9ನೇ ತರಗತಿ ವಿಜ್ಞಾನ ಭಾಗ 2
ಅಧ್ಯಾಯ 15
Ncert chapter 13
ನಾವೇಕೆ ಕಾಯಿಲೆ ಬೀಳುತ್ತೇವೆ
ನಾವೇಕೆ ಕಾಯಿಲೆ ಬೀಳುತ್ತೇವೆ ಪ್ರಶೋತ್ತರ
ನಾವೇಕೆ ಕಾಯಿಲೆ ಬೀಳುತ್ತೇವೆ
ನಾವೇಕೆ ಕಾಯಿಲೆ ಬೀಳುತ್ತೇವೆ notes
ನಾವೇಕೆ ಕಾಯಿಲೆ ಬೀಳುತ್ತೇವೆ ಪ್ರಶ್ನೆ ಉತ್ತರ 9th
ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠ
naaveke kayile bilutteve 9th class
naaveke kayile bilutteve 9th class Notes
naveke kayile bilutteve 9th class
naveke kayile bilutteve question answer
naveke kayile bilutteve
naveke asamigalaga kudadu
naveke kayile bilutteve part 1
naveke kayile bilutteve samveda class
naveke kayile bilutteve question answer abhyas
naveke kayile bilutteve question answer 9th
naveke kayile bilutteve seminar
naveke kayile bilutteve notes in kannada
naveke kayile bilutteve notes
ಪ್ರಶ್ನೆಗಳು
ಪುಟ ಸಂಖ್ಯೆ 138
೧. ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಯಾವುದಾದರೂ ಎರಡು ಸ್ಥಿತಿಗಳನ್ನು ತಿಳಿಸಿ.
`ಆರೋಗ್ಯ’ ಎಂಬುದು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಒಳ್ಳೆಯ ಚಟುವಟಿಕೆ
ನಡೆಸುವ ಸ್ಥಿತಿಯಾಗಿದೆ.
ಉತ್ತಮ ಹಣಕಾಸುಸ್ಥಿತಿ ಮತ್ತು ಉತ್ತಮ ಕೆಲಸಗಳು ವೈಯಕ್ತಿಕ ಆರೋಗ್ಯಕ್ಕೆ ಅಗತ್ಯವಾಗುತ್ತವೆ.ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ ವೈಯಕ್ತಿಕ ಆರೋಗ್ಯಕ್ಕೆ ಅತ್ಯಗತ್ಯ. ಸಾರ್ವಜನಿಕ ಸ್ವಚ್ಚತೆ ಎಂಬುದು ವೈಯಕ್ತಿಕ
ಆರೋಗ್ಯಕ್ಕೆ ಬಹಳ ಪ್ರಮುಖವಾದುದಾಗಿದೆ.
೨. ರೋಗ ಮುಕ್ತವಾಗಿರಲು ಅಗತ್ಯವಾದ ಯಾವುದಾದರೂ ಎರಡು ಸ್ಥಿತಿಗಳನ್ನು ತಿಳಿಸಿ.
: ರೋಗಗಳಿಂದ ಮುಕ್ತವಾಗಿರಲು ಅಗತ್ಯವಾದ ಪರಿಸ್ಥಿತಿಗಳು:
ಎ) ಉತ್ತಮ ಆಹಾರವನ್ನು ಹೊಂದಿರುವುದು (ಸಮತೋಲಿತ ಆಹಾರ)
ಬಿ) ವೈಯಕ್ತಿಕ ಮತ್ತು ಸಾರ್ವಜನಿಕ ನೈರ್ಮಲ್ಯ ನಿರ್ವಹಣೆ
೩. ಮೇಲಿನ ಪ್ರಶ್ನೆಗಳ ಉತ್ತರಗಳು ಅಗತ್ಯವಾಗಿ ಒಂದೇ ಆಗಿರುತ್ತವೆಯೇ ಅಥವಾ ಭಿನ್ನವಾಗಿರುತ್ತವೆಯೇ?ಏಕೆ?
ಪರಿಹಾರ: ಉತ್ತರಗಳು ಎಲ್ಲಾ ಸಮಯದಲ್ಲೂ ಒಂದೇ ಆಗಿರುವುದಿಲ್ಲ. ಏಕೆಂದರೆ ಇದರ ಅರ್ಥ
ಆರೋಗ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಉದಾಹರಣೆಗೆ
ನೃತ್ಯಗಾರನ ವಿಷಯದಲ್ಲಿ `ಉತ್ತಮ ಆರೋಗ್ಯ’ ಎಂದರೆ ಶರೀರವನ್ನು
ಕಷ್ಟಕರವಾದ ಆದರೆ ಆಕರ್ಷಕ ಭಂಗಿಗಳಲ್ಲಿ ಬಾಗಿಸಲು ಸಮರ್ಥನಾಗಿರುವುದು ಎಂದು ಅರ್ಥವಾಗಬಹುದು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಂಗೀತಗಾರರೊಬ್ಬರ `ಉತ್ತಮ ಆರೋಗ್ಯ’ ಎಂಬುದು ಆತನ /
ಆಕೆಯ ಶ್ವಾಸಕೋಶವು ಸಾಕಷ್ಟು ಉಸಿರಾಟದ ಸಾಮರ್ಥ್ಯ ಹೊಂದಿದ್ದು, ಆತ/ಆಕೆ ಕೊಳಲಿನಿಂದ ಹೊರಡಿಸುವ ಸ್ವರಗಳನ್ನು ನಿಯಂತ್ರಿಸಲು ಶಕ್ತವಾಗಿರುವುದು.
