siddharudhara jatre 6th Kannada notes, siddaruda jatre question answer 6ನೇ ಕನ್ನಡ ಟಿಪ್ಪಣಿಗಳು, ಸಿದ್ದಾರೂಢ ಜಾತ್ರೆ ಪ್ರಶ್ನೆ ಉತ್ತರ

siddharudhara jatre 6ನೇ ತರಗತಿ ಕನ್ನಡ ಪಾಠ ಸಿದ್ಧಾರೂಢರ ಜಾತ್ರೆ ಈ ಪಾಠದ ಪಿಡಿಎಫ್ ನಿಮಗೆ ಬೇಕಾದಲ್ಲಿ ಕೆಳಗಿನ ನೀಲಿ ಅಕ್ಷರಗಳನ್ನು ಒತ್ತಿ

ಸಿದ್ದಾರೂಢರ ಜಾತ್ರೆ ನೋಟ್ಸ್ ಪಿಡಿಎಫ್ pdf

ಪಿಡಿಎಫ್‌ನಲ್ಲಿ ಸಿದ್ದಾರೂಢರ ಜಾತ್ರೆ ಪ್ರಶ್ನೋತ್ತರ, 6ನೇ ಕನ್ನಡ ಪಾಠ 6, 6ನೇ ತರಗತಿಯ ಕನ್ನಡ ಅಧ್ಯಾಯ 6, ಸಿದ್ದಾರೂಢ ಜಾತ್ರೆ ಟಿಪ್ಪಣಿಗಳು,

ಪದಗಳ ಅರ್ಥ ಬರೆಯಿರಿ
೧. ಹಿರೇಮಣಿ—ತರಗತಿಯ ನಾಯಕ, ಮುಂದಾಳು.

ಕರ್ಮಭೂಮಿ—ಕೆಲಸ ಮಾಡುವ ಭೂಮಿ ಅಥವಾ ಜಾಗ
೩. ಪತಾಕೆ—-ಧ್ವಜ
೪. ಜನಸ್ತೋಮ—ಜನರ ಗುಂಪು

ಆ. ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ

೧. ಅಲ್ಲಿ ಜಾತ್ರೆ ದಿನ ಶಿವರಾತ್ರಿಯ ಕೂಡುತ್ತದೆ.

ಶಿವರಾತ್ರಿಯ ದಿನ ಅಲ್ಲಿ ಜಾತ್ರೆ ಕೂಡುತ್ತದೆ.

೨. ಮಠದ ಮಂಟಪ ಮುಂದೆ ಹಾಕಿದ್ದರು ದೊಡ್ಡ.

ಮಠದ ಮುಂದೆ ದೊಡ್ಡ ಮಂಟಪ ಹಾಕಿದ್ದರು.

೩. ಮಿಠಾಯಿಗಳನ್ನು ಶಾಲೆಯ ಕೊಂಡರು ಮಕ್ಕಳು.

ಶಾಲೆಯ ಮಕ್ಕಳು ಮಿಠಾಯಿಗಳನ್ನು ಕೊಂಡರು.

೪. ಹೋರಾಟದ ಸಕ್ರಿಯವಾಗಿದ್ದ ಸ್ವಾತಂತ್ರ್ಯ ಮಠವಿದು ಸಮಯದಲ್ಲಿ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು.

ಇ. ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ

೧.  ಪ್ರೇರಣೆ
ತಮ್ಮನ್ನು ನಂಬಿ ಬಂದವರಿಗೆ ದೇವರ ಭಕ್ತಿಯಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂಬ ಪ್ರೇರಣೆಯನ್ನು ಸಿದ್ಧಾರೂಢರು ತುಂಬಿದರು.

೨.   ಕಷ್ಟಕಾರ್ಪಣ್ಯ
ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಧೈರ್ಯದಿಂದ ಇರಬೇಕು.

೩.  ಹುರುಪು
ಭಾರತ ದೇಶದ ಜನ ಸ್ವಾತಂತ್ರ ಹೋರಾಟದಲ್ಲಿ ಹುರುಪಿನಿಂದ ಭಾಗವಹಿಸಿದರು.

