SSLC social science part 2 notes in Kannada medium, 10 ನೇ ತರಗತಿ ಸಮಾಜ ವಿಜ್ಞಾನ | 10ನೇ ತರಗತಿ ಇತಿಹಾಸ | ಭೂಗೋಳ |

10th class social science part 2 in Kannada medium
SSLC SOCIAL SCIENCE PART 2 QUESTION ANSWER IN KANNADA

sslc social science kannada medium notes download

10ನೇ ತರಗತಿ ಸಮಾಜ ವಿಜ್ಞಾನ‌ ಭಾಗ 2 ಎಲ್ಲಾಅಧ್ಯಾಯಗಳ ನೋಟ್ಸ್,10th Standard Social Science part 2 All Chapter Question Answer 10th Class Social Science  part 2 Notes  Pdf 10th Social Science Notes part 2 Pdf Kseeb Solution For Class 10 Social Science Notes in Kannada Medium 10th Social part 2 Notes Sslc Social Science Notes Pdf Download 10th Social Science Notes 10th Samaja part 2 Notes 2024 10th Social Science part 2 Notes Pdf Karnataka State Syllabus, 10th social science notes pdf in kannada

ಇತಿಹಾಸ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 17

I. ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿಂದ ತುಂಬಿರಿ.

೧. ೧೮೫೭ರ ಹೋರಾಟವನ್ನು ಬ್ರಿಟಿಷ್ ಇತಿಹಾಸಕಾರರು ಸಿಪಾಯಿ ದಂಗೆ ಎಂದು ಕರೆದಿದ್ದಾರೆ.
೨. 1857ರ ಹೋರಾಟದ ಸಮಯದಲ್ಲಿ ಬ್ಯಾರಕ್ ಪುರದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ .
೩. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಗ್ವಾಲಿಯರ್ ನ್ನು ವಶಕ್ಕೆ
ಪಡೆದಳು.
೪. 1858ರಲ್ಲಿ ಭಾರತದಲ್ಲಿ ಬ್ರಿಟನ್ ರಾಣಿಯು ಹೊರಡಿಸಿದ ಘೋಷಣೆಯನ್ನು ಭಾರತೀಯ ಮಹಾಸನ್ನದು (ಮ್ಯಾಗ್ನಕಾರ್ಟ)  ಎಂದು ಕರೆಯಲಾಗಿದೆ.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ :

೫. ಬ್ರಿಟಿಷರ ವಿರುದ್ಧದ ೧೮೫೭ರ ಪ್ರತಿಭಟನೆಗೆ ರಾಜಕೀಯ ಅಂಶಗಳು ಪ್ರೇರಕವಾದವು ಹೇಗೆ?

ಬ್ರಿಟಿಷರು ಜಾರಿಗೆ ತಂದಿದ್ದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯ ಅನ್ವಯ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು ಡಾಲ್ ಹೌಸ್ ಯು ತಂಜಾವೂರು ಮತ್ತು
ಕಾರ್ನಾಟಿಕ್  ನವಾಬರಿಗಿದ್ದ ರಾಜ ಪದವಿಗಳನ್ನು
ರದ್ದುಪಡಿಸಿದನು. ಮೊಘಲ್ ಚಕ್ರವರ್ತಿ, ಔದ್‌ನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ ೧೮೫೭ರ ಪ್ರತಿಭಟನೆಗೆ ಪ್ರೇರಕವಾಯಿತು.

೬. ೧೮೫೭ರ ಹೋರಾಟಕ್ಕೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ.

ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳುಕ್ಷೀಣಿಸಿದವು. ಭಾರತದಲ್ಲಿದ್ದಂತಹ ಕರಕುಶಲಗಾರರು ಉದ್ಯೋಗ ಕಳೆದುಕೊಂಡರು. ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕನಷ್ಟ ಅನುಭವಿಸಿ ಶಿಥಿಲಗೊಂಡವು. ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು. ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರರು ಕೃಷಿಕರನ್ನು ಶೋಷಿಸುತ್ತಿದ್ದರು. ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು. ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕಸಂಕಷ್ಟ ಅನುಭವಿಸಿದರು. ಇದೂ ಕೂಡ ರೈತರ ಮಹಾನ್ ಪ್ರತಿಭಟನೆಗೆ ಕಾರಣವಾಯಿತು.

೭. 1857ರ ಹೋರಾಟದಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು?

ಸೈನಿಕರಿಗೆ ರಾಯಲ್ ಎನ್ಫೀಲ್ಡ್ ಎನ್ನುವ ನವೀನ ಬಂದೂಕನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು. ಹಿಂದುಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು. ಇದರಿಂದಾಗಿ ಈ ಘಟನೆಯು ದಂಗೆಗೆ ತಕ್ಷಣದ ಕಾರಣವಾಯಿತು.ಬ್ಯಾರಕ್‌ಪುರದಲ್ಲಿನ ಸೈನಿಕ ಪಡೆಯಲ್ಲಿ ಹಬ್ಬಿದ ಈ ವದಂತಿಯು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ನಿರಾಕರಿಸಿ ಮೇಲಾಧಿಕಾರಿಗಳ ವಿರುದ್ಧ ಬ್ಯಾರಕ್‌ಪುರದ ಸೈನಿಕರು ಬಂಡಾಯವೆದ್ದರು.

೮. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್‌ಕ್ಷಣದ ಕಾರಣಗಳಾವುವು?

ಸೈನಿಕರಿಗೆ ರಾಯಲ್ ಎನ್ಫೀಲ್ಡ್ ಎನ್ನುವ ನವೀನ ಬಂದೂಕನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು. ಹಿಂದುಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು. ಇದರಿಂದಾಗಿ ಈ ಘಟನೆಯು ದಂಗೆಗೆ ತಕ್ಷಣದ ಕಾರಣವಾಯಿತು.ಬ್ಯಾರಕ್‌ಪುರದಲ್ಲಿನ ಸೈನಿಕ ಪಡೆಯಲ್ಲಿ ಹಬ್ಬಿದ ಈ ವದಂತಿಯು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ನಿರಾಕರಿಸಿ ಮೇಲಾಧಿಕಾರಿಗಳ ವಿರುದ್ಧ ಬ್ಯಾರಕ್‌ಪುರದ ಸೈನಿಕರು ಬಂಡಾಯವೆದ್ದರು.

೯. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ.

೧೮೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರö್ಯ ಸಂಗ್ರಾಮವು ಹಲವಾರು ಕಾರಣಗಳಿಂದ ವಿಫಲವಾಯಿತು. ಇದು ಇಡೀ ಭಾರತವನ್ನು ವ್ಯಾಪಿಸಿದ ಹೋರಾಟವಾಗಿರಲಿಲ್ಲ. ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ದೇಶೀ ರಾಜರ ಮತ್ತು ಜಮೀನ್ದಾರರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು. ಇದು ಯೋಜಿತ ಹೋರಾಟವಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು. ಬ್ರಿಟಿಷ್
ಸೈನಿಕರಲ್ಲಿನ ಒಗ್ಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆಯು ಹೋರಾಟದ ವಿಫಲತೆಗೆ ಕಾರಣವಾಗಿದೆ. ಅಲ್ಲದೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು. ಹಾಗೆಯೇ ಯುದ್ಧ ತಂತ್ರ, ಸೈನಿಕ ಪರಿಣತಿ, ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತಿನ ಕೊರತೆ ಭಾರತೀಯರಲ್ಲಿ ಇತ್ತು. ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ. ಹಲವಾರು ದೇಶಿಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ. ಸಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.

೧೦. ೧೮೫೮ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?

೧೮೫೮ರಲ್ಲಿ ಹೊರಡಿಸಿದ ಬ್ರಿಟನ್ ರಾಣಿಯ ಘೋಷಣೆ ಯಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು.
• ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು.
• ಸಾಮ್ರಾಜ್ಯ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು.
• ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು.
• ಕಾನೂನಿನ ಮುಂದೆ ಸಮಾನತೆ.
• ಧಾರ್ಮಿಕ ಸಹಿಷ್ಣುತೆಯೊಂದಿಗೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

III. ಚಟುವಟಿಕೆಗಳು :
೧. ಭಾರತದ ಭೂಪಟದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ಬ್ರಿಟಿಷರ ವಶವಾದ ಸಂಸ್ಥಾನಗಳನ್ನು ಗುರುತಿಸಿ.

೨. ೧೮೫೭ರ ಹೋರಾಟವು ಭಾರತೀಯರಿಗೆ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ – ಈ ವಿಷಯದ ಬಗ್ಗೆ ತಜ್ಞರಿಂದ ಉಪನ್ಯಾಸ ಏರ್ಪಡಿಸಿ.

sslc social science kannada medium notes download

10th social science notes pdf in kannada

ಸ್ವಾತಂತ್ರ್ಯ ಹೋರಾಟ

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 18 ರ ಪ್ರಶ್ನೋತ್ತರಗಳು ಅಥವಾ ನೋಟ್ಸ್

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿ.
೧. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು 1885 ರಲ್ಲಿ ಸ್ಥಾಪಿಸಲಾಯಿತು.
೨. `ಸಂಪತ್ತಿನ ಸೋರುವಿಕೆ ಸಿದ್ಧಾಂತ’ವನ್ನು ತಿಳಿಸಿದವರು ದಾದಾಬಾಯಿ ನವರೋಜಿ.
೩. `ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು’ ಎಂದು ಬಾಲಗಂಗಾಧರ ತಿಲಕ್ ರವರು ಘೋಷಿಸಿದರು.
೪. ಅಲಿ ಸಹೋದರರು ನಡೆಸಿದ ಚಳವಳಿ ಖಿಲಾಫತ್ ಚಳುವಳಿ.
೫. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಹಮ್ಮದ್ ಆಲಿ ಜಿನ್ನಾ ರವರು ಮಂಡಿಸಿದರು.
೬. ೧೯೨೯ರ ಲಾಹೋರ್‌ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದ
ಅಧ್ಯಕ್ಷರಾಗಿದ್ದವರು _ಜವಾಹರಲಾಲ್ ನೆಹರು.

೭. ಮಹಾದ್ ಕೆರೆ ಮತ್ತು ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಅಂಬೇಡ್ಕರ್.
೮. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು  ಕ್ಯಾಪ್ಟನ್ ಲಕ್ಷ್ಮಿ ರವರು ವಹಿಸಿದರು.
೯. ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ದಂಡಿ ಎಂಬಲ್ಲಿ ನಡೆಸಿದರು.
೧೦. ಕ್ವಿಟ್ ಇಂಡಿಯಾ ಚಳವಳಿಯು 1942 ರಲ್ಲಿ ನಡೆಯಿತು.
II ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳವನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಭರ್ತಿ ಮಾಡಿ.
೧೧. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು _ಎ.ಓ.ಹ್ಯೂಮ್ .
ಎ) ಮಹಾತ್ಮ ಗಾಂಧೀಜಿ ಬಿ) ಎ.ಓ.ಹ್ಯೂಮ್
ಸಿ) ಬಾಲಗಂಗಾಧರ ತಿಲಕ್ ಡಿ) ಗೋಪಾಲಕೃಷ್ಣ ಗೋಖಲೆ.
೧೨. ‘ಮರಾಠ’ ಪತ್ರಿಕೆಯನ್ನು ಪ್ರಕಟಿಸಿದವರು _ಬಾಲಗಂಗಾಧರ ತಿಲಕ್.
ಎ) ಜವಾಹರಲಾಲ್ ನೆಹರು ಬಿ) ರಾಸ್ ಬಿಹಾರಿ ಬೋಸ್
ಸಿ) ಬಾಲಗಂಗಾಧರ ತಿಲಕ್ ಡಿ) ವಿ. ಡಿ. ಸಾವರ್ಕರ್
೧೩. ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ 1923 .
ಎ) ೧೯೨೪ ಬಿ) ೧೯೨೩
ಸಿ) ೧೯೨೯ ಡಿ) ೧೯೦೬
೧೪. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು
_ಸುಭಾಷ್ ಚಂದ್ರಬೋಸ್ .
ಎ)ಸರ್ದಾರ್ ವಲ್ಲಭ ಬಾಯಿ ಪಟೇಲ್ ಬಿ) ಡಾ. ಬಿ.ಆರ್.ಅಂಬೇಡ್ಕರ್
ಸಿ) ಲಾಲ ಲಜಪತ ರಾಯ್ ಡಿ) ಸುಭಾಷ್ ಚಂದ್ರಬೋಸ್
೧೫. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು   ಸರ್ದಾರ್ ವಲ್ಲಭ ಭಾಯಿ ಪಟೇಲ್.
ಎ)ಭಗತ್ ಸಿಂಗ್ ಬಿ) ಚಂದ್ರಶೇಖರ್ ಅಜಾದ್
ಸಿ) ಅಬುಲ್ ಕಲಾಂ ಅಜಾದ್ ಡಿ) ಸರ್ದಾರ್ ವಲ್ಲಭ ಭಾಯಿ ಪಟೇಲ್

III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ. ಉತ್ತರಿಸಿ.

೧೬. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಗೂ ಮೊದಲು ಇದ್ದ ಸಂಘಟನೆಗಳು ಯಾವುವು?

ದಿ ಹಿಂದೂ ಮೇಳ, ದಿ ಈಸ್ಟ್ ಇಂಡಿಯಾ ಸೋಶಿಯೇಶನ್, ಪೂನಾ ಸಾರ್ವಜನಿಕ
ಸಭಾ’ ಮತ್ತು ‘ದಿ ಇಂಡಿಯನ್ ಅಸೋಸಿಯೇಷನ್’

೧೭. ಬ್ರಿಟಿಷ್ ಸರ್ಕಾರದ ಮುಂದಿಟ್ಟ ಮಂದಗಾಮಿಗಳ ಬೇಡಿಕೆಗಳಾವುವು?

ಮಂದಗಾಮಿಗಳು ಜನರಿಗೆ ರಾಜಕೀಯ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಿದರು.  ದೇಶದ ಕೈಗಾರಿಕೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣ ಕೊಡುವುದು, ಬಡತನದ ಬಗ್ಗೆ ಅಧ್ಯಯನ ನಡೆಸಲು ಬ್ರಿಟಿಷ್ ಸರ್ಕಾರವನ್ನು
ಒತ್ತಾಯಿಸುವುದು ಇವೇ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

೧೮. ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿಶ್ಲೇಷಿಸಿ.

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದಾದದುಷ್ಪರಿಣಾಮಗಳನ್ನು ಮೊಟ್ಟಮೊದಲನೆಯ ಬಾರಿಗೆ ಮಂದಗಾಮಿಗಳು ಕೂಲಂಕಷವಾಗಿ ಅವಲೋಕಿಸುವ ಪ್ರಯತ್ನ ಮಾಡಿದರು. ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು. ದಾದಾಬಾಯಿ ನವರೋಜಿಯವರು ಇಂಗ್ಲೆAಡಿಗೆ ಸೋರಿಹೋಗುವ ಸಂಪತ್ತಿನ ಬಗ್ಗೆ ವಿಶ್ಲೇಷಿಸಿದರು. ಅವರು ಅದನ್ನು ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ (drain theory)ಎಂದು ಕರೆದರು. ಆಮದನ್ನು ಹೆಚ್ಚಿಸಿ ರಫ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ
ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಅವರು ಪ್ರತಿಪಾದಿಸಿದರು. ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು.

೧೯. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ.

ವಿ.ಡಿ. ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ಮೇಡಮ್ ಕಾಮಾ, ಖುದಿರಾಮ್ ಬೋಸ್, ರಾಮ್‌ಪ್ರಸಾದ ಬಿಸ್ಮಿಲ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ , -ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.

೨೦. ಸ್ವಾತಂತ್ರ್ಯ ಚಳವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.

ಸ್ವಾತಂತ್ರ ಹೋರಾಟ ಮಾಡಿದ ತೀವ್ರವಾದಿಗಳಲ್ಲಿ ಬಾಲಗಂಗಾಧರ ತಿಲಕ್ ಅವರು ಕೂಡ ಒಬ್ಬರು.ತಿಲಕರು ‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ಪಡೆಯುತ್ತೇನೆ’ ಎಂದು ಘೋಷಿಸಿದರು. ಪೂರ್ಣ ಸ್ವರಾಜ್ಯವನ್ನು ಪಡೆಯುವುದು ತೀವ್ರವಾದಿಗಳ ಗುರಿಯಾಗಿತ್ತು.
ತಿಲಕರು ಮರಾಠಿ ಭಾಷೆಯಲ್ಲಿ ‘ಕೇಸರಿ’ ಮತ್ತು
ಇಂಗ್ಲಿಷ್ ಭಾಷೆಯಲ್ಲಿ ‘ಮರಾಠ’ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು.
ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು. ಅವರ ಕ್ರಾಂತಿಕಾರಕ ಬರವಣಿಗೆಗಳು ಜನರನ್ನು ಕೆರಳಿಸಿದವು ಎಂಬ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು. ತಿಲಕರು ‘ಗೀತಾ ರಹಸ್ಯ’ವನ್ನು ಜೈಲಿನಲ್ಲಿ ಇದ್ದಾಗ ರಚಿಸಿದರು.

೨೧. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?

ಬಂಗಾಳವು ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನು ಹತ್ತಿಕ್ಕಲು ವೈಸ್‌ರಾಯ್ ಲಾರ್ಡ್ ಕರ್ಜನ್ನನು ಆಡಳಿತಾತ್ಮಕ ನೆಪವನ್ನು ಮುಂದಿಟ್ಟುಕೊಂಡು ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದನು. ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನು ಹಿಂದೂ ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿ ವಿಂಗಡಿಸಿದನು. ಹೀಗೆ ಸಮುದಾಯಗಳ ನಡುವೆ ಕಂದಕವನ್ನುಂಟುಮಾಡಿ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಸಂಚನ್ನು ರೂಪಿಸಿದನು.

ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905 ರ ಬಂಗಾಳ ವಿಭಜನೆಯನ್ನುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು.  ಬಂಗಾಳದ ವಿಭಜನೆಯ ವಿರುದ್ಧ ದೇಶದಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.  ಪ್ರತಿರೋಧದ ಒಂದು ಬಗೆಯಾಗಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು. ಇದನ್ನು ದೇಶದಾದ್ಯಂತ ಕೊಂಡು ಇದ್ದವರು ತೀವ್ರವಾದಿಗಳು ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಬಹಿಷ್ಕರಿಸಲು ಸ್ವದೇಶಿ ಆಂದೋಲನವು
ಕರೆ ನೀಡಿತು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನು ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಗಾಳದ ವಿಭಜನೆಯನ್ನು ೧೯೧೧ರಲ್ಲಿ ಬ್ರಿಟಿಷ್ ಸರ್ಕಾರವು ಹಿಂಪಡೆಯಿತು.

೨೨. ಚೌರಿ ಚೌರ ಘಟನೆಯನ್ನು ವಿವರಿಸಿ.

ಗಾಂಧೀಜಿ ಬ್ರಿಟಿಷರ ವಿರುದ್ಧ ೧೯೨೦ ರಲ್ಲಿ
ಅಸಹಕಾರ ಚಳುವಳಿಗೆ ಕರೆಯಿತ್ತರು.ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ
ಸಾವಿರಾರು ಸ್ವಾತಂತ್ರ್ಯ ಯೋಧರು ಚಳುವಳಿಕೆ ಧುಮುಕಿದರು. 1922 ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಹಲ್ಲೆ ಮಾಡಿದರು. ಇದರಿಂದ ರೊಚ್ಚಿಗೆದ್ದ
ಜನರು ಠಾಣೆಗೆ ನುಗ್ಗಲೆತ್ನಿಸಿದಾಗ ಪೋಲಿಸರು ಗೋಲಿಬಾರ್ ನಡೆಸಿದರು. ಪೋಲಿಸರ ಬಳಿ ಇದ್ದ
ಶಸ್ತ್ರಾಸ್ತ್ರಗಳು ಖಾಲಿಯಾದ ಕಾರಣದಿಂದ ಪೊಲೀಸರು ಠಾಣೆಯ ಒಳಗೆ ಓಡಿದರು. ಕುಪಿತರಾದ ಚಳುವಳಿಗಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಇದರಿಂದ 22 ಜನ ಪೊಲೀಸರು ಸಜೀವ ದಹನವಾದರು. ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರ ಘಟನೆ ಎನ್ನುತ್ತಾರೆ. ಈ  ಘಟನೆಯು ಗಾಂಧೀಜಿಯವರನ್ನು ಖಿನ್ನರನ್ನಾಗಿಸಿತು. ಹಾಗೆಯೇ ಚಳುವಳಿಗಾರರ ಹಿಂಸಾತ್ಮಕ ವರ್ತನೆಗಾಗಿ ಗಾಂಧೀಜಿಯವರು ವಿಷಾದ ವ್ಯಕ್ತಪಡಿಸಿ ಚಳುವಳಿಯನ್ನು ಹಿಂತೆಗೆದುಕೊಂಡರು.

ಬ್ರಿಟಿಷ್ ಸರ್ಕಾರವು ಈ ಹಿಂಸಾತ್ಮಕ ಘಟನೆಗೆ ಗಾಂಧೀಜಿಯವರನ್ನು ಹೊಣೆಗಾರರನ್ನಾಗಿಸಿತು.
ಸರ್ಕಾರವು ಅವರಿಗೆ ಆರು ವರ್ಷಗಳ ಕಾಲ ಸೆರಮನೆವಾಸ ವಿಧಿಸಿತು. ಆದರೆ 1924ರಲ್ಲಿ ಅನಾರೋಗ್ಯದ ಕಾರಣದಿಂದ ಗಾಂಧೀಜಿಯವರನ್ನು ಸರ್ಕಾರವು ಬಿಡುಗಡೆಗೊಳಿಸಿತು.

೨೩. ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.

ಕಾನೂನು ಭಂಗ ಚಳವಳಿಯ ಉಪ್ಪಿನ ಸತ್ಯಾಗ್ರಹ
ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ವೈಸರಾಯ್ ಇರ್ವಿನ್ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಸಲ್ಲಿಸಿದ್ದರು.
ಈ ಬೇಡಿಕೆಗಳು ಈಡೇರದೇ ಹೋದಲ್ಲಿ ಕಾನೂನು ಭಂಗ ಚಳುವಳಿಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದರೆ ಇರ್ವಿನ್ ಅವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಗಾಂಧೀಜಿಯವರು ೧೯೩೦ರಲ್ಲಿ ಸಬರಮತಿ ಆಶ್ರಮದಿಂದ ಸೂರತ್ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾನೂನು ಭಂಗ ಚಳವಳಿಯನ್ನು ಪ್ರಾರಂಭಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ‘ದಂಡಿ ಸತ್ಯಾಗ್ರಹ’ ಎಂದು ಕರೆಯುತ್ತಾರೆ.

ಕಾನೂನು ಭಂಗ ಚಳವಳಿಯಲ್ಲಿ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ವಿಜಯಲಕ್ಷ್ಮಿ ಪಂಡಿತ್, ಕಮಲಾನೆಹರು, ವಲ್ಲಭಬಾಯಿ ಪಟೇಲ್, ರಾಜಗೋಪಾಲಚಾರಿ, ಬಾಬು ರಾಜೇಂದ್ರ ಪ್ರಸಾದ್ ಮೊದಲುಗೊಂಡು ಸಾವಿರಾರು ಜನರನ್ನು ಬ್ರಿಟಿಷರು ಬಂಧಿಸಿದರು. ಈ ಚಳವಳಿಯು ದೇಶದ ನಾನಾ ಭಾಗಗಳಲ್ಲಿ ವ್ಯಾಪಿಸಿತು.

೨೪. ಕ್ವಿಟ್ ಇಂಡಿಯಾ ಚಳವಳಿಯು ವಿಫಲವಾಗಲು ಕಾರಣಗಳೇನು?

ಕ್ರಿಪ್ಸ್ ಆಯೋಗವು ೧೯೪೨ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು.ಈ ಸಲಹೆಗಳನ್ನು
ಕಾಂಗ್ರೆಸ್ ಒಪ್ಪದೆ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’
ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು.

ಗಾಂಧೀಜಿಯವರು ದೇಶಬಾಂಧವರಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರಪ್ರಸಾದ್, ಅಬುಲ್ ಕಲಾಂ ಆಜಾದ್,
ಸರ್ದಾರ್ ವಲ್ಲಭಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಕಸ್ತೂರಬಾ ಗಾಂಧಿ ಮೊದಲಾದ
ನಾಯಕರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು.

೧೯೩೭ರ ಚುನಾವಣೆಗಳ ನಂತರ ಸರ್ಕಾರದ ಪಾಲ್ಗೊಳ್ಳುವಿಕೆಯಲ್ಲಿ ಮುಸ್ಲಿಂ ಲೀಗನ್ನು ಸರ್ಕಾರ ರಚನೆಯಿಂದ ಕೈಬಿಡಲಾಗಿತ್ತು. 1939ರಲ್ಲಿ ಭಾರತ ಸರ್ಕಾರವು ಏಕಮುಖವಾಗಿ ಎರಡನೇ ಮಹಾಯುದ್ಧಕ್ಕೆ ಭಾರತವನ್ನು ಭಾಗಿ ಮಾಡಿದ ಸಂದರ್ಭದಲ್ಲಿ ಮಂತ್ರಿಮಂಡಲದಲ್ಲಿದ್ದ ಕಾಂಗ್ರೆಸ್ಸಿಗರೆಲ್ಲರೂ ಹೊರ ಬಂದಾಗ ಮುಸ್ಲಿಂ ಲೀಗ್ ‘ವಿಮುಕ್ತಿ ದಿವಸ’ವನ್ನು ಆಚರಿಸಿತು. ಹೀಗಾಗಿ ಮುಸ್ಲಿಂ ಲೀಗ್ `ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ  ಭಾಗವಹಿಸಲಿಲ್ಲ. ಅದು ಭಾರತದ ವಿಭಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು.

ಹೀಗಾಗಿ ಕ್ವಿಟ್ ಇಂಡಿಯಾ ಚಳುವಳಿ ವಿಫಲವಾಯಿತು.

೨೫. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡುಬರುವ ತೀವ್ರಗಾಮಿಗಳ
ಹೆಸರುಗಳನ್ನು ಬರೆಯಿರಿ.

ಅರಬಿಂದೋ ಘೋಷ್, ಬಿಪಿನ್‌ಚಂದ್ರ ಪಾಲ್, ಲಾಲ ಲಜಪತ ರಾಯ್ ಮತ್ತು ಬಾಲಗಂಗಾಧರ್ ತಿಲಕ್

೨೬. ಎರಡನೆಯ ದುಂಡು ಮೇಜಿನ ಪರಿಷತ್ತಿನ ಸಮಾವೇಶದ ಫಲಿತಾಂಶವೇನು?

ಎರಡನೆಯ ದುಂಡು ಮೇಜಿನ ಸಮಾವೇಶದಲ್ಲಿ ಅಂಬೇಡ್ಕರ್‌ರವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನಡೆಸುವ ಪ್ರಸ್ತಾಪ ಮುಂದಿಟ್ಟರು. ಈ ಪ್ರಸ್ತಾಪವನ್ನು ಗಾಂಧೀಜಿಯವರು ಒಪ್ಪಲಿಲ್ಲ. ಇದರಿಂದ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಯಿತು. ಹೀಗಾಗಿ ಎರಡನೆಯ ದುಂಡು ಮೇಜಿನ ಪರಿಷತ್ತು ಸಮಾವೇಶ ಕೂಡ ಯಾವುದೇ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿತು. ಆದರೆ ಬ್ರಿಟಿಷ್ ಸರ್ಕಾರವು ಅಸ್ಪೃಶ್ಯರನ್ನು ಪ್ರತ್ಯೇಕ ಮತಕ್ಷೇತ್ರವಾಗಿ ಪರಿಗಣಿಸುವುದಾಗಿ ಘೋಷಿಸಿತು. ಇದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅಂಬೇಡ್ಕರ್ ಅವರಮನವೊಲಿಸುವ ಪ್ರಯತ್ನಗಳು ನಡೆದವು. ಇದರ ಫಲವಾಗಿ ಪೂನಾ ಒಪ್ಪಂದವಾಯಿತು. ಇದರ ಪ್ರಕಾರ ಪ್ರತ್ಯೇಕ ಮತಕ್ಷೇತ್ರದ ಬದಲಾಗಿ ಸಾಮಾನ್ಯ ಮತಕ್ಷೇತ್ರಗಳಲ್ಲಿಯೇ ಕೆಲವು ಕ್ಷೇತ್ರಗಳನ್ನು ಅಸ್ಪೃಶ್ಯರಿಗೆ
ಮೀಸಲಿಡಲಾಯಿತು. ಅಂತಹ ಕಡೆಗಳಲ್ಲಿ ಅಸ್ಪೃಶ್ಯ ಪ್ರತಿನಿಧಿ ಎಲ್ಲಾ ಜನರ ಪ್ರತಿನಿಧಿಯಾಗಿರುತ್ತಿದ್ದರು.
ಪ್ರತ್ಯೇಕ ಮತಕ್ಷೇತ್ರಕ್ಕೆ ಬದಲಾಗಿ ಕೆಲವು ಕ್ಷೇತ್ರಗಳು ಅಸ್ಪೃಶ್ಯರಿಗಾಗಿ ಕಾದಿರಿಸಲ್ಪಟ್ಟವು.

೨೭. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಸಾಧನೆಗಳನ್ನು ವಿವರಿಸಿ.

ಭಾರತೀಯ ಸ್ವಾತಂತ್ರö್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಪಾತ್ರವು ಒಂದು ದಿಟ್ಟ ಮೈಲಿಗಲ್ಲು. ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ  ನಾಲ್ಕನೇ ರ‍್ಯಾಂಕ್ ಗಳಿಸಿದ್ದರೂ, ದೇಶಾಭಿಮಾನದಿಂದಾಗಿ ಬ್ರಿಟಿಷ್ ಸರ್ಕಾರದ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ
ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಇವರು ‘ನೇತಾಜಿ’ ಎಂದು ಜನಪ್ರಿಯರಾದರು.

ಗಾಂಧೀಜಿಯವರ ಸೌಮ್ಯ ಹೋರಾಟಕ್ಕೆ ಪರ್ಯಾಯವಾಗಿ ೧೯೩೦ರ
ದಶಕದ ಪ್ರಾರಂಭದಲ್ಲಿ ವಿದೇಶದಲ್ಲಿ ನೆಲೆಗೊಂಡ ಭಾರತೀಯರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಪ್ರಯತ್ನದಲ್ಲಿದ್ದರು. ಇವರು ವಿವಿಧ ದೇಶದ ನಗರಗಳಾದ ವಿಯನ್ನಾ, ಬರ್ಲಿನ್, ರೋಮ್, ಇಸ್ತಾಂಬುಲ್ ಮುಂತಾದ ಕಡೆಗಳಲ್ಲಿ ಪ್ರವಾಸ ಬೆಳೆಸಿ ತಾಯ್ನಾಡಿಗೆ ತಮ್ಮ ಬೆಂಬಲವನ್ನು ನೀಡಲು ಪ್ರೇರೇಪಿಸಿದರು.ಭಾರತದಲ್ಲಿ ೧೯೩೪ರ ವೇಳೆಗೆ ಜವಾಹರಲಾಲ್ ನೆಹರು ಮತ್ತು ಸುಭಾಷ್‌ಚಂದ್ರಬೋಸರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್‌ನ ಚಟುವಟಿಕೆಗಳು ಮತ್ತು ಗಾಂಧೀಜಿಯವರ ಕಾರ್ಯವಿಧಾನದಿಂದ ಬೇಸರಗೊಂಡು ಕಾಂಗ್ರೆಸ್‌ನಿಂದ ಹೊರಬಂದು ‘ಫಾರ್ವರ್ಡ್ ಬ್ಲಾಕ್’ ಎಂಬ ಹೊಸ ಪಕ್ಷವನ್ನು ಕಟ್ಟಿದರು. ಪ್ರಗತಿಪರ ಮತ್ತು ತೀವ್ರತರ ಬದಲಾವಣೆಯ ಗುರಿಯನ್ನು ಹೊಂದಿತ್ತು. ಬ್ರಿಟಿಷರ
ಯುದ್ಧ ತಯಾರಿಯನ್ನು ಹಾಗೂ ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಸುಭಾಷರು
ವಿರೋಧಿಸಿದರು. ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು ಸುಭಾಷ್ ಚಂದ್ರ ಬೋಸರನ್ನು ಬಂಧಿಸಿತು.

ಬ್ರಿಟಿಷ್ ವಿರೋಧಿ ಶಕ್ತಿಗಳೊಡಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಬಯಸಿ ಅವರು ಗೃಹಬಂಧನದಿಂದ ತಪ್ಪಿಸಿಕೊಂಡು ಜರ್ಮನಿಗೆ ತೆರಳಿದರು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಇವರಿಗೆ ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದನು. ಬೋಸರು
ರ‍್ಮನಿಯಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿದರು. ‘ಆಜಾದ್ ಹಿಂದ್ ರೇಡಿಯೋ’
ಮೂಲಕ ತಮ್ಮ ಭಾಷಣಗಳನ್ನು ಭಾರತೀಯರಿಗೆ ಪ್ರಸರಣ ಮಾಡಿದರು. ಯುದ್ಧದಲ್ಲಿ ಜಪಾನಿನ

೨೮. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟುವರ್ಗಗಳ ಬಂಡಾಯಗಳನ್ನು ವಿವರಿಸಿ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು. ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ಚಳವಳಿ, ಮತ್ತು ಹಲಗಲಿಯ ಬೇಡರ ಬಂಡಾಯ ಪ್ರಮುಖವಾಗಿವೆ.

ಸಂತಾಲ ಬುಡಕಟ್ಟು  ಜನರನ್ನು ಬಂಗಾಳಿ ಮತ್ತು ಒರಿಸ್ಸಾದ ಗುಡ್ಡಗಾಡು ಪ್ರದೇಶಗಳಲ್ಲಿ ಗುರುತಿಸಬಹುದು.ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ಧತಿಯಿಂದ ಈ ಬುಡಕಟ್ಟು ಜನರು ನಿರ್ಗತಿಕರಾದರು.ಬುಡಕಟ್ಟು ಜನರ ಭೂಮಿಯು ಜಮೀನ್ದಾರರ ಕೈಸೇರಿತು. ಬಂಗಾಳಿ ಜಮೀನ್ದಾರರು, ಲೇವಾದೇವಿಗಾರರು ಮತ್ತು ಕಂಪನಿ ಸರ್ಕಾರವು ಸಂತಾಲರ ನೇರ ಶೋಷಣೆಗೆ ಕಾರಣರಾದರು. ಸಂತಾಲರ ಶಾಂತಿ ಪ್ರಿಯತೆ ಮತ್ತು ಸಭ್ಯತೆಯನ್ನು ಕಂಪನಿ ಸರ್ಕಾರವು ಶೋಷಣೆಗೆ ಉಪಯೋಗಿಸಿಕೊಂಡಿತು. ಇದರಿಂದಅಸಮಾಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರು ಮತ್ತು ಮಹಾಜನರನ್ನು ಲೂಟಿ ಮಾಡಲು ನಿರ್ಧರಿಸಿದರು. ದಂಗೆಯು ಬಾರಹತ್, ಬಾಗತಪುರ್ ಮತ್ತು ರಾಜಮಹಲ್‌ಗಳಲ್ಲಿ ತೀವ್ರವಾಯಿತು. ಪರಿಣಾಮವಾಗಿ ಬುಡಕಟ್ಟು ಜನರು ಅವರ ಶತ್ರುಗಳನ್ನು ಹತ್ಯೆ ಮಾಡಿದರು.
ಇದರಿಂದಾಗಿ ಜಮೀನ್ದಾರರು, ಲೇವಾದೇವಿದಾರರು ಪಲಾಯನ ಮಾಡಿದರು. ಸಂತಾಲರ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಸೈನ್ಯವನ್ನು ಬಳಸಿಕೊಂಡರು. ಸಂತಾಲರ ದಂಗೆಯು ಕೊನೆಗೊಂಡರೂ ಅದು ಮುಂದಿನ ಅನೇಕ ಹೋರಾಟಗಳಿಗೆ ಪ್ರೇರಣೆಯಾಯಿತು.

Iಗಿ. ಚಟುವಟಿಕೆಗಳು :
೧. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ.

೨. ಅಂತರ್ಜಾಲದಲ್ಲಿ ಜಲಿಯನ್‌ವಾಲಾ ಬಾಗ್, ದಂಡಿ ಸತ್ಯಾಗ್ರಹಕ್ಕೆ ಸಂಬಂಧಿಸಿದ ಚಿತ್ರಗಳನ್ನು
ಮಾಹಿತಿಯೊಂದಿಗೆ ಸಂಗ್ರಹಿಸಿ.

೩. ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸೆ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿ.

V. ಯೋಜನೆ :
೧. ಶಾಲೆಯಲ್ಲಿ ದೇಶಪ್ರೇಮಕ್ಕೆ ಪೂರಕವಾದ ನಾಟಕಗಳನ್ನು ಆಯೋಜಿಸಿ.

sslc social science kannada medium notes download

10th social science notes pdf in kannada

ಸ್ವಾತಂತ್ರ್ಯೋತ್ತರ ಭಾರತ

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 19 ಪ್ರಶ್ನೆ ಉತ್ತರಗಳು

I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ.

೧. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕೊನೆಯ ಗೌರ‍್ನರ್ ಜನರಲ್ ಮೌಂಟ್ ಬ್ಯಾಟನ್  ಆಗಿದ್ದನು.
೨. ಭಾರತದ ಪ್ರಥಮ ಗೃಹ ಮಂತ್ರಿ  ವಲ್ಲಭ ಭಾಯಿ ಪಟೇಲ್ ಆಗಿದ್ದರು.
೩. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ಡಾ. ಬಾಬು ರಾಜೇಂದ್ರ ಪ್ರಸಾದ್ .
೪. ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ 1962ರಲ್ಲಿ ಸೇರಿತು.
೫. ರಾಜ್ಯ ಪುನರ್ವಿಂಗಡಣಾ ಕಾನೂನು 1956ರಲ್ಲಿ ಜಾರಿಗೆ ಬಂದಿತು.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

೬. ಭಾರತವು ಸ್ವಾತಂತ್ರ್ಯಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?

ಭಾರತದ ಸ್ವಾತಂತ್ರ್ಯದ ಜೊತೆಯಲ್ಲೇ ಹಲವಾರು
ಜ್ವಲಂತ ಸಮಸ್ಯೆಗಳು ರೂಪ ಪಡೆದವು. ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆಗಳು,
ಸರ್ಕಾರದ ರಚನೆ, ದೇಶೀಯ ಸಂಸ್ಥಾನಗಳ ವಿಲೀನೀಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ,
ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕಾಗಿತ್ತು.

೭. ನಿರಾಶ್ರಿತರ ಸಮಸ್ಯೆಯನ್ನು ದೇಶವು ಹೇಗೆ ಎದುರಿಸಿತು?

ಭಾರತದಿಂದ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಲಕ್ಷಾಂತರ ಜನ ತಮ್ಮ ತಮ್ಮ ಹುಟ್ಟಿದ
ಊರುಗಳನ್ನು, ಬೆಳೆದ ಪರಿಸರವನ್ನು, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ತಮ್ಮದಲ್ಲದ ಪ್ರದೇಶಗಳಿಗೆ
ವಲಸೆ ಹೋಗಬೇಕಾಯಿತು. ಈ ರೀತಿಯಾಗಿ ನಿರಾಶ್ರಿತರಾದ ಜನರಿಗೆ ವಸತಿ, ಉದ್ಯೋಗ, ಭೂಮಿ,
ಶಿಕ್ಷಣ ಆರೋಗ್ಯ ಸಾಮಾಜಿಕ ವಾತಾವರಣ ಎಲ್ಲವನ್ನೂ ನಿರ್ಮಿಸಿ ಕೊಡಬೇಕಾದ ಬೃಹತ್ ಜವಾಬ್ದಾರಿ ಸರ್ಕಾರದ ಮೇಲೆ ಬಿದ್ದಿತು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದವು.

೮. ಪಾಂಡಿಚೇರಿಯನ್ನು ಫ್ರೆಂಚರಿಂದ ವಿಮುಕ್ತಗೊಳಿಸಿದ ರೀತಿಯನ್ನು ವಿವರಿಸಿ.

ಸ್ವಾತಂತ್ರ್ಯದ ನಂತರದಲ್ಲಿ ಫ್ರೆಂಚ್ ವಸಾಹತುಶಾಹಿಗಳು ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ೧೯೫೪ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು. ೧೯೬೨ರಲ್ಲಿ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.

೯. ಗೋವಾವನ್ನು ಪೋರ್ಚುಗೀಸರಿಂದ ಹೇಗೆ ಮುಕ್ತಗೊಳಿಸಲಾಯಿತು?

ಪೋರ್ಚುಗೀಸರ ವಸಾಹತು ಆಡಳಿತದಲ್ಲಿ ಮುಂದುವರಿದ ಗೋವಾ, ಭಾರತಕ್ಕೆ ಸೇರಬೇಕೆಂದು
ನಿರಂತರವಾದ ಚಳವಳಿ ನಡೆಯಿತು. ಗೋವಾವನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದರೂ
ಬಗ್ಗದ ಪೋರ್ಚುಗೀಸರು, ಆಫ್ರಿಕಾ ಮತ್ತು ಯುರೋಪಿನಿಂದ ಹೆಚ್ಚಿನ ಸೈನ್ಯವನ್ನು ತರಿಸಿಕೊಂಡು ಚಳುವಳಿಯನ್ನು ದಮನ ಮಾಡಿ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿದರು.೧೯೫೫ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳು ಬಂದು ಗೋವಾದಿಂದ ವಸಾಹತುಶಾಹಿಗಳು ತೊಲಗಬೇಕೆಂದು ವಿಮೋಚನಾ ಹೋರಾಟ ಪ್ರಾರಂಭಿಸಿದರು.1961ರಲ್ಲಿ ಭಾರತದ ಸೈನ್ಯ ಮಧ್ಯಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು.

೧೦. ೧೯೫೩ರಲ್ಲಿ ಭಾರತ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ಏಕೆ ರಚಿಸಿತು?

ಭಾರತ ಸ್ವಾತಂತ್ರ್ಯಗೊಂಡ ನಂತರ ಕಂಡುಬಂದ ಪ್ರಮುಖವಾದ ಪ್ರಜಾಸತ್ತಾತ್ಮಕ ಚಳವಳಿಯೆಂದರೆ ಭಾಷಾವಾರು ರಾಜ್ಯಗಳಿಗಾಗಿನ ಹೋರಾಟ. ಜನರಿಗೆ ಉತ್ತಮವಾದ ಆಡಳಿತವನ್ನು ನೀಡಲು ಜನರ ಭಾಷೆಯನ್ನು ಆಧರಿಸಿದ ಭೌಗೋಳಿಕ ಗಡಿಗಳನ್ನು ಗುರುತಿಸಬೇಕೆಂಬ ಒತ್ತಾಯ ತೀವ್ರವಾಗಿತ್ತು. ಬ್ರಿಟಿಷ್ ಮತ್ತು ದೇಶೀಯ ಸಂಸ್ಥಾನಗಳೆರಡರಲ್ಲೂ ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ  ದೇಶದಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ವಾದ ತೀವ್ರವಾಗಿತ್ತು .ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು ಆಂಧ್ರಮಹಾಸಭಾದ ನೇತೃತ್ವದಲ್ಲಿ ೧೯೫೨ರಲ್ಲಿ ಪೊಟ್ಟಿ ಶ್ರೀರಾಮುಲು ೫೮ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು. ೧೯೫೩ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು.

III. ಚಟುವಟಿಕೆ :

೧. ಭಾರತದ ಭೂಪಟವನ್ನು ಬಿಡಿಸಿ, ರಾಜ್ಯಗಳನ್ನು ಗುರುತಿಸಿ.

IV. ಯೋಜನೆಗಳು :

೧. ಭಾರತದಲ್ಲಿರುವ ಪ್ರತಿ ರಾಜ್ಯಗಳ ಆಡಳಿತ ಭಾಷೆ ಮತ್ತು ರಾಜಧಾನಿಗಳ ಪಟ್ಟಿ ಸಿದ್ದಪಡಿಸಿ.

೨. ನಮ್ಮ ನೆರೆ ರಾಜ್ಯಗಳ ಸಾಂಸ್ಕೃತಿಕ ವಿಶೇಷತೆಯ ಬಗ್ಗೆ ಶಿಕ್ಷಕರ ನೆರವಿನಿಂದ ವರದಿ ಸಿದ್ಧಪಡಿಸಿ.



sslc social science kannada medium notes download

10th social science notes pdf in kannada

ಮಹಾಯುದ್ಧಗಳು ಹಾಗೂ ಭಾರತದ ಪಾತ್ರ

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 20ರ ಪ್ರಶ್ನೋತ್ತರಗಳು

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ.
೧. ಮೊದಲನೇ ಮಹಾಯುದ್ಧವು 1918ರಲ್ಲಿ ಅಂತ್ಯಗೊಂಡಿತು.

೨. ವರ್ಸೇಲ್ಸ್ ಒಪ್ಪಂದವು 1919 ರಲ್ಲಿ ಏರ್ಪಟ್ಟಿತು.

೩. ಫ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದವನು ಮುಸೋಲಿನಿ.

೪. ಜರ್ಮನಿಯಲ್ಲಿ ನಾಜಿ ಪಕ್ಷದ ನಾಯಕನಾಗಿದ್ದವನು ಹಿಟ್ಲರ್ .

೫. ಎರಡನೆಯ ಮಹಾಯುದ್ಧವು  1939 ರಲ್ಲಿ ಆರಂಭವಾಯಿತು.

೬. ಅಮೆರಿಕಾದ ನೌಕಾ ಕೇಂದ್ರವಾಗಿದ್ದ ಪರ್ಲ್‌ ಹಾರ್ಬರ್‌ ಮೇಲೆ ಜಪಾನ್ ದಾಳಿ ಮಾಡಿತು.

೭. ಮೈಸೂರು ಲ್ಯಾನ್ಸರ್ ಗಳ ಮುಖ್ಯಸ್ಥರಾಗಿ ಸೇನಾಧಿಕಾರಿ ಬಿ ಚಾಮರಾಜ ಅರಸು ರನ್ನು ಯುದ್ಧಭೂಮಿಗೆ ಕಳುಹಿಸಲಾಯಿತು.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ :

೮. ಪ್ರಥಮ ಮಹಾಯುದ್ಧಕ್ಕೆ ತತ್‌ಕ್ಷಣದ ಕಾರಣವನ್ನು ವಿವರಿಸಿ.

ಯುದ್ಧ ಪ್ರಾರಂಭವಾಗುವುದಕ್ಕೆ ತಕ್ಷಣದ ಕಾರಣವೆಂದರೆ, ಜುಲೈ ೨೮ ರಂದು ಆಸ್ಟ್ರಿಯಾದ ರಾಜಕುಮಾರ ಆರ್ಕ್ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್‌ನ ಹತ್ಯೆಯಾಯಿತು. ಈ ಘಟನೆಯು ಆಸ್ಟ್ರಿಯಾ ಮತ್ತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟನ್ನು ಸೃಷ್ಟಿಸಿತು.

೯. ‘ನಾಜಿ ಸಿದ್ಧಾಂತವು ಜರ್ಮನಿಯನ್ನು ಹಾಳು ಮಾಡಿತು’ ಹೇಗೆ? ವಿವರಿಸಿ.

ಜರ್ಮನಿಯಲ್ಲಿ ಹಿಟ್ಲರ್ ಸರ್ವಾಧಿಕಾರದಿಂದ ಬೇರೆ ರಾಜಕೀಯ ಪಕ್ಷಗಳನ್ನು ನಿಷೇಧಿಸಿದನು. ನಾಜಿ ಪಕ್ಷ ಏಕೈಕ ರಾಜಕೀಯ ಪಕ್ಷವೆಂದು ಘೋಷಿಸಿದನು.ಹಿಟ್ಲರ್ ಅನುಸರಿಸಿದ್ದು ನಾಜಿವಾದ. ಇದರ ಸಾರಾಂಶವೇನೆಂದರೆ – ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ. ಜಗತ್ತನ್ನು ಆಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು. ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು. ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯಹೂದಿಗಳೇ ಕಾರಣ. ಇವರ ಜೊತೆಗೆ ಕಮ್ಯುನಿಸ್ಟರು, ಕ್ಯಾಥೋಲಿಕ್‌ರು, ಸೋಷಿಯಲಿಸ್ಟರು ಕೂಡಾ ಕಾರಣ. ಇವರು ಬದುಕಲು ಯೋಗ್ಯರಲ್ಲ – ಈ ರೀತಿಯಾಗಿ ರೂಪುಗೊಂಡ ಉಗ್ರ ರಾಷ್ಟೀಯ ವಾದವು ಅತ್ಯಂತ ಅಮಾನುಷವಾಗಿ ಜಾರಿಗೆ ಬಂದಿತು. ಜಗತ್ತನ್ನೇ ಗೆಲ್ಲಬೇಕೆಂಬ ಮತ್ತು ಜರ್ಮನ್ನರ ಆರ್ಯ ಜನಾಂಗೀಯ ಶ್ರೇಷ್ಠತೆಯನ್ನು ಜಾರಿಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯೇ ಎರಡನೆಯ ಮಹಾಯುದ್ಧಕ್ಕೆ ಮುಖ್ಯ ಕಾರಣಗಳಲ್ಲೊಂದಾಯಿತು. ಹಿಟ್ಲರ್‌ನ ಜನಾಂಗೀಯ ದ್ವೇಷದ ಅಧ್ಯಾಯವು ಯುದ್ಧದಲ್ಲಿ ಅವನ ಸಾವಿನೊಂದಿಗೆ ಅಂತ್ಯವಾಯಿತು.ರಷ್ಯಾದ ಕೆಂಪು ಸೈನಿಕರ ಮಹಾನ್ ಮುನ್ನಡೆ ಮತ್ತು ಪಶ್ಚಿಮ ರಾಷ್ಟ್ರಗಳ ದಾಳಿಯಿಂದ ಜರ್ಮನಿ ಶರಣಾಯಿತು ಮತ್ತು ಬರ್ಲಿನ್ ಪತನವಾಯಿತು. ೧೯೪೫ರಲ್ಲಿ ಹಿಟ್ಲರ್ ಆತ್ಮಹತ್ಯೆ
ಮಾಡಿಕೊಂಡನು.

೧೦. ಎರಡನೆಯ ಮಹಾಯುದ್ಧಕ್ಕೆ ಕಾರಣಗಳಾವುವು?

ಮೊದಲನೇ ಮಹಾಯುದ್ಧದಲ್ಲಿ ಸೋತ ರಾಷ್ಟ್ರಗಳೊಳಗೆ ಬೆಳೆದ ಅವಮಾನಕರ ಭಾವನೆಗಳು ಉಗ್ರ ರಾಷ್ಟ್ರೀಯತೆಗೆ ಕಾರಣವಾಯಿತು. ಜರ್ಮನಿಯ ಮೇಲೆ ಹೇರಲಾದ ಯುದ್ಧನಷ್ಟ ಪರಿಹಾರ ಮತ್ತು ಇತರ ತೀರ್ಮಾನಗಳು ಅಲ್ಲಿನ ಜನರ ಮೇಲೆ ಪರಿಣಾಮ ಬೀರಿದವು. ನಿರುದ್ಯೋಗ, ಬಡತನ, ಬೆಳವಣಿಗೆ ಕುಸಿತದಿಂದ ಉಂಟಾದ ಅತೃಪ್ತಿಯನ್ನು ಜರ್ಮನ್ ಕೈಗಾರಿಕೋದ್ಯಮಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಎರಡನೆಯ ಪ್ರಪಂಚ ಯುದ್ಧಕ್ಕೆ ಕಾರಣವಾದ ಹಿಟ್ಲರ್‌ನಂತಹ ಸರ್ವಾಧಿಕಾರಿಯ ಬೆಳವಣಿಗೆಗೆ ಇದು ಸಹಾಯ ಮಾಡಿತು.

ಜಗತ್ತನ್ನೇ ಗೆಲ್ಲಬೇಕೆಂಬ ಮತ್ತು ಜರ್ಮನ್ನರ ಆರ್ಯ ಜನಾಂಗೀಯ ಶ್ರೇಷ್ಠತೆಯನ್ನು ಜಾರಿಗೊಳಿಸಬೇಕೆಂಬ ಸರ್ವಾಧಿಕಾರಿ ಹಿಟ್ಲರ್ ನ ಮಹತ್ವಾಕಾಂಕ್ಷೆಯೇ ಎರಡನೆಯ ಮಹಾಯುದ್ಧಕ್ಕೆ ಮುಖ್ಯ ಕಾರಣಗಳಲ್ಲೊಂದಾಯಿತು. ಹಿಟ್ಲರನಂತೆ ಇಟಲಿಯಲ್ಲೂ ಕೂಡ ಮುಸೋಲಿನಿ ಎಂಬ ಸರ್ವಾಧಿಕಾರಿಯ ಉದಯವಾಯಿತು.ಪೂರ್ವ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೀನಾದ
ಮೇಲೆ ಜಪಾನ್ ದಾಳಿಗಳನ್ನು ನಡೆಸುತ್ತಿತ್ತು.

೧೧. ಮೈಸೂರಿನ ಮುಖ್ಯ ಕಮಾಂಡೆಂಟ್‌ಗಳನ್ನು ಹೆಸರಿಸಿ.

ಮೈಸೂರಿನ ಲ್ಯಾನ್ಸರ್‌ಗಳಲ್ಲಿ ಮುಖ್ಯರಾದವರು ಕಮಾಂಡೆಂಟ್ ಎ.ಟಿ. ತ್ಯಾಗರಾಜ್, ರಿಸಾಲ್ದಾರ್‌ಗಳಾದ ಎ. ಲಿಂಗರಾಜ ಅರಸ್, ಸುಬ್ಬರಾಜ ಅರಸ್, ಬಿ.ಪಿ. ಕೃಷ್ಣೇ ಅರಸ್, ವಿರ್ ತುರಾಕ್ ಆಲಿ, ಸರ್ದಾರ್ ಬಹಾದೂರ್, ಬಿ. ಚಾಮರಾಜ ಅರಸ್, ರೆಜಿಮೆಂಟ್‌ದಾರ್ ಬಿ. ಚಾಮರಾಜ ಅರಸ್ ಹಾಗೂ ಕರ್ನಲ್ ಜೆ. ದೇಸಿರಾಜ ಅರಸ್.

೧೨. ಎರಡನೇ ಮಹಾಯುದ್ಧದ ಪರಿಣಾಮಗಳೇನು?

ಮಾನವ ಚರಿತ್ರೆಯಲ್ಲಿ ಅತಿ ಹೆಚ್ಚು ಸಾವು ನೋವುಗಳನ್ನು ಕಂಡ ಎರಡನೇ ಜಾಗತಿಕ ಯುದ್ಧವು ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯನ್ನು ಬದಲಾವಣೆ ಮಾಡಿತು. ರಾಷ್ಟ್ರ ಸಂಘದ ಜಾಗದಲ್ಲಿ ವಿಶ್ವಸಂಸ್ಥೆ ರಚನೆಯಾಯಿತು. ಯುದ್ಧದ ವಿಜಯಿ ರಾಷ್ಟçಗಳಾದ ಅಮೆರಿಕ ಸಂಯುಕ್ತ ಸಂಸ್ಥಾನ, ಸೋವಿಯತ್ ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆಯ
ಭದ್ರತಾ ಮಂಡಳಿಯ ಖಾಯಂ ಸದಸ್ಯರಾದರು. ಸೋವಿಯತ್ ರಷ್ಯಾ ಮತ್ತು ಅಮೆರಿಕ ಪರಸ್ಪರ
ವಿರೋಧಿಯಾದ ಶಕ್ತಿಶಾಲಿ ದೇಶಗಳಾದವು. ಶೀತಲ ಸಮರಕ್ಕೆ ಇದು ನಾಂದಿಯಾಯಿತು. ಏಷ್ಯಾ ಮತ್ತು ಆಫ್ರಿಕಾದ ವಸಾಹತುಗಳು ಸ್ವಾತಂತ್ರ್ಯ ಪಡೆಯಲು ವಾತಾವರಣ ಪೂರಕವಾಯಿತು. ಬ್ರಿಟನ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ತಮ್ಮ ಹಿಡಿತದಲ್ಲಿದ್ದ ಬಹುತೇಕ ವಸಾಹತುಗಳನ್ನು ಕಳೆದುಕೊಂಡವು. ಅಮೆರಿಕ ಅಣ್ವಸ್ತ್ರ ಪ್ರಯೋಗಿಸಿದ್ದರಿಂದ ಬೃಹತ್ ದೇಶಗಳ ನಡುವೆ ಅಣ್ವಸ್ತ್ರ ಪೈಪೋಟಿಗೆ ದಾರಿಯಾಯಿತು.

೧೩. ತೀನ್ ಮೂರ್ತಿ ಚೌಕ ಎಲ್ಲಿದೆ?

ತೀನ್ ಮೂರ್ತಿ ಚೌಕ ದೆಹಲಿಯಲ್ಲಿದೆ.

೧೪. ಭಾರತದ ಸಂಪನ್ಮೂಲಗಳನ್ನು ಬ್ರಿಟನ್ ಹೇಗೆ ಎರಡನೇ ಮಹಾಯುದ್ಧದಲ್ಲಿ ಉಪಯೋಗಿಸಿಕೊಂಡಿತು?

ಭಾರತೀಯ ಸಂಪನ್ಮೂಲಗಳು ಮತ್ತು ಸಿಪಾಯಿಗಳು, ಬ್ರಿಟನ್ ಮಿತ್ರರಾಷ್ಟ್ರಗಳು ಯುದ್ಧದಲ್ಲಿ ಜಯಗಳಿಸಲು ಸಹಾಯವಾದವು.  ಈ ಯುದ್ಧಕ್ಕಾಗಿ ಬ್ರಿಟನ್
ಭಾರತೀಯ ಕೃಷಿ ವಸ್ತುಗಳನ್ನು, ಕೈಗಾರಿಕಾ ಪದಾರ್ಥಗಳನ್ನು ಉಪಯೋಗಿಸಿಕೊಂಡಿತು. ಹಾಗೂ
ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನು ಉತ್ಪಾದಿಸಲು ಅರ್ಡಿನೆನ್ಸ್ ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸಿ,
ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿತು.

III. ಚಟುವಟಿಕೆಗಳು :

೧. ಯುದ್ಧಗಳಿಂದ ಮಾನವ ಜನಾಂಗದ ಮೇಲಾಗುವ ಪರಿಣಾಮಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ.

ಯುದ್ಧಗಳಿಂದ ಮಾನವ ಕುಲ ನಶಿಸಿ ಹೋಗುತ್ತದೆ. ಜೀವಗಳಿಗೆ ಬೆಲೆ ಇಲ್ಲದೆ ದ್ವೇಷ ಮತ್ತು ಅಸೂಯೆಗಾಗಿ ಅಮಾಯಕ ಪ್ರಾಣಗಳ ಬಲಿ ಕೊಡಬೇಕಾಗುತ್ತದೆ. ಹೆಚ್ಚು ಪುರುಷ ಸೈನಿಕರು ಮೃತವಾಗುವುದರಿಂದ ಅವರನ್ನು ಅವಲಂಬಿಸಿಕೊಂಡ ಕುಟುಂಬ ಬೀದಿ ಪಾಲಾಗುತ್ತದೆ. ವಿಧವೆಯರು ತಮ್ಮ ಮಕ್ಕಳ ಲಾಲನೆ ಪಾಲನೆ ಜೀವನಪೂರ್ತಿ ಕಷ್ಟ ಪಡಬೇಕಾಗುತ್ತದೆ. ಯುದ್ಧಗಳಿಂದ ಗೆದ್ದ ಸೈನ್ಯವು ಸೋತ ಮನೆಮಠಗಳನ್ನು ಲೂಟಿ ಮಾಡುತ್ತದೆ. ಯುದ್ಧಗಳಿಂದ ಸಾಕಷ್ಟು ಜೀವ ಹಾನಿಯ ಜೊತೆಗೆ ಸಂಪತ್ತಿನ ವೃಥಾ ಖರ್ಚಾಗುತ್ತದೆ. ಯುದ್ಧಗಳಿಂದ  ಸುಖ ಸಮೃದ್ಧಿಯಿಂದ ಜೀವಿಸುತ್ತಿದ್ದ ಸಾಮ್ರಾಜ್ಯಗಳು ಕಷ್ಟಕಾರ್ಪಣ್ಯಗಳನ್ನು ಅನುಭವಿಸುವ ಹಾಳು ಕೊಂಪೆಗಳಾಗಿ ಬದಲಾಗುತ್ತವೆ.

೨. ಅಂತರ್ಜಾಲ ಮತ್ತು ವೃತ್ತಪತ್ರಿಕೆಗಳ ನೆರವಿನಿಂದ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತವು ಅನ್ಯರಾಷ್ಟ್ರಗಳೊಂದಿಗೆ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಬಂಧ ಬರೆಯಿರಿ.

ಗಣರಾಜ್ಯೋತ್ಸವದ ದಿನದಂದು ಭಾರತವು ತನ್ನ ನೆರೆಯ ರಾಷ್ಟ್ರಗಳ ಮುಖ್ಯಸ್ಥರನ್ನು ಅತಿಥಿಗಳನ್ನಾಗಿ ಕರೆಸಿ, ಭಾರತದ ಶಕ್ತಿಪ್ರದರ್ಶನವನ್ನು ಮಾಡುತ್ತದೆ ಮತ್ತು ಭಾಷಣಗಳಲ್ಲಿ ನೆರೆ ರಾಷ್ಟ್ರಗಳೊಂದಿಗೆ ಮಿತೃತ್ವವನ್ನು ತೋರಿಸಿ ಅನು ಪಾಲಿಸುತ್ತದೆ. ವೃತ್ತ ಪತ್ರಿಕೆಗಳಲ್ಲಿ ಜಾಗತಿಕ ಭಾಷೆಗಳಾದ ಇಂಗ್ಲಿಷ್ ನಲ್ಲಿ ಸುದ್ದಿಯನ್ನು ಪ್ರಕಟಿಸಿ ಎಲ್ಲಾ ದೇಶಗಳು ಓದಿ ಶಾಂತಿ ಮತ್ತು ಸೌಹಾರ್ದತೆ ಹೊಂದಲು ಸಹಾಯ ಮಾಡುತ್ತದೆ. ಜಾಗತಿಕವಾಗಿ ಯುದ್ಧಗಳು ನಡೆದಾಗ ಶಾಂತಿ ಸ್ಥಾಪನೆಗಾಗಿ ಬೇಕಾದ ಎಲ್ಲಾ ಪ್ರಯತ್ನಗಳನ್ನು ಭಾರತವು ಮಾಡುತ್ತದೆ ಮತ್ತು ಆಯಾ ದೇಶಗಳ ಮುಖ್ಯಸ್ಥರಿಗೆ ಕರೆ ಮಾಡಿ ಶಾಂತಿ ಸ್ಥಾಪಿಸಲು ಕರೆ ಕೊಡುತ್ತದೆ. ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ಭಾರತವು ಯಾವ ಶಕ್ತಿ ಬಳಕು ಮನ್ನಣೆ ನೀಡದೆ ಅಭಿವೃದ್ಧಿಯ ಕಡೆಗೆ ಮತ್ತು ಮಾನವ ಕುಲ ವಿಕಾಸವಾಗುವ ಕಡೆ ಗಮನಹರಿಸುತ್ತದೆ.

IV. ಯೋಜನೆಗಳು :
೧. ಪ್ರಪಂಚದ ಭೂಪಟ ಬರೆದು ಮಿತ್ರಬಣ ಮತ್ತು ಶತ್ರುಬಣದ ದೇಶಗಳನ್ನು ಗುರುತಿಸಿ ಬಣ್ಣ ಹಚ್ಚಿರಿ.

೨. ವಿಶ್ವದ ವಿವಿಧ ರಾಷ್ಟ್ರಗಳ ರಾಷ್ಟ್ರ ಧ್ವಜಗಳ ಚಿತ್ರಗಳನ್ನು ಸಂಗ್ರಹಿಸಿ.

sslc social science kannada medium notes download

10th social science notes pdf in kannada

ರಾಜ್ಯಶಾಸ್ತ್ರ

ಭಾರತದ ವಿದೇಶಾಂಗ ನೀತಿ ಮತ್ತು ಜಾಗತಿಕ ಸವಾಲುಗಳು

10ನೇ ತರಗತಿ ಸಮಾಜ ವಿಜ್ಞಾನ ರಾಜ್ಯಶಾಸ್ತ್ರ ಅಧ್ಯಾಯ 21

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ಭಾರತದ ವಿದೇಶಾಂಗ ನೀತಿಯ ಶಿಲ್ಪಿ  ಜವಾಹರಲಾಲ್ ನೆಹರು .
೨. ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.
೩. ಭಾರತವು ಒಂದು ಶಾಂತಿಪ್ರಿಯ ರಾಷ್ಟ್ರವಾದುದರಿಂದ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಪ್ರತಿಪಾದಿಸುತ್ತಿದೆ.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ :
೪. ವಿದೇಶಾಂಗ ನೀತಿ ಎಂದರೇನು ?

ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಡನೆ
ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.

೫. ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಯಾವುವು?

ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಈ ಕೆಳಗಿನಂತಿವೆ.
ವಸಹಾತುಶಾಹಿತ್ವಕ್ಕೆ ವಿರೋಧ
ಸಾಮ್ರಾಜ್ಯಶಾಹಿತ್ವಕ್ಕೆ ವಿರೋಧ
ವರ್ಣಭೇದ ನೀತಿಗೆ ವಿರೋಧ
ಅಲಿಪ್ತ ನೀತಿ
ಆಫ್ರಿಕಾ ಮತ್ತು ಏಷ್ಯಾದ ಪ್ರಗತಿಗೆ ಪ್ರಥಮ ಆದ್ಯತೆ
ನಿಶಸ್ತ್ರೀಕರಣಕ್ಕೆ ಬೆಂಬಲ
ವಿಶ್ವಸಂಸ್ಥೆ ಮತ್ತು ವಿಶ್ವಶಾಂತಿಗೆ ಬೆಂಬಲ

೬. ದ್ವಿತೀಯ ಮಹಾಯುದ್ಧದ ನಂತರ ಎದುರಾದ ಜಾಗತಿಕ ಸವಾಲುಗಳು ಯಾವುವು?

ಮಾನವ ಹಕ್ಕುಗಳ ನಿರಾಕರಣೆ, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇದ ನೀತಿ
ಹಾಗೂ ಭಯೋತ್ಪಾದಕತೆಯಂತಹ ಹಲವಾರು ಸವಾಲುಗಳು ದ್ವಿತೀಯ ಮಹಾಯುದ್ಧದ ನಂತರ ಎದುರಾಗಿವೆ.

೭. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತವು ಕೈಗೊಂಡಿರುವ ಕ್ರಮಗಳನ್ನು ತಿಳಿಸಿ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತವಾಗಿರಬೇಕೆಂಬುದನ್ನು ಭಾರತ ಸಮರ್ಥಿಸುತ್ತಾ ಬಂದಿದೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.ಜನಾಂಗ ಹತ್ಯೆ, ಎಲ್ಲಾ ವಿಧದ ಶೋಷಣೆ ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ. ವಿಶ್ವಸಂಸ್ಥೆ ಹಾಗೂ ಇನ್ನಿತರ ಜಾಗತಿಕ ವೇದಿಕೆಗಳ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಿದೆ.

೮. ‘ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ’ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ
ಪೈಪೋಟಿಯಿಂದಾಗುವ ಪರಿಣಾಮಗಳಾವುವು?

ವಿಶ್ವದಾದ್ಯಂತ ಭಯ ಅಸ್ಥಿರತೆ ಸೃಷ್ಟಿಯಾಗುತ್ತದೆ. ಯುದ್ಧದ ಸಂಭವನೀಯತೆ ಹೆಚ್ಚಾಗುತ್ತದೆ. ವಿಶ್ವಶಾಂತಿ ಸ್ಥಾಪನೆಗೆ ಅಡ್ಡಿಯಾಗುತ್ತದೆ. ಆರ್ಥಿಕವಾಗಿ ನಷ್ಟದಾಯಕ ಸ್ಥಿತಿ ಹಾಗೂ ಆರ್ಥಿಕ ಅಸ್ಥಿರತೆಗೆ ದಾರಿ ಮಾಡಿಕೊಡುತ್ತದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಐಸನ್ ಹೋವರ್ ಒಮ್ಮೆ ಹೀಗೆ ಉದ್ಗರಿಸಿದ್ದರು. ‘ಶಸ್ತ್ರಗಳನ್ನು ಹೊಂದಿದ ಈ
ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’. ಈ ಹೇಳಿಕೆಯು ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ದುಷ್ಪರಿಣಾಮಗಳನ್ನು ದೃಢಪಡಿಸುತ್ತದೆ.

೯. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವುವು? ಈ ರೀತಿ ಹಿಂದುಳಿಯುವಿಕೆಗೆ
ಕಾರಣಗಳಾವುವು?

ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳು
ಬಡತನ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಸಮರ್ಪಕವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಕಳಪೆಯಾಗಿರುತ್ತದೆ. ಅನಾರೋಗ್ಯ ಹಾಗೂ ಅಪೌಷ್ಟಿಕತೆ
ಹೆಚ್ಚಾಗಿರುತ್ತದೆ. ತಂತ್ರಜ್ಞಾನದ ಕೊರತೆ ಹೆಚ್ಚಾಗಿರುತ್ತದೆ, ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತದೆ.

ಈ ರೀತಿ ಹಿಂದುಳಿಯುವಿಕೆಗೆ
ಕಾರಣಗಳು

ಐರೋಪ್ಯ ರಾಷ್ಟ್ರಗಳು ಆಫ್ರಿಕ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದವು. ಈ ಸಾಮ್ರಾಜ್ಯ ಶಾಹಿತ್ವ ಮತ್ತು ವಸಾಹತು ಶಾಹಿತ್ವದಿಂದಾಗಿ ಏಷ್ಯಾ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳ  ಸಂಪನ್ಮೂಲಗಳನ್ನು
ಲೂಟಿ ಮಾಡಲಾಯಿತು. ಇದರಿಂದಾಗಿ ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳು
ಆರ್ಥಿಕವಾಗಿ ತೀರಾ ಹಿಂದುಳಿದವು.

೧೦. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತದ ಪ್ರಯತ್ನಗಳನ್ನು ತಿಳಿಸಿ.

ಭಾರತವು ಅಲಿಪ್ತ ನೀತಿಯನ್ನು ಜಗತ್ತಿನಲ್ಲಿ ಮುಂದುವರಿಸಿದೆ.ಯಾವುದೇಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಭಾರತ ಪ್ರತಿಪಾದಿಸಿದೆ. ಹಲವು ಬಡ ರಾಷ್ಟ್ರಗಳಿಗೆ ಭಾರತವು ನೆರವು ನೀಡುತ್ತಾ ಬಂದಿದೆ. ತನ್ಮೂಲಕ ಹಿಂದುಳಿದ ರಾಷ್ಟ್ರಗಳ ಆತ್ಮಗೌರವವನ್ನು ಭಾರತ ಎತ್ತಿ ಹಿಡಿಯಲು ಸಹಕರಿಸಿದೆ. ಅದರೊಂದಿಗೆ ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಕೂಡ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿದೆ.

೧೧. ಭಯೋತ್ಪಾದಕತೆಯಿಂದ ಉಂಟಾಗುವ ಪರಿಣಾಮಗಳಾವುವು?

ಭಯೋತ್ಪಾದಕತೆಯು ವ್ಯಕ್ತಿಗಳ ಪ್ರಾಣಹಾನಿಯನ್ನುಂಟು ಮಾಡುತ್ತದೆ, ಆಸ್ತಿ-ಪಾಸ್ತಿಗಳ ನಷ್ಟ ಉಂಟುಮಾಡುತ್ತದೆ, ಆರ್ಥಿಕ ಅಭಿವೃದ್ಧಿಗೆ ತಡೆ ಉಂಟುಮಾಡುತ್ತದೆ, ಸಾಮಾಜಿಕ ಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತದೆ, ಮಾನಸಿಕ ವೇದನೆಯನ್ನು ನೀಡುತ್ತದೆ, ಕಾನೂನು – ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುತ್ತದೆ. ವಿವಿಧ ರಾಷ್ಟ್ರಗಳ ಜಾಗತಿಕ ಭದ್ರತೆಗೆ ಆತಂಕಕಾರಿಯಾಗಿದೆ.

೧೨. ಭಯೋತ್ಪಾದನೆಯ ಸವಾಲನ್ನು ಎದುರಿಸಲು ಭಾರತವು ಕೈಗೊಂಡಿರುವ ಕ್ರಮಗಳಾವುವು?

ರಾಷ್ಟ್ರೀಯ ತನಿಖಾ ದಳವನ್ನು (NIA) ಸ್ಥಾಪಿಸಿದೆ. ವಿಶೇಷ ಪರಿಣತಿ ಪಡೆಗಳನ್ನು ರಚಿಸಿದೆ ಕೆಲವೊಮ್ಮೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ರಕ್ಷಣಾ ಪಡೆಗಳನ್ನು ಬಳಸುತ್ತಿದೆ, ತನ್ನ ಹಾಗೂ ಅನ್ಯರ ನೆಲದಲ್ಲಿ ಭಯೋತ್ಪಾದಕತೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ, ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಹಕಾರದ ಬಗ್ಗೆ ನಿರಂತರವಾಗಿ ಕರೆ ನೀಡುತ್ತಾ ಬಂದಿದೆ, ರಾಜ್ಯ ಸರ್ಕಾರಗಳು ಭಯೋತ್ಪಾದಕ ನಿಗ್ರಹ ಪಡೆಗಳನ್ನು (ATS) ರಚಿಸಿದೆ, ಇಂಟೆಲಿಜೆನ್ಸ್ ಬ್ಯೂರೋ (IB) ಮತ್ತು ಸಂಶೋಧನೆ ಹಾಗೂ ವಿಶ್ಲೇಷಣಾ ಘಟಕ (RAW) ಮುಂತಾದ ಗುಪ್ತಚರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಗುಪ್ತಚರ ವ್ಯವಸ್ಥೆಯನ್ನು ಬಲವರ್ಧನೆ ಮಾಡಲಾಗಿದೆ, ಭಯೋತ್ಪಾದಕರಿಗೆ ಹಣಕಾಸು ವರ್ಗಾವಣೆಯನ್ನು ತಡೆಯಲು ಹಣಕಾಸು ಗುಪ್ತಚರ ಘಟಕವನ್ನು ಸ್ಥಾಪಿಸಲಾಗಿದೆ. ಎಲ್ಲಾ ರೀತಿಯ ಭಯೋತ್ಪಾದಕತೆಯ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತ ಬೆಂಬಲವನ್ನು ಸೂಚಿಸುತ್ತದೆ.

III. ಚಟುವಟಿಕೆಗಳು
೧. ಮಾನವ ಹಕ್ಕುಗಳನ್ನು ರಕ್ಷಿಸಲು ರಚಿಸಲಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗ್ಗೆ ಮಾಹಿತಿ ಸಂಗ್ರಹಿಸಿ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಭಾರತದ ನಾಗರಿಕರಿಗೆ ಮಾನವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಸ್ಥಾಪಿಸಲಾದ ಕಾನೂನು ಸಂಸ್ಥೆಯಾಗಿದೆ. ಮಾನವ ಹಕ್ಕುಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳು ಸೇರಿವೆ.

ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಶಾಸಕಾಂಗ ಕಾನೂನಿನಡಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಅಕ್ಟೋಬರ್ 12, 1993 ರಂದು ಸ್ಥಾಪಿಸಲಾಯಿತು.

ಮಾರ್ಚ್ 3, 2022 ರಿಂದ, ಶ್ರೀ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾಗಿದ್ದಾರೆ.

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಗಳು
ಅವು ಈ ಕೆಳಗಿನಂತಿವೆ:

ಮಾನವ ಹಕ್ಕುಗಳ ರಕ್ಷಣೆ.

ಮಾನವ ಹಕ್ಕುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಧಾನಗಳನ್ನು ಅಭಿವೃದ್ಧಿಪಡಿಸುವುದು.

ಭಾರತ ಸರ್ಕಾರ ಅಥವಾ ಸಾರ್ವಜನಿಕ ಸೇವಕರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರಣೆ.

ಭಾರತದ ನಾಗರಿಕರಿಗೆ ಮಾನವ ಹಕ್ಕುಗಳು ಮತ್ತು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪಾತ್ರದ ಬಗ್ಗೆ ಶಿಕ್ಷಣ ನೀಡುವುದು.

ಮಾನವ ಹಕ್ಕುಗಳಿಗೆ ಅಡ್ಡಿಯಾಗುವ ಅಂಶಗಳನ್ನು ವಿಶ್ಲೇಷಿಸುವುದು ಮತ್ತು ಅವುಗಳಿಗೆ ಪರಿಹಾರ ಕ್ರಮಗಳನ್ನು ಅಭಿವೃದ್ಧಿಪಡಿಸುವುದು.

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿ ಮಾನವ ಹಕ್ಕುಗಳಲ್ಲಿ ಸಂಶೋಧನೆ ಕೈಗೊಳ್ಳುವುದು ಮತ್ತು ಉತ್ತೇಜಿಸುವುದು.

ದೇಶದ ಜೈಲುಗಳಿಗೆ ಭೇಟಿ ನೀಡಿ ಕೈದಿಗಳ ಸ್ಥಿತಿಯನ್ನು ಪರಿಶೀಲಿಸುವುದು.

ಮಾನವ ಹಕ್ಕುಗಳಿಗೆ ಕೊಡುಗೆ ನೀಡುವ ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಒಬ್ಬ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಮತ್ತು ಇತರ ಐದು ಸದಸ್ಯರನ್ನು ಒಳಗೊಂಡಿದೆ. ಅವರು ಈ ಕೆಳಗಿನಂತಿದ್ದಾರೆ:

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು: ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾಗಲು ಅಗತ್ಯವಿರುವ ಅವಶ್ಯಕತೆಯೆಂದರೆ, ಆ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು.

ಒಬ್ಬ ಸದಸ್ಯರು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ಅಥವಾ ಪ್ರಸ್ತುತ ನ್ಯಾಯಾಧೀಶರಾಗಿರುತ್ತಾರೆ.

ಒಬ್ಬ ಸದಸ್ಯರು ಹೈಕೋರ್ಟ್‌ನ ಮಾಜಿ ಅಥವಾ ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ.

ಮಾನವ ಹಕ್ಕುಗಳ ವಿಷಯಗಳಲ್ಲಿ ಜ್ಞಾನ, ಪ್ರಾಯೋಗಿಕ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಇನ್ನೂ ಮೂವರು ಸದಸ್ಯರು. ಈ ಮೂವರು ಸದಸ್ಯರಲ್ಲಿ ಒಬ್ಬರು ಮಹಿಳೆಯಾಗಿರಬೇಕು.

೨. ಕೈಲಾಶ್ ಸತ್ಯಾರ್ಥಿರವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ಸಂಗ್ರಹಿಸಿ.

ದೂರದೃಷ್ಟಿಯ ಜಾಗತಿಕ ಚಿಂತಕ ಮತ್ತು ಸಾಮಾಜಿಕ ಸುಧಾರಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಕರುಣೆಯ ಜಾಗತೀಕರಣದ ಮುಂಚೂಣಿಯಲ್ಲಿದ್ದಾರೆ. ಸತ್ಯಾರ್ಥಿಯವರ ಜೀವನ ಮತ್ತು ಧ್ಯೇಯವು ಕರುಣೆಯ ಆಳವಾದ ಪ್ರಭಾವವನ್ನು ಸಾಕಾರಗೊಳಿಸುತ್ತಿದ್ದು, ಅರ್ಥಪೂರ್ಣ ಬದಲಾವಣೆಯನ್ನು ತರುವ ಅದರ ಪರಿವರ್ತಕ ಶಕ್ತಿಯನ್ನು ವಿವರಿಸುತ್ತದೆ. ಕರುಣೆಯು ದುರ್ಬಲ ಭಾವನೆಯಲ್ಲ ಆದರೆ ಅದು ತನ್ನ ಸ್ವಂತದ್ದೆಂಬಂತೆ ಇತರರ ನೋವನ್ನು ನಿವಾರಿಸಲು ಕರುಣಾಭರಿತ ಕ್ರಮ ತೆಗೆದುಕೊಳ್ಳಲು ಅಂತ್ಯವಿಲ್ಲದ ಶಕ್ತಿ ಮತ್ತು ಚಾಲನೆಯನ್ನು ಒದಗಿಸುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ. ಅವರ ಇತ್ತೀಚಿನ ಆಂದೋಲನವಾದ ಸತ್ಯಾರ್ಥಿ ಜಾಗತಿಕ ಕರುಣೆಯ ಮೂಲಕ, ಕರುಣೆಯನ್ನು ಮಾರ್ಗದರ್ಶಿ ಶಕ್ತಿಯಾಗಿ ಬಳಸಿಕೊಂಡು ನ್ಯಾಯಯುತ, ಶಾಂತಿಯುತ ಮತ್ತು ಸುಸ್ಥಿರ ಜಗತ್ತನ್ನು ಉತ್ತೇಜಿಸಲು ಕರುಣೆಯನ್ನು ಜಾಗತೀಕರಣಗೊಳಿಸುವ ಗುರಿಯನ್ನು ಸತ್ಯಾರ್ಥಿ ಹೊಂದಿದ್ದಾರೆ. ‘ಮಕ್ಕಳು ಮತ್ತು ಯುವಜನರ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲಾ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ನಡೆಸಿದ ಹೋರಾಟಕ್ಕಾಗಿ’ ಅವರಿಗೆ 2014 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ದುರ್ಬಲರ ವಿರುದ್ಧದ ಹಿಂಸಾಚಾರವನ್ನು ತೊಡೆದುಹಾಕಲು ಸತ್ಯಾರ್ಥಿಯವರ ನಿರ್ಭೀತ ಮತ್ತು ಅವಿರತ ಪ್ರಯತ್ನಗಳು ಹಲವಾರು ಸಾಮೂಹಿಕ ಚಳುವಳಿಗಳನ್ನು ಹುಟ್ಟುಹಾಕಿವೆ ಮತ್ತು ವಿಶ್ವಾದ್ಯಂತ ಕ್ರಾಂತಿಕಾರಿ ಶಾಸನಗಳ ರಚನೆಗೆ ಕಾರಣವಾಗಿವೆ.

IV. ಯೋಜನೆ
೧. ಮಾನವ ಹಕ್ಕುಗಳ ನಿರಾಕರಣೆಯ ವಿರುದ್ಧ ಹೋರಾಡಿದ ಮಹನೀಯರುಗಳ ಜೀವನ
ಚರಿತ್ರೆಯನ್ನು ಓ<span;>ದಿ

sslc social science kannada medium notes download

10th social science notes pdf in kannada

ಜಾಗತಿಕ ಸಂಸ್ಥೆಗಳು

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-22

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

೧. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ..1945 ಅಕ್ಟೋಬರ್ 24  .
೨. ವಿಶ್ವಸಂಸ್ಥೆಯ ಮುಖ್ಯ ಕಚೇರಿ _ಅಮೆರಿಕಾದ ನ್ಯೂಯಾರ್ಕ್  ನಗರದಲ್ಲಿದೆ.
೩. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ   ಭದ್ರತಾ ಮಂಡಳಿ.
೪. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರಾವಧಿ 9 ವರ್ಷಗಳು
೫. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಇಟಲಿ ದೇಶದ ರೋಮ್ ಎಂಬಲ್ಲಿ ಇದೆ.
೬. ಅಂತರಾಷ್ಟ್ರೀಯ ನ್ಯಾಯಾಲಯವು  ನೆದರ್ಲ್ಯಾಂಡಿನ ಹೇಗ್ ನಗರ ಎಂಬಲ್ಲಿ ಇದೆ.
೭. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯವರ ಹೆಸರು ಶ್ರೀ ಆಂಟೋನಿಯೊ ಗುಟೆರೆಸ್ .
೮. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ1948 .
೯. ಸಾರ್ಕ್ ಸ್ಥಾಪನೆಯಾದ ವರ್ಷ 1985.

II. ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಗುಂಪುಗಳಲ್ಲಿ ಚರ್ಚಿಸಿ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧೦. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ಪ್ರಮುಖ ನಾಯಕರುಗಳ ಹೆಸರುಗಳನ್ನು ತಿಳಿಸಿ.

ಇಂಗ್ಲೆಂಡಿನ ಅಂದಿನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್, ರಷ್ಯಾದ ಅಂದಿನ ಅಧ್ಯಕ್ಷರಾಗಿದ್ದ
ಜೋಸೆಫ್ ಸ್ಟಾಲಿನ್ ಹಾಗೂ ಅಮೇರಿಕಾದ ಅಂದಿನ
ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಎಫ್.ಡಿ. ರೂಸ್‌ವೆಲ್ಟ್.

೧೧. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವು?
ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವೆಂದರೆ,
​ಸಾಮಾನ್ಯ ಸಭೆ
​ಸಚಿವಾಲಯ
​ ಭದ್ರತಾ ಮಂಡಳಿ
​ಅಂತರರಾಷ್ಟ್ರೀಯ ನ್ಯಾಯಾಲಯ
​ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
​ದತ್ತಿ ಸಮಿತಿ

೧೨. ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?

ಅಮೆರಿಕ ಸಂಯುಕ್ತ ಸಂಸ್ಥಾನ, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಯುನೈಟೆಡ್ ಕಿಂಗ್‌ಡಂ ಈ ಐದು
ರಾಷ್ಟ್ರಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.

೧೩. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾವುವು?

ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು, ಅಪೌಷ್ಟಿಕತೆ ಮುಂತಾದ ವಿಷಯಗಳು ಈ ಸಂಸ್ಥೆಯ
ಕಾರ್ಯ ಸೂಚಿಯಲ್ಲಿವೆ. ಜನರ ಆರೋಗ್ಯ ಸುಧಾರಿಸುವುದು ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮತ್ತು ಅಪಾಯಕಾರಿ ಇತರ ರೋಗಗಳನ್ನು ಹೋಗಲಾಡಿಸುವುದು ಕೂಡ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯವಾಗಿದೆ.

೧೪. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.

ಇದು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆಯಾಗಿದೆ.ಕಾರ್ಮಿಕ ವರ್ಗದ ಸಾಮಾಜಿಕ ಭದ್ರತೆ, ಆರೋಗ್ಯ ಸಂರಕ್ಷಣೆ, ಉತ್ತಮ ಜೀವನ ಮಟ್ಟ, ಮಹಿಳಾ ಕಾರ್ಮಿಕರ ಹೆರಿಗೆ ಸೌಲಭ್ಯ, ಕನಿಷ್ಠ ವೇತನ ಜಾರಿ, ವಸತಿ ನಿರ್ಮಾಣ ಇತ್ಯಾದಿ ವಿಚಾರಗಳು ಈ ಸಂಸ್ಥೆಯ ಕಾರ್ಯ ಪರಿಧಿಯೊಳಗೆ ಸೇರಿವೆ.

೧೫.SAARCಅನ್ನು ವಿಸ್ತರಿಸಿ.

ಸಾರ್ಕ್- ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ

South Asian Association for Regional Cooperation.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ, ಆರರಿಂದ ಎಂಟು ವಾಕ್ಯಗಳಲ್ಲಿ ಉತ್ತರಿಸಿ.

೧೬. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿಮಾಡಿರಿ.

ವಿಶ್ವ ಸಂಸ್ಥೆಯ ಧ್ಯೇಯೋದ್ಧೇಶಗಳು ಈ ಕೆಳಗಿನಂತಿವೆ. :
(೧) ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವುದು.
(೨) ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು.
(೩) ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು.
(೪) ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ನೆಲೆಯ
ಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
(೫) ಅಂತರರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮಾನ್ಯತೆ
ದೊರಕಿಸುವುದು.
(೬) ರಾಷ್ಟ್ರಗಳುಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.

೧೭. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆ ಇದಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವು 5 ಪ್ರತಿನಿಧಿಗಳನ್ನು ಸಾಮಾನ್ಯ ಸಭೆಗೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ಸದಸ್ಯ
ರಾಷ್ಟ್ರಕ್ಕೆ ಒಂದೇ ಒಂದು ಮತದ ಹಕ್ಕು
ಮಾತ್ರ ಇರುತ್ತದೆ. ಈ ಸಾಮಾನ್ಯ ಸಭೆ ತನ್ನ ಪ್ರಥಮ ಅಧಿವೇಶನದಲ್ಲಿಯೇ ಒಂದು ವರ್ಷದ ಅವಧಿಗೆ ಒಬ್ಬರು ಅಧ್ಯಕ್ಷರನ್ನು ಆರಿಸುತ್ತದೆ. ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ 7 ಮಂದಿ ಅಧ್ಯಕ್ಷರನ್ನು ಇಲ್ಲಿ ಆರಿಸಲಾಗುತ್ತದೆ. ಈ ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ ಆರಂಭಗೊಂಡು ಡಿಸೆಂಬರ್ ಮಧ್ಯ ಭಾಗದವರೆಗೆ ಜರುಗುತ್ತದೆ. ಎಲ್ಲಾ ಹೆಚ್ಚಿನ ಪ್ರಮುಖ ನಿರ್ಧಾರಗಳಿಗೆ ಮೂರನೇ ಎರಡಂಶದಷ್ಟು ಹಾಜರಾದ ಸದಸ್ಯರ ಅನುಮೋದನೆ ಅವಶ್ಯಕ ಆಗಿರುತ್ತದೆ

೧೮. ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಕಾರ್ಯಗಳಾವುವು?

ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಮುಖ್ಯ ಕಾರ್ಯಗಳು:
i) ಅಂತರರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ
ಹಾಗೂ ಇನ್ನಿತರ ಸಂಬAಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ.
ii) ನಿರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ಹಲವಾರು ವಿಚಾರಗಳು ಈ ಮಂಡಳಿಯ ಕಾರ್ಯವ್ಯಾಪ್ತಿಯೊಳಗೆ ಬರುತ್ತವೆ.
iii) ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳ  ಬಗೆಗೂ ಈ ಮಂಡಳಿಯು ಶಿಫಾರಸ್ಸು ಮಾಡುತ್ತದೆ.
iv) ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುತ್ತದೆ.
v) ವಿಶೇಷ ಪ್ರಾವೀಣ್ಯತೆಯ ಅಂಗ ಸಂಸ್ಥೆಗಳಾದ  ಅಂತರರಾಷ್ಟ್ರೀಯ ಕಾರ್ಮಿಕ ಸಂಘ,(ಐ.ಎಲ್.ಒ.), ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ.), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಹೆಚ್.ಒ.) ಮುಂತಾದವುಗಳ ಕಾರ್ಯಗಳನ್ನು ಸಮನ್ವಯ ಮಾಡುತ್ತದೆ.

೧೯. ವಿಶ್ವಸಂಸ್ಥೆಯ ಸಾಧನೆಗಳನ್ನು ಪಟ್ಟಿ ಮಾಡಿ.

ವಿಶ್ವಸಂಸ್ಥೆಯ ಪ್ರಮುಖ ಸಾಧನೆಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.
೧) ಕೊರಿಯಾ ವಿವಾದ, ಸೂಯೆಜ್ ಕಾಲುವೆ ಬಿಕ್ಕಟ್ಟು ಮತ್ತು ವಿಯೆಟ್ನಾಂ ಸಮಸ್ಯೆಗಳನ್ನು ಬಗೆಹರಿಸಿದೆ.
೨) ಕಾಶ್ಮೀರ ಸಮಸ್ಯೆ ಮತ್ತು ಪ್ಯಾಲಿಸ್ತೀನ್-ಇಸ್ರೇಲ್ ವಿವಾದದ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.
೩) ನಿಶಸ್ತ್ರೀಕರಣದ ಸಾಧನೆಯ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿದೆ.
೪) ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ವ್ಯಾಪಾರ ಸಂಘಟನೆಗಳ ಮೂಲಕ ಆರ್ಥಿಕ, ಹಣಕಾಸಿನ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ.
೫) ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ.
೬) ಮಾನವನ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ ವಿಶ್ವದಾದ್ಯಂತ ಮಾನವ ಹಕ್ಕುಗಳ ಜಾರಿಗೆ ಪ್ರಯತ್ನಿಸುತ್ತಿದೆ.
೭) ವರ್ಣಬೇಧನೀತಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವಗಳನ್ನು ಅಂತ್ಯವಾಗಿಸಲು ಶ್ರಮಿಸುತ್ತಿದೆ.
೮) ಜಾಗತಿಕ ತಾಪಮಾನ ಹೆಚ್ಚಳದಿಂದಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಶ್ರಮಿಸುತ್ತಿದೆ.

೨೦. ಯುನೆಸ್ಕೋದ ಕಾರ್ಯಗಳಾವುವು?

ಇದು ವಿಶ್ವದಾದ್ಯಂತ ಶಿಕ್ಷಣ ವಿಜ್ಞಾನ ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯಸಂಸ್ಥೆಯಾಗಿದೆ. ತಾಂತ್ರಿಕ ಶಿಕ್ಷಣ, ಮಾಧ್ಯಮ ತಂತ್ರಗಾರಿಕೆ, ರಚನಾತ್ಮಕ ಚಿಂತನೆ, ಸಾಂಸ್ಕೃತಿಕ ವಿಚಾರಗಳು ಹಾಗೂ ಪರಿಸರ ವಿಜ್ಞಾನದ ಬಗೆಗೆ ಇದು ಕಾರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ.

೨೧. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳ ಪರಿಹಾರದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪಾತ್ರವನ್ನು ವಿಶ್ಲೇಷಿಸಿ.

ಎರಡನೇ ಮಹಾ ಯುದ್ಧದ ನಂತರ ಜಗತ್ತಿನ ಆರ್ಥಿಕತೆಯನ್ನು ಪುನರ್‌ನಿರ್ಮಾಣ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಈ ಸಂಸ್ಥೆ ಸ್ಥಾಪನೆ ಆಯಿತು.
.
ಇದು ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.
ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶೀ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಕರಿಸುತ್ತದೆ.  ವಿವಿಧ ರಾಷ್ಟ್ರಗಳ ‘ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು’ ಎಂಬುದಾಗಿ ಇದನ್ನು ಕರೆಯಬಹುದಾಗಿದೆ. ಆರ್ಥಿಕವಾಗಿ ಮುಂದುವರಿದ ಹಾಗೂ ಹಿಂದುಳಿದ ರಾಷ್ಟ್ರಗಳ ಪರಸ್ಪರ ಸಂಬಂಧವನ್ನು ಬೆಸೆಯುವಲ್ಲಿ ಇದು ಪೂರಕ ಪಾತ್ರ ವಹಿಸುತ್ತಿದೆ.

೨೨. ಕಾಮನ್‌ವೆಲ್ತ್ ರಾಷ್ಟ್ರಗಳ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.

ಪ್ರಜಾತಂತ್ರವನ್ನು ಎತ್ತಿ ಹಿಡಿಯುವುದು, ಸ್ವಾತಂತ್ರ್ಯದ ಸಂರಕ್ಷಣೆ, ಬಡತನ ನಿರ್ಮೂಲನೆ, ವಿಶ್ವಶಾಂತಿ ನೆಲೆಗೊಳಿಸುವಿಕೆ, ಕ್ರೀಡೆ, ವಿಜ್ಞಾನ, ಹಾಗೂ ಕಲೆಯ ಬೆಳವಣಿಗೆಗೆ ಹಾಗೂ ಆ ಬಗೆಗೆ ಸಂಬಂಧಗಳ ವೃದ್ಧಿ- ಇವು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ. ಪರಸ್ಪರ ಸದಸ್ಯರಾಷ್ಟ್ರಗಳ ಮೈತ್ರಿಯನ್ನು ಈ ಸಂಸ್ಥೆ ಬಲಪಡಿಸುತ್ತದೆ.

೨೩. ಯುರೋಪಿಯನ್ ಯೂನಿಯನ್ ಸಂಸ್ಥೆಯನ್ನು ಕುರಿತು ವಿವರಿಸಿ.

ಈ ಸಂಸ್ಥೆಯು ಯುರೋಪ್ ಖಂಡದ 27 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಮ್ಯಾಸ್ಟ್ರಿಚ್ ಎಂಬಲ್ಲಿ ನಡೆದ ಯುರೋಪಿಯನ್ ಯೂನಿಯನ್ ಒಪ್ಪಂದಕ್ಕೆ ಅನುಗುಣವಾಗಿ 1992ರಲ್ಲಿ ಇದು ಉದಯವಾಯಿತು. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದರಲ್ಲಿನ ಮುಖ್ಯ ಅಂಗ ಸಂಸ್ಥೆಗಳೆAದರೆ (೧) ಯುರೋಪಿಯನ್ ಸಮಿತಿ (೨) ಯುರೋಪಿಯನ್ ಆಯೋಗ (೩) ಯುರೋಪಿಯನ್ ಸಂಸತ್ತು (೪) ಯುರೋಪಿಯನ್ ನ್ಯಾಯಾಲಯ (೫) ಯುರೋಪಿಯನ್ ಕೇಂದ್ರ ಬ್ಯಾಂಕ್. ಐರೋಪ್ಯ ಒಕ್ಕೂಟವು ಒಂದು ಸಂಯುಕ್ತ ರಾಜ್ಯವನ್ನು ಹೋಲುವಂತಿದೆ. ಇದರ ಪ್ರತಿಪಾದಕರು ಹೇಳುವಂತೆ ಈ ಸಂಸ್ಥೆ ಶಾಂತಿ ಮತ್ತು ಪ್ರಜಾತಂತ್ರಕ್ಕಾಗಿ ಕಾರ್ಯ ನಿರ್ವಹಿಸುತ್ತದೆ.ಈ ಸಂಸ್ಥೆಯ ಕೇಂದ್ರ ಕಛೇರಿ ಬೆಲ್ಜಿಯಂ ದೇಶದ ಬ್ರುಸೆಲ್ಸ್ನಲ್ಲಿದೆ.

Iಗಿ. ಚಟುವಟಿಕೆ :
೧. ೨೦೨೩ರಲ್ಲಿ ಯುನೆಸ್ಕೋ ಸಂಸ್ಥೆಯ ವಿಶ್ವಪರಂಪರೆ ಪಟ್ಟಿಗೆ ಸೇರಿದ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಸಂಗ್ರಹಿಸಿ ಅವುಗಳ ವಾಸ್ತುಶಿಲ್ಪದ ವೈಶಿಷ್ಟ್ಯತೆಗಳನ್ನು ಪಟ್ಟಿಮಾಡಿ.

ಗಿ. ಯೋಜಿತ ಕಾರ್ಯ :

೧. ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯು ನಿರ್ವಹಿಸಿರುವ ಶಾಂತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವೃತ್ತ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿಗಳನ್ನು ಸಂಗ್ರಹಿಸಿ

sslc social science kannada medium notes download

10th social science notes pdf in kannada

ಸಮಾಜಶಾಸ್ತ್ರ

ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು

9ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 23

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ಚಿಪ್ಕೋ ಚಳವಳಿ ನಡೆದ ರಾಜ್ಯ ಉತ್ತರಾಖಂಡ .
೨. ‘ನರ್ಮದಾ ಆಂದೋಲನ’ ದ ನೇತೃತ್ವ ವಹಿಸಿದ್ದವರು ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೆ .
೩. ಡಾ. ಶಿವರಾಮ ಕಾರಂತರು ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
೪. ಸಮೂಹ ವರ್ತನೆ ಎಂದರೇನು ?

ಸಾಕಷ್ಟು ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ರೀತಿಯ ಆಲೋಚನೆ ಭಾವನೆ ಹಾಗೂ ವರ್ತನೆಗೆ ಸಮೂಹ ವರ್ತನೆ ಎನ್ನಬಹುದು.

೫. ಚಿಪ್ಕೋ ಚಳವಳಿಯ ನೇತಾರ ಯಾರು ?

ಸುಂದರ್ ಲಾಲ್ ಬಹುಗುಣ ಮತ್ತು ಚಂಡಿ ಪ್ರಸಾದ್ ಭಟ್ಟ

೬. ಸ್ವ – ಸಹಾಯ ಸಮೂಹ ಎಂದರೇನು?

ಪರಸ್ಪರ ನಂಬಿಕೆ ಹಾಗೂ ಸಹಕಾರ ಆಧಾರಿತವಾಗಿ ಜನರು ತಮಗಾಗಿ ರೂಪಿಸಿಕೊಂಡ ಸಮೂಹಗಳೇ ಸ್ವಸಹಾಯ ಸಮೂಹಗಳು.

೭. ಕಾರ್ಮಿಕ ಚಳವಳಿ ಎಂದರೇನು?

ಕಾರ್ಮಿಕರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ಕಾರ್ಮಿಕ ಸಂಘಟನೆಗಳ ಮೂಲಕ ನಡೆಯುವ ಚಳವಳಿಯನ್ನು ಕಾರ್ಮಿಕ ಚಳವಳಿ ಎನ್ನುತ್ತಾರೆ.

III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ :

೮. ಸಮೂಹ ವರ್ತನೆಯು ಏನನ್ನು ಒಳಗೊಂಡಿದೆ ?

ಸಾಕಷ್ಟು ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ರೀತಿಯ ಆಲೋಚನೆ ಭಾವನೆ ಹಾಗೂ ವರ್ತನೆಗಳನ್ನು ಸಮೂಹ ವರ್ತನೆ ಒಳಗೊಂಡಿದೆ. ಉದಾಹರಣೆಗೆ ಜನಮಂದೆ, ದೊಂಬಿ, ಪೊಳ್ಳು ಸುದ್ದಿಗಳ ಪ್ರಚಾರ, ಸಾರ್ವಜನಿಕ ಅಭಿಪ್ರಾಯ, ಕ್ರಾಂತಿ ಹಾಗೂ ಸಾಮಾಜಿಕ ಆಂದೋಲನ.

೯. ಜನಮಂದೆ ಎಂದರೇನು? ಉದಾಹರಣೆ ಕೊಡಿ.

ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆ. ಉದಾಹರಣೆ ರಸ್ತೆ ಅಪಘಾತವನ್ನು ವೀಕ್ಷಿಸಲು ಸೇರಿರುವ ಜನಸಮೂಹ.

೧೦. ಜನಮಂದೆಯ ಸ್ವರೂಪವನ್ನು ತಿಳಿಸಿ.

ಜನಮಂದೆಯಲ್ಲಿರುವ ಜನರ ಅನಿಯಂತ್ರಿತ ನಡವಳಿಕೆಯು ಎಷ್ಟೋ ಬಾರಿ ಸಮಾಜದ ಲೋಪ ದೋಷಗಳನ್ನು ಸೂಚಿಸುವುದು. ಇದನ್ನು ಕೆಲವೊಮ್ಮೆ ಸಾಮಾಜಿಕ ಸಂಸ್ಥೆಗಳ ಕಾರ್ಯವಿಧಾನದ ಬಗೆಗಿರುವ ಜನರ ಅಸಂತೃಪ್ತಿಯನ್ನು ಪ್ರಕಟಿಸುವುದು. ಅಲ್ಲದೆ, ಇದು ಕೆಲವೊಮ್ಮೆ ಸರ್ಕಾರದ ಯೋಜನೆಗಳು, ಧೋರಣೆಗಳು ಮತ್ತು ನಿರ್ದಿಷ್ಟ ಕಾರ್ಯಕ್ರಮಗಳ ಬಗೆಗಿನ ಜನರ
ಅಸಮಾಧಾನವನ್ನು ಪ್ರತಿನಿಧಿಸುವುದುಂಟು. ಜನಮಂದೆಯ ವರ್ತನೆ ಅತಿರೇಕಕ್ಕೆ ಹೋದಾಗ ಅದನ್ನು ನಿಯಂತ್ರಿಸಲು ಕಾಯ್ದೆ-ಕಾನೂನು ಪೋಲೀಸ್ ಪಡೆ, ರಕ್ಷಣಾ ಪಡೆಯಂತಹ ಕ್ರಮಗಳನ್ನು ಬಳಸಬೇಕಾಗುವುದು.

೧೧. ಪರಿಸರ ಮಾಲಿನ್ಯದ ಅರ್ಥ ಮತ್ತು ಸ್ವರೂಪವನ್ನು ತಿಳಿಸಿ.

ಭೂಮಿ, ಗಾಳಿ, ನೀರು ಮತ್ತು ಜೀವ ಮಂಡಲವನ್ನು ಒಳಗೊಂಡ ನಮ್ಮ ಸುತ್ತಮುತ್ತಲಿನ ಪರಿಸರವು ವಿಷಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತವಾಗುವುದನ್ನು ‘ಪರಿಸರ ಮಾಲಿನ್ಯ’ ಎನ್ನಬಹುದು.

ಜಗತ್ತಿನ ಹಲವಾರು ದೇಶಗಳು ಹೆಚ್ಚುತ್ತಿರುವ
ಜನಸಂಖ್ಯೆಯಿಂದುಂಟಾಗಿರುವ ಸಮಸ್ಯೆಗಳನ್ನು ಎದುರಿಸಲು ಪರಿಸರದ ಮೇಲೆ ಒತ್ತಡ ತರುತ್ತಿವೆ.
ಅಲ್ಲದೆ ಅನಿಯಂತ್ರಿತವಾಗಿ ಸಾಗುತ್ತಿರುವ ನಗರಗಳ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ತಾಂತ್ರಿಕ
ಪ್ರಗತಿ, ಸಾರಿಗೆ ವ್ಯವಸ್ಥೆಯ ಬೆಳವಣಿಗೆ ಮುಂತಾದವುಗಳಿಂದ ಅರಣ್ಯಗಳ ನಾಶ ಮತ್ತು ಪರಿಸರ
ಮಾಲಿನ್ಯವುಂಟಾಗುತ್ತಿದೆ. ಹೀಗಾಗಿ ಇದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

೧೨. ಮಹಿಳಾ ಸ್ವ-ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.

ಮಹಿಳಾ ಸ್ವ-ಸಹಾಯ ಸಮೂಹಗಳು ಸ್ತ್ರೀಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ
ಸಬಲರನ್ನಾಗಿಸುತ್ತವೆ. ಜೊತೆಗೆ ಅವರಿಗೆ ಸಮಾನ ಹಕ್ಕು ಅವಕಾಶ ಪಾಣೆಗಾರಿಕೆ ಹಾಗೂ ಅಧಿಕಾರವನ್ನು ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

IV. ಚಟುವಟಿಕೆ :

೧. ನಿಮ್ಮ ಊರಿನಲ್ಲಿರುವ ಸ್ತ್ರೀ ಸಂಘ ಹಾಗೂ ಸ್ವಸಹಾಯ ಸಂಘಗಳಿಗೆ ಭೇಟಿ ನೀಡಿ. ಇಂತಹ ಸಂಘಟನೆಗಳ ಮುಖ್ಯ ಉದ್ದೇಶಗಳೊಂದಿಗೆ ರೂಪಿಸಿಕೊಂಡಿರುವ ಕಾರ್ಯಕ್ರಮಗಳನ್ನು ಸಂಗ್ರಹಿಸಿರಿ.

ನಮ್ಮ ಊರಿನಲ್ಲಿರುವ ಸ್ತ್ರೀ ಸಂಘಗಳಿಗೆ ಭೇಟಿ ನೀಡಿದಾಗ ಮುಖ್ಯವಾಗಿ ಅಲ್ಲಿನ ಮಹಿಳೆಯರ ಉದ್ದೇಶ ಆರ್ಥಿಕವಾಗಿ ಸಬಲರಾಗುವುದು ತಮ್ಮ ಹಣವನ್ನು ಉಳಿತಾಯ ಮಾಡಿ ಅದನ್ನು ಇಡುಗಂಟಿನ ರೂಪದಲ್ಲಿ ಸಂಗ್ರಹಿಸುವುದು ಅಥವಾ ಮುಂಗಡ ಹಣವನ್ನು ಪಡೆದುಕೊಂಡು ತಮ್ಮ ಮನೆಯಲ್ಲಿನ ಕಾರ್ಯಗಳನ್ನು ನೆರವೇರಿಸಿ ಕಡಿಮೆ ಬಡ್ಡಿಯಲ್ಲಿ ಅದನ್ನು ಹಿಂತಿರುಗಿಸುವುದು ಜೊತೆಗೆ ಸರ್ಕಾರದ ಕಾರ್ಯಕ್ರಮಗಳನ್ನು ಕಲ್ಯಾಣ ಕಾರ್ಯಕ್ರಮಗಳನ್ನು ಉಪಯೋಗ ಪಡೆದುಕೊಳ್ಳುವುದು ಈ ಉದ್ದೇಶಗಳು ಸ್ತ್ರೀ ಸಂಘದ ಇರುವ ಮಹಿಳೆಯರ ಉದ್ದೇಶಗಳಾಗಿವೆ. ಸಂಘದ ನೆಪದಲ್ಲಿ ಎಲ್ಲರೂ ಒಂದು ಕಡೆ ಕೂಡಿ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಸಾಮಾಜಿಕ ಪ್ರಜ್ಞೆಯು ಕೂಡ ಬೆಳೆಯುತ್ತದೆ

೨. ಸ್ತ್ರೀಶಕ್ತಿ ಸಂಘ ಮತ್ತು ಸ್ವ-ಸಹಾಯ ಸಂಘಗಳು ಮಹಿಳೆಯರಲ್ಲಿ ಆರ್ಥಿಕಾಭಿವೃದ್ಧಿಯ ಮನೋಭಾವವನ್ನು ಹೇಗೆ ವೃದ್ಧಿಸಿವೆ ಎಂಬುದರ ಬಗ್ಗೆ ಆ ಸಂಘಗಳ ಸದಸ್ಯರುಗಳಿಂದ  ಮಾಹಿತಿ ಪಡೆಯಿರಿ.

ಮಹಿಳೆಯರು ತಮ್ಮ ಕುಟುಂಬದ ಒಳಿತನ್ನು ಮಾಡುವ ರೂವಾರಿಗಳು. ಆದುದರಿಂದ ಕುಟುಂಬದ ಒಳಿತಿಗಾಗಿ ಹಣವನ್ನು ಹೊಂದಿಸಲು ಅವರು ಸ್ತ್ರೀ ಸಂಘಗಳ ಮೊರೆ ಹೋಗುತ್ತಾರೆ. ತಮ್ಮ ಮಕ್ಕಳ ಉದ್ಯೋಗಕ್ಕಾಗಿಯೋ ಅಥವಾ ಮಕ್ಕಳ ಮದುವೆಗಾಗಿಯು ಅಥವಾ ಮೊಮ್ಮಕ್ಕಳ ಕಾರ್ಯಕ್ರಮಗಳಿಗಾಗಿಯೂ ಅವರಿಗೆ ಹಣದ ಅವಶ್ಯಕತೆ ಇರುತ್ತದೆ ಅಥವಾ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ಹಣ ಹೊಂದಿಸಬೇಕಾಗುತ್ತದೆ ಈ ರೀತಿ ಹೊಂದಿಸಬೇಕಾದಾಗ ಒಂದೆ ಬಾರಿಗೆ ಹಣ ಯಾರ ಹತ್ತಿರವೂ ಸಿಗುವುದಿಲ್ಲ ಸಂಘದ ಸಂಘದಿಂದ ಸಿಗುವ ಸಾಲದ ರೂಪದಲ್ಲಿ ಅವರು ಹಣವನ್ನು ಪಡೆದು ನಿಯಮಿತವಾಗಿ ತೀರಿಸುತ್ತಾ ಬರುತ್ತಾರೆ ಹೀಗೆ ಅವರಿಗೆ ಆರ್ಥಿಕ ಬೆಂಬಲವಾಗಿ ಸ್ತ್ರೀಶಕ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

V. ಯೋಜನೆ :
೧. ಕರ್ನಾಟಕದಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿ ಹೋರಾಟಗಳ ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಬರುತ್ತಿರುವ ಮಾಹಿತಿಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ.

೨. ನಿಮ್ಮ ಶಾಲೆಯಲ್ಲಿ ಕೈಗೊಂಡಿರುವ `ಸಸ್ಯ ಶ್ಯಾಮಲಾ’ ಯೋಜನೆಯ ಕುರಿತು ವರದಿ ತಯಾರಿಸಿ.

ಶಾಲೆಯಲ್ಲಿ ಸಸ್ಯ ಶಾಮಲಾ ಕಾರ್ಯಕ್ರಮವು ಸರ್ಕಾರದಿಂದ ಸ್ವಲ್ಪ ಹಣ ಸಹಾಯದೊಂದಿಗೆ ಮಾಡಲು ಪ್ರೇರಪಣೆಯಾಗಿದೆ ಈ ಇದರ ಅಂಗವಾಗಿ ಪರಿಸರ ದಿನಾಚರಣೆಯ ದಿನ ಪರಿಸರಕ್ಕೆ ಸಂಬಂಧಪಟ್ಟ ಪ್ರಬಂಧ ಸ್ಪರ್ಧೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು ಮತ್ತು ಒಂದು ದಿನ ಊರಿನಲ್ಲಿ ಪರಿಸರದ ಬಗ್ಗೆ ಜಾಗೃತಿಯ ಜಾತವನ್ನು ಏರ್ಪಡಿಸಲಾಗಿತ್ತು ಮತ್ತು ಇನ್ನೊಂದು ದಿನ ಪರಿಸರ ತಜ್ಞರನ್ನು ಕರೆಸಿ, ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು ಮತ್ತು ಅರಣ್ಯ ಇಲಾಖೆಯಿಂದ ಸಸಿಗಳನ್ನು ಧರಿಸಿ ಶಾಲೆಯ ಮೈದಾನದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇನ್ನೊಂದು ದಿನ ಕಸದ ವಿಲೇವಾರಿಯ ಬಗ್ಗೆ ಮಾಹಿತಿ ನೀಡಿ ಹಸಿ ಕಸ ಮತ್ತು ಒಣ ಕಸವನ್ನು ಮತ್ತು ಪ್ಲಾಸ್ಟಿಕ್ ಕಸವನ್ನು ಬೇರೆ ಮಾಡುವುದರ ಉಪಯೋಗಗಳನ್ನು ತಿಳಿಸಲಾಯಿತು.

10th social science notes pdf in kannada

ಸಾಮಾಜಿಕ ಸವಾಲುಗಳು

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 24 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

೧. ಸಂವಿಧಾನದ 24ನೇ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.

೨. `ಬಾಲ ಕಾರ್ಮಿಕ ನಿಷೇಧ ಕಾಯ್ದೆ’ ಜಾರಿಗೆ ಬಂದ ವರ್ಷ 1986.

೩. ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ 1987ರಲ್ಲಿ `ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.

೪. ವರದಕ್ಷಿಣೆ ನಿಷೇಧ ಕಾಯ್ದೆ ಮೊದಲು 1961ರಲ್ಲಿ ಜಾರಿಗೆ ಬಂದಿತು.

೫. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ  2012ರಲ್ಲಿ  ಜಾರಿಗೆ ಬಂದಿತು.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

೬. ಭಾರತದ ಯಾವುದಾದರೂ ಎರಡು ಸಾಮಾಜಿಕ ಸವಾಲುಗಳನ್ನು ಹೆಸರಿಸಿ.

ಬಾಲ ಕಾರ್ಮಿಕರ ಸಮಸ್ಯೆ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ.

೭. ಬಾಲ ಕಾರ್ಮಿಕರು ಎಂದರೆ ಯಾರು?

ಸಾಮಾನ್ಯವಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎಂದು
ಕರೆಯಲಾಗುತ್ತಿದೆ.

೮. ಹೆಣ್ಣು ಭ್ರೂಣ ಹತ್ಯೆ ಎಂದರೇನು?

ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದು, ಅದು ತಂದೆ-ತಾಯಿಯರಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದು ಹಾಕುವುದೇ ‘ಹೆಣ್ಣು ಭ್ರೂಣಹತ್ಯೆ’.

೯. ಹೆಣ್ಣು ಶಿಶುಹತ್ಯೆ ಎಂದರೇನು?

‘ಜನನದ ನಂತರದಲ್ಲಿ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಪದ್ಧತಿಯೇ ಹೆಣ್ಣು ಶಿಶು ಹತ್ಯೆ’.

೧೦. ಬಾಲ್ಯ ವಿವಾಹ ಎಂದರೇನು?

ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ
೧೮ ವರ್ಷದೊಳಗಿನ ಹುಡುಗಿಗೆ (ಬಾಲಕಿಗೆ) ಅಥವಾ ೨೧ ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ
ಅದನ್ನು ಬಾಲ್ಯವಿವಾಹ ಎಂದು ಕರೆಯಲಾಗುತ್ತದೆ.

III. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ :

೧೧. ಬಾಲ ಕಾರ್ಮಿಕ ಸಮಸ್ಯೆಗೆ ಕಾರಣಗಳಾವವು? ತಿಳಿಸಿ.

ಕಾರಣಗಳು : ಕಡುಬಡತನ, ಕೌಟುಂಬಿಕ ಕಲಹ, ವಿಚ್ಛೇದನ, ಕೌಟುಂಬಿಕ ಹಿಂಸೆ, ಪೋಷಕರ ಅತಿಯಾದ ನಿಯಂತ್ರಣ, ಉದ್ಯಮಿಗಳ ಲಾಭಕೋರತನ, ಅನಕ್ಷರತೆ, ಮಕ್ಕಳ ಅಪಹರಣ ಹಾಗೂ ಜೀತ ಮುಂತಾದ ಕಾರಣಗಳಿಂದ ಬಾಲಕಾರ್ಮಿಕರ ಸಮಸ್ಯೆ ಹೆಚ್ಚುತ್ತಲೇ ಇದೆ.

೧೨. ಬಾಲ ಕಾರ್ಮಿಕ ಸಮಸ್ಯೆಯಿಂದಾಗುವ ಪರಿಣಾಮಗಳೇನು?

ಮಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಪಿಡುಗಾಗಿದೆ. ಮಕ್ಕಳನ್ನು ದಿನವಿಡೀ ದುಡಿಸಿಕೊಳ್ಳುವುದೇ ಅಲ್ಲದೆ ಅವರ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ, ವೈದ್ಯಕೀಯ ಮತ್ತಿತರ ಅಗತ್ಯತೆಗಳ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇರುವುದಿಲ್ಲ. ಅದರ ಬದಲು ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವುದು ಕಂಡುಬಂದಿದೆ.

ಅನಾರೋಗ್ಯ, ಪೌಷ್ಠಿಕ ಆಹಾರದ ಕೊರತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಒತ್ತಾಯದ ದುಡಿತ, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ಇವೇ ಮುಂತಾದ ಕಾರಣಗಳಿಂದ ಲಕ್ಷಾಂತರ ಮಂದಿ ಬಾಲಕಾರ್ಮಿಕರು ಇಂದಿಗೂ ಬವಣೆ ಪಡುತ್ತಿದ್ದಾರೆ. ಆಟವಾಡುವ, ಕನಸು ಕಾಣುವ ಮತ್ತು
ಓದುವ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ದೂಡಿ ಅವರ ಬಾಲ್ಯವನ್ನು ಕಸಿದುಕೊಳ್ಳಲಾಗಿದೆ.

೧೩. ಬಾಲ ಕಾರ್ಮಿಕತೆಯ ನಿರ್ಮೂಲನಾ ಕ್ರಮಗಳಾವವು? ವಿವರಿಸಿ.

ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ‘ಬಾಲಕಾರ್ಮಿಕ ನಿಷೇಧ
ಮತ್ತು ನಿಯಂತ್ರಣ ಕಾಯ್ದೆಯನ್ನು’ (೧೯೮೬) ಜಾರಿಗೊಳಿಸಲಾಗಿದೆ. ಈ ಕಾಯ್ದೆ ಅಥವಾ ಶಾಸನವನ್ನು
ಉಲ್ಲಂಘಿಸಿದ ಉದ್ಯೋಗಪತಿಗಳು ಪ್ರತಿಯೊಬ್ಬ ಬಾಲ ಕಾರ್ಮಿಕನ ಪರವಾಗಿ ೨೦,೦೦೦/- ರೂ ಗಳ
ದಂಡವನ್ನು ಕಲ್ಯಾಣ ನಿಧಿಗೆ ಕಡ್ಡಾಯವಾಗಿ ಭರಿಸಬೇಕಾಗುತ್ತದೆ.

ಬಾಲಕಾರ್ಮಿಕರನ್ನು ಕಂಡಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆಗೆ ದೂರು ನೀಡಬೇಕು.
ಬಾಲಕಾರ್ಮಿಕ ಮಕ್ಕಳಿಗೆ ತಿಳಿ ದುಡಿಮೆಯಿಂದ ಬಿಟ್ಟು ಶಾಲೆಗೆ ಹೋಗಲು ಪ್ರೋತ್ಸಾಹಿಸಬೇಕು.
ಯಾರು ಮಕ್ಕಳನ್ನು ದುಡಿಮೆಗೆ ಇರಿಸಿಕೊಳ್ಳುತ್ತಾರೋ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು.
ಮತ್ತು ಮಾಧ್ಯಮಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲಾ ಜನರಲ್ಲಿ ಬಾಲಕಾರ್ಮಿಕತೆಯ ವಿರುದ್ಧ ಮನಸ್ಥಿತಿಯನ್ನು ಹೊಂದಲು ಪ್ರೇರಣೆ ನೀಡಬೇಕು.

೧೪. ವರದಕ್ಷಿಣೆ ಪಿಡುಗಿನಿಂದಾಗುವ ದುಷ್ಪರಿಣಾಮಗಳಾವವು?

ವರದಕ್ಷಿಣೆಯ ದುಷ್ಪರಿಣಾಮಗಳು:
ವರದಕ್ಷಿಣೆ ಸ್ತ್ರೀಯರ ಸ್ವಾಭಿಮಾನ, ಗೌರವ, ಸ್ಥಾನಮಾನವನ್ನು ಕುಗ್ಗಿಸುತ್ತದೆ ಮತ್ತು ಕೌಟುಂಬಿಕ
ಕಲಹಗಳನ್ನುಂಟು ಮಾಡುತ್ತದೆ. ಅದು ಸ್ತ್ರೀ ಪುರುಷರ ನಡುವೆ ಒಡಕು ಉಂಟಾಗಲು ಕಾರಣವಾಗಿದೆ.
ವರದಕ್ಷಿಣೆ ಪಿಡುಗಿನಿಂದಾಗಿ ಅನೈತಿಕತೆ ಮತ್ತು ಕ್ರೌರ್ಯ ಹೆಚ್ಚುವುದು, ಕೌಟುಂಬಿಕ ಸಂಬಂಧಗಳು ಹಾಳಾಗುವುವು. ವರದಕ್ಷಿಣೆ ಹಣದ ದಾಹದಿಂದಾಗಿ ಮೋಸದ ವಿವಾಹಗಳು ಕೂಡಾ ನಡೆಯುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಶಿಶು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿವೆ.

೧೫. ವರದಕ್ಷಿಣೆ ಸಮಸ್ಯೆಗೆ ಪರಿಹಾರ ಕ್ರಮಗಳಾವವು?

ವರದಕ್ಷಿಣೆ ಪಿಡುಗನ್ನು ಶಾಸನಾತ್ಮಕವಾಗಿ ನಿವಾರಣೆ ಮಾಡಲು ಭಾರತ ಸರ್ಕಾರ ೧೯೬೧ ರಲ್ಲಿ `ವರದಕ್ಷಿಣೆ ನಿಷೇಧ’ ಕಾಯ್ದೆಯನ್ನು ಜಾರಿಗೊಳಿಸಿತು. ವರದಕ್ಷಿಣೆ ಷರತ್ತಿನ ಮೇರೆಗೆ ವಿವಾಹವಾಗುವುದನ್ನು ಈ ಕಾನೂನು ನಿಷೇಧಿಸಿದೆ.
ಈ ಕಾಯ್ದೆಯನ್ನು ೧೯೮೬ರಲ್ಲಿ ತಿದ್ದುಪಡಿಮಾಡಿ ಅದನ್ನು ಮತ್ತಷ್ಟು ಕಠಿಣಗೊಳಿಸಲಾಯಿತು.ತಿದ್ದುಪಡಿಗೊಂಡಿರುವ ಈ ಕಾಯ್ದೆ ಪ್ರಕಾರ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಹಾಗೂ ಕೊಡುವಂತೆ ಒತ್ತಾಯಿಸುವ ವ್ಯಕ್ತಿಗಳಿಗೆ ೫ ವರ್ಷಗಳಿಗೂ ಕಡಿಮೆಯಿರದ ಕಾರಾಗೃಹ ಶಿಕ್ಷೆ ಮತ್ತು ೧೫,೦೦೦ ರೂಗಳಿಗೆ ಕಡಿಮೆಯಿರದ ಹಣವನ್ನು ದಂಡವಾಗಿ ವಿಧಿಸಬಹುದು.
ವರದಕ್ಷಿಣೆ ಸಾವು ಪ್ರಕರಣವನ್ನು ‘ಭಾರತ ದಂಡ ಸಂಹಿತೆ’
ಹಾಗೂ ‘ಭಾರತ ಅಪರಾಧ ವಿಚಾರಣಾ ಸಂಹಿತೆ’ಗೆ
ಸೇರ್ಪಡೆಗೊಳಿಸಲಾಗಿದೆ. ಈ ವಿಚಾರಣೆಯನ್ನು ಜಾಮೀನು ರಹಿತ ಮತ್ತು ರಾಜಿರಹಿತ ನೆಲೆಯಲ್ಲಿ
ನಡೆಸಬಹುದಾಗಿದೆ.

ಕಾನೂನಿನ ಮೂಲಕವಲ್ಲದೆ ಜನಜಾಗೃತಿ ಅಂತರ ಜಾತಿ ವಿವಾಹ ಆಧುನಿಕ ಪ್ರಚಾರ ಮಾಧ್ಯಮಗಳು, ಸ್ವಯಂಸೇವಾ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ವರದಕ್ಷಿಣೆ ಪಿಡುಗನ್ನು ತೊಲಗಿಸಬಹುದು.

೧೬. ಬಾಲ್ಯ ವಿವಾಹದ ಪರಿಣಾಮಗಳಾವವು?

ಮಕ್ಕಳ ಸರ್ವತೋಮುಖ ಬೆಳವಣಿಗೆ ಕುಂಠಿತವಾಗಿ, ಅವರು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಮಕ್ಕಳ ಮೇಲೆ ಅತಿಯಾದ ದೌರ್ಜನ್ಯ, ನಿರ್ಲಕ್ಷ್ಯ, ಹಿಂಸೆ, ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ಹೆಚ್ಚುತ್ತವೆ. ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಘನೆ – ಬಾಲ್ಯತನ, ಶಿಕ್ಷಣ, ಮನೋರಂಜನೆ, ಗೆಳೆಯರ ಒಡನಾಟಕ್ಕೆ ಧಕ್ಕೆ, ಅಪೌಷ್ಟಿಕತೆ, ರಕ್ತಹೀನತೆ,
ಅನಾರೋಗ್ಯ, ಗರ್ಭಪಾತ,ಶಿಶುಮರಣ,ತಾಯಿಮರಣಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗುವ ಸಂಭವ ಹೆಚ್ಚು. ಹೆಣ್ಣು ಮಕ್ಕಳು ಯಾವುದೇ ಸಾಮಾಜಿಕ ಭದ್ರತೆಗಳಿಲ್ಲದೆ ಆಗಾಗ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ಹೆಚ್ಚು.

IV ಚಟುವಟಿಕೆ :
೧. ನಿಮ್ಮ ಊರಿನ ಸಾಮಾಜಿಕ ಸವಾಲುಗಳನ್ನು ಪಟ್ಟಿ ಮಾಡಿ ಅವುಗಳಿಗೆ ಪರಿಹಾರಗಳನ್ನು ಬರೆಯಿರಿ.

ನಮ್ಮ ಊರು ದಾವಣಗೆರೆಯಾಗಿದ್ದು ಇಲ್ಲಿ ಭ್ರಷ್ಟಾಚಾರ ಬಹಳವಾಗಿದೆ. ರಾಜಕಾರಣಿಗಳು ಹಣವನ್ನು ಸರಿಯಾಗಿ ಜನಗಳಿಗೆ ಉಪಯೋಗಿಸುವುದಿಲ್ಲ. ರಾಜಕಾರಣಿಗಳು ಜನರ ಹಿತವ ದೃಷ್ಟಿಯಿಂದ ಸಾರ್ವಜನಿಕ ಹಣವನ್ನು ಸದ್ಬಳಕೆ ಮಾಡಿದಲ್ಲಿ ದಾವಣಗೆರೆ ಇನ್ನೂ ಹೆಚ್ಚು ಅಭಿವೃದ್ಧಿಯಾಗುತ್ತದೆ.

ನಿರುದ್ಯೋಗ ಮತ್ತು ಬಡತನ ಇವೆರಡೂ ಕೂಡ ದಾವಣಗೆರೆಯಲ್ಲಿ ಕಾಣಸಿಗುತ್ತವೆ ಇದಕ್ಕೆ ಕುಡಿತ ಮತ್ತು ದಾರಿದ್ರತನವನ್ನು ಹೊಡೆದೋಡಿಸಿದಲ್ಲಿ ಇವೆರಡು ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸುಬಹುದು.

ಕೆಲವು ಕಡೆ ವರದಕ್ಷಿಣೆ ಮತ್ತು ಕೆಲವು ಕಡೆ ವಧು-ದಕ್ಷಿಣೆ ಇವೆರಡು ದಾವಣಗೆರೆಯಲ್ಲಿರುವ ಸಾಮಾಜಿಕ ಪಿಡುಗುಗಳಾಗಿವೆ. ಅತಿಯಾದ ಆಸೆ ಮತ್ತು ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಳ್ಳದಿರುವುದು ಇದಕ್ಕೆ ಕಾರಣಗಳಾಗಿವೆ. ಮನುಷ್ಯ ಗಂಡಾಗಲಿ ಹೆಣ್ಣಾಗಲಿ ಗಂಡನ ಕಡೆಯವರಾಗಲಿ ಹೆಣ್ಣಿನ ಕಡೆಯವಾಗಲಿ ಅತಿಯಾಗಿ ಆಸೆ ಬೀಳದೆ ತಮ್ಮ ತಮ್ಮ ಬಳಿ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಳ್ಳುವುದರಿಂದ ಈ ಪಿಡುಗನ್ನು ಹೋಗಲಾಡಿಸಬಹುದು.

ಗಿ. ಯೋಜನೆ :
೧. ನಿಮ್ಮ ಶಾಲೆಗೆ ಕಾನೂನು ತಜ್ಞರನ್ನು ಕರೆದು, ಬಾಲ್ಯ ವಿವಾಹ, ಬಾಲಕಾರ್ಮಿಕತನ ಮತ್ತು ಶಿಶು ಹತ್ಯೆಗೆ ಸಂಬಂಧಿಸಿದಂತೆ ಇರುವ ಕಾನೂನಿನ ಬಗ್ಗೆ ಉಪನ್ಯಾಸ ಏರ್ಪಡಿಸಿ.

10th social science notes pdf in kannada

ಭೂಗೋಳಶಾಸ್ತ್ರ

ಭಾರತದ ಭೂ ಬಳಕೆ ಹಾಗೂ ಕೃಷಿ

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 25

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

೧. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಭೂ ಬಳಕೆ ಎನ್ನುವರು.

೨. ಒಂದೇ ವ್ಯವಸಾಯ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಎರಡು ಮೂರು ಬೆಳೆ ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು.

೩. ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಮಾತ್ರ ಬೆಳೆಯುವುದಕ್ಕೆ ಜೀವನಾಧಾರ ಬೇಸಾಯ ಎಂದು ಕರೆಯುವರು.

೪. ತೋಟಗಾರಿಕೆ ಬೇಸಾಯದಲ್ಲಾದ ಅಪಾರ ಪ್ರಗತಿಯನ್ನು ಸುವರ್ಣ ಕ್ರಾಂತಿ ಎಂದು ಕರೆಯುವರು.

೫. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳ .

೬. ಬೇಸಿಗೆ ಅವಧಿಯ ಬೇಸಾಯವನ್ನು ಜೇಡ್ ಬೇಸಾಯ ಎನ್ನುವರು.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೭. ಭೂ ಬಳಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು ?

ಭೂ ಬಳಕೆಯ ಮೇಲೆ ಹಲವಾರು ಪ್ರಾಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳು ಪ್ರಭಾವ ಬೀರುತ್ತವೆ. ಪ್ರಾಕೃತಿಕ ಅಂಶಗಳು : ಭೂ ಸ್ವರೂಪಗಳು, ವಾಯುಗುಣ, ಮಣ್ಣಿನ ಲಕ್ಷಣಗಳು. ಆರ್ಥಿಕ ಅಂಶಗಳು : ಭೂ ಹಿಡುವಳಿ, ಮಾರುಕಟ್ಟೆ, ಜನಸಂಖ್ಯೆ, ವ್ಯವಸಾಯೋತ್ಪನ್ನಗಳ ಬೇಡಿಕೆ, ಉದ್ಯೋಗ, ಸಾಮಾಜಿಕ ಅಂಶಗಳು : ಜನರ ಮನೋಭಾವ, ಸಾಮಾಜಿಕ ಪರಿಸ್ಥಿತಿ
ಮೊದಲಾದವು. ಇತರೆ ಅಂಶಗಳಾದ ತಾಂತ್ರಿಕತೆ, ನೀರಾವರಿ ಸೌಲಭ್ಯ, ಮಾನವನ ಸಾಮರ್ಥ್ಯ, ಭೂ
ಒಡೆತನ ಮೊದಲಾದವು ಸಹ ಭೂ ಬಳಕೆಯ ಮೇಲೆ ಪ್ರಭಾವವನ್ನು ಬೀರುತ್ತವೆ.

೮. ವ್ಯವಸಾಯ ಎಂದರೇನು ? ವ್ಯವಸಾಯದ ವಿಧಗಳು ಯಾವುವು ?

ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಸಹ ಒಳಗೊಂಡಿದೆ.

ವ್ಯವಸಾಯದ ವಿಧಗಳು

​ಸಾಂದ್ರ ಬೇಸಾಯ
​ಜೀವನ ದಾರ ಬೇಸಾಯ
​ವಾಣಿಜ್ಯ ಬೇಸಾಯ
​ ಮಿಶ್ರ ಬೇಸಾಯ
​ತೋಟಗಾರಿಕೆ ಬೇಸಾಯ

೯. ಖಾರೀಫ್ ಬೇಸಾಯ ಎಂದರೇನು ?

ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ ಮುಂಗಾರು ಬೇಸಾಯ ಅಥವಾ ಖಾರಿಫ್ ಬೇಸಾಯ  ಎಂದು ಕರೆಯುವರು. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡುವರು.

೧೦. ರಬಿ ಬೇಸಾಯ ಎಂದರೇನು ?

ಅಕ್ಟೋಬರ್-ನವಂಬರ್‌ನಲ್ಲಿ ಬಿತ್ತನೆ ಮಾಡಿ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಕಟಾವು ಮಾಡುವರು. ಇದು ಚಳಿಗಾಲದಲ್ಲಿ ಮಳೆ ಪಡೆಯುವ ಪ್ರದೇಶಗಳ ಮುಖ್ಯ ಸಾಗುವಳಿಯ ಅವಧಿಯಾಗಿದೆ.

೧೧. ಹತ್ತಿ ಬೆಳೆ ಬೆಳೆಯಲು ಅವಶ್ಯಕವಿರುವ ಭೌಗೋಳಿಕ ಅಂಶಗಳಾವುವು ?

ಹತ್ತಿಯು ಉಷ್ಣವಲಯ ಮತ್ತು ಉಪ ಉಷ್ಣವಲಯದ ಬೆಳೆ. ಇದರ ಉತ್ಪಾದನೆಗೆ ೨೦೦ರಿಂದ ೨೫೦ ಸೆಲ್ಸಿಯಸ್ ಉಷ್ಣಾಂಶ ಅವಶ್ಯಕ. ಸುಮಾರು ೭೫ ರಿಂದ ೧೫೦ ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಕಪ್ಪು ಮಣ್ಣು, ಮೆಕ್ಕಲು ಮಣ್ಣು ಈ ಬೆಳೆಗೆ ಸೂಕ್ತವಾಗಿದೆ. ಆದರೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಇದಕ್ಕೆ ಹೆಚ್ಚು ಸೂಕ್ತ. ಇದನ್ನು ಮುಂಗಾರು (ಖಾರೀಫ್) ಬೆಳೆಯಾಗಿ ಬೆಳೆಯುತ್ತಾರೆ. ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ  ಹತ್ತಿಯನ್ನು ಬೆಳೆಯುತ್ತಾರೆ.

III. ಚಟುವಟಿಕೆಗಳು :

೧. ಭಾರತದಲ್ಲಿ ಬೆಳೆಯುವ ವಿವಿಧ ಆಹಾರ ಮತ್ತು ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿರಿ.

ಭಕ್ತ ಗೋದಿ ರಾಗಿ ಜೋಳ ತರಕಾರಿ

ತೊಗರಿ ಬೇಳೆ ಹೆಸರು ಬೇಳೆ ಅವರೇ ಬೇಳೆ ಹಲಸಂದಿ ಕಾಳು ಕಡ್ಲೆ ಕಾಳು ಬಟಾಣಿ ಕಾಳು

೨. ಭಾರತದ ನಕ್ಷೆ ಬರೆದು ಕಬ್ಬು ಮತ್ತು ಹೊಗೆಸೊಪ್ಪು ಬೆಳೆಯುವ ಪ್ರದೇಶಗಳನ್ನು ಗುರುತಿಸಿ.

೩. ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಹೇಗೆ ಎಂಬ ಬಗ್ಗೆ ಹತ್ತಿರದ ವೈದ್ಯರಿಂದ ಮಾಹಿತಿ ತಿಳಿಯಿರಿ.

ತಂಬಾಕು ಸೇವನೆಯು ಹೆಚ್ಚಾಗಿ ಹೃದಯ , ಯಕೃತ್ತು ಮತ್ತು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳಿಗೆ ಕಾರಣವಾಗುತ್ತದೆ . ಧೂಮಪಾನವು ಹಲವಾರು ಪರಿಸ್ಥಿತಿಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ, ಅವುಗಳೆಂದರೆ ನ್ಯುಮೋನಿಯಾ , ಹೃದಯಾಘಾತ , ಪಾರ್ಶ್ವವಾಯು , ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) – ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ – ಮತ್ತು ಬಹು ಕ್ಯಾನ್ಸರ್‌ಗಳು (ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ , ಧ್ವನಿಪೆಟ್ಟಿಗೆ ಮತ್ತು ಬಾಯಿಯ ಕ್ಯಾನ್ಸರ್ , ಮೂತ್ರಕೋಶದ ಕ್ಯಾನ್ಸರ್ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ). ಇದು ಬಾಹ್ಯ ಅಪಧಮನಿಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಿದೆ

IV. ಯೋಜನೆಗಳು :
೧. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಸಾಗುವಳಿ ಮಾಡುವ ವಿವಿಧ ಬೆಳೆಗಳನ್ನು ಕುರಿತು ಟಿಪ್ಪಣಿ ಬರೆಯಿರಿ ಹಾಗೂ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.

ಮಳೆಯಾಶ್ರಿತ ಬೆಳೆ ಎಂದರೆ ಹೆಚ್ಚಾಗಿ ದಾವಣಗೆರೆ ಸುತ್ತಮುತ್ತ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆ. ದಾವಣಗೆರೆಯ ಸುತ್ತಮುತ್ತ ಕೆಲವು ಪ್ರದೇಶಗಳು ನೀರಾವರಿ ಇರುವುದರಿಂದ ಹೆಚ್ಚಾಗಿ ಭತ್ತ, ಅಡಕೆ, ತೆಂಗ ನ್ನು ಬೆಳೆಯುತ್ತಾರೆ. ದಾವಣಗೆರೆ ಹತ್ತಿರ ಕುಕ್ಕುವಾಡ ಎಂಬ ಗ್ರಾಮದಲ್ಲಿ ಸಕ್ಕರೆ ಫ್ಯಾಕ್ಟರಿ ಇರುವುದರಿಂದ ದಾವಣಗೆರೆ ಸೂಕ್ತ ಮೊತ್ತ ಬಹಳಷ್ಟು ರೈತರು ಕಬ್ಬನ್ನು ಬೆಳೆಯುತ್ತಾರೆ. ದಾವಣಗೆರೆ ಮಹಾನಗರ ಪಾಲಿಕೆ ಆಗಿರುವುದರಿಂದ ಜಿಲ್ಲೆಯಾದ್ಯಂತ ತರಕಾರಿಯನ್ನು ಹೆಚ್ಚು ಬೆಳೆಯುತ್ತಾರೆ. ಅದರಲ್ಲೂ ಟೊಮ್ಯಾಟೋವನ್ನು ಜಾಸ್ತಿ ಬೆಳೆಯುತ್ತಾರೆ. ಜೊತೆಗೆ ತರಕಾರಿಯೂ ಇಲ್ಲಿಂದ ದೂರ ದೂರದ ಪ್ರದೇಶಗಳಿಗೆ ರಫ್ತಾಗುವುದರಿಂದ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

೨. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಲು ಪುಷ್ಪ ಬೇಸಾಯ ಹೇಗೆ ಪೂರಕವಾಗಿದೆ ಎಂಬುದನ್ನು ಚರ್ಚಿಸಿ.

ಪುಷ್ಪ ಬೇಸಾಯ ಸುಲಭವಾಗಿದ್ದು ಈ ಬೆಳೆಯು ಬಹು ವರ್ಷಕಾಲ ನಿಲ್ಲುವ ಬೆಳೆಯಾಗಿದೆ. ಹೆಣ್ಣು ಮಕ್ಕಳು ಸುಲಭವಾಗಿ ಹೂವನ್ನು ಬಿಡಿಸಿ ಹೂವಿನ ಹಾರವನ್ನು ತಯಾರಿಸಿ ಮಾಡಬಹುದಾಗಿದೆ ಹಬ್ಬ ಮತ್ತಿತರ ಮದುವೆ ಸಮಾರಂಭಗಳಲ್ಲಿ ಹೂವಿಗೆ ಬೇಡಿಕೆ ಇರುವುದರಿಂದ ಹೂವಿನ ಅಥವಾ ಪುಷ್ಪ ಬೇಸಾಯ ಹೆಣ್ಣು ಮಕ್ಕಳಿಗೆ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ.

10th social science notes pdf in kannada

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 26 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

೧. ೨೦ನೇ ಶತಮಾನದ ಅದ್ಭುತ ಲೋಹ ಅಲ್ಯುಮಿನಿಯಂ .

೨. ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಿರುವ ಗಣಿ ಹಟ್ಟಿ ಚಿನ್ನದ ಗಣಿ .

೩. ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೪. ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳಾವುವು?

ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್
ಅದಿರು, ಅಭ್ರಕ ಮತ್ತು ಚಿನ್ನದ ಅದಿರು ಮುಖ್ಯವಾದವು. ಇವುಗಳಲ್ಲದೆ ಶಕ್ತಿ ಸಂಪನ್ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಅಣು ಖನಿಜಗಳನ್ನು ದೇಶದಲ್ಲಿ ಉತ್ಪಾದಿಸಲಾಗುವುದು. ಜೊತೆಗೆ ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳಾದ ಸೌರಶಕ್ತಿ, ಪವನಶಕ್ತಿ ಮೊದಲಾದವು ಕೂಡ ಉತ್ಪಾದಿಸಲಾಗುತ್ತದೆ.

೫. ಮ್ಯಾಂಗನೀಸ್ ಅದಿರಿನ ವಿಧಗಳು ಯಾವುವು?

ಮ್ಯಾಂಗನೀಸ್‌ನ ಮುಖ್ಯ ಅದಿರುಗಳೆಂದರೆ ಪೈರೋಲೋಸೈಟ್, ಸೈಲೋಮೆಲೆನ್, ಮ್ಯಾಂಗನೈಟ್, ಬ್ರಾನೈಟ್ ಮತ್ತು ಹೋಲ್ಯಾಂಡೈಟ್.

೬. ಅಭ್ರಕದ ಉಪಯೋಗಗಳನ್ನು ತಿಳಿಸಿ.

ಅಭ್ರಕವನ್ನು ಶಾಖ ನಿರೋಧಕ ಹಾಗೂ ವಿದ್ಯುತ್ ನಿರೋಧಕ ವಸ್ತುವಾಗಿ ಟೆಲಿಫೋನ್, ಟೆಲಿಗ್ರಾಫ್, ನಿಸ್ತಂತು ಸೇವೆ, ಗಾಜು ತಯಾರಿಕೆ, ಬಣ್ಣ ವಾರ್ನಿಷ್, ಕೃತಕ ರಬ್ಬರ್, ಡೈನಮೋಗಳು, ರಾಸಾಯನಿಕ ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ.

೭. ಪರಮಾಣು ಖನಿಜಗಳು ಯಾವುವು?

ಪರಮಾಣು ಖನಿಜಗಳಲ್ಲಿ ಯುರೇನಿಯಂ, ಥೋರಿಯಂ. ಬೆರಿಲಿಯಂ, ಲಿಥಿಯಂ ಮುಂತಾದವುಗಳು ಪ್ರಮುಖವಾಗಿವೆ.

೮. ಅಸಾಂಪ್ರದಾಯಿಕ ಶಕ್ತಿ ಮೂಲಗಳು ಯಾವುವು? ಅವುಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಸಾಗರ ಉಬ್ಬರವಿಳಿತ ಶಕ್ತಿ, ಭೂ ಅಂತರಾಳದ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವುಗಳು ಅಸಾಂಪ್ರದಾಯಿಕ ಶಕ್ತಿ ಮೂಲಗಳಾಗಿವೆ.

ಪ್ರಪಂಚದಾದ್ಯಂತ ಸಾಂಪ್ರದಾಯಿಕ ಶಕ್ತಿ ಮೂಲಗಳ ಬಳಕೆಯಿಂದ ಹಸಿರು ಮನೆ ಪರಿಣಾಮ
ಉಂಟಾಗುತ್ತಿದ್ದು, ಭೂಮಿಯ ವಾಯುಮಂಡಲದ ಉಷ್ಣಾಂಶ ಹೆಚ್ಚಾಗುವ ಸಂಭವನೀಯತೆಯನ್ನು
ಗಮನಿಸಲಾಗಿದೆ. ಇದನ್ನೇ‘ಗ್ಲೋಬಲ್ವಾರ್ಮಿಂಗ್’ (ಜಾಗತಿಕ ತಾಪಮಾನ ಏರಿಕೆ) ಎಂದು ಕರೆಯಲಾಗಿದೆ. ಅಲ್ಲದೆ ಜನಸಂಖ್ಯಾ ಹೆಚ್ಚಳ, ನಗರೀಕರಣ, ಕೈಗಾರಿಕಾಭಿವೃದ್ಧಿ ಮೊದಲಾದವು ಈ ಸಾಂಪ್ರದಾಯಿಕ ಇಂಧನಗಳ ಬಳಕೆಯು ನಿರಂತರವಾಗಿ ಹೆಚ್ಚಲು ಕಾರಣವಾಗಿದೆ. ಇದರಿಂದ ಪರಿಸರ ಮಾಲಿನ್ಯ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ಇವುಗಳ ಬಳಕೆಯನ್ನು ಮಿತಿಗೊಳಿಸಿ ಅಸಾಂಪ್ರದಾಯಿಕ ಶಕ್ತಿ ಮೂಲಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.

೯. ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ನಿಮ್ಮದೇ ಆದ ಸಲಹೆಗಳನ್ನು ನೀಡಿ.

೧) ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು
ಹೆಚ್ಚಾಗಿ ಬಳಸುವುದು.
೨) ಜಲವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವುದು.
೩) ಬದಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು.
೪) ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸುವುದು .
೫) ಶಕ್ತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸಲು ತಿಳುವಳಿಕೆ ನೀಡುವುದು .
೬) ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವುದು ಮೊದಲಾದವು.

III. ಚಟುವಟಿಕೆ :

೧. ಭಾರತದ ನಕ್ಷೆಯಲ್ಲಿ ಖನಿಜಗಳ ಹಂಚಿಕೆಯನ್ನು ಗುರುತಿಸಿ ಮತ್ತು ಹೆಸರಿಸಿ.

10th social science notes pdf in kannada

ಭಾರತದ ಸಾರಿಗೆ ಹಾಗೂ ಸಂಪರ್ಕ

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 27 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
೧. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
೨. ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ ರಸ್ತೆ ಸಾರಿಗೆ ಅವಶ್ಯಕವಾಗಿದೆ.
೩. ‘ಭಾರತದ ಹೆಬ್ಬಾಗಿಲು’ ಎಂದು ಮುಂಬೈ ಬಂದರನ್ನು ಕರೆಯುತ್ತಾರೆ.
೪. ಭಾರತದ `ಚಹದ ಬಂದರು’ ಕೊಲ್ಕತ್ತಾ.

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೫. ಭಾರತದಲ್ಲಿ ರಸ್ತೆಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಭಾರತ ಹಳ್ಳಿಗಳ ದೇಶ ಹಾಗೂ ಕೃಷಿ ಪ್ರಧಾನವಾದ ದೇಶ. ಹಳ್ಳಿಯ ಮತ್ತು ಕೃಷಿಯ ಅಭಿವೃದ್ಧಿಗೆ ರಸ್ತೆಗಳ ಅವಶ್ಯಕತೆ ಮುಖ್ಯವಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ರಸ್ತೆಗಳ ಸಹಾಯದಿಂದ ಮಾತ್ರ ಸಾಧ್ಯ. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆಗಳು ಸಹಾಯ ಮಾಡುತ್ತವೆ. ರಸ್ತೆ ಸಾರಿಗೆಗಳು ರೈಲು ಸಾರಿಗೆಗೆ ಪೂರಕವಾಗಿವೆ. ಸರಕು ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ.

೬. ಭಾರತದಲ್ಲಿರುವ ರಸ್ತೆ ಸಾರಿಗೆಯ ವಿಧಗಳು ಯಾವುವು?

ರಸ್ತೆ ಸಾರಿಗೆಯನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಎಂದು ವರ್ಗೀಕರಿಸಲಾಗಿದೆ.

೭. ಸುವರ್ಣ ಚತುಷ್ಕೋನ ಯೋಜನೆ ಎಂದರೇನು?

ಭಾರತದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳನ್ನು ನಾಲ್ಕು ಅಥವಾ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕಿಸುವ ಹೆದ್ದಾರಿಗಳೇ ಸುವರ್ಣ ಚತುಷ್ಕೋನ ಹೆದ್ದಾರಿಗಳು.ಈ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ. ಈ ಯೋಜನೆಯ ಒಂದು ಭಾಗ ಸುವರ್ಣ ಚತುಷ್ಕೋನ ಯೋಜನೆ.

೮. ಭಾರತದಲ್ಲಿರುವ ಪ್ರಮುಖ ಬಂದರುಗಳನ್ನು ಪಟ್ಟಿ ಮಾಡಿ.

ಭಾರತದ ಪ್ರಮುಖ ಬಂದರುಗಳು
ಕಾಂಡ್ಲಾ (ಗುಜರಾತ್)
ಮುಂಬೈ ( ಮಹಾರಾಷ್ಟ್ರ)
ನವ ಶೇವಾ (ಮಹಾರಾಷ್ಟ್ರ)
ಮರ್ಮಗೋವ (ಗೋವಾ)
ನವ ಮಂಗಳೂರು (ಕರ್ನಾಟಕ)
ಕೊಚ್ಚಿ (ಕೇರಳ)
ತೂತುಕುಡಿ (ತಮಿಳುನಾಡು)
ವಿಶಾಖಪಟ್ಟಣ (ಆಂಧ್ರಪ್ರದೇಶ )
ಪಾರಾದೀಪ್ (ಒಡಿಸ್ಸಾ )
ಕೊಲ್ಕತ್ತಾ ಪಶ್ಚಿಮ (ಬಂಗಾಳ )
ಹಾಲ್ದಿಯಾ (ಪಶ್ಚಿಮ ಬಂಗಾಳ)

೯. ಭಾರತದ ರಸ್ತೆ ಸಾರಿಗೆಯ ತೊಡಕುಗಳನ್ನು ಪಟ್ಟಿ ಮಾಡಿ.

ರಸ್ತೆ ಸಾರಿಗೆಯ ತೊಡಕುಗಳು
೧) ಅನೇಕ ಗ್ರಾಮೀಣ ಮತ್ತು ಜಿಲ್ಲಾ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಕೆಲವು ವೇಳೆ ಅನುಪಯುಕ್ತವಾಗಿರುತ್ತವೆ.
೨) ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗಿದೆ.
೩) ರಸ್ತೆಗಳು ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ಪ್ರತಿ ವರ್ಷವೂ ಹಾಳಾಗುತ್ತಿವೆ.
೪) ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯೂ ಅಸಮರ್ಪಕ.
೫) ರಸ್ತೆಗಳ ಬದಿಯಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಕೊರತೆಯನ್ನು ದೇಶದಾದ್ಯಂತ ಕಾಣಬಹುದು.

೧೦. ಸಂಪರ್ಕ ಮಾಧ್ಯಮ ಎಂದರೇನು? ಸಂಪರ್ಕದ ಮಾಧ್ಯಮಗಳಾವುವು?

ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತ ಪತ್ರಿಕೆಗಳ ಜೊತೆಗೆ ರೇಡಿಯೋ, ದೂರದರ್ಶನ, ಕೃತಕ ಉಪಗ್ರಹಗಳು, ಕಂಪ್ಯೂಟರ್ ಜಾಲ, ಅಂತರ್ಜಾಲ, ಇ-ಮೇಲ್, ಸಂಚಾರಿ ದೂರವಾಣಿಗಳು ಮೊದಲಾದವುಗಳು ಇಂದು ಸಂಪರ್ಕದ ಪ್ರಧಾನ ಮಾಧ್ಯಮಗಳಾಗಿವೆ.

೧೧. ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿ.

ಸಂಪರ್ಕದ ಪ್ರಾಮುಖ್ಯತೆ :
• ಸಂಪರ್ಕ ಮಾಧ್ಯಮಗಳು ದೇಶದ ಜನರಿಗೆ ವಿವಿಧ ಪ್ರದೇಶಗಳ ಆಗು-ಹೋಗುಗಳನ್ನು ತಿಳಿಯಲು ಅಗತ್ಯವಾಗಿದೆ.
• ಸರಕಾರದ ನೀತಿ ನಿಯಮಗಳನ್ನು ತಿಳಿಯಪಡಿಸಿ ಅದರ ಬಗ್ಗೆ ತಿಳುವಳಿಕೆಯನ್ನು ಮೂಡಿಸ ಬಹುದು.
• ಜನರಿಗೆ ಬೇಕಾದ ವ್ಯವಸಾಯ, ಕೈಗಾರಿಕೆ ಮುಂತಾದವುಗಳ ಜ್ಞಾನವನ್ನು ನೀಡುವುದರಿಂದ ಅಭಿವೃದ್ಧಿಯ ಪ್ರಕ್ರಿಯೆಯು ಶೀಘ್ರವಾಗಿ ಮುಂದುವರಿಯುವುದು.
• ವಾಣಿಜ್ಯ ಮತ್ತು ವ್ಯಾಪಾರದ ಅಭಿವೃದ್ಧಿಗೆ ಸಂಪರ್ಕ ಮಾಧ್ಯಮಗಳು ಮೂಲ ಅಗತ್ಯವಾಗಿವೆ.
• ದೇಶದ ಏಕತೆ, ಒಗ್ಗಟ್ಟು ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅನುಕೂಲವಾಗುವುದು.

೧೨. ಜಿ.ಐ.ಎಸ್, ಜಿ.ಪಿ.ಎಸ್ ಗಿಂತ ಭಿನ್ನವಾಗಿದೆ ಹೇಗೆ?

“ಜಿ.ಐ.ಎಸ್. ಕಂಪ್ಯೂಟರ್
ಆಧಾರಿತ ಭೂಮೇಲ್ಮೈಯ ವೈವಿಧ್ಯಮಯ ಅಂಕಿ-ಅಂಶಗಳನ್ನು ಸಂಸ್ಕರಿಸುವ ಮತ್ತು ವಿಶ್ಲೇಷಿಸುವ ಒಂದು ವ್ಯವಸ್ಥೆ”ಯಾಗಿದೆ.ಪೃಥ್ವಿಯ ಮೇಲ್ಮೈನ ಅಂಕಿ-ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಕಾರ್ಯವನ್ನು ಮಾಡುತ್ತದೆ.

ಜಿ.ಪಿ.ಎಸ್ ಇದರ ಮುಖ್ಯ ಕಾರ್ಯ ಭೂ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು ಹಾಗೂ ಆ ವಸ್ತುವಿನ ಸ್ಥಾನದ ಎತ್ತರವನ್ನು ಸಹ ಸೂಚಿಸುವುದು. ಜಿ.ಪಿ.ಎಸ್. ತಂತ್ರಜ್ಞಾನವು ಕೃತಕ ಉಪಗ್ರಹಗಳು ಕಳುಹಿಸುವ ಮಾಹಿತಿ ಹಾಗೂ ಭೂ ಮೇಲ್ಮೈಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸೀವರ್‌ಗಳಿಂದ ಕಾರ್ಯ ನಿರ್ವಹಿಸಲ್ಪಡುವುದು.

೧೩. ದೂರ ಸಂವೇದಿ ತಂತ್ರಜ್ಞಾನವನ್ನು ಕುರಿತು ಬರೆಯಿರಿ.

ವಸ್ತುಗಳನ್ನು ಭೌತಿಕವಾಗಿ ಸ್ಪರ್ಶಿಸದೇ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ‘ದೂರ ಸಂವೇದಿ’ ತಂತ್ರಜ್ಞಾನ (Remote Sensing Technology) ಎಂದು ಕರೆಯುವರು. ವೈಮಾನಿಕ ಚಿತ್ರಗಳು ಹಾಗೂ ಉಪಗ್ರಹಗಳಿಂದ ಪಡೆದ ಚಿತ್ರಗಳು ದೂರ ಸಂವೇದಿ ಚಿತ್ರಗಳಾಗಿವೆ.

ಉಪಯೋಗಗಳು :
• ಈ ಚಿತ್ರಗಳಿಂದ ಆ ಕಾಲದ ಅವಧಿಯಲ್ಲಿನ ನೈಜ ಹಾಗೂ ನಂಬಲರ್ಹವಾದ ಸ್ಪಷ್ಟ ಮಾಹಿತಿ ದೊರೆಯುವುದು.
• ಇದು ಭೂ ಮೇಲ್ಮೈನ ಸರ್ವೇಕ್ಷಣೆಗಿಂತ ಅತಿ ಶೀಘ್ರ, ಅಲ್ಪಾವಧಿ ಹಾಗೂ ಕಡಿಮೆ ವೆಚ್ಚದ ಮಾಹಿತಿ ಸಂಗ್ರಹಣೆಯ ವಿಧಾನವಾಗಿದೆ.
• ಹವಾಮಾನದ ವೈಪರೀತ್ಯ ಹಾಗೂ ಭೂ ಮೇಲ್ಮೈ ಅಡಚಣೆಗಳಿದ್ದರೂ ದೂರ ಸಂವೇದಿ ಚಿತ್ರಗಳನ್ನು ಉಪಗ್ರಹಗಳಿಂದ ಪಡೆಯಬಹುದು.

III. ಚಟುವಟಿಕೆಗಳು :
೧. ಭಾರತದಲ್ಲಿ ಕಂಡು ಬರುವ ಉತ್ತರ-ದಕ್ಷಿಣ ಪೂರ್ವ- ಪಶ್ಚಿಮ ಕಾರಿಡಾರ್  ಮತ್ತು ಸುವರ್ಣ ಚತುಷ್ಕೋನ ರಾಷ್ಟ್ರೀಯ ಹೆದ್ದಾರಿಗಳನ್ನು ನಕ್ಷೆಯಲ್ಲಿ ಗುರುತಿಸಿ ಮತ್ತು ಹೆಸರಿಸಿ.
೨. ಭಾರತದ ಕೃತಕ ಉಪಗ್ರಹಗಳ ಉಡಾವಣೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.
Iಗಿ. ಯೋಜನೆಗಳು :
೧. ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ನಿಮ್ಮ ಸ್ನೇಹಿತರ ಜೊತೆ ತರಗತಿಯಲ್ಲಿ ಚರ್ಚಿಸಿ.

ನಾನು ದಾವಣಗೆರೆ ನಗರದಲ್ಲಿದ್ದು ನಮ್ಮ ಸಹಪಾಠಿಗಳೊಡನೆ ನಮ್ಮ ನಗರದ ರಸ್ತೆಗಳನ್ನು ಬಗ್ಗೆ ಚರ್ಚಿಸಿದಾಗ ನಗರದ ರಸ್ತೆಗಳಲ್ಲಿ ಬಹಳಷ್ಟು ತಗ್ಗು ದಿಣ್ಣೆಗಳು ಮತ್ತು ಅಡೆತಡೆಗಳು ಬಹಳಷ್ಟು ಇವೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ದಾವಣಗೆರೆ ನಗರದಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗುತ್ತಿದ್ದರು ಕೂಡ ಇನ್ನೂ 90% ರಸ್ತೆಗಳು ಉತ್ತಮವಾಗಿ ಆಗಬೇಕಾಗಿದೆ ಬಹಳಷ್ಟು ರಸ್ತೆಗಳು ಬೈಕ್ ಪ್ರಯಾಣ ಮತ್ತು ಕಾರು ಪ್ರಯಾಣ ಮಾಡಲು ದುಸ್ತರವಾದ ರಸ್ತೆಗಳಾಗಿ ಮಾರ್ಪಟ್ಟಿವೆ ಜನರು ಈ ರಸ್ತೆಗಳಿಂದ ಬೇಸತ್ತು ಆರೋಗ್ಯ ಏರುಪೇರು ಆಗಿವೆ ಆದರೂ ಕೂಡ ಬಹಳಷ್ಟು ಕಡೆ ಸಿಮೆಂಟ್ ರಸ್ತೆಗಳು ಡಾಂಬರ್ ರಸ್ತೆಗಳು ಆಗಿವೆ. ಇನ್ನೂ ಕೂಡ ಗುಣಮಟ್ಟದ ರಸ್ತೆಗಳನ್ನು ಹೊಂದಬೇಕಾಗಿದೆ.

೨. ಹಳ್ಳಿ ರಸ್ತೆಗಳ ಸ್ಥಿತಿಗತಿ ಹಾಗೂ ನಿರ್ವಹಣೆಯ ಅಗತ್ಯತೆಯನ್ನು ಕುರಿತು ಚರ್ಚಿಸಿ.

ಭಾರತ ಹಳ್ಳಿಗಳ ದೇಶ ಹಳ್ಳಿಗಳು ಭಾರತದ ಜನರ ವಾಸಸ್ಥಾನಗಳಾಗಿವೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ. ಈ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯು ಕೂಡ ಒಂದು ಹಳ್ಳಿಗಳಲ್ಲಿ ಉತ್ಪಾದಿಸಲಾದ ವ್ಯವಸಾಯ ಉತ್ಪನ್ನಗಳನ್ನು ರೈತರು ಮಾರುಕಟ್ಟೆಗಳಿಗೆ ಸಾಗಿಸಲು ರಸ್ತೆಗಳು ಅತ್ಯವಶ್ಯಕವಾದ ಮೂಲಭೂತ ಸೌಕರ್ಯಗಳಾಗಿವೆ. ಮತ್ತು ಹಳ್ಳಿಯಲ್ಲಿ ಆಂತರಿಕ ರಸ್ತೆಗಳು ಮತ್ತು ಚರಂಡಿಗಳು ಚೆನ್ನಾಗಿದ್ದಲ್ಲಿ ಹಳ್ಳಿಯ ಜನರು ಉತ್ತಮ ಆರೋಗ್ಯವನ್ನು ಹೊಂದಿ ಅಭಿವೃದ್ಧಿ ಕಡೆಗೆ ಸಾಗುತ್ತಾರೆ ಹಳ್ಳಿಗಳ ಅಭಿವೃದ್ಧಿ ಗಾಂಧೀಜಿಯವರ ಕನಸಾಗಿತ್ತು ಹಳ್ಳಿಗಳಲ್ಲಿ ರಸ್ತೆಗಳನ್ನು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ ಹಳ್ಳಿ ಹಳ್ಳಿಗಳ ನಡುವೆ ಮತ್ತು ಹಳ್ಳಿ ನಗರಗಳ ನಡುವೆ ಸಂಪರ್ಕ ಮತ್ತು ಸಾರಿಗೆ ತಲುಪುವುದು ಸುಲಭವಾಗಿ ವಸ್ತುಗಳು ಮತ್ತು ಜನರನ್ನು ಸುಲಭವಾಗಿ ಸಾಗಿಸಬಹುದಾಗಿದೆ

೩. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಸಾರಿಗೆಯ ಪಾತ್ರವನ್ನು ಚರ್ಚಿಸಿ.

ಭಾರತ ಹಳ್ಳಿಗಳ ದೇಶ ಹಾಗೂ ಕೃಷಿ ಪ್ರಧಾನವಾದ ದೇಶ. ಹಳ್ಳಿಯ ಮತ್ತು ಕೃಷಿಯ ಅಭಿವೃದ್ಧಿಗೆ ರಸ್ತೆಗಳ ಅವಶ್ಯಕತೆ ಮುಖ್ಯವಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ರಸ್ತೆಗಳ ಸಹಾಯದಿಂದ ಮಾತ್ರ ಸಾಧ್ಯ. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆಗಳು ಸಹಾಯ ಮಾಡುತ್ತವೆ. ರಸ್ತೆ ಸಾರಿಗೆಗಳು ರೈಲು ಸಾರಿಗೆಗೆ ಪೂರಕವಾಗಿವೆ. ಸರಕು ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ.

೪. ಇಸ್ರೋ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಭಾರತ ಸರ್ಕಾರದ ಇಲಾಖೆಯಾಗಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಾಹ್ಯಾಕಾಶ ಇಲಾಖೆ ಈ ಕೆಳಗಿನ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದೆ:

ಉಪಗ್ರಹಗಳನ್ನು ಉಡಾಯಿಸಲು ಸ್ಥಳೀಯ ಸಾಮರ್ಥ್ಯವನ್ನು ಹೊಂದಿರುವ ಉಡಾವಣಾ ವಾಹನ ಕಾರ್ಯಕ್ರಮ.
ದೂರಸಂಪರ್ಕ, ಪ್ರಸಾರ, ಹವಾಮಾನಶಾಸ್ತ್ರ, ಶಿಕ್ಷಣ ಅಭಿವೃದ್ಧಿ ಇತ್ಯಾದಿಗಳಿಗಾಗಿ INSAT ಕಾರ್ಯಕ್ರಮ.
ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಉಪಗ್ರಹ ಚಿತ್ರಣವನ್ನು ಅನ್ವಯಿಸಲು ದೂರಸಂವೇದಿ ಕಾರ್ಯಕ್ರಮ.
ರಾಷ್ಟ್ರೀಯ ಅಭಿವೃದ್ಧಿಗಾಗಿ ಅವುಗಳನ್ನು ಅನ್ವಯಿಸುವ ಉದ್ದೇಶಕ್ಕಾಗಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ.

10th social science notes pdf in kannada

ಭಾರತದ ಪ್ರಮುಖ ಕೈಗಾರಿಕೆಗಳು

 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 28 ನೋಟ್ಸ್ ಅಥವಾ ಪ್ರಶ್ನೋತ್ತರಗಳು
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

೧. ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಳದಕುಲ್ಟಿ ಎಂಬಲ್ಲಿ ಸ್ಥಾಪಿತಗೊಂಡಿತು.

೨. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನುಜವಳಿ ಕೈಗಾರಿಕೆಎಂದು ಕರೆಯುವರು.

೩. ಭಾರತದ ಮೊದಲ ಕಾಗದದ ಕೈಗಾರಿಕೆಯು ಹೂಗ್ಲಿ ನದಿಯ ದಡದಲ್ಲಿ ಸ್ಥಾಪನೆಗೊಂಡಿತು.

೪. ಇಸ್ರೋ ಸ್ಥಾಪನೆಯಾದ ವರ್ಷ1969

II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೫. ಭಾರತದ ಪ್ರಮುಖ ಕೈಗಾರಿಕಾ ವಲಯಗಳ ಪಟ್ಟಿ ತಯಾರಿಸಿ.

ಭಾರತದಲ್ಲಿ ೮ ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಇವುಗಳೆಂದರೆ,
೧) ಹೂಗ್ಲಿ ಪ್ರದೇಶ
೨) ಮುಂಬೈ-ಪುಣೆ ಪ್ರದೇಶ
೩) ಅಹಮದಾಬಾದ್-ವಡೋದರ ಪ್ರದೇಶ
೪) ದಾಮೋದರ ಕಣಿವೆ ಪ್ರದೇಶ
೫) ದಕ್ಷಿಣದ ಕೈಗಾರಿಕಾ ಪ್ರದೇಶ
೬) ನ್ಯಾಷನಲ್ ಕ್ಯಾಪಿಟಲ್ ಪ್ರದೇಶ
೭) ವಿಶಾಖಪಟ್ಟಣ-ಗುಂಟೂರು ಪ್ರದೇಶ
೮) ಕೊಲ್ಲಂ-ತಿರುವನಂತಪುರ ಪ್ರದೇಶ.

೬. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವುವು?

ಪ್ರಸ್ತುತ ಭಾರತದಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಪ್ರಮುಖ ಕೈಗಾರಿಕೆಗಳು :
೧) ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ (TISCO) ಜಮ್‌ಶೆಡ್‌ಪುರ – ಜಾರ್ಖಂಡ್
೨) ಇಂಡಿಯನ್ ಐರನ್ ಮತ್ತು ಸ್ಟೀಲ್ ಕಂಪನಿ (IISCO), ಬರ್ನ್ಪುರ-ಪಶ್ಚಿಮಬಂಗಾಳ
೩) ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಕಂಪನಿ (VISCO), ಭದ್ರಾವತಿ – ಕರ್ನಾಟಕ
೪) ಬಿಲಾಯಿ ಐರನ್ ಮತ್ತು ಸ್ಟೀಲ್ ಕಂಪನಿ, ಬಿಲಾಯಿ – ಛತ್ತೀಸ್‌ಘಡ್.

೭. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಕಚ್ಛಾವಸ್ತುಗಳು, ಶಕ್ತಿ ಸಂಪನ್ಮೂಲಗಳು, ಮಾರುಕಟ್ಟೆ, ಸಂಚಾರ ಸೌಲಭ್ಯ, ಕಾರ್ಮಿಕರ ಪೂರೈಕೆ, ಬಂದರುಗಳ ಸೌಲಭ್ಯ ಮೊದಲಾದ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಕೈಗಾರಿಕೆಗಳ ಸ್ಥಾನವು ಕಡಿಮೆ ದರದ ಭೂಮಿ ದೊರೆಯುವಿಕೆ, ತಾಂತ್ರಿಕತೆ, ಸರ್ಕಾರದ ನೀತಿ ನಿಯಮಗಳಿಂದಲೂ ಪ್ರಭಾವಿತವಾಗಿರುವುದು.

೮. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು ?

ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು
ಹುಲ್ಲು, ಕಾಗದ ತಯಾರಿಕೆಯಲ್ಲಿ  ಬಳಸುವ ಪ್ರಮುಖ ಕಚ್ಚಾ ವಸ್ತುಗಳಾಗಿವೆ.

೯. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು
ಬಹುಪಾಲು ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚು ಹತ್ತಿ
ಗಿರಣಿಗಳಿದ್ದು ಇದನ್ನು ಭಾರತದ ‘ಮ್ಯಾಂಚೆಸ್ಟರ್’ (ಮ್ಯಾಂಚೆಸ್ಟರ್ – ಇಂಗ್ಲೆಂಡಿನ ಅತಿ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ) ಅಥವಾ ಭಾರತದ ‘ಕಾಟನೋಪೊಲಿಸ್’ ಎಂದು ಕರೆಯುತ್ತಾರೆ.
ಇದಲ್ಲದೆ ನಾಗ್ಪುರ, ಸೋಲಾಪುರ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಉತ್ತರಪ್ರದೇಶದ ಕಾನ್ಪುರ, ಮಧ್ಯಪ್ರದೇಶದ ಇಂದೋರ್, ಗುಜರಾತಿನ ಸೂರತ್, ತಮಿಳುನಾಡಿನ ಕೊಯಮತ್ತೂರು, ಸೇಲಂ, ಚೆನ್ನೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರಗಳಾಗಿವೆ.

೧೦. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು ?

ಜೈವಿಕ ತಂತ್ರಜ್ಞಾನದಿಂದ ವ್ಯವಸಾಯದಲ್ಲಿ ದೊಡ್ಡ
ಕ್ರಾಂತಿಯೇ ಜರುಗಲು ಪ್ರಾರಂಭಿಸಿತು.ಸಸ್ಯ, ಪ್ರಾಣಿ ಮೊದಲಾದವುಗಳಿಗೆ ಕಸಿ ಮಾಡುವಿಕೆಯಿಂದ ಮತ್ತು ಹೊಸ ಹೊಸ ಬೀಜ, ಔಷಧ, ರಸಗೊಬ್ಬರ, ಸಾವಯವ ಗೊಬ್ಬರಗಳ ಬಳಕೆಯಿಂದ ಸೋಯಾ ಅವರೆ, ಮೆಕ್ಕೆಜೋಳ(ಗೋವಿನಜೋಳ), ಹತ್ತಿ, ಮೊದಲಾದ ಸಮ್ಮಿಶ್ರ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ

೧೧. ಉನ್ನತ ತಂತ್ರಜ್ಞಾನದ ಬಳಕೆಯಿಂದ ಆದ ಬದಲಾವಣೆಗಳೇನು ?

ಉನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದಾಗಿ ಟೆಲಿಫೋನ್, ಅಂತರ್ಜಾಲ ಸಂಪರ್ಕ, ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಫೋನ್, ಯುದ್ಧ ಸಾಮಗ್ರಿಗಳ ತಯಾರಿಕೆ, ಪರಮಾಣುಬಾಂಬ್ ತಯಾರಿಕೆ ಉಪಗ್ರಹ ಉಡಾವಣೆ, ಚಂದ್ರನ ಮೇಲೆ ಪಾದಾರ್ಪಣೆ, ಸರಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ-ಆಡಳಿತ. (ಉದಾ : ನೆಮ್ಮದಿ, ಜನಸ್ಪಂದನ, ಸಕಾಲ ಇತ್ಯಾದಿ,) ಜಾಗತಿಕ ಆರ್ಥಿಕ ವ್ಯವಸ್ಥೆಯ ಸುಧಾರಣೆ, ಶೈಕ್ಷಣಿಕ ಸಾಮಾಜಿಕ ಆರ್ಥಿಕ ಸುಧಾರಣೆಗಳು ಸಾಧ್ಯವಾಗಿದೆ. ಇಂದು ಕೃತಕ ಬುದ್ಧಿಮತ್ತೆಯ (AI-ARTIFICIAL INTELLIGENCE) ಬಳಕೆಯೊಂದಿಗೆ ಉನ್ನತ ತಂತ್ರಜ್ಞಾನವು ಹೊಸ ಮಜಲನ್ನು ಪಡೆದಿದೆ.

೧೨. ಇಸ್ರೋದ ಪ್ರಮುಖ ಸಾಧನೆಗಳು ಯಾವುವು?

ಇಸ್ರೋದ ಮಹತ್ವದ ಸಾಧನೆಗಳು :
೧. ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿ.(INSAT – INDIAN NATIONAL SATELLITE SYSTEM).
೨. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಮೊದಲ ರಾಷ್ಟ್ರಭಾರತ. ಈ ಸಾಧನೆಯ ಮೂಲ ಕರ್ತೃ ಇಸ್ರೋ.
೩. ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶ ಭಾರತ. ಈ ಸಾಧನೆಯ ಹಿಂದಿನ ಶಕ್ತಿ ಇಸ್ರೋ ಸಂಸ್ಥೆಯಾಗಿದೆ.

III. ಹೊಂದಿಸಿ ಬರೆದಿದೆ.

i. ಮುಂಬೈ……  ಸಿ) ಭಾರತದ ಮ್ಯಾಂಚೆಸ್ಟರ್
ii. ಬೆಂಗಳೂರು….. ಎ) ‘ಸಿಲಿಕಾನ್ ಕಣಿವೆ
iii. ಭದ್ರಾವತಿ……ಡಿ) ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ
iv. ಬೆಳಗಾವಿ ಜಿಲ್ಲೆ’……ಬಿ) ಸಕ್ಕರೆ ಕೈಗಾರಿಕೆಗಳು

IV. ಚಟುವಟಿಕೆ :
೧. ಭಾರತದ ನಕ್ಷೆ ಬರೆದು ವಿವಿಧ ಕೈಗಾರಿಕಾ ವಲಯಗಳನ್ನು ಗುರುತಿಸಿ.
V. ಯೋಜನೆ :
೧. ನಿಮ್ಮ ಸಮೀಪದ ಯಾವುದಾದರೊಂದು ಕೈಗಾರಿಕೆಗೆ ಭೇಟಿ ನೀಡಿ, ಅಲ್ಲಿಗೆ ಪೂರೈಕೆಯಾಗುವ ಕಚ್ಚಾವಸ್ತುಗಳು ಮತ್ತು ಉತ್ಪಾದಿಸುವ ವಸ್ತುವಿನ ಬಗ್ಗೆ ಮಾಹಿತಿ ಸಂಗ್ರಹಿಸಿ.

ದಾವಣಗೆರೆ ಜಿಲ್ಲೆಯಲ್ಲಿ ಕುಕ್ಕುವಾಡ ಗ್ರಾಮದಲ್ಲಿ ಶುಗರ್ ಫ್ಯಾಕ್ಟರಿ ಇದೆ ಇಲ್ಲಿಗೆ ಕಚ್ಚಾ ವಸ್ತುಗಳು ಕಬ್ಬು ಮತ್ತು ಉತ್ಪಾದಿಸುವ ವಸ್ತು ಸಕ್ಕರೆ.

10th social science notes pdf in kannada

ನೈಸರ್ಗಿಕ ವಿಕೋಪಗಳು

ಭಾರತದ ನಿಸರ್ಗ ವಿಕೋಪಗಳು 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 29 ನೋಟ್ಸ್ ಪ್ರಶ್ನೋತ್ತರಗಳು

I. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೧. ನೈಸರ್ಗಿಕ ವಿಕೋಪಗಳು ಎಂದರೇನು?

ಪ್ರಾಕೃತಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ – ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ನೈಸರ್ಗಿಕ ವಿಕೋಪಗಳೆಂದು ಕರೆಯುವರು.

೨. ಚಂಡಮಾರುತಗಳ ಪರಿಣಾಮಗಳಾವುವು?

ಚಂಡಮಾರುತದ ಪರಿಣಾಮಗಳು :
ಚಂಡಮಾರುತ ಕೊಪ್ಪಳಿಸಿದ ಪ್ರದೇಶದ ಜನಜೀವನವೇ ಸಂಪೂರ್ಣ ಮಾರ್ಪಾಡು
ಹೊಂದುವುದು.
• ಅಪಾರ ಸಾವು ನೋವು ಉಂಟಾಗುತ್ತದೆ.
• ಸಾಗರದ ಅಲೆಗಳು ಒಳನಾಡಿಗೆ ಚಾಚಿ ಜಲರಾಶಿಗಳು ಲವಣಯುಕ್ತವಾಗುತ್ತವೆ.
• ಬೆಳೆಗಳು ಸಂಪೂರ್ಣ ನಾಶವಾಗುತ್ತವೆ.
• ಸಾರಿಗೆ ಸಂಪರ್ಕ, ವಿದ್ಯುತ್ ಸೌಕರ್ಯ, ಜನಜೀವನ ಅಸ್ತವ್ಯಸ್ತವಾಗುವುದು.
• ಚಂಡಮಾರುತಗಳು ನಿಂತ ನಂತರ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

೩. ಪ್ರವಾಹಗಳೆಂದರೇನು?

ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಹಿಮ ಕರಗಿದಾಗ ನದಿಗಳ ನೀರಿನ ಪ್ರಮಾಣವು ಅವುಗಳ ಪಾತ್ರದ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡೆಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯುವುದು.
ಇದನ್ನು ಪ್ರವಾಹಗಳೆಂದು ಕರೆಯುತ್ತಾರೆ.

೪. ಭೂ ಕುಸಿತ ಎಂದರೇನು?

ಪರ್ವತಗಳ ಅಥವಾ ಬೆಟ್ಟಗಳ ಮೇಲ್ಭಾಗದಿಂದ ಕಡಿದಾದ ಇಳಿಜಾರಿನ ಗುಂಟ ಕೆಳಕ್ಕೆ
ಜಾರುವ ಭೂರಾಶಿಗೆ ಭೂಕುಸಿತವೆನ್ನುವರು.

೫. ಭೂಕಂಪ ಎಂದರೇನು?

ಭೂಮಿಯ ಒಳಗಿನ ಆಂತರಿಕ ಶಕ್ತಿಯಿಂದ ಅನಿರೀಕ್ಷಿತವಾಗಿ ಭೂಮಿಯ ಮೇಲ್ಪದರವು
ಕಂಪಿಸುವುದನ್ನು ‘ಭೂಕಂಪ’ ಎಂದು ಕರೆಯುವರು.

೬. ಪ್ರವಾಹಗಳು ಉಂಟಾಗಲು ಕಾರಣಗಳು ಮತ್ತು ಭಾರತದಲ್ಲಿ ಪ್ರವಾಹಗಳಿಗೆ ಒಳಪಡುವ ಪ್ರದೇಶಗಳನ್ನು ಹೆಸರಿಸಿ.

ಪ್ರವಾಹಗಳು ಉಂಟಾಗಲು ಕಾರಣಗಳು (causes of floods) :
• ಮಾನ್‌ಸೂನ್ ಮಳೆ ಅನಿಶ್ಚಿತ. ಕೆಲವು ವೇಳೆ ಅತ್ಯಧಿಕ ಮಳೆ ಬೀಳುವುದರಿಂದ ಪ್ರವಾಹಗಳುಂಟಾಗುತ್ತವೆ.
• ನದಿಯ ಪಾತ್ರಗಳಲ್ಲಿ ಹೂಳು ತುಂಬಿ ನೀರು ಇಕ್ಕೆಲಗಳಲ್ಲಿಯೂ ಹರಿದು ಪ್ರವಾಹಗಳು
ಉಂಟಾಗುತ್ತವೆ.
• ಅಣೆಕಟ್ಟು ಹಾಗೂ ಇತರೆ ಅಡ್ಡಗಟ್ಟೆಗಳು ಒಡೆದು ಒಮ್ಮೆಲೆ ಬಿಡುಗಡೆಯಾಗುವ ನೀರಿನಿಂದ
ಪ್ರವಾಹಗಳು ಉಂಟಾಗುತ್ತವೆ.
• ನದಿಗಳು ಪಾತ್ರವನ್ನು ಬದಲಾಯಿಸುವುದರಿಂದಲೂ ಪ್ರವಾಹಗಳು ಉಂಟಾಗುತ್ತವೆ.
• ಚಂಡಮಾರುತಗಳಿಂದ ಅಪಾರ ಮಳೆ ಬೀಳುವುದೂ ಸಹ ಪ್ರವಾಹಗಳಿಗೆ ಕಾರಣವಾಗುವುದು.
• ಸಮುದ್ರಗಳ ಮಧ್ಯದಲ್ಲಿ ಭೂಕಂಪನಗಳು ಸಂಭವಿಸುವುದರಿಂದಲೂ ಪ್ರವಾಹಗಳುಂಟಾಗುತ್ತವೆ

ಭಾರತದಲ್ಲಿ ಪ್ರವಾಹಗಳಿಗೆ ಒಳಪಡುವ ಪ್ರದೇಶಗಳು :
ಭಾರತದಲ್ಲಿ ಪ್ರವಾಹಕ್ಕೆ ಒಳಪಡುವ ಪ್ರದೇಶಗಳು ಈ ಕೆಳಕಂಡಂತಿವೆ.
• ಗಂಗಾ ನದಿಯ ಉಪನದಿಗಳಾದ ಯಮುನಾ, ಗಂಡಕ್, ಕೋಸಿ, ಘಾಘ್ರ ನದಿಗಳು ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಪ್ರವಾಹವನ್ನುಂಟು ಮಾಡುತ್ತವೆ.
• ದಾಮೋದರ ಮತ್ತು ಸುವರ್ಣರೇಖಾ ನದಿಗಳು ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರವಾಹವನ್ನುಂಟು ಮಾಡುತ್ತವೆ.
• ಬ್ರಹ್ಮಪುತ್ರ ಮತ್ತು ಇದರ ಉಪನದಿಗಳಾದ ದಿಹಾಂಗ್, ದಿಬಾಂಗ್, ಸುಬನ್‌ಸಿರಿ ಮತ್ತು ಲೋಹಿತ್ ಹಾಗೂ ಅಸ್ಸಾಂ ಕಣಿವೆಯ ಕೆಲವು ನದಿಗಳಿಂದ ಅಸ್ಸಾಂನಲ್ಲಿ ಪ್ರವಾಹ ಉಂಟಾಗುತ್ತವೆ.
• ಹಿಮಾಲಯ ಪರ್ವತಗಳಲ್ಲಿ ಮೇಘಸ್ಫೋಟದಿಂದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂಗಳಲ್ಲಿ ಆಗಿಂದಾಗ್ಗೆ ಕ್ಷಿಪ್ರ ಪ್ರವಾಹಗಳುಂಟಾಗುತ್ತವೆ.
• ನರ್ಮದಾ, ತಪತಿ, ಸಬರಮತಿ ಮತ್ತು ಮಹಿ ನದಿಗಳು ವರ್ಷದ ಕೆಲವು ದಿನಗಳಲ್ಲಿ ಗುಜರಾತ್ ರಾಜ್ಯದಲ್ಲಿ ಪ್ರವಾಹ ಉಂಟುಮಾಡುತ್ತವೆ.
• ಕರ್ನಾಟಕದಲ್ಲಿ  ಕೃಷ್ಣ, ತುಂಗಭದ್ರಾ ,ಘಟಪ್ರಭಾ, ಮಲಪ್ರಭಾ, ಭೀಮ, ದೋಣಿ,ಬೆಣ್ಣೆಹಳ್ಳ ಮುಂತಾದ ನದಿಗಳು ಮಳೆಗಾಲದಲ್ಲಿ ರಭಸವಾಗಿ ಹರಿದು ಪ್ರವಾಹವನ್ನುಂಟು ಮಾಡುತ್ತವೆ.

೭. ಕಡಲಕೊರೆತ ಎಂದರೇನು? ಅದರ ನಿರ್ವಹಣೆಯನ್ನು ತಿಳಿಸಿ.

ನಿರಂತರವಾಗಿ ಅಪ್ಪಳಿಸುವ ಸಮುದ್ರದ ಅಲೆಗಳಿಂದ ತೀರ ವಲಯವು ಸವೆಸಲ್ಪಡುವುದನ್ನು ತೀರ ಪ್ರದೇಶದ ಕೊರೆತ ಅಥವಾ ಸಾಮಾನ್ಯವಾಗಿ `ಕಡಲಕೊರೆತ’ ಎಂದು ಕರೆಯುವರು.

ಕಡಲ ಕೊರೆತದ ನಿರ್ವಹಣೆ :
• ತೀರ ಪ್ರದೇಶದಲ್ಲಿ ಮರಳು ತೆಗೆಯುವುದನ್ನು ನಿಯಂತ್ರಿಸುವುದು.
• ತೀರ ಪ್ರದೇಶ ದುದ್ದಕ್ಕೂ ಅಲೆಗಳು ಪ್ರಬಲವಾಗಿರುವ ಕಡೆ ತಡೆಗೋಡೆಯನ್ನು ನಿರ್ಮಿಸುವುದು.
• ತೀರದುದ್ದಕ್ಕೂ ದಪ್ಪ ಬಂಡೆಗಳ ರಾಶಿಹಾಕಿ ಅಲೆಗಳ ಪ್ರಭಾವವನ್ನು ನಿಯಂತ್ರಿಸುವುದು.
• ತೀರದುದ್ದಕ್ಕೂ ‘ಮ್ಯಾಂಗ್ರೋವ್’ ಅರಣ್ಯಗಳನ್ನು ಬೆಳೆಸುವುದು ಅತ್ಯಂತ ಪರಿಣಾಮಕಾರಿ.

೮. ಭೂಕಂಪದ ಪರಿಣಾಮಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ.

ಭೂಕಂಪದ ಪರಿಣಾಮಗಳು :
• ಜನರ ಸಾವು ನೋವು ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ.
• ಸಾರಿಗೆ ಸಂಪರ್ಕ ಕಡಿತ.
• ರೋಗಗಳ ಹರಡುವಿಕೆ
• ಸಾಗರದ ಅಲೆಗಳು ದಡಗಳಿಗೆ ಅಪ್ಪಳಿಸುವಿಕೆ.
• ಸುನಾಮಿ.
• ನದಿಯ ದಿಕ್ಕು ಬದಲಾಗುವಿಕೆ ಇತ್ಯಾದಿ.

ಭೂಕಂಪದ ಮುನ್ನೆಚ್ಚರಿಕೆಯ ಕ್ರಮಗಳು :
• ಭೂಕಂಪನ ಸಂಭವನೀಯ ವಲಯಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ನಿಷೇಧಿಸುವುದು.
• ಈ ವಲಯಗಳಲ್ಲಿ ಕಟ್ಟಡಗಳನ್ನು ಹಗುರವಾದ ವಸ್ತುಗಳಿಂದ ನಿರ್ಮಿಸುವುದು.
• ಕಟ್ಟಡಗಳು ಸ್ಥಿತಿ ಸ್ಥಾಪಕತ್ವ ಗುಣವನ್ನು ಹೊಂದುವಂತೆ ನಿರ್ಮಿಸುವುದು.
• ಭೂಕಂಪ ಸಂಭವಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು.
• ಭೂಕಂಪ ಸಂಭವಿಸಬಹುದಾದ ಪ್ರದೇಶಗಳಿಗೆ ಶೀಘ್ರ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.

II. ಚಟುವಟಿಕೆಗಳು :

೧. ಭಾರತದ ನಕ್ಷೆಯಲ್ಲಿ ಭೂಕಂಪ ಸಂಭವಿಸುವ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿ.

೨. ಚಂಡಮಾರುತಗಳಿಗೆ ಹೆಸರು ಇಡುವುದರಿಂದ ಏನೇನು ಪ್ರಯೋಜನಗಳಿವೆ ಎಂಬುದರ ಬಗ್ಗೆ ತರಗತಿಯಲ್ಲಿ ಚರ್ಚಿಸಿ.

ಚಂಡಮಾರುತಗಳನ್ನು ಹೆಸರಿಸುವುದು ಎಚ್ಚರಿಕೆಗಳನ್ನು ತಿಳಿಸಲು ಮತ್ತು ಸಾರ್ವಜನಿಕ ಜಾಗೃತಿ ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಅತ್ಯಂತ ವೇಗವಾದ ಮಾರ್ಗವಾಗಿದೆ ಎಂದು ಸಾಬೀತಾಗಿದೆ.  ಚಂಡಮಾರುತಗಳಿಗೆ ಹೆಸರುಗಳನ್ನು ನಿಗದಿಪಡಿಸುವುದರಿಂದ ವಿಶೇಷವಾಗಿ ಬಹು ಸೈಕ್ಲೋನ್ ಗಳು ಏಕಕಾಲದಲ್ಲಿ ಸಕ್ರಿಯವಾಗಿರುವಾಗ , ನಿರ್ದಿಷ್ಟ ಸೈಕ್ಲೋನ್ ಗಳನ್ನು ಪತ್ತೆಹಚ್ಚುವುದು ಮತ್ತು ಚರ್ಚಿಸುವುದು ಹೆಚ್ಚು ಸರಳವಾಗುತ್ತದೆ.ಹವಾಮಾನಶಾಸ್ತ್ರಜ್ಞರು, ಮಾಧ್ಯಮಗಳು, ತುರ್ತು ನಿರ್ವಹಣಾ ಸಂಸ್ಥೆಗಳು ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ತಪ್ಪಿಸಲು ಹೆಸರಿಸುವಿಕೆಯು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಚಂಡಮಾರುತಗಳನ್ನು ಹೆಸರಿಸುವುದು ಐತಿಹಾಸಿಕ ದಾಖಲೆ-ಸಂರಕ್ಷಣೆ ಮತ್ತು ಚಂಡಮಾರುತದ ನಡವಳಿಕೆ ಮತ್ತು ಪರಿಣಾಮಗಳ ಕುರಿತು ಸಂಶೋಧನೆಗೆ ಸಹಾಯ ಮಾಡುತ್ತದೆ

III. ಯೋಜನೆ :
೧. ನಿಮ್ಮ ಶಿಕ್ಷಕರ ಸಹಾಯದಿಂದ ಭಾರತದಲ್ಲಿ ಇದುವರೆಗೆ ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿರುವ ಪ್ರದೇಶಗಳನ್ನು ಪಟ್ಟಿಮಾಡಿರಿ.

ಪಶ್ಚಿಮ ಬಂಗಾಳ, ಒರಿಸ್ಸಾ, ಆಂಧ್ರಪ್ರದೇಶ, ಕೇರಳ, ಅಸ್ಸಾಂ, ಬಿಹಾರ್, ಗುಜರಾತ್ , ಉತ್ತರ ಪ್ರದೇಶ್, ಹರಿಯಾಣ

10th social science notes pdf in kannada

ಅರ್ಥಶಾಸ್ತ್ರ

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

೧. ‘ ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು

೨. ಸಂವಿಧಾನದ ೭೩ ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ
ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ.

೩. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

೪. ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಮಹಿಳಾ ಸ್ವಸಹಾಯ ಸಂಘ (ಸ್ತ್ರೀಶಕ್ತಿ ಸಂಘ) ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

೫. ಗ್ರಾಮೀಣಾಭಿವೃದ್ಧಿಯ ಅರ್ಥ ತಿಳಿಸಿ.

ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವುದನ್ನು ಗ್ರಾಮೀಣಾಭಿವೃದ್ಧಿ ಎಂದು ಕರೆಯಬಹುದಾಗಿದೆ.

೬. ಅಧಿಕಾರ ವಿಕೇಂದ್ರೀಕರಣ ಎಂದರೇನು?

ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ.

೭. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿ.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್.

೮. ಯಾವುದಾದರೂ ಎರಡು ವಸತಿ ಯೋಜನೆಗಳನ್ನು ತಿಳಿಸಿ.

‘ಇಂದಿರಾ ಆವಾಸ್ ಯೋಜನೆ’, ‘ಅಂಬೇಡ್ಕರ್-
ವಾಲ್ಮೀಕಿ ವಸತಿ ಯೋಜನೆ ‘, ಆಶ್ರಯ ಯೋಜನೆ,

೯. ಮಹಿಳೆಯರ ಯಾವ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ?

ಮಹಿಳೆಯರು ಮನೆಯಲ್ಲಿ ಮಾಡುವ ಕೂಲಿರಹಿತ ದುಡಿಮೆಯನ್ನು ಶ್ರಮ ಎಂದು ಪರಿಗಣಿಸಿಲ್ಲ.

III. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧೦. ಭಾರತದಲ್ಲಿ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹೇಗಿದೆ?

ಬಹುತೇಕ ಕೃಷಿಯೊಂದನ್ನೇ ಅವಲಂಬಿಸಿರುವ ಗ್ರಾಮೀಣ ಜನರಲ್ಲಿ ಬಡತನ ಹೆಚ್ಚಾಗಿದೆ. ಇವರಲ್ಲಿ ಮೂರನೇ ಒಂದು ಭಾಗದ ಜನರು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಗ್ರಾಮೀಣ ಗುಡಿಕೈಗಾರಿಕೆಗಳು ನಶಿಸಿಹೋಗಿವೆ. ಅತ್ಯಂತ ಹೆಚ್ಚು ಜನರು ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದರೂ  ರಾಷ್ಟ್ರೀಯ ಆದಾಯಕ್ಕೆ ಈ ವಲಯದ ಕೊಡುಗೆ ಅತ್ಯಂತ ಕಡಿಮೆಯಿದ್ದು, ಅದು ನಿರಂತರವಾಗಿ ಕಡಿಮೆಯಾಗುತ್ತಿದೆ.

೧೧. ಗ್ರಾಮೀಣ ಅಭಿವೃದ್ಧಿಯ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.

ನಗರಗಳಲ್ಲಿನ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಮತ್ತು ಅವಕಾಶಗಳು ಗ್ರಾಮೀಣ ಜನರಿಗೂ
ದೊರೆಯುವಂತಾಗಬೇಕು. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಹಳ್ಳಿಗರೂ ಭಾಗವಹಿಸುವಂತಾಗಬೇಕು.
ಅಭಿವೃದ್ಧಿಯ ಫಲ ಇವರಿಗೂ ಸಮಾನವಾಗಿ ದೊರೆಯಬೇಕು. ಗ್ರಾಮೀಣಾಭಿವೃದ್ಧಿಯ ಮೂಲಕ ಇದನ್ನು ಸಾಧಿಸಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮಗಳಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಗ್ರಾಮೀಣ ಭಾರತವನ್ನು ಸಮೃದ್ಧ ಹಾಗೂ ಶ್ರೀಮಂತಗೊಳಿಸಬೇಕಾದ ಅವಶ್ಯಕತೆಯಿದೆ.

ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಿ, ಅವರ ಜ್ಞಾನ, ಕೌಶಲ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿಯ ಜೊತೆಗೆ ಪಶುಪಾಲನೆ, ಮೀನುಗಾರಿಕೆ, ರೇಷ್ಮೆಕೃಷಿ, ಕೋಳಿಸಾಕಣೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ, ಕೃಷಿಯನ್ನು ಒಂದು ಲಾಭದಾಯಕ ಹಾಗೂ ಆಕರ್ಷಕ ಉದ್ಯೋಗವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಇದರಿಂದ ಗ್ರಾಮೀಣ ಜನರು ನಗರಗಳಿಗೆ ವಲಸೆಹೋಗುವುದನ್ನು ತಪ್ಪಿಸಬಹುದಾಗಿದೆ.

೧೨. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯನ್ನು ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ತಿಳಿಸಿ.

ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು
ಹಳ್ಳಿಯ ಜನರಿಗೇ ವಹಿಸಿಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ. ವಿಕೇಂದ್ರೀಕರಣದಿಂದ
ಸ್ವಾವಲಂಬಿ, ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು. ಇದನ್ನೇ
ಗಾಂಧೀಜಿಯವರು ‘ಗ್ರಾಮ ಸ್ವರಾಜ್ಯ’ ಎಂದು ಕರೆದಿದ್ದರು. ವಿಕೇಂದ್ರೀಕರಣವು ಎಲ್ಲ ರೀತಿಯ ಶೋಷಣೆಗಳನ್ನು ತಡೆಯುತ್ತದೆ, ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ ಹಾಗೂ
ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ.ಗ್ರಾಮ ಪಂಚಾಯ್ತಿ,
ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ.
ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ
ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

೧೩. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವನ್ನು ಬರೆಯಿರಿ.

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಗಳ ಜನರು
ಪಾಲ್ಗೊಳ್ಳುವಂತೆ ಮಾಡುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು. ಇವು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಶಾಲೆ ಮತ್ತು ಆಸ್ಪತ್ರೆ ಕಟ್ಟಡಗಳು ಮುಂತಾದ ಸಮುದಾಯಕ್ಕೆ ಉಪಯೋಗವಾಗುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ವಯಸ್ಕ ಶಿಕ್ಷಣ, ತಾಂತ್ರಿಕ ಹಾಗೂ ವೃತ್ತಿ ತರಬೇತಿಗೆ ಪ್ರೋತ್ಸಾಹ, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ವಿಸ್ತರಣೆ ಮೂಲಕ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿಯೂ ಪಂಚಾಯತ್ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ.

ಗ್ರಾಮೀಣ ಉತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ದುಡಿಯುವ ಅವಕಾಶಗಳನ್ನು ಹೆಚ್ಚಿಸಬಹುದಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ, ಅಲ್ಲಿನ ಬಡತನ ಅಲ್ಲಿನ ಬಡತನ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸುವಲ್ಲಿ ಸ್ವಾವಲಂಬಿ ಮತ್ತು ಸಮೃದ್ಧ ಬದುಕನ್ನು ಕಟ್ಟಿಕೊಡುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

Iಗಿ. ಚಟುವಟಿಕೆಗಳು.

೧. ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಅದು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ನಿರ್ವಹಿಸುತ್ತಿರುವ ಕಾರ್ಯಗಳನ್ನು ಪಟ್ಟಿಮಾಡಿರಿ.

ಗ್ರಾಮದಲ್ಲಿ ಯಾರಿಗೆ ಮನೆ ಇರುವುದಿಲ್ಲವೋ ಅವರಿಗೆ ಮನೆ ಕಟ್ಟಿಕೊಡಲಾಗಿದೆ. ಗಲ್ಲಿ ಗಲ್ಲಿಗೂ ಚರಂಡಿ ಮತ್ತು ಸಿಮೆಂಟ್ ರೋಡನ್ನು ಮಾಡಿಕೊಳ್ಳಲಾಗಿದೆ. ಗುಡಿಸಲು ಮುಕ್ತ ಗ್ರಾಮ ಮಾಡಲು ಗುಡಿಸಲು ಯಾರಿಗೆ ಇವೆಯೋ ಅವರಿಗೆ ಮನೆ ಕೊಟ್ಟಿಕೊಡಲು ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯದ ಸೌಲಭ್ಯವನ್ನು ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ತಿಂಗಳಿಗೊಮ್ಮೆ ಗ್ರಾಮ ಸಭೆ ನಡೆಸಿ ಗ್ರಾಮದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಿಣಿ ಹೆಣ್ಣು ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಆರೋಗ್ಯ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ. ವಯೋವೃದ್ಧರಿಗೆ ವಿಧವೆಯರಿಗೆ ಅಜ್ಜ ಅಜ್ಜಿಯರಿಗೆ ಸಂಬಳ ಬರುವ ವ್ಯವಸ್ಥೆ ಮಾಡಲಾಗಿದೆ.

೨. ನಿಮ್ಮ ಹತ್ತಿರದಲ್ಲಿರುವ ಮಹಿಳಾ ಸ್ವಸಹಾಯ ಸಂಘಕ್ಕೆ ಭೇಟಿ ನೀಡಿ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಅವುಗಳ ಪಾತ್ರವನ್ನು ಕುರಿತು ಮಾಹಿತಿ ಪಡೆದು ತರಗತಿಯಲ್ಲಿ ಚರ್ಚಿಸಿ.

ಮಹಿಳಾ ಸಂಘಗಳ ಮೂಲಕ ಆಯಾ ಮಹಿಳೆಯರಿಗೆ ಅವರ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಆರ್ಥಿಕ ಸಹಾಯವನ್ನು ವಿಸ್ತರಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳಿಗೆ ಬೇಕಾದ ಆರ್ಥಿಕ ಸಹಾಯವನ್ನು ಈ ಸಂಘಗಳಿಂದ ಪಡೆದುಕೊಂಡು ತಮ್ಮ ತಮ್ಮ ಕುಟುಂಬಗಳ ಕಾರ್ಯಗಳನ್ನು ನೆರವೇರಿಸಿಕೊಂಡಿರುತ್ತಾರೆ. ಮಗಳ ಮದುವೆ ಅಥವಾ ಮಗನ ಮದುವೆ ಮಗಳ ಬಾಣಂತನದ ಖರ್ಚು ಹೀಗೆ ಹತ್ತು ಹಲವು ಕಾರ್ಯಗಳಿಗೆ ಸಂಘಗಳಿಂದ ಹಾರ್ಥಿಕ ಸಹಾಯ ದೊರೆತಿದೆ.

10th social science notes pdf in kannada

ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

 10ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 31 ನೋಟ್ಸ್ ಪ್ರಶ್ನೋತ್ತರಗಳು

ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

೧. ಸರ್ಕಾರವು ಸಾರ್ವಜನಿಕ ಹಣಕಾಸನ್ನು ಕೋಶಿಯ ನೀತಿಯ  ಮೂಲಕ ನಿರ್ವಹಿಸುತ್ತದೆ.
೨. ಆಯ-ವ್ಯಯದಲ್ಲಿ ಸರ್ಕಾರದ ಆದಾಯವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಉಳಿತಾಯ ಆಯವ್ಯಯಎಂದು ಕರೆಯುತ್ತಾರೆ.
೩. ಕೇಂದ್ರ ಸರ್ಕಾರದ ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸುವವರು  ಕೇಂದ್ರ ಹಣಕಾಸು ಸಚಿವರು
೪. ಸರ್ಕಾರವು ಆಂತರಿಕ ಹಾಗೂ ವಿದೇಶಿ ಸಾಲಗಳ ಮೂಲಕ ಸಂಗ್ರಹಿಸುವ ಆದಾಯವನ್ನುಬಂಡವಾಳ ಆದಾಯ ಎನ್ನುತ್ತಾರೆ

೫. ಜಿಎಸ್‌ಟಿ ಪದದ ವಿಸ್ತರಣೆ ಸರಕು ಮತ್ತು ಸೇವಾ ತೆರಿಗೆ (goods and services tax).

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

೬. ಸಾರ್ವಜನಿಕ ಹಣಕಾಸಿನ ಅರ್ಥ ತಿಳಿಸಿ.

ಸರ್ಕಾರದ ಆದಾಯ ವೆಚ್ಚ ಹಾಗೂ ಸಾಲಗಳ ನಿರ್ವಹಣೆ ಕುರಿತು ಅಧ್ಯಯನ ಮಾಡುವುದೇ
ಮಾಡುವುದೇ ಸಾರ್ವಜನಿಕ ಹಣಕಾಸು.

೭. ಆಯವ್ಯಯ ಎಂದರೇನು?

ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ.

೮. ಕೊರತೆಯ ಆಯ-ವ್ಯಯದ ಅರ್ಥ ಬರೆಯಿರಿ.

ಆಯ-ವ್ಯಯ ಪತ್ರದಲ್ಲಿ ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುತ್ತಾರೆ.

೯. ಪ್ರತ್ಯಕ್ಷ ತೆರಿಗೆ ಎಂದರೇನು?

ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ಹೊರೆಯನ್ನು ಹೊರುವಂತಿದ್ದರೆ, ಅಂತಹ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆ
ಎನ್ನುತ್ತಾರೆ.

೧೦. ವಿತ್ತೀಯ ಕೊರತೆಯನ್ನು ಸೂತ್ರ ರೂಪದಲ್ಲಿ ಬರೆಯಿರಿ.

ವಿತ್ತೀಯ ಕೊರತೆ = (ಕಂದಾಯ ಆದಾಯ + ಸಾಲೇತರ ಬಂಡವಾಳ ಆದಾಯ) – ಒಟ್ಟು ವೆಚ್ಚ.

III. ಮುಂದಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧೧. ಸಾರ್ವಜನಿಕ ಹಣಕಾಸು ಮತ್ತು ವೈಯಕ್ತಿಕ ಹಣಕಾಸು ನಡುವಿನ ಭಿನ್ನತೆಗಳನ್ನು ಗುರುತಿಸಿ.

1. ವೈಯಕ್ತಿಕ ಅಥವಾ ಖಾಸಗಿ ಹಣಕಾಸು ಒಬ್ಬ ವ್ಯಕ್ತಿ ಅಥವಾ ಕುಟುಂಬದ ಆದಾಯ-ವೆಚ್ಚಗಳಿಗೆ ಸಂಬಂಧಿಸಿದೆ.
• ಸಾರ್ವಜನಿಕ ಹಣಕಾಸು ಸರ್ಕಾರದ ಆದಾಯ-ವೆಚ್ಚಗಳಿಗೆ ಸಂಬಂಧಿಸಿದೆ.

2. ವೈಯಕ್ತಿಕ ಹಣಕಾಸಿನಲ್ಲಿ ವ್ಯಕ್ತಿಗಳು ಮೊದಲು ತಮ್ಮ ಆದಾಯವನ್ನು ನಂತರ ಅದಕ್ಕೆ ವೆಚ್ಚವನ್ನು ಅಂದಾಜು ಮಾಡಿ, ಅದಕ್ಕೆ
ಅನುಗುಣವಾಗಿ ವೆಚ್ಚ ಮಾಡುತ್ತಾರೆ.

• ಸಾರ್ವಜನಿಕ ಹಣಕಾಸಿನಲ್ಲಿ ಸರ್ಕಾರವು ಮೊದಲು ತನ್ನ ಅಂದಾಜುಮಾಡಿ,  ತಕ್ಕಂತೆ ಆದಾಯವನ್ನು ಹೊಂದಿಸುತ್ತದೆ.

3. ವೈಯಕ್ತಿಕ ಹಣಕಾಸಿನ ವ್ಯವಹಾರಗಳನ್ನು ಆದಷ್ಟೂ ಗೌಪ್ಯವಾಗಿಡಲಾಗುತ್ತದೆ.

• ಸಾರ್ವಜನಿಕ ಹಣಕಾಸನ್ನು ಶಾಸನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ, ಅಲ್ಲದೆ ಮಾಧ್ಯಮಗಳಲ್ಲಿ ಎಲ್ಲರಿಗೂ ತಿಳಿಯುವಂತೆ ಪ್ರಚಾರ ಮಾಡಲಾಗುತ್ತದೆ.

4. ವ್ಯಕ್ತಿ ಅಥವಾ ಕುಟುಂಬ ಉಳಿತಾಯ ಮಾಡಿದರೆ ಅದು ಅವರ ಪ್ರಗತಿಗೆ  ಪೂರಕವಾಗಿರುತ್ತದೆ.

ಸರ್ಕಾರವು ಉಳಿತಾಯ ಮಾಡಿದರೆ ಅದು ಅಭಿವೃದ್ಧಿ ಹೊಂದುತ್ತಿರುವ ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಆದುದರಿಂದ ಸರ್ಕಾರಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಅಭಿವೃದ್ಧಿ ಕೆಲಸಗಳಿಗಾಗಿ ವೆಚ್ಚ ಮಾಡಲು ಪ್ರಯತ್ನಿಸುತ್ತವೆ.

೧೨. ಸಾರ್ವಜನಿಕ ಹಣಕಾಸಿನ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.

ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು
ಸಾಧಿಸುವ ಉದ್ದೇಶವನ್ನು ಈಡೇರಿಸಲು ಸಾರ್ವಜನಿಕ ಹಣಕಾಸು ಬಹು ಮುಖ್ಯ ಪಾತ್ರವಹಿಸುತ್ತದೆ.ಸಾರ್ವಜನಿಕ ಹಣಕಾಸು ದೇಶದ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ನಿರ್ವಹಿಸಲ್ಪಡುತ್ತದೆ.ದೇಶದಲ್ಲಿರುವ ನೈಸರ್ಗಿಕ ಸಂಪತ್ತು, ಶ್ರಮ ಮತ್ತು ಭೌತಿಕ ಬಂಡವಾಳವು ಉತ್ಪಾದಕರ ನಡುವೆ ಸಮರ್ಪಕವಾಗಿ ಹಂಚಿಕೆಯಾಗುವಂತೆ ಹಾಗೂ ಉತ್ಪಾದನೆಯು ಗರಿಷ್ಠ ಮಟ್ಟಕ್ಕೆ ಹೆಚ್ಚುವಂತೆ ಮಾಡಲು ಸಹಕಾರಿಯಾಗಿದೆ.
ದೇಶದಲ್ಲಿ ಉತ್ಪಾದನೆ ಯಾಗುವ ಆದಾಯವು ಎಲ್ಲಾ ಪ್ರಜೆಗಳಲ್ಲಿ ಆದಷ್ಟು ಸಮನಾಗಿ ಹಂಚಿಕೆಯಾಗುವಂತೆ ನೋಡಿಕೊಂಡು ಸಮಾಜದ ಎಲ್ಲಾ ವರ್ಗದ ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತೆ ಮಾಡಲು ಅತ್ಯಗತ್ಯವಾಗಿದೆ.

ಸರ್ಕಾರವು ತನ್ನ ಕೋಶೀಯ ನೀತಿಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಿ, ಕೃಷಿ, ಸಣ್ಣ ಕೈಗಾರಿಕೆ ಮೂಲಸೌಕರ್ಯ ಮುಂತಾದ ಆದ್ಯತ ವಲಯಗಳಲ್ಲಿ ಬಂಡವಾಳ ಹೂಳಿಕೆ ಮಾಡಲು ಬಹು ಮುಖ್ಯವಾಗಿದೆ.
ಭಾರತದಂತಹ ಮುಂದುವರಿಯುತ್ತಿರುವ ರಾಷ್ಟೃಗಳಲ್ಲಿ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಹಾಗೂ ಆರ್ಥಿಕ ಏರಿಳಿತಗಳನ್ನು ಮತ್ತು ಬೆಲೆಗಳ ಏರಿಳಿತಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಹಾಗೂ ನಿಯಂತ್ರಣ ಮಾಡಲು ಅತ್ಯವಶ್ಯವಾದ ಸಾಧನವಾಗಿದೆ.

೧೩. ಕೇಂದ್ರ ಸರ್ಕಾರದ ಯೋಜನಾ ವೆಚ್ಚಗಳನ್ನು ಪಟ್ಟಿಮಾಡಿರಿ.

ಯೋಜನಾ ವೆಚ್ಚ : ಕೇಂದ್ರ ಸರ್ಕಾರವು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು, ರಾಷ್ಟ್ರ ನಿರ್ಮಾಣ
ಕಾರ್ಯಗಳು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಮಾಡುವ ವೆಚ್ಚಗಳನ್ನು ಯೋಜನಾ ವೆಚ್ಚ
ಎನ್ನುತ್ತಾರೆ.

ಕೇಂದ್ರ ಯೋಜನಾ ವೆಚ್ಚದ ಅಡಿಯಲ್ಲಿ ಕೇಂದ್ರ ಸರ್ಕಾರವು ಮೂರು ರೀತಿಯ ಸೇವೆಗಳ ನಿರ್ವಹಣೆ ಹಾಗೂ ಅಭಿವೃದ್ದಿಗಾಗಿ ಹಣವನ್ನು ವೆಚ್ಚ ಮಾಡುತ್ತದೆ. ಅವುಗಳೆಂದರೆ,
೧. ಆರ್ಥಿಕ ಸೇವೆಗಳು : ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ಕೈಗಾರಿಕೆ, ಸಾರಿಗೆ, ಸಂಪರ್ಕ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಇತ್ಯಾದಿ.
೨. ಸಾಮಾಜಿಕ ಸೇವೆಗಳು : ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಟುಂಬ ಕಲ್ಯಾಣ, ಕುಡಿಯುವ ನೀರು ಪೂರೈಕೆ, ಗೃಹ ನಿರ್ಮಾಣ, ಸಾಮಾಜಿಕ ಕಲ್ಯಾಣ ಇತ್ಯಾದಿ.
೩. ಸಾಮಾನ್ಯ ಸೇವೆಗಳು : ದೇಶದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಮಾಡುವ ವೆಚ್ಚಗಳು.

೧೪. ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯದ ಮೂಲಗಳನ್ನು ತಿಳಿಸಿ.

 ಕೇಂದ್ರ ಸರ್ಕಾರ ಸಂಗ್ರಹಿಸುವ ಪ್ರಮುಖ ತೆರಿಗೆಯೇತರ ಆದಾಯಗಳೆಂದರೆ,
೧. ಭಾರತೀಯ ರಿಸರ್ವ್ ಬ್ಯಾಂಕು ಗಳಿಸುವ ನಿವ್ವಳ ಲಾಭ.
೨. ಭಾರತೀಯ ರೈಲ್ವೆ ಗಳಿಸುವ ನಿವ್ವಳ ಲಾಭ.
೩. ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ಆದಾಯ.
೪. ಸಾರ್ವಜನಿಕ ಉದ್ಯಮಗಳು ಗಳಿಸುವ ಆದಾಯ.
೫. ನಾಣ್ಯ ಮತ್ತು ಟಂಕಸಾಲೆಯಿಂದ ಬರುವ ಆದಾಯ
೬. ವಿವಿಧ ರೀತಿಯ ಶುಲ್ಕಗಳು, ದಂಡಗಳು ಇತ್ಯಾದಿ.

೧೫. ಕೊರತೆಯ ಹಣಕಾಸು ಎಂದರೇನು? ಅದರ ನಾಲ್ಕು ವಿಧಗಳನ್ನು ತಿಳಿಸಿ.

ಸರ್ಕಾರವು ತನ್ನ ಆದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚು ಮಾಡುವುದನ್ನು ಕೊರತೆಯ ಹಣಕಾಸು ಎಂದು ಕರೆಯುತ್ತಾರೆ.  ಕೊರತೆಯ ಹಣಕಾಸಿನಲ್ಲಿ ವಿತ್ತೀಯ ಕೊರತೆ, ಆಯವ್ಯಯ ಕೊರತೆ, ಕಂದಾಯ ಕೊರತೆ ಮತ್ತು
ಪ್ರಾಥಮಿಕ ಕೊರತೆ ಎಂಬ ನಾಲ್ಕು ವಿಧಗಳನ್ನು ಗುರುತಿಸಲಾಗುತ್ತಿದೆ.

ಆಯವ್ಯಯದಲ್ಲಿ ಸರ್ಕಾರದ ಕಂದಾಯ ಆದಾಯ
ಮತ್ತು ಸಾಲೇತರ ಬಂಡವಾಳ ಆದಾಯಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ, ಅದನ್ನು
ವಿತ್ತೀಯ ಕೊರತೆ ಎನ್ನುತ್ತಾರೆ.

ಆಯ-ವ್ಯಯ ಕೊರತೆ = ಒಟ್ಟು ಆದಾಯ – ಒಟ್ಟು ವೆಚ್ಚ
* ಕಂದಾಯ ಕೊರತೆ = ಕಂದಾಯ ಆದಾಯ – ಕಂದಾಯ ವೆಚ್ಚ
* ಪ್ರಾಥಮಿಕ ಕೊರತೆ = ವಿತ್ತೀಯ ಕೊರತೆ – ಬಡ್ಡಿಪಾವತಿ

Iಗಿ. ಚಟುವಟಿಕೆಗಳು
೧. ನಿಮ್ಮ ಹತ್ತಿರದ ಗ್ರಾಮಪಂಚಾಯ್ತಿ ಅಥವಾ ತಾಲ್ಲೂಕು ಪಂಚಾಯ್ತಿಗೆ ಭೇಟಿ ನೀಡಿ, ಅಲ್ಲಿನ ಆಯ-ವ್ಯಯದ ಬಗ್ಗೆ ಮಾಹಿತಿ ಸಂಗ್ರಹಿಸಿ.

೨. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಯವ್ಯಯ ಮಂಡನೆಯನ್ನು ದೂರದರ್ಶನದ
ಮೂಲಕ ವೀಕ್ಷಿಸಿ. ಆ ಬಗ್ಗೆ ತರಗತಿಯಲ್ಲಿ ಚರ್ಚಿಸಿ.
೩. ಆಯವ್ಯಯ ಮಂಡನೆಯಾದ ಮರುದಿನ ದಿನಪತ್ರಿಕೆಯಲ್ಲಿ ಬರುವ ವರದಿಗಳನ್ನು
ಸಂಗ್ರಹಿಸಿ. ತರಗತಿಯಲ್ಲಿ ಪ್ರದರ್ಶಿಸಿ.
. ಯೋಜನೆ
೧. ನಿಮ್ಮ ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಕುಟುಂಬದ ಆದಾಯದ ಮೂಲಗಳು ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ಅಂದಾಜು ಆಯ-ವ್ಯಯವನ್ನು ಸಿದ್ಧಪಡಿಸಿ.

10th social science notes pdf in kannada

ವ್ಯವಹಾರ ಅಧ್ಯಯನ

ಅಧ್ಯಾಯ – 32

ಉದ್ಯಮಶೀಲತೆ

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ಉದ್ಯಮಿ ಎಂಬ ಪದವು ಫ್ರೆಂಚ್ ಪದ__ಎಂಟ್ರ ಪೆಂಡ್ರೆ ನಿಂದ ಬಂದಿದೆ.
೨. ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನ  ಉದ್ಯಮಶೀಲತೆ ಎನ್ನುತ್ತೇವೆ.
೩. ಜಿಲ್ಲಾ ಕೈಗಾರಿಕಾ ಕೇಂದ್ರವನ್ನು 1978ರಲ್ಲಿ ಸ್ಥಾಪಿಸಿತು.

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

೪. ಉದ್ಯಮಿ ಎಂದರೇನು ?

ಉದ್ಯಮಿ, ಎಂಬ ಪದವು ಫ್ರೆಂಚ್ ಪದ “ಎಂಟ್ರ ಪ್ರೆಂಡೆ”ಯಿಂದ ಬಂದಿದೆ. ಅಂದರೆ ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವವ ಎಂದಾಗಿದೆ. ಉದ್ಯಮಿಯು ಹೊಸ ಕಲ್ಪನೆಯನ್ನು ವ್ಯವಹಾರದಲ್ಲಿ
ರೂಢಿಗೆ ತರುವವನಾಗಿದ್ದು, ಇವನಲ್ಲಿ ವ್ಯವಹಾರ ನಿರ್ವಹಿಸಲು ಆಡಳಿತ ನಿರ್ವಹಣೆಯ ಕೌಶಲ್ಯ ಮತ್ತು ತಂಡವನ್ನು ನಿರ್ಮಿಸುವ ಸಾಮರ್ಥ್ಯ ಮತ್ತು ಮುಂದಾಳತ್ವದ ಗುಣಗಳು ಇರುತ್ತವೆ.ಯಾವುದಾದರೂ ಒಂದು ಪ್ರತಿಫಲ ಕೊಡುವ ಉದ್ದಿಮೆಯನ್ನು ಸ್ಥಾಪಿಸುವ ಅವಕಾಶಕ್ಕೆ ಕೈ ಹಾಕುವ ವ್ಯಕ್ತಿಯೇ ಉದ್ಯಮಿ.

೫. ಉದ್ಯಮಶೀಲತೆಯು ಸಾಹಸ ಕಾರ್ಯವಾಗಿದೆ. ಹೇಗೆ ?

ಉದ್ಯಮಿಯು ಅವಕಾಶಗಳನ್ನು ಅವಲೋಕಿಸಿ, ಯೋಜನೆ ಮಾಡಿ, ಸಂಪನ್ಮೂಲಗಳನ್ನು ಸಂಘಟಿಸಿ,
ಉತ್ಪಾದನೆ, ಮಾರುಕಟ್ಟೆ ಮತ್ತು ಇತರೆ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಅತ್ಯಂತ ಮುಖ್ಯವಾಗಿ ಮಾರ್ಪಾಡುಗಳನ್ನು ಮಾಡಿ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಉದ್ಯಮಿಯು ತನ್ನ ಉದ್ಯಮದ ಹಣಕಾಸಿನ ಆಯವ್ಯಯವನ್ನು ನಿಭಾಯಿಸುತ್ತಾನೆ.
ಉದ್ಯಮಿಯು ಕಷ್ಟನಷ್ಟಗಳನ್ನು ಮತ್ತು ಅನಿಶ್ಚಿತತೆ ಎದುರಿಸುತ್ತಾನೆ. ಹಾಗಾಗಿ ಉದ್ಯಮಶೀಲತೆಯು ಒಂದು ಸಾಹಸ ಕಾರ್ಯವಾಗಿದೆ.

೬. ಉದ್ಯಮಶೀಲತೆಯ ಗುಣಲಕ್ಷಣಗಳಾವುವು ?

ಉದ್ಯಮಶೀಲತೆಯ/ಉದ್ಯಮಿಯ ಗುಣಲಕ್ಷಣಗಳು :
• ಸೃಜನಾತ್ಮಕ
• ಹೊಸ ಪದ್ದತಿಯನ್ನು ರೂಢಿಸಿತರುವುದು.
• ಕ್ರಿಯಾತ್ಮಕ
• ನಾಯಕತ್ವ
• ಗುಂಪುಕಟ್ಟುವುದು.
• ಪ್ರಚೋದನೆಯ ಸಾಧನೆ
• ಸಮಸ್ಯೆಯ ಪರಿಹಾರ
• ಗುರಿಮುಟ್ಟುವಿಕೆ
• ನಷ್ಟಭರಿತಕ್ಕೆ ಸಿದ್ದ
• ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದು.
• ವಚನಬದ್ದತೆ.

೭. ಉದ್ಯಮಿಯ ಪ್ರಾಮುಖ್ಯತೆಯನ್ನು ವಿವರಿಸಿ.
ಭಾರತದ ಆರ್ಥಿಕ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹುಮುಖ್ಯವಾಗಿದೆ. ಇವರು ಕೈಗಾರಿಕಾ ಕ್ಷೇತ್ರದ ಪರಿವರ್ತನೆಯೇ ಅಲ್ಲದೆ ವ್ಯವಸಾಯ ಮತ್ತು ಸೇವಾಕ್ಷೇತ್ರಗಳ ಅಭಿವೃದ್ಧಿಯಲ್ಲೂ ಮುಖ್ಯ ಪಾತ್ರ ವಹಿಸುತ್ತಾರೆ.

ಉದ್ಯಮಿಗಳು ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಈ ಕೆಳಗಿನಂತೆ ಪಾತ್ರವಹಿಸುತ್ತಾರೆ.
೧) ಉದ್ಯಮಿಗಳು ಜನರ ಅನುಪಯುಕ್ತ ಉಳಿತಾಯಗಳನ್ನು ಬಂಡವಾಳ ರೂಪದಲ್ಲಿ
ನಿರ್ಮಾಣ ಮಾಡುತ್ತಾರೆ. ಅವರು ಸಂಪನ್ಮೂಲಗಳನ್ನು ಉದ್ದಿಮೆಗಳನ್ನು ಪ್ರಾರಂಭಿಸಲು ಉಪಯೋಗಿಸುತ್ತಾರೆ.
೨) ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಿಗಳು ಕುಶಲಕರ್ಮಿಗಳಿಗೆ, ತಾಂತ್ರಿಕ ಯೋಗ್ಯತೆ ಉಳ್ಳವರಿಗೆ ಮತ್ತು ಕಸಬುದಾರರಿಗೆ ಅಧಿಕ ಪ್ರಮಾಣದ ಉದ್ಯೋಗಗಳನ್ನು
ಒದಗಿಸುತ್ತಾರೆ.
೩) ಉದ್ಯಮಿಗಳು ಒಂದು ದೇಶದ ನಿವ್ವಳ ದೇಶಿಯ ಉತ್ಪನ್ನ (GDP) ಮತ್ತು ಜನರ
ತಲಾವರಮಾನ ಹೆಚ್ಚಿಸುತ್ತಾರೆ.
೪) ಉದ್ಯಮಿಗಳು ಬಂಡವಾಳ ಮತ್ತು ಕೌಶಲ್ಯವನ್ನು ಪ್ರಯೋಜನಕಾರಿಯಾಗಿ ಒಟ್ಟುಗೂಡಿಸಿ ಹೊಸವಸ್ತುಗಳನ್ನು ಮತ್ತು ಸೇವೆಗಳನ್ನು ರೂಢಿಸಿ ತಂದು ಮಾರುಕಟ್ಟೆಗಳನ್ನು ಅಭಿವೃದ್ಧಿ
ಪಡಿಸುತ್ತಾರೆ.
೫) ಉದ್ಯಮಿಗಳು ಉತ್ತಮ ವಸ್ತುಗಳನ್ನು ಕಡಿಮೆದರದಲ್ಲಿ ಜನರಿಗೆ ಒದಗಿಸಿ ಅವರ ಜೀವನಮಟ್ಟ ಉತ್ತಮಗೊಳ್ಳಲು ಶ್ರಮಿಸುತ್ತಾರೆ.
೬) ಉದ್ಯಮಿಗಳು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಅವರು ಪ್ರಾಂತೀಯ ತಾರತಮ್ಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ನಿವಾರಿಸುತ್ತಾರೆ.
೭) ಉದ್ಯಮಿಗಳು ಆದಾಯ ಮತ್ತು ಸಂಪತ್ತು ಒಂದು ಪ್ರದೇಶದಲ್ಲಿ ಕೇಂದ್ರೀಕೃತವಾಗುವುದನ್ನು
ಕಡಿಮೆ ಮಾಡಿ ಸಮಾಜದ ಏಳಿಗೆಗೆ ಸಹಾಯ ಮಾಡುತ್ತಾರೆ.
೮) ಉದ್ಯಮಿಗಳು ದೇಶದ ರಫ್ತು ವ್ಯಾಪಾರವನ್ನು ಹೆಚ್ಚಿಸುತ್ತಾರೆ.
೯) ಉದ್ಯಮಿಗಳು ಹೊಸ ಬದಲಾವಣೆಗಳನ್ನು ರೂಢಿಗೆ ತಂದು ತಾಂತ್ರಿಕತೆಯನ್ನು ಬದಲಾಯಿಸಿ
ಹೆಚ್ಚು ಲಾಭದಾಯಕವಾಗಲು ಶ್ರಮಿಸುತ್ತಾರೆ.

೮. ಉದ್ಯಮಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಪಾತ್ರವನ್ನು ವಿವರಿಸಿ.

ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತ ಮತ್ತು
ಸಮಗ್ರತೆಯನ್ನು ಕೇಂದ್ರೀಕರಿಸಲು ಈ ಸಂಸ್ಥೆಯನ್ನು ಸರ್ಕಾರವು ೧೯೭೮ ರಲ್ಲಿ ಸ್ಥಾಪಿಸಿತು. ಈ ಕೇಂದ್ರಗಳು ಸರ್ಕಾರದ ವಿವಿಧ ಇಲಾಖೆಗಳೊಡನೆ ಸಂಯೋಜಕರಾಗಿ ಕೆಲಸ ಮಾಡುತ್ತವೆ ಮತ್ತು ಸೇವೆಗಳನ್ನು ಒದಗಿಸುವ ಕೇಂದ್ರಗಳಾಗಿವೆ. ಈ ಕೇಂದ್ರಗಳು ಏಕಗವಾಕ್ಷ ರೀತಿಯಲ್ಲಿ ಪರಸ್ಪರ ಕಾರಬಾರಿ ಸೇವೆಯನ್ನು ಹೊಸದಾಗಿ ಉದ್ಯಮವನ್ನು ಪ್ರಾರಂಭಿಸುವವರಿಗೆ ಜಿಲ್ಲಾಮಟ್ಟದಲ್ಲಿ ಈ
ಕೆಳಗಿನ ಸೇವೆಗಳನ್ನು ಒದಗಿಸುತ್ತವೆ.

೧) ಉದ್ದಿಮೆಯನ್ನು ಸ್ಥಾಪಿಸಲು ಮೊದಲು ಸಿದ್ಧಪಡಿಸಬೇಕಾದ ಯೋಜನಾವರದಿ.
೨) ಹೊಸದಾಗಿ ಕೈಗಾರಿಕಾ ಪ್ರದೇಶಗಳ ರಚನೆ೩) ವಿಶೇಷ ರೀತಿಯ ಯೋಜನಾ ವರದಿಗಳನ್ನು ಅಂಗೀಕರಿಸುವುದು.
೪) ಉದ್ದಿಮೆ ಅಭಿವೃದ್ಧಿ ಕಾರ್ಯಕ್ರಮದೆಡೆ ತರಬೇತಿ.
೫) ಕಚ್ಚಾಪದಾರ್ಥಗಳ ಹಂಚಿಕೆ.
೬) ಸ್ವಯಂ ಉದ್ಯೋಗದಡಿಯಲ್ಲಿನ ವ್ಯವಸ್ಥೆಯಲ್ಲಿ ಹಣಕಾಸಿನ ನೆರವು.
೭) ಕೇಂದ್ರ ಸರ್ಕಾರದ ಜೊತೆಯಲ್ಲಿ ಮಾರುಕಟ್ಟೆ ಸಹಾಯ.
೮) ವಸ್ತು ಪ್ರದರ್ಶನಗಳಲ್ಲಿ, ವ್ಯಾಪಾರಿ ಜಾತ್ರೆಗಳಲ್ಲಿ ಮತ್ತು ಕೊಳ್ಳುವವರು ಮತ್ತು ಮಾರುವವರು
ಸಂಧಿಸುವ ಭೇಟಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡುವುದು.
೯) ಸಣ್ಣ ಕೈಗಾರಿಕೆಗಳ ನೋಂದಣಿ ವ್ಯವಸ್ಥೆಯಲ್ಲಿ, ಬ್ಯಾಂಕು ಸಾಲಗಳಲ್ಲಿ ಮತ್ತು ಉತ್ಪಾದಿತ
ವಸ್ತುಗಳ ಮಾರುಕಟ್ಟೆ ಸಮಸ್ಯೆಗಳ ಕಡೆ ಗಮನಹರಿಸುವುದು.
೧೦) ಉದ್ದಿಮೆಯನ್ನು ಆಧುನಿಕರಿಸುವಲ್ಲಿ ಸಹಾಯ ಮಾಡುವುದು.
೧೧) ವಸ್ತುಗಳನ್ನು ರಫ್ತು ಮಾಡಲು ಸಹಾಯ ಮಾಡುವುದು.
೧೨) ಬದಲಾವಣೆ ಅಥವಾ ಮಾರ್ಪಾಡು ಮಾಡಿರುವ ವಸ್ತುಗಳಿಗೆ ಉತ್ತೇಜನ ಕೊಟ್ಟು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಕೊಡಲು ಪ್ರಯತ್ನಿಸುವುದು.
೧೩) ಸಾಂಪ್ರದಾಯಿಕವಲ್ಲದ ಶಕ್ತಿಸಾಧನಗಳನ್ನು ಉಪಯೋಗಿಸಿ ವಸ್ತುಗಳ ತಯಾರಿಕೆಗೆ ಉತ್ತೇಜನ
ಕೊಡುವುದು.
೧೪) ಕುಶಲಕೈಗಾರಿಕಾ ವಸ್ತುಗಳ ತಯಾರಿಕೆಯಲ್ಲಿ ಮಾದರಿ ವಸ್ತುಗಳ ತಯಾರಿಕೆಗೆ ಸಹಾಯ
ಮಾಡುವುದು.

III. ಚಟುವಟಿಕೆಗಳು :
೧. ಹತ್ತಿರದ ಉದ್ಯಮ ಕೇಂದ್ರಕ್ಕೆ ಭೇಟಿ ನೀಡಿ ಉದ್ಯಮ ಸಂಸ್ಥೆಯಲ್ಲಿರುವ ಕಾರ್ಮಿಕರ ವಿವರವನ್ನು ಪಡೆಯಿರಿ.

ದಾವಣಗೆರೆಗೆ ಹತ್ತಿರದಲ್ಲಿ ಆರಾಧ್ಯ ಸ್ಟೀಲ್ ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿಯಲ್ಲಿ ಸುತ್ತಮುತ್ತಲಿನ ಊರುಗಳಿಂದ ಬಹಳಷ್ಟು ಜನ ಕೆಲಸಕ್ಕೆ ಸೇರಿದ್ದಾರೆ ಮತ್ತು ಅವರನ್ನು ಕೊಂಡೊಯ್ಯಲು ಫ್ಯಾಕ್ಟರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ ಹಗಲು ಮತ್ತು ರಾತ್ರಿ ಶಿಫ್ಟ್ಗಳ ಕೆಲಸವಿರುತ್ತದೆ ಹಗಲಿನ ಕೆಲಸ ಇರುವವರು ಹಗಲು ಹೋಗಿ ಕೆಲಸ ಮಾಡುತ್ತಾರೆ ರಾತ್ರಿ ಕೆಲಸ ಇರುವವರು ರಾತ್ರಿ ಕೆಲಸ ಮಾಡುತ್ತಾರೆ.

೨. ಅಂರ್ತಜಾಲದ ನೆರವಿನಿಂದ ವಿವಿಧ ಉದ್ಯಮ ಸಂಸ್ಥೆಗಳ ಪಟ್ಟಿ ತಯಾರಿಸಿ.

ಆರತಿ ಇಂಡಸ್ಟ್ರಿ
ಟಾಟಾ ಮೋಟರ್ಸ್
ಮಾರುತಿ ಸುಜುಕಿ ಮೋಟಾರ್ಸ್
ಬಜಾಜ್ ಮೋಟಾರ್ಸ್
ಭಾರತೀಯ ಎಲೆಕ್ಟ್ರಾನಿಕ್ಸ್
ರೇಣುಕಾ ಶುಗರ್ ಫ್ಯಾಕ್ಟರಿ
ಆರಾಧ್ಯ ಸ್ಟೀಲ್ ಫ್ಯಾಕ್ಟರಿ
ಕುಕ್ಕುವಾಡ ಶುಗರ್ ಫ್ಯಾಕ್ಟರಿ
ವಿಪ್ರೊ ಕಂಪನಿ
ನೆಸ್ಲೆ ಕಂಪನಿ
ಸನ್ ಫಾರ್ಮ
ಐಟಿಸಿ ಕಂಪನಿ
ಕೋಚಿಂಗ್ ಶಿಪ್ಪಿ ಯಾರ್ಡ್

೩. ಭಾರತದಲ್ಲಿರುವ ಪ್ರಖ್ಯಾತ ಉದ್ದಿಮೆದಾರರ ಭಾವಚಿತ್ರಗಳನ್ನು ಸಂಗ್ರಹಿಸಿ.

ರತನ್ ಟಾಟಾ
ಆದಿತ್ಯ ಬಿರ್ಲಾ
ಮುಖೇಶ್ ಅಂಬಾನಿ

Iಗಿ. ಯೋಜನೆ :

೧. ನಿಮಗೆ ಹತ್ತಿರವಾಗಿರುವ ಉದ್ಯಮದಾರರೊಂದಿಗೆ ಸಂದರ್ಶನ ನಡೆಸಿ ಉದ್ಯಮವನ್ನು
ಕಟ್ಟಿದ ವಿವರ ಪಡೆದು ವರದಿ ಸಿದ್ಧಪಡಿಸಿ.
ಹೋಟೆಲ್ ಉದ್ಯಮಿ ಒಬ್ಬರ ಸಂದರ್ಶನ
ಅಂತಹ ಅಸಾಂಪ್ರದಾಯಿಕ ಮತ್ತು ಆಸಕ್ತಿದಾಯಕ ವೃತ್ತಿಜೀವನದಲ್ಲಿ ನೀವು ಹೇಗೆ ಕೊನೆಗೊಂಡಿದ್ದೀರಿ ಎಂದು ನಮಗೆ ತಿಳಿಸಿ?

“ನಾನು 1992 ರಲ್ಲಿ ಸೆಸರ್ ರಿಟ್ಜ್ ಕಾಲೇಜುಗಳಿಗೆ ಬಂದೆ, ಹೋಟೆಲ್ ಉದ್ಯಮಕ್ಕೆ ಸೇರುವ ಬಗ್ಗೆ ಉತ್ಸುಕನಾಗಿದ್ದೆ ಆದರೆ ಅದಕ್ಕಿಂತ ಹೆಚ್ಚು ಸುಳಿವು ಇಲ್ಲ. ಸೀಸರ್ ರಿಟ್ಜ್ ಕಾಲೇಜುಗಳು ನನ್ನನ್ನು ನೆಲಸಮಗೊಳಿಸಿದವು ಮತ್ತು ಹೋಟೆಲ್‌ಗಳ ಜಗತ್ತಿಗೆ ವೈಜ್ಞಾನಿಕವಾಗಿ ನನ್ನನ್ನು ಒಡ್ಡಿದವು. ಇದು ಹೋಟೆಲ್ ಮ್ಯಾನೇಜ್‌ಮೆಂಟ್‌ನ ತಂತ್ರಗಳನ್ನು ನನಗೆ ಕಲಿಸಿತು, ಕೆಲಸ ಮಾಡುವ ಕೇಂದ್ರೀಕೃತ, ವೃತ್ತಿಪರ ಮತ್ತು ನಿಖರವಾದ ಮಾರ್ಗಕ್ಕೆ ನನ್ನನ್ನು ಒಡ್ಡಿತು. ನಾನು ಪದವಿ ಪಡೆದಾಗ ನನಗೆ ಉಪಕರಣಗಳು, ಶಿಕ್ಷಣ ಮತ್ತು ಉತ್ಸಾಹವಿತ್ತು. ಅಲ್ಲಿಂದ ಇಲ್ಲಿಯವರೆಗೆ, ಇದು ಸುದೀರ್ಘ ಮತ್ತು ಸುಂದರವಾದ ಹಾರಾಟವಾಗಿದೆ ಮತ್ತು ಇದು ಇನ್ನೂ ಹೆಚ್ಚು ಕಾಲ ಉಳಿಯಲಿ.

ನೀವು ಏನು ಮಾಡುತ್ತೀರಿ?

ಭಾವೋದ್ರೇಕದಿಂದ ಪ್ರೇರೇಪಿಸಲ್ಪಟ್ಟ, ಜೇ ನಿರಂತರವಾಗಿ ಅತಿಥಿ ತೃಪ್ತಿಯಲ್ಲಿ ಅತ್ಯಧಿಕ ಗುರಿಯನ್ನು ಹೊಂದಿದ್ದಾನೆ, ಅವನು ಉದ್ಯೋಗಿಗಳ ಶ್ರದ್ಧಾಭರಿತ ತಂಡವನ್ನು ಆಧರಿಸಿರುತ್ತಾನೆ. ಜೇ ತನ್ನ ಉದ್ಯೋಗಿಗಳ ನಿಶ್ಚಿತಾರ್ಥದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ ಏಕೆಂದರೆ ಅವರು ತಮ್ಮ ಗುರಿಗಳನ್ನು ಸಾಧಿಸಲು ಅವರಿಗೆ ಹೆಚ್ಚು ಸಹಾಯ ಮಾಡುತ್ತಾರೆ. ಸಮರ್ಪಿತ ಮತ್ತು ವೃತ್ತಿಪರ ತಂಡದೊಂದಿಗೆ, ಅವರು ಮೂರು ಒಬೆರಾಯ್ ಹೋಟೆಲ್‌ಗಳ ಉಪಾಧ್ಯಕ್ಷ ಮತ್ತು GM ಆಗಿ ತಮ್ಮ ಪಾತ್ರವನ್ನು ಕೇಂದ್ರೀಕರಿಸಬಹುದು, ಅಲ್ಲಿ ಅವರ ಜವಾಬ್ದಾರಿಗಳಲ್ಲಿ ಲಾಭದಾಯಕತೆ ಮತ್ತು ಆಸ್ತಿ ನಿರ್ವಹಣೆ ಮತ್ತು ಮಾಧ್ಯಮ ಮತ್ತು ಸಮಾಜದೊಂದಿಗೆ ಸಾರ್ವಜನಿಕ ಸಂಬಂಧಗಳ ನಿರ್ವಹಣೆ ಸೇರಿವೆ.

ಸ್ವಿಟ್ಜರ್ಲೆಂಡ್‌ನ ಸೀಸರ್ ರಿಟ್ಜ್‌ನಲ್ಲಿ ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ

ಜೇ ಅವರು ಸೀಸರ್ ರಿಟ್ಜ್ ಕಾಲೇಜುಗಳಲ್ಲಿನ ಸಮಯದ ಅಚ್ಚುಮೆಚ್ಚಿನ ನೆನಪುಗಳನ್ನು ಹೊಂದಿದ್ದಾರೆ ಮತ್ತು ನೆನಪಿಸಿಕೊಳ್ಳುತ್ತಾರೆ: “ಅತ್ಯುತ್ತಮ ಔತಣಕೂಟವನ್ನು ಗೆಲ್ಲುವುದು ಮತ್ತು ಅದೇ ದಿನ ಸೀಸರ್ ರಿಟ್ಜ್ ಕಾಲೇಜುಗಳ ಪ್ರಶಸ್ತಿಯನ್ನು ಪಡೆಯುವುದು ಖಂಡಿತವಾಗಿಯೂ ಅತ್ಯುತ್ತಮ ಸ್ಮರಣೆಯಾಗಿದೆ, ಆದರೆ ಮೋಜಿನ ನೆನಪುಗಳಿಗೆ ಸಂಬಂಧಿಸಿದಂತೆ, ಇವೆ ಸಾಕಷ್ಟು.”

ನಿಮ್ಮ ವೃತ್ತಿ ಮಾರ್ಗ ಯಾವುದು?

“ಸೀಸರ್ ರಿಟ್ಜ್ ಕಾಲೇಜುಗಳು ಸರಿಯಾದ ಬಾಗಿಲುಗಳನ್ನು ತೆರೆದವು. ಮೊದಲಿಗೆ, ನಾನು 1996 ರಲ್ಲಿ ಕಾಲೇಜಿನ ನಂತರ ನೇರವಾಗಿ ಹ್ಯಾಟ್ ಇಂಟರ್‌ನ್ಯಾಶನಲ್‌ಗೆ ಸೇರಿಕೊಂಡೆ. ಸೀಸರ್ ರಿಟ್ಜ್ ಕಾಲೇಜುಗಳು ನನಗೆ ಉಪಕರಣಗಳನ್ನು ನೀಡಿತು ಮತ್ತು ನನಗೆ ಮಾರ್ಗವನ್ನು ತೋರಿಸಿತು, ಅದರ ಮೇಲೆ ಸ್ವಿಸ್ ನಿಖರತೆಯು ಮಹತ್ತರವಾಗಿ ಸಹಾಯ ಮಾಡಿತು. ಅಂದಿನಿಂದ ನಾನು ಅದನ್ನು ಅನುಸರಿಸಿದ್ದೇನೆ ಮತ್ತು ಯಶಸ್ವಿಯಾಗಿದ್ದೇನೆ. ”

ಅಂತಿಮ ಟಿಪ್ಪಣಿಯಲ್ಲಿ ಜೇ ರಾಥೋರ್ ಅವರು ಭಾರತದಲ್ಲಿ 2011 ರ ಜನರಲ್ ಮ್ಯಾನೇಜರ್ ಆಗಿ ಸ್ಥಾನ ಪಡೆದಿದ್ದಾರೆ ಮತ್ತು 2011 ಕ್ಕೆ HT ಸಿಟಿ ಕ್ರಿಸ್ಟಲ್ ಪ್ರಶಸ್ತಿಯನ್ನು ಪಡೆದರು ಎಂದು ನಮೂದಿಸಬೇಕು<span;>.

ಎರಡನೇ ಸಂದರ್ಶನ

1. ಮಹಿಳಾ ಉದ್ಯಮಿಯಾಗುವ ನಿಮ್ಮ ಕಥೆ ಏನು (ದಯವಿಟ್ಟು ನಿಮ್ಮ ಹಿಂದಿನ ಕೆಲಸದ ಅನುಭವಗಳು, ವೃತ್ತಿ ಬೆಳವಣಿಗೆಯ ಪ್ರಯಾಣ ಮತ್ತು ನಿಮ್ಮ ದೀರ್ಘಾವಧಿಯ ದೃಷ್ಟಿಕೋನವನ್ನು ಹಂಚಿಕೊಳ್ಳಿ)?

ಶ್ರೀಮತಿ ರಶ್ಮಿ – ನನ್ನ ದೀರ್ಘಾವಧಿಯ ದೃಷ್ಟಿಯು ಉದ್ಯಮಿಯಾಗುವುದು, ಏಕೆಂದರೆ ನಾನು ಯಾವಾಗಲೂ ಕೆಲಸ ಮಾಡುವ ಹೊಸ ಮಾರ್ಗವನ್ನು ರಚಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ನಮ್ಮ ಕೆಲಸದ ಹಿಂದೆ ದೊಡ್ಡ ಪ್ರಭಾವವನ್ನು ಬಿಡುವ ಕಲ್ಪನೆಗೆ ಆಕರ್ಷಿತನಾಗಿದ್ದೆ. ವಾಣಿಜ್ಯೋದ್ಯಮಿಯಾಗುವ ಮೊದಲು ನನ್ನ ಎಲ್ಲಾ ಪಾತ್ರಗಳು ಮಾರಾಟ, ಕಾರ್ಯಾಚರಣೆಗಳು ಮತ್ತು ಜನರ ನಿರ್ವಹಣೆಯಂತಹ ಕಾರ್ಯಗಳಲ್ಲಿ ಅಪಾರ ಅನುಭವದೊಂದಿಗೆ ಸಹಾಯ ಮಾಡಿತು. ವಿವಿಧ ವ್ಯಾಪಾರ ಡೊಮೇನ್‌ಗಳು ವ್ಯಾಪಾರದ ನೈಜತೆಗಳ ