ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.
> ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ:
೧. ಸ್ವರಾಕ್ಷರಗಳು-೧೩
೨. ವ್ಯಂಜನಾಕ್ಷರಗಳು-೩೪
೩. ಯೋಗವಾಹಗಳು-೨
> ಸ್ವರಾಕ್ಷರಗಳು ೨ ರೀತಿಯಲ್ಲಿದೆ.
೧. ಹ್ರಸ್ವ ಸ್ವರಗಳು-೬
೨. ದೀರ್ಘ ಸ್ವರಗಳು-೭
> ಯೋಗವಾಹಗಳಲ್ಲಿ ೨ ವಿಧ
೧. ಅನುಸ್ವಾರ (0)
2. ವಿಸರ್ಗ (:)
ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ.
೧. ವರ್ಗೀಯ ವ್ಯಂಜನ-೨೫
೨. ಅವರ್ಗೀಯ ವ್ಯಂಜನ-೯
> ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ.
೧. ಅಲ್ಪ ಪ್ರಾಣಾಕ್ಷರಗಳು (೧೦)
೨. ಮಹಾ ಪ್ರಾಣಾಕ್ಷರಗಳು (೧೦)
೩. ಅನುನಾಸಿಕ ಅಕ್ಷರಗಳು. (೫)
ಗುಣಿತಾಕ್ಷರಗಳು :
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎನ್ನುವರು.
ಕ್+ಋ=ಕೃ ಮುಂತಾದವು.
ಉದಾ: ‘ಬಾಯಾರಿಕೆ’ ಇಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ – ಬ್+ಆ, ಯ್+ಆ, ರ್+ಇ, ಕ್+ಎ, ಅಂತೆಯೇ ‘ಕೃತಕ’ – ಇಲ್ಲಿನ ಅಕ್ಷರಗಳನ್ನು ಬಿಡಿಸಿದಾಗ ಕ್+ಋ, ತ್+ಅ. ಕ್+ಅ – ಎಂದಾಗುತ್ತದೆ.
ವ್ಯಾಕರಣ ಮಾಹಿತಿ
ಅ. ಗುಣಿತಾಕ್ಷರಗಳು
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳು ಗುಣಿತಾಕ್ಷರಗಳು.
೧) ಇಲ್ಲಿನ ಅಕ್ಷರ ಸಂರಚನೆಗಳನ್ನು ಗಮನಿಸಿರಿ.
ಕ್+ಅ=ಕ
ಕ್+ಆ=ಕಾ
ಕ್+ಇ=ಕಿ
ಕ್+ಈ=ಕೀ
ಕ್+ಉ=ಕು
ಕ್+ಊ=ಕೂ
ಕ್+ಋ=ಕೃ
ಕ್+ಎ=ಕೆ
ಕ್+ಏ=ಕೇ
ಕ್+ಐ=ಕೈ
ಕ್+ಒ=ಕೊ
ಕ್+ಓ=ಕೋ
ಕ್+ಔ=ಕೌ
ಕ್+ಅಂ=ಕಂ
ಕ್+ಅಃ=ಕ:
೨) ಕೆಳಗಿನ ಅಕ್ಷರಗಳನ್ನು ಬಿಡಿಸಿ ಬರೆಯುವ ಕ್ರಮ ತಿಳಿಯಿರಿ.
ರಾಜಧಾನಿ = ರ್+ಆ=ರಾ, ಜ್+ಅ=ಜ, ಧ್+ಆ=ಧಾ, ನ್+ಇ=ನಿ,
ಸಿಂಹಾಸನ = ಸ್+ಇಂ=ಸಿಂ, ಹ್+ಆ=ಹಾ, ಸ್+ಅ=ಸ, ನ್+ಅ=ನ,
ಪರಿಚಿತ = ಪ್+ಅ=ಪ, ರ್+ಇ=ರಿ, ಚ್+ಇ=ಚಿ, ತ್+ಅ=ತ,
ಬಾಯಾರಿಕೆ = ಬ್+ಆ=ಬಾ, ಯ್+ಆ=ಯಾ, ರ್+ಇ=ರಿ, ಕ್+ಎ=ಕೆ,
ಸಂಯುಕ್ತಾಕ್ಷರಗಳು :
ವ್ಯಂಜನಕ್ಕೆ ವ್ಯಂಜನ ದ್ವಿತ್ವವಾಗಿ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಅಥವಾ ದ್ವಿತ್ವಾಕ್ಷರ ಎಂದು ಕರೆಯುವರು.
> ಸಂಯುಕ್ತಾಕ್ಷರಗಳಲ್ಲಿ ೨ ವಿಧಗಳಿವೆ :
೧. ಸಜಾತೀಯ ಸಂಯುಕ್ತಾಕ್ಷರಗಳು
೨. ವಿಜಾತೀಯ ಸಂಯುಕ್ತಾಕ್ಷರಗಳು.
ಒಂದೇ ಜಾತಿಯ ಎರಡು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವವು.
ಉದಾ: ಹ, ಗ್+ಗ್+ಆ = ಹಗ್ಗ ಎಂದಾಗುತ್ತದೆ.
ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದಕ್ಕೊಂದು ಕೊಂಡು ಉಂಟಾಗುವ ಅಕ್ಷರವು ವಿಜಾತೀಯ ಸಂಯುಕ್ತಾಕ್ಷರವೆನಿಸುವುದು.
ಉದಾಹರಣೆಗೆ. ರ, ಕ್+ತ್+ಅ=ರಕ್ತ
ಇಲ್ಲಿ ಕ್ ಮತ್ತು ತ್ ಇವು ಪರಸ್ಪರ ವಿಜಾತೀಯ ವ್ಯಂಜನಗಳಾಗಿದ್ದು ಇವೆರಡು ಕೂಡಿ ‘ಕ್ತ’ ಎಂಬ ವಿಜಾತೀಯ ಸಂಯುಕ್ತಾಕ್ಷರವಾಗಿದೆ.
ಅಸ್ತ್ರ, ರಾಷ್ಟ್ರ. ಸ್ವಾತಂತ್ರ್ಯ ಮುಂತಾದವು ಒಂದಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳನ್ನು ಒಳಗೊಂಡಿವೆ.
ವಚನಗಳು : ಒಂದು ಎಂಬುದನ್ನು ಸೂಚಿಸುವ ಶಬ್ದಗಳೆಲ್ಲ ಏಕವಚನಗಳು ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುವ ಶಬ್ದಗಳಿಗೆ ಬಹುವಚನ ಎನ್ನುತ್ತೇವೆ. ಕನ್ನಡ ಭಾಷೆಯಲ್ಲಿ ಏಕವಚನ, ಬಹುವಚನಗಳೆಂದು ಎರಡು ಪ್ರಕಾರಗಳಿವೆ.
ಏಕವಚನ…………ಬಹುವಚನ
ಅರಸ…………….. ಅರಸರು
ನೀನು………………ನೀವು
ಮರ………………..ಮರಗಳು
ಮಗು………………ಮಕ್ಕಳು
ಲಿಂಗಗಳು
ಕನ್ನಡ ಭಾಷೆಯಲ್ಲಿ ಮುಖ್ಯವಾಗಿ ಮೂರು ಪ್ರಕಾರದ ಲಿಂಗಗಳಿವೆ.
೧. ಪುಲ್ಲಿಂಗ
೨. ಸ್ತ್ರೀಲಿಂಗ
೩. ನಪುಂಸಕ ಲಿಂಗ.
ಪುಲ್ಲಿಂಗ :- ಯಾವ ಶಬ್ದ ಪ್ರಯೋಗ ಮಾಡಿದಾಗ ‘ಗಂಡಸು’ ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ‘ಪುಲ್ಲಿಂಗ’ವೆನಿಸುವುದು.
ಉದಾ :- ಮುದುಕ, ಚಿಕ್ಕಪ್ಪ, ಶಂಕರ, ಅರಸು, ಅಣ್ಣ ಮುಂತಾದವು.
ಸ್ತ್ರೀಲಿಂಗ :- ನಮ್ಮ ಭಾವನೆಗೆ ‘ಹೆಂಗಸು’ ಎಂಬ ಅರ್ಥವು ಹೊಳೆದರೆ ಅದು ‘ಸ್ತ್ರೀ’ ಲಿಂಗವೆನಿಸುವುದು.
ಉದಾ :- ಮುದುಕಿ, ಚಿಕ್ಕಮ್ಮ, ಸರೋಜ, ರಾಣಿ ಮುಂತಾದವು.
ನಪುಂಸಕ ಲಿಂಗ :- ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು, ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು.
ಉದಾ :- ಮನೆ, ನೆಲ, ಬೆಂಕಿ, ಗದ್ದೆ, ತೋಟ, ಮಗು, ನವಿಲು, ಕೋಳಿ, ನಾಯಿ ಮುಂತಾದವು.
• ನಾಮಪದಗಳು
ವಸ್ತುವಾಚಕ ನಾಮಪದಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.
೧. ರೂಢನಾಮ
೨. ಅಂಕಿತನಾಮ
೩. ಅನ್ವರ್ಥನಾಮ
* ರೂಢನಾಮ : ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ರೂಢನಾಮ ಎನ್ನುವರು.
ಉದಾ:- ನದಿ, ಪರ್ವತ, ಮನುಷ್ಯ, ದೇಶ, ಹುಡುಗಿ, ಶಾಲೆ, ಮನೆ, ರಾಜ-ಮುಂತಾದವು.
• ಅಂಕಿತನಾಮ:- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು, ಹೊನ್ನವಳ್ಳಿ, ಕಾವೇರಿ, ಹಿಮಾಲಯ, ಜೋಸೆಫ್, ಬೋರಣ್ಣ ಮುಂತಾದವು.
• ಅನ್ವರ್ಥನಾಮ :- ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ:- ವ್ಯಾಪಾರಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ ಮುಂತಾದವು.
ವಿಭಕ್ತಿ ಪ್ರತ್ಯಯ:
ಸ್ವತಂತ್ರವಾದ ಅರ್ಥವಿಲ್ಲದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನುಂಟು ಮಾಡುವ ‘ಉ’, ‘ಅನ್ನು’, ‘ಇಂದ’, ‘ಗೆ’, ‘ಕೈ’, ‘ದೆಸೆಯಿಂದ’, ‘ಅ’, ‘ಅಲ್ಲಿ’ ಗಳಿಗೆ ವಿಭಕ್ತಿ ಪ್ರತ್ಯಯಗಳೆನ್ನುವರು.
ವಿಭಕ್ತಿ…ವಿಭಕ್ತಿ ಪ್ರತ್ಯಯ……ನಾಮಪದಗಳಿಗೆ ವಿಭಕ್ತಿ ಪ್ರತ್ಯಯ ಸೇರಿಸಿದಾಗ.
ಪ್ರಥಮ……ಉ… ಗೌರಿಯು
ದ್ವಿತೀಯ…. ಅನ್ನು … ಗೌರಿಯನ್ನು
ತೃತೀಯ…ಇಂದ…. ಗೌರಿಯಿಂದ
ಚತುರ್ಥೀ.. ಗೆ,ಇಗೆ,ಕ್ಕೆ….. ಗೌರಿಗೆ
ಪಂಚಮೀ… ದೆಸೆಯಿಂದ .. ಗೌರಿಯ ದೆಸೆಯಿಂದ
ಷಷ್ಠೀ…ಅ…. ಗೌರಿಯ
ಸಪ್ತಮೀ … ಅಲ್ಲಿ …. ಗೌರಿಯಲ್ಲಿ
ವ್ಯಾಕರಣ
ವಿಭಕ್ತಿ ಪ್ರತ್ಯಯ
ಕೆಳಗಿನ ವಾಕ್ಯಗಳನ್ನು ಓದಿ ವ್ಯತ್ಯಾಸ ಗುರುತಿಸಿ.
ಅ) ಇರುವೆಯು ಬಂದಿತು. (ಇರುವೆ+ಉ=ಇರುವೆಯು)
ಆ) ಇರುವೆ ಬಂದಿತು.
ಮೇಲಿನ ವಾಕ್ಯಗಳಲ್ಲಿ ಎರಡೂ ವಾಕ್ಯಗಳೂ ಸರಿ. ಆದರೆ,
(ಅ) ಎಂಬ ವಾಕ್ಯದಲ್ಲಿ ಯು ಎಂಬ ಅಕ್ಷರವನ್ನು ಸೇರಿಸಲಾಗಿದೆ.
(ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಡಲಾಗಿದೆ. (ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಟ್ಟರೂ ಅರ್ಥ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಗಮನಿಸಿ.
(ಕ) ಇರುವೆ ಗೂಡನ್ನು ಬಂದಿತು. (ಗೂಡು + – ಅನ್ನು =ಗೂಡನ್ನು)
(ಗ) ಇರುವೆ ಗೂಡಿನಿಂದ ಬಂದಿತು. (ಗೂಡು+ನ+ಇಂದ=ಗೂಡಿನಿಂದ)
(ಚ) ಇರುವೆ ಗೂಡಿಗೆ ಬಂದಿತು. (ಗೂಡು+ಇಗೆ=ಗೂಡಿಗೆ)
(ಜ) ಇರುವೆ ಗೂಡಿನಲ್ಲಿ ಬಂದಿತು. (ಗೂಡು+ನ+ಅಲ್ಲಿ=ಗೂಡಿನಲ್ಲಿ. ಇದನ್ನು ಗೂಡು+ಅಲ್ಲಿ=ಗೂಡಲ್ಲಿ ಎಂದೂ ಬಳಸಬಹುದು) TO
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಕ) ಮತ್ತು (ಜ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುವುದಿಲ್ಲ. ಇಂಥ ವಾಕ್ಯ ಸರಿಯಲ್ಲ. ಈ ವಾಕ್ಯವನ್ನು ಬದಲಾಯಿಸಿ ಬರೆಯೋಣ.
(ಕ) ಇರುವೆ ಗೂಡನ್ನು ನೋಡಿತು.
(ಜ) ಇರುವೆ ಗೂಡಿನಲ್ಲಿ (ಗೂಡಲ್ಲಿ) ಇದೆ.
ಈಗ ಈ ವಾಕ್ಯಗಳು ಅರ್ಥವತ್ತಾಗಿ ಕಾಣಿಸುತ್ತವೆ.
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಗ) ಮತ್ತು (ಚ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುತ್ತದೆ. ಆದರೆ ಈ ವಾಕ್ಯಗಳಲ್ಲಿ ಬಳಕೆಯಾಗಿರುವ ಗೆ ಮತ್ತು ಇಂದ ಇವುಗಳನ್ನು ಸೇರಿಸಿರುವುದರಿಂದ ಅರ್ಥ ವ್ಯತ್ಯಾಸವಾಗಿದೆ. ಇರುವೆ ಗೂಡಿನಿಂದ ಬಂದಿತು. (ಹೊರಗೆ ಬಂದಿತು), ಇರುವೆ ಗೂಡಿಗೆ ಬಂದಿತು (ಒಳಗೆ ಬಂದಿತು) ಎಂಬ ಅರ್ಥವಾಗುತ್ತದೆ.
– ಕೊಟ್ಟೆ ಕಟ್ಟಲು ಕೊಂಬೆಗಳನ್ನು ಬಗ್ಗಿಸುತ್ತವೆ.
– ರಾಜು ಗಿಡವನ್ನು ನೆಟ್ಟನು.
– ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನ್ನಿಸುತ್ತವೆ.
– ಕಮಲ ಮನೆಗೆ ಹೋದಳು.
– ಚಗಳಿ ಇರುವೆಗಳು ಮರದಲ್ಲಿ ಕೊಟ್ಟೆ ಕಟ್ಟುತ್ತವೆ.
– ಪೂರ್ಣಿಮ ಪೇಟೆಯಲ್ಲಿ ಆಟಿಕೆ ಕೊಂಡಳು.
ಗಮನಿಸಿ:
ಅ. ಇರುವೆಗಳು ಲಾರ್ವಾವನ್ನು ಬಾಯಿಯಿಂದ ಸ್ರವಿಸುತ್ತವೆ.
ಆ. ರಾಜು ಮನೆಯಿಂದ ಬಂದನು.
ಮೇಲಿನ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳನ್ನು ಗಮನಿಸಿ, ಮೊದಲೆರಡು ವಾಕ್ಯಗಳಲ್ಲಿ ಬಾಯಿಯಿಂದ ಮತ್ತು ಮನೆಯಿಂದ ಪದಗಳನ್ನು ನೋಡಿದಾಗ ಬಾಯಿ ಮತ್ತು ಮನೆ ಎಂಬ ಮೂಲ ಪದಗಳಿಗೆ ‘ಇಂದ’ ಎಂಬ ಪ್ರತ್ಯಯ ಸೇರಿರುವುದು ಕಂಡು ಬರುತ್ತದೆ. ಇಂದ ಎಂಬ ಪ್ರತ್ಯಯವನ್ನು ಬಿಟ್ಟು ವಾಕ್ಯ ಓದಿದರೆ ಇರುವೆಗಳು ಲಾರ್ವಾ ಬಾಯಿ ಸ್ರವಿಸುತ್ತವೆ. ರಾಜು ಮನೆ ಬಂದನು ಎಂದಾಗುತ್ತವೆ. ಇದರಿಂದ ವಾಕ್ಯ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ.
ಹೀಗೆಯೇ ಸುಮ ಪೇಟೆ ಬಟ್ಟೆ ತಂದಳು ಎಂದರೆ ನಮಗೆ ಈ ವಾಕ್ಯ ಸರಿಯಾಗಿ ಅರ್ಥವಾಗುವುದಿಲ್ಲ. ಇದಕ್ಕೆ ಕೆಲವು ಅಕ್ಷರಗಳನ್ನು ಸೇರಿಸಿ ಸುಮ ಪೇಟೆಯಿಂದ ಬಟ್ಟೆಯನ್ನು ತಂದಳು ಎಂದು ಓದಿದಾಗ ನಮಗೆ ವಾಕ್ಯವು ಸಂಪೂರ್ಣವಾಗಿ ಅರ್ಥವಾಗುತ್ತದೆ.
ಈ ರೀತಿ ವಾಕ್ಯಗಳಲ್ಲಿ ಬಳಕೆಯಾಗುವ ವಿವಿಧ ಪದಗಳ ನಡುವೆ ಪರಸ್ಪರ ಸಂಬಂಧ ಕಲ್ಪಿಸುವ ಶಬ್ದಗಳೇ ‘ವಿಭಕ್ತಿ ಪ್ರತ್ಯಯಗಳು. ಈ ಪ್ರತ್ಯಯಗಳು ಹೀಗಿವೆ.
ಉ,
ಅನ್ನು
ಇಂದ
ಗೆ,ಇಗೆ,ಕ್ಕೆ
ದೆಸೆಯಿಂದ
ಅ
ಅಲ್ಲಿ
ಬಹುವಚನ
ಕೆಳಗಿನ ವಾಕ್ಯಗಳನ್ನು ಗಮನಿಸಿ ವ್ಯತ್ಯಾಸ ತಿಳಿಯಿರಿ :
೧) ನನ್ನ ಬಳಿ ಒಂದು ಚೆಂಡು ಇದೆ.
೨) ಅನ್ವರನ ಬಳಿ ನಾಲ್ಕು ಚೆಂಡುಗಳು ಇವೆ.
೩) ಬೆಂಗಳೂರಿನಿಂದ ನಮ್ಮ ಶಾಲೆಗೆ ಒಬ್ಬಳು ಹುಡುಗಿ ಬಂದಿದ್ದಾಳೆ.
೪) ಮೈಸೂರಿನಿಂದ ನಮ್ಮ ಶಾಲೆಗೆ ಮೂವರು ಹುಡುಗಿಯರು ಬಂದಿದ್ದಾರೆ.
೫) ನಾಳೆ ವಿಜಯಪುರಕ್ಕೆ ಚೆಸ್ ಪಂದ್ಯದಲ್ಲಿ ಭಾಗವಹಿಸಲು ಒಬ್ಬ ಹುಡುಗ ಹೋಗುತ್ತಾನೆ.
೬) ನಾಳೆ ಬಾದಾಮಿಗೆ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಹದಿನಾರು ಹುಡುಗರು ಹೋಗುತ್ತಾರೆ.
