ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು  10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 26 ನೋಟ್ಸ್ ಅಥವಾ ಪ್ರಶ್ನೋತ್ತರಗಳು

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 26 ನೋಟ್ಸ್ ಅಥವಾ ಪ್ರಶ್ನೋತ್ತರಗಳು

 

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

೧. ೨೦ನೇ ಶತಮಾನದ ಅದ್ಭುತ ಲೋಹ ಅಲ್ಯುಮಿನಿಯಂ .

೨. ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಿರುವ ಗಣಿ ಹಟ್ಟಿ ಚಿನ್ನದ ಗಣಿ .

೩. ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೪. ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳಾವುವು?

ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಅದಿರು, ಅಭ್ರಕ ಮತ್ತು ಚಿನ್ನದ ಅದಿರು ಮುಖ್ಯವಾದವು. ಇವುಗಳಲ್ಲದೆ ಶಕ್ತಿ ಸಂಪನ್ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಅಣು ಖನಿಜಗಳನ್ನು ದೇಶದಲ್ಲಿ ಉತ್ಪಾದಿಸಲಾಗುವುದು. ಜೊತೆಗೆ ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳಾದ ಸೌರಶಕ್ತಿ, ಪವನಶಕ್ತಿ ಮೊದಲಾದವು ಕೂಡ ಉತ್ಪಾದಿಸಲಾಗುತ್ತದೆ.

೫. ಮ್ಯಾಂಗನೀಸ್ ಅದಿರಿನ ವಿಧಗಳು ಯಾವುವು?

ಮ್ಯಾಂಗನೀಸ್‌ನ ಮುಖ್ಯ ಅದಿರುಗಳೆಂದರೆ ಪೈರೋಲೋಸೈಟ್, ಸೈಲೋಮೆಲೆನ್, ಮ್ಯಾಂಗನೈಟ್, ಬ್ರಾನೈಟ್ ಮತ್ತು ಹೋಲ್ಯಾಂಡೈಟ್.

೬. ಅಭ್ರಕದ ಉಪಯೋಗಗಳನ್ನು ತಿಳಿಸಿ.

ಅಭ್ರಕವನ್ನು ಶಾಖ ನಿರೋಧಕ ಹಾಗೂ ವಿದ್ಯುತ್ ನಿರೋಧಕ ವಸ್ತುವಾಗಿ ಟೆಲಿಫೋನ್, ಟೆಲಿಗ್ರಾಫ್, ನಿಸ್ತಂತು ಸೇವೆ, ಗಾಜು ತಯಾರಿಕೆ, ಬಣ್ಣ ವಾರ್ನಿಷ್, ಕೃತಕ ರಬ್ಬರ್, ಡೈನಮೋಗಳು, ರಾಸಾಯನಿಕ ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ.

೭. ಪರಮಾಣು ಖನಿಜಗಳು ಯಾವುವು?

ಪರಮಾಣು ಖನಿಜಗಳಲ್ಲಿ ಯುರೇನಿಯಂ, ಥೋರಿಯಂ. ಬೆರಿಲಿಯಂ, ಲಿಥಿಯಂ ಮುಂತಾದವುಗಳು ಪ್ರಮುಖವಾಗಿವೆ.

೮. ಅಸಾಂಪ್ರದಾಯಿಕ ಶಕ್ತಿ ಮೂಲಗಳು ಯಾವುವು? ಅವುಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಸಾಗರ ಉಬ್ಬರವಿಳಿತ ಶಕ್ತಿ, ಭೂ ಅಂತರಾಳದ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವುಗಳು ಅಸಾಂಪ್ರದಾಯಿಕ ಶಕ್ತಿ ಮೂಲಗಳಾಗಿವೆ.ಪ್ರಪಂಚದಾದ್ಯಂತ ಸಾಂಪ್ರದಾಯಿಕ ಶಕ್ತಿ ಮೂಲಗಳ ಬಳಕೆಯಿಂದ ಹಸಿರು ಮನೆ ಪರಿಣಾಮಉಂಟಾಗುತ್ತಿದ್ದು, ಭೂಮಿಯ ವಾಯುಮಂಡಲದ ಉಷ್ಣಾಂಶ ಹೆಚ್ಚಾಗುವ ಸಂಭವನೀಯತೆಯನ್ನುಗಮನಿಸಲಾಗಿದೆ. ಇದನ್ನೇ‘ಗ್ಲೋಬಲ್ವಾರ್ಮಿಂಗ್’ (ಜಾಗತಿಕ ತಾಪಮಾನ ಏರಿಕೆ) ಎಂದು ಕರೆಯಲಾಗಿದೆ. ಅಲ್ಲದೆ ಜನಸಂಖ್ಯಾ ಹೆಚ್ಚಳ, ನಗರೀಕರಣ, ಕೈಗಾರಿಕಾಭಿವೃದ್ಧಿ ಮೊದಲಾದವು ಈ ಸಾಂಪ್ರದಾಯಿಕ ಇಂಧನಗಳ ಬಳಕೆಯು ನಿರಂತರವಾಗಿ ಹೆಚ್ಚಲು ಕಾರಣವಾಗಿದೆ. ಇದರಿಂದ ಪರಿಸರ ಮಾಲಿನ್ಯ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ಇವುಗಳ ಬಳಕೆಯನ್ನು ಮಿತಿಗೊಳಿಸಿ ಅಸಾಂಪ್ರದಾಯಿಕ ಶಕ್ತಿ ಮೂಲಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.

 

 

೯. ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ನಿಮ್ಮದೇ ಆದ ಸಲಹೆಗಳನ್ನು ನೀಡಿ.

 

೧) ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನುಹೆಚ್ಚಾಗಿ ಬಳಸುವುದು.

೨) ಜಲವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವುದು.

೩) ಬದಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು.

೪) ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸುವುದು .

೫) ಶಕ್ತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸಲು ತಿಳುವಳಿಕೆ ನೀಡುವುದು .

೬) ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವುದು ಮೊದಲಾದವು.

 

 

III. ಚಟುವಟಿಕೆ :

 

 

೧. ಭಾರತದ ನಕ್ಷೆಯಲ್ಲಿ ಖನಿಜಗಳ ಹಂಚಿಕೆಯನ್ನು ಗುರುತಿಸಿ ಮತ್ತು ಹೆಸರಿಸಿ.

 

 

 

 

Leave a Comment