Pdf ಗಾಗಿ ಕೆಳಗೆ ಸ್ಕ್ರೋಲಿಂಗ್ ಮಾಡಿ
<span;>ಅಧ್ಯಾಯ 1
<span;>6th ವಿಜ್ಞಾನ ಪ್ರಶ್ನೋತ್ತರ
<span;>ಆಹಾರದ ಘಟಕಗಳು.
<span;>೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ
<span;>ಉತ್ತರ :- ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ ಗಳು , ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು, ಖನಿಜಗಳು ಇವುಗಳ ಜತೆಗೆ ನೀರು ಮತ್ತು ನಾರು <span;><span;>ಪದಾರ್ಥ.
<span;>೨ . ಕೆಳಗಿನವುಗಳನ್ನು ಹೆಸರಿಸಿ.
<span;>ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು
<span;> <span;>ಉತ್ತರ :- ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬು
<span;>ಬಿ ) ನಮ್ಮ ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಪೋಷಕಗಳು
<span;> <span;>ಉತ್ತರ :- ಪ್ರೋಟೀನ್ ಗಳು
<span;>ಸಿ ) ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್
<span;> <span;>ಉತ್ತರ :- ವಿಟಮಿನ್ ಎ
<span;>ಡಿ ) ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ
<span;>ಉತ್ತರ :- ಕ್ಯಾಲ್ಸಿಯಂ
<span;> ೩.ಕೆಳಗಿನ ಆಹಾರ ಘಟಕಗಳು ಸಮೃದ್ಧಿಯಾಗಿರುವ ಎರಡೆರಡು ಆಹಾರ ಪದಾರ್ಥಗಳನ್ನು ಹೆಸರಿಸಿ.
<span;>ಎ ) ಕೊಬ್ಬು<span;>
<span;> <span;>ಉತ್ತರ :- ಮಾಂಸ , ಮೊಟ್ಟೆ , ಶೇಂಗಾ , ಗೋಡಂಬಿ, ಅಡುಗೆ ಎಣ್ಣೆ,ಡಾಲ್ಡ, ಇತ್ಯಾದಿ
<span;>ಬಿ ) ಪಿಷ್ಟ<span;>
<span;>ಉತ್ತರ :- ಗೋಧಿ , ಜೋಳ , ಮಾವು , ಕಬ್ಬು, ರಾಗಿ,ಅಕ್ಕಿ, ಆಲೂಗಡ್ಡೆ
<span;>ಸಿ ) ಆಹಾರದ ನಾರು ಪದಾರ್ಥ
<span;>ಉತ್ತರ :- ತಾಜಾ ಹಣ್ಣುಗಳು , ತರಕಾರಿಗಳು, ಧಾನ್ಯಗಳು, ಸೊಪ್ಪು.
<span;>ಡಿ ) ಪ್ರೊಟೀನ್<span;>
<span;> <span;>ಉತ್ತರ :- ಬೇಳೆಕಾಳುಗಳು( ಹೆಸರು, ತೊಗರಿ, ಕಡ್ಲಿ, ಬಟಾಣೆ, ಸೋಯಾಬೀನ್ಸ್ ) , ಮಾಂಸ , ಮೊಟ್ಟೆ , ಮೀನು
<span;>೪ . ಸರಿಯಾದ ಹೇಳಿಕೆಗಳಿಗೆ (√ ) ಸರಿ ಗುರುತು ಮಾಡಿ
<span;>ಎ) ಅನ್ನವನ್ನು ಮಾತ್ರ ಸೇವಿಸುವುದರ ಮೂಲಕ ನಾವು ನಮ್ಮ ದೇಹದ ಪೋಷಕಗಳ ಅಗತ್ಯತೆಯನ್ನು ಪೂರೈಸಬಹುದು<span;> ( × )
<span;>ಬಿ ) ಸಂತುಲಿತ ಆಹಾರವನ್ನು ಸೇವಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು<span;> ( √ )
<span;>ಸಿ ) ಸಂತುಲಿತ ಆಹಾರವು ವಿವಿಧ ಆಹಾರ ಪದಾರ್ಥಗಳನ್ನು ಒಳಗೊಂಡಿರಬೇಕು<span;> <span;>( √ )
<span;>ಡಿ ) ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು<span;> <span;>( × )
<span;>೫ . ಖಾಲಿ ಜಾಗಗಳನ್ನು ಭರ್ತಿ ಮಾಡಿ
<span;>ಎ ) ವಿಟಮಿನ್-ಡಿ ಕೊರತೆಯಿಂದ __________ ರೋಗ ಉಂಟಾಗುತ್ತದೆ.
<span;>ಉತ್ತರ :- ರಿಕೆಟ್ಸ್
<span;>ಬಿ ) ಬೇರಿಬೇರಿ ರೋಗವು ____________ ಕೊರತೆಯಿಂದ ಉಂಟಾಗುತ್ತದೆ
<span;>ಉತ್ತರ :- ವಿಟಮಿನ್ ಬಿ1
<span;>ಸಿ ) ವಿಟಮಿನ್-ಸಿ ಕೊರತೆಯು____________ ರೋಗವನ್ನು ಉಂಟುಮಾಡುತ್ತದೆ.
<span;>ಉತ್ತರ :- ಸ್ಕರ್ವಿ
<span;>ಡಿ ) ನಮ್ಮ ಆಹಾರದಲ್ಲಿ_____________ ನ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.
<span;>ಉತ್ತರ :- ವಿಟಮಿನ್ ಎ
<span;>ಅಧ್ಯಾಯ 2
<span;> <span;>ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು
<span;>1. ಮರದಿಂದ ತಯಾರಿಸಬಹುದಾದ ಐದು ವಸ್ತುಗಳನ್ನು ಹೆಸರಿಸಿ.
<span;>ಉತ್ತರ. ಮೇಜು, ಕುರ್ಚಿ ,ಬಾಗಿಲು, ನೇಗಿಲು, ಆಟಿಕೆ ಸಾಮಾನುಗಳು<span;>.
<span;>2. ಕೆಳಗಿನವುಗಳಲ್ಲಿ ಹೊಳೆಯುವ ವಸ್ತುಗಳನ್ನು ಆರಿಸಿ.