೧ನೆಯ ವಾಕ್ಯ ಗಮನಿಸಿ. ಇಲ್ಲಿ ಚೆಂಡು ಎಂಬುದು ನಾಮಪದ ಇದೆ ಎಂಬುದು ಕ್ರಿಯಾಪದ. ೨ನೆಯ ವಾಕ್ಯ ಗಮನಿಸಿ ಚೆಂಡುಗಳು ಎಂಬುದು ನಾಮಪದ. ಇವೆ ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಚೆಂಡು ಒಂದು ಇದೆ. ಇದರಿಂದ ಚೆಂಡು ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ನಾಲ್ಕು) ಚೆಂಡುಗಳಿವೆ. ಇದರಿಂದ ಚೆಂಡುಗಳು ಎಂಬ ಪದ ಬಳಕೆಯಾಗಿದೆ. ಇಲ್ಲಿ -ಗಳು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೩ನೆಯ ವಾಕ್ಯ ಗಮನಿಸಿ. ಇಲ್ಲಿ ಹುಡುಗಿ ಎಂಬುದು ನಾಮಪದ, ಬಂದಿದ್ದಾಳೆ ಎಂಬುದು ಕ್ರಿಯಾಪದ. ೪ನೆಯ ವಾಕ್ಯ ಗಮನಿಸಿ. ಹುಡುಗಿಯರು ಎಂಬುದು ನಾಮಪದ ಬಂದಿದ್ದಾರೆ ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬಳು ಹುಡುಗಿ ಎಂದಿರುವುದರಿಂದ ಹುಡುಗಿ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ಹುಡುಗಿಯ ರಿರುವುದರಿಂದ ಹುಡುಗಿಯರು ಎಂಬ ಪದ ಬಳಕೆಯಾಗಿವೆ. ಇಲ್ಲಿ -ಅರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೫ನೆಯ ವಾಕ್ಯ ಗಮನಿಸಿ. ಇಲ್ಲಿ ಹುಡುಗ ಎಂಬುದು ನಾಮಪದ. ಹೋಗುತ್ತಾನೆ ಎಂಬುದು ಕ್ರಿಯಾಪದ. ೬ನೆಯ ವಾಕ್ಯ ಗಮನಿಸಿ. ಹುಡುಗರು ಎಂಬುದು ನಾಮಪದ, ಹೋಗುತ್ತಾರೆ ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬ ಹುಡುಗ ಎಂದಿರುವುದರಿಂದ ಹುಡುಗ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ಹದಿನಾರು) ಹುಡುಗರಿರುವುದರಿಂದ ಹುಡುಗರು ಎಂಬ ಪದ ಬಳಕೆಯಾಗಿವೆ. ಇಲ್ಲಿ-ರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
ಈಗ ಈ ನಿರ್ಧಾರಕ್ಕೆ ಬರೋಣ :
ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ವಸ್ತುವನ್ನು ಕುರಿತು ಮಾತನಾಡುವಾಗ ಬಹುವಚನ ಪ್ರತ್ಯಯ ಬಳಕೆಯಾಗುತ್ತದೆ.
ಬಹುವಚನ ಪ್ರತ್ಯಯ ಬಳಕೆಯಾದಾಗ ಕ್ರಿಯಾಪದದ ರೂಪದಲ್ಲಿ ವ್ಯತ್ಯಾಸವಾಗಿ ಅಲ್ಲಿಯೂ ಬಹುವಚನದ ರೂಪ ಬಳಕೆಯಾಗುತ್ತದೆ.
ಆ. ಕೆಳಗೆ ಬಹುವಚನದ ಪದಗಳನ್ನು ಕೊಡಲಾಗಿದೆ. ಇವುಗಳನ್ನು ಗಮನಿಸಿ.
ಉದಾಹರಣೆ : ೧
ಏಕವಚನ…ಬಹುವಚನ
ಪುಸ್ತಕ….ಪುಸ್ತಕಗಳು
ದನ…..ದನಗಳು
ಮನೆ…..ಮನೆಗಳು
ಬಸ್ಸು….. ಬಸ್ಸುಗಳು
ರಾಜ್ಯ…… ರಾಜ್ಯಗಳು
ಶಾಲೆ….. ಶಾಲೆಗಳು
ಉದಾಹರಣೆ : ೨
ಏಕವಚನ….ಬಹುವಚನ
• ಯುವಕ… ಯುವಕರು
• ಮುದುಕ… ಮುದುಕರು
• ಆಟಗಾರ…. ಆಟಗಾರರು
• ಚಾಲಕಿ….ಚಾಲಕಿಯರು
ಬಾಲಕಿ….. ಬಾಲಕಿಯರು
ತರಗತಿ…. ತರಗತಿಗಳು
ಶಾಸಕಿ………ಶಾಸಕಿಯರು
ಬಾಲಕ……. ಬಾಲಕರು
ಉದಾಹರಣೆ : ೩
ಏಕವಚನ……ಬಹುವಚನ
ಅಕ್ಕ …….ಅಕ್ಕಂದಿರು
• ತಾಯಿ……ತಾಯಂದಿರು
. ಚಿಕ್ಕಪ್ಪ…….. ಚಿಕ್ಕಪ್ಪಂದಿರು
• ದೊಡ್ಡಪ್ಪ………ದೊಡ್ಡಪ್ಪಂದಿರು
• ತಂಗಿ…………ತಂಗಿಯರು
ಮೇಲಿನ ಉದಾಹರಣೆಗಳನ್ನು ಗಮನಿಸಿ. ಉದಾಹರಣೆ ೧ರಲ್ಲಿ ನಪುಂಸಕ ಪದಗಳಿವೆ. ಇವುಗಳಲ್ಲಿ-ಗಳು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಉದಾಹರಣೆ ೨ರಲ್ಲಿ ಸ್ತ್ರೀಲಿಂಗ ಪುಲ್ಲಿಂಗ ಪದಗಳಿವೆ. ಇಲ್ಲಿ ಸ್ತ್ರೀಲಿಂಗದಲ್ಲಿ -ಅರು ಎಂಬ ಬಹುವಚನ ಪ್ರತ್ಯಯ, ಪುಲ್ಲಿಂಗದಲ್ಲಿ ರು ಅನ್ನುವ ಪ್ರತ್ಯಯ ಬಳಕೆಯಾಗಿದೆ. ಉದಾಹರಣೆ ೩ರಲ್ಲಿ ಸಂಬಂಧವಾಚಿ ಪದಗಳಿವೆ. ಇಲ್ಲೆಲ್ಲ ಅಂದಿರು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಮೇಲಿನ ಸೂತ್ರದ ಆಧಾರದ ಮೇಲೆ ಕೆಳಗಿನ అభ్యాస ಭಾಗದ ಏಕವಚನ ಪದಗಳಿಗೆ ಬಹುವಚನ ಪದಗಳನ್ನು ಬರೆಯಿರಿ.
ಜಿಲ್ಲೆ…….. ಜಿಲ್ಲೆಗಳು
ಕೊಠಡಿ……. ಕೊಠಡಿಗಳು
ಊರು……. ಊರುಗಳು
ನಾಯಿ……. ನಾಯಿಗಳು
ಹಕ್ಕಿ…..ಹಕ್ಕಿಗಳು
ನದಿ……. ನದಿಗಳು
ಬೆಟ್ಟ…….. ಬೆಟ್ಟಗಳು
ಗುಡ್ಡ……… ಗುಡ್ಡಗಳು
ಅಣ್ಣ…… ಅಣ್ಣಂದಿರು
ಚಿಕ್ಕಮ್ಮ….. ಚಿಕ್ಕಮ್ಮಂದಿರು
ದೊಡ್ಡಮ್ಮ….. ದೊಡ್ಡಮ್ಮಂದಿರು
ತಮ್ಮ…… ತಮ್ಮಂದಿರು
ಅತ್ತೆ ……ಅತ್ತೆಯಂದಿರು
ಭಾವ…. ಭಾವಂದಿರು
ನುಡಿಗಟ್ಟು : ವಿಶೇಷಾರ್ಥವುಳ್ಳ ಮತ್ತು ಒಳಾರ್ಥವುಳ್ಳ ಪದಪುಂಜವನ್ನು ನುಡಿಗಟ್ಟು ಎನ್ನುವರು.
ನಮ್ಮ ಭಾವನೆಯನ್ನು ಸಂಗ್ರಹಿಸಿ ಅರ್ಥಪೂರ್ಣವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಪದಪುಂಜವೇ ನುಡಿಗಟ್ಟು, ಇದು ಭಾಷೆಯ ಬಿಗುವನ್ನು ಹೆಚ್ಚಿಸಿ ಮಾತಿನ ಸೊಬಗನ್ನು ಇಮ್ಮಡಿಗೊಳಿಸುತ್ತದೆ.
ಉದಾ:
೧. ಅಟ್ಟಕ್ಕೇರಿಸು – ಹೊಗಳಿ ಹೊಗಳಿ ಉಬ್ಬಿಸು.
೨. ಗುಡ್ಡವನ್ನು ಬೆಟ್ಟಿ ಮಾಡು – ಅಲ್ಪ ವಿಷಯವನ್ನು ದೊಡ್ಡದು ಮಾಡು.
೩. ಕಂಬಿ ಕೀಳು – ಹೇಳದೆ ಕೇಳದೆ ಓಡಿ ಹೋಗು, ಪಲಾಯನ ಮಾಡು.
೪. ನೀರಿನ ಮೇಲೆ ಹೋಮ – ಭಾರಿ ದೊಡ್ಡ ಕೆಲಸ ಮಾಡಿದರೂ ಏನೂ ಪ್ರತಿಫಲ ದೊರಕದೆ ಹೋಗುವುದು.
7. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ – ಸಣ್ಣವರ ಮೇಲೆ ಬಲ ಪ್ರದರ್ಶನ.
ಕೆಳಕಂಡ ನುಡಿಗಟ್ಟುಗಳನ್ನು ಗಮನಿಸಿ :
೧. ಕಿಡಿಕಾರು (ಸಿಟ್ಟಿಗೇಳು): ದುರ್ಯೋಧನನನ್ನು ಕಾಣುತ್ತಲೇ ಭೀಮನು ಕಿಡಿಕಾರಿದನು.
೨. ತಲೆದೂಗು (ಒಪ್ಪು): ಯಕ್ಷಗಾನ ಪಾತ್ರಧಾರಿಯ ಕುಣಿತ ಕಂಡು ಪ್ರೇಕ್ಷಕರು ತಲೆದೂಗಿದರು.
೩. ಮುಖ ಅರಳು (ಸಂತೋಷವಾಗು): ತಾಯಿಯನ್ನು ಕಾಣುತ್ತಲೇ ಮಗುವಿನ ಮುಖ ಅರಳಿತು.
೪. ಮೇಲುಗೈ (ಗೆಲುವು): ಹಾಕಿ ಆಟದಲ್ಲಿ ಭಾರತದ ಮಹಿಳೆಯರು ಜಪಾನ್ ವಿರುದ್ಧ ಮೇಲುಗೈ
ಸಾಧಿಸಿದ್ದಾರೆ
ನುಡಿಗಟ್ಟು
ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಇರುವ ಮೂಲಸಾಮಗ್ರಿಯನ್ನೇ
ಉಪಯೋಗಿಸಿ-ಒಂದು ಹೊಸ ರೂಪವನ್ನು ಸೃಷ್ಟಿ ಮಾಡಲು ಅಥವಾ ಇರುವ ರೂಪಕ್ಕೆ ಹೊಸ
ಅರ್ಥವನ್ನು ತಾತ್ಕಾಲಿಕವಾಗಿ ಹೊಂದಿಸಿ ಪ್ರಯೋಗಿಸಲು ಶಕ್ತರಾಗುತ್ತಾರೆ. ಅಂಥ ಪ್ರಯೋಗಗಳನ್ನು
ನುಡಿಗಟ್ಟುಗಳೆಂದು ಗುರುತಿಸುವುದು ವಾಡಿಕೆ. ಅವರಿಬ್ಬರಿಗೆ ಎಣ್ಣೆ ಸೀಗೆ ಎಂದಾಗ, ಪರಸ್ಪರ ವಿರೋಧಿಗಳು
ಎಂದರ್ಥ. ಇವನ್ನು ಎಣ್ಣೆ-ತುಪ್ಪ, ಸೀಗೆ-ತುಪ್ಪ ಎಂದಿತ್ಯಾದಿಯಾಗಿ ಉಪಯೋಗಿಸಲು ಬರುವುದಿಲ್ಲ.
ಹಣ್ಣು ತಿನ್ನು, ರೊಟ್ಟಿ ತಿನ್ನು ಎಂಬಿತ್ಯಾದಿ ರಚನೆಗಳನ್ನನುಸರಿಸಿ, ಪೆಟ್ಟು ತಿನ್ನು ಎಂಬುದೂ ಮೊದಲು
ಚಮತ್ಕಾರಕ್ಕೋ ಹಾಸ್ಯಕ್ಕೋ ಆರಂಭವಾಗಿ ಆಕರ್ಷಕವಾಗಿದ್ದುದರಿಂದ ಸ್ಥಿರವಾಗಿ ಬಳಕೆಯಾಗುತ್ತಿದೆ.
ಕಣ್ಣಿಗೆ ಬೀಳು, ಕಣ್ಣು ಬಂತು, ಬಾಲಬಿಚ್ಚು, ಮೂಗುತೂರಿಸು, ಹೊಟ್ಟುಕುಟ್ಟು, ತೋಟದೂರ, ಮೀಸೆ
ಮಣ್ಣಾಗು, ಬೇಳೆಬೇಯೊಲ್ಲ, ಕಿವಿಕಚ್ಚು, ಹರಟೆಕೊಚ್ಚು, ಬೆಟ್ಟುಮಡಿಸು, ಟೋಪಿ ಹಾಕು, ಹುಬ್ಬು ಹಾರಿಸು,
ತಾರಮ್ಮಯ್ಯ ಆಡು- ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.
ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ
ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ
ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ, ಮರುಹುಟ್ಟು-ಪಡೆಯುತ್ತವೆ.
ಗಾದೆ :
ನಾಣ್ಣುಡಿ, ಲೋಕೋಕ್ತಿ : ಒಂದು ವಿಷಯವನ್ನು ಕುರಿತು ಪರಿಣಾಮಕಾರಿಯಾಗಿ ತಿಳಿ ಹೇಳುವ ಘನವಾದ ಅರ್ಥವನ್ನು ಹೊಂದಿರುವ ಹೇಳಿಕೆಗಳೇ ಗಾದೆ ಮಾತುಗಳು. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ವಾಕ್ಯದಲ್ಲಿ ಗಾದೆ ಹೇಳಬಲ್ಲದು. ಗಾದೆ ಜಾನಪದ ಸಾಹಿತ್ಯ ಪ್ರಕಾರಗಳಲ್ಲೊಂದು. ಗಾದೆ ಅನುಭವದಿಂದ ಹುಟ್ಟಿಕೊಳ್ಳುವಂಥದ್ದು.
೧. ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು,
೨. ನಾಲಿಗೆ ಚೆನ್ನಾಗಿದ್ದರೆ ನಾಡೆಲ್ಲಾ ಒಳ್ಳೆಯದು.
೩. ಕೈಕೆಸರಾದರೆ ಬಾಯಿ ಮೊಸರು .
೪. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೫. ಕುಣಿಯಲಾರದವ ನೆಲ ಡೊಂಕು ಅಂದ.
ಒಗಟು
ಒಗಟನ್ನು ಒಂಟು, ಒಡಪು, ಒಡಚು, ಒಡಗತೆ ಇತ್ಯಾದಿಯಾಗಿ ಕನ್ನಡದಲ್ಲಿ ನಾನಾ ರೂಪಗಳಲ್ಲಿ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಒಗಟಿಗೆ Riddle ಎಂದು ಹೇಳುತ್ತಾರೆ. ಮುಖ್ಯವಾಗಿ ಒಗಟು ಎಂದಾಗ ಒಂದು ಸಮಸ್ಯೆ ಎಂದರ್ಥವಾಗುವುದು. ಒಗಟುಗಳು ಬುದ್ದಿಪ್ರಧಾನವಾದವುಗಳಾಗಿದ್ದು ಅರ್ಥಗರ್ಭಿತವಾಗಿರುತ್ತವೆ.
ಉದಾ : ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ..(ಕಪ್ಪೆ)
ಚಿಪ್ಪುಂಟು ಆಮೆಯಲ್ಲ, ಜುಟ್ಟುಂಟು ಪೂಜಾರಿಯಲ್ಲ
ಮೂರು ಕಣ್ಣುಂಟು ಹರನಲ್ಲ, ಹಾಗಾದರೆ ನಾನು ಯಾರು? (ತೆಂಗಿನ ಕಾಯಿ)
ಮುಳ್ಳುಗಳಿವೆ ಅಪಾಯವಿಲ್ಲ. ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ.ಗಂಟೆ ಹೊಡೆಯುತ್ತದೆ ದೇವಾಲಯವಲ್ಲ..(ಗಡಿಯಾರ)
ನಾಮಪದ
೧. ಪುಟ್ಟಜ್ಜಿ ಹೇಳಿದ ಕಥೆಯನ್ನು ಓದಿದ್ದೀರಲ್ಲ. ಈ ಕತೆಯಲ್ಲಿ ಜಿಂಕೆಗೆ ಮಾತ್ರ ‘ಚುಕ್ಕಿ’ ಎಂಬ ಹೆಸರಿದೆ. ಇಲ್ಲಿ ಬರುವ ಕಥೆ ಕೇಳುವವರು, ಯುವಕ, ಯುವತಿ, ಊರು, ಕಾಡುಪ್ರಾಣಿಗಳು ಯಾವುದಕ್ಕೂ ಹೆಸರಿಲ್ಲ ಎಂಬುದನ್ನು ಗಮನಿಸಿದ್ದೀರಿ ತಾನೆ? ಯುವಕ, ಯುವತಿ, ಜಿಂಕೆ, ಹುಲಿ, ಚಿರತೆ, ಮರ, ಮನೆ, ಜಗಲಿ ಇವನ್ನು ಕೇಳಿದಾಗ ವ್ಯಕ್ತಿ, ಪ್ರಾಣಿ,ವಸ್ತುವಿನ ನೆನಪಾಗುತ್ತದೆ. ಆ ಬಗ್ಗೆ ಒಂದು ಚಿತ್ರ ನಮ್ಮ ಮನಸ್ಸಿನಲ್ಲಿ ಬರುತ್ತದೆ. ಹೀಗೆ ಒಬ್ಬ ವ್ಯಕ್ತಿ, ಪ್ರಾಣಿ, ವಸ್ತು, ಸ್ಥಳ ಇವುಗಳನ್ನು ಗುರುತಿಸಲು ನಾವು ಬಳಸುವ ಪದಗಳು ನಾಮಪದಗಳು. ಇಂತಹ ಇನ್ನಷ್ಟು ಪದಗಳು ಈ ಕಥೆಯಲ್ಲಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ತಿಳಿಸಲಾಗಿದೆ.
ಹಳ್ಳ, ಕಾಡುಕೋಣ, ಆನೆ, ಅಂಗಳ, ಕುತ್ತಿಗೆ, ಗೆಜ್ಜೆ ಇತ್ಯಾದಿ. ಈ ಕಥೆಯಲ್ಲಿರುವ ಉಳಿದ ನಾಮಪದಗಳನ್ನು ಪಟ್ಟಿ ಮಾಡಿ.
೨. ಈ ಕಥೆಯಲ್ಲಿ ಯುವಕ, ಯುವತಿ ಎಂಬ ಪದಗಳಿವೆ. ಈ ಯುವಕ ಮತ್ತು ಯುವತಿಗೆ ಹೆಸರಿಲ್ಲ. ಅವರಿಗೆ ನೀವೂ ಕೂಡ ಹೆಸರನ್ನು ಇಡಬಹುದು. ಹೀಗೆ ಇಟ್ಟ ಹೆಸರನ್ನು ಅಂಕಿತನಾಮ ಎಂದು ಕರೆಯುತ್ತೇವೆ.
೩. ಕಥೆಯಲ್ಲಿ ಒಬ್ಬ ಕಥೆ ಹೇಳುವ ವ್ಯಕ್ತಿ ಇದ್ದಾರೆ. ಆ ವ್ಯಕ್ತಿ ತನ್ನನ್ನು ‘ನಾನು’ ಎಂದು ಕರೆದುಕೊಂಡಿದ್ದಾರೆ. ಈ ‘ನಾನು’ ಯಾರಾಗಿರಬಹುದು? ಇದು ಯುವಕನೂ ಆಗಿರಬಹುದು. ಯುವತಿಯೂ ಆಗಿರಬಹುದು, ಹುಡುಗನೂ ಆಗಿರಬಹುದು. ಹುಡುಗಿಯೂ ಆಗಿರಬಹುದು. ಹೀಗೆ ನಾಮಪದಗಳಿಗೆ ಬದಲಾಗಿ ಬಳಸಬಹುದಾದ ಕರೆಯುತ್ತಾರೆ. ಆದಗಳನ್ನು ‘ಸರ್ವನಾಮ’ ಎಂದು ಕರೆಯುತ್ತಾರೆ.
ಅ. ಕೆಳಗಿನ ವಾಕ್ಯಗಳನ್ನು ಗಮನಿಸಿ:
ನಾನು ಮನೆಯಲ್ಲಿ ಇದ್ದೇನೆ.
ನೀನು ಓದುತ್ತಿರುವೆ ?
ಅವನು ಶಾಲೆಗೆ ಹೋದನು.
ಅವಳು ಕೆಲಸಕ್ಕೆ ಹೋದಳು.
ಅದು ರೊಟ್ಟಿಯನ್ನು ಮೂಸಿತು.
ಅದು ಟೇಬಲ್ಲಿನ ಮೇಲಿದೆ.
ಮೇಲಿನ ವಾಕ್ಯಗಳಲ್ಲಿರುವ ನಾನು, ನೀನು ಈ ಪದಗಳನ್ನು ಯಾರು ಯಾರಿಗೂ ಬಳಸಬಹುದು. ಅವನು ಎಂಬುದನ್ನು ಯಾವುದೇ ಗಂಡಸರಿಗೂ ಅವಳು ಎಂಬುದನ್ನು ಯಾವುದೇ ಹೆಂಗಸರಿಗೂ, ಅದು ಎಂಬುದನ್ನು ಯಾವುದೇ ಪ್ರಾಣಿಗೂ ವಸ್ತುವಿಗೂ ಬಳಸಬಹುದು. ಯಾರಿಗಾದರೂ ಬಳಸಬಹುದಾದ ಈ ಪದಗಳು ಸರ್ವನಾಮಗಳು.
ಆ. ಕೆಳಗಿನ ವಾಕ್ಯಗಳನ್ನು ಗಮನಿಸಿ:
ನಾನು ಮನೆಯಲ್ಲಿ ಇದ್ದೇನೆ.
ಪೀಟರ್ ಪುಸ್ತಕ ಓದುತ್ತಿರುವೆಯಾ?
ಹಸೀನಾ ಶಾಲೆಗೆ ಹೋದಳು.
