಯು ಹೆಚ್ಚಾದಂತೆ ಮತ್ತು ಜನರು ಹೆಚ್ಚು ಆರಾಮದಾಯಕ ಜೀವನವನ್ನು ಬಯಸಿದಂತೆಲ್ಲಾ, ವಿವಿಧ ಅಗತ್ಯತೆಗಳನ್ನು ಪೂರೈಸಲು ಕಾಡುಗಳನ್ನು ಕತ್ತರಿಸಲಾಗುತ್ತಿದೆ. ಇದು ನಮ್ಮ ಸುತ್ತಲಿನ ಪರಿಸರದ ಮೇಲೆ ಯಾವ ಪರಿಣಾಮ ಬೀರಬಹುದು? ಈ ಸವಾಲನ್ನು ನಾವು ಹೇಗೆ ಎದುರಿಸಬಹುದು ಎಂದು ನೀವು ಆಲೋಚಿಸುತ್ತೀರಿ?
<span;>ಜನಸಂಖ್ಯೆ ಹೆಚ್ಚಿದ ಹಾಗೆ ಕಾಡುಗಳನ್ನು ಕತ್ತರಿಸಲಾಗುತ್ತದೆ ಮತ್ತು ಇದರಿಂದ ಜನರಿಗೆ ಉತ್ತಮ ಗಾಳಿ ನೀರು ಸಿಗದ ಹಾಗೆ ಆಗುತ್ತದೆ ಮಳೆಯು ಕಡಿಮೆಯಾಗುತ್ತದೆ ಮತ್ತು ಹವಾಮಾನ ವೈಪರೀತ್ಯಗಳು ಉಂಟಾಗಬಹುದು. ಕಾಡಿನಿಂದ ಸಿಗುವ ಸಂಪತ್ತು ಸಿಗುವುದಿಲ್ಲ.
<span;>ಇದನ್ನು ತಪ್ಪಿಸಲು ಕಾಡನ್ನು ಕಡಿಯುವುದನ್ನು ನಿಲ್ಲಿಸಬೇಕು ಮತ್ತು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವ ಪ್ರಯತ್ನ ನಡೆಸಬೇಕು ಸರ್ಕಾರದಿಂದ ಹಿಡಿದು ಸಾಮಾನ್ಯ ಪ್ರಜೆಗಳವರೆಗೆ ಕಾಡು ಬೆಳೆಸುವ ಬಗ್ಗೆ ಗಮನಹರಿಸಬೇಕು.
<span;>7. ಈ ಕೆಳಗಿನ ಹರಿವು ನಕ್ಷೆಯನ್ನು ವಿಶ್ಲೇಷಿಸಿ. ‘ಎ’ ‘ಬಿ’ಗಳಿಗೆ ಯಾವುದು ಉದಾಹರಣೆಗಳಾಗಬಹುದು?
<span;>ಎ…… ತೊಗರಿ, ಅಲಸಂದೆ, ಆಲ, ಬೇವು,ಅರಳಿ, ಟೊಮೆಟೊ ಗಿಡ,ಬದನೆಕಾಯಿ ಗಿಡ, ಶೇಂಗಾ
<span;>ಬಿ…… ತೆಂಗು, ಮೆಕ್ಕೆಜೋಳ, ಕಬ್ಬು,ರಾಗಿ ,ಜೋಳ, ಗೋಧಿ, ಇತ್ಯಾದಿ
<span;>8. ರಾಜ್ ತನ್ನ ಸ್ನೇಹಿತ ಸಂಜಯ್ ಜೊತೆ “ದಾಸವಾಳ (Hibiscus) ಸಸ್ಯವು ಒಂದು ಪೊದೆಯಾಗಿದೆ” ಎಂದು ವಾದಿಸುತ್ತಾನೆ. ಸ್ಪಷ್ಟಿಕರಣಕ್ಕಾಗಿ ಸಂಜಯ್ ಯಾವ ಪ್ರಶ್ನೆಗಳನ್ನು ಕೇಳಬಹುದು?
<span;>ದಾಸವಾಳ ಸಸ್ಯದ ರೆಂಬೆಗಳು ಭೂಮಿಯ ಸಮೀಪ ದಲ್ಲಿವೆಯೋ ಅಥವಾ ಬೆಳೆದ ಕಾಂಡದ ಮೇಲೆ ಇವೆಯೋ ?