<span;>ಗಾಜಿನ ಪಾತ್ರೆ, ಪ್ಲಾಸ್ಟಿಕ್ ಆಟಿಕೆ, ಸ್ಟೀಲ್ ಚಮಚ, ಹತ್ತಿಯ ಅಂಗಿ.
<span;>ಉತ್ತರ. ಪ್ಲಾಸ್ಟಿಕ್ ಪಾತ್ರೆ, ಸ್ಟೀಲ್ ಚಮಚ.
<span;>3. ಹೊಂದಿಸಿ ಬರೆಯಿರಿ.
<span;>ವಸ್ತು ಗಳು ಪದಾರ್ಥಗಳು
<span;>ಪುಸ್ತಕ. ಕಾಗದ
<span;>ಪಾತ್ರೆ /ಲೋಟ. ಗಾಜು
<span;>ಕುರ್ಚಿ ಮರ
<span;>ಆಟಿಕೆ ಪ್ಲಾಸ್ಟಿಕ್
<span;>ಶೂಗಳು ಚರ್ಮ
<span;>4. ಕೆಳಗಿನ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ.
<span;>i. ಪಾರದರ್ಶಕ ಆದರೆ ಗಾಜು ಅಪಾರದರ್ಶಕ. –<span;> <span;>ತಪ್ಪು
<span;>ii. ನೋಟ್ ಪುಸ್ತಕಕ್ಕೆ ಹೊಳಪಿದೆ ಆದರೆ ಅಳಿಸುವ ರಬ್ಬರಿಗೆ ಹೊಳಪಿಲ್ಲ. –<span;> <span;>ತಪ್ಪು
<span;>iii. ಸೀಮೆ ಸುಣ್ಣ ನೀರಿನಲ್ಲಿ ಕರಗುತ್ತದೆ.<span;> — <span;>ತಪ್ಪು
<span;>iv. ಒಂದು ಮರದ ತುಂಡು ನೀರಿನ ಮೇಲೆ ತೇಲುತ್ತದೆ. –<span;> <span;>ಸರಿ
<span;>v. ಸಕ್ಕರೆಯು ನೀರಿನಲ್ಲಿ ಕರಗುವುದಿಲ್ಲ.<span;> <span;>– ತಪ್ಪು
<span;>vi. ಎಣ್ಣೆ ನೀರಿನಲ್ಲಿ ಬೆರೆಯುತ್ತದೆ. –<span;> <span;>ತಪ್ಪು
<span;>vii. ಮರಳು ನೀರಿನ ತಳದಲ್ಲಿ ಸಂಗ್ರಹವಾಗುತ್ತದೆ<span;>– ಸರಿ
<span;>viii. ವಿನೆಗರ್ ನೀರಿನಲ್ಲಿ ಕರಗುತ್ತದೆ–<span;> <span;>ಸರಿ<span;>.
<span;>6. ನೀರಿನಲ್ಲಿ ತೇಲುವ ಎಲ್ಲಾ ವಸ್ತುಗಳನ್ನು ಪಟ್ಟಿ ಮಾಡಿ.<span;><span;> ಎಣ್ಣೆ ಅಥವಾ ಸೀಮೆಎಣ್ಣೆಯ ಮೇಲೆ ಇವು ತೇಲು<span;><span;><span;>ವ<span;><span;>ವೇ ಎಂದು ಪರೀಕ್ಷಿಸಿ ನೋಡಿ
<span;>ಉತ್ತರ:- ಥರ್ಮಾಕೋಲ್, ಇದ್ದಿಲು, ಪ್ಲಾಸ್ಟಿಕ್ ಚೆಂಡು, ಬಲೂನ್,ಗರಿ, ಬೆಂಕಿಕಡ್ಡಿ, ಮರ, ಬೆತ್ತ, ದೋಣಿ, ಕೂದಲು,<span;>ಹಾಳೆ,ಕಟ್ಟಿಗೆ, ಪ್ಲಾಸ್ಟಿಕ್, ಸ್ಪಂಜು,
<span;><span;>ಎಣ್ಣೆ ಅಥವಾ ಸೀಮೆಎಣ್ಣೆಗಳು ನೀರಿನ ಮೇಲೆ ತೇಲುತ್ತವೆ. ಆದ್ದರಿಂದ ಇವು ನೀರಿಗಿಂತ ಹಗುರ. ಆದುದರಿಂದ ಮೇಲಿನ ಎಲ್ಲಾ ವಸ್ತುಗಳು ಎಣ್ಣೆ ಅಥವಾ ಸೀಮೆಎಣ್ಣೆಯಲ್ಲಿ ತೇಲುತ್ತವೆ.
<span;>7. ಗುಂಪಿಗೆ ಸೇರದ ಪದವನ್ನು ಗುರುತಿಸಿ.
<span;>ಎ. ಕುರ್ಚಿ, ಹಾಸಿಗೆ, ಟೇಬಲ್, ಮಗು, ಕಪಾಟು
<span;> ಮಗು
<span;>ಬಿ. ಗುಲಾಬಿ, ಮಲ್ಲಿಗೆ, ಚಂಡು ಹೂವು, ದೋಣಿ, ಕಮಲ
<span;>> ದೋಣಿ
<span;>ಸಿ. ಅಲ್ಯೂಮಿನಿಯಂ, ಕಬ್ಬಿಣ, ತಾಮ್ರ, ಬೆಳ್ಳಿ, ಮರಳು.
<span;>> ಮರಳು
<span;>ಡಿ. ಸಕ್ಕರೆ ,ಉಪ್ಪು ,ಮರಳು ,ತಾಮ್ರದ ಸಲ್ಫೇಟ್.
<span;>> ಮರಳು<span;>.
<span;>ಅಧ್ಯಾಯ 3
<span;>3.<span;> ಪದಾರ್ಥಗಳನ್ನು ಬೇರ್ಪಡಿಸುವಿಕೆ
<span;>ಪ್ರಶ್ನೋತ್ತರ
<span;>
<span;>1. ಒಂದು ಮಿಶ್ರಣದ ವಿವಿಧ ಘಟಕಗಳನ್ನು ನಾವು ಏಕೆ ಬೇರ್ಪಡಿಸಬೇಕು? ಉದಾಹರಣೆಗಳನ್ನು ಕೊಡಿ.
<span;>ಉ.
