6ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು ಎಲ್ಲಾ ಅಧ್ಯಾಯಗಳು

ಕುತೂಹಲ ಆರನೇ ತರಗತಿ ವಿಜ್ಞಾನ ಭಾಗ ಒಂದು

ಎಲ್ಲಾ ಅಧ್ಯಾಯಗಳ ಪ್ರಶ್ನೆ ಉತ್ತರಗಳು ಒಂದೇ ಹತ್ತಿರ ನಿಮಗಾಗಿ

ಜೀವ ಜಗತ್ತಿನಲ್ಲಿ ವೈವಿಧ್ಯತೆ

 6ನೇ ತರಗತಿ ವಿಜ್ಞಾನ ಅಧ್ಯಾಯ 2 ಪ್ರಶ್ನೋತ್ತರಗಳು ನೋಟ್ಸ್

1. ಇಲ್ಲಿ ಎರಡು ವಿಧದ ಬೀಜಗಳಿವೆ. ಈ ಸಸ್ಯಗಳ ಬೇರುಗಳು ಮತ್ತು ಎಲೆಗಳ ನಾಳವಿನ್ಯಾಸದ ನಡುವೆ ನೀವು ಯಾವ ವ್ಯತ್ಯಾಸಗಳನ್ನು ಕಂಡುಕೊಳ್ಳುತ್ತೀರಿ?

ಗೋಧಿ ಸಸ್ಯಗಳು ಸಾಮಾನ್ಯವಾಗಿ ತಮ್ಮ ಎಲೆಗಳಲ್ಲಿ ಸಮಾಂತರ ನಾಳವಿನ್ಯಾಸ ಮತ್ತು ತಂತುಬೇರು
ಹೊಂದಿದ್ದರೆ, ರಾಜ್ಮಾ/ಕಿಡ್ನಿ ಬೀನ್ಸ್ ಸಸ್ಯಗಳಲ್ಲಿ ಎಲೆಗಳು ಸಾಮಾನ್ಯವಾಗಿ ಜಾಲಬಂಧ ನಾಳವಿನ್ಯಾಸವನ್ನು ಮತ್ತು ತಾಯಿಬೇರುಗಳನ್ನು ಹೊಂದಿರುತ್ತವೆ.

2. ಕೆಲವು ಪ್ರಾಣಿಗಳ ಹೆಸರುಗಳನ್ನು ಕೆಳಗೆ ನೀಡಲಾಗಿದೆ. ಆವಾಸ : ದೆ. ಆವಾಸ ಸ್ಥಾನಗಳ ಆಧಾರದ ಮೇಲೆ ಅವುಗಳನ್ನು ಗುಂಪು ಮಾಡಿ. ‘A’ ಎಂದು ಗುರುತಿಸಲಾದ ಜಾಗದಲ್ಲಿ ಜಲವಾಸಿಗಳ ಹೆಸರುಗಳನ್ನು ಬರೆಯಿರಿ ಮತ್ತು ‘B’ ಎಂದು ಗುರುತಿಸಲಾದ ಜಾಗದಲ್ಲಿ ನೆಲವಾಸಿ ಪ್ರಾಣಿಗಳ ಹೆಸರನ್ನು ಬರೆಯಿರಿ. ‘C’ ಭಾಗದಲ್ಲಿ ಎರಡೂ ಆವಾಸಸ್ಥಾನಗಳಲ್ಲಿ ವಾಸಿಸುವ ಪ್ರಾಣಿಗಳ ಹೆಸರನ್ನು ನಮೂದಿಸಿ.

ಕುದುರೆ, ಡಾಲ್ಫಿನ್, ಕಪ್ಪೆ, ಕುರಿ, ಮೊಸಳೆ, ಅಳಿಲು, ತಿಮಿಂಗಿಲ, ಎರೆಹುಳು, ಪಾರಿವಾಳ, ಆಮೆ.

A…..ಡಾಲ್ಫಿನ್,ತಿಮಿಂಗಿಲ,

C….ಮೊಸಳೆ,ಕಪ್ಪೆ,ಆಮೆ.

B….ಅಳಿಲು,ಕುದುರೆ,ಕುರಿ,ಎರೆಹುಳು,ಪಾರಿವಾಳ

3. ಮನುವಿನ ತಾಯಿ ಕೈತೋಟವನ್ನು ನಿರ್ವಹಿಸುತ್ತಾರೆ. ಒಂದು ದಿನ, ಅವರು ಮಣ್ಣಿನಿಂದ ಮೂಲಂಗಿಯನ್ನು ಅಗೆಯುತ್ತಿದ್ದರು. ಮೂಲಂಗಿ ಒಂದು ರೀತಿಯ ಬೇರು ಎಂದು ಮನುವಿಗೆ ಹೇಳಿದರು. ಮೂಲಂಗಿಯನ್ನು ಪರೀಕ್ಷಿಸಿ ಮತ್ತು ಅದು ಯಾವ ರೀತಿಯ ಬೇರು ಎಂದು ಬರೆಯಿರಿ. ಮೂಲಂಗಿ ಸಸ್ಯದ ಎಲೆಗಳಲ್ಲಿ ಯಾವ ರೀತಿಯ ನಾಳವಿನ್ಯಾಸವನ್ನು ನೀವು ವೀಕ್ಷಿಸಬಹುದು?

ಮೂಲಂಗಿಯ ಬೇರು ತಾಯಿಬೇರಿನ ವ್ಯವಸ್ಥೆಯಾಗಿದೆ.
ಆದರೆ ಬೇರಿನಲ್ಲಿ ಆಹಾರ ಸಂಗ್ರಹಣೆ ಇದ್ದು ಇದೊಂದು ವಿಶೇಷ ಬೇರಿನ ವ್ಯವಸ್ಥೆಯಾಗಿದೆ.

ಮೂಲಂಗಿಯ ಎಲೆಗಳು ಜಾಲ ಬಂಧ ನಾಳವಿನ್ಯಾಸವನ್ನು ಹೊಂದಿವೆ.

4. ಬಯಲು ಪ್ರದೇಶದಲ್ಲಿ ಕಂಡುಬರುವ ಮೇಕೆ ಮತ್ತು ಪರ್ವತ ಮೇಕೆಯ ಚಿತ್ರಗಳನ್ನು ನೋಡಿ. ಅವುಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿ. ಈ ವ್ಯತ್ಯಾಸಗಳಿಗೆ ಕಾರಣಗಳೇನು?

1. ತುಪ್ಪಳ: ಪರ್ವತದ ಮೇಕೆಗಳು ಕಠಿಣ, ಶೀತ ಹವಾಮಾನದಿಂದ ರಕ್ಷಿಸಲು ದಪ್ಪ, ಉಣ್ಣೆಯ ಕೋಟುಗಳನ್ನು ಹೊಂದಿರುತ್ತವೆ, ಆದರೆ ಬಯಲು ಪ್ರದೇಶದ ಮೇಕೆ ಗಳು ಬೆಚ್ಚಗಿನ ಪರಿಸರಕ್ಕೆ ಸೂಕ್ತವಾದ ಹಗುರವಾದ, ಕಡಿಮೆ ತುಪ್ಪಳವನ್ನು ಹೊಂದಿರುತ್ತವೆ.

2. ಗೊರಸುಗಳು: ಪರ್ವತ ದ ಮೇಕೆಗಳ ಗೊರಸುಗಳು ತೀಕ್ಷ್ಣ ಮತ್ತು ಬಲವಾಗಿರುತ್ತವೆ, ಹತ್ತಲು ಮತ್ತು ಕಲ್ಲಿನ ಮೇಲ್ಮೈಗಳನ್ನು ಹಿಡಿಯಲು ಹೊಂದಿಕೊಳ್ಳುತ್ತವೆ, ಆದರೆ ಬಯಲು ಪ್ರದೇಶದ ಮೇಕೆ ಗಳು ಅಗಲವಾದ, ಮೃದುವಾದ ಗೊರಸುಗಳನ್ನು ಹೊಂದಿರುತ್ತವೆ, ಹುಲ್ಲು ಅಥವಾ ಮರಳು ಮಣ್ಣಿನಲ್ಲಿ ನಡೆಯಲು ಸೂಕ್ತವಾಗಿವೆ.

3.  ಕಾಲಿನ ಉದ್ದ: ಪರ್ವತ ದ ಮೇಕೆಗಳು ಚಿಕ್ಕದಾದ, ದೃಢವಾದ ಕಾಲುಗಳನ್ನು ಹೊಂದಿರುತ್ತವೆ, ಅಸಮ ಭೂಪ್ರದೇಶದಲ್ಲಿ ಸ್ಥಿರತೆಯನ್ನು ಒದಗಿಸುತ್ತವೆ, ಆದರೆ ಬಯಲು ಪ್ರದೇಶದ ಮೇಕೆಗಳು ಉದ್ದವಾದ ಕಾಲುಗಳನ್ನು ಹೊಂದಿರುತ್ತವೆ, ಅವುಗಳಿಗೆ ವೇಗ ಮತ್ತು ಚುರುಕುತನವನ್ನು ನೀಡುತ್ತವೆ.

4. ನಡವಳಿಕೆ: ಪರ್ವತದ ಮೇಕೆಗಳು ಒಂಟಿಯಾಗಿರುತ್ತವೆ ಮತ್ತು ಹೆಚ್ಚು ಪ್ರಾದೇಶಿಕವಾಗಿರುತ್ತವೆ, ಆದರೆ ಬಯಲು ಪ್ರದೇಶದ ಮೇಕೆಗಳು ರಕ್ಷಣೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಹಿಂಡುಗಳಲ್ಲಿ ವಾಸಿಸುತ್ತವೆ.

5. ಅಧ್ಯಾಯದಲ್ಲಿ ಚರ್ಚಿಸಲಾದ ಗುಣಗಳನ್ನು ಬಿಟ್ಟು ಇತರ ಯಾವುದೇ ಗುಣವನ್ನು ಆಧರಿಸಿ ಈ ಕೆಳಗಿನ ಪ್ರಾಣಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಿ,

ಹಸು, ಜಿರಳೆ, ಪಾರಿವಾಳ, ಬಾವಲಿ, ಆಮೆ, ತಿಮಿಂಗಿಲ, ಮೀನು. ಮಿಡತೆ. ಮಿಡತೆ, ಹಲ್ಲಿ.

ಮರಿ ಹಾಕುವ ಪ್ರಾಣಿಗಳು …ಹಸು,ಬಾವಲಿ,ತಿಮಿಂಗಿಲ

ಮೊಟ್ಟೆ ಇಡುವ ಪ್ರಾಣಿಗಳು…ಜಿರಳೆ,ಪಾರಿವಾಳ,ಆಮೆ,ಮೀನು, ಮಿಡತೆ, ಹಲ್ಲಿ.

6. ಜನಸಂಖ್ಯೆಯು ಹೆಚ್ಚಾದಂತೆ ಮತ್ತು ಜನರು ಹೆಚ್ಚು  ಆರಾಮದಾಯಕ ಜೀವನವನ್ನು ಬಯಸಿದಂತೆಲ್ಲಾ, ವಿವಿಧ ಅಗತ್ಯತೆಗಳನ್ನು ಪೂರೈಸಲು ಕಾಡುಗಳನ್ನು ಕತ್ತರಿಸಲಾಗುತ್ತಿದೆ. ಇದು ನಮ್ಮ ಸುತ್ತಲಿನ ಪರಿಸರದ ಮೇಲೆ ಯಾವ ಪರಿಣಾಮ ಬೀರಬಹುದು? ಈ ಸವಾಲನ್ನು ನಾವು ಹೇಗೆ ಎದುರಿಸಬಹುದು ಎಂದು ನೀವು ಆಲೋಚಿಸುತ್ತೀರಿ?

ಜನಸಂಖ್ಯೆ ಹೆಚ್ಚಿದ ಹಾಗೆ ಕಾಡುಗಳನ್ನು ಕತ್ತರಿಸಲಾಗುತ್ತದೆ ಮತ್ತು ಇದರಿಂದ ಜನರಿಗೆ ಉತ್ತಮ ಗಾಳಿ ನೀರು ಸಿಗದ ಹಾಗೆ ಆಗುತ್ತದೆ ಮಳೆಯು ಕಡಿಮೆಯಾಗುತ್ತದೆ ಮತ್ತು  ಹವಾಮಾನ ವೈಪರೀತ್ಯಗಳು ಉಂಟಾಗಬಹುದು. ಕಾಡಿನಿಂದ ಸಿಗುವ ಸಂಪತ್ತು ಸಿಗುವುದಿಲ್ಲ.