ರಮ್ಯ ಕೆಲಸಕ್ಕೆ ಹೋದಳು.
ನಾಯಿ ರೊಟ್ಟಿಯನ್ನು ಮೂಸಿತು.
ಪೆನ್ನು ಟೇಬಲ್ಲಿನ ಮೇಲಿದೆ.
ಇ. ಕೆಳಗಿನ ವಾಕ್ಯಗಳನ್ನು ಗಮನಿಸಿ :
ನಾವು ಶಾಲೆಗೆ ಹೋಗುತ್ತೇವೆ.
ಅವರು ತಿರುಗಾಡಲು ಹೋದರು.
ಅವು ಆಕಾಶದಲ್ಲಿ ಹಾರುತ್ತಿವೆ.
ಅವು ಹಳ್ಳಿಗಳು.
ಒಬ್ಬನೇ ವ್ಯಕ್ತಿ, ವಸ್ತು, ಸ್ಥಳ, ಪ್ರಾಣಿಗಳನ್ನು ಕುರಿತು ಮಾತನಾಡುವಾಗ ನಾನು, ನೀನು, ಅವನು, ಅವಳು, ಅದು ಎಂಬುದನ್ನು ಬಳಸುತ್ತೇವೆ. ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತು, ಸ್ಥಳ. ಪ್ರಾಣಿಗಳನ್ನು ಕುರಿತು ಹೇಳುವಾಗ ನಾವು, ಅವರು, ಅವು ಎಂಬ ಸರ್ವನಾಮಗಳನ್ನು. ಬಳಸುತ್ತೇವೆ.
ಈ. ಕೆಳಗಿನ ವಾಕ್ಯಗಳನ್ನು ಗಮನಿಸಿ :
ನಾನು, ಪೀಟರ್, ಹಸೀನಾ ಶಾಲೆಗೆ ಹೋಗುತ್ತೇವೆ.
ರಾಮ, ಭೀಮ, ಶ್ಯಾಮ ವಾಕಿಂಗ್ ಹೋದರು.
ಹಕ್ಕಿಗಳು ಆಕಾಶದಲ್ಲಿ ಹಾರುತ್ತಿವೆ.
ಹಲ್ಲೂರು, ಬ್ಯಾಡಗಿ, ಕೂಳೂರು ಹಳ್ಳಿಗಳು.
ಸರ್ವನಾಮದ ಈವರೆಗಿನ ವಿವರಣೆಯ ಹಿನ್ನೆಲೆಯಲ್ಲಿ ಕೆಳಗಿನಂತೆ ಸರ್ವನಾಮಗಳ ಪಟ್ಟಿ ಮಾಡಬಹುದು :
ಏಕವಚನ
ಪುಲ್ಲಿಂಗ……ನಾನು, ನೀನು, ಅವನು, ಇವನು.
ಸ್ತ್ರೀಲಿಂಗ……..ನಾನು, ನೀನು, ಅವಳು, ಇವಳು.
ನಪುಂಸಕಲಿಂಗ….. ಅದು, ಇದು
ಬಹುವಚನ
ಪುಲ್ಲಿಂಗ, ಸ್ತ್ರೀಲಿಂಗ…….… ನಾವು, ನೀವು, ಅವರು, ಇವರು.
ನಪುಂಸಕಲಿಂಗ…. ಅವು, ಇವು.
ಅ. ಸರ್ವನಾಮಗಳು :
ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿರಿ
ಪುಟ್ಟಿಗೆ ರೆಕ್ಕೆಗಳು ಬಂದವು; ಅವಳು ಮೇಲಕ್ಕೆ ಹಾರಿದಳು.
ಶಂತನು ಒಬ್ಬ ರಾಜ; ಆತನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದನು.
ಮೇಲಿನ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಪದಗಳನ್ನು ಗಮನಿಸಿರಿ. ಮೊದಲನೆಯ ವಾಕ್ಯದಲ್ಲಿ ‘ಅವಳು’ ಎಂಬ ಪದವು ‘ಪುಟ್ಟಿ’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಎರಡನೆಯ ವಾಕ್ಯದಲ್ಲಿ ‘ಆತನು’ ಎಂಬ ಪದವು ‘ಶಂತನು’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಪುಟ್ಟಿ ಮತ್ತು ಶಂತನು ಎಂಬುವು ನಾಮಪದಗಳಾಗಿವೆ. ‘ಅವಳು’, ‘ಆತನು’ ಎಂಬ ಪದಗಳು ನಾಮಪದಗಳ ಬದಲಿಗೆ ಬಳಕೆಯಾಗಿವೆ. ಹೀಗೆ ನಾಮಪದಗಳ ಬದಲಾಗಿ ಬಳಸುವ ಪದಗಳು ‘ಸರ್ವನಾಮಗಳು.’
ಅದು, ಇದು, ಅವಳು. ಇವನು. ನಾನು, ನೀನು, ನೀವು, ನಾವು, ತಾವು, ಅವರು. ಇವರು ಇತ್ಯಾದಿಗಳು ಸರ್ವನಾಮಗಳಾಗಿವೆ. ಇವುಗಳನ್ನು ನಾಮಪದಗಳನ್ನು ಪದೇಪದೇ ಬಳಸುವುದರ ಬದಲಿಗೆ ಬಳಸುತ್ತಾರೆ.
ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ
ಗುರುಗಳು ಶಾಲೆಗೆ ಹೊರಟರು. ಅವರು ಕೈಯಲ್ಲಿ ಪುಸ್ತಕ ಹಿಡಿದಿದ್ದರು.
ಮೋತಿ ಜಾನ್ಸನ್ನನ ನಾಯಿ. ಅದು ಆತನಿಗೆ ಬಲು ಪ್ರಿಯ.
ಯಾಸ್ಮಿನ್ ಮತ್ತು ಉನ್ನತಿ ಇಬ್ಬರು ಗೆಳತಿಯರು. ಇವರು ಒಮ್ಮೆ ಪ್ರವಾಸ ಹೊರಟರು.
ಮೇಲಿನ ವಾಕ್ಯಗಳಲ್ಲಿ ಅವರು, ಅದು, ಇವರು ಎಂಬ ಪದಗಳು ನಾಮಪದದ ಬದಲಾಗಿ ಅದರ ಸ್ಥಾನದಲ್ಲಿದ್ದು ನಾಮಪದವನ್ನು ಸೂಚಿಸುತ್ತವೆ. ಇಂತಹವುಗಳನ್ನು ಸರ್ವನಾಮಗಳು ಎನ್ನುತ್ತಾರೆ.
ವ್ಯಾಕರಣ
ಸರ್ವನಾಮಗಳು
ಕೆಳಗಿನ ವಾಕ್ಯಗುಚ್ಛವನ್ನು ಗಮನಿಸಿ :
ಹಸೀನಾಳು ತಾಯಿತಂದೆಯರು ಹೇಳಿದ ಹಾಗೆ ಕೇಳುತ್ತಾಳೆ. ಹಸೀನಾಳ ತಾಯಿತಂದೆಯರು ಹಸೀನಾಳನ್ನು ಪ್ರೀತಿಸುತ್ತಾರೆ. ಹಸೀನಾಳಿಗೆ ಹಣ್ಣನ್ನು ಕೊಡುತ್ತಾರೆ. ಹಸೀನಾಳಿಂದ ಪುಸ್ತಕವನ್ನು ಓದಿಸುತ್ತಾರೆ. ಹಸೀನಾಳಲ್ಲಿ ಕೆಟ್ಟ ಗುಣಗಳಿಲ್ಲ.
ಮೇಲಿನ ವಾಕ್ಯಗಳಲ್ಲಿ ‘ಹಸೀನಾ’ ಎಂಬ ಪದವು ಮತ್ತೆ ಮತ್ತೆ ಬಂದಿದೆ. ಅದನ್ನು ಹಾಗೆಯೇ ಹೇಳಿದರೆ ಕೇಳಲು ಹಿತವೆನಿಸುವುದಿಲ್ಲ. ಹಾಗಾಗಿ ಅಂತಹ ಕಡೆಗಳಲ್ಲಿ ಅವಳು, ಅವಳ, ಅವಳಿಗೆ, ಅವಳಿಂದ, ಅವಳಲ್ಲಿ ಮುಂತಾದ ಪದಗಳನ್ನು ಬಳಸುತ್ತೇವೆ. ಹಾಗೆ ಬಳಸುವುದರಿಂದ ವಾಕ್ಯಗಳ ಅರ್ಥ ಕೆಡುವುದಿಲ್ಲ. ಹೀಗೆ ನಾಮಪದಗಳ ಬದಲಾಗಿ ಬಳಸುವ ಪದಗಳನ್ನು ‘ಸರ್ವನಾಮ’ ಎನ್ನುತ್ತೇವೆ. BS BLIS
ಈ ರೀತಿಯಲ್ಲಿ ನಾವು ಅನೇಕ ಸರ್ವನಾಮಗಳನ್ನು ಬಳಸುತ್ತೇವೆ. ಈ ಸರ್ವನಾಮಗಳು ಲಿಂಗ, ವಚನ, ವಿಭಕ್ತಿಗಳಿಗೆ ಅನುಗುಣವಾಗಿ ಬೇರೆ ಬೇರೆಯಾಗಿರುತ್ತವೆ. ನಾನು, ನಾವು, ಅವನು, ಅವಳು, ಅವರು, ಅದು, ಇದು, ಅವು, ಇವು. ಆತನು, ಈತನು, ಆಕೆ, ಈಕೆ, ತಾನು, ತಾವು ಮೊದಲಾದ ಸರ್ವನಾಮಗಳನ್ನು ಗಮನಿಸಬಹುದು.
ಈ ವಾಕ್ಯವೃಂದದಲ್ಲಿ ಕಾಣುವ ಸರ್ವನಾಮಗಳನ್ನು ಗುರುತಿಸಿ.
ಜಾನ್ ನಡೆದುಕೊಂಡು ಹೋಗುತ್ತಿದ್ದ. ಅವನು ದಾರಿಯಲ್ಲಿ ಒಂದು ನಾಯಿಯನ್ನು ಕಂಡ. ಅದು ಬೌಬೌ ಎಂದು ಬೊಗಳುತ್ತಿತ್ತು. ಅದನ್ನು ಕಂಡು ಅವನಿಗೆ ಹೆದರಿಕೆಯಾಯಿತು. ಇದನ್ನು ನೋಡಿದ ಮೇರಿ ಅಲ್ಲಿಗೆ ಬಂದಳು. ಅದರ ಬೊಗಳುವಿಕೆ ಕೇಳಿ ಅವಳಿಗೂ ಹೆದರಿಕೆಯಾಯಿತು. ಇವರ ಹೆದರಿಕೆ ನೋಡಿ ಮನೆಯ ಮಾಲೀಕರಾದ ರಾಮರಾಯರು ಹೊರಗೆ ಬಂದರು. ಅವರು ನಾಯಿಯನ್ನು ಗದರಿಸಿದರು. ಅದು ಬಾಲ ಮಡಚಿಕೊಂಡು ಕುಂಯ್ ಕುಂಯ್ ಎನ್ನುತ್ತಾ ಸುಮ್ಮನಾಯಿತು.
ಸರ್ವನಾಮಗಳಲ್ಲಿ ಮೂರು ವಿಧ. ೧. ಪುರುಷಾರ್ಥಕ ಸರ್ವನಾಮ ೨. ಆತ್ಮಾರ್ಥಕ ಸರ್ವನಾಮ ೩. ಪ್ರಶ್ನಾರ್ಥಕ ಸರ್ವನಾಮ
ಪುರುಷಾರ್ಥಕ ಸರ್ವನಾಮಗಳು
ಮಾತನಾಡುವ ವ್ಯಕ್ತಿಗೆ/ವ್ಯಕ್ತಿಗಳಿಗೆ ಸಂಬಂಧಿಸಿದ ಪದಗಳು ‘ಉತ್ತಮ ಪುರುಷ’ದ ಪದಗಳು. ಉದಾಹರಣೆಗೆ ನಾನು, ನನ್ನನ್ನು, ನನ್ನಿಂದ, ನಮ್ಮ. ನಮ್ಮಲ್ಲಿ ಇತ್ಯಾದಿ. ಇವುಗಳು ಸರ್ವನಾಮಗಳಾದುದರಿಂದ ಇವುಗಳನ್ನು ‘ಉತ್ತಮಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ಮತ್ತೊಬ್ಬರೊಡನೆ ಮಾತನಾಡುವಾಗ ಅವರನ್ನು ಸಂಬೋಧಿಸಿ/ ಅವರನ್ನು ಕುರಿತು ಹೇಳುವುದನ್ನು ಸೂಚಿಸುವ ಪದಗಳು ‘ಮಧ್ಯಮ ಪುರುಷ’ದ ಪದಗಳು, ಉದಾಹರಣೆಗೆ, ನೀನು, ನಿನ್ನನ್ನು, ನೀವು, ನಿಮ್ಮನ್ನು, ನಿಮ್ಮಿಂದ. ನಿಮ್ಮ, ನಿಮ್ಮಲ್ಲಿ ಇತ್ಯಾದಿ. ಇವುಗಳು ಸರ್ವನಾಮಗಳಾದುದರಿಂದ ಇವುಗಳನ್ನು ಮಧ್ಯಮಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ನಮ್ಮನ್ನು ಕುರಿತು ಅಥವಾ ಯಾರೊಡನೆ ಮಾತನಾಡುತ್ತೇವೆಯೋ ಅವರನ್ನು ಕುರಿತು ಹೇಳದೆ ಬೇರೆ ಯಾರನ್ನೋ ಕುರಿತು ನಾವು ಮಾತನಾಡುತ್ತೇವೆ. ಇದನ್ನು ಸೂಚಿಸುವ ಪದಗಳು ‘ಪ್ರಥಮಪುರುಷ’ ಪದಗಳು. ಉದಾಹರಣೆಗೆ: ಅವನು, ಅವಳು. ಅವರು ಇತ್ಯಾದಿ. ಇವುಗಳು ಸರ್ವನಾಮಗಳಾದುದುವುಗಳನ್ನು ‘ಪ್ರಥಮ ಪುರುಷ ಸರ್ವನಾಮ’ಗಳೆಂದು ಕರೆಯುತ್ತಾರೆ.
ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು.
ಆತ್ಮಾರ್ಥಕ ಸರ್ವನಾಮ
ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು. ಸೃಜನಾಳು ಸೃಜನಾಳ ಪುಸ್ತಕವನ್ನು ಕಳೆದುಬಿಟ್ಟಳು ಎಂದು ಹೇಳಿದರೆ ಸರಿಯಾಗದು. ಹಾಗಾಗಿ ‘ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು’ ಎಂದು ಹೇಳುತ್ತೇವೆ. ಹೀಗೆಯೇ ಶೇಖರನು ಶೇಖರನಿಗೆ ಪುಸ್ತಕವು ಬೇಕೆಂದು ಕೇಳಿದನು ಎಂದು ಹೇಳುವ ಬದಲಿಗೆ ‘ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು’ ಎಂದು ಹೇಳುತ್ತೇವೆ. ಹೀಗೆ ಪ್ರಥಮ ಪುರುಷದಲ್ಲಿ ಬಳಸಲಾಗುವ ಸರ್ವನಾಮಗಳು ‘ಆತ್ಮಾರ್ಥಕ ಸರ್ವನಾಮ’ಗಳೆನಿಸಿಕೊಳ್ಳುತ್ತವೆ.
ತಾನು, ತಾವು ತಮ್ಮನ್ನು, ತಮಗೆ, ತಮ್ಮ, ತನ್ನ – ಇವೆಲ್ಲವೂ ಆತ್ಮಾರ್ಥಕ ಸರ್ವನಾಮಗಳೆ.
ಪ್ರಶ್ನಾರ್ಥಕ ಸರ್ವನಾಮ
ಯಾರು ಬಂದರು? ಯಾವನು ಬಂದನು? ನೀನು ಏನು ಮಾಡಿದೆ? ನೀನು ಏಕೆ ಬಂದೆ?
ಈ ಮೇಲಿನ ವಾಕ್ಯಗಳಲ್ಲಿ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಸರ್ವನಾಮಗಳನ್ನು ಬಳಸಲಾಗಿದೆ. ಇವುಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನುವರು.
ಯಾರು, ಎಂಥವನು. ಎಂಥವಳು – ಇವೆಲ್ಲ ಪ್ರಶ್ನಾರ್ಥಕ ಸರ್ವನಾಮಗಳೆ.
ವಿಶೇಷಣಗಳು
ಒಂದು ಊರಿನಲ್ಲಿ ಶಂಕರ ಎಂಬ ಚಿಕ್ಕ ಹುಡುಗನಿದ್ದನು.
ಬಿಳಿ ಆನೆಗಳು ಬರ್ಮಾ ದೇಶದಲ್ಲಿ ಕಾಣಬರುತ್ತವೆ.
ಹಳೇ ಎತ್ತಿಗೆ ಹಾಳು ಬಂಡಿ
ಮೇಲಿನ ವಾಕ್ಯಗಳನ್ನು ಗಮನಿಸಿ. ಇಲ್ಲಿ ‘ಚಿಕ್ಕ ಹುಡುಗ’, ‘ಬಿಳಿ ಆನೆ’, ‘ಹಳೇ ಎತ್ತು’ ಎಂಬಲ್ಲಿ ‘ಚಿಕ್ಕ’, ‘ಹಳೇ, ‘ಬಿಳಿ’ ಎಂಬ ಪದಗಳು ಅದೇ ವಾಕ್ಯದಲ್ಲಿ ಕಾಣುವ ಹುಡುಗ, ಎತ್ತು ಹಾಗೂ ಆನೆ ಎಂಬ ನಾಮಪದಗಳ ವಿಶೇಷವನ್ನು ಕುರಿತು ಹೇಳುತ್ತವೆ. ದೊಡ್ಡ ಚೀಲ, ಕೆಂಪು ತಾವರೆ, ಪುಟ್ಟ ನಾಯಿಮರಿ ಇವೆಲ್ಲ ಪದಗಳಲ್ಲೂ ವಿಶೇಷಣಗಳಿರುವುದನ್ನು ಗಮನಿಸಿ. ಹೀಗೆ ನಾಮಪದಗಳ ಮೊದಲಲ್ಲಿ ಆಯಾ ನಾಮಪದಗಳ ವಿಶೇಷವನ್ನು ಕುರಿತು ಹೇಳುವ ಪದಗಳನ್ನು ‘ವಿಶೇಷಣ’ಗಳೆನ್ನುತ್ತೇವೆ.
ಈ ವಾಕ್ಯಗಳಲ್ಲಿ ವಿಶೇಷ್ಯ ಮತ್ತು ವಿಶೇಷಣಗಳನ್ನ ವಿಶೇಷಣಗಳನ್ನು ಗುರುತಿಸಿ.
ವಾಕ್ಯಗಳು
ತೋಳವು ದೊಡ್ಡ ನಾಯಿಯಂತೆ ಇದೆ.
ವಿಶೇಷ್ಯ…… ನಾಯಿ
ವಿಶೇಷಣ…… ದೊಡ್ಡ
ಮಿನುಗುವ ನಕ್ಷತ್ರವನ್ನು ನೋಡುತ್ತಾ ಇರಲು ನನಗೆ ಇಷ್ಟ.
ವಿಶೇಷ್ಯ……. ನಕ್ಷತ್ರ
ವಿಶೇಷಣ……. ಮಿನುಗುವ
ಭಾರತೀಯ ವಿಜ್ಞಾನಿಗಳು ಅತ್ಯಂತ ಬುದ್ಧಿವಂತರು.
ವಿಶೇಷ್ಯ…….ಭಾರತೀಯ ವಿಜ್ಞಾನಿಗಳು
ವಿಶೇಷಣ….ಅತ್ಯಂತ ಬುದ್ಧಿವಂತರು
ಸುಸ್ತಾದ ಯಾತ್ರಿಕರು ತಂಗಲು ತಂಗುದಾಣಗಳಿರಬೇಕು.
ವಿಶೇಷ್ಯ…….ಯಾತ್ರಿಕರು
ವಿಶೇಷಣ……..ಸುಸ್ತಾದ
ವ್ಯಾಕರಣ
ಕ್ರಿಯಾಪದ
ನಮ್ಮ ದಿನನಿತ್ಯದ ಮಾತುಗಳನ್ನು ಗಮನಿಸಿ. ‘ನೀನು ಊಟ ಮಾಡು’, ನನ್ನ ಶಾಲೆ ಚೆನ್ನಾಗಿದೆ’ -ಹೀಗೆ ನಾವು ಪದಗಳ ಗುಂಪುಗಳನ್ನು ಒಂದು ನಿರ್ದಿಷ್ಟ ಸರಣಿಯಲ್ಲಿಟ್ಟು ಬಳಸುತ್ತೇವೆ. ಆಗ ಮಾತ್ರ ನಾವು ಆಡುವ ಮಾತುಗಳಿಗೆ ಅರ್ಥ ಬರುತ್ತದೆ. “ನೀನು ಶಾಲೆಯಿಂದ’ ನಾನು ಬಸ್ಸಿನಲ್ಲಿ’ ಈ ರೀತಿಯ ಪದಗಳ ಗುಂಪು ಯಾವುದೇ ಅರ್ಥ ಕೊಡುವುದಿಲ್ಲ. ಅಂದರೆ ನಿರ್ದಿಷ್ಟ ಸರಣಿಯಲ್ಲಿ ಜೋಡಿಸಿದ ಪದಗಳ ಗುಂಪು ಮಾತ್ರ ಅರ್ಥ ಕೊಡುತ್ತದೆ. ಈ ರೀತಿ ನಿರ್ದಿಷ್ಟ ಅರ್ಥಕೊಡುವಂತೆ ಒಂದು ಸರಣಿಯಲ್ಲಿ ಜೋಡಿಸಿದ ಪದಗಳ ಗುಂಪನ್ನು ವಾಕ್ಯ ಎನ್ನುತ್ತೇವೆ. ಈ ವಾಕ್ಯದಲ್ಲಿ ಯಾವ ಯಾವ ರೀತಿಯ ಪದಗಳಿರುತ್ತವೆ ಎಂಬುದನ್ನು ತಿಳಿಯೋಣ.