<span;><span;>ಮಿಶ್ರಣ<span;><span;><span;>ದ<span;><span;> ವಿವಿಧ ಘಟಕಗಳನ್ನು ಬೇರ್ಪಡಿಸುವ ಕಾರಣಗಳು
<span;>*ಎರಡು ಪ್ರತ್ಯೇಕ, ಆದರೆ ಉಪಯುಕ್ತವಾದ ಘಟಕಗಳನ್ನು ಬೇರ್ಪಡಿಸಲು.
<span;>* ಉಪಯುಕ್ತವಲ್ಲದ ಘಟಕಗಳನ್ನು ತೆಗೆಯಲು
<span;>* ಅಶುದ್ಧ ಕಾರಕ ಅಥವಾ ಹಾನಿಕಾರಕ ಘಟಕಗಳನ್ನು ಬೇರ್ಪಡಿಸುವುದು
<span;>ಉದಾ. ೧. ಬೆಣ್ಣೆಯನ್ನು ತೆಗೆಯಲು ಮೊಸರನ್ನು ಕಡೆಯುವುದು.
<span;>೨. ಜೋಳದಲ್ಲಿನ ಕಸವನ್ನು ಬೇರ್ಪಡಿಸುವುದು.
<span;>2. ತೂರುವಿಕೆ ಎಂದರೇನು? ಇದನ್ನು ಎಲ್ಲಿ ಬಳಸುವರು?
<span;>ಉ. ಬೀಸುವ ಗಾಳಿಯ ಸಹಾಯದಿಂದ ಒಂದು ಮಿಶ್ರಣ ದಲ್ಲಿರುವ ಭಾರವಾದ ಮತ್ತು ಹಗುರವಾದ ಘಟಕಗಳನ್ನು ಬೇರ್ಪಡಿಸುವ ವಿಧಾನವೇ ತೂರುವಿಕೆ<span;>.
<span;>ಈ ವಿಧಾನವನ್ನು ಧಾನ್ಯದ ಕಾಳಿನಿಂದ ಹಗುರವಾದ ಹೊಟ್ಟಿನ ಕಣಗಳನ್ನು ಬೇರ್ಪಡಿಸಲು ರೈತರು ಅನುಸರಿಸುತ್ತಾರೆ.
<span;>3. ಬೇಯಿಸುವ ಮುನ್ನ ಬೇಳೆಯಲ್ಲಿರುವ ಹೊಟ್ಟು ಅಥವಾ ಧೂಳಿನ ಕಣಗಳನ್ನು ಬೇರ್ಪಡಿಸುವಿರಿ.
<span;>ಉ. <span;><span;>ಅಕ್ಕಿ ಅಥವಾ ಬೇಳೆಗಳನ್ನು ಅಡುಗೆಗೆ ಮುನ್ನ ಸಾಮಾನ್ಯವಾಗಿ ತೊಳೆಯುತ್ತೇವೆ. ಇವುಗಳಿಗೆ
<span;><span;>ನೀರನ್ನು ಸೇರಿಸಿದಾಗ, ಧೂಳು ಮತ್ತು ಮಣ್ಣಿನ ಕಣಗಳಂತಹ ಅಶುದ್ಧಕಾರಕಗಳು ಬೇರ್ಪಡುತ್ತವೆ.
<span;><span;>ಈ ಅಶುದ್ಧಕಾರಕಗಳು ನೀರಿನಲ್ಲಿ ಸೇರುತ್ತವೆ. ಈಗ, ಅಕ್ಕಿ ಅಥವಾ <span;><span;><span;>ಬೇಳೆ
<span;><span;>ಪಾತ್ರೆಯ ತಳದಲ್ಲಿ ಉಳಿಯುತ್ತದೆ<span;><span;><span;>.<span;><span;> ಪಾತ್ರೆಯನ್ನು ಓರೆ
<span;><span;>ಮಾಡಿ ಕಲುಷಿತ ನೀರನ್ನು ಹೊರ ಹಾಕುತ್ತೇವೆ. ಈ ವಿಧಾನವನ್ನು ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಮತ್ತು ಬಸಿಯುವಿಕೆ ಎನ್ನುವ<span;><span;><span;>ರು<span;><span;>.
<span;>4. ಜರಡಿ ಹಿಡಿಯುವಿಕೆ ಎಂದರೇನು? ಇದನ್ನು ಎಲ್ಲಿ ಬಳಸುವರು.
<span;>ಉ. ಮಿಶ್ರಣದಲ್ಲಿರುವ ವಿವಿಧ ಗಾತ್ರದ ಕಣಗಳನ್ನು ಜರಡಿಯ ಸಹಾಯದಿಂದ ಬೇರ್ಪಡಿಸುವ ವಿಧಾನವೇ ಜರಡಿ ಹಿಡಿಯುವಿಕೆ.
<span;>*ಜೋಳ, ಗೋಧಿಯಲ್ಲಿರುವ ಹೊಟ್ಟು ಮತ್ತು ಕಲ್ಲುಗಳನ್ನು ಬೇರ್ಪಡಿಸಲು
<span;>* ಮರಳಿ ನಲ್ಲಿರುವ ವಿವಿಧ ಗಾತ್ರಗಳನ್ನು ಕಲ್ಲುಗಳನ್ನು ಬೇರ್ಪಡಿಸಲು
<span;>* ಹಿಟ್ಟಿನಲ್ಲಿರುವ ಹೊಟ್ಟನ್ನು ಬೇರ್ಪಡಿಸಲು.
<span;>ಈ ವಿಧಾನವನ್ನು ಬಳಸುವರು
<span;>5. ಮರಳು ಮತ್ತು ನೀರನ್ನು ಅವುಗಳ ಮಿಶ್ರಣದಿಂದ ಹೇಗೆ ಬೇರ್ಪಡಿಸುವುದು?
<span;>ಉ. ನೀರಿನಿಂದ ಮರಳನ್ನು ಬೇರ್ಪಡಿಸುವ ಹಂತಗಳು:
<span;> (i) ಮಿಶ್ರಣವನ್ನು ಗಾಜಿನ ನೋಟದಲ್ಲಿ ನಿಲ್ಲಿಸಿ.
<span;>(ii) ಗುರುತ್ವ ಬಲದಿಂದ ಮರಳು ತಳದಲ್ಲಿ ನೆಲೆಗೊಳ್ಳುತ್ತದೆ.