ಇದನ್ನು ತಪ್ಪಿಸಲು ಕಾಡನ್ನು ಕಡಿಯುವುದನ್ನು ನಿಲ್ಲಿಸಬೇಕು ಮತ್ತು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವ ಪ್ರಯತ್ನ ನಡೆಸಬೇಕು ಸರ್ಕಾರದಿಂದ ಹಿಡಿದು ಸಾಮಾನ್ಯ ಪ್ರಜೆಗಳವರೆಗೆ ಕಾಡು ಬೆಳೆಸುವ ಬಗ್ಗೆ ಗಮನಹರಿಸಬೇಕು.

7. ಈ ಕೆಳಗಿನ ಹರಿವು ನಕ್ಷೆಯನ್ನು ವಿಶ್ಲೇಷಿಸಿ. ‘ಎ’  ‘ಬಿ’ಗಳಿಗೆ ಯಾವುದು ಉದಾಹರಣೆಗಳಾಗಬಹುದು?

ಎ……  ತೊಗರಿ, ಅಲಸಂದೆ, ಆಲ, ಬೇವು,ಅರಳಿ, ಟೊಮೆಟೊ  ಗಿಡ,ಬದನೆಕಾಯಿ ಗಿಡ, ಶೇಂಗಾ

ಬಿ…… ತೆಂಗು, ಮೆಕ್ಕೆಜೋಳ, ಕಬ್ಬು,ರಾಗಿ ,ಜೋಳ, ಗೋಧಿ, ಇತ್ಯಾದಿ

8. ರಾಜ್ ತನ್ನ ಸ್ನೇಹಿತ ಸಂಜಯ್ ಜೊತೆ “ದಾಸವಾಳ (Hibiscus) ಸಸ್ಯವು ಒಂದು ಪೊದೆಯಾಗಿದೆ” ಎಂದು ವಾದಿಸುತ್ತಾನೆ. ಸ್ಪಷ್ಟಿಕರಣಕ್ಕಾಗಿ ಸಂಜಯ್ ಯಾವ ಪ್ರಶ್ನೆಗಳನ್ನು ಕೇಳಬಹುದು?

ದಾಸವಾಳ ಸಸ್ಯದ ರೆಂಬೆಗಳು ಭೂಮಿಯ ಸಮೀಪ ದಲ್ಲಿವೆಯೋ ಅಥವಾ ಬೆಳೆದ ಕಾಂಡದ ಮೇಲೆ ಇವೆಯೋ ?

ದಾಸವಾಳ ಸಸ್ಯವೂ ಎಷ್ಟು ಎತ್ತರದಲ್ಲಿದೆ ?ಮರಗಳ ಹಾಗೆ ಎತ್ತರ ಇದೆಯೇ? ರಾಗಿ ಜೋಳದ ಹಾಗೆ ಸಣ್ಣ ಸಸ್ಯವೋ?

9. ಕೋಷ್ಟಕದಲ್ಲಿನ ಮಾಹಿತಿಯನ್ನು ಆಧರಿಸಿ, ಪ್ರತಿ ಗುಂಪಿನ ಸಸ್ಯಗಳಿಗೆ ಉದಾಹರಣೆಗಳನ್ನು ಕಂಡುಕೊಳ್ಳಿ.

ಗುಂಪು….ಎ…ದ್ವಿದಳ……ತಾಯಿಬೇರು

ಉದಾಹರಣೆಗಳು… ಶೇಂಗಾ, ತೊಗರಿ, ಅಲಸಂದೆ, ಕಡ್ಲೆ, ಹೆಸರು, ಉದ್ದು ,

ಬಿ….ಏಕದಳ…ತಂತುಬೇರು

ಉದಾಹರಣೆಗಳು… ರಾಗಿ, ಜೋಳ, ಮೆಕ್ಕೆಜೋಳ, ಸಜ್ಜೆ, ಗೋಧಿ,ನವಣೆ.

(ಎ) A ಗುಂಪಿನ ಸಸ್ಯಗಳು ಇತರೆ ಯಾವ ಹೋಲಿಕೆಗಳನ್ನು ಹೊಂದಿವೆ?

ಎ ಗುಂಪಿನ ಸಸ್ಯಗಳು ತಮ್ಮ ಎಲೆಗಳಲ್ಲಿ ಜಾಲ ಬಂಧ ನಾಳ ವಿನ್ಯಾಸವನ್ನು ಹೊಂದಿವೆ.

(ಬಿ) B ಗುಂಪಿನ ಸಸ್ಯಗಳು ಇತರೆ ಯಾವ ಹೋಲಿಕೆಯನ್ನು ಹೊಂದಿವೆ?

ಬಿ ಗುಂಪಿನ ಸಸ್ಯಗಳು ತಮ್ಮ ಎಲೆಗಳಲ್ಲಿ ಸಮಾಂತರ ನಾಳ ಬಂಧ ವಿನ್ಯಾಸವನ್ನು ಹೊಂದಿವೆ.

10. ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಬಾತುಕೋಳಿಯ ಗುರುತಿಸಿದ ಭಾಗವನ್ನು ಅವಲೋಕಿಸಿ. ಇತರ ಪಕ್ಷಿಗಳಿಗೆ ಹೋಲಿಸಿದರೆ ಬಾತುಕೋಳಿಯ ಪಾದಗಳಲ್ಲಿ ನೀವು ಯಾವ ವ್ಯತ್ಯಾಸಗಳನ್ನು ಗಮನಿಸುತ್ತೀರಿ? ಈ ಭಾಗವನ್ನು ಬಳಸಿಕೊಂಡು ಬಾತುಕೋಳಿಗೆ ಯಾವ ಚಟುವಟಿಕೆಯನ್ನು  ನಿರ್ವಹಿಸಲು ಸಾಧ್ಯವಾಗುತ್ತದೆ?

ಇತರ ಪಕ್ಷಿಗಳಲ್ಲಿ ಕಾಲುಗಳ ಬೆರಳುಗಳ ನಡುವೆ ಚರ್ಮ ಇರುವುದಿಲ್ಲ. ಆದರೆ ಬಾತುಕೋಳಿಯು ಕಾಲಿನ ಬೆರಳುಗಳ ನಡುವೆ ಅಗಲವಾದ ಚರ್ಮವಿದೆ. ಈ ಚರ್ಮ ಇರುವ ಪಾದಗಳ ಸಹಾಯದಿಂದ ಅದು ನೀರಿನಲ್ಲಿ ಈಜುತ್ತದೆ.

6ನೇ ತರಗತಿ ವಿಜ್ಞಾನ ಅಧ್ಯಾಯ 3 ನೋಟ್ಸ್/ ಪ್ರಶ್ನೋತ್ತರಗಳು

ಮನದುಂಬಿದ ಊಟ, ಸ್ವಸ್ಥ ಶರೀರಕ್ಕೆ ಸೋಪಾನ

೧. ಭಿನ್ನವಾದುದನ್ನು ಆರಿಸಿ ಮತ್ತು ಕಾರಣಗಳನ್ನು ಕೊಡಿ:
(i) ಜೋಳ, ಸಜ್ಜೆ, ರಾಗಿ, ಕಡಲೆ…..ಕಡಲೆ
(ii) ರಾಜ್ಮಾ, ಹೆಸರು ಕಾಳು, ಸೋಯಾಬೀನ್, ಅಕ್ಕಿ…….. ಅಕ್ಕಿ

೨. ಭಾರತದಲ್ಲಿನ ಸಾಂಪ್ರದಾಯಿಕ ಮತ್ತು ಆಧುನಿಕ ಪಾಕಪದ್ಧತಿಗಳನ್ನು ಚರ್ಚಿಸಿ.

ಬಹುತೇಕವಾಗಿ ಅಡುಗೆಯನ್ನು ಸಾಂಪ್ರದಾಯಿಕ ಸೌದೆ ಒಲೆ ಬಳಸಿ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ನಮ್ಮಲ್ಲಿ ಹೆಚ್ಚಿನವರು ಆಧುನಿಕ ಅನಿಲ ಒಲೆ ಬಳಸಿ ಅಡುಗೆ ಮಾಡುತ್ತಾರೆ . ಈ ಮೊದಲು, ಬಹುತೇಕ ರುಬ್ಬುವಿಕೆಯನ್ನು ದುಂಡಿ (ಅರೆಯುವ ಕಲ್ಲು) ಯನ್ನು ಬಳಸಿ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಸುಲಭ ರುಬ್ಬುವಿಕೆಗಾಗಿ ನಾವು ಮಿಕ್ಸರ್ ,ವಿದ್ಯುತ್ ಗ್ರೈಂಡರ್ ಅನ್ನು ಬಳಸುತ್ತೇವೆ. ಆಧುನಿಕ ಕಾಲದಲ್ಲಿ ಸುಧಾರಿತ ಕುಕ್ಕರ್ ಸುಧಾರಿತ ಪಾತ್ರೆಗಳನ್ನು ಬಳಸುತ್ತಿದ್ದೇವೆ.ಈ ಬದಲಾವಣೆಗಳು ತಾಂತ್ರಿಕ ಅಭಿವೃದ್ಧಿ, ಸುಧಾರಿತ ಸಾರಿಗೆ ಮತ್ತು ಉತ್ತಮ ಸಂವಹನದಂತಹ ಅಂಶಗಳಿಂದಾಗಿರಬಹುದು.

೩. ಉತ್ತಮ ಆಹಾರವು ಔಷಧವಾಗಿ ಕಾರ್ಯನಿರ್ವಹಿಸಬಹುದು ಎಂದು ಶಿಕ್ಷಕರು ಹೇಳುತ್ತಾರೆ. ರವಿ ಈ ಹೇಳಿಕೆಯ ಬಗ್ಗೆ ಕುತೂಹಲ ಹೊಂದಿದ್ದಾನೆ ಮತ್ತು ಶಿಕ್ಷಕರನ್ನು ಕೇಳಲು ಅವನಲ್ಲಿ ಕೆಲವು ಪ್ರಶ್ನೆಗಳಿವೆ.
ಅವನು ಕೇಳಬಹುದಾದ ಕನಿಷ್ಟ ಎರಡು ಪ್ರಶ್ನೆಗಳನ್ನು ಪಟ್ಟಿ ಮಾಡಿ.

1. ಉತ್ತಮ ಆಹಾರದಿಂದ ಯಾವ ಯಾವ ಕಾಯಿಲೆಗಳು ಬರದ ಹಾಗೆ ತಡೆಗಟ್ಟಬಹುದು ಸರ್?
2.ನೆಗಡಿ ಮತ್ತು ಕೆಮ್ಮಿಗೆ ಔಷಧವಾಗಿ ಯಾವ ಆಹಾರವನ್ನು ಸೇವಿಸಬಹುದು ಸರ್?

೪. ಎಲ್ಲಾ ರುಚಿಕರವಾದ ಆಹಾರಗಳು ಆರೋಗ್ಯಕರವಲ್ಲ. ಅಂತೆಯೇ, ಎಲ್ಲಾ ಪೌಷ್ಟಿಕ ಆಹಾರಗಳೂ
ಯಾವಾಗಲೂ ಆನಂದದಾಯಕವಲ್ಲ. ಕೆಲವು ಉದಾಹರಣೆಗಳೊಂದಿಗೆ ನಿಮ್ಮ ಆಲೋಚನೆಗಳನ್ನು
ಹಂಚಿಕೊಳ್ಳಿ.

ಫಾಸ್ಟ್ ಫುಡ್ ಗಳಾದ ಗೋಬಿ ಮಂಚೂರಿ, ಪಾನಿಪುರಿ, ಪಿಜ್ಜಾ, ಬರ್ಗರ್ ಮುಂತಾದವು ಬಾಯಿಗೆ ರುಚಿಯೇ ಹೊರತು ಇವು ಆರೋಗ್ಯವನ್ನು ಕೆಡಿಸುತ್ತವೆ. ಜೊತೆಗೆ ಹೊಟ್ಟೆಯೂ ತುಂಬುವುದಿಲ್ಲ.

ಆದರೆ ಪೌಷ್ಟಿಕ ಆಹಾರಗಳು ಹೊಟ್ಟೆಯನ್ನು ತುಂಬಿಸುತ್ತದೆ ಜೊತೆಗೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಉತ್ತಮ ಆಹಾರವಾದ ತರಕಾರಿಗಳು ಉದಾಹರಣೆಗೆ ಹಾಗಲಕಾಯಿ ಬಹಳಷ್ಟು ಜನರಿಗೆ ಅದರ ರುಚಿ ಹಿಡಿಸುವುದಿಲ್ಲ. ಆದರೆ ಅದನ್ನು ತಿನ್ನುವುದರಿಂದ ಬಹಳಷ್ಟು ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ.

೫. ಮೇದೂ ತರಕಾರಿಗಳನ್ನು ಸೇವಿಸುವುದಿಲ್ಲ. ಆದರೆ. ಬಿಸ್ಕತ್ತು. ನೂಡಲ್ಸ್ ಮತ್ತು ಬಿಳಿ ಬ್ರೆಡ್ ಅನ್ನು
ಆಸ್ವಾದಿಸುತ್ತಾನೆ. ಅವನಿಗೆ ಆಗಾಗ್ಗೆ ಹೊಟ್ಟೆನೋವು ಮತ್ತು ಮಲಬದ್ಧತೆ ಉಂಟಾಗುತ್ತದೆ. ಈ
ಸಮಸ್ಯೆಗಳನ್ನು ನಿವಾರಿಸಲು ಅವನು ತನ್ನ ಆಹಾರದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು?
ನಿಮ್ಮ ಉತ್ತರವನ್ನು ವಿವರಿಸಿ.

ಬಿಸ್ಕತ್ತು ಬಿಳಿ ಬ್ರೆಡ್ ಮತ್ತು ನೂಡಲ್ಸ್ ಗಳನ್ನು ಕೇವಲ ಮೈದಾಹಿಟ್ಟಿನಿಂದ ಮಾಡಿರುತ್ತಾರೆ. ಮೈದಾ ಹಿಟ್ಟಿನಲ್ಲಿ ಸ್ವಲ್ಪ ವೂ ನಾರಿನ ಅಂಶ ಇರುವುದಿಲ್ಲ. ಹಾಗಾಗಿ ಈ ಮೇಲಿನ ವಿದ್ಯಾರ್ಥಿಯು ನಾರಿನ ಅಂಶ ಇರುವ ಆಹಾರಗಳಾದ ತರಕಾರಿಗಳು, ಧಾನ್ಯಗಳು ಹಣ್ಣುಗಳನ್ನು ತಿನ್ನಬೇಕು.

೬. ಮಂದ ಬೆಳಕಿನಲ್ಲಿ ವಸ್ತುಗಳನ್ನು ನೋಡಲು ರೇಷ್ಮಾಗೆ ತೊಂದರೆಯಾಯಿತು. ವೈದ್ಯರು ಅವಳ
ದೃಷ್ಟಿಯನ್ನು ಪರೀಕ್ಷಿಸಿದರು ಮತ್ತು ನಿರ್ದಿಷ್ಟ ಜೀವಸತ್ವ ಪೂರಕವನ್ನು ಸೂಚಿಸಿದರು. ಅವಳ ದೈನಂದಿನ
ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವಂತೆ ಅವರು ಸಲಹೆ ನೀಡಿದರು.
(i) ಅವಳು ಯಾವ ನ್ಯೂನತಾ ಕಾಯಿಲೆಯಿಂದ ಬಳಲುತ್ತಿದ್ದಾಳೆ?
ಅವಳು ರಾತ್ರಿ ಕುರುಡುತನ ರೋಗದಿಂದ ನರಳುತ್ತಿದ್ದಾಳೆ.

(ii) ಅವಳ ದೈನಂದಿನ ಆಹಾರದಲ್ಲಿ ಯಾವ ಪೋಷಕಾಂಶದ ಕೊರತೆಯಿರಬಹುದು?

ಅವಳ ದೈನಂದಿನ ಆಹಾರದಲ್ಲಿ ವಿಟಮಿನ್ ಎ ಕೊರತೆ ಇದೆ.

(iii) ಈ ಸಮಸ್ಯೆಯನ್ನು ನಿವಾರಿಸಲು ಅವಳು ತನ್ನ ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಕೆಲವು
ಆಹಾರ ಪದಾರ್ಥಗಳನ್ನು ಸೂಚಿಸಿ (ಯಾವುದಾದರೂ ನಾಲ್ಕು).

ಪಪ್ಪಾಯಿ, ಕ್ಯಾರೆಟ್,
ಮಾವು, ಹಾಲು

೭. ನಿಮಗೆ ಈ ಕೆಳಗಿನವುಗಳನ್ನು ಒದಗಿಸಲಾಗಿದೆ.
(i) ಸಂಸ್ಕರಿಸಿದ ಹಣ್ಣಿನ ರಸ
(ii) ತಾಜಾ ಹಣ್ಣಿನ ರಸ
(iii) ತಾಜಾ ಹಣ್ಣು
ಇವುಗಳಲ್ಲಿ ನೀವು ಯಾವುದಕ್ಕೆ ಆದ್ಯತೆ ನೀಡುವಿರಿ ಮತ್ತು ಏಕೆ?

ಮೂರನೇ ಕ್ರಮ ಸಂಖ್ಯೆಯಲ್ಲಿನ ತಾಜಾ ಹಣ್ಣಿಗೆ ನಾನು ಆದ್ಯತೆಯನ್ನು ನೀಡುತ್ತೇನೆ. ಏಕೆಂದರೆ ತಾಜಾ ಹಣ್ಣಿನಲ್ಲಿ ನಾರಿನ ಅಂಶದ ಜೊತೆಗೆ ಇತರ ಎಲ್ಲಾ ನೈಸರ್ಗಿಕ ಪೋಷಕಾಂಶಗಳು ಕೂಡಿರುತ್ತವೆ. ರಾಜ ಹಣ್ಣನ್ನು ಹಣ್ಣಿನ ರಸ ಮಾಡಿದಾಗ ಅದರಲ್ಲಿನ ಸಾಕಷ್ಟು ಪೋಷಕಾಂಶಗಳು ಕಳೆದುಹೋಗುವ ಸಾಧ್ಯತೆ ಇರುತ್ತದೆ.

೮. ಗೌರವ್ ಅವರ ಕಾಲಿನ ಮೂಳೆ ಮುರಿತವಾಗಿದೆ. ಅವರ ವೈದ್ಯರು ಮೂಳೆಗಳನ್ನು ಜೋಡಿಸಿ ಪ್ಲಾಸ್ಟರ್
ಹಾಕಿದರು. ವೈದ್ಯರು ಅವರಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನೂ ಸಹ ನೀಡಿದರು. ಎರಡನೇ ಭೇಟಿಯಲ್ಲಿ,
ವೈದ್ಯರು ಕ್ಯಾಲ್ಸಿಯಂ ಮಾತ್ರೆಗಳೊಂದಿಗೆ ಜೀವಸತ್ವ `ಡಿ’ ಸಿರಪ್ ನೀಡಿದರು. ಚಿತ್ರ ೩.೫ನ್ನು ನೋಡಿ ಈ
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
(i) ವೈದ್ಯರು ಗೌರವ್‌ಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ಏಕೆ ಕೊಟ್ಟರು?

ಏಕೆಂದರೆ ಕ್ಯಾಲ್ಸಿಯಂ ಖನಿಜವು ನಮ್ಮ ದೇಹದಲ್ಲಿನ ಮೂಳೆಗಳು ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳು ಗಟ್ಟಿಯಾಗಲು ಹೊಸದಾಗಿ ಮೂಳೆಗಳು ಬೆಳೆಯಲು ಕ್ಯಾಲ್ಸಿಯಂ ಬೇಕೇ ಬೇಕು.

(ii) ಎರಡನೆಯ ಭೇಟಿಯಲ್ಲಿ. ವೈದ್ಯರು ಕ್ಯಾಲ್ಸಿಯಂ ಮಾತ್ರೆಗಳ ಜೊತೆಗೆ ಜೀವಸತ್ವ `ಡಿ’ ಸಿರಪ್‌ನ್ನು
ಏಕೆ ನೀಡಿದರು?

ಏಕೆಂದರೆ ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ, ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಜೀವ ಸತ್ವ ಡಿ ದೇಹಕ್ಕೆ ಸಹಾಯ ಮಾಡುತ್ತದೆ .

(iii) ಔಷಧಿಗಳನ್ನು ನೀಡುವಲ್ಲಿ ವೈದ್ಯರು ಮಾಡುವ ಆಯ್ಕೆಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆ ಉದ್ಭವಿಸುತ್ತದೆ?

ವೈದ್ಯರು ನೀಡುವ ಔಷಧಿಗಳು ನಮ್ಮ ದೇಹದಲ್ಲಿ ಕೊರತೆಯಾದ ಪೋಷಕಾಂಶಗಳ ಬಗೆಗಿನ ಕೊಡುತ್ತಾರಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.

೯. ಸಕ್ಕರೆ ಕಾರ್ಬೋಹೈಡ್ರೇಟ್‌ಗಳಿಗೆ ಒಂದು ಉದಾಹರಣೆಯಾಗಿದೆ. ಸಕ್ಕರೆಯನ್ನು ಅಯೋಡಿನ್
ದ್ರಾವಣದಿಂದ ಪರೀಕ್ಷಿಸಲಾಗುತ್ತದೆ. ಆದರೆ, ಅದು ನೀಲಿ-ಕಪ್ಪು ಬಣ್ಣಕ್ಕೆ ಬದಲಾಗುವುದಿಲ್ಲ. ಇದಕ್ಕೆ
ಸಂಭಾವ್ಯ ಕಾರಣವೇನಿರಬಹುದು?

ಸಕ್ಕರೆಯು ಸರಳ ಕಾರ್ಬೋಹೈಡ್ರೇಟ್ ಆಗಿದ್ದು ಅದರಲ್ಲಿ ಪಿಷ್ಟವಿರುವುದಿಲ್ಲ. ಅಯೋಡಿನ್ ದ್ರಾವಣವು ಪಿಷ್ಟದ ಇರುವಿಕೆಯನ್ನು ಪರೀಕ್ಷೆ ಮಾಡುವುದೇ ವಿನಹ ಸಕ್ಕರೆಯಂತಹ ಸರಳ ಕಾರ್ಬೋಹೈಡ್ರೇಟನ್ನು ಪರೀಕ್ಷಿಸುವುದಿಲ್ಲ. ಹಾಗಾಗಿ ಸಕ್ಕರೆಗೆ ಅಯೋಡಿನ್ ದ್ರಾವಣ ಹಾಕಿದಾಗ ಅದು ನೀಲಿ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ.

೧೦. “ಎಲ್ಲಾ ಪಿಷ್ಟಗಳು ಕಾರ್ಬೋಹೈಡ್ರೇಟ್‌ಗಳಾಗಿವೆ ಆದರೆ ಎಲ್ಲಾ ಕಾರ್ಬೋಹೈಡ್ರೇಟ್‌ಗಳು ಪಿಷ್ಟಗಳಲ್ಲ”
ಎಂಬ ರಾಮನ್ ಅವರ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಉತ್ತರವನ್ನು ಪರೀಕ್ಷಿಸಲು
ಒಂದು ಚಟುವಟಿಕೆಯನ್ನು ವಿನ್ಯಾಸಗೊಳಿಸಿ.

ರಾಮನ್ ಅವರ ಹೇಳಿಕೆಯ ಅರ್ಥವೇನೆಂದರೆ, ಎಲ್ಲಾ ಪಿಷ್ಟಗಳು ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದರೂ, ಪಿಷ್ಟವಲ್ಲದ ಇತರ ಕಾರ್ಬೋಹೈಡ್ರೇಟ್‌ಗಳು ಇವೆ. ಇದನ್ನು ಪರೀಕ್ಷಿಸಲು, ಸಕ್ಕರೆ, ಅಕ್ಕಿ ಮತ್ತು ಆಲೂಗಡ್ಡೆಯಂತಹ ಮಾದರಿಗಳನ್ನು ಸಂಗ್ರಹಿಸಿ. ಪ್ರತಿ ಮಾದರಿಗೆ ಅಯೋಡಿನ್ ದ್ರಾವಣವನ್ನು ಸೇರಿಸುವ ಮೂಲಕ ಅಯೋಡಿನ್ ಪರೀಕ್ಷೆಯನ್ನು ಮಾಡಿ. ಮಾದರಿಯು ನೀಲಿ-ಕಪ್ಪು ಬಣ್ಣಕ್ಕೆ ತಿರುಗಿದರೆ, ಅದು ಪಿಷ್ಟವನ್ನು ಹೊಂದಿರುತ್ತದೆ. ಪಿಷ್ಟಗಳು ಮಾತ್ರ ಈ ಬಣ್ಣ ಬದಲಾವಣೆಯನ್ನು ತೋರಿಸುತ್ತವೆ, ಆದರೆ ಇತರ ಕಾರ್ಬೋಹೈಡ್ರೇಟ್‌ಗಳು (ಸಕ್ಕರೆಯಂತೆ) ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಎಲ್ಲಾ ಕಾರ್ಬೋಹೈಡ್ರೇಟ್‌ಗಳು ಪಿಷ್ಟಗಳಲ್ಲ ಎಂದು ಇದು ತೋರಿಸುತ್ತದೆ.

೧೧. ಪ್ರಯೋಗಾಲಯದಲ್ಲಿ ಅಯೋಡಿನ್ ಬಳಸುವಾಗ ಕೆಲವು ಹನಿ ಅಯೋಡಿನ್ ಮಿಷ್ಟಿಯ ಕಾಲುಚೀಲಗಳ ಮೇಲೆ ಬಿದ್ದಿತು ಮತ್ತು ಕೆಲವು ಹನಿ ಅವಳ ಶಿಕ್ಷಕಿಯ ಸೀರೆಯ ಮೇಲೆ ಬಿದ್ದವು. ಸೀರೆಯ ಮೇಲಿನ ಅಯೋಡಿನ್ ಹನಿಗಳು ನೀಲಿ-ಕಪ್ಪು ಬಣ್ಣಕ್ಕೆ ತಿರುಗಿದರೆ, ಕಾಲುಚೀಲಗಳ ಮೇಲಿನ ಬಣ್ಣ ಬದಲಾಗಲಿಲ್ಲ. ಇದಕ್ಕೆ ಸಂಭಾವ್ಯ ಕಾರಣವೇನಿರಬಹುದು?

ಮಿಷ್ಟಿಯ ಶಿಕ್ಷಕಿಯ  ಸೀರೆಯಲ್ಲಿ ಪಿಷ್ಟವಿದ್ದು, ಇದನ್ನು ಬಟ್ಟೆಯ ತಯಾರಿಕೆಯ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿರಬಹುದು. ಪಿಷ್ಟವು ಅಯೋಡಿನ್‌ನೊಂದಿಗೆ ಪ್ರತಿಕ್ರಿಯಿಸಿ ನೀಲಿ-ಕಪ್ಪು ಬಣ್ಣವನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, ಮಿಷ್ಟಿಯ ಸಾಕ್ಸ್‌ಗಳಲ್ಲಿ ಪಿಷ್ಟ ಇರುವುದಿಲ್ಲ. ಆದ್ದರಿಂದ ಅವುಗಳ ಮೇಲೆ ಬಿದ್ದ ಅಯೋಡಿನ್ ಹನಿಗಳ  ಬಣ್ಣ ಬದಲಾವಣೆಯಾಗುವುದಿಲ್ಲ.

೧೨. ಸಿರಿಧಾನ್ಯಗಳನ್ನು ಆರೋಗ್ಯಕರ ಆಹಾರದ ಆಯ್ಕೆ ಎಂದು ಏಕೆ ಪರಿಗಣಿಸಲಾಗುತ್ತದೆ? ದೇಹದ
ಪೋಷಕಾಂಶದ ಅವಶ್ಯಕತೆಗಳಿಗೆ ಕೇವಲ ಸಿರಿಧಾನ್ಯಗಳನ್ನು ಸೇವಿಸುವುದು ಸಾಕಾಗುತ್ತದೆಯೇ? ಚರ್ಚಿಸಿ.

ಸಿರಿಧಾನ್ಯಗಳು ಆರೋಗ್ಯಕರ ಆಹಾರದ ಆಯ್ಕೆಯೆಂದು ಪರಿಗಣಿಸಲಾಗಿದೆ ಏಕೆಂದರೆ ಅವು ಜೀವಸತ್ವಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಮತ್ತು ನಾರು ಪದಾರ್ಥಗಳಿಂದ ಸಮೃದ್ಧವಾಗಿರುವ ಹೆಚ್ಚು ಪೌಷ್ಟಿಕ ಧಾನ್ಯಗಳಾಗಿವೆ. ನಮ್ಮ ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂತುಲಿತ ಆಹಾರಕ್ಕೆ ಅವು ಗಮನಾರ್ಹ ಕೊಡುಗೆ ನೀಡುತ್ತವೆ.

ಆದಾಗ್ಯೂ, ಸಂತುಲಿತ ಆಹಾರಕ್ಕೆ ಪ್ರೋಟೀನ್‌ಗಳು, ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳಂತಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒದಗಿಸಲು ವಿವಿಧ ರೀತಿಯ ಆಹಾರಗಳು ಬೇಕಾಗುವುದರಿಂದ, ಸಿರಿಧಾನ್ಯಗಳನ್ನು ಮಾತ್ರ ತಿನ್ನುವುದು ದೇಹದ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ.

೧೩. ನಿಮಗೆ ಒಂದು ದ್ರಾವಣದ ಮಾದರಿಯನ್ನು ನೀಡಿದೆ. ಇದು ಅಯೋಡಿನ್ ದ್ರಾವಣವಾಗಿರುವ ಸಾಧ್ಯತೆಯನ್ನು ನೀವು ಹೇಗೆ ಪರೀಕ್ಷಿಸುವಿರಿ ?

ಒಂದು ದ್ರಾವಣವು ಅಯೋಡಿನ್ ಆಗಿದೆಯೇ ಎಂದು ಪರಿಶೀಲಿಸಲು, ಪಿಷ್ಟ ಪರೀಕ್ಷೆಯನ್ನು ಮಾಡಿ. ಆಲೂಗಡ್ಡೆ ಅಥವಾ ಬ್ರೆಡ್‌ನ ಹೋಳುಗಳಂತಹ ಪಿಷ್ಟವನ್ನು ಹೊಂದಿರುವ ಆಹಾರ ಪದಾರ್ಥದ ತುಂಡನ್ನು ತೆಗೆದುಕೊಳ್ಳಿ. ದ್ರಾವಣದ ಕೆಲವು ಹನಿಗಳನ್ನು ಆಹಾರ ಪದಾರ್ಥದ ಮೇಲೆ ಇರಿಸಿ. ದ್ರಾವಣವು ಅಯೋಡಿನ್ ಆಗಿದ್ದರೆ, ಅದು ಆಹಾರದಲ್ಲಿನ ಪಿಷ್ಟದೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನೀಲಿ-ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಬಣ್ಣ ಬದಲಾವಣೆಯು ದ್ರಾವಣದಲ್ಲಿ ಅಯೋಡಿನ್ ಇರುವಿಕೆಯನ್ನು ಖಚಿತಪಡಿಸುತ್ತದೆ

ಕಾಂತಗಳ ಅನ್ವೇಷಣೆ

 6ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ಪ್ರಶ್ನೋತ್ತರಗಳು

೧. ಬಿಟ್ಟ ಸ್ಥಳ ತುಂಬಿರಿ
i) ಕಾಂತದ ವಿಜಾತೀಯ ಧ್ರುವಗಳು ಪರಸ್ಪರ<span;>  ಆಕರ್ಷಿಸುತ್ತವೆ. <span;>ಆದರೆ, ಸಜಾತೀಯ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ .
ii) ಕಾಂತದೆಡೆಗೆ ಆಕರ್ಷಣೆಗೆ ಒಳಗಾಗುವ ವಸ್ತುಗಳನ್ನು<span;> ಕಾಂತೀಯ <span;>ವಸ್ತುಗಳು ಎನ್ನುವರು.
iii) ಕಾಂತೀಯ ದಿಕ್ಸೂಚಿಯ ಸೂಜಿಯು ಯಾವಾಗಲೂ <span;>ಉತ್ತರ ದಕ್ಷಿಣ <span;>ದಿಕ್ಕಿನಲ್ಲಿ ವಿಶ್ರಾಂತ
ಸ್ಥಿತಿಗೆ ಬರುತ್ತದೆ.
iv) ಕಾಂತಗಳು ಯಾವಾಗಲೂ 2 ಧ್ರುವಗಳನ್ನು ಹೊಂದಿರುತ್ತವೆ.
೨. ಈ ಕೆಳಗಿನ ಹೇಳಿಕೆಗಳು ಸರಿಯೇ () ತಪ್ಪೇ (ಈ) ತಿಳಿಸಿ.

i) ಕಾಂತವನ್ನು ಹಲವು ತುಂಡುಗಳನ್ನಾಗಿ ಮಾಡಿ ಒಂದು ಧ್ರುವವನ್ನು ಪಡೆಯಬಹುದು. [F ]

ii) ಕಾಂತದ ಸಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ. [F ]

iii) ದಂಡಕಾಂತವನ್ನು ಕಬ್ಬಿಣದ ರಜಗಳ ಬಳಿ ಹಿಡಿದಾಗ ಕಬ್ಬಿಣದ ರಜಗಳು ಕಾಂತದ ಮಧ್ಯ ಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತವೆ. [ F]

iv) ಸ್ವತಂತ್ರವಾಗಿ ತೂಗುಬಿಟ್ಟ ದಂಡಕಾಂತವು ಯಾವಾಗಲೂ ಉತ್ತರ-ದಕ್ಷಿಣ ದಿಕ್ಕಿನಲ್ಲಿ ವಿಶ್ರಾಂತ
ಸ್ಥಿತಿಗೆ ಬರುತ್ತದೆ. [T ]

೩. ಪಟ್ಟಿ-೧ ರಲ್ಲಿ ಒಂದು ಕಾಂತ ಧ್ರುವದ ಬಳಿ ಇನ್ನೊಂದು ಕಾಂತ ಧ್ರುವವನ್ನಿಟ್ಟು ವಿವಿಧ ಸನ್ನಿವೇಶಗಳನ್ನು ತೋರಿಸಲಾಗಿದೆ. ಪಟ್ಟಿ-೨ ರಲ್ಲಿ ಅವುಗಳ ನಡುವಿನ ವಿವಿಧ ಅನುಕ್ರಮೆಯನ್ನು ತೋರಿಸಿದೆ.

ಬಿಟ್ಟ ಸ್ಥಳ ತುಂಬಿರಿ.

ಉತ್ತರ

N-N….. ವಿಕರ್ಷಣೆ
N-S……. ಆಕರ್ಷಣೆ
S-N.,…..ಆಕರ್ಷಣೆ
N-S……. ಆಕರ್ಷಣೆ

೪. ಅಥರ್ವನು ಒಂದು ದಂಡಕಾoತವನ್ನುತೆಗೆದುಕೊಂಡು, ಸ್ಟೀಲ್‌ನ U-ಕ್ಲಿಪ್‌ಗಳ ರಾಶಿಯ ಮೇಲೆ ಉರುಳಿಸಿದನು (ಚಿತ್ರ ೪.೧೫). ನಿಮ್ಮ ಪ್ರಕಾರ ಕೋಷ್ಟಕ ೪.೩ ರಲ್ಲಿನ ಯಾವ ಆಯ್ಕೆಯು ಅವನ ಸರಿಯಾದ ವೀಕ್ಷಣೆಯಾಗಿದೆ.

ಉತ್ತರ
ದಂಡಕಾಂತದಿಂದ ಆಕರ್ಷಿತವಾದ ಪಿನ್‌ಗಳ ಸಂಖ್ಯೆ.
ಕ್ರಮ ಸಂಖ್ಯೆ ಒಂದು ಸರಿಯಾದ ಉತ್ತರವಾಗಿದೆ.
A….10
B….2
C…….10

೫. ರೇಷ್ಮಾಳು ಮಾರುಕಟ್ಟೆಯಿಂದ ಮೂರು ಒಂದೇ ರೀತಿಯ ಲೋಹದ ತುಂಡುಗಳನ್ನು ತಂದಳು. ಅವುಗಳಲ್ಲಿ ಎರಡು ಕಾಂತಗಳು ಮತ್ತು ಒಂದು ಕಬ್ಬಿಣದ ತುಂಡು ಇದೆ. ಇವುಗಳಲ್ಲಿ ಯಾವ ಎರಡು ತುಂಡುಗಳು ಕಾಂತ (ಯಾವುದೇ ಇತರ ವಸ್ತು ಬಳಸದೆ) ಎಂದು ಅವಳು ಹೇಗೆ ಪತ್ತೆ ಹಚ್ಚಬಹುದು?

ಆ ಮೂರು ಲೋಹದ ತುಂಡುಗಳನ್ನು ಪ್ರತಿ ಯೊಂದರ ಹತ್ತಿರ ತರಬೇಕು. ಯಾವ ಲೋಹದ ತುಂಡು ಕೇವಲ ಆಕರ್ಷಿಸುತ್ತದೆಯೋ ಮತ್ತು ವಿಕರ್ಷಿಸುವುದಿಲ್ಲವೋ ಅದು ಕಬ್ಬಿಣದ ತುಂಡು. ಮತ್ತು ಯಾವ ಎರಡು ತುಂಡುಗಳು ಪರಸ್ಪರ ವಿಕರ್ಷಿಸುತ್ತವೆಯೋ ಜೊತೆಗೆ  ಆಕರ್ಷಿಸುತ್ತವೆಯೋ ಅಯಸ್ಕಾಂತದ ತುಂಡುಗಳು.

೬. ಧ್ರುವಗಳನ್ನು ಗುರುತಿಸದ ಕಾಂತವೊಂದನ್ನು ನಿಮಗೆ ನೀಡಲಾಗಿದೆ. ಇನ್ನೊಂದು ಕಾಂತದ ಸಹಾಯದಿಂದ
ನೀವು ಹೇಗೆ ಅದರ ಧ್ರುವಗಳನ್ನು ಗುರುತಿಸುವಿರಿ?