೪.   ಸ್ವಯಂಸೇವಕ
ಶಾಲೆಯ ಬಾಲಕರು ಮಠದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು.

ಈ. ಒಂದು ವಾಕ್ಯದಲ್ಲಿ ಉತ್ತರಿಸಿರಿ .


೧. ಸಿದ್ಧಾರೂಢರ ಮಠವು ಯಾವ ಜಿಲ್ಲೆಯಲ್ಲಿದೆ ?

ಉತ್ತರ: ಸಿದ್ಧಾರೂಢರ ಮಠವು ಧಾರವಾಡ ಜಿಲ್ಲೆಯಲ್ಲಿದೆ.

೨. ಶಾಲೆಯ ಮಕ್ಕಳಿಗೆ ದಾರಿಯ ದಣಿವು ಏಕೆ ಆಗಲಿಲ್ಲ ?

ಉತ್ತರ: ಹಲವು ಚರ್ಚೆ ಸಂವಾದಗಳು ದಾರಿಯುದ್ದಕ್ಕೂ ನಡೆದಿದ್ದರಿಂದ ಶಾಲೆಯ ಮಕ್ಕಳಿಗೆ ದಣಿವು ಆಗಲಿಲ್ಲ.

೩. ಸಿದ್ಧಾರೂಢ ಸ್ವಾಮಿಗಳು ಮೂಲತಃ ಯಾವ ಊರಿನವರು ?

ಉತ್ತರ: ಸಿದ್ಧಾರೂಢ ಸ್ವಾಮಿಗಳು ಮೂಲತಃ ಬೀದರ್‌ ಜಿಲ್ಲೆಯ ಚಳಕಾಪುರದವರು.

೪. ಸ್ವಾಮಿಗಳು ಯಾವ ಮಂತ್ರವನ್ನು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು ?

ಉತ್ತರ: ʼಓಂ ನಮಃ ಶಿವಾಯʼ ಎಂಬ ಮಂತ್ರವನ್ನು ಸ್ವಾಮಿಗಳು ಜಾತಿಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು.

೫. ಮಠದಲ್ಲಿ ಶಾಲೆಯ ಮಕ್ಕಳು ಯಾವ ಕೆಲಸಗಳನ್ನು ಮಾಡಿದರು ?

ಉತ್ತರ: ಮಠದಲ್ಲಿ ಶಾಲೆಯ ಮಕ್ಕಳು ಕೆಲವರು ನೀರು ತಂದು ಕೊಟ್ಟರು ಕೆಲವರು ಬಂದ ಜನರಿಗೆ ಊಟ ಬಡಿಸಿದರು.

೬. ಶಾಲಾ ಮಕ್ಕಳು ಯಾವ ಆಟಗಳನ್ನು ಆಡಿದರು ?

ಉತ್ತರ: ಶಾಲಾ ಮಕ್ಕಳು ತೊಟ್ಟಿಲ ಜೀಕ ಹಾಗೂ ಕುದುರೆ ಆನೆ ಒಂಟೆಗಳಿಂದ ಕೂಡಿದ ತಿರುಗು ಯಂತ್ರಗಳಲ್ಲಿ ಕುಳಿತು ಆಟವಾಡಿದರು.

೭. ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದ ರಾಷ್ಟ್ರನಾಯಕರು ಯಾರು ?

ಉತ್ತರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಗಾಂದೀಜಿ ಮತ್ತು ತಿಲಕರಂಥ ರಾಷ್ಟ್ರೀಯ ನಾಯಕರು ಸಿದ್ಧಾರೂಢರ ಮಠದಿಂದ ಸ್ಫೂರ್ತಿಯನ್ನು ಪಡೆದರು.

ಉ. ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಸಿದ್ಧಾರೂಢ ಸ್ವಾಮಿಗಳ ಜೀವನದ ಬಗ್ಗೆ ತಿಳಿಸಿರಿ.

