ಸಾಮಾಜಿಕ ಸವಾಲುಗಳು ,10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 24 ನೋಟ್ಸ್ ಅಥವಾ ಪ್ರಶ್ನೋತ್ತರಗಳು

 

ಸಾಮಾಜಿಕ ಸವಾಲುಗಳು

 

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 24 ನೋಟ್ಸ್ ಅಥವಾ ಪ್ರಶ್ನೋತ್ತರಗಳು

 

 

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

೧. ಸಂವಿಧಾನದ 24ನೇ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನುಬಾಹಿರ ಎಂದು ಘೋಷಿಸಿದೆ.

೨. `ಬಾಲ ಕಾರ್ಮಿಕ ನಿಷೇಧ ಕಾಯ್ದೆ’ ಜಾರಿಗೆ ಬಂದ ವರ್ಷ 1986

೩. ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ 1987ರಲ್ಲಿ `ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.

೪. ವರದಕ್ಷಿಣೆ ನಿಷೇಧ ಕಾಯ್ದೆ ಮೊದಲು 1961ರಲ್ಲಿ ಜಾರಿಗೆ ಬಂದಿತು.

೫. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ 2012ರಲ್ಲಿ ಜಾರಿಗೆ ಬಂದಿತು.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

೬. ಭಾರತದ ಯಾವುದಾದರೂ ಎರಡು ಸಾಮಾಜಿಕ ಸವಾಲುಗಳನ್ನು ಹೆಸರಿಸಿ.

ಬಾಲ ಕಾರ್ಮಿಕರ ಸಮಸ್ಯೆ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ.

೭. ಬಾಲ ಕಾರ್ಮಿಕರು ಎಂದರೆ ಯಾರು?

ಸಾಮಾನ್ಯವಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎಂದು ಕರೆಯಲಾಗುತ್ತಿದೆ. ಭಾರತದ ಸಂವಿಧಾನದ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ.

೮. ಹೆಣ್ಣು ಭ್ರೂಣ ಹತ್ಯೆ ಎಂದರೇನು?

ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದು, ಅದು ತಂದೆ-ತಾಯಿಯರಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದು ಹಾಕುವುದೇ ‘ಹೆಣ್ಣು ಭ್ರೂಣಹತ್ಯೆ’.

೯. ಹೆಣ್ಣು ಶಿಶುಹತ್ಯೆ ಎಂದರೇನು?

‘ಜನನದ ನಂತರದಲ್ಲಿ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಪದ್ಧತಿಯೇ ಹೆಣ್ಣು ಶಿಶು ಹತ್ಯೆ’.

೧೦. ಬಾಲ್ಯ ವಿವಾಹ ಎಂದರೇನು?

ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ ೧೮ ವರ್ಷದೊಳಗಿನ ಹುಡುಗಿಗೆ (ಬಾಲಕಿಗೆ) ಅಥವಾ ೨೧ ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎಂದು ಕರೆಯಲಾಗುತ್ತದೆ.

 

 

III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ :

 

೧೧. ಬಾಲ ಕಾರ್ಮಿಕ ಸಮಸ್ಯೆಗೆ ಕಾರಣಗಳಾವವು? ತಿಳಿಸಿ.

 

ಕಾರಣಗಳು : ಕಡುಬಡತನ, ಕೌಟುಂಬಿಕ ಕಲಹ, ವಿಚ್ಛೇದನ, ಕೌಟುಂಬಿಕ ಹಿಂಸೆ, ಪೋಷಕರ ಅತಿಯಾದ ನಿಯಂತ್ರಣ, ಉದ್ಯಮಿಗಳ ಲಾಭಕೋರತನ, ಅನಕ್ಷರತೆ, ಮಕ್ಕಳ ಅಪಹರಣ ಹಾಗೂ ಜೀತ ಮುಂತಾದ ಕಾರಣಗಳಿಂದ ಬಾಲಕಾರ್ಮಿಕರ ಸಮಸ್ಯೆ ಹೆಚ್ಚುತ್ತಲೇ ಇದೆ.

೧೨. ಬಾಲ ಕಾರ್ಮಿಕ ಸಮಸ್ಯೆಯಿಂದಾಗುವ ಪರಿಣಾಮಗಳೇನು?

ಮಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಪಿಡುಗಾಗಿದೆ. ಮಕ್ಕಳನ್ನು ದಿನವಿಡೀ ದುಡಿಸಿಕೊಳ್ಳುವುದೇ ಅಲ್ಲದೆ ಅವರ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ, ವೈದ್ಯಕೀಯ ಮತ್ತಿತರ ಅಗತ್ಯತೆಗಳ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇರುವುದಿಲ್ಲ. ಅದರ ಬದಲು ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವುದು ಕಂಡುಬಂದಿದೆ.

ಅನಾರೋಗ್ಯ, ಪೌಷ್ಠಿಕ ಆಹಾರದ ಕೊರತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಒತ್ತಾಯದ ದುಡಿತ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ಇವೇ ಮುಂತಾದ ಕಾರಣಗಳಿಂದ ಲಕ್ಷಾಂತರ ಮಂದಿ ಬಾಲಕಾರ್ಮಿಕರು ಇಂದಿಗೂ ಬವಣೆ ಪಡುತ್ತಿದ್ದಾರೆ. ಆಟವಾಡುವ, ಕನಸು ಕಾಣುವ ಮತ್ತುಓದುವ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ದೂಡಿ ಅವರ ಬಾಲ್ಯವನ್ನು ಕಸಿದುಕೊಳ್ಳಲಾಗಿದೆ.

೧೩. ಬಾಲ ಕಾರ್ಮಿಕತೆಯ ನಿರ್ಮೂಲನಾ ಕ್ರಮಗಳಾವವು? ವಿವರಿಸಿ.

ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ‘ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು’ (೧೯೮೬) ಜಾರಿಗೊಳಿಸಲಾಗಿದೆ. ಈ ಕಾಯ್ದೆ ಅಥವಾ ಶಾಸನವನ್ನು ಉಲ್ಲಂಘಿಸಿದ ಉದ್ಯೋಗಪತಿಗಳು ಪ್ರತಿಯೊಬ್ಬ ಬಾಲ ಕಾರ್ಮಿಕನ ಪರವಾಗಿ ೨೦,೦೦೦/- ರೂ ಗಳ ದಂಡವನ್ನು ಕಲ್ಯಾಣ ನಿಧಿಗೆ ಕಡ್ಡಾಯವಾಗಿ ಭರಿಸಬೇಕಾಗುತ್ತದೆ.

ಬಾಲಕಾರ್ಮಿಕರನ್ನು ಕಂಡಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆಗೆ ದೂರು ನೀಡಬೇಕು.

ಬಾಲಕಾರ್ಮಿಕ ಮಕ್ಕಳಿಗೆ ತಿಳಿ ದುಡಿಮೆಯಿಂದ ಬಿಟ್ಟು ಶಾಲೆಗೆ ಹೋಗಲು ಪ್ರೋತ್ಸಾಹಿಸಬೇಕು.

ಯಾರು ಮಕ್ಕಳನ್ನು ದುಡಿಮೆಗೆ ಇರಿಸಿಕೊಳ್ಳುತ್ತಾರೋ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು.

ಮತ್ತು ಮಾಧ್ಯಮಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲಾ ಜನರಲ್ಲಿ ಬಾಲಕಾರ್ಮಿಕತೆಯ ವಿರುದ್ಧ ಮನಸ್ಥಿತಿಯನ್ನು ಹೊಂದಲು ಪ್ರೇರಣೆ ನೀಡಬೇಕು.

 

೧೪. ವರದಕ್ಷಿಣೆ ಪಿಡುಗಿನಿಂದಾಗುವ ದುಷ್ಪರಿಣಾಮಗಳಾವವು?

 

ವರದಕ್ಷಿಣೆಯ ದುಷ್ಪರಿಣಾಮಗಳು:

ವರದಕ್ಷಿಣೆ ಸ್ತ್ರೀಯರ ಸ್ವಾಭಿಮಾನ, ಗೌರವ, ಸ್ಥಾನಮಾನವನ್ನು ಕುಗ್ಗಿಸುತ್ತದೆ ಮತ್ತು ಕೌಟುಂಬಿಕ ಕಲಹಗಳನ್ನುಂಟು ಮಾಡುತ್ತದೆ. ಅದು ಸ್ತ್ರೀ ಪುರುಷರ ನಡುವೆ ಒಡಕು ಉಂಟಾಗಲು ಕಾರಣವಾಗಿದೆ.

ವರದಕ್ಷಿಣೆ ಪಿಡುಗಿನಿಂದಾಗಿ ಅನೈತಿಕತೆ ಮತ್ತು ಕ್ರೌರ್ಯ ಹೆಚ್ಚುವುದು, ಕೌಟುಂಬಿಕ ಸಂಬಂಧಗಳು ಹಾಳಾಗುವುವು. ವರದಕ್ಷಿಣೆ ಹಣದ ದಾಹದಿಂದಾಗಿ ಮೋಸದ ವಿವಾಹಗಳು ಕೂಡಾ ನಡೆಯುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಶಿಶು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿವೆ.

 

 

೧೫. ವರದಕ್ಷಿಣೆ ಸಮಸ್ಯೆಗೆ ಪರಿಹಾರ ಕ್ರಮಗಳಾವವು?

 

ವರದಕ್ಷಿಣೆ ಪಿಡುಗನ್ನು ಶಾಸನಾತ್ಮಕವಾಗಿ ನಿವಾರಣೆ ಮಾಡಲು ಭಾರತ ಸರ್ಕಾರ ೧೯೬೧ ರಲ್ಲಿ `ವರದಕ್ಷಿಣೆ ನಿಷೇಧ’ ಕಾಯ್ದೆಯನ್ನು ಜಾರಿಗೊಳಿಸಿತು. ವರದಕ್ಷಿಣೆ ಷರತ್ತಿನ ಮೇರೆಗೆ ವಿವಾಹವಾಗುವುದನ್ನು ಈ ಕಾನೂನು ನಿಷೇಧಿಸಿದೆ.

ಈ ಕಾಯ್ದೆಯನ್ನು ೧೯೮೬ರಲ್ಲಿ ತಿದ್ದುಪಡಿಮಾಡಿ ಅದನ್ನು ಮತ್ತಷ್ಟು ಕಠಿಣಗೊಳಿಸಲಾಯಿತು.ತಿದ್ದುಪಡಿಗೊಂಡಿರುವ ಈ ಕಾಯ್ದೆ ಪ್ರಕಾರ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಹಾಗೂ ಕೊಡುವಂತೆ ಒತ್ತಾಯಿಸುವ ವ್ಯಕ್ತಿಗಳಿಗೆ ೫ ವರ್ಷಗಳಿಗೂ ಕಡಿಮೆಯಿರದ ಕಾರಾಗೃಹ ಶಿಕ್ಷೆ ಮತ್ತು ೧೫,೦೦೦ ರೂಗಳಿಗೆ ಕಡಿಮೆಯಿರದ ಹಣವನ್ನು ದಂಡವಾಗಿ ವಿಧಿಸಬಹುದು.

ವರದಕ್ಷಿಣೆ ಸಾವು ಪ್ರಕರಣವನ್ನು ‘ಭಾರತ ದಂಡ ಸಂಹಿತೆ’ ಹಾಗೂ ‘ಭಾರತ ಅಪರಾಧ ವಿಚಾರಣಾ ಸಂಹಿತೆ’ಗೆ ಸೇರ್ಪಡೆಗೊಳಿಸಲಾಗಿದೆ. ಈ ವಿಚಾರಣೆಯನ್ನು ಜಾಮೀನು ರಹಿತ ಮತ್ತು ರಾಜಿರಹಿತ ನೆಲೆಯಲ್ಲಿ ನಡೆಸಬಹುದಾಗಿದೆ.

ಕಾನೂನಿನ ಮೂಲಕವಲ್ಲದೆ ಜನಜಾಗೃತಿ ಅಂತರ ಜಾತಿ ವಿವಾಹ ಆಧುನಿಕ ಪ್ರಚಾರ ಮಾಧ್ಯಮಗಳು, ಸ್ವಯಂಸೇವಾ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ವರದಕ್ಷಿಣೆ ಪಿಡುಗನ್ನು ತೊಲಗಿಸಬಹುದು.

೧೬. ಬಾಲ್ಯ ವಿವಾಹದ ಪರಿಣಾಮಗಳಾವವು?

ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗಿ, ಅವರು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಮಕ್ಕಳ ಮೇಲೆ ಅತಿಯಾದ ದೌರ್ಜನ್ಯ, ನಿರ್ಲಕ್ಷ್ಯ, ಹಿಂಸೆ, ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ಹೆಚ್ಚುತ್ತವೆ. ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಘನೆ – ಬಾಲ್ಯತನ, ಶಿಕ್ಷಣ, ಮನೋರಂಜನೆ, ಗೆಳೆಯರ ಒಡನಾಟಕ್ಕೆ ಧಕ್ಕೆ, ಅಪೌಷ್ಟಿಕತೆ, ರಕ್ತಹೀನತೆ,

ಅನಾರೋಗ್ಯ, ಗರ್ಭಪಾತ,ಶಿಶುಮರಣ,ತಾಯಿಮರಣಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುವ ಸಂಭವ ಹೆಚ್ಚು. ಹೆಣ್ಣು ಮಕ್ಕಳು ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದೆ ಆಗಾಗ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚು.

IV. ಚಟುವಟಿಕೆ :

೧. ನಿಮ್ಮ ಊರಿನ ಸಾಮಾಜಿಕ ಸವಾಲುಗಳನ್ನು ಪಟ್ಟಿ ಮಾಡಿ ಅವುಗಳಿಗೆ ಪರಿಹಾರಗಳನ್ನು ಬರೆಯಿರಿ.

 

ನಮ್ಮ ಊರು ದಾವಣಗೆರೆಯಾಗಿದ್ದು ಇಲ್ಲಿ ಭ್ರಷ್ಟಾಚಾರ ಬಹಳವಾಗಿದೆ. ರಾಜಕಾರಣಿಗಳು ಹಣವನ್ನು ಸರಿಯಾಗಿ ಜನಗಳಿಗೆ ಉಪಯೋಗಿಸುವುದಿಲ್ಲ. ರಾಜಕಾರಣಿಗಳು ಜನರ ಹಿತವ ದೃಷ್ಟಿಯಿಂದ ಸಾರ್ವಜನಿಕ ಹಣವನ್ನು ಸದ್ಬಳಕೆ ಮಾಡಿದಲ್ಲಿ ದಾವಣಗೆರೆ ಇನ್ನೂ ಹೆಚ್ಚು ಅಭಿವೃದ್ಧಿಯಾಗುತ್ತದೆ.

ನಿರುದ್ಯೋಗ ಮತ್ತು ಬಡತನ ಇವೆರಡೂ ಕೂಡ ದಾವಣಗೆರೆಯಲ್ಲಿ ಕಾಣಸಿಗುತ್ತವೆ ಇದಕ್ಕೆ ಕುಡಿತ ಮತ್ತು ದಾರಿದ್ರತನವನ್ನು ಹೊಡೆದೋಡಿಸಿದಲ್ಲಿ ಇವೆರಡು ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಬಹುದು.

ಕೆಲವು ಕಡೆ ವರದಕ್ಷಿಣೆ ಮತ್ತು ಕೆಲವು ಕಡೆ ವಧು-ದಕ್ಷಿಣೆ ಇವೆರಡು ದಾವಣಗೆರೆಯಲ್ಲಿರುವ ಸಾಮಾಜಿಕ ಪಿಡುಗುಗಳಾಗಿವೆ. ಅತಿಯಾದ ಆಸೆ ಮತ್ತು ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳದಿರುವುದು ಇದಕ್ಕೆ ಕಾರಣಗಳಾಗಿವೆ. ಮನುಷ್ಯ ಗಂಡಾಗಲಿ ಹೆಣ್ಣಾಗಲಿ ಗಂಡನ ಕಡೆಯವರಾಗಲಿ ಹೆಣ್ಣಿನ ಕಡೆಯವಾಗಲಿ ಅತಿಯಾಗಿ ಆಸೆ ಬೀಳದೆ ತಮ್ಮ ತಮ್ಮ ಬಳಿ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಳ್ಳುವುದರಿಂದ ಈ ಬಿಡುವನ್ನು ಹೋಗಲಾಡಿಸಬಹುದು.

ಗಿ. ಯೋಜನೆ :

೧. ನಿಮ್ಮ ಶಾಲೆಗೆ ಕಾನೂನು ತಜ್ಞರನ್ನುಕರೆದು, ಬಾಲ್ಯ ವಿವಾಹ, ಬಾಲಕಾರ್ಮಿಕತನ ಮತ್ತು ಶಿಶು ಹತ್ಯೆಗೆ ಸಂಬಂಧಿಸಿದಂತೆ ಇರುವ ಕಾನೂನಿನ ಬಗ್ಗೆ ಉಪನ್ಯಾಸ ಏರ್ಪಡಿಸಿ.

 

 

 

 

 

Leave a Comment