ಪುಟ ಸಂಖ್ಯೆ 143
ಪ್ರಶ್ನೆಗಳು
೧. ನೀವು ರೋಗ ಪೀಡಿತರಾಗಿದ್ದೀರಿ ಮತ್ತು ಡಾಕ್ಟರನ್ನು ಭೇಟಿಯಾಗಲು ಏಕೆ ಯೋಚಿಸುತ್ತೀರಿ ಎಂಬುದಕ್ಕೆ
ಮೂರು ಕಾರಣಗಳನ್ನು ಪಟ್ಟಿ ಮಾಡಿ. ಒಂದು ವೇಳೆ ಇವುಗಳಲ್ಲಿ ಒಂದು ಲಕ್ಷಣ ಗೋಚರವಾದರೂ
ನೀವು ಡಾಕ್ಟರ್ ಬಳಿ ಹೋಗುವಿರಾ? ಹೋಗುವಿರಾದರೆ ಏಕೆ? ಹೋಗುವುದಿಲ್ಲವಾದರೆ ಏಕೆ?
ಪರಿಹಾರ: ನಾವು ವೈದ್ಯರ ಬಳಿಗೆ ಹೋಗಲು ಯಾವಾಗ ನಿರ್ಧರಿಸುತ್ತೇವೆಂದರೆ ನಮಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳ ತೊಡಗುತ್ತವೆ. ಸಣ್ಣ ಲಕ್ಷಣದಿಂದ ಪ್ರಾರಂಭವಾಗಿ ವಿಪರೀತ ಸುಸ್ತಾಗಿರುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆಗ ನಾವು ರೈತರ ಬಳಿಗೆ ಹೋಗಲು ನಿರ್ಧರಿಸುತ್ತೇವೆ. ವಿಪರೀತ ಜ್ವರವಾಗಿರಬಹುದು ಕೆಮ್ಮು ಶೀತ ನೆಗಡಿ ಇರಬಹುದು ಅಥವಾ ಇನ್ನೂ ಯಾವುದೇ ಮೈಯಲ್ಲಿ ತಡೆದುಕೊಳ್ಳಲು ಆಗದಿರುವ ನೋವಿರಬಹುದು. ಅಂತಹ ಸಂದರ್ಭಗಳಲ್ಲಿ ನಾವು ವೈದ್ಯರನ್ನು ಕಾಣುತ್ತೇವೆ.
ಕೇವಲ ಒಂದು ಲಕ್ಷಣದಿಂದ ನಾವು ವೈದ್ಯರ ಬಳಿಗೆ ಹೋಗುವುದಿಲ್ಲ. ಕೇವಲ ಒಂದು ಲಕ್ಷಣವು ಗುಣವಾಗುವ ಸ್ಥಿತಿಯಲ್ಲಿದ್ದರೆ ಮನೆಯಲ್ಲಿಯೇ ಇರುತ್ತೇವೆಹ ನಮ್ಮ ಕೈಯಿಂದ ಗುಣವಾಗುವ ಲಕ್ಷಣಗಳು ಕಾಣದಿದ್ದರೆ, ನಮಗೆ ದೈನಂದಿನ ಚಟುವಟಿಕೆಗಳು ನಿರ್ವಹಿಸಲು ಸಾಧ್ಯವಾಗದಿದ್ದಾಗ ಹೋಗುತ್ತೇವೆ.
೨.ಈ ಕೆಳಗಿನ ಯಾವ ಪ್ರಕರಣಗಳಲ್ಲಿ, ನಿಮ್ಮ ಆರೋಗ್ಯದ ಮೇಲಾಗುವ ದೀರ್ಘಕಾಲದ
ಪರಿಣಾಮಗಳು ತುಂಬಾ ಅಹಿತಕರವಾಗಿರುತ್ತವೆಂದು ನೀವು ಯೋಚಿಸುತ್ತೀರಿ? ಮತ್ತು ಏಕೆ?
ನೀವು ಜಾಂಡೀಸ್‌ನಿಂದ ಪೀಡಿತರಾದಾಗ
ನಿಮ್ಮ ದೇಹದೊಳಗೆ ಪರೋಪಜೀವಿಗಳು ಸೇರಿದಾಗ ,ನಿಮಗೆ ಮೊಡವೆಗಳಾದಾಗ.
.ಜಾಂಡಿಸ್ ಕಾಯಿಲೆಯಲ್ಲಿ ಅನೇಕ ವಿಧಗಳಿವೆ. ವೈಟ್ ಜಾಂಡೀಸ್ ಗುಣವಾಗುವುದೇ ಇಲ್ಲ ಎಂದು ಈಗಿನ ವರೆಗಿನ ಸಂಶೋಧನೆ. ಇದು ದೀರ್ಘಕಾಲಿನ ರೋಗವಾಗಿರುವುದರಿಂದ ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಹಳದಿ ಜಾಂಡಿಸ್ ಕೂಡ ಬಹಳಷ್ಟು ಕಾಲ ಪೀಡಿಸಿದರೂ ಗುಣವಾಗುತ್ತದೆ. ಈ ಹಳದಿ ಜಾಂಡಿಸ್ ಕಾಯಿಲೆ ನಮ್ಮ ದೇಹದಲ್ಲಿ ಎಷ್ಟು ಕಾಲ ಇರುತ್ತದೆ ಎನ್ನುವುದು ಅದರ ದುಷ್ಪರಿಣಾಮವನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ ಜಾಂಡೀಸ್ ಕಾಯಿಲೆ ಬೇರೆ ಕಾಯಿಲೆಗಳಿಗಿಂತ ಅಪಾಯಕಾರಿ ಯಾಗಿದೆ.
ಆ. ನಮ್ಮ ದೇಹದಲ್ಲಿ ಪರೋಪ ಜೀವಿಗಳು ಎಂದರೆ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳು ಸೇರಿದಾಗ ಅವುಗಳನ್ನು ನಾಶಪಡಿಸಲು ಆಂಟಿ ಬಯೋಟಿಕ್ ಔಷಧಿಗಳು ಲಭ್ಯವಿವೆ ಇವು ಒಂದು ವಾರದ ಸಮಯದಲ್ಲಿ ಇವನು ನಾಶಪಡಿಸಿ ನಾವು ಗುಣಮುಖರಾಗಬಹುದು ಇವು ತೀವ್ರತರವಾದ ಕಾಯಿಲೆಯನ್ನು ಉಂಟುಮಾಡಿದರು ದೀರ್ಘಕಾಲ ನಮ್ಮನ್ನು ಪೀಡಿಸುವುದಿಲ್ಲ. ಹೀಗಾಗಿ ಇವುಗಳಿಂದ ಉಂಟಾದ ಕಾಯಿಲೆಯಿಂದ ಹೆಚ್ಚು ದುಷ್ಪರಿಣಾಮ ನಮ್ಮ ಆರೋಗ್ಯದ ಮೇಲೆ ಬೀರುವುದಿಲ್ಲ.
ಇ. ನಮಗೆ ಮೊಡವೆಗಳು ಆದರೆ ನಮ್ಮ ಸೌಂದರ್ಯದ ಮೇಲೆ ಅಥವಾ ಚರ್ಮದಲ್ಲಿ ಕೆಲವು ತುರಿಕೆಗಳು ಉಂಟಾಗಬಹುದು ಇಷ್ಟೇ ವಿನಹ ನಮಗೆ ಹೆಚ್ಚಿನ ಹಾನಿ ಆಗುವುದಿಲ್ಲ ನಮ್ಮ ದೈನಂದಿನ ಚಟುವಟಿಕೆಗಳು ಬಾಧೆಗೊಳಗಾಗುವುದಿಲ್ಲ.
ಪ್ರಶ್ನೆಗಳು
೧. ನಾವು ರೋಗಪೀಡಿತರಾದಾಗ ಸಾಮಾನ್ಯವಾಗಿ ಮೃದುವಾದ ಮತ್ತು ಪೋಷಕಾಂಶಯುಕ್ತ
ಆಹಾರವನ್ನು ಸೇವಿಸುವಂತೆ ಸಲಹೆ ಪಡೆಯಲು ಕಾರಣವೇನು?
ರೋಗ ಪೀಡಿತರಾದಾಗ ನಮ್ಮ ದೇಹದ ಅಂಗಾಂಗಗಳು ಎಂದಿನಂತೆ ಚಟುವಟಿಕೆ ನಿರ್ವಹಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಅವುಗಳಿಗೆ ಸಾಕಷ್ಟು ವಿಶ್ರಮಿಸುವ ಅಗತ್ಯತೆ ಇರುತ್ತದೆ. ಕಠಿಣವಾದ ಆಹಾರ ಪದಾರ್ಥವನ್ನು ನಮ್ಮ ಜೀರ್ಣಾಂಗ ವ್ಯವಸ್ಥೆ ಜೀರ್ಣಿಸಿಕೊಳ್ಳಲಾರದು ಅಥವಾ ರೋಗವು ಇನ್ನೂ ಹೆಚ್ಚು ಉಲ್ಬಣಿಸಬಹುದು. ಮೃದುವಾದ ಆಹಾರವನ್ನು ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಅದನ್ನು ಜೀರ್ಣಿಸಿಕೊಂಡು ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿಕೊಡುತ್ತದೆ.
ನಮ್ಮ ದೇಹದಲ್ಲಿ ಕೊರತೆ ಉಂಟಾಗಿರುವ ಪೋಷಕಾಂಶಗಳನ್ನು ಸರಿದೂಗಿಸಲು , ಅಗತ್ಯವಾದ ಶಕ್ತಿಯನ್ನು ಪಡೆಯಲು ಮತ್ತು ನಮ್ಮ ದೇಹದ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮ ಪಡಿಸಲು ನಾವು ಪೋಷಕಾಂಶಯುಕ್ತ ಆಹಾರವನ್ನು ಸೇವಿಸಲೇಬೇಕು.
೨. ಸಾಂಕ್ರಾಮಿಕ ರೋಗಗಳು ಹರಡುವ ವಿವಿಧ ವಿಧಾನಗಳು ಯಾವುವು?