ಮೊದಲು ಗುರುತು ಹಾಕದೆ ಇರುವ ಅಯಸ್ಕಾಂತದ ಒಂದು ತುದಿಗೆ, ಉತ್ತರ ಧ್ರುವವೆಂದು ಗುರುತು ಹಾಕಿರುವ ಅಯಸ್ಕಾಂತದ ತುದಿಯನ್ನು ಹತ್ತಿರಕ್ಕೆ ತನ್ನಿ. ಅವೆರಡು ಆಕರ್ಷಿಸಿದರೆ, ನಮ್ಮ ಗುರುತು ಹಾಕದ ಅಯಸ್ಕಾಂತದ ತುದಿಯು ದಕ್ಷಿಣ ಧ್ರುವ ಎಂದು ತಿಳಿಯುತ್ತದೆ. ಇನ್ನೊಂದು ತುದಿಯು ಉತ್ತರ ಧ್ರುವ ವಾಗಿರುತ್ತದೆ. ಅವೆರಡು ವಿಕರ್ಷಿಸಿದರೆ, ಗುರುತು ಹಾಕದ ಅಯಸ್ಕಾಂತದ ತುದಿಯು ಉತ್ತರಧ್ರುವ ಎಂದು ತಿಳಿದು ಬರುತ್ತದೆ.

೭. ಧ್ರುವಗಳನ್ನು ಗುರುತಿಸಿರದ ದಂಡಕಾಂತವೊಂದನ್ನು ನಿಮಗೆ ನೀಡಿದೆ. ಅದರ ಉತ್ತರ ಧ್ರುವವನ್ನು
ಮತ್ತೊಂದು ಕಾಂತ ಬಳಸದೇ ಹೇಗೆ ಗುರುತಿಸುವಿರಿ?

ಆಯಸ್ಕಾಂತವನ್ನು ದಾರದಿಂದ ಸ್ವತಂತ್ರವಾಗಿ ತೂಗುಹಾಕಿ. ಉತ್ತರ ದಿಕ್ಕಿನ ಕಡೆಗೆ ತೋರಿಸುವ ತುದಿಯು ಆಯಸ್ಕಾಂತದ ಉತ್ತರ ಧ್ರುವವಾಗಿದೆ.ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ದಂಡ ಕಾಂತದ ತುದಿಯು ದಕ್ಷಿಣ ಧ್ರುವ ವಾಗಿರುತ್ತದೆ.

೮. ಭೂಮಿಯು ಒಂದು ಕಾಂತವಾದಲ್ಲಿ, ಸೂಜಿಕಾಂತದ ದಿಕ್ಕುಗಳ ಸಹಾಯದಿಂದ ಭೂಕಾಂತದ ಧ್ರುವಗಳನ್ನು ಹೇಗೆ ಗುರುತಿಸಬಲ್ಲಿರಿ?

 ಸೂಜಿಕಾಂತದ ಉತ್ತರ ದಿಕ್ಕಿನ ತುದಿಯು ಭೂಮಿಯ ಭೌಗೋಳಿಕ ಉತ್ತರ ಧ್ರುವದ ಕಡೆಗೆ ತೋರಿಸುತ್ತದೆ. ಇದು ವಾಸ್ತವವಾಗಿ ಭೂಮಿಯ ಕಾಂತೀಯ ದಕ್ಷಿಣ ಧ್ರುವವಾಗಿದೆ. ಸೂಜಿ ಕಾಂತದ ದಕ್ಷಿಣ ದಿಕ್ಕಿನ ತುದಿಯು ಭೂಮಿಯ ಭೌಗೋಳಿಕ ದಕ್ಷಿಣ ಧ್ರುವದ ಕಡೆಗೆ ತೋರಿಸುತ್ತದೆ. ಇದು ವಾಸ್ತವವಾಗಿ ಭೂಮಿಯ ಕಾಂತಿಯ ಉತ್ತರ ಧ್ರುವ ವಾಗಿದೆ.

೯. ಮೆಕ್ಯಾನಿಕ್ ಒಬ್ಬನು ಒಂದು ಉಪಕರಣವನ್ನು ರಿಪೇರಿ
ಮಾಡುತ್ತಿರುವ ಸಂದರ್ಭದಲ್ಲಿ ಸ್ಕ್ರೂಗಳು ಕೆಳಗೆ ಬಿದ್ದು ಹೋಗುತ್ತಿರುತ್ತವೆ. ಈ ಸಮಸ್ಯೆಯನ್ನು ಸರಿಪಡಿಸಲು ನೀವು ಈ ಅಧ್ಯಾಯದಲ್ಲಿ ಕಲಿತ ಅಂಶಗಳ ಆಧಾರದ ಮೇಲೆ ಸಲಹೆ ನೀಡಿ.

ಒಂದು ಆಯಸ್ಕಾಂತವನ್ನು ಇಟ್ಟು ಆ ಎಲ್ಲಾ ಸ್ಕ್ರೂಗಳು ಆಯಸ್ಕಾಂತಕ್ಕೆ ಅಂಟಿಕೊಳ್ಳುತ್ತವೆ ಮತ್ತು ಅವನಿಗೆ ಹುಡುಕುವ ಅಗತ್ಯ ಇರುವುದಿಲ್ಲ.

೧೦. ಚಿತ್ರ ೪.೧೬ ರಲ್ಲಿ X ಮತ್ತು Y ಗಳೆಂಬ ಎರಡು ಉಂಗುರ ಕಾಂತಗಳನ್ನು ಜೋಡಿಸಲಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಕಾಂತ-X, ಕಾಂತ-Y ನತ್ತ ಇಳಿಯುವುದಿಲ್ಲ. ಇದಕ್ಕೆ ಸಾಧ್ಯವಿರುವ
ಕಾರಣಗಳೇನು ? ಕಾಂತ-X, ಕಾಂತ-Y ಅನ್ನು ಸಂಪರ್ಕಿಸುವಂತೆ (ಯಾವುದೇ ಎರಡು ಕಾಂತಗಳನ್ನು ಸ್ಪರ್ಶಿಸದೆ) ಹೇಗೆ ಮಾಡಬಹುದು?

ಕಾಂತ ಎಕ್ಸ್ ಮತ್ತು ವೈ ಗಳೆರಡರ ಮುಖಾಮುಖಿಯಾಗಿರುವ ತುದಿಗಳು ಒಂದೇ ಧ್ರುವ ವಾಗಿರಬೇಕು. ಸಜಾತಿ ಧ್ರುವಗಳು ಎದುರಾಗುತ್ತಿರುವುದರಿಂದ ಅವೆರಡು ವಿಕರ್ಷಣೆಗೊಳಗಾಗಿ ಅವೆರಡು ಸೇರುತ್ತಿಲ್ಲ.

ಈಗ ನಾವು ಎಕ್ಸ್ ಕಾಂತವನ್ನು ಮೇಲೆತ್ತಿ ಉಲ್ಟಾ ಮಾಡಿ, ಹಾಕಿದಾಗ ಎಕ್ಸ್ ಮತ್ತು ವೈ ಕಾಂತಗಳು ಕೂಡುತ್ತವೆ.

೧೧. ಚಿತ್ರ ೪.೧೭ ರಲ್ಲಿ ತೋರಿಸಿರುವ ಆಕೃತಿಯಂತೆ
ಕಾಂತಗಳನ್ನು ಜೋಡಿಸಲಾಗಿದೆ ಅವುಗಳ
ತುದಿ ೧, ೨, ೩, ೪ ಮತ್ತು ೬ ಯಾವ
ಧ್ರುವಗಳಿರಬಹುದು? ನಿಮಗೆ ತುದಿ ೫ ರ
ಧ್ರುವವನ್ನು ನೀಡಲಾಗಿದೆ.

5-ಉತ್ತರ
6-ದಕ್ಷಿಣ
4- ದಕ್ಷಿಣ
3- ಉತ್ತರ
2- ದಕ್ಷಿಣ
1- ಉತ್ತರ

ಉದ್ದ, ಅಳತೆ ಮತ್ತು ಚಲನೆ

ಆರನೇ ತರಗತಿ ವಿಜ್ಞಾನ ಅಧ್ಯಾಯ 5 ನೋಟ್ಸ್ ಪ್ರಶ್ನೋತ್ತರಗಳು

೧. ಕೋಷ್ಟಕ ೫.೫ ರ ಕಂಬಸಾಲು ೧ ರಲ್ಲಿ ಕೆಲವು ಉದ್ದಗಳನ್ನು ನೀಡಲಾಗಿದೆ. ಕೆಲವು ಏಕಮಾನಗಳನ್ನು
ಕಂಬಸಾಲು ೨ ರಲ್ಲಿ ನೀಡಲಾಗಿದೆ. ಉದ್ದವನ್ನು ಅಳತೆ ಮಾಡುವ ಸೂಕ್ತ ಏಕಮಾನಗಳೊಂದಿಗೆ
ಅವುಗಳನ್ನು ಹೊಂದಿಸಿ.
ಉತ್ತರ
ದೆಹಲಿ ಮತ್ತು ಲಕ್ನೋಗಿರುವ ದೂರ…ಕಿಲೋಮೀಟರ್
ನಾಣ್ಯದ ದಪ್ಪ …ಮಿಲಿಮೀಟರ್
ಅಳಿಸುವ ರಬ್ಬರ್‌ನ ಉದ್ದ… ಸೆಂಟಿಮೀಟರ್
ಶಾಲೆಯ ಮೈದಾನದ ಉದ್ದ ….ಮೀಟರ್

೨. ಕೆಳಗಿನ ವಾಕ್ಯಗಳನ್ನು ಓದಿ ಮತ್ತು ಸರಿಯಾಗಿದ್ದರೆ ಸರಿ (T) ಎಂದೂ, ತಪ್ಪಾಗಿದ್ದರೆ ತಪ್ಪು (F)
ಎಂದೂ ವಾಕ್ಯದ ಎದುರಿಗೆ ಬರೆಯಿರಿ.

i) ರಸ್ತೆಯಲ್ಲಿ ನೇರವಾಗಿ ಚಲಿಸುತ್ತಿರುವ ಕಾರಿನ ಚಲನೆ ಸರಳರೇಖಾತ್ಮಕ ಚಲನೆಗೆ
ಉದಾಹರಣೆಯಾಗಿದೆ.  [ T]

ii) ನಿರ್ದೇಶಕ ಬಿಂದುವಿಗೆ ಸಂಬಂಧಿಸಿದಂತೆ ಯಾವುದೇ ವಸ್ತುವು ತನ್ನ ಸ್ಥಾನವನ್ನು ಬದಲಾಯಿಸುವುದನ್ನು ಚಲನೆ ಎನ್ನುತ್ತೇವೆ. [ T]

iii) 1 km = 1೦೦ cm [ F]

೩. ಕೆಳಗಿನವುಗಳಲ್ಲಿ ಯಾವುದು ಉದ್ದದ ಅಳತೆಯ ಪ್ರಮಾಣಿತ ಏಕಮಾನವಲ್ಲ?
i) ಮಿಲಿಮೀಟರ್ ii) ಸೆಂಟಿಮೀಟರ್ iii) ಕಿಲೋಮೀಟರ್ iv) ಗೇಣು

ಉತ್ತರ
iv) ಗೇಣು

೪. ನಿಮ್ಮ ಶಾಲೆ ಮತ್ತು ಮನೆಯಲ್ಲಿ ವಿವಿಧ ರೀತಿಯ ಮಾಪಕಗಳು ಅಥವಾ ಅಳತೆ ಪಟ್ಟಿಗಳನ್ನು ಹುಡುಕಿ.
ಈ ಪ್ರತಿಯೊಂದು ಮಾಪಕಗಳನ್ನು ಬಳಸಿಕೊಂಡು ಅಳೆಯಬಹುದಾದ ಅತ್ಯಂತ ಚಿಕ್ಕ ಮೌಲ್ಯವನ್ನು
ಕಂಡುಹಿಡಿಯಿರಿ. ನಿಮ್ಮ ವೀಕ್ಷಣೆಗಳನ್ನು ಕೋಷ್ಟಕದಲ್ಲಿ ದಾಖಲಿಸಿ.

ಅಳತೆ ಪಟ್ಟಿ….. ಮಿಲಿ ಮೀಟರ್,
ಅಳತೆ ಮಾಡುವ ಟೇಪ್…. ಮಿಲಿಮೀಟರ,
ಸೇರು/ಲೀಟರ್ ಪಾತ್ರೆ….. ಕಾಲು ಲೀಟರ್,
ಪ್ರಯೋಗಾಲಯದಲ್ಲಿನ ಮಿಲಿಲೀಟರ ಪಾತ್ರೆಗಳು…. ಮಿಲಿ ಲೀಟರ್,
ನೆಗಳಲ್ಲಿ ಚೊಂಬು…. ಕಾಲು ಚೊಂಬು
ಲೋಟ…. ಕಾಲು ಲೋಟ,
ತೂಕ ಹಾಕುವ ಮಿಷನ್….. ಒಂದು ಗ್ರಾಂ, ಇತ್ಯಾದಿ.

೫. ನಿಮ್ಮ ಶಾಲೆ ಮತ್ತು ಮನೆಯ ನಡುವಿನ ಅಂತರವು 1.5km ಎಂದು ಭಾವಿಸೋಣ. ಅದನ್ನು ಮೀಟರ್‌ಗಳಲ್ಲಿ ವ್ಯಕ್ತಪಡಿಸಿ.

1.5km……1500m

೬. ಒಂದು ಲೋಟ ಅಥವಾ ಬಾಟಲಿಯನ್ನು ತೆಗೆದುಕೊಳ್ಳಿ. ಗಾಜಿನ ಬಾಟಲಿಯ ತಳದ ವಕ್ರ ಭಾಗದ ಉದ್ದವನ್ನು ಅಳೆಯಿರಿ ಮತ್ತು ಅದನ್ನು ದಾಖಲಿಸಿ.

ಯಾವುದೇ ಲೋಟದ ತಳವು ವೃತ್ತಾಕಾರದಲ್ಲಿದ್ದು ಅದನ್ನು ಅಳೆಯಲು ದಾರವನ್ನು ಉಪಯೋಗಿಸುವುದು. ಮೊದಲು ತಾರವನ್ನು ತಳದ ಸುತ್ತಲೂ ಪೋಣಿಸಿ ನಂತರ ಅದರ ಉದ್ದವನ್ನು ಅಳತೆ ಪಟ್ಟಿಯ ಮೇಲಿಟ್ಟು ಅಳತೆ ತಿಳಿಯಬೇಕು
ನಾನು ನಮ್ಮ ಶಾಲೆಯಲ್ಲಿರುವ ಲೋಟವನ್ನು ತೆಗೆದುಕೊಂಡು ದಾರದಿಂದ ಅಳತೆ ಮಾಡಿದಾಗ 10 ಸೆಂಟಿ ಮೀಟರ್ ಅದರ ವಕ್ರತೆ ಇರುವುದು ಕಂಡು ಬಂತು.

೭. ನಿಮ್ಮ ಸ್ನೇಹಿತರ ಎತ್ತರವನ್ನು ಅಳೆಯಿರಿ ಮತ್ತು ಅದನ್ನು (m) ಮೀಟರ್ (cm) ಸೆಂಟಿಮೀಟರ್ ಮತ್ತು (mm) ಮಿಲಿಮೀಟರ್‌ಗಳಲ್ಲಿ ವ್ಯಕ್ತಪಡಿಸಿ.

ನನ್ನ ಸ್ನೇಹಿತರು
ಆಕಾಶ……1.11m…110cm..1100mm
ಅನಿಲ್ ಕುಮಾರ …..1.2m…120cm…1200mm
ಸುಜಿತ್ …….1.01m…….101cm……..1010mm
ಪ್ರಮೋದ…..0.95m……95cm……..950mm

೮. ನಿಮಗೆ ನಾಣ್ಯವೊಂದನ್ನು ನೀಡಿದೆ. ಆ ನಾಣ್ಯಗಳ ನಡುವೆ ಅಂತರವಿಲ್ಲದಂತೆ ಒಂದರ ನಂತರ ಒಂದರಂತೆ ಎಷ್ಟು ನಾಣ್ಯಗಳನ್ನು ಜೋಡಿಸಿ ನೋಟ್ ಪುಸ್ತಕದ ಹಾಳೆಯ ಉದ್ದದ ಅಳತೆ ಮಾಡಲು ಬೇಕಾಗಬಹುದು ಎಂಬುದನ್ನು ಅಂದಾಜಿಸಿ. ನಿಮ್ಮ ಅಂದಾಜನ್ನು ನೋಟ್ ಪುಸ್ತಕದ ಅದೇ ಪಾರ್ಶ್ವ ಉದ್ದವನ್ನು ೧೫ cm ಉದ್ದದ ಅಳತೆಪಟ್ಟಿಯಿಂದ ಅಳೆಯಿರಿ ಮತ್ತು ನೀಡಿದ ನಾಣ್ಯದ ಉದ್ದವನ್ನು ಅಳೆಯಿರಿ. ನಂತರ ನಿಮ್ಮ ಉತ್ತರವನ್ನು ತಾಳೆ ನೋಡಿ.

ನಿಮ್ಮ ನೋಟ್‌ಬುಕ್‌ನ ಬದಿಯ ಉದ್ದ 30 ಸೆಂ.ಮೀ.

ನಾಣ್ಯದ ಗಾತ್ರ 2.5 ಸೆಂ.ಮೀ.

ಆದ್ದರಿಂದ, ಅಗತ್ಯವಿರುವ ನಾಣ್ಯಗಳ ಸಂಖ್ಯೆಯನ್ನು ಅಂದಾಜು ಮಾಡಲು ನಾಣ್ಯ: (30 ಸೆಂ.ಮೀ.)/(2.5 ಸೆಂ.ಮೀ.) = 12 ನಾಣ್ಯಗಳು

೯. ರೇಖೀಯ, ವೃತ್ತೀಯ ಮತ್ತು ಆಂದೋಲನ ಚಲನೆಗಳಿಗೆ ತಲಾ ಎರಡೆರಡು ಉದಾಹರಣೆ ಕೊಡಿ.

ರೇಖಿಯ ಚಲನೆ
1.ತೆಂಗಿನ ಮರದಿಂದ ತೆಂಗಿನಕಾಯಿ ಕೆಳಗೆ ಬೀಳುವ ಚಲನೆ.
2. ನೇರ ರಸ್ತೆಯಲ್ಲಿ ಚಲಿಸುತ್ತಿರುವ ಕಾರು.

ವೃತ್ತಿಯ ಚಲನೆ
ಫ್ಯಾನಿನ ರೆಕ್ಕೆಗಳ ಚಲನೆ .
ಬಸ್ಸಿನ ಚಕ್ರದ ಚಲನೆ .

ಆಂದೋಲನ ಚಲನೆ
ತೂಗುಯ್ಯಾಲೆಯಲ್ಲಿ ತೂಗುತ್ತಿರುವ ಚಲನೆ.
ಗಡಿಯಾರದ ಗರಟದ ಚಲನೆ.

೧೦. ನಿಮ್ಮ ಸುತ್ತಲಿನ ವಿವಿಧ ವಸ್ತುಗಳನ್ನು ವೀಕ್ಷಿಸಿ. ಕೆಲವು ವಸ್ತುಗಳ ಉದ್ದವನ್ನು mm ನಲ್ಲಿ, ಕೆಲವನ್ನು cm ನಲ್ಲಿ, ಕೆಲವನ್ನು m ನಲ್ಲಿ ವ್ಯಕ್ತಪಡಿಸುವುದು ಸುಲಭ. ಪ್ರತಿಯೊಂದು ವರ್ಗದಲ್ಲಿ ತಲಾ ಮೂರು ವಸ್ತುಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ಕೋಷ್ಟಕ ೫.೬ ರಲ್ಲಿ ನಮೂದಿಸಿ.

mm….ಬೆಂಕಿಕಡ್ಡಿಯ ದಪ್ಪ, ಪ್ಲೈವುಡಿನ ದಪ್ಪ, ಅಳಿಸುವ ರಬ್ಬರ್ ದಪ್ಪ.
cm…. ವಿಜ್ಞಾನ ಪುಸ್ತಕದ ಮುಖಪುಟದ ಉದ್ದ ಮತ್ತು ಅಗಲ, ಮೇಜಿನ ಉದ್ದ ಮತ್ತು ಅಗಲ, ಪೆನ್ನು ಮತ್ತು ಪೆನ್ಸಿಲಿನ ಉದ್ದ, ಬಾಟಲಿಯ ಉದ್ದ.
m……. ಆಟದ ಮೈದಾನದ ಉದ್ದ ಮತ್ತು ಅಗಲಗಳು, ಕೈತೋಟದ ಉದ್ದ, ಕೊಠಡಿಯ ಉದ್ದ ಮತ್ತು ಅಗಲ, ಇತ್ಯಾದಿ.

೧೧. ರೋಲರ್ ಕೋಸ್ಟರ್ ಹಳಿಯನ್ನು ಚಿತ್ರ ೫.೧೯ ರಲ್ಲಿ ತೋರಿಸಿರುವ ಆಕಾರದಲ್ಲಿ ಮಾಡಲಾಗಿದೆ. ಚೆಂಡು ಬಿಂದುವಿನಿಂದ ಪ್ರಾರಂಭಗೊಂಡು ಈ ಬಿಂದುವಿನ ಮೂಲಕ ಹೊರ ಬರುತ್ತದೆ. ರೋಲರ್ ಕೋಸ್ಟರ್‌ನಲ್ಲಿ
ಚೆಂಡಿನ ಚಲನೆಯ ವಿಧಗಳು ಮತ್ತು ಸಂಬಂಧಿತ ಹಳಿಯ ಭಾಗಗಳನ್ನು ಗುರುತಿಸಿ.

A ನಿಂದ B: ರೇಖೀಯ ಚಲನೆ
B ನಿಂದ C: ವಕ್ರ ಚಲನೆ
C ನಿಂದ E: ವೃತ್ತಾಕಾರದ ಚಲನೆ
E ನಿಂದ F: ರೇಖೀಯ ಚಲನೆ

೧೨. ತಸ್ನೀಮ್ ತಾನೇ ಮೀಟರ್ ಅಳತೆಪಟ್ಟಿಯನ್ನು ಮಾಡಲು ಇಚ್ಚಿಸುತ್ತಾಳೆ. ಅದಕ್ಕಾಗಿ ಅವಳು ಈ ಕೆಳಗಿನ ವಸ್ತುಗಳನ್ನು ಪರಿಗಣಿಸುತ್ತಾಳೆ. – ಪ್ಲೆವುಡ್, ಕಾಗದ, ಬಟ್ಟೆ, ಸ್ಥಿತಿಸ್ಥಾಪಕ ರಬ್ಬರ್ ಮತ್ತು ಸ್ಟೀಲ್. ಇವುಗಳಲ್ಲಿ ಯಾವುದನ್ನು ಆಕೆ ಉಪಯೋಗಿಸಬಾರದು ಮತ್ತು ಏಕೆ?

ಕಾಗದ , ಬಟ್ಟೆ ಮತ್ತು ಸ್ಥಿತಿಸ್ಥಾಪಕ ರಬ್ಬರುಗಳಿಂದ ಅಳತೆ ಪಟ್ಟಿ ಮಾಡಲು ಬರುವುದಿಲ್ಲ. ಏಕೆಂದರೆ ಈ ಮೂರು ವಸ್ತುಗಳು ನಿಖರವಾದ ಆಕಾರವನ್ನು ಹೊಂದಲು ಅಸಮರ್ಥವಾಗಿವೆ. ಪ್ಲೈವುಡ್ ಮತ್ತು ಸ್ಟೀಲ್ ವಸ್ತುಗಳು ನಾವು ನೀಡಿದ ಆಕಾರದಲ್ಲಿ ಸ್ಥಿರವಾಗಿರುತ್ತವೆ. ಮತ್ತು ಅಳತೆ ನಿಖರವಾಗಿ ಸ್ಥಿರವಾಗಿರುತ್ತದೆ. ಕಾಗದ ಬಟ್ಟೆ ತಿಥಿ ಸ್ಥಾಪಕ ರಬ್ಬರ್ ಗಳಿಂದ ಮಾಡಿದ ಅಳತೆ ಪಟ್ಟಿಯು ನಿಖರವಾದ ಸ್ಥಿರವಾದ ಅಳತೆಯನ್ನು ನೀಡುವುದಿಲ್ಲ.

೧೩. ಉದ್ದದ ಏಕಮಾನಗಳನ್ನು ಪರಿವರ್ತಿಸಲು ಕಾರ್ಡ್ ಆಟವೊಂದನ್ನು ಆಲೋಚಿಸಿ, ಅಭಿವೃದ್ಧಿಪಡಿಸಿ
ಮತ್ತು ಸ್ನೇಹಿತರೊಂದಿಗೆ ಆಟವಾಡಿ.

ಕಾರ್ಡ್ ಗೇಮ್: ಉದ್ದದ ಮಾಸ್ಟರ್

ಉದ್ದೇಶ: ಕಾರ್ಡ್‌ಗಳನ್ನು ಗೆಲ್ಲಲು ಉದ್ದದ ಘಟಕಗಳನ್ನು ಸರಿಯಾಗಿ ಪರಿವರ್ತಿಸಿ.

ಜೋಡಣೆ

ಉದ್ದದ ಕಾರ್ಡ್‌ಗಳು: ಪ್ರತಿ ಕಾರ್ಡ್ ಒಂದು ಘಟಕದೊಂದಿಗೆ ಉದ್ದವನ್ನು ಹೊಂದಿರುತ್ತದೆ (ಉದಾ., 2 ಮೀ, 150 ಸೆಂ.ಮೀ).

ಪರಿವರ್ತನೆ ಕಾರ್ಡ್‌ಗಳು: ಪ್ರತಿ ಕಾರ್ಡ್ ನಿರ್ದಿಷ್ಟ ಪರಿವರ್ತನೆಯನ್ನು ಕೇಳುತ್ತದೆ (ಉದಾ., ಸೆಂ.ಮೀ.ಗೆ ಪರಿವರ್ತಿಸಿ).

ಸಹಾಯಕ್ಕಾಗಿರುವ ಕಾರ್ಡ್‌ಗಳು: ಪರಿವರ್ತನೆ ಸೂತ್ರಗಳನ್ನು ತೋರಿಸಿ (ಉದಾ., 1 ಮೀ = 100 ಸೆಂ.ಮೀ.).

ನಿಯಮಗಳು: ಒಂದು ಉದ್ದ ಕಾರ್ಡ್ ಮತ್ತು ಒಂದು ಪರಿವರ್ತನೆ ಕಾರ್ಡ್ ಅನ್ನು ಬರೆಯಿರಿ.

ಕೇಳಿದಂತೆ ಉದ್ದವನ್ನು ಪರಿವರ್ತಿಸಿ (ಉದಾ., 2 ಮೀ ನಿಂದ 200 ಸೆಂ.ಮೀ.).

ಸಹಾಯಕ್ಕಾಗಿರುವ ಕಾರ್ಡ್‌ಗಳೊಂದಿಗೆ ಪರಿಶೀಲಿಸಿ.

ಕಾರ್ಡ್ ಸರಿಯಾಗಿದ್ದರೆ ಅದನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ, ಅದನ್ನು ಹಿಂದಕ್ಕೆ ಇರಿಸಿ.

ಹೆಚ್ಚಿನ ಕಾರ್ಡ್‌ಗಳನ್ನು ಹೊಂದಿರುವ ಆಟಗಾರನು ಗೆಲ್ಲುತ್ತಾನೆ.

ನಮ್ಮ ಸುತ್ತಲಿನ ಸಾಮಗ್ರಿಗಳು

6ನೇ ತರಗತಿ ವಿಜ್ಞಾನ ಅಧ್ಯಾಯ 6 ನೋಟ್ಸ್ ಪ್ರಶ್ನೋತ್ತರಗಳು

೧. ನಿಮ್ಮ ಅಡುಗೆಮನೆಗೆ ಭೇಟಿ ನೀಡಿ ಮತ್ತು ನಿಮ್ಮ ಪೋಷಕರು ವಿವಿಧ ಖಾದ್ಯಗಳನ್ನು ಹೇಗೆ ಜೋಡಿಸಿದ್ದಾರೆ ಎಂಬುದನ್ನು ಗಮನಿಸಿ. ಉತ್ತಮ ವಿಂಗಡಣೆ ವಿಧಾನವನ್ನು ನೀವು ಸೂಚಿಸಬಹುದೇ? ಅದನ್ನು ನಿಮ್ಮ
ನೋಟ್ ಪುಸ್ತಕದಲ್ಲಿ ಬರೆಯಿರಿ.

<span;>ತರಕಾರಿ ಪುಟ್ಟಿಗಳನ್ನು ಗಾಳಿ ಆಡುವ ಹಾಗೆ ಇರುವ ಬುಟ್ಟಿಗಳಲ್ಲಿ ಒಂದು ಕಡೆ ಜೋಡಿಸಬೇಕು. ಎಲ್ಲಾ ಧಾನ್ಯಗಳನ್ನು ಮುಖ್ಯವಾಗಿ ಅಕ್ಕಿ, ಗೋಧಿ ಹಿಟ್ಟು ಮತ್ತು ಅಕ್ಕಿ ಹಿಟ್ಟುಗಳನ್ನು ಪಾರದರ್ಶಕವಾಗಿ ಕಾಣುವ ದೊಡ್ಡ ಪಾತ್ರೆಗಳಲ್ಲಿ ಸಂಗ್ರಹಿಸಬಹುದು. ಉಪ್ಪು ಸಕ್ಕರೆ ಹುಣಸೆಹಣ್ಣು ಬೇಳೆ ಕಾಳುಗಳು ಬೇಳೆಗಳು ಮಸಾಲೆ ಪದಾರ್ಥಗಳು ಮುಂತಾದ ಸಣ್ಣ ಪುಟ್ಟ ಪದಾರ್ಥಗಳನ್ನೆಲ್ಲ  ಪಾರದರ್ಶಕವಾದ ಸಣ್ಣ ಸಣ್ಣ ಡಬ್ಬಿ ಗಳಲ್ಲಿ ಇಟ್ಟು ವ್ಯವಸ್ಥಿತವಾಗಿ ಜೋಡಿಸಬೇಕು. 15 ದಿನಕ್ಕೊಮ್ಮೆ ಒರೆಸಿ ಕ್ಲೀನ್ ಮಾಡಬೇಕು. ಇಟಾಲಿಯನ್ ಕಿಚನ್ ಇದ್ದಲ್ಲಿ ಕೂಡ ಒಳ್ಳೆಯದು. ಜಿರಳೆಗಳಾಗದಂತೆ ಜಾಗೃತೆ ವಹಿಸಬೇಕು.

೨. ಕಲಸಿದ ಅಕ್ಷರಗಳನ್ನು ಸರಿಯಾಗಿ ಹೊಂದಿಸಿ (ಕಂಬಸಾಲು I) ಮತ್ತು ಅವುಗಳ ಗುಣಗಳೊಂದಿಗೆ
(ಕಂಬಸಾಲು II) ಜೋಡಿಸಿ.

ಕಂಬಸಾಲು-I ಕಂಬಸಾಲು-II

i) ಸಾಮಗ್ರಿ ……b) ಸ್ಥಳವನ್ನು ಆಕ್ರಮಿಸುತ್ತದೆ ಮತ್ತು ದ್ರವ್ಯರಾಶಿಯನ್ನು ಹೊಂದಿದೆ.

ii)ವಿಲೀನಗೊಳ್ಳುವ…….ಜ)ಸಂಪೂರ್ಣವಾಗಿ ನೀರಿನಲ್ಲಿ ಬೆರೆಯುತ್ತದೆ.

iii)ಪಾರದರ್ಶಕ……….ಚಿ) ಅದರ ಮೂಲಕ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು

iv) ಹೊಳಪು…….ಛಿ) ಹೊಳೆಯುವ ಮೇಲ್ಮೈ

೩. ಅಂಗಡಿಗಳಲ್ಲಿ ಮತ್ತು ಮನೆಯಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಲು ಬಳಸುವ ಪಾತ್ರೆಗಳು ಸಾಮಾನ್ಯವಾಗಿ
ಪಾರದರ್ಶಕವಾಗಿರುತ್ತವೆ. ಇದಕ್ಕೆ ಕಾರಣಗಳನ್ನು ಕೊಡಿ.

ಪಾರದರ್ಶಕ ಪಾತ್ರಗಳಲ್ಲಿ ಇರುವ ವಸ್ತುಗಳು ಯಾವುವು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದರಿಂದ ಸಮಯ ಮತ್ತು ಶ್ರಮ ಉಳಿತಾಯ ಆಗುತ್ತದೆ. ಅಪಾರ ದರ್ಶಕ ಪಾತ್ರೆಗಳಿದ್ದಲ್ಲಿ ಒಳಗೆ ಯಾವ ವಸ್ತು ಇದೆ ಎಂಬುದು ತಿಳಿಯುವುದಿಲ್ಲ.

ಅಂಗಡಿಗಳಲ್ಲಿ ಗಿರಾಕಿಗಳಿಗೆ ವಸ್ತು ಕಂಡರೆ ಅದನ್ನು ಕೊಳ್ಳುವ ಮನಸ್ಸಾಗುತ್ತದೆ. ಮತ್ತು ದೂರದಿಂದಲೇ ವಸ್ತುವನ್ನು ನೋಡಿ ಕೊಳ್ಳಲು ಬರುತ್ತಾರೆ. ಇಲ್ಲವಾದಲ್ಲಿ ಯಾವ ವಸ್ತುಗಳ ಅಂಗಡಿ ಎನ್ನುವುದೇ ತಿಳಿಯುವುದಿಲ್ಲ.

೪. ಕೆಳಗೆ ಕೊಟ್ಟಿರುವ ಹೇಳಿಕೆಗಳು ಸರಿಯೇ [T] ಅಥವಾ ತಪ್ಪೇ [F] ಎಂದು ತಿಳಿಸಿ. ತಪ್ಪಾದ ಹೇಳಿಕೆಗಳನ್ನು
ಸರಿಪಡಿಸಿ.
i) ಮರವು ಅರೆಪಾರದರ್ಶಕವಾಗಿದ್ದರೆ, ಗಾಜು ಅಪಾರದರ್ಶಕವಾಗಿರುತ್ತದೆ. [ F]

ಸರಿಯಾದ ಹೇಳಿಕೆ
ಮರವು ಅಪಾರ ದರ್ಶಕ ವಾಗಿದ್ದರೆ ಗಾಜು ಪಾರದರ್ಶಕ ವಾಗಿರುತ್ತದೆ.

ii) ಅಲ್ಯುಮಿನಿಯಂ ಹಾಳೆಯು ಹೊಳಪನ್ನು ಹೊಂದಿರುತ್ತದೆ. ಆದರೆ, ರಬ್ಬರ್ ಹೊಳಪನ್ನು ಹೊಂದಿರುವುದಿಲ್ಲ. [T ]

iii) ಸಕ್ಕರೆ ನೀರಿನಲ್ಲಿ ವಿಲೀನವಾಗುತ್ತದೆ. ಆದರೆ, ಮರದ ಹೊಟ್ಟು ವಿಲೀನವಾಗುವುದಿಲ್ಲ.
[T ]

iv) ಸೇಬು ಒಂದು ದ್ರವ್ಯವಾಗಿದೆ. ಏಕೆಂದರೆ, ಅದು ಯಾವುದೇ ಸ್ಥಳವನ್ನು ಆಕ್ರಮಿಸುವುದಿಲ್ಲ ಮತ್ತು
ದ್ರವ್ಯರಾಶಿಯನ್ನು ಹೊಂದಿರುತ್ತದೆ. [F ]

ಸರಿಯಾದ ಹೇಳಿಕೆ.

ಸೇಬು ಒಂದು ದ್ರವ್ಯವಾಗಿದೆ ಏಕೆಂದರೆ ಅದು ಸ್ಥಳವನ್ನು ಆಕ್ರಮಿಸುತ್ತದೆ ಮತ್ತು ದ್ರವ್ಯರಾಶಿಯನ್ನು ಹೊಂದಿದೆ.

೫. ಮರ, ಕಬ್ಬಿಣ, ಪ್ಲಾಸ್ಟಿಕ್, ಬಿದಿರು, ಸಿಮೆಂಟ್ ಮತ್ತು ಕಲ್ಲುಗಳಂತಹ ವಿವಿಧ ಸಾಮಗ್ರಿಗಳಿಂದ ಮಾಡಿದ ಕುರ್ಚಿಗಳನ್ನು ನಾವು ನೋಡಿದ್ದೇವೆ. ಕುರ್ಚಿಗಳನ್ನು ತಯಾರಿಸಲು ಬಳಸಬಹುದಾದ ಸಾಮಗ್ರಿಗಳ
ಕೆಲವು ಅಪೇಕ್ಷಣೀಯ ಗುಣಗಳು ಈ ಕೆಳಗಿನಂತಿವೆ. ಕುರ್ಚಿಗಳನ್ನು ತಯಾರಿಸಲು ಬಳಸುವ ಯಾವ ಸಾಮಗ್ರಿಗಳು ಈ ಗುಣಗಳನ್ನು ಹೆಚ್ಚು ಒಳಗೊಂಡಿರುತ್ತವೆ?

<span;>(i) ಗಡಸುತನ (ದೀರ್ಘಕಾಲದ ಬಳಕೆಯ ನಂತರವೂ ಕುಳಿತುಕೊಳ್ಳುವಾಗ ಬಾಗುವುದಿಲ್ಲ ಅಥವಾ
<span;>ಅಲುಗಾಡುವುದಿಲ್ಲ).
<span;>(ii) ಹಗುರ (ಎತ್ತಲು ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಸುಲಭ).
<span;>(iii)ಚಳಿಗಾಲದಲ್ಲಿ ಕುಳಿತುಕೊಳ್ಳುವಾಗ ತುಂಬಾ ಚಳಿಯ ಅನುಭವವಾಗುವುದಿಲ್ಲ.
<span;>(iv) ನಿಯತವಾಗಿ ಸ್ವಚ್ಛಗೊಳಿಸಬಹುದು ಮತ್ತು ದೀರ್ಘಕಾಲದ ಬಳಕೆಯ ನಂತರವೂ ಹೊಸದಾಗಿ ಕಾಣುವಂತೆ ಮಾಡಬಹುದು.

