ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ’ (KASS) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳು.
ಓದಲಾಗಿದೆ:
1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಎಂಆರ್ 2020, 2:17.08.2021.
2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020, 25:05.09.2022.
3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020, 22:09.03.2023.
4. ಸ್ವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಸರ್ಕಾರಕ್ಕೆ ಸಲ್ಲಿಸಿರುವ ಪತ್ರ ಸಂಖ್ಯೆ: ಹೆಚ್ ಎಫ್ డబ్లు/ఎన్నో ఎ ఎనో టి/రి ఎ ఎనో ఎనో/08/2022-23, 2: 07.09.2023 2 14.05.2023.
5. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿ: 13.01.2025 ರಂದು ಹಾಗೂ 04.03.2025 ನಡೆದ ಸಭೆಯ ತೀರ್ಮಾನಗಳು.
6. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನ ಏಕ ಕಡತ ಸಂಖ್ಯೆ SAST/ADM/OTHC/22/2024-KASS ರಲ್ಲಿ ಪರಿಷ್ಕೃತ ಪ್ರಸ್ತಾವನೆ.(17.02.2025)
ಪ್ರಸ್ತಾವನೆ:
1. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸಲು ಮೇಲೆ ಕ್ರ.ಸಂ.(1) ರಿಂದ (3) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ.
2. ಮುಂದುವರೆದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನೊಂದಿಗೆ ಚರ್ಚಿಸಿ, ಈ ಹಿಂದೆ ರೂಪಿಸಿರುವ ಯೋಜನೆಯಲ್ಲಿ ಕೆಲವು ಸೂಚನೆಗಳನ್ನು ಮಾರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ.
ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೇಲೆ ಓದಲಾದ (4) ರ ಪತ್ರಗಳಲ್ಲಿ ಸರ್ಕಾರಕ್ಕೆ ಪರಿಷ್ಕೃತ ಒಡಂಬಡಿಕೆಯನ್ನು ಸಿದ್ಧಪಡಿಸಿ ಸಲ್ಲಿಸಿರುತ್ತದೆ ಮೇಲೆ ಕ್ರಮ ಸಂಖ್ಯೆ (5) ರಲ್ಲಿ ಓದಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04.03.2025 ಮತ್ತು ದಿನಾಂಕ: 13.01.2025 ರಂದು ನಡೆದ ಸಭೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಹಾಗೂ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
4. ದಿನಾಂಕ: 13.01.2025 ರಂದು ನಡೆದ ಸಭೆಯ ತೀರ್ಮಾನದಂತೆ ಮೇಲೆ ಕ್ರ.ಸಂ. (6). ರಲ್ಲಿ ಓದಲಾದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಏಕಕಡತದಲ್ಲಿ) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ಯಾಕೇಜ್ ದರಗಳು, ನಿಗದಿಪಡಿಸಿರದ ಚಿಕಿತ್ಸಾ ವಿಧಾನಗಳು (Unspecified procedures), ಇಂಪ್ಲಾಂಟ್ಸ್ ದರಗಳು, ಆಸ್ಪತ್ರೆಗಳ ನೋಂದಾವಣೆ, ಒಡಂಬಡಿಕೆಯ ಷರತ್ತುಗಳು ಹಾಗೂ ಇತರೆ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪ್ರಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆ.
5. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಸ್ವೀಕೃತವಾದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ:-
1) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪ್ಯಾಕೇಜ್ ದರಗಳನ್ನು ಆಧರಿಸಿದೆ. KASS ಯೋಜನೆಯಡಿ ಒಟ್ಟು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರ್ಯವಿಧಾನಗಳನ್ನು CGHS, HBP 2022 2000 ವೈದ್ಯಕೀಯ ಪ್ರಸ್ತಾಪಿಸಲಾಗಿದೆ. ಮತ್ತು ಪ್ರಸ್ತುತ AB-ArK ಪ್ಯಾಕೇಜ್‌ಗಳಲ್ಲಿ ಲಭ್ಯವಿರುವ ಪ್ಯಾಕೇಜ್‌ಗಳಿಂದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ: ತೆಗೆದುಕೊಳ್ಳಲಾಗಿದೆ.
KASS PACKAGE MASTER ಯೋಜನೆಯ ಆರಂಭದ ಹಂತದಲ್ಲಿ ಈ ಕೆಳಕಂಡಂತೆ CGHS, AB-ArK, National Health Authority (NHA) / HBP 2022 ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಒಳಗೊಂಡಿರುತ್ತವೆ:
(ಉನ್ನತ ಚಿಕಿತ್ಸಾ ವಿಧಾನಗಳು ಸೇರಿದಂತೆ)
1,144
AB-ArK
05
HBP 2022 (ಮೆಡಿಕಲ್ ಮ್ಯಾನೇಜ್ మెంటా)
615
HBP 2022 ( )
236
ಇಂಪ್ಲಾಂಟ್ ಗಳು:
2,000
CGHS ఇంవాంటో గళు
CGHS ನಲ್ಲಿ ಒಳಗೊಂಡಿರದ : HBP 2022
Chr
2
ರಲ್ಲಿದ್ದಂತೆ
ಕಾರ್ಯವಿಧಾನಗಳನ್ನು ನಿಗದಿಪಡಿಸದಿರುವ (Unspecified Procedure)
ಚಿಕಿತ್ಸಾ ವಿಧಾನಗಳಿಗೆ AB-Ark ರಡಿ ನಿಗದಿಪಡಿಸಿರುವ ಮಾನದಂಡಗಳನ್ನಯ ಸರ್ಕಾರದ ಪ್ರಧಾನ ಕಾರ್ಯದರ್ಶಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರಿಗೆ ಚಿಕಿತ್ಸಾ ದರ ನಿಗದಿಪಡಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಲು.