<span;>ದಾಸವಾಳ ಸಸ್ಯವೂ ಎಷ್ಟು ಎತ್ತರದಲ್ಲಿದೆ ?ಮರಗಳ ಹಾಗೆ ಎತ್ತರ ಇದೆಯೇ? ರಾಗಿ ಜೋಳದ ಹಾಗೆ ಸಣ್ಣ ಸಸ್ಯವೋ?
<span;>9. ಕೋಷ್ಟಕದಲ್ಲಿನ ಮಾಹಿತಿಯನ್ನು ಆಧರಿಸಿ, ಪ್ರತಿ ಗುಂಪಿನ ಸಸ್ಯಗಳಿಗೆ ಉದಾಹರಣೆಗಳನ್ನು ಕಂಡುಕೊಳ್ಳಿ.
<span;>ಗುಂಪು….ಎ…ದ್ವಿದಳ……ತಾಯಿಬೇರು
<span;>ಉದಾಹರಣೆಗಳು… ಶೇಂಗಾ, ತೊಗರಿ, ಅಲಸಂದೆ, ಕಡ್ಲೆ, ಹೆಸರು, ಉದ್ದು ,
<span;>ಬಿ….ಏಕದಳ…ತಂತುಬೇರು
<span;>ಉದಾಹರಣೆಗಳು… ರಾಗಿ, ಜೋಳ, ಮೆಕ್ಕೆಜೋಳ, ಸಜ್ಜೆ, ಗೋಧಿ,ನವಣೆ.
<span;>(ಎ) A ಗುಂಪಿನ ಸಸ್ಯಗಳು ಇತರೆ ಯಾವ ಹೋಲಿಕೆಗಳನ್ನು ಹೊಂದಿವೆ?
<span;>ಎ ಗುಂಪಿನ ಸಸ್ಯಗಳು ತಮ್ಮ ಎಲೆಗಳಲ್ಲಿ ಜಾಲ ಬಂಧ ನಾಳ ವಿನ್ಯಾಸವನ್ನು ಹೊಂದಿವೆ.
<span;>(ಬಿ) B ಗುಂಪಿನ ಸಸ್ಯಗಳು ಇತರೆ ಯಾವ ಹೋಲಿಕೆಯನ್ನು ಹೊಂದಿವೆ?
<span;> ಬಿ ಗುಂಪಿನ ಸಸ್ಯಗಳು ತಮ್ಮ ಎಲೆಗಳಲ್ಲಿ ಸಮಾಂತರ ನಾಳ ಬಂಧ ವಿನ್ಯಾಸವನ್ನು ಹೊಂದಿವೆ.
10. ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಬಾತುಕೋಳಿಯ ಗುರುತಿಸಿದ ಭಾಗವನ್ನು ಅವಲೋಕಿಸಿ. ಇತರ ಪಕ್ಷಿಗಳಿಗೆ ಹೋಲಿಸಿದರೆ ಬಾತುಕೋಳಿಯ ಪಾದಗಳಲ್ಲಿ ನೀವು ಯಾವ ವ್ಯತ್ಯಾಸಗಳನ್ನು ಗಮನಿಸುತ್ತೀರಿ? ಈ ಭಾಗವನ್ನು ಬಳಸಿಕೊಂಡು ಬಾತುಕೋಳಿಗೆ ಯಾವ ಚಟುವಟಿಕೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಇತರ ಪಕ್ಷಿಗಳಲ್ಲಿ ಕಾಲುಗಳ ಬೆರಳುಗಳ ನಡುವೆ ಚರ್ಮ ಇರುವುದಿಲ್ಲ. ಆದರೆ ಬಾತುಕೋಳಿಯು ಕಾಲಿನ ಬೆರಳುಗಳ ನಡುವೆ ಅಗಲವಾದ ಚರ್ಮವಿದೆ. ಈ ಚರ್ಮ ಇರುವ ಪಾದಗಳ ಸಹಾಯದಿಂದ ಅದು ನೀರಿನಲ್ಲಿ ಈಜುತ್ತದೆ.