ಕೆಳಗಿನ ವಾಕ್ಯಗಳನ್ನು ಗಮನಿಸಿ
ವೀಣಾ ಆಟ ಆಡಿದಳು.
ರೋನಾಲ್ಡ್ ಊಟ ಮಾಡಿದನು.
ಈ ವಾಕ್ಯಗಳಲ್ಲಿ ‘ಆಡಿದಳು’ ಮತ್ತು ‘ಮಾಡಿದನು’ ಎಂಬ ಪದಗಳು ವೀಣಾ ಮತ್ತು ರೋನಾಲ್ಡ್ ಮಾಡಿದ ಕೆಲಸವನ್ನು ಅಥವಾ ಕ್ರಿಯೆಯನ್ನು ಸೂಚಿಸುತ್ತವೆ. ಹೀಗೆ ಕ್ರಿಯೆಯನ್ನು ಸೂಚಿಸುವ ಪದಗಳನ್ನು ‘ಕ್ರಿಯಾಪದಗಳು’ ಎನ್ನುತ್ತೇವೆ. ಕ್ರಿಯೆಯನ್ನು ಮಾಡಿದವರನ್ನು ‘ಕರ್ತೃ’ ಎನ್ನಲಾಗುತ್ತದೆ. ಹಾಗಾಗಿ ಕೆಲಸವನ್ನು ಅಥವಾ ಕ್ರಿಯೆಯನ್ನು ಮಾಡಿದವರನ್ನು ಸೂಚಿಸುವ ಪದಗಳನ್ನು ಕರ್ತೃಪದ ಎನ್ನುತ್ತೇವೆ. ಅವರು ಮಾಡಿದ ಕೆಲಸವನ್ನು ಕುರಿತು ವಿವರ ನೀಡುವ ಪದಗಳಿರುತ್ತವೆ. ಏನು ಆಡಿದಳು? ಏನು ಮಾಡಿದನು? ಹೀಗೆ ‘ಏನನ್ನು’ ಎಂಬ ಪ್ರಶ್ನೆಗೆ ಉತ್ತರ ಕೊಡುವ ಪದಗಳನ್ನು ಕರ್ಮಪದಗಳೆಂದು ಕರೆಯುತ್ತೇವೆ.
ಕ್ರಿಯಾಪದದ ವಿಧಗಳು
ಸತೀಶ ಓಡಿದನು, ಮುಕ್ತ ಹಾಡುತ್ತಾಳೆ. ಮಕ್ಕಳು ಓದುವರು. ಈ ವಾಕ್ಯಗಳನ್ನು ಗಮನಿಸಿ. ಇವುಗಳು ಬೇರೆ ಬೇರೆ ಕ್ರಿಯೆಗಳನ್ನು ಸೂಚಿಸುತ್ತವೆ. ಓಡುವುದು. ಹಾಡುವುದು ಮತ್ತು ಓದುವುದು-ಇವುಗಳೇ ಆ ಕ್ರಿಯೆಗಳು. ಹೀಗೆ ವಾಕ್ಯದಲ್ಲಿ ಕ್ರಿಯೆಯನ್ನು ಸೂಚಿಸುವ ಪದಗಳು ಕ್ರಿಯಾಪದಗಳು.
ಇದೇ ವಾಕ್ಯಗಳನ್ನು ಮತ್ತೊಮ್ಮೆ ಗಮನಿಸಿ. ‘ಓಡಿದನು’ ಎಂಬುದು ಆಗಿಹೋದ ಕ್ರಿಯೆಯನ್ನು ಸೂಚಿಸುತ್ತದೆ. ಹೀಗೆ ಈಗಾಗಲೇ ನಡೆದುಹೋದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದಗಳನ್ನು ‘ಭೂತಕಾಲ ಕ್ರಿಯಾಪದ’ ಎನ್ನುತ್ತೇವೆ. ಎರಡನೇ ವಾಕ್ಯವನ್ನು ಗಮನಿಸಿ. ‘ಹಾಡುತ್ತಾಳೆ’ ಎಂಬ ಪದ ಸದ್ಯದಲ್ಲೇ ಮುಕ್ತ ಹಾಡುವವಳಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಅಂದರೆ ಸದ್ಯದಲ್ಲೇ ಆಗುವ ಕ್ರಿಯೆಯನ್ನು ಸೂಚಿಸುತ್ತದೆ. ಸದ್ಯದ
ಪರಿಸ್ಥಿತಿಯನ್ನು ‘ವರ್ತಮಾನ’ ಎನ್ನುತ್ತೇವೆ. ಹೀಗಾಗಿ ಸದ್ಯದಲ್ಲೇ ಕ್ರಿಯೆ ನಡೆಯುತ್ತದೆ ಎಂಬುದನ್ನು ಸೂಚಿಸುವ ಕ್ರಿಯಾಪದಗಳನ್ನು ‘ವರ್ತಮಾನಕಾಲದ ಕ್ರಿಯಾಪದಗಳು’ ಎನ್ನುತ್ತೇವೆ. ಮೂರನೇ ವಾಕ್ಯವನ್ನು ಗಮನಿಸಿ. “ಓದುವರು’ ಎಂಬುದು ಮುಂದೆ ಯಾವುದೋ ಸಮಯದಲ್ಲಿ ನಡೆಯುವ ಕ್ರಿಯೆಯನ್ನು ಸೂಚಿಸುತ್ತದೆ. ಮುಂದಿನ ಕಾಲವನ್ನು ‘ಭವಿಷ್ಯತ್ ಕಾಲ’ ಎಂದು ಹೇಳುತ್ತೇವೆ. ಹೀಗೆ ಮುಂದೆ ಆಗುವ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದಗಳನ್ನು ‘ಭವಿಷ್ಯತ್ ಕಾಲದ ಕ್ರಿಯಾಪದ’ ‘ ಎನ್ನುತ್ತೇವೆ.
ಕೆಳಗಿನ ವಾಕ್ಯಗಳಲ್ಲಿ ಕರ್ಮಪದ, `ಕರ್ತೃಪದ ಮತ್ತು ಕ್ರಿಯಾಪದಗಳನ್ನು ಗುರುತಿಸಿ.
ವಾಕ್ಯಗಳು
ಉಮಾ ಹಾಡನ್ನು ಹಾಡಿದಳು.
ಕರ್ತೃಪದ- ಉಮಾ
ಕರ್ಮಪದ …ಹಾಡನ್ನು
ಕ್ರಿಯಾಪದ…ಹಾಡಿದಳು
ಕೇಶವನು ಕುಂಬಳಕಾಯಿಯನ್ನು ಕೊಯ್ದನು.
ಕರ್ತೃಪದ…ಕೇಶವನು
ಕರ್ಮಪದ …..ಕುಂಬಳಕಾಯಿಯನ್ನು
ಕ್ರಿಯಾಪದ……ಕೊಯ್ದನು
ಗಣೇಶ ಗಡಿಗೆಯನ್ನು ಒಡೆದನು.
ಕರ್ತೃಪದ…..ಗಣೇಶ
ಕರ್ಮಪದ ……ಗಡಿಗೆಯನ್ನು
ಕ್ರಿಯಾಪದ……ಒಡೆದನು
ಹಸೀನ ಕೊಡೆ ಬಿಡಿಸಿದಳು.
ಕರ್ತೃಪದ…..ಹಸೀನ
ಕರ್ಮಪದ ……ಕೊಡೆ
ಕ್ರಿಯಾಪದ……ಬಿಡಿಸಿದಳು
ರಜನಿ ಸಿನಿಮಾ ನೋಡಿದಳು.
ಕರ್ತೃಪದ……ರಜನಿ
ಕರ್ಮಪದ …….ಸಿನಿಮಾ
ಕ್ರಿಯಾಪದ…….ನೋಡಿದಳು
ಅಧ್ಯಾಪಕರು ಪಾಠ ಬೋಧಿಸಿದರು.
ಕರ್ತೃಪದ……ಅಧ್ಯಾಪಕರು
ಕರ್ಮಪದ …….ಪಾಠ
ಕ್ರಿಯಾಪದ…….ಬೋಧಿಸಿದರು
ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳನ್ನೂ ಕ್ರಿಯಾಪದದ ವಿಧಗಳನ್ನೂ ಸೂಚಿಸಿ.
ವಾಕ್ಯಗಳು
ರೈತರು ಕಾಳುಗಳನ್ನು ಬಿತ್ತಿದರು.
ಕ್ರಿಯಾಪದ…..ಬಿತ್ತಿದರು
ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ)….ಭೂತಕಾಲ ಕ್ರಿಯಾಪದ’
ಮತ್ತು
ಅಧ್ಯಾಪಕರು ಸಿನಿಮಾ ತೋರಿಸುತ್ತಾರೆ.
ಕ್ರಿಯಾಪದ…….ತೋರಿಸುತ್ತಾರೆ
ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ)….. ವರ್ತಮಾನಕಾಲದ ಕ್ರಿಯಾಪದ
ನನ್ನ ಅಕ್ಕ ಭಾವ ಮುಂದಿನ ತಿಂಗಳು ಬರುವರು.
ಕ್ರಿಯಾಪದ…ಬರುವರು
ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ)……ಭವಿಷ್ಯತ್ ಕಾಲದ ಕ್ರಿಯಾಪದ
ಬೆಳಗ್ಗೆ ಕೋಳಿ ಕೂಗುತ್ತದೆ.
ಕ್ರಿಯಾಪದ…….ಕೂಗುತ್ತದೆ
ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ)…..ವರ್ತಮಾನಕಾಲದ ಕ್ರಿಯಾಪದ
ತತ್ಸಮ-ತದ್ಭವ
ತತ್ಸಮ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದದೆ ಬಳಸಲ್ಪಡುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುವರು. ತತ್+ಸಮ ಎಂದರೆ ಅದಕ್ಕೆ (ಸಂಸ್ಕೃತ ಪದಕ್ಕೆ) ಸಮಾನವಾದುದು ಎಂದು ಅರ್ಥ.
ಉದಾ: ಶ್ರೀ, ಸೂರ್ಯ, ತ್ಯಾಗ, ವಿಜ್ಞಾನ, ಪುಸ್ತಕ, ಸರಸ್ವತಿ.
ತದ್ಭವ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣವಾಗಿ ಬದಲಾವಣೆ ಹೊಂದಿ ಬರುವ ಪದಗಳನ್ನು ‘ತದ್ಭವ’ಗಳೆನ್ನುವರು.
ಉದಾ: ಸಜ್ಜೆ, ಲಕುಮಿ, ಹದಿಬದೆ, ಸಿರಿ, ಚಾಗ, ಹೊತ್ತಗೆ.
ಇನ್ನೂ ಕೆಲವು ತತ್ಸಮ, ತದ್ಭವ ಪದಗಳನ್ನು ನೋಡೋಣ.
ತತ್ಸಮ,…….. ತದ್ಭವ
ಆರ್ಯ……..ಅಜ್ಜ
ಕಾರ್ಯ…….ಕಜ್ಜ
ಚಂದ್ರ……..ಚಂದಿರ
ನಿತ್ಯ………..ನಿಚ್ಚ
ಪದ್ಮ………..ಪದುಮ
ಭಕ್ತಿ…………ಬಕುತಿ
ವೀಥಿ………..ಬೀದಿ
ವಿಜ್ಞಾನ……..ಬಿನ್ನಣ
ವ್ಯಾಕರಣ ಮಾಹಿತಿ
ಕರ್ತೃ, ಕರ್ಮ, ಕ್ರಿಯಾಪದ.
ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಿ ಓದಿರಿ.
೧. ಪ್ರಸಾದನು ಮುಖ ಕೈಕಾಲು ತೊಳೆದುಬಂದನು.
೨. ಅಬ್ದುಲ್ಲನು ಪಾತ್ರೆಗಳನ್ನು ಮಾರಿದನು.
೩. ಗಿಳಿಯು ಹಣ್ಣನ್ನು ತಿಂದಿತು.
ಇಲ್ಲಿ ‘ಪ್ರಸಾದ,’ ‘ಅಬ್ದುಲ್ಲ,’ ‘ಗಿಳಿ’ ಎಂಬ ಪದಗಳು ಕೆಲಸಮಾಡುವವರು ‘ಯಾರು’ ಎಂಬುದನ್ನು ಸೂಚಿಸುತ್ತವೆ. ಇವು ಕರ್ತೃಪದಗಳು.
‘ಮುಖ ಕೈಕಾಲು.’ ‘ಪಾತ್ರೆಗಳನ್ನು,’ ‘ಹಣ್ಣನ್ನು’ ಎಂಬ ಪದಗಳು ಆಯಾ ಕೆಲಸಕ್ಕೆ ಪೂರಕವಾಗಿ ಏನನ್ನು ಎಂಬ ಪ್ರಶ್ನೆಯನ್ನು ಎತ್ತುತ್ತವೆ. ಇವು ಕರ್ಮ ಪದಗಳು.
‘ತೊಳೆದು ಬಂದನು,’ ‘ಮಾರಿದನು,’ ‘ತಿಂದಿತು’ ఎంబ ಪದಗಳು ಯಾವ ಕೆಲಸ ಎಂಬುದನ್ನು ಹೇಳುತ್ತವೆ. ಇವು ಕ್ರಿಯಾಪದಗಳು.
ಅಂದರೆ ಇಲ್ಲಿ ಕ್ರಮವಾಗಿ- ‘ಬರುವ’ ‘ಮಾರುವ’ ‘ತಿನ್ನುವ’ ಕೆಲಸವನ್ನು ಇವು ತಿಳಿಸುತ್ತವೆ. ಕೆಲಸವನ್ನು ತಿಳಿಸುವ ಪದಗಳು ಕ್ರಿಯಾಪದಗಳು. (ಕೆಲಸ = ಕ್ರಿಯೆ) ಆ ಕ್ರಿಯೆಗೆ ಸಂಬಂಧಿಸಿದಂತೆ ‘ಏನನ್ನು’ ಎಂಬುದನ್ನು ಸೂಚಿಸುವ ಪದಗಳು ಕರ್ಮಪದಗಳು. ಕ್ರಿಯೆಯನ್ನು ಮಾಡುತ್ತಿರುವವರು ‘ಯಾರು’ ಇಲ್ಲವೇ ‘ಯಾವುದು’ ಎಂಬುದನ್ನು ಸೂಚಿಸುವ ಪದಗಳು ಕರ್ತೃಪದಗಳು. ಇದಕ್ಕೆ ಪೂರಕವಾಗಿ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ:
> ರೋಜಾಳು ಗೆಳತಿಯನ್ನು ಮೆಚ್ಚಿದಳು.
> ಪಾರಿವಾಳವು ಕಾಳುಗಳನ್ನು ನೋಡಿತು.
> ಗೆಳೆಯರು ಆಟವನ್ನು ಆಡಿದರು.
ಪದ ವಿವರ
ಕರ್ತೃಪದ….ಯಾರು?…..ರೋಜಾ, ಪಾರಿವಾಳ, ಗೆಳೆಯರು,
ಕರ್ಮಪದ….ಏನನ್ನು? ಯಾರನ್ನು?…..ಗೆಳತಿಯನ್ನು, ಕಾಳುಗಳನ್ನು, ಆಟವನ್ನು,
ಕ್ರಿಯಾಪದ….ಮಾಡುವರು?…..ಮೆಚ್ಚಿದಳು. ನೋಡಿತು. ಆಡಿದರು.
ವ್ಯಾಕರಣ ಮಾಹಿತಿ
ಸಂಧಿಗಳು
ಕನ್ನಡ ಸಂಧಿಗಳು : ಲೋಪಸಂಧಿ, ಆಗಮಸಂಧಿ, ಆದೇಶ ಸಂಧಿ.
ಒಂದು ಊರಲ್ಲಿ ಒಬ್ಬ ಜಿಪುಣ ವ್ಯಕ್ತಿ ಇದ್ದನು. ಅವನಿಗೆ ಹಣದಾಸೆ ಬಹಳ. ಅವನ ಬಳಿ ಒಂದು ಕೋಳಿ ಇತ್ತು. ಅದು ಚಿನ್ನದ ಮೊಟ್ಟೆಯಿಡುತ್ತಿತ್ತು. ಹಾಗಾಗಿ ಅವನು ಅದನ್ನು ಊರಾಚೆಗಿನ ಬೆಟ್ಟದಾವರೆಯ ಕೊಳದ ಬಳಿ ಬಚ್ಚಿಟ್ಟಿದ್ದನು. ಅದು ಅದು ದಿನವೊಂದಕ್ಕೆ ಒಂದೊಂದು ಮೊಟ್ಟೆಯಂತೆ ನೂರಾರು ಮೊಟ್ಟೆಗಳನ್ನು ಕೊಟ್ಟಿತ್ತು. ಆದರೂ ಅವನಿಗೆ ಆಸೆ. ಅದನ್ನು ಕೊಂದುಬಿಟ್ಟರೆ ಅದರ ಹೊಟ್ಟೆಯೊಳಗೆ ತುಂಬಾ ಚಿನ್ನದ ಮೊಟ್ಟೆ ಸಿಗಬಹುದು ಎಂದುಕೊಂಡು ಒಂದು ದಿನ ಕೊಂದುಬಿಟ್ಟನು. ಮುಂದೇನಾಯಿತು ಯೋಚಿಸಿ.
ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಮೊದಲಾದ ಪದಗಳನ್ನು ಊರು, ಅಲ್ಲಿ, ಮೊಟ್ಟೆ ಇಡು, ಬೆಟ್ಟ, ತಾವರೆ ಎಂದು ಓದಬಹುದಾದರೂ ನಾವು ಮಾತನಾಡುವಾಗ ಸುಲಭವಾಗಲು ಈ ಪದಗಳನ್ನು ಕೂಡಿಸಿ ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಇತ್ಯಾದಿಯಾಗಿ ಓದುತ್ತೇವೆ. ಹೀಗೆ ಪದಗಳನ್ನು ಎಡೆಬಿಡದೆ ಒಟ್ಟಿಗೆ ಕೂಡಿಸಿ ಓದುವುದಕ್ಕೆ ಅಥವಾ ಹೇಳುವುದಕ್ಕೆ ‘ಸಂಧಿ’ ಎಂದು ಹೆಸರು.
ಈ ಪದಗಳನ್ನು ಸೇರಿಸಿ ಹೇಳುವಾಗ ಆ ಪದಗಳಲ್ಲಿ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬಿಟ್ಟುಹೋಗಬಹುದು (ಉದಾಹರಣೆ ಗಮನಿಸಿ), ಇಲ್ಲವೇ ಇರುವ ಅಕ್ಷರಗಳ ಜೊತೆಗೆ ಒಂದು ಅಕ್ಷರ ಹೊಸದಾಗಿ ಸೇರಿಕೊಳ್ಳಬಹುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರಬಹುದು. ಹೀಗೆ ಸಂಧಿಯಾಗುವಾಗ ಅಕ್ಷರಗಳು ಲೋಪವಾಗುವುದು. ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ‘ಸಂಧಿಕಾರ್ಯ’ ಎನ್ನುವರು.
ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು. ಉದಾ: ಊರು+ಅಲ್ಲಿ – ಊರಲ್ಲಿ
ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ‘ಆಗಮ ಸಂಧಿ’ ಎನ್ನುವರು. ಉದಾ: ಮೊಟ್ಟೆ+ಇಡು-ಮೊಟ್ಟೆಯಿಡು,
ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದನ್ನು ‘ಆದೇಶ ಸಂಧಿ’ ಎನ್ನುವರು. ಉದಾ: ಬೆಟ್ಟ+ತಾವರೆ = ಬೆಟ್ಟದಾವರೆ
ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ, ಸಂಧಿಯ ಹೆಸರು ತಿಳಿಸಿ.
ಉದಾ: ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ?
ನೀನೇಕೆ, ನಮ್ಮೊಡನೆ, ಊರಿಗೆ ಲೋಪಸಂಧಿ
೧ ಹಾಸಿಗೆಯಿದ್ದಷ್ಟು ಕಾಲನ್ನು ಚಾಚು.
ಹಾಸಿಗೆಯಿದ್ದಷ್ಟು….ಆಗಮ ಸಂಧಿ
ಕಾಲನ್ನು…….ಲೋಪಸಂಧಿ
و ದೇವನೊಲಿದಾತನೇ ಜಾತ ಸರ್ವಜ್ಞ.
ದೇವನೊಲಿದಾತನೇ….. ಲೋಪ ಸಂಧಿ
೩.ಬಾಯಿದ್ದವರು ಬರದಲ್ಲೂ ಬದುಕಿದರು
ಬರದಲ್ಲೂ…..ಆದೇಶ ಸಂಧಿ
ಸಂಸ್ಕೃತ ಸಂಧಿ :
ಕೆಳಗಿನ ವಾಕ್ಯವೃಂದವನ್ನು ಗಮನಿಸಿ.
ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಸೂರ್ಯೋದಯಕ್ಕೆ ಮುನ್ನ ಎದ್ದು ಅಭ್ಯಾಸ ಮಾಡುವುದು ಒಳ್ಳೆಯದು. ಸೂರ್ಯ ನಮಗೆ ಹತ್ತಿರದ ಏಕೈಕ ನಕ್ಷತ್ರ, ಸೂರ್ಯನಿಂದ ಅತ್ಯಂತ ಪ್ರಖರವಾದ ಬೆಳಕು ಭೂಮಿಗೆ ದೊರೆಯುತ್ತದೆ. ಸೂರ್ಯ ದಿಗಂತದಲ್ಲಿದ್ದಂತೆ ಕಾಣುತ್ತಾನೆ. ಸೂರ್ಯನೇ ಜಗಜ್ಯೋತಿ, ಸೂರ್ಯನೇ ಚಿನ್ಮಯ.
ಮೇಲಿನ ವಾಕ್ಯವೃಂದದಲ್ಲಿ ಹಲವು ಸಂಸ್ಕೃತ ಪದಗಳಿವೆ. ಈ ಪದಗಳು ಕನ್ನಡ ಭಾಷೆಯಲ್ಲಿ ಹಾಸುಹೊಕ್ಕಾಗಿ ಸೇರಿವೆ. ಕೆಲವು ಪದಗಳು ಸಂಧಿಯಾಗಿ ಪ್ರಯೋಗವಾಗಿವೆ. ಇಲ್ಲಿಯ ಸಂಧಿಕಾರ್ಯ ಸಂಸ್ಕೃತ ಭಾಷೆಯ ನಿಯಮಗಳ ಪ್ರಕಾರ ನಡೆದಿದೆ. ಇಂಥ ಪದಗಳ ಸೇರಿಕೆಯನ್ನು ಸಂಸ್ಕೃತ ಸಂಧಿಗಳು ಎಂದು ಕರೆಯುತ್ತೇವೆ. ಅಂದರೆ, ಸಂಸ್ಕೃತ-ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಸಂಸ್ಕೃತ ಸಂಧಿ ಎಂದು ಕರೆಯುತ್ತೇವೆ. ಕನ್ನಡದಂತೆಯೇ ಸಂಸ್ಕೃತದಲ್ಲೂ ಸ್ವರಸಂಧಿಗಳೂ ವ್ಯಂಜನಸಂಧಿಗಳೂ ಇವೆ. ಅವುಗಳ ಬಗ್ಗೆ ತಿಳಿಯೋಣ.
ಸವರ್ಣ ದೀರ್ಘ ಸಂಧಿಗಳು : ಒಂದೇ ಜಾತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದು ಸವರ್ಣದೀರ್ಘ ಸಂಧಿ.
(ಉದಾ: ಪೂರ್ವಪದದ ಕೊನೆಯ ‘ಅ’ ಹಾಗೂ ಉತ್ತರ ಪದದ ಮೊದಲಿನ ‘ಆ’ ಸೇರಿ ‘ಆ’ ಆಗುವುದು. ಅಂತೆಯೇ ಇ + ಇ = ಈ, ಉ + ಉ = ಊ ಆಗುತ್ತವೆ)
ಸೂಚನೆ: ಪೂರ್ವಪದದ ಕೊನೆಯ ಅಕ್ಷರ ದೀರ್ಘವಾಗಿದ್ದರೆ ಅಡ್ಡಿಯೇನಿಲ್ಲ. ಅಂತೆಯೇ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿರಲೂಬಹುದು.
ದೇವ + ಆಲಯ= ದೇವಾಲಯ
ದೇವ + ಅಸುರ= ದೇವಾಸುರ
ಮಹಾ + ಆತ್ಮ= ಮಹಾತ್ಮ
ರವಿ+ ಇಂದ್ರ =ರವೀಂದ್ರ
ಗಿರಿ + ಈಶ =ಗಿರೀಶ
ಗುರು + ಉಪದೇಶ =ಗುರೂಪದೇಶ
ಭಸ್ಮ+ ಅಸುರ= ಭಸ್ಮಾಸುರ
ಸವರ್ಣದೀರ್ಘ ಸಂಧಿ
೧. ನನ್ನ ಗೆಳೆಯ ರವೀಂದ್ರ,
೨. ಕರ್ನಾಟಕದಲ್ಲಿ ಹಲವು ದೇವಾಲಯಗಳಿವೆ.
೩. ಗುರೂಪದೇಶವನ್ನು ಪಡೆಯುವುದು ಒಳ್ಳೆಯದು.
೪. ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ.
ಮೇಲಿನ ವಾಕ್ಯಗಳಲ್ಲಿರುವ ರವೀಂದ್ರ, ದೇವಾಲಯ, ಗುರೂಪದೇಶ, ಮಹಾತ್ಮ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರ್ಯವನ್ನು ಗಮನಿಸಿ,
ಪೂರ್ವಪದ+ಉತ್ತರಪದ = ಸಂಧಿಪದ
೧. ರವಿ+ ಇಂದ್ರ =ರವೀಂದ್ರ(ಇ+ಇ=ಈ)
2. ದೇವ+ಆಲಯ=ದೇವಾಲಯ(ಅ+ಅ=ಆ)
೩. ಗುರು+ಉಪದೇಶ-ಗುರೂಪದೇಶ (ಉ+ಉ=ಊ)
೪. ಮಹಾ+ಆತ್ಮ= ಮಹಾತ್ಮ (ಆ+ಆ=ಆ)
ಮೇಲಿನ ಪದಗಳಲ್ಲಿರುವಂತೆ ಪೂರ್ವಪದದ ಅಂತ್ಯಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದು ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡುಬರುತ್ತದೆ. ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘಸ್ವರ ಆದೇಶವಾದರೆ ಅಂತಹ ಸಂಧಿಯನ್ನು ‘ಸವರ್ಣದೀರ್ಘಸಂಧಿ’ ಎಂದು ಕರೆಯುತ್ತೇವೆ.
ಗುಣಸಂಧಿ : ‘ಅ’. ‘ಆ’ಕಾರಗಳ ಮುಂದೆ ‘ಇ’, ‘ಈ’-ಕಾರವು ಬಂದಾಗ ‘ಏ’-ಕಾರವು, ‘ಉ’. ಊ’ ಕಾರವು ಬಂದಾಗ ‘ಓ’ಕಾರವು,’ಋ’ ಕಾರವು ಬಂದಾಗ ‘ಅರ್’ ಕಾರವು
ಸೇರಿದಾಗ ಗುಣ ಸಂಧಿ ಎನಿಸುವುದು.
ಸುರ+ ಇಂದ್ರ =ಸುರೇಂದ್ರ .
ದೇವ+ ಈಶ= ದೇವೇಶ .
ಚಂದ್ರ+ ಉದಯ= ಚಂದ್ರೋದಯ.
ಮಹಾ+ಋಷಿ= ಮಹರ್ಷಿ
ಭೈರವ + ಈಶ್ವರ = ಭೈರವೇಶ್ವರ
ಗುಣಸಂಧಿ
೧. ದೇವ+ಇಂದ್ರ=ದೇವೇಂದ್ರ (ಅ+ಇ=ಏ)
೨. ಮಹಾ+ಈಶ=ಮಹೇಶ(ಆ+ಈ=ಏ)
೩.ಅರುಣ+ಉದಯ=ಅರುಣೋದಯ (ಅ+ಉ=ಓ)
೪.ಮಹಾ+ಋಷಿ=ಮಹರ್ಷಿ(ಆ+ಋ=ಆರ್)
‘ಆ’ ಅಥವಾ ‘ಆ’ ಎಂಬ ಸ್ವರಗಳಿಗೆ ‘ಇ’ ಅಥವಾ ‘ಈ’ ಎಂಬ ಸ್ವರ ಸೇರಿದಾಗ ‘ಏ’ಕಾರವೂ ‘ಉ’ ಅಥವಾ ‘ಊ’ ಸ್ವರ ಸೇರಿದಾಗ ‘ಓ’ಕಾರವೂ ‘ಋ’ ಎಂಬ ಸ್ವರವು ಸೇರಿದಾಗ ‘ಆರ್’ ಕಾರವೂ ಆದೇಶವಾಗಿ ಬರುವುದನ್ನು ‘ಗುಣಸಂಧಿ’ ಎಂದು ಕರೆಯುತ್ತೇವೆ.
ವೃದ್ಧಿಸಂಧಿ
ಪೂರ್ವಪದ + ಉತ್ತರಪದ=ಸಂಧಿಪದ
‘ಅ’ ‘ಆ’ಕಾರಗಳ ಮುಂದೆ ‘ಏ’, ‘ಐ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ ‘ಓ’, ‘ಔ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಔ’ಕಾರವೂ ಆದೇಶವಾಗಿ ಬರುವುದು. ಇದಕ್ಕೆ ‘ವೃದ್ಧಿಸಂಧಿ’ ಎಂದು ಹೆಸರು.
ವ್ಯಾಕರಣ ಮಾಹಿತಿ
ಸಂಸ್ಕೃತ ಸಂಧಿಗಳು
ವೃದ್ಧಿಸಂಧಿ : ಅ ಆ ಕಾರಗಳ ಮುಂದೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವು ಆದೇಶಗಳಾಗಿ ಬಂದರೆ ಅದಕ್ಕೆ ವೃದ್ಧಿಸಂಧಿ ಎನ್ನುವರು.
ಏಕ+ಏಕ= ಏಕೈಕ
ಶಿವ + ಐಕ್ಯ = ಶಿವೈಕ್ಯ
ವನ + ಔಷಧ = ವನೌಷಧ
ಮಹ+ ಔದಾರ್ಯ = ಮಹೌದಾರ್ಯ
ಯಣ್ ಸಂಧಿ : ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ ಕಾರಗಳಿಗೆ ‘ಯ್’ ಕಾರವೂ, ಉ,ಊ ಕಾರಗಳಿಗೆ ‘ವ್’ ಕಾರವೂ ‘ಋ’ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬಂದರೆ ಅವನ್ನು ಯಣ್ ಸಂಧಿ ಎಂದು ಕರೆಯುವರು.
ಉದಾ:
ಪೂರ್ವಪದ+ಉತ್ತರಪದ = ಸಂಧಿಪದ
ಗುರು+ಆಜ್ಞೆ=ಗುರ್ವಾಜ್ಞೆ (ಉ+ಆ=ವ್)
ಇತಿ+ಆದಿ = ಇತ್ಯಾದಿ (ಇ+ಆ=ಯ್)
ಜಾತಿ + ಅತೀತ = ಜಾತ್ಯತೀತ [ಇ + ಅ = ಯ]
ಪ್ರತಿ + ಉಪಕಾರ = ಪ್ರತ್ಯುಪಕಾರ [ಇ + ಉ = ಯ]
ಮನ+ ಅಂತರ = ಮನ್ವಂತರ [ಉ + ಅ = ವ]
ಪಿತೃ + ಆರ್ಜಿತ = ಪಿತ್ರಾರ್ಜಿತ [ಋ + ಆ = ರ]
೨. ಗುರು+ಅಜ್ಞೆ=ಗುರ್ವಾಜ್ಞೆ (ಉ+ಆ=ವ್)
೩. ಪಿತೃ+ಆರ್ಜಿತ=ಪಿತ್ರಾರ್ಜಿತ (ಯ+ಆ=ರ್)
೪. ಪ್ರತಿ+ಉಪಕಾರ=ಪ್ರತ್ಯುಪಕಾರ (ಇ+ಉ=ಮ್)
೫. ಜಾತಿ+ಅತೀತ=ಜಾತ್ಯತೀತ (ಇ+ಅ=ಯ್)
ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ, ‘ಇ’ ‘ಈ’ ಕಾರಗಳಿಗೆ ‘ಯ’ಕಾರವೂ ಉ, ಊ ಕಾರಗಳಿಗೆ ‘ವ’ ಕಾರವೂ ಋ ಕಾರಕ್ಕೆ ‘ರ’ ಕಾರವೂ ಆದೇಶವಾಗಿ ಬರುವುದನ್ನು ‘ಯಣ್ ಸಂಧಿ’ ಎಂದು ಕರೆಯುವರು.
ಸಂಸ್ಕೃತ ವ್ಯಂಜನ ಸಂಧಿಗಳು
ಜಶ್ತ್ವಸಂಧಿ
ಪೂರ್ವಪದ + ಉತ್ತರ ಪದ = ಸಂಧಿಪದ
೧. ವಾಕ್+ಈಶ=ವಾಗೀಶ
೨. ವಾಕ್+ದಾನ=ವಾಗ್ದಾನ
೪. ಬೃಹತ್+ಆಕಾಶ=ಬೃಹದಾಕಾಶ
೫. ಷಟ್+ಆನನ=ಷಡಾನನ
ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ,ಚ, ಟ, ತ, ಪ ಗಳಿಗೆ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದನ್ನು ‘ಜಶ್ತ್ವಸಂಧಿ ಎಂದು ಕರೆಯುತ್ತೇವೆ.
ಶ್ಚುತ್ವಸಂಧಿ
ಪೂರ್ವಪದ+ಉತ್ತರ ಪದ- ಸಂಧಿಪದ
0. ಮನಸ್+ಶುದ್ಧಿ=ಮನಶುದ್ಧಿ
೨. ಯಶಸ್+ಚಂದ್ರಿಕೆ=ಯಶಶ್ಚಂದ್ರಿಕೆ
a. ಸತ್+ಚಿತ್ರ=ಸಚ್ಚಿತ್ರ
‘ಶ್ಚು’ ಎಂದರೆ ಶಕಾರ ಮತ್ತು ಚವರ್ಗಾಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಶ್ಚುತ್ವ ಸಂಧಿ, ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸಕಾರ ಅಥವಾ ತವರ್ಗದ ಅಕ್ಷರಗಳಿರುತ್ತವೆ. ಉತ್ತರಪದ ಶಕಾರ ಅಥವಾ ಚವರ್ಗದ ಅಕ್ಷರಗಳಿಂದ ಆರಂಭವಾಗುತ್ತದೆ. ‘ಸ’ಕಾರವಿದ್ದ ಕಡೆ ಶಕಾರವೂ ತವರ್ಗದ ಅಕ್ಷರಗಳಿದ್ದ ಕಡೆ ಚವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಶ್ಚುತ್ವ ಸಂಧಿ’ ಎಂದು ಕರೆಯುತ್ತೇವೆ.
ಅನುನಾಸಿಕಸಂಧಿ
ಪೂರ್ವಪದ + ಉತ್ತರಪದ = ಸಂಧಿಪದ
೧. ವಾಕ್+ಮಯ=ವಾಙ್ಮಯ
೨. ಷಟ್+ಮುಖ=ಷಣ್ಮುಖ
೩. ಸತ್+ಮಾನ=ಸನ್ಮಾನ
ಙ, ಞ, ಣ, ನ, ಮ ಇವು ಅನುನಾಸಿಕ ಅಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ್, ಚ್, ಟ್, ತ್, ಪ್ ಅಕ್ಷರಗಳಿರುತ್ತವೆ ಉತ್ತರಪದ ಅನುನಾಸಿಕ ಅಕ್ಷರಗಳಿಂದ ಆರಂಭವಾಗುತ್ತದೆ. ವರ್ಗದ ಕ, ಚ, ಟ, ತ, ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಬರುವುದನ್ನು ‘ಅನುನಾಸಿಕ ಸಂಧಿ’ ಎಂದು ಕರೆಯುತ್ತೇವೆ.
ಪತ್ರ ಲೇಖನ
ಹಿಂದಿನ ತರಗತಿಯಲ್ಲಿ ನಾವು ಪತ್ರಲೇಖನ ಮಾಡುವಾಗ ಅನುಸರಿಸುವ ವಿಧಾನಗಳು, ಸಂಬೋಧನೆಗಳು ಹಾಗೂ ಪತ್ರಗಳ ಕೆಲವು ವಿಧಗಳ ಬಗ್ಗೆ ತಿಳಿದುಕೊಂಡಿದ್ದೆವು. ಇಲ್ಲಿ ವ್ಯಾವಹಾರಿಕ ಪತ್ರ (ಅರ್ಜಿ ಬರವಣಿಗೆ) ಬರೆಯುವ ಬಗ್ಗೆ ತಿಳಿಯೋಣ.
ವ್ಯಾವಹಾರಿಕ ಪತ್ರಗಳಲ್ಲಿ ನಿರ್ದಿಷ್ಟವಾದ ಉದ್ದೇಶವಿರುತ್ತದೆ. ಉಳಿದಂತೆ ಖಾಸಗಿ ಪತ್ರದ ಎಲ್ಲ ನಿಯಮಗಳು ಅನ್ವಯಿಸುತ್ತವೆ. ಆದರೂ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಖಾಸಗಿ ಪತ್ರದಲ್ಲಿ ನಾವು ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು ಕೊನೆಯಲ್ಲಿ ಮಾತ್ರ ಬರೆಯುತ್ತೇವೆ. ಆದರೆ ವ್ಯಾವಹಾರಿಕ ಪತ್ರದಲ್ಲಿ ವಿಳಾಸವನ್ನು ಎರಡನೆಯ ಹಂತದಲ್ಲಿ ಬರೆಯುತ್ತೇವೆ.
ಪ್ರಥಮ ಹಂತ:- ಬರೆಯುವವರ ವಿಳಾಸವು/ಶಿರೋನಾಮೆಯು ‘ಲೆಟರ್ ಹೆಡ್’ನಲ್ಲಿ ಇದ್ದರೆ ದಿನಾಂಕವನ್ನು ಮಾತ್ರ ಸೂಚಿಸಿದರೆ ಸಾಕು. ಮುದ್ರಿತ ವಿಳಾಸವಿಲ್ಲದಿದ್ದರೆ ಪತ್ರದ ಬಲಭಾಗದಲ್ಲಿ ಅಥವಾ ಎಡಭಾಗದಲ್ಲಿ ವಿಳಾಸ ಬರೆಯಬೇಕು.
ಕೆಲಸ
ಎರಡನೆಯ ಹಂತ:- ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು
ಎಡಭಾಗದಲ್ಲಿ ಬರೆಯಬೇಕು.
ಮೂರನೆಯ ಹಂತ:- ಮಾನ್ಯರೆ ಅಥವಾ
ಅಥವಾ ಮಹನೀಯರೆ ಎಂದು ಸಂಬೋಧಿಸಬೇಕು.
ನಾಲ್ಕನೆಯ ಹಂತ:- ಇಲ್ಲಿ ಪತ್ರದ ವಿಷಯವಿರಬೇಕು. ಖಾಸಗಿ ಪತ್ರದಲ್ಲಿ ವಿಷಯ ಎಂಬ ಹಂತ ಇರುವುದಿಲ್ಲ. ಪತ್ರದ ಸಾರವನ್ನು ಮೂರು ನಾಲ್ಕು ಪದಗಳಲ್ಲಿ ಹೇಳುವ ಕ್ರಮವಿದು.
ಐದನೆಯ ಹಂತ:- ಇಲ್ಲಿ ಪತ್ರದ ಒಡಲು ಬರಬೇಕು. ಒಡಲು ಪತ್ರದ ಅತಿಮುಖ್ಯಭಾಗ. ವಿಷಯವನ್ನು ವಿವರಿಸುವುದು ಇಲ್ಲಿಯೇ. ಪತ್ರದಲ್ಲಿ ಹೇಳಬೇಕಾದ ವಿಷಯವನ್ನು ಪೂರ್ತಿಯಾಗಿ ಇಲ್ಲಿ ಬರೆಯಬೇಕು.
ಆರನೆಯ ಹಂತ:- ‘ವಂದನಾಪೂರ್ವಕ’/ ‘ವಂದನೆಗಳೊಂದಿಗೆ’ ಎಂದು ಬರೆಯಬೇಕು. ಈ ಪದದೊಂದಿಗೆ ಪತ್ರದ ಮುಕ್ತಾಯವಾಗಬೇಕು. ವ್ಯಾವಹಾರಿಕ ಪತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಗಳೆಂದರೆ ಧನ್ಯವಾದಗಳು, ವಂದನೆಗಳೊಂದಿಗೆ.
ಏಳನೆಯ ಹಂತ:- ಪತ್ರದ ಕೊನೆಗೆ ಬಲಭಾಗದಲ್ಲಿ ನಿಮ್ಮ ನಂಬುಗೆಯ / ನಿಮ್ಮ ವಿಶ್ವಾಸಿ ಎಂದು ಬರೆದು ಅದರ ಕೆಳಗೆ ಸಹಿ ಹಾಕಬೇಕು. (ಸಹಿ ಮಾಡಿದ ಆನಂತರ ತಮ್ಮ ಹುದ್ದೆಯ ಮೊಹರು ಇದ್ದರೆ ಹಾಕಬೇಕು.)
ವಿಳಾಸವನ್ನು ೨ನೆಯ ಹಂತದಲ್ಲಿ ಬರೆದಂತೆಯೇ ಲಕೋಟೆಯ ಮೇಲೆಯೂ ಬರೆಯಬೇಕು.
ಮಾದರಿ ಅರ್ಜಿ ಪತ್ರ:-
ನಿಮ್ಮ ಊರಿನ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಯವರಿಗೆ ಬರೆದ ಮನವಿಪತ್ರ
ಇವರಿಂದ ದಿ.22-11-2022
ವಿನಯ್ ಕುಮಾರ್, ಗ್ರಾಮಸ್ಥ.
ಕಾವಡಿ ಅಗ್ರಹಾರ.
ಕೆಂಪಾಪುರ.
ಇವರಿಗೆ
ಅಧ್ಯಕ್ಷರು.
ಗ್ರಾಮ ಪಂಚಾಯಿತಿ,
ಕಾವಡಿ ಅಗ್ರಹಾರ.
ಮಾನ್ಯರೇ,
ವಿಷಯ: ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡಿಸುವ ಬಗ್ಗೆ.