ಬೆಂಗಳೂರು 5* 3)
CGHS ಪ್ಯಾಕೇಜ್ ಅಡಿಯಲ್ಲಿ ನಿಗದಿಪಡಿಸಲಾದ ಇಂಪ್ಲಾಂಟ್‌ಗಳನ್ನು ಮುಂದುವರೆಸುವುದು ಹಾಗೂ CGHS ಅಡಿಯಲ್ಲಿ ನಿಗದಿಪಡಿಸದಿರುವ ಇಂಪ್ಲಾಂಟ್‌ಗಳನ್ನು HBP 2022 ರಲ್ಲಿ ನಿಗದಿಪಡಿಸಿರುವ ಇಂಪ್ಲಾಂಟ್ ಹಾಗೂ ದರಗಳನ್ನು ಅಳವಡಿಸಲು ಹಾಗೂ ಈ ರೀತಿಯ ಕ್ರಮವನ್ನು SAST ಅಡಿಯಲ್ಲಿ ತಾಂತ್ರಿಕ ಸಮಿತಿಯ ಅನುಮೋದನೆ ಪಡೆದು ಕ್ರಮ ಕೈಗೊಳ್ಳಲು.
4) CGHS ಅಡಿಯಲ್ಲಿ ಚಿಕಿತ್ಸೆಗಳನ್ನು ನೀಡಿದಲ್ಲಿ CGHS ದರಗಳನ್ವಯ Semi Private ಕೊಠಡಿಗಳಿಗೆ ಅನ್ವಯವಾಗಲಿದ್ದು, ಈ ದರಗಳನ್ನು ಖಾಸಗಿ ವರ್ಗದ ಕೊಠಡಿಗೆ ಶೇ. 15% ಹೆಚ್ಚಿಸಲು ಮತ್ತು ಸಾಮಾನ್ಯ ವಾರ್ಡ್ 10% ರಷ್ಟು ಕಡಿತಗೊಳಿಸಿ KASS ಪ್ಯಾಕೇಜ್‌ಗಳಿಗೆ ದರಗಳನ್ನು ಅಳವಡಿಸಿಕೊಳ್ಳಲು.
5) HBP 2022 ಪ್ಯಾಕೇಜ್ ಅಡಿಯಲ್ಲಿ ಚಿಕಿತ್ಸೆಗಳನ್ನು ನೀಡಿದಲ್ಲಿ ದರಗಳು ಸಾಮಾನ್ಯ ವಾರ್ಡ್‌ಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು, ಇದಲ್ಲದೇ ಬೆಂಗಳೂರನ್ನು 301 (Tier-1) ಮತ್ತು ಮೈಸೂರು ನಗರಗಳನ್ನು ಟೈರ್- 2 ಸಿಟಿಗಳು ಮತ್ತು ರಾಜ್ಯದ ಉಳಿದ ಪ್ರದೇಶಗಳನ್ನು ಟೈರ್- ಸಿಟಿಗಳ ಅಡಿಯಲ್ಲಿ ದರಗಳನ್ನು ನಿಗದಿಪಡಿಸಲಾಗಿದೆ. ಆದರೆ HBP ಪ್ಯಾಕೇಜ್ ರಡಿ ಚಿಕಿತ್ಸೆ ಪಡೆಯುವ ರಾಜ್ಯದ ಎಲ್ಲಾ ಪ್ರದೇಶಗಳ ಸರ್ಕಾರಿ ನೌಕರರಿಗೆ ಟೈರ್-3 ಪ್ಯಾಕೇಜ್ ದರಗಳನ್ನು ಏಕರೂಪವಾಗಿ ಅಳವಡಿಸಿಕೊಳ್ಳಲು ಹಾಗೂ CHGS ಮಾದರಿಯಲ್ಲಿ HBP-2022 ಪ್ಯಾಕೇಜ್‌ರಡಿ ಸಹ ಅರೆ-ಖಾಸಗಿ ವರ್ಗದ ಕೊಠಡಿಗಳಿಗೆ 10% ಮತ್ತು ಖಾಸಗಿ ವರ್ಗದ ಕೊಠಡಿಗಳಿಗೆ 25% ಹೆಚ್ಚಿಸಲು.
6) ಈಗಾಗಲೇ SAST ಅಡಿಯಲ್ಲಿ ನೊಂದಾಯಿಸಲಾದ ಆಸ್ಪತ್ರೆಗಳನ್ನು ಮತ್ತು ಪರಿಷ್ಕೃತ ಒಪ್ಪಂದವನ್ನು KASS ಯೋಜನೆಗೆ ಅನ್ವಯಿಸಿ ಮುಂದುವರೆಸಲು.