<span;>ಕಬ್ಬಿಣ, ಮರ, ಫೈಬರ್, ಬಿದಿರು ಗಳಿಂದ ಮಾಡಿದ ಕುರ್ಚಿಗಳು ಗಡಸುತನವನ್ನು ಹೊಂದಿರುತ್ತವೆ. ಮರ ಮತ್ತು ಫೈಬರ್ ಹಾಗೂ ಬಿದಿರಿನಿಂದ ಮಾಡಿದ ಕುರ್ಚಿಗಳು ಹಗುರವಾಗಿರುತ್ತದೆ. ಮತ್ತು ಈ ಕುರ್ಚಿಗಳು ಈ ಮೇಲಿನ ಎಲ್ಲ ಗುಣಗಳನ್ನು ಹೊಂದಿರುತ್ತವೆ.

<span;>೬. ನೀವು (i) ಆಹಾರ ತ್ಯಾಜ್ಯ, (ii) ಮುರಿದ ಗಾಜು ಮತ್ತು (iii) ರದ್ದಿ ಕಾಗದವನ್ನು ಸಂಗ್ರಹಿಸಲು ಸಂಗ್ರಾಹಕಗಳನ್ನು ಹೊಂದಿರಬೇಕು. ಈ ರೀತಿಯ ತ್ಯಾಜ್ಯಗಳನ್ನು ಸಂಗ್ರಹಿಸಲು ನೀವು ಯಾವ ಸಾಮಗ್ರಿಗಳಿಂದ ತಯಾರಿಸಿದ ಸಂಗ್ರಾಹಕಗಳನ್ನು ಆಯ್ಕೆ ಮಾಡುತ್ತೀರಿ? ಸಾಮಗ್ರಿಗಳ ಯಾವ ಗುಣಗಳ
<span;>ಬಗ್ಗೆ ನೀವು ಯೋಚಿಸಬೇಕು?

<span;>ಆಹಾರ ತ್ಯಾಜ್ಯ…. ಸಂಗ್ರಹಿಸಲು ಪ್ಲಾಸ್ಟಿಕ್ ಅಥವಾ ಲೋಹದಿಂದ ಮಾಡಿದ ಸಂಗ್ರಹಕಗಳನ್ನು ಬಳಸಬಹುದು. ಇವು ಬಾಳಿಕೆ ಬರುವಂತೆ ಇರಬೇಕು. ಸುಲಭವಾಗಿ ಸ್ವಚ್ಛ ಮಾಡುವಂತಿರಬೇಕು.

<span;>ಮುರಿದ ಗಾಜು….. ಲೋಹದ ಅಥವಾ ಗಟ್ಟಿಯಾದ ಪ್ಲಾಸ್ಟಿಕ್ ನಿಂದ ಮಾಡಿದ ಸಂಗ್ರಹಕಗಳನ್ನು ಬಳಸಬಹುದು ಸೊರಿಕೆಯಲ್ಲದ ಸಂಗ್ರಹಕವಾಗಿರಬೇಕು.

<span;>ರದ್ದಿ ಕಾಗದ….. ಹಗುರವಾದ ಪ್ಲಾಸ್ಟಿಕ್ ಅಥವಾ ಫೈಬರ್ ಸಂಗ್ರಹಕಗಳನ್ನು ಬಳಸಬಹುದು.

<span;>೭. ಗಾಳಿಯು ನಮ್ಮ ಸುತ್ತಲೂ ಇದೆ ಆದರೆ ನಾವು ಒಬ್ಬರನ್ನೊಬ್ಬರು ನೋಡಲು ಅಡ್ಡಿಯಾಗುವುದಿಲ್ಲ. ಆದರೆ, ನಡುವೆ ಮರದ ಬಾಗಿಲು ಬಂದರೆ, ನಾವು ಒಬ್ಬರನ್ನೊಬ್ಬರು ನೋಡಲು ಸಾಧ್ಯವಿಲ್ಲ. ಏಕೆಂದರೆ
<span;>ಗಾಳಿಯು <span;>ಪಾರದರ್ಶಕ <span;>ಮತ್ತು ಮರದ ಬಾಗಿಲು <span;> ಅಪಾರ ದರ್ಶಕ. <span;>ಅತ್ಯಂತ
<span;>ಸೂಕ್ತವಾದ ಉತ್ತರವನ್ನು ಆರಿಸಿ.
<span;>(i) ಪಾರದರ್ಶಕ, ಅಪಾರದರ್ಶಕ
<span;>(ii) ಅರೆಪಾರದರ್ಶಕ, ಪಾರದರ್ಶಕ
<span;>(iii) ಅಪಾರದರ್ಶಕ, ಅರೆಪಾರದರ್ಶಕ
<span;>(iv) ಪಾರದರ್ಶಕ, ಅರೆಪಾರದರ್ಶಕ

<span;>೮. ನಿಮ್ಮ ಬಳಿ X ಮತ್ತು Y ಎಂಬ ಎರಡು ನಿಗೂಢ ಸಾಮಗ್ರಿಗಳು ಇವೆ ಎಂದು ಕಲ್ಪಿಸಿಕೊಳ್ಳಿ. ನೀವು
<span;>ಸಾಮಗ್ರಿ X ಅನ್ನು ಒತ್ತಲು ಪ್ರಯತ್ನಿಸಿದಾಗ, ಅದು ಕಠಿಣವೆಂದು ಭಾಸವಾಗುತ್ತದೆ ಮತ್ತು ಅದರ ಆಕಾರವನ್ನು ಸುಲಭವಾಗಿ ಬದಲಾಯಿಸಲಾಗುವುದಿಲ್ಲ. ಮತ್ತೊಂದೆಡೆ, ನೀವು ಸಾಮಗ್ರಿ Y ಯನ್ನು ಒತ್ತಿದಾಗ ಸುಲಭವಾಗಿ ಆಕಾರವನ್ನು ಬದಲಾಯಿಸುತ್ತದೆ. ಈಗ, ನೀವು ಎರಡೂ ಸಾಮಗ್ರಿಗಳನ್ನು ನೀರಿನಲ್ಲಿ ಬೆರೆಸಿದಾಗ, ಸಾಮಗ್ರಿ X ಮಾತ್ರ ಸಂಪೂರ್ಣವಾಗಿ ವಿಲೀನವಾಗುತ್ತದೆ, ಆದರೆ ಸಾಮಗ್ರಿ Y
<span;>ಬದಲಾಗದೆ ಉಳಿಯುತ್ತದೆ. X ಮತ್ತು Y ಯಾವ ರೀತಿಯ ಸಾಮಗ್ರಿಗಳಾಗಿರಬಹುದು? ಸಾಮಗ್ರಿ X ಗಟ್ಟಿಯಾಗಿದೆಯೇ ಅಥವಾ ಮೃದುವಾಗಿದೆಯೇ ಎಂದು ನೀವು ಗುರುತಿಸಬಲ್ಲಿರಾ? ಸಾಮಗ್ರಿ Y ಬಗ್ಗೆ
<span;>ನಿಮ್ಮ ಅಭಿಪ್ರಾಯವೇನು? ನಿಮ್ಮ ಉತ್ತರವನ್ನು ಸಮರ್ಥಿಸಿ.

<span;>ಸಾಮಗ್ರಿ X ಬೆಲ್ಲವಾಗಿದೆ. ಇದು ಗಟ್ಟಿಯಾದ ವಸ್ತು ನಾವು ಒತ್ತಿದಾಗ ಗಟ್ಟಿಯಾಗಿರುತ್ತದೆ ಅದನ್ನು ನೀರಿನಲ್ಲಿ ಹಾಕಿದಾಗ ನೀರಿನಲ್ಲಿ ಸಂಪೂರ್ಣವಾಗಿ ಕರಗಿ ವಿಲೀನವಾಗುತ್ತದೆ.

<span;>ಸಾಮಗ್ರಿ Y ಸ್ಪಂಜು ಆಗಿದೆ. ಇದನ್ನು ಸುಲಭವಾಗಿ ಒತ್ತಿ ಅದರ ಆಕಾರವನ್ನು  ಬದಲಾಯಿಸಬಹುದು. ಇದನ್ನು ನೀರಿನಲ್ಲಿ ಹಾಕಿದಾಗ ಅದು ಕರಗಿ ವಿಲೀನವಾಗುವುದಿಲ್ಲ.

<span;>೯. (i) ನಾನು ಯಾರು? ಕೊಟ್ಟಿರುವ ಗುಣಗಳ ಆಧಾರದ ಮೇಲೆ ನನ್ನನ್ನು ಗುರುತಿಸಿ.
<span;>(ಎ) ನನಗೆ ಹೊಳಪು ಇದೆ<span;> ____________ಲೋಹ (ಚಿನ್ನ ಬೆಳ್ಳಿ ಕಬ್ಬಿಣ ತಾಮ್ರ ಅಲ್ಯೂಮಿನಿಯಂ ಮೆಗ್ನೀಷಿಯಂ).
<span;>(ಬಿ) ನನ್ನನ್ನು ಸುಲಭವಾಗಿ ಸಂಕುಚಿಸಬಹುದು.<span;> ____________ಅನಿಲ.
<span;>(ಸಿ) ನಾನು ಗಟ್ಟಿಯಾಗಿದ್ದೇನೆ ಮತ್ತು ನೀರಿನಲ್ಲಿ ವಿಲೀನವಾಗಬಲ್ಲೆ<span;> ___________ಬೆಲ್ಲ ಅಥವಾ ಉಪ್ಪು.
<span;>(ಡಿ) ನೀವು ನನ್ನ ಮೂಲಕ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ<span;> ____________ಅಪಾರ ದರ್ಶಕ ವಸ್ತು (ಗೋಡೆ ಮರ ಲೋಹದ ಹಾಳೆ).
<span;>(ಇ) ನನಗೆ ದ್ರವ್ಯರಾಶಿ ಮತ್ತು ಪರಿಮಾಣವಿದೆ ಆದರೆ ನೀವು ನನ್ನನ್ನು ನೋಡಲು ಸಾಧ್ಯವಿಲ್ಲ<span;>
<span;>________________ಗಾಳಿ.
<span;>(ii) ‘ನಾನು ಯಾರು?’ ಎಂಬ ನಿಮ್ಮದೇ ಆದ ಒಗಟನ್ನು ರೂಪಿಸಿ.
<span;>ನಾನು ದ್ರವ ವಸ್ತು.
<span;>ನಾನು ನೀರಿನೊಂದಿಗೆ ವಿಲೀನವಾಗುವುದಿಲ್ಲ.
<span;>ನಾನು ಅಡುಗೆಯಲ್ಲಿ ಉಪಯೋಗಿಸಲ್ಪಡುವೆ.
<span;>ನಾನು ಹೆಚ್ಚಾಗಿ ಕರಿದ ಆಹಾರ ಮಾಡಲು ಬಳ ಸಲ್ಪಡುವೆ.

ನಾನು ಯಾರು ?
ಎಣ್ಣೆ

೧೦. ನಿಮಗೆ ಈ ಕೆಳಗಿನ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ- ವಿನೆಗರ್, ಜೇನುತುಪ್ಪ, ಸಾಸಿವೆ ಎಣ್ಣೆ, ನೀರು, ಗ್ಲುಕೋಸ್ ಮತ್ತು ಗೋಧಿಹಿಟ್ಟು. ಒಂದು ಸಾಮಗ್ರಿಯು ಇನ್ನೊಂದರಲ್ಲಿ ವಿಲೀನವಾಗುವ
ಯಾವುದಾದರೂ ಎರಡು ಜೋಡಿಗಳನ್ನು ಮಾಡಿ. ಒಂದು ಸಾಮಗ್ರಿಯು ಇನ್ನೊಂದರಲ್ಲಿ ವಿಲೀನವಾಗದ ಎರಡು ಜೋಡಿಗಳನ್ನು ಮಾಡಿ.

ವಿಲೀನವಾಗುವ  ಎರಡು ಜೋಡಿ…. ವಿನೆಗರ್ ಮತ್ತು ನೀರು,
ಗ್ಲುಕೋಸ್ ಮತ್ತು ನೀರು

ವಿಲೀನವಾಗದ ಎರಡು ಜೋಡಿ….. ಸಾಸಿವೆ ಎಣ್ಣೆ ಮತ್ತು ನೀರು, ಗೋಧಿ ಹಿಟ್ಟು ಮತ್ತು ನೀರು.

Leave a Comment