<span;>(iii) ಮೇಲಿನ ಪದರದಲ್ಲಿ ಸ್ಪಷ್ಟ ನೀರು
<span;>ರೂಪುಗೊಳ್ಳುತ್ತದೆ.
<span;> (iv) ಇನ್ನೊಂದು ಲೋಟದಲ್ಲಿ ಈ ನೀರನ್ನು ನಿಧಾನವಾಗಿ ಸುರಿಯಿರಿ.(ಬಸಿಯುವಿಕೆ) ಲೋಟದಲ್ಲಿ ಮರಳು ಬೇರೆ ಆಗುತ್ತದೆ.
<span;> (V) ಸೋಸುವ ಕಾಗದದಿಂದ ನೀರನ್ನು ಸೋಸಿ ಸ್ವಚ್ಛವಾದ ನೀರನ್ನು ಪಡೆಯಿರಿ.
<span;>6. ಗೋಧಿ ಹಿಟ್ಟಿನಲ್ಲಿ ಮಿಶ್ರಣ ಗೊಂಡಿರುವ ಸಕ್ಕರೆಯನ್ನು ಬೇರೆ ಮಾಡಲು ಸಾಧ್ಯವೇ? ಹೌದು ಎಂದಾದರೆ, ಹೇಗೆ ಮಾಡುವಿರಿ?
<span;>ಹೌದು, ಗೋಧಿ ಹಿಟ್ಟಿನೊಂದಿಗೆ ಸಕ್ಕರೆಯನ್ನು ಪ್ರತ್ಯೇಕಿಸಲು ಸಾಧ್ಯವಿದೆ.
<span;> (i) ಸಕ್ಕರೆ ಮತ್ತು ಗೋಧಿ ಹಿಟ್ಟನ್ನು ಬಹಳಷ್ಟು ನೀರಿನಲ್ಲಿ ಮಿಶ್ರಣ ಮಾಡಿ.
<span;> (ii) ಅದನ್ನು ಫಿಲ್ಟರ್ ಕಾಗದದಲ್ಲಿ ಸೋಸಿ.
<span;> (iii) ಫಿಲ್ಟರ್ ಕಾಗದದ ಮೇಲೆ ಗೋಧಿ ಹಿಟ್ಟು ಇದೆ.
<span;> (iv) ಅದನ್ನು ಒಣಗಿಸಿ ಗೋಧಿ ಹಿಟ್ಟು ಪಡೆಯಿರಿ.
<span;> (v) ಸೋಸಿದ ದ್ರಾವಣ ಒಂದು ಸಕ್ಕರೆ-ನೀರಿನ ಮಿಶ್ರಣವಾಗಿದೆ.
<span;> (vi) ಸಕ್ಕರೆಯನ್ನು ಪಡೆಯಲು ಇದನ್ನು ಆವಿ ಮಾಡಿ.
<span;>7. ಮಣ್ಣು ಮಿಶ್ರಿತ ನೀರಿನ ಮಾದರಿಯಿಂದ ಸ್ವಚ್ಛ ನೀರನ್ನು ಹೇಗೆ ಪಡೆಯುವಿರಿ.
<span;>ಉ. ಮಣ್ಣು ಮಿಶ್ರಿತ ನೀರಿನಿಂದ ಶುದ್ಧ ನೀರನ್ನು ಪಡೆಯುವ ವಿಧಾನ:
<span;> (i) ಮಣ್ಣು ಮಿಶ್ರಿತ ನೀರ<span;><span;>ನ್ನು <span;>ಒಂದು ಪಾತ್ರೆಯಲ್ಲಿ ಅಲುಗಾಡಿಸದಂತೆ ನಿಲ್ಲಿಸಿ.
<span;>(ii) <span;><span;>ಗುರುತ್ವ ಬಲದಿಂದ <span;>ಮಣ್ಣು ಕೆಳಭಾಗದಲ್ಲಿ ನೆಲೆಗೊಳ್ಳುತ್ತದೆ.
<span;>(iii) ಮೇಲಿನ ಪದರವು ಸ್ಪಷ್ಟ ನೀರು.
<span;>(iv)ಅದನ್ನು ಇನ್ನೊಂದು ಪಾತ್ರೆಯೊಳಗೆ ಬಗ್ಗಿಸಿ ಸಂಗ್ರಹ ಮಾಡಿಕೊಳ್ಳಿ.<span;><span;> <span;><span;><span;>(<span;><span;>ಬಸಿಯುವಿಕೆ<span;><span;>)
<span;>(v) ನಂತರ ಮಣ್ಣಿನ ಕಣಗಳ ಕುರುಹುಗಳನ್ನು ತೆಗೆದುಹಾಕಲು ಈ ನೀರನ್ನು ಮತ್ತೊಮ್ಮೆ ಫಿಲ್ಟರ್ ಕಾಗದದಿಂದ ಸೋಸಿ ಶುದ್ಧ ನೀರು ಪಡೆಯಿರಿ.
<span;>8. ಬಿಟ್ಟ ಸ್ಥಳ ತುಂಬಿರಿ
<span;>ಎ. ಪೈರಿನಿಂದ ಭತ್ತದ ಕಾಳುಗಳನ್ನು ಬೇರ್ಪಡಿಸುವ ವಿಧಾನವನ್ನು……………. ಎನ್ನುವರು.
<span;>ಉ. ಬಡಿಯುವಿಕೆ
<span;>ಬಿ. ಕುದಿಸಿ ಆರಿಸಿದ ಹಾಲನ್ನು ಬಟ್ಟೆಯ ತುಂಡಿಗೆ ಸುರಿದು ಅದರ ಮೇಲೆ ಕೆನೆ ಉಳಿದುಕೊಳ್ಳುತ್ತದೆ. ಹಾಲಿನಿಂದ ಕೆನೆಯನ್ನು ಪ್ರತ್ಯೇಕಿಸುವ ಈ ಕ್ರಿಯೆ……….ಗೆ ಉದಾಹರಣೆಯಾಗಿದೆ.
