ಭಾರತದ ಭೂ ಬಳಕೆ ಹಾಗೂ ಕೃಷಿ, 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 25 ನೋಟ್ಸ್ ಅಥವಾ ಪ್ರಶ್ನೋತ್ತರಗಳು

ಭಾರತದ ಭೂ ಬಳಕೆ ಹಾಗೂ ಕೃಷಿ

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 25 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

೧. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

೨. ಒಂದೇ ವ್ಯವಸಾಯ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಎರಡು ಮೂರು ಬೆಳೆ ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು.

೩. ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಮಾತ್ರ ಬೆಳೆಯುವುದಕ್ಕೆ ಜೀವನಾಧಾರ ಬೇಸಾಯ ಎಂದು ಕರೆಯುವರು.

೪. ತೋಟಗಾರಿಕೆ ಬೇಸಾಯದಲ್ಲಾದ ಅಪಾರ ಪ್ರಗತಿಯನ್ನು ಸುವರ್ಣ ಕ್ರಾಂತಿ ಎಂದು ಕರೆಯುವರು.

೫. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳ .

೬. ಬೇಸಿಗೆ ಅವಧಿಯ ಬೇಸಾಯವನ್ನು ಜೇಡ್ ಬೇಸಾಯ ಎನ್ನುವರು.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೭. ಭೂ ಬಳಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು ?

ಭೂ ಬಳಕೆಯ ಮೇಲೆ ಹಲವಾರು ಪ್ರಾಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳು ಪ್ರಭಾವ ಬೀರುತ್ತವೆ. ಪ್ರಾಕೃತಿಕ ಅಂಶಗಳು : ಭೂ ಸ್ವರೂಪಗಳು, ವಾಯುಗುಣ, ಮಣ್ಣಿನ ಲಕ್ಷಣಗಳು. ಆರ್ಥಿಕ ಅಂಶಗಳು : ಭೂ ಹಿಡುವಳಿ, ಮಾರುಕಟ್ಟೆ, ಜನಸಂಖ್ಯೆ, ವ್ಯವಸಾಯೋತ್ಪನ್ನಗಳ ಬೇಡಿಕೆ, ಉದ್ಯೋಗ, ಸಾಮಾಜಿಕ ಅಂಶಗಳು : ಜನರ ಮನೋಭಾವ, ಸಾಮಾಜಿಕ ಪರಿಸ್ಥಿತಿ
ಮೊದಲಾದವು. ಇತರೆ ಅಂಶಗಳಾದ ತಾಂತ್ರಿಕತೆ, ನೀರಾವರಿ ಸೌಲಭ್ಯ, ಮಾನವನ ಸಾಮರ್ಥ್ಯ, ಭೂ
ಒಡೆತನ ಮೊದಲಾದವು ಸಹ ಭೂ ಬಳಕೆಯ ಮೇಲೆ ಪ್ರಭಾವವನ್ನು ಬೀರುತ್ತವೆ.

೮. ವ್ಯವಸಾಯ ಎಂದರೇನು ? ವ್ಯವಸಾಯದ ವಿಧಗಳು ಯಾವುವು ?

ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಸಹ ಒಳಗೊಂಡಿದೆ.

ವ್ಯವಸಾಯದ ವಿಧಗಳು

ಸಾಂದ್ರ ಬೇಸಾಯ

ಜೀವನ ದಾರ ಬೇಸಾಯ

ವಾಣಿಜ್ಯ ಬೇಸಾಯ

ಮಿಶ್ರ ಬೇಸಾಯ

ತೋಟಗಾರಿಕೆ ಬೇಸಾಯ.

೯. ಖಾರೀಫ್ ಬೇಸಾಯ ಎಂದರೇನು ?

ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ ಮುಂಗಾರು ಬೇಸಾಯ ಅಥವಾ ಖಾರಿಫ್ ಬೇಸಾಯ  ಎಂದು ಕರೆಯುವರು. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡುವರು.