1.ಗಾಳಿಯ ಮೂಲಕ:<span;>ಸಾಮಾನ್ಯ ಶೀತ, ನ್ಯೂಮೋನಿಯಾ, ಕ್ಷಯ ಇಂತಹ ಸಾಂಕ್ರಾಮಿಕ ರೋಗಗಳು ಗಾಳಿಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ ರೋಗ ಪೀಡಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಹೊಮ್ಮುವ ತುಂತುರುಗಳಿಂದ ಬೇರೆ ವ್ಯಕ್ತಿಗಳಿಗೆ ರೋಗಾಣುಗಳು ಹರಡುತ್ತವೆ
. ನೀರಿನ ಮೂಲಕ: ಕಾಲರದಂತಹ ಕರುಳು ಸಂಬಂಧಿ ರೋಗಗಳು ನೀರಿನ ಮೂಲಕ ಹರಡುತ್ತವೆ. ರೋಗಿಯು ವಿಸರ್ಜಿಸಿದ ಮಲಮೂತ್ರಗಳು ನೀರಿನಲ್ಲಿ ಸೇರಿ, ಆ ನೀರನ್ನು ಇತರರು ಬಳಸಿದಾಗ, ಅವರಿಗೂ ಈ ರೋಗಗಳು ಬರುತ್ತವೆ. ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸರಿಯಾಗಿಲ್ಲದ ಕಡೆ ಈ ರೋಗಗಳು ಹರಡುತ್ತವೆ.
3. ಲೈಂಗಿಕ ಸಂಪರ್ಕದಿಂದ ಸಿಫಿಲಿಸ್ ಅಥವಾ ಏಡ್ಸ್ ನಂತಹ ರೋಗಗಳು ವ್ಯಕ್ತಿಗಳ ಲೈಂಗಿಕ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.
3. ರೋಗ ಪೀಡಿತ ವ್ಯಕ್ತಿಯ ರಕ್ತವನ್ನು ಆರೋಗ್ಯವಂತ ವ್ಯಕ್ತಿಗೆ ನೀಡಿದಾಗಲೂ ಅಥವಾ ರಕ್ತ ಸಂಪರ್ಕ ಏರ್ಪಟ್ಟಾಗಲು ಸಾಂಕ್ರಾಮಿಕ ರೋಗಗಳು ಹರಡುತ್ತವೆ.
4. ಏಡ್ಸ್ ನಂತಹ ರೋಗವು ತಾಯಿಯಿಂದ ಅವಳು ಜನ್ಮ ನೀಡುವ ಮಗುವಿಗೆ ಹರಡುತ್ತದೆ.
.ಪ್ರಾಣಿಗಳ ಮೂ ಕೆಲವು ಪ್ರಾಣಿಗಳು ರೋಗಕಾರಕಗಳನ್ನು ಮನುಷ್ಯರಿಗೆ ತಂದು ರೋಗಗಳನ್ನು ಹೊರಡುತ್ತವೆ. ಉದಾಹರಣೆ ಸೊಳ್ಳೆ, ನಾಯಿ, ಇಲಿ ಕೀಟಗಳು,ಇತ್ಯಾದಿ. ಸೊಳ್ಳೆಗಳು ಮಲೇರಿಯಾ ರೋಗವನ್ನು ಹರಡುತ್ತವೆ. ನಾಯಿ ಮತ್ತು ಇಲಿಗಳಿಂದ ರೇಬಿಸ್ ರೋಗವು ಹರಡುತ್ತದೆ.
6.ಕಲುಷಿತ ಆಹಾರದಿಂದಲೂ ಸಾಂಕ್ರಾಮಿಕ ರೋಗಗಳು ಹರಡುತ್ತವೆ.
೩. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಗ್ಗಿಸಲು ನೀವು ನಿಮ್ಮ ಶಾಲೆಯಲ್ಲಿ ಯಾವ
ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಿರಿ?
<span;>ಕಾಯಿಲೆಯಾದ ಮಗುವನ್ನು ಶಾಲೆಗೆ ರಜಾ ಕೊಟ್ಟು ಆರೋಗ್ಯವಂತನಾಗುವ ತನಕ ಅವನಿಗೆ ಎರಡು ಮೂರು ದಿನ ಅವಕಾಶ ಕೊಡಬೇಕು. ಅಥವಾ ಅವನು ಶಾಲೆಯಲ್ಲಿ ಪ್ರತ್ಯೇಕವಾಗಿ ಕೂರಿಸಲು ವ್ಯವಸ್ಥೆ ಮಾಡಿಸಬೇಕು. ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರನ್ನು ಬಳಸಲು ಪ್ರೇರಣೆ ನೀಡುವುದು. ಕಲುಷಿತ ಆಹಾರದಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸುವುದು. ಶಾಲಾ ಪರಿಸರವನ್ನು ಸ್ವಚ್ಛವಾಗಿಡುವುದು. ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ವಿಧಾನಗಳನ್ನು ಮಕ್ಕಳಿಗೆ ತಿಳಿಸಿ ಮುಂಬರುವ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವುದು. ಸಾಂಕ್ರಾಮಿಕ ರೋಗಗಳ ಬಗ್ಗೆ ಬಯಲು ನಾಟಕ ಚರ್ಚಾ ಸ್ಪರ್ಧೆ ಆಶುಭಾಷಣ ಸ್ಪರ್ಧೆ ಕವನ ರಚಿಸುವ ಸ್ಪರ್ಧೆ ಏರ್ಪಡಿಸಬೇಕು.