7) ಈಗಾಗಲೇ CGHS ಪ್ಯಾಕೇಜ್‌ಗಳಡಿ NABH ಮಾನ್ಯತೆಯನ್ನು ಪಡೆದಿರುವ ನೊಂದಾಯಿತ ಆಸ್ಪತ್ರೆಗಳಿಗೆ ಪ್ರೋತ್ಸಾಹಕವಾಗಿ ಪ್ಯಾಕೇಜ್ ದರಗಳ ಮೇಲೆ 15% ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತಿದೆ. ಇದರನ್ವಯ KASS ಪ್ಯಾಕೇಜ್‌ಗಳಿಗೂ ಸಹ 15% ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡಲು.
8) ರಾಜ್ಯ ಸರ್ಕಾರಿ ನೌಕರರು KASS ಪ್ಯಾಕೇಜ್‌ಗಳಡಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಆಯ್ಕೆಯನ್ನು ನೀಡಲು ಅವಕಾಶ ಕಲ್ಪಿಸಲು ಹಾಗೂ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಸರ್ಕಾರಿ ನೌಕರರು ವಂತಿಕೆಯನ್ನು ಪಾವತಿಸುವುದು. KASS ಪ್ಯಾಕೇಜ್‌ನಡಿ ಹೊರರೋಗಿಗಳಾಗಿ ಪಡೆದ ಚಿಕಿತ್ಸೆಗೆ ತಗಲುವ ವೆಚ್ಚವನ್ನು CGHS ದರದಡಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಸರ್ಕಾರ (ವೈದ್ಯಕೀಯ ಹಾಜರಾತಿ) ನಿಯಮ-1963 ರಡಿ ಮರುಪಾವತಿ ಪಡೆಯಲು ಮತ್ತು KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದ ಸರ್ಕಾರಿ ನೌಕರರು ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು-1963 ರಡಿ ಭೌತಿಕ ಬಿಲ್‌ಗಳನ್ನು ಸಲ್ಲಿಸುವ ಮೂಲಕ ಪ್ರಸ್ತುತ ಕಾರ್ಯವಿಧಾನದಂತೆ CGHS ದರಗಳ ಪ್ರಕಾರ ವೈದ್ಯಕೀಯ ವೆಚ್ಚಗಳ ಮರುಪಾವತಿ ಹಡಿದಾನದಂತೆ CGHS ದರ
ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮೇಲೆ ಕ್ರಮ ಸಂಖ್ಯೆ:1 ರಿಂದ 3 ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ನೀಡಲಾದ ಕಾರ್ಯನೀತಿ ಸೂಚನೆಗಳನ್ನು ಭಾಗಶ: ಮಾರ್ಪಡಿಸಿ ಪರಿಷ್ಕೃತ ಕಾರ್ಯನೀತಿ ಸೂಚನೆಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020 ០៥: 02.04.2025
1. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಈ ಕೆಳಕಂಡಂತೆ ಪರಿಷ್ಕೃತ ಸೂಚನೆಗಳನ್ನು ನೀಡಲಾಗಿದೆ:-
1. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಮಹತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಯಾಗಿದ್ದು, ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾದಾಗ ఎలా ಹೊರರೋಗಿ ವೈದ್ಯಕೀಯ ಚಿಕಿತ್ಸೆಗಳು, ಔಷಧೋಪಚಾರಗಳು, ವೈದ್ಯಕೀಯ ತಪಾಸಣೆಗಳು, ಒಳರೋಗಿ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ ಮುಂತಾದ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲಾಗುವುದು.
ii. ಯೋಜನೆಯ ಮೊದಲನೇ ಹಂತದಲ್ಲಿ KASS ಯೋಜನೆಯಡಿ ಒಳಗೊಂಡ ಒಳರೋಗಿ ಚಿಕಿತ್ಸಾ (In-patient Treatment) ವಿಧಾನಗಳನ್ನು ಮಾತ್ರ ಪ್ರಾರಂಭಿಸಲಾಗುವುದು. ಹೊರರೋಗಿ ಚಿಕಿತ್ಸಾ ವಿಧಾನಗಳು (OPT) ಆಯುಷ್ ಚಿಕಿತ್ಸಾ ವಿಧಾನಗಳನ್ನು ಯೋಜನೆಯ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು. KASS ಚಿಕಿತ್ಸಾ ವಿಧಾನಗಳಲ್ಲಿ ಒಳಗೊಂಡ ಡೇ ಕೇರ್ (Day – Care) ಚಿಕಿತ್ಸಾ ವಿಧಾನಗಳನ್ನು ಹೊರತು ಪಡಿಸಿ ಉಳಿದ ಡೇ ಕೇರ್ ಚಿಕಿತ್ಸೆಗಳನ್ನು ಕೂಡ ಪರಿಗಣಿಸಲಾಗುವುದು. ಯೋಜನೆಯ ಮುಂದಿನ ಹಂತದಲ್ಲಿ
iii.