ಈ ವರ್ಷ ನಮ್ಮ ಕೆಂಪಾಪುರದಲ್ಲಿ ಅತಿವೃಷ್ಟಿಯಿಂದಾಗಿ ರಸ್ತೆಗಳೆಲ್ಲಾ ಹಾಳಾಗಿವೆ.ರಸ್ತೆಯಲ್ಲಿ ಹೊಂಡಗುಂಡಿಗಳು ಉಂಟಾಗಿವೆ. ರಸ್ತೆಯಲ್ಲಿ ಸರಾಗವಾಗಿ ನಡೆದಾಡಲು ಆಗುತ್ತಿಲ್ಲ.ರಾತ್ರಿಯ ವೇಳೆ ನಡೆದಾಡುವಾಗ ಹಲವರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇದರಿಂದ ಭಯದ ಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಆದರೆ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಬೇಸರ ತಂದಿದೆ.
ಇನ್ನಾದರೂ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡುವಿರೆಂದು ನಿರೀಕ್ಷಿಸುತ್ತೇನೆ. ಇದರೊಂದಿಗೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದ ದಾಖಲೆ ಪತ್ರಗಳನ್ನು ಲಗತ್ತಿಸಲಾಗಿದೆ.
ವಂದನೆಗಳೊಂದಿಗೆ.
ತಮ್ಮ ವಿಶ್ವಾಸಿ. ಸಹಿ (ವಿನಯ್ ಕುಮಾರ್)
ವ್ಯಾಕರಣ ಮಾಹಿತಿ
ಪ್ರಾಸಾಕ್ಷರಗಳು
ಕೆಳಗಿನ ಪದ್ಯವನ್ನು ಗಮನಿಸಿರಿ.
ಉತ್ತಮರ ಗೆಳೆತನ ಪುತ್ಥಳಿ ಬಂಗಾರ
ಮತ್ತಹೀನರ ಗೆಳೆತನ |ಮಾಡಿದರ
ಹಿತ್ತಾಳಿಗಿಂತ ಬಲುಹೀನ.
ಇಲ್ಲಿ ‘ತ್ತ’ ಅಕ್ಷರವು ಪದ್ಯದ ಎಲ್ಲ ಸಾಲುಗಳಲ್ಲಿ ಪುನರಾವರ್ತಿತವಾಗಿ ಬಂದಿದೆ. ಇದು ಪ್ರಾಸಾಕ್ಷರ
ಪದ್ಯದ ನಿರ್ದಿಷ್ಟ ಸ್ಥಳದಲ್ಲಿ ಬರುವ ಪುನರಾವರ್ತಿತ ಅಕ್ಷರಗಳನ್ನು ಪ್ರಾಸಾಕ್ಷರ ಎನ್ನುವರು.
ಸಾಮಾನ್ಯವಾಗಿ ಪ್ರಾಸಾಕ್ಷರಗಳು ಪದ್ಯದ ಸಾಲುಗಳಲ್ಲಿ ಮೊದಲು ಮತ್ತು ಕೊನೆಯಲ್ಲಿ ಬರುತ್ತವೆ. ಇದಕ್ಕೆ ಅನುಗುಣವಾಗಿ ಪ್ರಾಸಗಳಲ್ಲಿ ಆದಿಪ್ರಾಸ ಹಾಗೂ ಅಂತ್ಯಪ್ರಾಸಗಳಿರುತ್ತದೆ.
ಪದ್ಯದ ಪ್ರತಿಯೊಂದು ಸಾಲಿನ ಎರಡನೆಯ ಅಕ್ಷರವು ಪುನರಾವರ್ತಿತವಾದರೆ ಅದು ಆದಿಪ್ರಾಸ.
(ಪದ್ಯವನ್ನು ಗಮನಿಸಿರಿ.)
ಕೊನೆಯ ಅಕ್ಷರವು ಪುನರಾವರ್ತಿತವಾದರೆ ಅದು ಅಂತ್ಯಪ್ರಾಸ;
ಒಂದು ಉದಾಹರಣೆಯನ್ನು ನೋಡೋಣ :
ನೀರವ್ವ ಗಂಗವ್ವ
ಮಳೆಯಾಗಿ ಬಾರವ್ವ
ಹೊಳಿಯಾಗಿ ಹರಿಯವ್ವ
ಇಲ್ಲಿ ‘ವ್ವ’ ಎಂಬ ಅಕ್ಷರವು ಪದ್ಯದ ಪ್ರತಿ ಸಾಲಿನ ಕೊನೆಯಲ್ಲಿ ಪುನರಾವರ್ತಿತವಾಗಿದೆ. ಹೀಗಾಗಿ ಇದು ‘ಅಂತ್ಯಪ್ರಾಸ’ವೆನಿಸುವುದು.
ವರುಣ -ಮಳೆದೇವತೆ
ವರ್ಣ-ಬಣ್ಣ, ಅಕ್ಷರ,
ಕೃತಜ್ಞತೆ-ಉಪಕಾರ ಸ್ಮರಣೆ ಇರುವ
ಕೃತಘ್ನತೆ- ಉಪಕಾರ ಸ್ಮರಣೆ ಇಲ್ಲದ.
ಹೊಂದಿಸು ಜೋಡಿಸು
ವಂದಿಸು-ನಮಸ್ಕರಿಸು,
ಅರ್ತಿ-ಪ್ರೀತಿ
ಅರ್ಥಿ- ಬೇಡುವವರು
ಪಾವನ ಪವಿತ್ರ
ಪವನ- ಗಾಳಿ
ಎಲರು-ಗಾಳಿ
ಎಲ್ಲರೂ-ಸರ್ವರು
ಆಡು-ಆಟ, ಮೇಕೆ
ಹಾಡು- ಗಾಯನ
ವ್ಯಾಕರಣ ಮಾಹಿತಿ
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
> ಶಿಕ್ಷಕರು ಮತ್ತೆ ಮತ್ತೆ ವಿವರಣೆ ನೀಡಿದರು.
> ಷರೀಫನು ನಗುತ್ತ ನಗುತ್ತ ಮಾತನಾಡಿದನು.
ಮೇಲಿನ ವಾಕ್ಯಗಳಲ್ಲಿ ‘ಮತ್ತೆ’, ‘ನಗುತ್ತ’ ಎಂಬ ಪದಗಳು ಎರಡೆರಡು ಬಾರಿ ಬಳಕೆಯಾಗಿವೆ. ಇವುಗಳನ್ನು ‘ದ್ವಿರುಕ್ತಿ’ ಎನ್ನುವರು.
(ದ್ವಿ-ಎರಡು, ಉಕ್ತಿ-ಮಾತು)
ಸಾಮಾನ್ಯವಾಗಿ ವಿಷಯಕ್ಕೆ ಒತ್ತುಕೊಡಲು ದ್ವಿರುಕ್ತಿಗಳನ್ನು ಬಳಸುತ್ತಾರೆ. ಇನ್ನು ಕೆಲವು ಉದಾಹರಣೆಗಳನ್ನು ನೋಡೋಣ
-ಇತ್ತ ಕಡೆಗೆ ಬೇಗಬೇಗ ಬಾ.
> ಗುಡ್ಡಗಳಲ್ಲಿ ದೊಡ್ಡದೊಡ್ಡ ಕಲ್ಲುಗಳಿವೆ.
ಇಲ್ಲಿ ‘ಬೇಗಬೇಗ’, ‘ದೊಡ್ಡದೊಡ್ಡ’ ಎಂಬ ಪದಗಳು ದ್ವಿರುಕ್ತಿಗಳಾಗಿವೆ.
ಜೋಡುನುಡಿ :
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
> “ಚಿಕ್ಕ ಮಕ್ಕಳಿಗೆ ವೇಷಭೂಷಣಗಳನ್ನು ನಾವು ತೊಡಿಸುತ್ತೇವೆ” ಎಂದನು ಪಿಂಟೋ.
> ಉಪವಾಸದ ರಾತ್ರಿ ಹಣ್ಣುಹಂಪಲು ತಿನ್ನುತ್ತಾರೆ.
ಮೇಲಿನ ವಾಕ್ಯಗಳಲ್ಲಿ ‘ವೇಷಭೂಷಣ’, ‘ಹಣ್ಣು ಹಂಪಲು’ ಈ ಪದಗಳಲ್ಲಿ ಎರಡು ಬೇರೆಬೇರೆ ಪದಗಳಿದ್ದು ಅವು ಜೊತೆಜೊತೆಯಾಗಿ ಬಳಕೆಯಾಗಿವೆ. ಇವು ಜೋಡುನುಡಿಗಳು. –
ಸಾಮಾನ್ಯವಾಗಿ ಮಾತುಗಳನ್ನು ವಿಷಯಗಳನ್ನು ಮೆರುಗುಗೊಳಿಸಲು ಜೋಡುನುಡಿಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
> ಎಲ್ಲರೂ ತಮ್ಮ ನೋವುನಲಿವುಗಳನ್ನು ಹಂಚಿಕೊಂಡರು.
> ಅವರು ಊರುಕೇರಿ ತಿರುಗಿ ಬಂದರು.
ಇಲ್ಲಿ ‘ನೋವುನಲಿವು,’ ‘ಊರುಕೇರಿ’ ಎಂಬ ಪದಗಳು ಜೋಡುನುಡಿಗಳಾಗಿವೆ.
ಅನುಕರಣಾವ್ಯಯ :
ಕೆಳಗಿನ ವಾಕ್ಯಗಳನ್ನು ಗಮನಿಸಿರಿ.
> ಹಂಪಣ್ಣನು ಸರಸರ ಹೆಜ್ಜೆ ಹಾಕಿದನು.
> ಗಾಳಿಯು ಸುಯ್ಯನೆ ಬೀಸಿತು.
ಮೇಲಿನ ವಾಕ್ಯಗಳಲ್ಲಿ ‘ಸರಸರ,’ ‘ಸುಯ್ಯನೆ’ ಈ ಪದಗಳಿಗೆ ನಿರ್ದಿಷ್ಟವಾದ ಅರ್ಥವಿಲ್ಲ. ಇವು ಧ್ವನಿವಿಶೇಷಣವನ್ನು ಅನುಕರಣ ಮಾಡಿದವುಗಳಾಗಿವೆ. ಇವು ಅನುಕರಣಾವ್ಯಯಗಳು.
ಸಾಮಾನ್ಯವಾಗಿ ಧ್ವನಿವಿಶೇಷಣಗಳನ್ನು ಕೇಳಿದಂತೆ ಪುನಃ ಅನುಕರಣೆ ಮಾಡುವಾಗ ಅನುಕರಣಾವ್ಯಯಗಳನ್ನು ಬಳಸುತ್ತಾರೆ. ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ
> ಮಳೆಯ ಹನಿಗಳು ಪಟಪಟನೆ ಬಿದ್ದವು.
ನೀರು ಜುಳುಜುಳು ಎಂದು ಹರಿಯಿತು.
ಇಲ್ಲಿ ‘ಪಟಪಟನೆ’, ‘ಜುಳುಜುಳು’ ಪದಗಳು ಅನುಕರಣಾವ್ಯಯಗಳಾಗಿವೆ.
ವ್ಯಾಕರಣ ಮಾಹಿತಿ
ಲೇಖನ ಚಿಹ್ನೆಗಳು
೧. ವಿರಾಮಗಳು :
ಅ) ಪೂರ್ಣವಿರಾಮ (.)
. ಅರ್ಥಪೂರ್ಣವಾಕ್ಯದ ಕೊನೆಯನ್ನು ಸೂಚಿಸಲು ಬಳಸುವ ಚಿಹ್ನೆ. ಉದಾ : ನನ್ನ ಊರು ಚೆಂದ.
. ಅಂಕಿ, ಅಕ್ಷರಗಳನ್ನು ಒಂದೊಂದಾಗಿ ಪಟ್ಟಿ ಮಾಡುವಾಗ ಅಂಕಿ, ಅಕ್ಷರದ ನಂತರ ಪೂರ್ಣವಿರಾಮ ಹಾಕಬೇಕು.
೧. ಅ.
೨. ಆ.
೩. ಇ.
ಸಂಕ್ಷೇಪಗಳನ್ನು ಬಳಸುವಾಗ ಪ್ರತಿ ಸಂಕ್ಷೇಪಾಕ್ಷರದ ನಂತರ ಪೂರ್ಣ ವಿರಾಮ ಬಳಸುವುದು ವಾಡಿಕೆ.
ಕ.ಸಾ.ಪ. (ಕನ್ನಡ ಸಾಹಿತ್ಯ ಪರಿಷತ್ತು) ಕ್ರಿ.ಪೂ. (ಕ್ರಿಸ್ತ ಪೂರ್ವ)
ಕೆಲವು ಸಂಕ್ಷೇಪಗಳನ್ನು ಪೂರ್ಣವಿರಾಮವಿಲ್ಲದೇ ಬರೆಯುವುದೂ ರೂಢಿಯಲ್ಲಿದೆ.
ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ವಿಸೀ (ವಿ.ಸೀತಾರಾಮಯ್ಯ)
ಚಂಪಾ (ಚಂದ್ರಶೇಖರ ಪಾಟೀಲ) ಪಾಪು (ಪಾಟೀಲ ಪುಟ್ಟಪ್ಪ)
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
೧. ಒಂದಾನೊಂದು ಕಾಲದಲ್ಲಿ ಒಂದು ದಟ್ಟವಾದ ಅರಣ್ಯವಿತ್ತು.
೨. ಲಘುಪತನಕ ಮರದ ಮೇಲಕ್ಕೆ ಹಾರಿತು.
ಇಲ್ಲಿ ವಾಕ್ಯದ ಕೊನೆಯಲ್ಲಿ ಪೂರ್ಣವಿರಾಮ ಚಿಹ್ನೆ (.) ಬಳಕೆಯಾಗಿದೆ. ಇದನ್ನು ‘ಬಿಂದು’ ಎಂದೂ ಕರೆಯುತ್ತಾರೆ. ಇದು ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುತ್ತದೆ. ಇದು ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.
ಅರ್ಧವಿರಾಮ ಚಿಹ್ನೆ’ (;)
೩. ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.
೪. ಅಷ್ಟು ಸಾಕು; ಮುಂದಿನದು ನನಗೆ ಬಿಡು.
ಇದು ಇಲ್ಲಿ ವಾಕ್ಯದ ನಡುವೆ ‘ಅರ್ಧವಿರಾಮ ಚಿಹ್ನೆ’ (;) ಬಳಕೆಯಾಗಿದೆ. ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ.
ಇದು ಅಲ್ಪವಿರಾಮದಂತೆ ಬಳಕೆ ಬಳಕೆಯಾದರೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ವಾಕ್ಯ ಅಥವಾ ವಾಕ್ಯಾಂಶ ದೊಡ್ಡ ವಾಕ್ಯವೊಂದರ ಭಾಗವಾಗಿದ್ದು, ಅರ್ಥಪೂರ್ಣತೆ ಹೊಂದಿ ಮುಂದುವರಿಯುವಂತಿದ್ದರೆ ಅಂತಹ ವಾಕ್ಯ ಅಥವಾ ವಾಕ್ಯಾಂಶದ ಅನಂತರ ಅರ್ಧವಿರಾಮ ಬಳಸುವುದು ರೂಢಿ.
ಉದಾ
: ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಿದರು: ಈಗ ಅವರಿಗೆ ವಯಸ್ಸಾಗಿದೆ; ಮರವನ್ನು ನೋಡುವುದರಲ್ಲಿ ಅವರಿಗೆ ಸಂತೋಷ; ಮುಂದೆ ಹೀಗೆ ಮರಗಳನ್ನು ನೆಡುವವರು ಯಾರು ಎಂಬುದೇ ಯೋಚನೆ: ಮುಂದಿನ ಜನಾಂಗ ಈ ಬಗ್ಗೆ ಚಿಂತಿಸಬೇಕು.
ಅಲ್ಪವಿರಾಮ ಚಿಹ್ನೆ (,)
.
ಮಾತಿನಲ್ಲಿ ಧ್ವನಿವಿರಾಮ ಇರುವ ಕಡೆ, ವಾಕ್ಯಗಳಲ್ಲಿ ಅರ್ಥ ಸ್ಪಷ್ಟತೆಗಾಗಿ, ದೀರ್ಘ ವಾಕ್ಯದಲ್ಲಿ ಅರ್ಥದ ಗೊಂದಲವನ್ನು ಹೋಗಲಾಡಿಸಲು, ಸರಿಯಾದ ಅರ್ಥ ತಿಳಿಯುವಂತೆ ಮಾಡಲು ಬಳಸುವ ಚಿಹ್ನೆ.
ಉದಾ: ಬಲಮುರಿ ಪುಟ್ಟದಾದ, ಸುಂದರ, ಆಕರ್ಷಣೀಯ ಸ್ಥಳ, ಸಂಬೋಧನೆಯ ಅನಂತರ ಅಲ್ಪವಿರಾಮ ಬಳಸಬೇಕು.
ಮಾನ್ಯರೆ, ನಿಮ್ಮ ಪತ್ರ ತಲುಪಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಬರೆಯಲು ಸಿದ್ಧರಾಗಿರಿ
೫. ಮಂಧರಕ, ಹಿರಣ್ಯರೋಮ, ಲಘುಪತನಕ ಮತ್ತು ಚಿತ್ರಾಂಗ ನಾಲ್ವರು ಗೆಳೆಯರು.
೬. ಬೇಡನು ಕೂಡಲೆ ಮಂಧರಕನನ್ನೂ, ಬಲೆಯನ್ನೂ, ನೆಲಕ್ಕಿಳಿಸಿ ಹೊರಟನು.
ಇಲ್ಲಿ ವಾಕ್ಯದ ನಡುನಡುವೆ ಅಲ್ಪವಿರಾಮ ಚಿಹ್ನೆ (,) ಬಳಕೆಯಾಗಿದೆ. ಇದು ಸಂಬೋಧನೆಯ ಮುಂದೆ, ಕರ್ತೃ, ಕರ್ಮ, ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಬಳಕೆಯಾಗುತ್ತದೆ. ಹಾಗೂ ಕೊನೆಯ ಪದವನ್ನು ಬಿಟ್ಟು ಉಳಿದ ಪದಗಳ ಮುಂದೆ ಅಗತ್ಯಕ್ಕೆ ಹೊಂದಿಕೊಂಡು ಬಳಕೆಯಾಗುತ್ತದೆ.
ಪ್ರಶ್ನಾರ್ಥಕ ಚಿಹ್ನೆ’ (?)
೭. ನೀನು ಏಕೆ ಓಡೋಡಿ ಬಂದೆ?
೮. ಯಾರಿವರು? ಎಲ್ಲಿಂದ?
ಇಲ್ಲಿ ವಾಕ್ಯದ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ’ (?) ಬಳಕೆಯಾಗಿದೆ. ಇದು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಕೆಯಾಗುತ್ತದೆ.
ಪ್ರಶ್ನೆಸೂಚಕ ಚಿಹ್ನೆ
* ಪ್ರಶ್ನಾರ್ಥಕ ವಾಕ್ಯದ ಕೊನೆಯಲ್ಲಿ ಬಳಸಬೇಕು.
ಉದಾ : ನೀವು ಯಾರು? ನಿಮ್ಮ ಹೆಸರೇನು?
* ಪ್ರಶ್ನಾರ್ಥಕ ವಾಕ್ಯದ ರೂಪದಲ್ಲಿಲ್ಲದಿದ್ದರೂ ಅರ್ಥದ ದೃಷ್ಟಿಯಿಂದ ಪ್ರಶ್ನೆ
ಅಡಕವಾಗಿದ್ದರೆ ಅಲ್ಲಿ ಪ್ರಶ್ನೆಸೂಚಕ ಬಳಸಬಹುದು.
ಜನವರಿಯಲ್ಲಿ ಏಳನೆಯ ತರಗತಿ ಪರೀಕ್ಷೆ?
ಭಾವಸೂಚಕ ಚಿಹ್ನೆ’ (!)
೯. ಅಬ್ಬಾ! ಎಂಥ ಸೊಗಸಾದ ಹಾಡು!
೧೦. ಆಹಾ! ಎಂಥ ಸುಂದರ ದೃಶ್ಯ!
ಇಲ್ಲಿರುವ ವಾಕ್ಯದಲ್ಲಿ ‘ಭಾವಸೂಚಕ ಚಿಹ್ನೆ’ (!) ಬಳಕೆಯಾಗಿದೆ. ಇದನ್ನು ‘ಆಶ್ಚರ್ಯಸೂಚಕ ಚಿಹ್ನೆ’ ಎಂದೂ ಹೇಳುತ್ತಾರೆ. ಇದು ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಬಳಸಬೇಕು. ಇದರಿಂದ ಸ್ಪಷ್ಟವಾಗಿ ಓದಲು, ಅರ್ಥ ತಿಳಿಯಲು ಸಾಧ್ಯವಾಗುತ್ತದೆ. ಇನ್ನೂ ಕೆಲವು ಲೇಖನ ಚಿಹ್ನೆಗಳಿವೆ. ಅವುಗಳ ವಿವರಣೆಯನ್ನು ಮುಂದೆ ತಿಳಿಯೋಣ.
ಭಾವಸೂಚಕ ಚಿಹ್ನೆ
* ಸಂತೋಷ, ದುಃಖ, ಆಶ್ಚರ್ಯ, ಕೋಪ ಮುಂತಾದ ಭಾವನೆಗಳನ್ನು ಸೂಚಿಸುವ ಪದ
ಅಥವಾ ವಾಕ್ಯದ ಕೊನೆಯಲ್ಲಿ ಭಾವಸೂಚಕ ಬಳಕೆಯಾಗುತ್ತದೆ.