<span;>ಉ. ಸೋಸುವಿಕೆ
<span;>ಸಿ. ಸಮುದ್ರದ ನೀರಿನಿಂದ ಉಪ್ಪನ್ನು………. ಕ್ರಿಯೆಯಿಂದ ಪಡೆಯುವರು
<span;>ಉ. ಆವಿಕರಣ
<span;>ಡಿ. ಒಂದು ಬಕೆಟ್ ನಲ್ಲಿ ಮಣ್ಣು ಮಿಶ್ರಿತ ನೀರನ್ನು ಇಡೀ ರಾತ್ರಿ ಇಟ್ಟಾಗ ಅಶುದ್ಧ ಕಾರಕಗಳು ತಳದಲ್ಲಿ ಕೆಳಗಡೆ ಸಂಗ್ರಹಗೊಂಡವು. ಆ ನಂತರ ಸ್ವಚ್ಛ ನೀರನ್ನು ಮೇಲಿಂದ ಬಸಿಯಲಾಯಿತು ಈ ಉದಾಹರಣೆಯಲ್ಲಿ ಬೇರ್ಪಡಿಸುವ ಕ್ರಿಯೆಯನ್ನು……… ಎನ್ನುವರು.
<span;>ಉ. ಗುರುತ್ವ ಬಲದಿಂದ ಬೇರ್ಪಡಿಸುವಿಕೆ ಮತ್ತು ಬಸಿಯುವಿಕೆ.
<span;>9.ಸರಿ ಅಥವಾ ತಪ್ಪು ಎಂದು ಗುರುತಿಸಿ
<span;>ಎ. ಹಾಲು ಮತ್ತು ನೀರಿನ ಮಿಶ್ರಣವನ್ನು ಸೋಸುವಿಕೆಯಿಂದ ಬೇರ್ಪಡಿಸಬಹುದು
<span;>—– ತಪ್ಪು.
<span;>ಬಿ. ಉಪ್ಪು ಮತ್ತು ಸಕ್ಕರೆಯ ಪುಡಿ ಮಾಡಿದ ಮಿಶ್ರಣವನ್ನು ತೂರುವಿಕೆ ಕ್ರಿಯೆಯಿಂದ ಬೇರ್ಪಡಿಸಬಹುದು<span;>.
<span;>—– ತಪ್ಪು.
<span;>ಸಿ. ಚಹಾ<span;><span;>ದಿಂದ<span;> ಸಕ್ಕರೆಯನ್ನು ಬೇರ್ಪಡಿಸಲು ಸೋಸುವಿಕೆಯನ್ನು ಬಳಸಬಹುದು.
<span;>—- ತಪ್ಪು.
<span;>ಡಿ. ಧಾನ್ಯ ಮತ್ತು ಹೊಟ್ಟನ್ನು ಬಸಿಯುವಿಕೆ ಕ್ರಿಯೆಯಿಂದ ಬೇರ್ಪಡಿಸಬಹುದು.
<span;>—- ತಪ್ಪು.
<span;>10. ನಿಂಬೆರಸ ಮತ್ತು ಸಕ್ಕರೆಯನ್ನು ನೀರಿಗೆ ಬೆರೆಸಿ ಷರಬತ್ತನ್ನು ತಯಾರಿಸುವರು. ನೀವು ಅದಕ್ಕೆ ಮಂಜುಗಡ್ಡೆಯನ್ನು ಹಾಕಲು ಬಯಸುತ್ತೀರಿ. ಷರಬತ್ತಿಗೆ ಮಂಜುಗಡ್ಡೆಯನ್ನು ಸೇರಿಸಬೇಕಾಗಿದ್ದು ಸಕ್ಕರೆ ಕರಗುವ ಮುನ್ನವೊ ಅಥವಾ ನಂತರವೊ? ಯಾವ ಸಂದರ್ಭದಲ್ಲಿ ಹೆಚ್ಚು ಸಕ್ಕರೆಯನ್ನು ಕರಗಿಸಲು ಸಾಧ್ಯವಾಗುವುದು?
<span;>ಉತ್ತರ:
<span;>ಸಕ್ಕರೆ ಕರಗಿದ ನಂತರ ನಾವು ನಿಂಬೆ ಪಾನಕಕ್ಕೆ ಮಂಜುಗಡ್ಡೆ ಅನ್ನು ಸೇರಿಸಬೇಕು.
<span;> ಮಂಜುಗಡ್ಡೆ ಸೇರಿಸುವ ಮೊದಲು ಹೆಚ್ಚು ಸಕ್ಕರೆ ಸೇರಿಸಿ ಕರಗಿಸಲು ಸಾಧ್ಯವಾಗುತ್ತದೆ.
<span;>ಅಧ್ಯಾಯ 7
<span;> 7. ಸಸ್ಯಗಳನ್ನು ತಿಳಿಯುವುದು
<span;>1. ಈ ಕೆಳಗಿನ ಹೇಳಿಕೆಗಳನ್ನು ಸರಿಪಡಿಸಿ ಬರೆಯಿರಿ.
<span;>ಎ) ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಕಾಂಡ <span;>ಹೀರುತ್ತದೆ<span;>.
<span;>ಉ. ಮಣ್ಣಿನಲ್ಲಿರುವ ನೀರು ಮತ್ತು ಖನಿಜಗಳನ್ನು ಬೇರು ಹೀರುತ್ತದೆ.
<span;>ಬಿ. ಎಲೆಗಳು ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.
<span;>ಉ. ಬೇರುಗಳು ಮತ್ತು ಕಾಂಡ ಸಸ್ಯವನ್ನು ನೇರವಾಗಿ ನಿಲ್ಲುವಂತೆ ಹಿಡಿದಿಡುತ್ತವೆ.
<span;>ಸಿ. ಬೇರುಗಳು ಎಲೆಗಳಿಗೆ ನೀರನ್ನು ಸಾಗಿಸುತ್ತವೆ.
<span;>ಉ. ಕಾಂಡವು ಎಲೆಗಳಿಗೆ ನೀರನ್ನು ಸಾಗಿಸುತ್ತದೆ.
<span;>ಡಿ. ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಯಾವಾಗಲೂ ಸಮ.
<span;>ಉ. ಒಂದು ಹೂವಿನಲ್ಲಿ ಪುಷ್ಪದಳ ಮತ್ತು ಕೇಸರಗಳ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ<span;>.