೧೦. ರಬಿ ಬೇಸಾಯ ಎಂದರೇನು ?

ಅಕ್ಟೋಬರ್-ನವಂಬರ್‌ನಲ್ಲಿ ಬಿತ್ತನೆ ಮಾಡಿ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಕಟಾವು ಮಾಡುವರು. ಇದು ಚಳಿಗಾಲದಲ್ಲಿ ಮಳೆ ಪಡೆಯುವ ಪ್ರದೇಶಗಳ ಮುಖ್ಯ ಸಾಗುವಳಿಯ ಅವಧಿಯಾಗಿದೆ.

೧೧. ಹತ್ತಿ ಬೆಳೆ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳಾವುವು ?

ಹತ್ತಿಯು ಉಷ್ಣವಲಯ ಮತ್ತು ಉಪ ಉಷ್ಣವಲಯದ ಬೆಳೆ. ಇದರ ಉತ್ಪಾದನೆಗೆ ೨೦೦ರಿಂದ ೨೫೦ ಸೆಲ್ಸಿಯಸ್ ಉಷ್ಣಾಂಶ ಅವಶ್ಯಕ. ಸುಮಾರು ೭೫ ರಿಂದ ೧೫೦ ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಕಪ್ಪು ಮಣ್ಣು, ಮೆಕ್ಕಲು ಮಣ್ಣು ಈ ಬೆಳೆಗೆ ಸೂಕ್ತವಾಗಿದೆ. ಆದರೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಇದಕ್ಕೆ ಹೆಚ್ಚು ಸೂಕ್ತ. ಇದನ್ನು ಮುಂಗಾರು (ಖಾರೀಫ್) ಬೆಳೆಯಾಗಿ ಬೆಳೆಯುತ್ತಾರೆ. ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ  ಹತ್ತಿಯನ್ನು ಬೆಳೆಯುತ್ತಾರೆ.

III. ಚಟುವಟಿಕೆಗಳು :

೧. ಭಾರತದಲ್ಲಿ ಬೆಳೆಯುವ ವಿವಿಧ ಆಹಾರ ಮತ್ತು ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿರಿ.

ಭಕ್ತ ಗೋದಿ ರಾಗಿ ಜೋಳ ತರಕಾರಿ

ತೊಗರಿ ಬೇಳೆ ಹೆಸರು ಬೇಳೆ ಅವರೇ ಬೇಳೆ ಹಲಸಂದಿ ಕಾಳು ಕಡ್ಲೆ ಕಾಳು ಬಟಾಣಿ ಕಾಳು

೨. ಭಾರತದ ನಕ್ಷೆ ಬರೆದು ಕಬ್ಬು ಮತ್ತು ಹೊಗೆಸೊಪ್ಪು ಬೆಳೆಯುವ ಪ್ರದೇಶಗಳನ್ನು ಗುರುತಿಸಿ.

೩. ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಹೇಗೆ ಎಂಬ ಬಗ್ಗೆ ಹತ್ತಿರದ ವೈದ್ಯರಿಂದ ಮಾಹಿತಿ ತಿಳಿಯಿರಿ.

ತಂಬಾಕು ಸೇವನೆಯು ಹೆಚ್ಚಾಗಿ ಹೃದಯ , ಯಕೃತ್ತು ಮತ್ತು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳಿಗೆ ಕಾರಣವಾಗುತ್ತದೆ . ಧೂಮಪಾನವು ಹಲವಾರು ಪರಿಸ್ಥಿತಿಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ, ಅವುಗಳೆಂದರೆ ನ್ಯುಮೋನಿಯಾ , ಹೃದಯಾಘಾತ , ಪಾರ್ಶ್ವವಾಯು , ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) – ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ – ಮತ್ತು ಬಹು ಕ್ಯಾನ್ಸರ್‌ಗಳು (ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ , ಧ್ವನಿಪೆಟ್ಟಿಗೆ ಮತ್ತು ಬಾಯಿಯ ಕ್ಯಾನ್ಸರ್ , ಮೂತ್ರಕೋಶದ ಕ್ಯಾನ್ಸರ್ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ). ಇದು ಬಾಹ್ಯ ಅಪಧಮನಿಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಿದೆ

IV. ಯೋಜನೆಗಳು :
೧. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಸಾಗುವಳಿ ಮಾಡುವ ವಿವಿಧ ಬೆಳೆಗಳನ್ನು ಕುರಿತು ಟಿಪ್ಪಣಿ ಬರೆಯಿರಿ ಹಾಗೂ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.

ಮಳೆಯಾಶ್ರಿತ ಬೆಳೆ ಎಂದರೆ ಹೆಚ್ಚಾಗಿ ದಾವಣಗೆರೆ ಸುತ್ತಮುತ್ತ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆ. ದಾವಣಗೆರೆಯ ಸುತ್ತಮುತ್ತ ಕೆಲವು ಪ್ರದೇಶಗಳು ನೀರಾವರಿ ಇರುವುದರಿಂದ ಹೆಚ್ಚಾಗಿ ಭತ್ತ, ಅಡಕೆ, ತೆಂಗ ನ್ನು ಬೆಳೆಯುತ್ತಾರೆ. ದಾವಣಗೆರೆ ಹತ್ತಿರ ಕುಕ್ಕುವಾಡ ಎಂಬ ಗ್ರಾಮದಲ್ಲಿ ಸಕ್ಕರೆ ಫ್ಯಾಕ್ಟರಿ ಇರುವುದರಿಂದ ದಾವಣಗೆರೆ ಸೂಕ್ತ ಮೊತ್ತ ಬಹಳಷ್ಟು ರೈತರು ಕಬ್ಬನ್ನು ಬೆಳೆಯುತ್ತಾರೆ. ದಾವಣಗೆರೆ ಮಹಾನಗರ ಪಾಲಿಕೆ ಆಗಿರುವುದರಿಂದ ಜಿಲ್ಲೆಯಾದ್ಯಂತ ತರಕಾರಿಯನ್ನು ಹೆಚ್ಚು ಬೆಳೆಯುತ್ತಾರೆ. ಅದರಲ್ಲೂ ಟೊಮ್ಯಾಟೋವನ್ನು ಜಾಸ್ತಿ ಬೆಳೆಯುತ್ತಾರೆ. ಜೊತೆಗೆ ತರಕಾರಿಯೂ ಇಲ್ಲಿಂದ ದೂರ ದೂರದ ಪ್ರದೇಶಗಳಿಗೆ ರಫ್ತಾಗುವುದರಿಂದ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

೨. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಲು ಪುಷ್ಪ ಬೇಸಾಯ ಹೇಗೆ ಪೂರಕವಾಗಿದೆ ಎಂಬುದನ್ನು ಚರ್ಚಿಸಿ.

ಪುಷ್ಪ ಬೇಸಾಯ ಸುಲಭವಾಗಿದ್ದು ಈ ಬೆಳೆಯು ಬಹು ವರ್ಷಕಾಲ ನಿಲ್ಲುವ ಬೆಳೆಯಾಗಿದೆ. ಹೆಣ್ಣು ಮಕ್ಕಳು ಸುಲಭವಾಗಿ ಹೂವನ್ನು ಬಿಡಿಸಿ ಹೂವಿನ ಹಾರವನ್ನು ತಯಾರಿಸಿ ಮಾಡಬಹುದಾಗಿದೆ ಹಬ್ಬ ಮತ್ತಿತರ ಮದುವೆ ಸಮಾರಂಭಗಳಲ್ಲಿ ಹೂವಿಗೆ ಬೇಡಿಕೆ ಇರುವುದರಿಂದ ಹೂವಿನ ಅಥವಾ ಪುಷ್ಪ ಬೇಸಾಯ ಹೆಣ್ಣು ಮಕ್ಕಳಿಗೆ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ.

Leave a Comment