ಓ ಬನ್ನೀ, ಬನ್ನೀ !
ಹೌದಾ !
ಛೇ !
ಭಾರತದಲ್ಲಿ ಎಷ್ಟೊಂದು ಭಾಷೆಗಳು!
ವ್ಯಾಕರಣ ಮಾಹಿತಿ
ನಾವು ಈ ಮೇಲೆ ಕೆಲವು ಲೇಖನ ಚಿಹ್ನೆಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ಈಗ ಇನ್ನೂ ಕೆಲವು ಲೇಖನ ಚಿಹ್ನೆಗಳನ್ನು ತಿಳಿಯೋಣ.
ವಿವರಣಾತ್ಮಕ ಚಿಹ್ನೆ (:-)
ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
೧. ನೌಕಾಸೇನೆ :- ಭಾರತೀಯ ನೌಕಾಸೇನೆ ಭೂಸೇನೆಯಷ್ಟೇ ಹಳೆಯದು. ಜಲಮಾರ್ಗದಲ್ಲಿ ವೈರಿಗಳನ್ನು ತಡೆಯಲು ನೌಕಾಸೇನೆ ಬಳಕೆಯಾಗುತ್ತದೆ.
ಇಲ್ಲಿ ವಾಕ್ಯದ ಶಿರೋನಾಮೆಯ ಅನಂತರ ವಿವರಣಾತ್ಮಕ ಚಿಹ್ನೆ (:-) ಬಳಕೆಯಾಗಿದೆ. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಈ ಚಿಹ್ನೆ ಬಳಕೆಯಾಗುತ್ತದೆ.
ಈ) ವಿವರಣ ಚಿಹ್ನೆ (:)
ವಿಷಯಕ್ಕೆ ವಿವರಣೆ ನೀಡಲು ವಿವರಣ ವಿರಾಮ ಬಳಕೆಯಾಗುತ್ತದೆ. ಇದು ಪೂರ್ಣವಿರಾಮದಂತೆ ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.
ನಗರ ಜೀವನ ಹಾಳಾಗಲು ಕಾರಣಗಳು : ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಾನೂನುಬಾಹಿರವಾಗಿ ನಡೆಯುವ ನಿರ್ಮಾಣಗಳು ಮುಂತಾದುವು.
ವಾಕ್ಯವೇಷ್ಟನ ಚಿಹ್ನೆ (‘ ‘)/ಉದ್ಧರಣ ಚಿಹ್ನೆ (” “)
೨. ಒಂದು ಬಿಲದೊಳಗೆ ‘ಹಿರಣ್ಯರೋಮ’ ಎಂಬ ಮೂಷಿಕವು ಮನೆಮಾಡಿಕೊಂಡಿತ್ತು. ಮೇಲಿನ ವಾಕ್ಯದಲ್ಲಿ ‘ಹಿರಣ್ಯರೋಮ’ ಈ ಪದಕ್ಕೆ ವಾಕ್ಯವೇಷ್ಟನ ಚಿಹ್ನೆ (‘ ‘) ಬಳಕೆಯಾಗಿದೆ. ಇದು ಪಾರಿಭಾಷಿಕ/ಪ್ರಧಾನ/ವಿಶಿಷ್ಟ ಪದಗಳನ್ನು ಬರೆಯುವಾಗ ಬಳಕೆಯಾಗುತ್ತದೆ.
೩. “ಸ್ವಾಮಿ, ನನಗೆ ಅದೃಷ್ಟವಿಲ್ಲ. ಈಗಲೂ ನನ್ನ ಹೃದಯ ಅವನಿಗಾಗಿ ಗಂಧರ್ವಸೇನ యత్తది. ನನ್ನ ಪ್ರೀತಿಯ ಕತ್ತೆ” ಎಂದು ಮಡಿವಾಳ್ತಿ ಬೊಬ್ಬಿಟ್ಟು ಅತ್ತಳು. ಮೇಲಿನ ವಾಕ್ಯದಲ್ಲಿ ಉದ್ಧರಣ ಚಿಹ್ನೆ (” “) ಬಳಕೆಯಾಗಿದೆ. ಇದು ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಕೆಯಾಗುತ್ತದೆ.
ವಾಕ್ಯದಲ್ಲಿ ಯಾವುದಾದರೂ ಅಕ್ಷರ, ಪ್ರತ್ಯಯ, ಪದ, ಪದಪುಂಜವನ್ನು ವಿಶೇಷವಾಗಿ
ಹೇಳಬೇಕಾದಾಗ ಒಂಟಿ ಉದ್ಧರಣ ಚಿಹ್ನೆ ಬಳಸಬೇಕು ಇಲ್ಲಿ ‘ಇಂದ’ ಬಳಸಬಾರದು.
ಶಾಲೆಯ ಮುಂದಿನ ರಸ್ತೆಯಲ್ಲಿ ‘ವೇಗವಾಗಿ ಚಲಿಸಬೇಡಿ’ ಫಲಕವನ್ನು ಅಳವಡಿಸಬೇಕು.
* ಬರವಣಿಗೆಯಲ್ಲಿ ವಿಷಯದ ಭಾಗವಾಗಿ ಬರುವ ವಿಶಿಷ್ಟ ಪದ, ಪದಪುಂಜ, ಲೇಖನ, ಪುಸ್ತಕ,
ಪತ್ರಿಕೆ ಮುಂತಾದುವುಗಳನ್ನು ಒಂಟಿ ಉದ್ಧರಣ ಚಿಹ್ನೆಯೊಳಗೆ ಬರೆಯಬೇಕು.
‘ನೆನಪಿನ ದೋಣಿಯಲ್ಲಿ’ ಎಂಬ ಆತ್ಮ ಕಥನದ ಕರ್ತೃ ಕುವೆಂಪುರವರು. ಇವರ ‘ಮಲೆಗಳಲ್ಲಿ ಮದುಮಗಳು’, ’ಕಾನೂನು ಹೆಗ್ಗಡತಿ’ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ.
* ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ
ಸೂಚಿಸಲು ಆ ಭಾಗವನ್ನು ಒಂಟಿ ಉದ್ಧರಣ ಚಿಹ್ನೆಯೊಳಗೆ ಬರೆಯಬೇಕು.
‘ಭಾರತ ಜನನಿಯ ತನುಜಾತೆ’ಯಾದ ‘ಕರ್ನಾಟಕ ಮಾತೆ’ ಇಂದು ಭಾರತದ
ಭೂಪಟದಲ್ಲಿ ತನ್ನದೇ ಆದ ವೈಶಿಷ್ಟö್ಯತೆಗಳಿಂದ ರಾರಾಜಿಸುತ್ತಿದ್ದಾಳೆ.
ಎ) ಜೋಡಿ ಉದ್ಧರಣ
* ನಮ್ಮ ಬರವಣಿಗೆಯಲ್ಲಿ ಮತ್ತೊಬ್ಬರ ಮಾತುಗಳನ್ನು ಬಳಸಿದಾಗ ಅವರ ಮಾತುಗಳನ್ನು
‘ಎಂದು’ ಎಂಬ ಪದದ ಸಹಾಯದಿಂದ ಅವರ ಮಾತುಗಳನ್ನು ಉದ್ಧರಿಸಬಹುದು.
ದುಃಖ ಮತ್ತು ಸುಖದ ಬಗ್ಗೆ ಹೇಳುವಾಗ ‘‘ದುಃಖಕ್ಕೆ ಕಾರಣ ಸಿಕ್ಕಷ್ಟು ಬೇಗ ಸುಖಕ್ಕೆ ಕಾರಣ
ಸಿಗುವುದಿಲ್ಲ’’ ಎಂದು ಸಾಹಿತಿ ಪಿ. ಲಂಕೇಶ್ ಅವರು ಹೇಳಿದ್ದಾರೆ.
೪. ನರಿಯು ಕೊಕ್ಕರೆ(ನೀರುಹಕ್ಕಿ)ಯನ್ನು ಹಿಡಿಯಲು ಹೊಂಚು ಹಾಕಿತು. ಮೇಲಿನ ವಾಕ್ಯದಲ್ಲಿ ಆವರಣ ಚಿಹ್ನೆ() ಬಳಕೆಯಾಗಿದೆ. ಇದು ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಕೆಯಾಗುತ್ತದೆ
ವ್ಯಾಕರಣ ಮಾಹಿತಿ
ಸಮಾಸ :
ಕೆಳಗಿನ ಪದಗಳನ್ನು ಗಮನಿಸಿರಿ.
ಅರಸನ + ಮನೆ = ಅರಮನೆ.
ಹಿರಿದು + ಮರ = ಹೆಮ್ಮರ.
ಗಿಡವೂ + ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು.
ಕೈಯನ್ನು + ಮುಗಿ = ಕೈಮುಗಿ.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದ ರೀತಿಯಲ್ಲಿ ಸಮಾಸ ಪದಗಳಾಗುತ್ತವೆ. ಇವುಗಳಿಗೆ ‘ಸಮಸ್ತಪದಗಳು’ ಎಂದೂ ಕರೆಯುತ್ತಾರೆ. ಸಮಾಸಪದವನ್ನು ಬಿಡಿಸಿ ಬರೆಯುವುದಕ್ಕೆ ‘ವಿಗ್ರಹ ವಾಕ್ಯ’ ಎನ್ನುವರು.
ಉದಾ: ತಲೆಯಲ್ಲಿ + ನೋವು = ತಲೆನೋವು
ಇಲ್ಲಿ ‘ತಲೆನೋವು’ ಎಂಬ ಪದವನ್ನು ‘ವಿಗ್ರಹವಾಕ್ಯ’ ಮಾಡಿ ಬರೆಯಲಾಗಿದೆ. ಮೊದಲನೆಯ ಪದವನ್ನು ‘ಪೂರ್ವಪದ’ವೆಂದೂ ಎರಡನೆಯ ಪದವನ್ನು ‘ಉತ್ತರಪದ’ವೆಂದೂ ಕರೆಯುವರು.
ವ್ಯಾಕರಣ
ಸಮಾಸಗಳು
ಕೆಳಗೆ ನೀಡಿರುವ ವಾಕ್ಯವೃಂದವನ್ನು ಗಮನಿಸಿ.
ಮೈಸೂರಿನಲ್ಲಿ ಅರಸನ ಮನೆ ಇದೆ. ಅರಸನ ಮನೆಯಲ್ಲಿ ಬಿಳಿದು ಕೊಡೆಯೂ ಇದೆ. ಅರಸನ ಮನೆಯನ್ನು ನಾಲ್ಕು ಮಡಿ ಕೃಷ್ಣರಾಜರು ಕಟ್ಟಿಸಿದರು. ಆರಸನ ಮನೆಯಲ್ಲಿ ಓಡಾಡಿ ನನಗೆ ಕಾಲ ಅಡಿ ನೋವು ಬಂದಿತು. ಆರಸನ ಮನೆಯಲ್ಲಿ ಆನೆಯೂ ಕುದುರೆಯೂ ದನವೂ ಇವೆ. ಅರಸನ ಮನೆಯನ್ನು ನೋಡು ನನ್ನ ಜೊತೆ ಚಕ್ರವನ್ನು ಕೈಯಲ್ಲಿ ಹಿಡಿದವನು ಇದ್ದ. ಇಬ್ಬರೂ ಅರಸನ ಮನೆಯನ್ನು ಮೈಯನ್ನು ಮರೆತು ನೋಡಿದೆವು.
ಮೇಲಿನ ವಾಕ್ಯವೃಂದದಲ್ಲಿ ಅರಸನ ಮನೆ, ಬಿಳಿದು ಕೊಡೆ, ನಾಲ್ಕು ಮಡಿ, ಕಾಲ ಅಡಿ, ಆನೆಯೂ ಕುದುರೆಯೂ ಚಕ್ರವನ್ನು ಕೈಯಲ್ಲಿ ಹಿಡಿದವನು ಎಂಬ ಪದಗಳನ್ನು ಬಿಡಿಸಿ ಬರೆಯಲಾಗಿದೆ. ಈ ಪದಗಳನ್ನು ಕೂಡಿಸಲು ಸಾಧ್ಯ. ಹೀಗೆ ಕೂಡಿಸುವುದರಿಂದ ಅಕ್ಷರಗಳ ಅನಗತ್ಯ ಬಳಕೆ ಮತ್ತು ಉಚ್ಚಾರಣೆಯ ಕಾಲ ಕಡಿಮೆಯಾಗುತ್ತದೆ ಮತ್ತು ಉಚ್ಚಾರಣೆ ಮತ್ತಷ್ಟು ಸುಲಭವಾಗುತ್ತದೆ. ಈಗ ಕೂಡಿಸಿ ನೋಡೋಣ :
ಮೈಸೂರಿನಲ್ಲಿ ಅರಮನೆ ಇದೆ. ಅರಮನೆಯಲ್ಲಿ ಬೆಳ್ಕೊಡೆಯೂ ಇದೆ. ಅರಮನೆಯನ್ನು ನಾಲ್ವಡಿ ಕೃಷ್ಣರಾಜರು ಕಟ್ಟಿಸಿದರು. ಅರಮನೆಯಲ್ಲಿ ಓಡಾಡಿ ನನಗೆ ಅಂಗಾಲು ನೋವು ಬಂದಿತು. ಅರಮನೆಯಲ್ಲಿ ಆನೆ ಕುದುರೆ ದನಗಳು ಇವೆ. ಅರಮನೆಯನ್ನು ನೋಡುವಾಗ ನನ್ನ ಜೊತೆ ಚಕ್ರಪಾಣಿ ಇದ್ದ. ಇಬ್ಬರೂ ಅರಮನೆಯನ್ನು ಮೈಮರೆತು ನೋಡಿದೆವು.
ಹೀಗೆ ಕೂಡಿಸುವುದು ಎಂದರೆ ಸಮಾಸ ಮಾಡುವುದು ಎಂದು ಅರ್ಥ. ಹೀಗೆ ಕೂಡಿಸಿದ ಪದದಲ್ಲಿ ಎರಡು ಭಾಗಗಳಿವೆ. ಒಂದನ್ನು ಪೂರ್ವಪದ, ಅದರ ಎದುರಿಗೆ ಬರುವುದನ್ನು ಉತ್ತರಪದ ಎಂದೂ ಕರೆಯಲಾಗುತ್ತದೆ. ಕೂಡಿಸಿದ ಪದವನ್ನು ಮತ್ತೆ ಬಿಡಿಸಿ ಬರೆದರೆ ಅದು ವಿಗ್ರಹವಾಕ್ಯ. ಸಮಾಸವಾದ ಪದವನ್ನು ವಾಕ್ಯದಲ್ಲಿ ಬಳಸಿದಾಗ ಯಾವ ಪದದ ಅರ್ಥ ಮುಖ್ಯವಾಗುತ್ತದೆ ಎಂಬುದರ ಆಧಾರದ ಮೇಲೆ ವಿವಿಧ ಸಮಾಸಗಳನ್ನು ಗುರುತಿಸಲಾಗುತ್ತದೆ.
ಉದಾ : (ಅರಮನೆ = ಅರಸನ ಮನೆ: ಪೂರ್ವಪದ = ಅರಸನ: ಉತ್ತರಪದ = ಮನೆ) ಅರಸನ ಮನೆಯಲ್ಲಿ ಸಿಂಹಾಸನವಿದೆ. ಈ ವಾಕ್ಯದಲ್ಲಿ ಸಿಂಹಾಸನ ಇರುವುದು ಮನೆಯಲ್ಲಿ ಆ ಮನೆ ಯಾರದು ಎಂದಾಗ ಅದು ಅರಸನದು ಎಂಬ ಉತ್ತರ ದೊರೆಯುತ್ತದೆ. ಇಲ್ಲಿ ಮನೆ ಎಂಬ ಪದದ ಅರ್ಥ ಮುಖ್ಯ. ಆದುದರಿಂದ ಇದು ಉತ್ತರ ಪದದ ಅರ್ಥ ಪ್ರಧಾನವಾದ ಸಮಾಸ.
ಸಮಾಸಗಳಲ್ಲಿ ಎಂಟು ವಿಧ.
> ಅಂಶಿಸಮಾಸ
> ತತ್ಪುರುಷಸಮಾಸ
> ಕರ್ಮಧಾರೆಯಸಮಾಸ
> ಬಹುವ್ರೀಹಿಸಮಾಸ
> ದ್ವಿಗುಸಮಾಸ
ಕ್ರಿಯಾಸಮಾಸ
> ದ್ವಂದ್ವಸಮಾಸ
ಗಮಕಸಮಾಸ
ತತ್ಪುರುಷ ಸಮಾಸ
೧. ಮಳೆಯ ಕಾಲ-ಮಳೆಗಾಲ
೨. ತಲೆಯಲ್ಲಿ ನೋವು-ತಲೆನೋವು
೩. ಮಲ್ಲಿಗೆಯ ಹೂವು-ಮಲ್ಲಿಗೆ ಹೂವು
೪. ಮನೆಯ ಕೆಲಸ-ಮನೆಗೆಲಸ
೫. ಅರಸನ ಮನೆ-ಅರಮನೆ
ಈ ಮೇಲಿನ ಪದಗಳನ್ನು ಗಮನಿಸಿದಾಗ ‘ಮಳೆಯ’ ಮತ್ತು ‘ಕಾಲ’ ಎಂಬ ಎರಡು ಪದಗಳನ್ನು ಸೇರಿಸಿ ಮಳೆಗಾಲ ಎಂದು ಹೇಳಲಾಗುತ್ತದೆ. ಹೀಗೆ ಕಾಲದ ಉಳಿತಾಯ ಹಾಗೂ ಸ್ಪಷ್ಟ ಅರ್ಥೈಸುವಿಕೆಗಾಗಿ ಪದಗಳನ್ನು ಕೂಡಿಸಿ ಬಳಸುತ್ತೇವೆ. ಹೀಗೆ ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿದ್ದರೆ ಅಂತಹ ಸಮಾಸಗಳಿಗೆ ತತ್ಪುರುಷ ಸಮಾಸ ಎಂದು ಹೆಸರು.
ಕರ್ಮಧಾರೆಯ ಸಮಾಸ
೧. ಹಿರಿದು ಮರ-ಹೆಮ್ಮರ
೨. ಕೆಂಪಾದ ತಾವರೆ -ಕೆಂದಾವರೆ
೩. ಮೆಲ್ಲಿತು ನುಡಿ-ಮೆಲ್ನುಡಿ
ಹೀಗೆ ಪೂರ್ವೋತ್ತರ ಪದಗಳು ವಿಶೇಷಣ-ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎಂದು ಹೆಸರು.
ಅಂಶಿ ಸಮಾಸ
೧. ಕೈಯ ಅಡಿ-ಅಂಗೈ
೨. ತಲೆಯ ಮುಂದು-ಮುಂದಲೆ
೩. ಕೆಳಗಿನ ತುಟಿ-ಕೆಳದುಟಿ
೪. ಕಾಲಿನ ಮುಂದು-ಮುಂಗಾಲು
ಪೂರ್ವೋತ್ತರ ಪದಗಳು ಹೀಗೆ ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅಂತಹ ಸಮಾಸಗಳಿಗೆ ‘ಅಂಶಿ ಸಮಾಸ’ ಎಂದು ಹೆಸರು. ‘ಕಾಲು’ ಅಂಶಿ, ಅದರ ‘ಮುಂದು’ ಅದರ ಅಂಶ.
ದ್ವಂದ್ವ ಸಮಾಸ’
೧. ರಾಮನು ಲಕ್ಷ್ಮಣನು – ರಾಮಲಕ್ಷ್ಮಣರು
೨. ಕೃಷ್ಣನು ಅರ್ಜುನನು – ಕೃಷ್ಣಾರ್ಜುನರು
೩. ಗಿಡಗಳು ಮರಗಳು ಬಳ್ಳಿಗಳು – ಗಿಡಮರಬಳ್ಳಿಗಳು
ಹೀಗೆ ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು ನಾಮಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅಂತಹ ಸಮಾಸಕ್ಕೆ ‘ದ್ವಂದ್ವ ಸಮಾಸ’ ಎಂದು ಹೆಸರು.
ಬಹುವ್ರೀಹಿ ಸಮಾಸ
೧. ಮೂರು ಕಣ್ಣುಳ್ಳವನು: ಮುಕ್ಕಣ್ಣ
೨. ಹಣೆಯಲ್ಲಿ ಕಣ್ಣುಳ್ಳವನು: ಹಣೆಗಣ್ಣ
೩. ಚಕ್ರವನ್ನು ಹಿಡಿದಿರುವವನು: ಚಕ್ರಪಾಣಿ
೪. ಚಂದ್ರನಂತೆ ಮುಖವುಳ್ಳವಳು: ಚಂದ್ರಮುಖಿ
ಹೀಗೆ ಸಮಾಸವಾದಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ‘ಬಹುವ್ರೀಹಿ ಸಮಾಸ’ ಎಂದು ಹೆಸರು.
ಕ್ರಿಯಾ ಸಮಾಸ (ಇದು ಕನ್ನಡಕ್ಕೆ ವಿಶಿಷ್ಟವಾದ ಸಮಾಸ)
೧. ಕೈಯನ್ನು ತೊಳೆ – ಕೈತೊಳೆ
೨. ಮರವನ್ನು ಹತ್ತು – ಮರಹತ್ತು
೩. ಕಳೆಯನ್ನು ಕೀಳು – ಕಳೆಕೀಳು
೪. ಊಟವನ್ನು ಮಾಡು-ಊಟಮಾಡು
೫. ತಲೆಯನ್ನು ಬಾಚು- ತಲೆಬಾಚು
೬. ಕಾಲನ್ನು ಎಳೆ -ಕಾಲೆಳೆ
ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು, ಉತ್ತರ ಪದವು ಕ್ರಿಯಾ ಪದವಾಗಿದ್ದರೆ ಅಂತಹ ಸಮಾಸಗಳಿಗೆ ‘ಕ್ರಿಯಾ ಸಮಾಸ’ ಎಂದು ಹೆಸರು.