<span;>ಇ. ಒಂದು ಹೂವಿನಲ್ಲಿ ಪುಷ್ಪ ಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಸಹ ಒಟ್ಟಿಗೆ ಸೇರಿರುತ್ತವೆ.
<span;>ಒಂದು ಹೂವಿನಲ್ಲಿ ಪುಷ್ಪಪತ್ರಗಳು ಒಟ್ಟಿಗೆ ಸೇರಿದ್ದರೆ, ಅದರ ಪುಷ್ಪದಳಗಳು ಸೇರಿದ್ದರೂ ಇರಬಹುದು ಅಥವಾ ಸೇರದೆಯೂ ಇರಬಹುದು<span;>.
<span;>ಎಫ್. ಒಂದು ಹೂವಿನಲ್ಲಿ ಪುಷ್ಪದಳಗಳು ಒಟ್ಟಿಗೆ ಸೇರಿದ್ದರೆ, ಆಗ ಶಲಾಕೆಯು ಪುಷ್ಪದಳಕ್ಕೆ ಸೇರಿಕೊಂಡಿರುತ್ತದೆ.
<span;>ಒಂದು ಹೂವಿನಲ್ಲಿ ಪುಷ್ಪದಳಗಳು <span;><span;>ಒ<span;>ಟ್ಟಿಗೆ ಸೇರಿದ್ದರೆ ಆಗ ಶಲಾಕೆಯು ಪುಷ್ಪದಳಕ್ಕೆ ಸೇರಿಯೂ ಅಥವಾ ಸೇರದೆಯೂ ಇರಬಹುದು.
<span;>2. ಕೋಷ್ಟಕ 7.3 ರಲ್ಲಿ ನೀವು ಅಧ್ಯಯನ ಮಾಡಿದಂತೆ ಎ.)ಒಂದು ಎಲೆ ಬಿ.) ತಾಯಿಬೇರು ಮತ್ತು ಸಿ) ಒಂದು ಹೂವಿನ ಚಿತ್ರವನ್ನು ರಚಿಸಿ
<span;>3. ನಿಮ್ಮ ಮನೆ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ ಒಂದು ಸಸ್ಯವನ್ನು ಕಾಣಬಲ್ಲಿರಾ ? ಅದರ ಹೆಸರು ಬರೆಯಿರಿ. ಇದನ್ನು ಯಾವ ಗುಂಪಿಗೆ ವರ್ಗೀಕರಿಸುವಿರಿ.
<span;>ಉತ್ತರ: ಹೌದು ನಮ್ಮ ಮನೆಯ ಪಕ್ಕದಲ್ಲಿ ಎತ್ತರವಾಗಿರುವ ಆದರೆ ದುರ್ಬಲ ಕಾಂಡವಿರುವ ಸಸ್ಯವಿದೆ. ಅದು ಮನಿಪ್ಲಾಂಟ್. ಅದು ಅಡರು ಬಳ್ಳಿ ಹಾಗೆಯೇ ಕುಂಬಳ ಕಾಯಿಯ ಬಳ್ಳಿಯೂ ಇದೆ.<span;> <span;>ಇವು ಬಳ್ಳಿಗಳ ಗುಂಪಿಗೆ ಸೇರಿವೆ.
<span;>4. ಕಾಂಡದ ಕಾರ್ಯವೇನು?
<span;>ಉ. *ಕಾಂಡವು ನೀರು ಮತ್ತು ಖನಿಜಾಂಶಗಳನ್ನು ಮೇಲೆರುವುದಕ್ಕೆ ಸಹಾಯ ಮಾಡುತ್ತದೆ.
<span;>* ಕಾಂಡವು ಸಸ್ಯಕ್ಕೆ ಆಧಾರವನ್ನು ಒದಗಿಸುತ್ತದೆ<span;>.
<span;>*ಇದು ಎಲೆಗಳು ಹೂವು ಮೊಗ್ಗು ಕಾಯಿ ಹಣ್ಣುಗಳನ್ನು ಹೊಂದಿರುತ್ತದೆ.
<span;>*ಇದು ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ಇ<span;><span;>ತ<span;>ರ ಭಾಗಗಳಿಗೆ ಸಾಗಿಸುತ್ತದೆ.
<span;>5. ಈ ಕೆಳಗಿನ ಯಾವ ಎಲೆಗಳಲ್ಲಿ ಜಾಲಿಕಾರೂಪ ಸಿರ ವಿನ್ಯಾಸವಿದೆ.
<span;>ಗೋದಿ,ತುಳಸಿ, ಮೆಕ್ಕೆಜೋಳ, ಕೋತಂಬರಿ,ಚೀನಾ ಗುಲಾಬಿ.
<span;>ಉತ್ತರ: ತುಳಸಿ, ಕೊತ್ತುಂಬರಿ ಮತ್ತು ಚೀನಾ ಗುಲಾಬಿಯಲ್ಲಿ ಜಾಲಿಕಾ ಸಿರಾವಿನ್ಯಾಸವಿದೆ. ಗೋಧಿ ಮೆಕ್ಕೆಜೋಳ ಮತ್ತು ಹುಲ್ಲು – ಇವುಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿರುತ್ತದೆ.
<span;>6. ಒಂದು ಸಸ್ಯಕ್ಕೆ ತಂತು ಬೇರಿದ್ದರೆ, ಅದರ ಎಲೆಗಳಲ್ಲಿ ಯಾವ ಬಗೆಯ ಸಿರಾ ವಿನ್ಯಾಸವಿರುತ್ತದೆ ?
<span;>ಉತ್ತರ: ಒಂದು ಸಸ್ಯಕ್ಕೆ ತಂತು ಬೇರಿದ್ದರೆ ಅದರ ಎಲೆಗಳಲ್ಲಿ ಸಮಾನಾಂತರ ಸಿರಾ ವಿನ್ಯಾಸವಿರುತ್ತದೆ.
<span;> ಉದಾ, ಹುಲ್ಲು, ಗೋಧಿ ಮತ್ತು ಮೆಕ್ಕೆಜೋಳ
<span;>7. ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪ ಸಿರ ವಿನ್ಯಾಸವಿದ್ದರೆ ಅದರಲ್ಲಿ ಯಾವ ಬಗೆಯ ಬೇರು ಇರುತ್ತದೆ?