ಸಿದ್ಧಾರೂಢರು ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1839ರಲ್ಲಿ ಜನಿಸಿದರು. ಅವರಿಗೆ ಚಿಕ್ಕಂದಿನಲ್ಲಿಯೇ ಐಹಿಕ ಸುಖ ಭೋಗಗಳಲ್ಲಿ ವಿರಕ್ತಿ ಬಂದು ಸನ್ಯಾಸವನ್ನು ಸ್ವೀಕಾರ ಮಾಡಿದರು. ಮನೆಬಿಟ್ಟು ಸಂಚಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಾ ತಮ್ಮ ನಲವತ್ತೊಂದನೆಯ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಬಂದು ನೆಲೆ ನಿಂತು ಅನೇಕ ಮಹಾನ್‌ ವ್ಯಕ್ತಿಗಳಿಗೆ ಸ್ಫೂರ್ತಿಯಾದರು.

2. ಮಠವು ಸಮಾಜದಲ್ಲಿ‌ ಹೇಗೆ ದಾರಿದೀಪವಾಗಿದೆ?

ಮಠಗಳು ಹಲವಾರು ರೀತಿಯಲ್ಲಿ ಸಮಾಜಕ್ಕೆ ಸಹಾಯವನ್ನು ಮಾಡುತ್ತದೆ. ಬಡಬಗ್ಗರಿಗೆ ಧನ ಸಹಾಯ ಮಾಡಬಹುದು. ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಒಟ್ಟಾರೆ ಮಠಗಳು ಸಮಾಜಕ್ಕೆ ದಾರಿದೀಪವಾಗಿವೆ.

3. ಸಿದ್ಧಾರೂಢ ಜಾತ್ರೆಯ ತೇರೆಳೆಯುವ ಸಂದರ್ಭವನ್ನು ವರ್ಣಿಸಿ.

ಮಠದ ಮುಂದೆ ಒಂದು ದೊಡ್ಡ ಮಂಟಪ ಅದರ ಮುಂದೆ ಬಣ್ಣ ಬಣ್ಣದ ಅರಿವೆ ಸುತ್ತಿ ಪತಾಕೆಗಳನ್ನು ಹಚ್ಚಿ ಸಿಂಗರಿಸಿದ ದೊಡ್ಡ ತೇರು ನಿಂತಿತ್ತು. ನಾಲ್ಕು ಗಂಟೆಗೆ ಜನರೆಲ್ಲ ತೇರು ನೋಡಲು ಸೇರಿದರು. ಕೆಲವರು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತರು. ಕೆಲವರು ತೇರಿನ ಹಗ್ಗ ಹಿಡಿದು ಅದರ ಸಮೀಪ ನಿಂತರು. ಎಲ್ಲರೂ ʼಹರ ಹರ ಮಹಾದೇವ! ʼ ಎಂದು ಭಕ್ತಿಯಿಂದ ಕೂಗುತ್ತಾ ಎಳೆಯತೊಡಗಿದರು.

ಊ. ಕೆಳಗಿನ ವಾಕ್ಯಗಳಲ್ಲಿ ಜೋಡುನುಡಿಗಳನ್ನು ಗುರುತಿಸಿ ಬರೆಯಿರಿ.

1.ನಮ್ಮ ನೆರೆಹೊರೆಯವರು ಬಹಳ ಒಳೆಯವರು.

ನೆರೆಹೊರೆ

2. ಅಮ್ಮ ರಾತ್ರಿಹಗಲು ಕೆಲಸ ಮಾಡುತ್ತಾಳೆ.

ರಾತ್ರಿಹಗಲು

3. ನಾಟಕದಲ್ಲಿ ವಿಧವಿಧವಾದ ಉಡುಗೆ ತೊಡುಗೆ ಧರಿಸಿರುತ್ತಾರೆ.

ಉಡುಗೆ ತೊಡುಗೆ

ಋ. ಸರಿಹೊಂದುವ ಬಿಡಿ ಪದಗಳನ್ನು ಸೇರಿಸಿ ಜೋಡುನುಡಿಗಳನ್ನು ರಚಿಸಿರಿ.

ಆಟ ಪಾಠ, ತಿಂಡಿ ತೀರ್ಥ, ಹೊರಗೆ ಒಳಗೆ , ದಿಕ್ಕು ದೆಸೆ, ಅಕ್ಕ ಪಕ್ಕ, ಹಳ್ಳ ಕೊಳ್ಳ

Leave a Comment