KASS PACKAGE MASTER: 0
CGHS, AB-ArK, National Health Authority (NHA) ಪ್ರಕಟಿಸಿರುವ HBP 2022 ರಡಿ ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು (ಶಸ್ತ್ರ ಚಿಕಿತ್ಸೆಗಳು ಹಾಗೂ ಮೆಡಿಕಲ್ ಮ್ಯಾನೇಜ್ ಮೆಂಟ್) ಒಳಗೊಂಡಿರುತ್ತವೆ:
ಈ KASS ಮಾಸ್ಟರ್ ಪ್ಯಾಕೇಜ್ ದರಗಳನ್ನು SAST ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ಕ್ರಮವಹಿಸತಕ್ಕದ್ದು.
iv. CGHS ಪ್ಯಾಕೇಜ್ ಅಡಿಯಲ್ಲಿ ನಿಗದಿಪಡಿಸಲಾದ ಇಂಪ್ಲಾಂಟ್‌ಗಳನ್ನು ಮುಂದುವರೆಸುವುದು ಹಾಗೂ CGHS ಅಡಿಯಲ್ಲಿ ನಿಗದಿಪಡಿಸದಿರುವ ಇಂಪ್ಲಾಂಟ್‌ಗಳನ್ನು HBP 2022 ರಲ್ಲಿ ನಿಗದಿಪಡಿಸಿರುವ ಇಂಪ್ಲಾಂಟ್ ಹಾಗೂ ದರಗಳನ್ನು ಅಳವಡಿಸಲು ಹಾಗೂ ಈ ರೀತಿಯ ಕ್ರಮವನ್ನು SAST ಅಡಿಯಲ್ಲಿ ತಾಂತ್ರಿಕ ಸಮಿತಿಯ ಅನುಮೋದನೆ ಪಡೆದು ಕ್ರಮ ಕೈಗೊಳ್ಳತಕ್ಕದ್ದು
V.
CGHS ಅಡಿಯಲ್ಲಿ ಚಿಕಿತ್ಸೆಗಳನ್ನು ನೀಡಿದಲ್ಲಿ CGHS ದರಗಳನ್ವಯ Semi Private ಕೊಠಡಿಗಳಿಗೆ ಅನ್ವಯವಾಗಲಿದ್ದು, ಈ ದರಗಳನ್ನು ಖಾಸಗಿ ವರ್ಗದ ಕೊಠಡಿಗೆ ಶೇ. 15% ಹೆಚ್ಚಿಸಲು ಮತ್ತು ಸಾಮಾನ್ಯ ವಾರ್ಡ್ 10% ರಷ್ಟು ಕಡಿತಗೊಳಿಸಿ KASS ಪ್ಯಾಕೇಜ್‌ಗಳಿಗೆ ದರಗಳನ್ನು ಅಳವಡಿಸಿಕೊಳ್ಳತಕ್ಕದ್ದು.
vi
. HBP 2022 ಪ್ಯಾಕೇಜ್ ಅಡಿಯಲ್ಲಿ ದರಗಳನ್ನು ಸಾಮಾನ್ಯ ವಾರ್ಡ್‌ಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು ಇದಲ್ಲದೇ ಬೆಂಗಳೂರನ್ನು ಟೈರ್- 1 (Tier-1) ಸಿಟಿ, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳನ್ನು ಟೈರ್-2 ಸಿಟಿಗಳು ಮತ್ತು ರಾಜ್ಯದ ಉಳಿದ ಪ್ರದೇಶಗಳನ್ನು ಟೈರ್- ಸಿಟಿಗಳ ಅಡಿಯಲ್ಲಿ ದರಗಳನ್ನು ನಿಗದಿಪಡಿಸಲಾಗಿದೆ. ಆದರೆ HBP ಪ್ಯಾಕೇಜ್ ರಡಿ ಚಿಕಿತ್ಸೆ ಪಡೆಯುವ ರಾಜ್ಯದ ಎಲ್ಲಾ ಪ್ರದೇಶಗಳ ಸರ್ಕಾರಿ ನೌಕರರಿಗೆ ಟೈರ್-3 ಪ್ಯಾಕೇಜ್ ದರಗಳನ್ನು ಏಕರೂಪವಾಗಿ ಅಳವಡಿಸಿಕೊಳ್ಳಲು ಹಾಗೂ CHGS ಮಾದರಿಯಲ್ಲಿ HBP-2022 ಪ್ಯಾಕೇಜ್‌ರಡಿ ಸಹ ಅರೆ-ಖಾಸಗಿ ವರ್ಗದ ಕೊಠಡಿಗಳಿಗೆ 10% ಮತ್ತು ಖಾಸಗಿ ವರ್ಗದ ಕೊಠಡಿಗಳಿಗೆ 25% ಹೆಚ್ಚಿಸುವುದು.
vii.