<span;>ಉತ್ತರ: ಒಂದು ಸಸ್ಯದ ಎಲೆಗಳಲ್ಲಿ ಜಾಲಿಕಾರೂಪ ಸಿರಾ ವಿನ್ಯಾಸವಿದ್ದರೆ, ಅದರಲ್ಲಿ ತಾಯಿಬೇರು ಇರುತ್ತದೆ.
<span;>8. ಕಾಗದದ ಹಾಳೆಯ ಮೇಲಿರುವ ಎಲೆಯ ಅಚ್ಚನ್ನು ನೋಡಿ ಅದರ ಸಸ್ಯದಲ್ಲಿ ತಾಯಿಬೇರು ಇದೆಯೇ ಅಥವಾ ತಂತು ಬೇರು ಇದೆಯೇ ಎಂದು ಕಂಡುಹಿಡಿಯಲು ನಿಮಗೆ ಸಾಧ್ಯವೇ?
<span;>ಉ. ಸಾಧ್ಯವಿದೆ.
<span;>ಎಲೆಯಲ್ಲಿ ಜಾಲಿಕಾ ರೂಪ ಸಿರಾ ವಿನ್ಯಾಸವಿದ್ದರೆ ಸಸ್ಯ ತಾಯಿಬೇರು ಹೊಂದಿದೆ.
<span;>ಎಲೆಯಲ್ಲಿ ಸಮಾನಾಂತರ ಸಿರಾ ವಿನ್ಯಾಸವಿದ್ದರೆ ಸಸ್ಯ ತಂತು ಬೇರು ಹೊಂದಿದೆ.
<span;>9. ಹೂವಿನ ಭಾಗಗಳು ಯಾವುವು?
<span;>ಉತ್ತರ: ಹೂವಿನ ಮುಖ್ಯ ಭಾಗಗಳು ಪುಷ್ಪಪತ್ರ, ಪುಷ್ಪದಳ, ಕೇಸರ ಮತ್ತು ಶಲಾಕೆ. ಕೇಸರದಲ್ಲಿ ಎರಡು ಭಾಗ. ಅವು ಕೇಸರದಂಡ ಮತ್ತು ಪರಾಗಕೋಶ. ಶಲಾಕೆಯಲ್ಲಿ 3 ಭಾಗ ಅವು ಅಂಡಾಶಯ, ಶಲಾಕ ನಳಿಕೆ ಮತ್ತು ಶಲಾಕಾಗ್ರ.
<span;>10. ಈ ಕೆಳಗಿನ ಯಾವ ಸಸ್ಯಗಳಲ್ಲಿ ಹೂಗಳಿವೆ?
<span;>ಹುಲ್ಲು, ಮೆಕ್ಕೆಜೋಳ, ಗೋಧಿ, ಮೆಣಸಿನಕಾಯಿ, ಟೊಮ್ಯಾಟೊ, ತುಳಸಿ, ಅರಳಿ, ಬೀಟೆ ಮರ, ಆಲ, ಮಾವು, ನೇರಳೆ, ಸೀಬೆ, ದಾಳಿಂಬೆ, ಪಪ್ಪಾಯಿ, ಬಾಳೆ, ನಿಂಬೆ, ಕಟ್ಟು, ಆಲೂಗಡ್ಡೆ, ಕಡಲೆಕಾಯಿ,
<span;>ಉತ್ತರ: ಕೊಟ್ಟಿರುವ ಎಲ್ಲಾ ಸಸ್ಯಗಳಲ್ಲಿಯೂ ಹೂವುಗಳು ಇರುತ್ತವೆ. ಆದರೆ ತುಳಸಿ, ಅರಳಿ, ಕಬ್ಬು, ಆಲ ಇತ್ಯಾದಿಗಳಲ್ಲಿ ಹೂಗಳು ಬಹಳ ಸಣ್ಣದಾಗಿರುವುದರಿಂದ ಬರಿಯ ಕಣ್ಣಿಗೆ ಕಾಣಿಸುವುದಿಲ್ಲ. ಮಾವು, ನೇರಳೆ, ಸೀಬೆ, ದಾಳಿಂಬೆ, ಪಪ್ಪಾಯಿ, ಬಾಳೆ, ನಿಂಬೆ ಮುಂತಾದವುಗಳಲ್ಲಿ
<span;>ಹೂವುಗಳು ಕಾಣಿಸುತ್ತವೆ.
<span;>11. ಆಹಾರವನ್ನು ತಯಾರಿಸುವ ಸಸ್ಯದ ಭಾಗ ಮತ್ತು ಪ್ರಕ್ರಿಯೆಯನ್ನು ಹೆಸರಿಸಿ.
<span;>ಉ. ಆಹಾರವನ್ನು ತಯಾರಿಸುವ ಸಸ್ಯದ ಭಾಗ ಎಲೆ.
<span;>ಆಹಾರ ತಯಾರಿಸುವ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ ಕ್ರಿಯೆ ಎನ್ನುವರು.
<span;>12. ಹೂವಿನ ಯಾವ ಭಾಗದಲ್ಲಿ ನೀವು ಅಂಡಾಶಯವನ್ನು ಕಾಣುತ್ತೀರಿ?
<span;>ಉ.ಶಲಾಕಾಗ್ರದ ಅತ್ಯಂತ ಕೆಳಭಾಗ ಮತ್ತು ಉಬ್ಬಿದ ಭಾಗವೇ ಅಂಡಾಶಯ.
<span;>13. ಪುಷ್ಪ ಪತ್ರಗಳು ಪ್ರತ್ಯೇಕ ವಿರುವ ಮತ್ತು ಪುಷ್ಪಪತ್ರ ಸೇರಿರುವ ಎರಡು ಸಸ್ಯಗಳನ್ನು ಹೆಸರಿಸಿ.
<span;>ಉ. ಪುಷ್ಪಪತ್ರ ಪ್ರತ್ಯೇಕ ವಿರುವ ಸಸ್ಯಗಳು- ಗುಲಾಬಿ, ಕಮಲ ಮತ್ತು ಮ್ಯಾಗ್ನೋಲಿಯಾ,
<span;>ಪುಷ್ಪಪತ್ರ ಸೇರಿರುವ ಸಸ್ಯಗಳು- ಪೆರಿವಿಂಕಲ್ ,ದತ್ತೂರ, ಹತ್ತಿ ಮತ್ತು ದಾಸವಾಳ.
<span;>ಅಧ್ಯಾಯ 8
<span;>ದೇಹದ ಚಲನೆಗಳು
<span;>1. ಬಿಟ್ಟ ಸ್ಥಳಗಳನ್ನು ತುಂಬಿ,
<span;>ಎ) ಮೂಳೆಗಳಲ್ಲಿರುವ ಕೀಲುಗಳು ದೇಹದ<span;> <span;>ಚಲನೆ<span;>ಗೆ ಸಹಾಯ ಮಾಡುತ್ತವೆ.
<span;>ಬಿ) ಮೂಳೆ ಮತ್ತು ಮೃದ್ವಸ್ಥಿಗಳ ಸಂಯೋಜನೆಯು ದೇಹದ<span;> <span;>ಅಸ್ಥಿ ಪಂಜರ<span;>ವನ್ನು ಉಂಟು ಮಾಡುತ್ತದೆ.
<span;>ಸಿ) ಮೊಣಕೈನ ಬಳಿಯಿರುವ ಮೂಳೆಗಳು<span;> <span;>ಬಿಜಾಗರಿ<span;> <span;>ಕೀಲಿನಿಂದ ಸೇರಿವೆ.
<span;>ಡಿ) ಚಲನೆಯ ಸಮಯದಲ್ಲಿ ಸ್ನಾಯುಗಳ<span;> <span;>ಸಂಕೋಚನ<span;>ವು ಮೂಳೆಗಳನ್ನು ಎಳೆಯುತ್ತದೆ.
<span;>2. ಈ ಕೆಳಗಿನ ವಾಕ್ಯಗಳಲ್ಲಿ ಸರಿ (ಸ) ಮತ್ತು ತಪ್ಪು (ತ) <span;>ತಿಳಿಸಿ
<span;>ಎ) ಎಲ್ಲಾ ಪ್ರಾಣಿಗಳ ಚಲನೆ ಮತ್ತು ಸ್ಥಾನಾಂತರ ಒಂದೇ ರೀತಿ ಇರುತ್ತದೆ.<span;> ( ತಪ್ಪು)
<span;>ಬಿ) ಮೂಳೆಗಳಿಗಿಂತ ಮೃದ್ವಸ್ಥಿಗಳು ಗಟ್ಟಿ<span;>.(<span;>ತಪ್ಪು<span;>)
<span;>ಸಿ) ಕೈಬೆರಳಿನ ಮೂಳೆಗಳಿಗೆ ಕೀಲುಗಳಿರುವುದಿಲ್ಲ.<span;> (ತಪ್ಪು)
<span;> <span;>ಡಿ) ಮುಂದೋಳಿನಲ್ಲಿ ಎರಡು ಮೂಳೆಗಳಿವೆ<span;>. (ಸರಿ)
<span;>ಎಫ್) ಜಿರಳೆಗಳಿಗೆ ಹೊರ ಕಂಕಾಲವಿರುತ್ತದೆ.<span;>(ಸರಿ)
<span;>3. ಕಾಲಂ-1ರಲ್ಲಿರುವ ಅಂಶಗಳನ್ನು ಕಾಲಂ-2ರಲ್ಲಿರುವ ಅಂಶಗಳೊಡನೆ ಹೊಂದಿಸಿ.
<span;>.
<span;>ಮೇಲ್ದವಡೆ ……. ಒಂದು ಚಲಿಸಲಾರದ ಕೀಲು.
<span;>ಮೀನು……. ಸುಚಲನಾಕೃತಿಯ ದೇಹವನ್ನು ಹೊಂದಿದೆ
<span;>ಪಕ್ಕೆಲುಬುಗಳು…..ಹೃದಯವನ್ನು ರಕ್ಷಿಸುತ್ತದೆ.
<span;>ಬಸವನಹುಳು…….ನಿಧಾನಗತಿಯ ಚಲನೆಯನ್ನು ಪ್ರದರ್ಶಿಸುತ್ತದೆ.
<span;>ಜಿರಳೆ……….ಬಾಹ್ಯಕಂಕಾಲವಿದೆ.
<span;>4. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
<span;>ಎ) ಗೋಲ ಮತ್ತು ಗುಳಿ ಕೀಲು ಎಂದರೇನು?
<span;>ಉತ್ತರ: ದುಂಡಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿ ( ಟೊಳ್ಳಾದ ಜಾಗ ) ಯಲ್ಲಿ ಜೋಡಣೆಯಾಗುತ್ತದೆ. ಇದನ್ನು ಗೋಲ ಮತ್ತು ಗುಳಿ ಕೀಲು ಎನ್ನುವರು .
<span;>ಬಿ) ತಲೆಬುರುಡೆಯಲ್ಲಿ ಚಲಿಸುವ ಮೂಳೆಗಳು ಯಾವುವು?
<span;>ಉ : ತಲೆಬುರುಡೆಯಲ್ಲಿ ಚಲಿಸುವ ಮೂಳೆ ಕೆಳದವಡೆ ಮಾತ್ರ.
<span;>ಸಿ) ನಮ್ಮ ಮೊಣ<span;><span;>ಕೈ<span;> ಹಿಮ್ಮು ಖವಾಗಿ ಚಲಿಸುವುದಿಲ್ಲ ಏಕೆ ?
<span;>ಉ : ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆಂದರೆ ಮೊಣ<span;><span;>ಕೈ<span;> ಒಂದು ಬಿಜಾಗರಿ ಕೀಲು ಹೊಂದಿದ್ದು ಅದು ಕೇವಲ ಒಂದು ದಿಕ್ಕಿನಲ್ಲಿ ಚಲಿಸುವಂತೆ ಮಾಡುತ್ತದೆ .
ವಿಜ್ಞಾನ 6ನೇ ತರಗತಿ ಭಾಗ ಒಂದು ನೋಟ್ಸ್ ಪ್ರಶ್ನೋತ್ತರಗಳು ಕ್ಲಿಕ್ ಮಾಡಿವಿಜ್ಞಾನ 6ನೇ ತರಗತಿ ಭಾಗ ಒಂದು ನೋಟ್ಸ್ ಪ್ರಶ್ನೋತ್ತರಗಳು ಕ್ಲಿಕ್ ಮಾಡಿ