<span;>೪. ಪ್ರತಿರಕ್ಷಣೆ ಎಂದರೇನು?
<span;>ಪ್ರತಿರಕ್ಷಣೆಯು ರೋಗದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಆರೋಗ್ಯಕರ ವ್ಯಕ್ತಿಗೆ ಚುಚ್ಚುಮದ್ದಿನ ರೂಪದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯಾಗಿದೆ. ರೋಗನಿರೋಧಕ ಶಕ್ತಿ ಎಂದರೆ ಬಾಹ್ಯ ರೋಗಕಾರಕಗಳನ್ನು ಗುರುತಿಸಲು, ನಾಶಮಾಡಲು ಮತ್ತು ಹೊರಹಾಕಲು ಇರುವ ದೇಹದ ಸಾಮರ್ಥ್ಯ.
೫. ನೀವು ವಾಸಿಸುವ ಸ್ಥಳಕ್ಕೆ ಹತ್ತಿರವಿರುವ ಆರೋಗ್ಯ ಕೇಂದ್ರದಲ್ಲಿ ಪ್ರತಿರಕ್ಷಣೆ ಉಂಟುಮಾಡುವ ಯಾವ
ಕಾರ್ಯಕ್ರಮಗಳು ಜಾರಿಯಲ್ಲಿವೆ? ಅವುಗಳಲ್ಲಿ ಯಾವ ರೋಗಗಳು ನಿಮ್ಮ ಸ್ಥಳದ ಪ್ರಮುಖ
ಆರೋಗ್ಯ ಸಮಸ್ಯೆಗಳಾಗಿವೆ?
ನಾವು ಕರ್ನಾಟಕದ ದಾವಣಗೆರೆಯಲ್ಲಿ ವಾಸ ಮಾಡುತ್ತಿದ್ದೇವೆ ಇಲ್ಲಿ ಈಗಿನ ಮೂರು ವರ್ಷಗಳ ಹಿಂದೆ 2019ರಲ್ಲಿ ಕರೋನ ಎಂಬುವ ರೋಗ ಬಂದಿತ್ತು. ಅದರ ವಿರುದ್ಧ ಲಸಿಕೆಯನ್ನು ಬಹಳಷ್ಟು ಜಾಗಗಳಲ್ಲಿ ನೀಡಿದರು. ಜೊತೆಗೆ ಹುಟ್ಟಿದ ಮಗುವಿಗೆ ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಬಾಪೂಜಿ ಆರೋಗ್ಯ ಕೇಂದ್ರದಲ್ಲಿ ಬಹಳಷ್ಟು ರೋಗಗಳ ವಿರುದ್ಧ ಲಸಿಕೆಯನ್ನು ನೀಡಲಾಗುತ್ತದೆ. ಪೋಲಿಯೋ ಲಸಿಕೆ, ಡಿಪಿಟಿ, ಜಾಂಡೀಸ್ ವಿರುದ್ಧ ಲಸಿಕೆಗಳು ಇನ್ನು ಮುಂತಾದ ಲಸಿಕೆಗಳನ್ನು ಹುಟ್ಟಿದ ಮಕ್ಕಳಿಗೆ ಕಾಲಾನುಕ್ರಮದಲ್ಲಿ ನೀಡಲಾಗುತ್ತದೆ.
೧) ಕಳೆದ ಒಂದು ವರ್ಷದಲ್ಲಿ ನೀವು ಎಷ್ಟು ಬಾರಿ ರೋಗ ಪೀಡಿತರಾದಿರಿ? ರೋಗಗಳು ಯಾವುವು?
a) ಈ ಮೇಲಿನ ಒಂದು/ ಎಲ್ಲಾ ರೋಗಗಳು ಬರದಂತೆ ತಡೆಯಲು ನಿಮ್ಮ ಹವ್ಯಾಸಗಳಲ್ಲಿ ಒಂದು ಬದಲಾವಣೆ ಉಂಟುಮಾಡುವ ಬಗ್ಗೆ ಚಿಂತಿಸಿ.
b) ಈ ಮೇಲಿನ ಒಂದು/ ಎಲ್ಲಾ ರೋಗಗಳು ಬರದಂತೆ ತಡೆಯಲು ನಿಮ್ಮ ಸುತ್ತಮುತ್ತ ನೀವು ತರಬಯಸುವ ಒಂದು ಬದಲಾವಣೆಯ ಬಗ್ಗೆ ಚಿಂತಿಸಿ.
ಕಳೆದ ಒಂದು ವರ್ಷದಲ್ಲಿ ನನಗೆ ಮೂರು ಬಾರಿ ಜ್ವರ ಮತ್ತು ನಾಲ್ಕು ಬಾರಿ ನೆಗಡಿ ಕೆಮ್ಮು ಆಯಿತು.