SAST ಅಡಿಯಲ್ಲಿ ಹಾಗೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು-1963 ರಡಿ ಈಗಾಗಲೇ ನೋಂದಾಯಿಸಲಾದ ಆಸ್ಪತ್ರೆಗಳನ್ನು KASS ಯೋಜನೆಯ ಒಪ್ಪಂದವನ್ನು ಅನ್ವಯಿಸಿ ಮುಂದುವರೆಸತಕ್ಕದ್ದು.
viii
. CGHS ಪ್ಯಾಕೇಜ್‌ಗಳಡಿ NABH ಮಾನ್ಯತೆಯನ್ನು ಪಡೆದಿರುವ ನೋಂದಾಯಿತ ಆಸ್ಪತ್ರೆಗಳಿಗೆ ಈಗಾಗಲೇ ಪ್ರೋತ್ಸಾಹಕವಾಗಿ ಪ್ಯಾಕೇಜ್ ದರಗಳ ಮೇಲೆ ನೀಡಲಾಗುತ್ತಿರುವ 15% ಹೆಚ್ಚುವರಿ ಪ್ರೋತಾಹ ಧನವನ್ನು KASS ನಲ್ಲಿ ಒಳಗೊಂಡಿರುವ ಎಲ್ಲ ಪ್ಯಾಕೇಜ್‌ಗಳಿಗೂ ಸಹ ಅನ್ವಯಿಸತಕ್ಕದ್ದು.
ರಾಜ್ಯ ಸರ್ಕಾರಿ ನೌಕರರು KASS ಪ್ಯಾಕೇಜ್‌ಗಳಡಿ ಚಿಕಿತ್ಸೆ ಪಡೆಯಲು ಇಚ್ಛಿಸಿದಲ್ಲಿ KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಸರ್ಕಾರಿ ನೌಕರರು ವಂತಿಕೆಯನ್ನು ಪಾವತಿಸಬೇಕಾಗುವುದು. KASS ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದ ಸರ್ಕಾರಿ ನೌಕರರು KASS ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಕರ್ನಾಟಕ ಸರ್ಕಾರ (ವೈದ್ಯಕೀಯ ಹಾಜರಾತಿ) ನಿಯಮ-1963 ರಡಿ ಭೌತಿಕ ಬಿಲ್‌ಗಳನ್ನು ಸಲ್ಲಿಸುವ ಮೂಲಕ ಪ್ರಸ್ತುತ ಕಾರ್ಯವಿಧಾನದಲ್ಲಿ CGHS ದರಗಳ ಪ್ರಕಾರ ವೈದ್ಯಕೀಯ ವೆಚ್ಚಗಳ ಮರುಪಾವತಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಸರ್ಕಾರಿ ಮರ 2 ಆ
2 బెంగళూ *
ಹೊರರೋಗಿ ಚಿಕಿತ್ಸೆಗಳ ಸಂಬಂಧದಲ್ಲಿ ಸರ್ಕಾರವು ದೀರ್ಘಕಾಲಿಕ ಖಾಯಿಲೆಗಳು(Chronic Diseases) ಎಂದು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 48 ಎಸ್ ಆರ್ ಎಫ್ 2018 ದಿನಾಂಕ: 14.03.2018 ಹಾಗೂ ಸರ್ಕಾರವು ಕಾಲಕಾಲಕ್ಕೆ, ಗುರುತಿಸಿ ಅಧಿಸೂಚಿಸುವ ಖಾಯಿಲೆಗಳ ಸಂಬಂಧ ಮಾತ್ರ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅರ್ಹ ಸದಸ್ಯರು ಪಡೆದ ಹೊರರೋಗಿ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು (ವೈದ್ಯರ ಸಮಾಲೋಚನಾ ಶುಲ್ಕ, ವೈದ್ಯಕೀಯ ತಪಾಸಣಾ ವೆಚ್ಚ ಹಾಗೂ ಸಂಬಂಧಪಟ್ಟ ಖಾಯಿಲೆಗೆ ಭರಿಸಿದ ಔಷಧಿಗಳ ವೆಚ್ಚ), ಪ್ರಸ್ತುತ ಅನುಸರಿಸಲಾಗುತ್ತಿರುವ ಕಾರ್ಯವಿಧಾನದಂತೆ ಸಂಬಂಧಪಟ್ಟ ಕಚೇರಿಯ ನಿಯಂತ್ರಣಾಧಿಕಾರಿಗಳು (Controlling Officers) ಸರ್ಕಾರಿ ನೌಕರರಿಗೆ ಹಿಂಬರಿಸತಕ್ಕದ್ದು ಹೊರರೋಗಿ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಐಟಂವಾರು ದರಗಳನ್ನು ಪ್ರಸ್ತುತ ಅನುಸರಿಸಲಾಗುತ್ತಿರುವಂತೆ CGHS ವೈದ್ಯರ ಸಮಾಲೋಚನಾ ದರಗಳು ಹಾಗೂ ವೈದ್ಯಕೀಯ ತಪಾಸಣೆಗಳ ದರಗಳನ್ನು ಅಳವಡಿಸಿಕೊಂಡು ನಿರ್ಧರಿಸತಕ್ಕದ್ದು.