ಗಮಕ ಸಮಾಸ
೧. ಆ ಹುಡುಗ – ಅವನು + ಹುಡುಗ
೨. ಈ ಕಲ್ಲು – ಇದು +ಕಲ್ಲು
೩. ಕಡೆಗೋಲು – ಕಡೆಯುವುದು + ಕೋಲು
೪. ಮಾಡಿದಡಿಗೆ – ಮಾಡಿದುದು + ಅಡಿಗೆ
ಹೀಗೆ ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ಗಮಕ ಸಮಾಸ.
ವ್ಯಾಕರಣ ಮಾಹಿತಿ
ದೇಶಿಯ, ಅನ್ಯದೇಶಿಯ ಪದಗಳು
ಕೆಳಗೆ ಕೊಟ್ಟಿರುವ ಪದಗಳನ್ನು ಗಮನಿಸಿರಿ,
ಕದ, ಅಂಗಳ, ಚೆನ್ನಾಗಿ, ಮೂಡಣ, ಮರ-ಈ ಪದಗಳೆಲ್ಲ ಅಚ್ಚಗನ್ನಡ ಪದಗಳು. ಇವುಗಳು ದೇಶೀ ಪದಗಳು.
ಭೂಮಿ. ಮಿತ್ರ, ಕಾಗದ, ಮೇಜು, ರಸ್ತೆ- ಈ ಪದಗಳೆಲ್ಲ ಅಚ್ಚಗನ್ನಡ ಪದಗಳಲ್ಲ. ಇವುಗಳು ಅನ್ಯದೇಶೀಯ ಪದಗಳು.
ನಾವು ಕನ್ನಡದಲ್ಲಿ ಬಳಸುವ ಅಚ್ಚಗನ್ನಡ ಪದಗಳು ದೇಶೀಪದಗಳು. ಇವು ಮೂಲ ಕನ್ನಡ ಭಾಷೆಯ ಪದಗಳಾಗಿವೆ. ನಾವು ಬಳಸುವ ಎಲ್ಲಾ ಪದಗಳು ಮೂಲ ಕನ್ನಡ ಪದಗಳಲ್ಲ. ಕೆಲವು ಪದಗಳು ಬೇರೆ ಭಾಷೆಯಿಂದ ಬಂದಿವೆ. ಇವು ಕನ್ನಡಕ್ಕೆ ಬಂದು ಕನ್ನಡ ಪ್ರತ್ಯಯಗಳನ್ನು ಹೊಂದಿ ಕನ್ನಡ ಶಬ್ದಗಳೇ ಆಗಿವೆ. ಇವುಗಳೆಲ್ಲ ಅನ್ಯದೇಶೀಯ ಪದಗಳು.
ಕನ್ನಡಕ್ಕೆ ಸಂಸ್ಕೃತ, ಅರೇಬಿಕ್, ಪರ್ಷಿಯನ್, ಪೋರ್ಚುಗೀಸ್, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಸಾವಿರಾರು ಪದಗಳು ಬಂದಿವೆ. ಇದರಿಂದ ಕನ್ನಡ ಭಾಷೆಯ ಸಂಪತ್ತು ಹೆಚ್ಚಿದೆ.
ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
ಅ) ದೇಶೀ ಪದಗಳು….. ಬೆಲ್ಲ, ನೀರು, ಹುಲ್ಲು, ಹೊಲ, ಆಟ ಮೊದಲಾದವು.
ಆ) ಅನ್ಯದೇಶೀಯ ಪದಗಳು-
> ಸಂಸ್ಕೃತ ಭಾಷೆಯಿಂದ ಬಂದ ಪದಗಳು :- ಸಂಗಮ, ಕುಮಾರ, ಅರಣ್ಯ, ಸಹೋದರಿ ಮೊದಲಾದವು.
> ಇಂಗ್ಲಿಷ್ ಭಾಷೆಯಿಂದ ಬಂದ ಪದಗಳು ಸ್ಕೂಲು, ಬಸ್ಸು ಲೈಟು, ಬ್ಯಾಂಕು, ಪೆನ್ನು, ಬುಕ್ಕು,ಮೊದಲಾದವು.
> ಪೋರ್ಚುಗೀಸ್ ಭಾಷೆಯಿಂದ ಬಂದ ಪದಗಳು ಸಾಬೂನು, ಬಟಾಟೆ, ಅನಾನಸು, ಅಲಮಾರು, ಪಾದ್ರಿ, ಮೊದಲಾದವು.
ಪರ್ಷಿಯನ್ ಭಾಷೆಯಿಂದ ಬಂದ ಪದಗಳು :- ಸರಕಾರ, ತಹಸೀಲ್ದಾರ ದಿವಾನ, ಸರದಾರ, ದವಲತ್ತು,ಮೊದಲಾದವು.
ವ್ಯಾಕರಣ
ಅನ್ಯದೇಶ್ಯ ಶಬ್ದಗಳು
ಒಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಒಂದು ಭಾಷೆ ಹರಡಿಕೊಂಡಿರುತ್ತದೆ. (ಉದಾಹರಣೆಗೆ, ನಮ್ಮ ರಾಜ್ಯದಲ್ಲಿ ಕನ್ನಡ ರೂಢಿಯಾಗಿದೆ) ಈ ದೇಶಭಾಷೆಯನ್ನು ಆಡುವವರಿಗೆ ಬೇರೆ ಭಾಷೆಗಳನ್ನು ಆಡುವವರ ಸಂಗಡ ಹಲವು ವಿಧಗಳಲ್ಲಿ ಸಂಪರ್ಕ ಉಂಟಾಗುತ್ತದೆ. ಹೊರಗಿನಿಂದ ಅವರು ಬಂದು ಇವರ ಸಂಗಡ ವ್ಯಾಪಾರ ಮಾಡಬಹುದು. ಇವರ ದೇಶವನ್ನು ಗೆದ್ದು ಆಳಬಹುದು. ಇಲ್ಲೇ ಮನೆ ಮಾಡಿಕೊಂಡು ನೆಲೆಸಬಹುದು. ಇಂಥ ಸಂದರ್ಭಗಳಲ್ಲಿ ಅವರ ಭಾಷೆಗಳಿಂದ ಹಲಕೆಲವು ಶಬ್ದಗಳು ಒಂದು ದೇಶಭಾಷೆಗೆ ಸೇರಿಹೋಗುತ್ತವೆ. ಹೀಗೆ ಹೊರಗಿನ ಭಾಷೆಗಳಿಂದ ಬಂದು ಒಂದು ಭಾಷೆಗೆ ಸೇರುವ ಶಬ್ದಗಳಿಗೆ ಅನ್ಯದೇಶ್ಯಗಳೆಂದು ಹೆಸರು.
ಕನ್ನಡಕ್ಕೆ ಬಂದ ಅನ್ಯದೇಶ್ಯ ಪದಗಳಿಗೆ ಕೆಲವು ಉದಾಹರಣೆಗಳು
ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು: ಭೂಮಿ, ನದಿ, ಅಜ್ಜ, ದಯೆ, ರಾತ್ರಿ, ಕಥೆ, ಸಂಜೆ, ನಿದ್ರೆ, ಹಬ್ಬ, ದೀಪ, ಮುಖ, ಶಕ್ತಿ, ಧರ್ಮ, ಪುಣ್ಯ, ರಾಜ, ಯುದ್ಧ ಇತ್ಯಾದಿ…
ಪೋರ್ಚುಗೀಸಿನಿಂದ ಬಂದುವು : ಅಲಮಾರು. ಸಾಬೂನು. ಪಾದ್ರಿ, ಇಸ್ತ್ರಿ, ಮೇಜು
…
ಪರ್ಸೋ – ಅರಾಬಿಕ್ ನಿಂದ ಬಂದುವು : ಜಮೀನು, ಸರ್ಕಾರ, ರೈತ, ಸಲಾಮು, ಕಾನೂನು, ಕಾಗದ, ಬಂದೂಕ, ಚುನಾವಣೆ, ಮಂಜೂರು, ದರ್ಬಾರು. ಅಸಲು, ನಕಲು, ರಸ್ತೆ ಇತ್ಯಾದಿ
ಇಂಗ್ಲೀಷ್ ನಿಂದ ಬಂದುವು : ಲಾಯರು, ಬ್ಯಾಂಕು, ಎಕರೆ, ಪ್ಲೇಗು, ನಂಬರು. ಮೈಲಿ, ಕಾರ್ಡು, ಫೀಜು, ಕಾಲೇಜು, ಜೈಲು ಇತ್ಯಾದಿ…
ದೇಶ್ಯಶಬ್ದಗಳು : ಹೊರಗಿನ ಭಾಷೆಗಳಿಂದ ಬಾರದೆ. ಒಂದು ಭಾಷೆಯಲ್ಲಿ ಮೊದಲಿನಿಂದಲೂ ಇರತಕ್ಕ ಅಥವಾ ಅದರ ಪ್ರಕೃತಿಗಳಿಂದಲೇ ಸಾಧಿತವಾಗಿರತಕ್ಕ ಶಬ್ದಗಳಿಗೆ ದೇಶ್ಯ ಶಬ್ದಗಳೆಂದು ಹೆಸರು.
ಉದಾಹರಣೆ : ನೆಲ, ಹೊಲ, ಅಕ್ಕಿ, ಕಲ್ಲು, ಹೊಳೆ, ಒಳ್ಳೆಯ, ಕೆಟ್ಟ, ಒಂದು, ಎರಡು, ಹೇಳು, ಕೇಳು, ಹೆಚ್ಚು, ತಗ್ಗು, ಸುಮ್ಮನೆ, ಮೆಲ್ಲಗೆ, ತಿಳಿವಳಿಕೆ, ಹೊಂದಿಕೆ, ನಡತೆ, ತಿಳಿಸು, ಕಲಿಸು ಇತ್ಯಾದಿ.
ಪ್ರಬಂಧ ರಚನೆ :
ನಾವು ಹಿಂದಿನ ಪಾಠದಲ್ಲಿ ಪತ್ರ ಬರೆಯುವುದರ ಬಗ್ಗೆ ತಿಳಿದುಕೊಂಡಿದ್ದೇವೆ. ಇಲ್ಲಿ ನಾವು ಪ್ರಬಂಧ ರಚನೆಯ ಬಗ್ಗೆ ತಿಳಿದುಕೊಳ್ಳೋಣ.
ಅರ್ಥಪೂರ್ಣ ವಾಕ್ಯಗಳಲ್ಲಿ ನಿರ್ದಿಷ್ಟ ವಿಷಯವನ್ನು ಕ್ರಮಬದ್ಧವಾಗಿ ನಿರೂಪಿಸಿದರೆ ಅದನ್ನು ಪ್ರಬಂಧ ಎನ್ನುವರು. ಒಂದೇ ವಿಷಯವನ್ನು ಕುರಿತಾದ ಅನೇಕ ವಾಕ್ಯಗಳ ಸಮುಚ್ಚಯವೇ ಪ್ರಬಂಧವೆನಿಸುತ್ತದೆ. ಪ್ರಬಂಧ ಬರೆಯುವ ಮೊದಲು ಕೆಲವು ಸೂಚನೆಗಳನ್ನು ಅನುಸರಿಸಬೇಕು.
> ವಿಷಯ ಸಂಗ್ರಹ : ಬರೆಯಬೇಕಾಗಿರುವ ಪ್ರಬಂಧದ ವಿಷಯದಲ್ಲಿ ಸಾಧ್ಯವಾದಷ್ಟು ವಿಚಾರ-ಸಂಗತಿಗಳನ್ನು ಸಂಗ್ರಹಿಸಬೇಕು.
> ಕ್ರಮ ಬದ್ಧತೆ : ಸಂಗ್ರಹಿಸಿದ ವಿಷಯಗಳನ್ನು ಕ್ರಮವಾಗಿ ಜೋಡಿಸಿಕೊಳ್ಳಬೇಕು. ಅಂದರೆ ಯಾವ ವಿಷಯ ಮೊದಲು, ನಿರ್ಧರಿಸಬೇಕು. ವಿಷಯ ಆನಂತರ ಎಂಬುದನ್ನು ಮೊದಲೇ
ಭಾಷೆ ಮತ್ತು ಶೈಲಿ : ಆರಿಸಿಕೊಂಡಿರುವ ಪ್ರಬಂಧದ ವಿಷಯಕ್ಕೆ ತಕ್ಕಂತೆ ಸಮರ್ಥ
ಶಬ್ದಗಳ ಬಳಕೆ, ಶುದ್ಧವಾದ ವಾಕ್ಯರಚನೆ, ಇವುಗಳಿಗೆ ಗಮನ ಕೊಡಬೇಕು. ಪ್ರಬಂಧಗಳಲ್ಲಿ ಸಂಭಾಷಣೆಯ ಶೈಲಿ ಇರುವುದಿಲ್ಲ. ಗ್ರಾಂಥಿಕ ಪದಗಳನ್ನೇ ಬಳಸಬೇಕು. ವಾಕ್ಯಗಳು ಚಿಕ್ಕದಾದಷ್ಟು ತಪ್ಪುಗಳು ಕಡಿಮೆಯಾಗುತ್ತವೆ.
ಪ್ರಬಂಧದಲ್ಲಿ ಸಾಮಾನ್ಯವಾಗಿ ಪ್ರಸ್ತಾವನೆ. ವಿಷಯ ವಿವರಣೆ ಮತ್ತು ವಿಷಯದ ಸಮಾಪ್ತಿ ಅಥವಾ ಉಪಸಂಹಾರ ಎಂಬ ಮೂರು ಪ್ರಧಾನ ಹಂತಗಳಿರುತ್ತವೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರಬಂಧ ರಚನೆ ಮಾಡಬೇಕು. ಆಗ ಅದೊಂದು ಉತ್ತಮ ಪ್ರಬಂಧವಾಗಬಲ್ಲದು.
ನಾಮಪದ
೧. ಪುಟ್ಟಜ್ಜಿ ಹೇಳಿದ ಕಥೆಯನ್ನು ಓದಿದ್ದೀರಲ್ಲ. ಈ ಕತೆಯಲ್ಲಿ ಜಿಂಕೆಗೆ ಮಾತ್ರ ‘ಚುಕ್ಕಿ’ ಎಂಬ ಹೆಸರಿದೆ. ಇಲ್ಲಿ ಬರುವ ಕಥೆ ಕೇಳುವವರು, ಯುವಕ, ಯುವತಿ, ಊರು, ಕಾಡುಪ್ರಾಣಿಗಳು ಯಾವುದಕ್ಕೂ ಹೆಸರಿಲ್ಲ ಎಂಬುದನ್ನು ಗಮನಿಸಿದ್ದೀರಿ ತಾನೆ? ಯುವಕ, ಯುವತಿ, ಜಿಂಕೆ, ಹುಲಿ, ಚಿರತೆ, ಮರ, ಮನೆ, ಜಗಲಿ ಇವನ್ನು ಕೇಳಿದಾಗ ವ್ಯಕ್ತಿ, ಪ್ರಾಣಿ,ವಸ್ತುವಿನ ನೆನಪಾಗುತ್ತದೆ. ಆ ಬಗ್ಗೆ ಒಂದು ಚಿತ್ರ ನಮ್ಮ ಮನಸ್ಸಿನಲ್ಲಿ ಬರುತ್ತದೆ. ಹೀಗೆ ಒಬ್ಬ ವ್ಯಕ್ತಿ, ಪ್ರಾಣಿ, ವಸ್ತು, ಸ್ಥಳ ಇವುಗಳನ್ನು ಗುರುತಿಸಲು ನಾವು ಬಳಸುವ ಪದಗಳು ನಾಮಪದಗಳು. ಇಂತಹ ಇನ್ನಷ್ಟು ಪದಗಳು ಈ ಕಥೆಯಲ್ಲಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ತಿಳಿಸಲಾಗಿದೆ.
ಹಳ್ಳ, ಕಾಡುಕೋಣ, ಆನೆ, ಅಂಗಳ, ಕುತ್ತಿಗೆ, ಗೆಜ್ಜೆ ಇತ್ಯಾದಿ. ಈ
ಕಥೆಯಲ್ಲಿರುವ ಉಳಿದ ನಾಮಪದಗಳನ್ನು ಪಟ್ಟಿ ಮಾಡಿ.
೨. ಈ ಕಥೆಯಲ್ಲಿ ಯುವಕ, ಯುವತಿ ಎಂಬ ಪದಗಳಿವೆ. ಈ ಯುವಕ ಮತ್ತು ಯುವತಿಗೆ ಹೆಸರಿಲ್ಲ. ಅವರಿಗೆ ನೀವೂ ಕೂಡ ಹೆಸರನ್ನು ಇಡಬಹುದು. ಹೀಗೆ ಇಟ್ಟ ಹೆಸರನ್ನು ಅಂಕಿತನಾಮ ಎಂದು ಕರೆಯುತ್ತೇವೆ.
೩. ಕಥೆಯಲ್ಲಿ ಒಬ್ಬ ಕಥೆ ಹೇಳುವ ವ್ಯಕ್ತಿ ಇದ್ದಾರೆ. ಆ ವ್ಯಕ್ತಿ ತನ್ನನ್ನು ‘ನಾನು’ ಎಂದು ಕರೆದುಕೊಂಡಿದ್ದಾರೆ. ಈ ‘ನಾನು’ ಯಾರಾಗಿರಬಹುದು? ಇದು ಯುವಕನೂ ಆಗಿರಬಹುದು. ಯುವತಿಯೂ ಆಗಿರಬಹುದು, ಹುಡುಗನೂ ಆಗಿರಬಹುದು. ಹುಡುಗಿಯೂ ಆಗಿರಬಹುದು. ಹೀಗೆ ನಾಮಪದಗಳಿಗೆ ಬದಲಾಗಿ ಬಳಸಬಹುದಾದ ಕರೆಯುತ್ತಾರೆ. ಆದಗಳನ್ನು ‘ಸರ್ವನಾಮ’ ಎಂದು
ಅ. ಕೆಳಗಿನ ವಾಕ್ಯಗಳನ್ನು ಗಮನಿಸಿ:
ನಾನು ಮನೆಯಲ್ಲಿ ಇದ್ದೇನೆ
ನೀನು ಓದುತ್ತಿರುವೆ ?
ಅವನು ಶಾಲೆಗೆ ಹೋದನು.
ಅವಳು ಕೆಲಸಕ್ಕೆ ಹೋದಳು.
ಅದು ರೊಟ್ಟಿಯನ್ನು ಮೂಸಿತು.
ಅದು ಟೇಬಲ್ಲಿನ ಮೇಲಿದೆ.
ಮೇಲಿನ ವಾಕ್ಯಗಳಲ್ಲಿರುವ ನಾನು, ನೀನು ಈ ಪದಗಳನ್ನು ಯಾರು ಯಾರಿಗೂ ಬಳಸಬಹುದು. ಅವನು ಎಂಬುದನ್ನು ಯಾವುದೇ ಗಂಡಸರಿಗೂ ಅವಳು ಎಂಬುದನ್ನು ಯಾವುದೇ ಹೆಂಗಸರಿಗೂ, ಅದು ಎಂಬುದನ್ನು ಯಾವುದೇ ಪ್ರಾಣಿಗೂ ವಸ್ತುವಿಗೂ ಬಳಸಬಹುದು. ಯಾರಿಗಾದರೂ ಬಳಸಬಹುದಾದ ಈ ಪದಗಳು ಸರ್ವನಾಮಗಳು.
ಆ. ಕೆಳಗಿನ ವಾಕ್ಯಗಳನ್ನು ಗಮನಿಸಿ:
ನಾನು ಮನೆಯಲ್ಲಿ ಇದ್ದೇನೆ.
ಪೀಟರ್ ಪುಸ್ತಕ ಓದುತ್ತಿರುವೆಯಾ?
ಹಸೀನಾ ಶಾಲೆಗೆ ಹೋದಳು.
ರಮ್ಯ ಕೆಲಸಕ್ಕೆ ಹೋದಳು.
ನಾಯಿ ರೊಟ್ಟಿಯನ್ನು ಮೂಸಿತು.
ಪೆನ್ನು ಟೇಬಲ್ಲಿನ ಮೇಲಿದೆ.
ಇ. ಕೆಳಗಿನ ವಾಕ್ಯಗಳನ್ನು ಗಮನಿಸಿ :
ನಾವು ಶಾಲೆಗೆ ಹೋಗುತ್ತೇವೆ.
ಅವರು ತಿರುಗಾಡಲು ಹೋದರು.
ಅವು ಆಕಾಶದಲ್ಲಿ ಹಾರುತ್ತಿವೆ.
ಅವು ಹಳ್ಳಿಗಳು.
ಒಬ್ಬನೇ ವ್ಯಕ್ತಿ, ವಸ್ತು, ಸ್ಥಳ, ಪ್ರಾಣಿಗಳನ್ನು ಕುರಿತು ಮಾತನಾಡುವಾಗ ನಾನು, ನೀನು, ಅವನು, ಅವಳು, ಅದು ಎಂಬುದನ್ನು ಬಳಸುತ್ತೇವೆ. ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತು, ಸ್ಥಳ. ಪ್ರಾಣಿಗಳನ್ನು ಕುರಿತು ಹೇಳುವಾಗ ನಾವು, ಅವರು, ಅವು ಎಂಬ ಸರ್ವನಾಮಗಳನ್ನು. ಬಳಸುತ್ತೇವೆ.