ನನ್ನ ದೇಹ ಪ್ರಕೃತಿಗೆ ಆಗದ ಜ್ಯೂಸ್ ಐಸ್ ಮತ್ತು ಪ್ರವಾಸ ಹೋದಾಗ ತಣ್ಣೀರಿನಲ್ಲಿ ಕಣ್ಣೀರಿನ ಜಲಪಾತವೊಂದರಲ್ಲಿ ಸ್ನಾನ ಮಾಡಿದ್ದು ತಣ್ಣೀರು ಕುಡಿದಿದ್ದು ಇವೆಲ್ಲವೂ ನನಗೆ ನೆಗಡಿ ಕೆಮ್ಮು ಆಗುವಂತೆ ಮಾಡಿದವು. ಹಾಗಾಗಿ ನಾನು ಐಸ್ ಅಥವಾ ಜ್ಯೂಸ್ ಅನ್ನು ಸೇವಿಸುವುದಿಲ್ಲ. ಇದು ನಾನು ಮಾಡಿಕೊಂಡ ಪರಿವರ್ತನೆ.
ನಮ್ಮ ಸುತ್ತಮುತ್ತಲು ತರ ಬಯಸುವ ಬದಲಾವಣೆ ಏನೆಂದರೆ, ಎಲ್ಲಾ ನಮ್ಮ ಸಹಪಾಠಿಗಳು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಐಸ್ ಮತ್ತು ಜ್ಯೂಸ್ ಗಳಿಂದ ದೂರವಿದ್ದು ಸ್ವಾಭಾವಿಕ ಹಣ್ಣುಗಳು ತರಕಾರಿಗಳನ್ನು ಹೆಚ್ಚಿಗೆ ಸೇವಿಸಬೇಕು. ಎಂಬುದನ್ನು ತಿಳುವಳಿಕೆ ನೀಡಬೇಕು. ಶುದ್ಧವಾದ ನೀರು ಮತ್ತು ಶುದ್ಧವಾದ ಆಹಾರವನ್ನು ಸೇವಿಸಬೇಕು. ವೈಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಚ್ಛತೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ.
೨. ಈ ಸಮಾಜದಲ್ಲಿನ ಇತರರಿಗಿಂತ ವೈದ್ಯ/ ನರ್ಸ್/ ಆರೋಗ್ಯ ಕಾರ್ಯಕರ್ತ ರೋಗಿಗಳೊಂದಿಗೆ ಬೆರೆಯುತ್ತಾರೆ ಅವನು /ಅವಳು ರೋಗ ಬರದಂತೆ ಸ್ವತ:
ನೋಡಿಕೊಳ್ಳುತ್ತಾರೆಂದು ಪತ್ತೆಮಾಡಿ.
ಪರಿಹಾರ: ವೈದ್ಯರು/ದಾದಿಯರು/ಆರೋಗ್ಯ ಕಾರ್ಯಕರ್ತರು ಸ್ವತಃ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ.
(i) ಎಲ್ಲಾ ಸಾಂಕ್ರಾಮಿಕ ರೋಗಗಳ ವಿರುದ್ಧ ರೋಗನಿರೋಧಕ ಲಸಿಕೆಯನ್ನು ಹಾಕಿಸಿಕೊಂಡಿರುತ್ತಾರೆ.
(ii)ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಮತೋಲಿತ ಆಹಾರವನ್ನು (ವಿಶೇಷವಾಗಿ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ) ತೆಗೆದುಕೊಳ್ಳುತ್ತಾರೆ.
(iii) ರಕ್ತದ ಮಾದರಿಗಳು, ಮೂತ್ರ ಅಥವಾ ಮಲ, ಕಫ ಇತ್ಯಾದಿಗಳನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುತ್ತಾರೆ.
(iv) ಬಾಯಿ ಅಥವಾ ಎದೆಯ ಸೋಂಕನ್ನು ಪತ್ತೆಹಚ್ಚುವಾಗ ಮುಖವಾಡಗಳನ್ನು ಧರಿಸುತ್ತಾರೆ.
(v) ಚಿಕ್ಕ ಶಸ್ತ್ರಚಿಕಿತ್ಸೆ ಮಾಡುವಾಗಲೂ ಅವರ ಕೈಗಳನ್ನು ಸ್ವಚ್ಛಗೊಳಿಸಿ ಮತ್ತು ಕೈಗವಸುಗಳನ್ನು ಧರಿಸುತ್ತಾರೆ.
(vi) ಆಗಿಂದಾಗ್ಗೆ ಸ್ಯಾನಿಟೈಸರ್ ಬಳಸುತ್ತಾರೆ.
(vii) ರೋಗದ ತೀವ್ರತೆ ಗಮನಿಸಿ ರೋಗಿಯಿಂದ ಆರೋಗ್ಯಕರ ದೂರವನ್ನು ಕಾಯ್ದುಕೊಂಡಿರುತ್ತಾರೆ
೩. ಸಾಮಾನ್ಯವಾಗಿ ಬರುವ ರೋಗಗಳು ಯಾವುವು ಎಂದು ಪತ್ತೆ ಮಾಡಲು ನಿಮ್ಮ ನೆರೆಹೊರೆಯಲ್ಲಿ ಒಂದು ಸಮೀಕ್ಷೆಯನ್ನು ನಡೆಸಿ. ಈ ರೋಗಗಳು ಬರುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಸ್ಥಳೀಯ ಸಂಸ್ಥೆ ಕೈಗೊಳ್ಳಬಹುದಾದ ಮೂರು ಕ್ರಮಗಳ ಬಗ್ಗೆ ಅವರಿಗೆ
ಸಲಹೆ ನೀಡಿ.
ಪರಿಹಾರ: ನಮ್ಮ ನೆರೆಹೊರೆಯಲ್ಲಿ ಸಮೀಕ್ಷೆ ನಡೆಸಿದಾಗ ಕಂಡುಬಂದ ಸಾಮಾನ್ಯವಾಗಿ ಬರುವ ರೋಗಗಳೆಂದರೆ ನೆಗಡಿ, ಕೆಮ್ಮು, ಜ್ವರ.
ಈ ರೋಗಗಳನ್ನು ಕಡಿಮೆ ಮಾಡಲು ನಮ್ಮ ಸ್ಥಳೀಯ ಸಂಸ್ಥೆಯಾದ ಮಹಾನಗರ ಪಾಲಿಕೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.
೧. ನೆಗಡಿ ಕೆಮ್ಮುಗಳು ಮುಖ್ಯವಾಗಿ ಪರಿಶುದ್ಧ ನೀರಿನಿಂದ ಹರಡುವುದರಿಂದ ಶುದ್ಧವಾದ ಕುಡಿಯುವ ನೀರನ್ನು ಒದಗಿಸುವಲ್ಲಿ ಮೊದಲ ಪ್ರಯತ್ನ ಮಾಡಬೇಕು.
೨. ಸಾಂಕ್ರಾಮಿಕ ರೋಗಗಳು ಹರಡುವಲ್ಲಿ ಮುಖ್ಯವಾಗಿ ಸೊಳ್ಳೆಗಳು ಕಾರಣವಾಗಿರುವುದರಿಂದ ಸೊಳ್ಳೆಗಳು ನಿಂತ ನೀರಿನಲ್ಲಿ ನಿಲ್ಲದಂತೆ ಮಾಡಲು ಚರಂಡಿ ವ್ಯವಸ್ಥೆ ಸರಿಯಾಗಿ ಇರಬೇಕು ಮತ್ತು ಡ್ರೈನೇಜ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.
೩. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಲ್ಲೆಂದರಲ್ಲಿ ಕಸವನ್ನು ಎಸೆಯು ನನ್ನ ಸಾರ್ವಜನಿಕರು ನಿಲ್ಲಿಸುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ನೀಡಬೇಕು ಜೊತೆಗೆ ಕಸದ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸಬೇಕು.
೪. ಒಂದು ಮಗು ತಾನು ರೋಗದಿಂದ ನರಳುತ್ತಿದ್ದೇನೆಂದು ಪೋಷಕರಿಗೆ ಹೇಳಲು ಅಶಕ್ತವಾಗಿದೆ.
a) ಮಗು ರೋಗದಿಂದ ನರಳುತ್ತಿರುವುದೆ?
b) ಮಗು ಯಾವ ರೋಗದಿಂದ ನರಳುತ್ತಿದೆ ಎಂಬುದನ್ನು ಪತ್ತೆಮಾಡಲು ನಮಗೆ ಸಹಾಯ
ಮಾಡುವ ಅಂಶಗಳು ಯಾವುವು?
ಪರಿಹಾರ:
(ಎ) ಮಗುವಿಗೆ ಅನಾರೋಗ್ಯವಿದೆ ಎಂದು ಕಂಡುಹಿಡಿಯಲು ಸಹಾಯ ಮಾಡುವ ಲಕ್ಷಣಗಳು: ಕಣ್ಣುಗಳು ಕೆಂಪಾಗಿರಬಹುದು.
ಕಣ್ಣುಗಳು ಸೋತ ಹಾಗೆ ಕಾಣುವುದು ಇಳಿಬಿದ್ದಿರುವುದು.ನಿರಂತರ ಅಳುವುದು. ದೇಹದ ಹೆಚ್ಚಿನ ತಾಪಮಾನ.
(ಬಿ) ಮಗುವಿನ ಅನಾರೋಗ್ಯವನ್ನು ಸೂಚಿಸಲು ಸಹಾಯ ಮಾಡುವ ಚಿಹ್ನೆಗಳು ತುಂಬಾ ಜ್ವರ. ತಲೆನೋವು. ಸ್ನಾಯು ನೋವು. ನಡುಕ ಮತ್ತು ಶೀತದ ಭಾವನೆ
ಮಲೇರಿಯಾವನ್ನು ಸೂಚಿಸುತ್ತದೆ.
ಅತಿಯಾದ ಭೇದಿ, ಹೊಟ್ಟೆ ನೋವು ಅತಿಸಾರವನ್ನು ಸೂಚಿಸುತ್ತದೆ.
ಕಣ್ಣುಗಳ ಕೆಂಪು ಮತ್ತು ನಿರಂತರ ಉಜ್ಜುವಿಕೆಯು ಕಣ್ಣಿನ ಜ್ವರವನ್ನು ಸೂಚಿಸುತ್ತದೆ.
ತೆಳು ಚರ್ಮ, ಹಳದಿ ಮೂತ್ರ. ಕಣ್ಣುಗಳ ಹಳದಿ ಬಣ್ಣವು ಕಾಮಾಲೆಯನ್ನು ಸೂಚಿಸುತ್ತದೆ.
ರೋಗಲಕ್ಷಣಗಳು ಗೊತ್ತಿಲ್ಲದ ಜ್ವರ ಇದ್ದರೆ
ರೋಗದ ಪ್ರಕಾರವನ್ನು ಕಂಡುಹಿಡಿಯಲು ವೈದ್ಯರು ಪ್ರಯೋಗಾಲಯ ಪರೀಕ್ಷೆಗಳಿಗೆ ಸೂಚಿಸುತ್ತಾರೆ.
೫. ಈ ಕೆಳಗಿನ ಯಾವ ಪರಿಸ್ಥಿತಿಗಳಲ್ಲಿ ಒಬ್ಬ ಮನುಷ್ಯನು ಸುಲಭವಾಗಿ ಕಾಯಿಲೆ ಬೀಳುತ್ತಾನೆ?ಮತ್ತು ಏಕೆ?
a) ಅವಳು ಮಲೇರಿಯಾದಿಂದ ಚೇತರಿಸಿಕೊಳ್ಳುತ್ತಿರುವಾಗ
b) ಅವಳು ಮಲೇರಿಯಾದಿಂದ ಚೇತರಿಸಿಕೊಂಡು ನಂತರ ದಡಾರದಿಂದ ನರಳುತ್ತಿರುವ
ರೋಗಿಯ ಶುಶ್ರೂಷೆ ಮಾಡುತ್ತಿರುವಾಗ
c) ಅವಳು ಮಲೇರಿಯಾದಿಂದ ಚೇತರಿಸಿಕೊಂಡು ನಂತರ ನಾಲ್ಕು ದಿನಗಳವರೆಗೆ
ಉಪವಾಸವಿದ್ದು ನಂತರ ದಡಾರದಿಂದ ನರಳುತ್ತಿರುವ ವ್ಯಕ್ತಿಯೊಬ್ಬನ ಶುಶ್ರೂಷೆ
ಮಾಡುವಾಗ
ಪರಿಹಾರ: ಒಬ್ಬ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ (c)ಪರಿಸ್ಥಿತಿಯಲ್ಲಿ ಹೆಚ್ಚು ಇದೆ. ಕಾರಣಗಳೆಂದರೆ:
(ಎ) ಮಲೇರಿಯಾದ ಸಂದರ್ಭದಲ್ಲಿ, ದೇಹವು ದುರ್ಬಲಗೊಳ್ಳುತ್ತದೆ ಮತ್ತು ದೇಹದಲ್ಲಿನ ನೀರಿನ ಅಂಶ ನಷ್ಟವಾಗಿರುತ್ತದೆ.
ಈ ಸ್ಥಿತಿಯಲ್ಲಿ, ಅವಳು ನಾಲ್ಕು ದಿನ ಉಪವಾಸ ಕೈಗೊಂಡರೆ, ಅವಳು ಇನ್ನೂ ಹೆಚ್ಚು ದುರ್ಬಲಳಾಗುತ್ತಾಳೆ. ಅವಳಿಗೆ ಮಲೇರಿಯಾದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
(ಬಿ) ಮಲೇರಿಯಾದಿಂದ ಅವಳ ರೋಗನಿರೋಧಕ ವ್ಯವಸ್ಥೆಯು ಈಗಾಗಲೇ ದುರ್ಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವಳು ದಡಾರದಿಂದ ನರಳುತ್ತಿರುವ ರೋಗಿಯ ಶುಶ್ರೂಷೆ ಮಾಡಿದರೆ ಮತ್ತೆ ಕಾಯಿಲೆ ಬೀಳುವ ಸಂಭವ ಹೆಚ್ಚು ಇರುತ್ತದೆ.<span;>
೬. ಈ ಕೆಳಗಿನ ಯಾವ ಸಂದರ್ಭಗಳಲ್ಲಿ ನೀವು ತುಂಬಾ ಸುಲಭವಾಗಿ ರೋಗಪೀಡಿತರಾಗುತ್ತೀರಿ
ಮತ್ತು ಏಕೆ?
a) ನೀವು ಪರೀಕ್ಷೆ ತೆಗೆದುಕೊಳ್ಳುತ್ತಿರುವ ಸಮಯದಲ್ಲಿ
b) ಎರಡು ದಿನಗಳವರೆಗೆ ನೀವು ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸಿದಾಗ
c) ನಿಮ್ಮ ಗೆಳೆಯ ದಡಾರದಿಂದ ನರಳುತ್ತಿರುವಾಗ.
ಪರಿಹಾರ: (c) ಸಂದರ್ಭದಲ್ಲಿ, ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಗರಿಷ್ಠವಾಗಿರುತ್ತದೆ.
ದಡಾರವು ಚಿಕ್ಕ ಮಕ್ಕಳಲ್ಲಿ ಮೂಗಿನ ಅಥವಾ ಗಂಟಲಿನ ವಿಸರ್ಜನೆಯ ಮೂಲಕ ಹರಡುವ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದೆ.ದಡಾರದಿಂದ ಬಳಲುತ್ತಿರುವ ಸ್ನೇಹಿತನ ಸಂಪರ್ಕ ನಮಗೆ ಅನಾರೋಗ್ಯವನ್ನು ಉಂಟುಮಾಡಬಹುದು.