xi. ಕಾರ್ಯವಿಧಾನಗಳನ್ನು ನಿಗದಿಪಡಿಸದಿರುವ (Unspecified Procedure)
ಚಿಕಿತ್ಸಾ ವಿಧಾನಗಳಿಗೆ AB-ArK ರಡಿ ನಿಗದಿಪಡಿಸಿರುವ ಮಾನದಂಡಗಳನ್ನಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರಿಗೆ ಚಿಕಿತ್ಸಾ ದರ ನಿಗದಿಪಡಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
2. ವಾರ್ಡ್ ಅರ್ಹತೆಗಳ ಪರಿಷ್ಕರಣೆ:
ವಾರ್ಡ್ ಅರ್ಹತೆಗಳನ್ನು ಸರಳೀಕರಿಸಲು ಹಾಗೂ ವೃಂದಬಲದ ಅಂಕಿಅಂಶಗಳ ಅಧ್ಯಯನದ ಹಿನ್ನೆಲೆಯಲ್ಲಿ ವಾರ್ಡ್ ಅರ್ಹತೆಗಳನ್ನು (Entitlement) ಪ್ರಸ್ತುತ ಸರ್ಕಾರಿ ನೌಕರರ ಗುಂಪನ್ನು (Group) ಆಧರಿಸಿ ಈ ಕೆಳಕಂಡಂತೆ ನಿಗದಿಪಡಿಸಿ ಆದೇಶಿಸಿದೆ:
bod &
ಗುಂಪು ಡಿ
(Private Ward)
๒ ก
F (Semi-Private Ward)
F (General Ward)
3. “ಕುಟುಂಬ” ಪದದ (FAMILY DEFINITION) ವ್ಯಾಖ್ಯಾನದ ಪರಿಷ್ಕರಣೆ:
ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅರ್ಹ ಸದಸ್ಯರು KASS ಯೋಜನೆಯಡಿ ಹಾಗೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ)
ನಿಯಮಗಳು 1963 ರಡಿ ವೈದ್ಯಕೀಯ ಸೇವೆಗಳನ್ನು ಪಡೆಯಲು ಈ ನಿಯಮಗಳಲ್ಲಿ ಪ್ರಸ್ತುತ ವ್ಯಾಖ್ಯಾನಿಸಿರುವ “ಕುಟುಂಬ’ ಪದವನ್ನು ನಿಯಮಗಳಿಗೆ ತಿದ್ದುಪಡಿ ಕಾಯ್ದಿರಿಸಿ ಈ ಕೆಳಕಂಡಂತೆ ಮರುವ್ಯಾಖ್ಯಾನಿಸಲಾಗಿದೆ;
“” :
1. ಸರ್ಕಾರಿ ನೌಕರನ ಪತಿ ಅಥವಾ ಪತ್ನಿ,
ನೌಕರರ ಸರ್ಕಾರಿ ನೌ 20 * బెంగళూరు * 20%
ii. ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿರುವ ಆತನ ತಂದೆ ಮತ್ತು ತಾಯಿ (ಮಲ ತಾಯಿಯನ್ನೊಳಗೊಂಡಂತೆ) ಅವರು ಇತರೆ ಯಾವುದೇ ಆರೋಗ್ಯ ಸೌಲಭ್ಯಕ್ಕೆ ಒಳಪಟ್ಟಿರಬಾರದು ಹಾಗೂ ಒಬ್ಬರ ಅಥವಾ ಇಬ್ಬರ ಒಟ್ಟು ಮಾಸಿಕ ಆದಾಯ ರೂ.17000/- ಮೀರಿರಬಾರದು;
iii. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಹಾಗೂ ಸಾಮಾನ್ಯವಾಗಿ ಅವನೊಂದಿಗೆ ವಾಸವಾಗಿರುವ (wholly dependent on a government employee and generally residing with him) 2, ಪಡೆದ ಮಗ, ಮಲ ಮಗ ಸೇರಿದಂತೆ ಆತ 30 ವರ್ಷ ಪೂರೈಸುವವರೆಗೂ ಅಥವಾ ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆ ಆಗುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ;
iv. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಹಾಗೂ ಸಾಮಾನ್ಯವಾಗಿ ಅವನೊಂದಿಗೆ ವಾಸವಾಗಿರುವ ಮಗಳು, ದತ್ತು ಪಡೆದ ಮಗಳು, ಮಲ ಮಗಳು ಸೇರಿದಂತೆ ಆಕೆ 30 ವರ್ಷ ಪೂರೈಸುವವರೆಗೆ ಅಥವಾ ಸ್ವಂತ ಸಂಪಾದನೆ ಮಾಡುವವರೆಗೆ ಅಥವಾ ಮದುವೆ ಆಗುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ;
v. ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿರುವ ಮತ್ತು ಯಾವುದೇ ಸ್ವಂತ ಇಲ್ಲದೇ ಸರ್ಕಾರಿ ನೌಕರನನ್ನು ಅವಲಂಬಿಸಿರುವ ವಿಧವೆ/ವಿಚ್ಛೇದಿತ ಮಗಳು;
vi. 30 ವರ್ಷ ಮೀರಿದ ಅವಿವಾಹಿತ ಮಗ ಅಥವಾ ಮಗಳು- ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಸ್ವಂತ ಸಂಪಾದನೆ ಮಾಡಲು ಅಸಮರ್ಥರಾಗಿದ್ದಲ್ಲಿ;
4. きゅんぱのぎ శుటుంబ ವ್ಯಾಖ್ಯಾನಿಸಲಾದ ಪದದ ವ್ಯಾಖ್ಯಾನವನ್ನು ಮರು ಹಿನ್ನೆಲೆಯಲ್ಲಿ ಮೇಲೆ (3) ರಲ್ಲಿ ಓದಲಾದ ದಿನಾಂಕ:09.03.2023ರ ಸರ್ಕಾರದ ಆದೇಶದ ಅನುಬಂಧ-1 ರ FORM A-1 ರ ಕ್ರಮ ಸಂಖ್ಯೆ 6 ರ ಬದಲಾಗಿ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು;
“6. ದಿನಾಂಕ: 02.04.2025 ರ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 16 ಎಸ್‌ಎಂಆರ್ 2020 ರಲ್ಲಿ ಕುಟುಂಬ ಪದವನ್ನು ವ್ಯಾಖ್ಯಾನಿಸಿರುವಂತೆ ನನ್ನ ಕುಟುಂಬದಲ್ಲಿ ಯಾವುದೇ ಬದಲಾವಣೆಗಳಾದಲ್ಲಿ (ಉದಾ: ಮಗ/ಮಗಳ ಮದುವೆ, ಸದಸ್ಯರ
ಆದಾಯ,ಮಕ್ಕಳ ಜನನ, ಸದಸ್ಯರ ಮರಣ ಇತ್ಯಾದಿ) ನಾನು ಅಂತಹ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸಲು ಬದನಾಗಿರುತ್ತೇನೆ. ಸಂದರ್ಭಾನುಸಾರ ನ್ಯ ಯೋಜನೆಯಿಂದ ಹೆಸರನ್ನು ತೆಗೆದು ಹಾಕಲು ಅಥವಾ ಸೇರ್ಪಡೆ ಮಾಡಲು ನಾನು ಬುದ್ಧನಾಗಿರುತ್ತೇನೆ.”
*
*
ನೆ ಕುಟುಂಬ” ಪದವನ್ನು ಸರ್ಕಾರವು ಮರು ವ್ಯಾಖ್ಯಾನಿಸಿರುವ ಹಿನ್ನೆಲೆಯಲ್ಲಿ HRMS ತಂತ್ರಜ್ಞಾನದಲ್ಲಿ KASS ಯೋಜನೆಗೆ ಸಂಬಂಧಿಸಿದಂತೆ ಯಾವುದೇ ನಮೂದುಗಳನ್ನು ತಿದ್ದುಪಡಿ ಮಾಡಲು ಅಗತ್ಯತೆ ಇದ್ದಲ್ಲಿ ಸೂಕ್ತ ಕ್ರಮ ವಹಿಸುವಂತೆ ಯೋಜನಾ ನಿರ್ದೇಶಕರು, HRMS ಇವರಿಗೆ ಸೂಚಿಸಲಾಗಿದೆ.
ವಿವರಣೆ: ಕುಟುಂಬ ಪದದ ಪರಿಷ್ಕೃತ ವ್ಯಾಖ್ಯಾನವು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರಡಿ ಪಡೆಯುವ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳಿಗೆ ಕೂಡ ಈ ಆದೇಶವನ್ನು ಹೊರಡಿಸಿದ ನಂತರ ಪಡೆದ ವೈದ್ಯಕೀಯ ಚಿಕಿತ್ಸೆಗಳಿಗೆ ಅನ್ವಯವಾಗುತ್ತವೆ.
5. KASS ಯೋಜನೆಗೆ ಸರ್ಕಾರಿ ನೌಕರರ ವಂತಿಕೆ: ಈ ಸಂಬಂಧ ಸರ್ಕಾರದಿಂದ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು.
6. KASS ಯೋಜನೆಗೆ SAST ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸತಕ್ಕದ್ದು. ಅಲ್ಲಿಯವರೆಗೆ ಪ್ರಸ್ತುತ SAST ಬಳಸುತ್ತಿರುವ ತಂತ್ರಾಂಶವನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಉಪಯೋಗಿಸಿಕೊಂಡು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳತಕ್ಕದ್ದು.
7. ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸುವ ಖಾಸಗಿ ಆಸ್ಪತ್ರೆಗಳೊಂದಿಗೆ (Memorandum of Understanding MoU) ಮಾಡಿಕೊಳ್ಳತಕ್ಕದ್ದು. ಈ ಯೋಜನೆಯಡಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸುವ ಅರ್ಹ ಖಾಸಗಿ ಆಸ್ಪತ್ರೆಗಳನ್ನು ಯೋಜನೆಯಡಿ ನೋಂದಾಯಿಸಿ ಅಧಿಸೂಚಿಸುವ ಕಾರ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದಲೇ ಕೈಗೊಳ್ಳತಕ್ಕದ್ದು,
8. ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸುವ ವಿವಿಧ ತಜ್ಞತೆಯ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ತಪಾಸಣಾ ಕೇಂದ್ರಗಳು ಹೊಂದಿರಬೇಕಾದ ಮೂಲ ಸೌಕರ್ಯಗಳು ಹಾಗೂ ಇತರೆ ಮಾನದಂಡಗಳನ್ನು (Empanelment Criteria) ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ರೂಪಿಸತಕ್ಕದ್ದು.
9. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಆದೇಶಗಳಲ್ಲಿ ಸರ್ಕಾರದಿಂದ ನೀಡಲಾಗಿರುವ ಇತರೆ ಸೂಚನೆಗಳು ಮುಂದುವರೆಯುತ್ತವೆ.
10. KASS ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧವಾಗಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ಕ್ಕೆ ಸೂಕ್ತ ತಿದ್ದುಪಡಿ ಮಾಡಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುವುದು.
ಈ ಆದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಆಕುಕ 266 ಸಿಜಿಇ 2023 ದಿನಾಂಕ:15.02.2024ರಲ್ಲಿ ನೀಡಿರುವ ಅಭಿಪ್ರಾಯ ಹಾಗೂ ಆರ್ಥಿಕ ಇಲಾಖೆಯು ಹಿಂಬರಹ ಸಂಖ್ಯೆ: ಆಇ 20 ವೆಚ್ಚ-12/2023 ದಿನಾಂಕ: 27.09.2023 5 155-1/2023 : 08.11.2023 2 2 426-1/2022 ಅಭಿಪ್ರಾಯ/ ಸಹಮತಿಯಂತೆ ಹೊರಡಿಸಲಾಗಿದೆ.
2:29.01.202500 ออ 21.02.2025 2 17.03.202502
రాద కారి ರ್ನಾಟಕ
*zforistach *
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
Chr
(ಚಂದ್ರಶೇಖರ್)
ಸರ್ಕಾರದ ವಿಶೇಷ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
y. (ಸೇವಾ ನಿಯಮಗಳು)
ಸಂಕಲನಕಾರರು, ಇ-ರಾಜ್ಯಪತ್ರ ಬೆಂಗಳೂರು.
ಇವರಿಗೆ,
1. ה ( )১৯৯৯) / (৯৯-৯)/ (৯৯৫(, ಕರ್ನಾಟಕ, ಬೆಂಗಳೂರು.
2. ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು,
3. ಅಭಿವೃದ್ಧಿ ಆಯುಕ್ತರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಿಧಾನಸೌಧ, ಬೆಂಗಳೂರು.
4. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
5. ಮುಖ್ಯ ಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
6. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು.
7. ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರು, ರಾಜ ಭವನ, ಬೆಂಗಳೂರು
8. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು.
9. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು.
10. ಆಯುಕ್ತರು, ಆಯುಷ್ ಇಲಾಖೆ, ಬೆಂಗಳೂರು.
11. ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು.
12. ಆಯುಕ್ತರು, ಖಜಾನೆ-2, ಖಜಾನ ಆಯುಕ್ತರ ಕಛೇರಿ, 6ನೇ ಮಹಡಿ, ಕೆ.ಪಿ.ಟಿ.ಸಿ.ಎಲ್. ಅರಮನೆ ರಸ್ತೆ, ಬೆಂಗಳೂರು.
13. ಯೋಜನಾ ನಿರ್ದೇಶಕರು, HRMS 2.0. ಕೆಪಿಸಿಎಲ್ ಹಸಿರು ಕಟ್ಟಡ, ಬೆಂಗಳೂರು.
14. ಎಲ್ಲಾ ಇಲಾಖಾ ಮುಖ್ಯಸ್ಥರು.
15. ಎಲ್ಲಾ ಪ್ರಾದೇಶಿಕ ಆಯುಕ್ತರು.
16. ಎಲ್ಲಾ ಜಿಲ್ಲಾಧಿಕಾರಿಗಳು/ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.
17. ನಿವಾಸಿ ಆಯುಕ್ತರು, ಕರ್ನಾಟಕ ಭವನ, ನಂ.10, ಕೌಟಿಲ್ಯ ಮಾರ್ಗ, ಚಾಣಕ್ಯಪುರಿ, ನವದೆಹಲಿ-110011.
18. ಸರ್ಕಾರದ ಅಪರ ಕಾರ್ಯದರ್ಶಿ, ಸಚಿವ ಸಂಪುಟ ಶಾಖೆ (ಪ್ರಕರಣ ಸಂಖ್ಯೆ: 219/2025)
19. ರಾಜ್ಯಾ
ಧ್ಯಕ್ಷರು, ಕರ್ನಾಟಕ ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರು.
20. 2OF OW ವಿಧಾನಸೌಧ. , + (-12)/
21. ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಲೆಕ್ಕಪತ್ರ).
22. ಶಾಖಾ ರಕ್ಷಾ ಕಡತ/ಬಿಡಿ ಪ್ರತಿಗಳು.
ಈ ಆದೇಶವನ್ನು ಸರ್ಕಾರದ ಅಧಿಕೃತ ಜಾಲತಾಣ https://dpar.karnataka.gov.in ರಲ್ಲಿ ವೀಕ್ಷಿಸಬಹುದು.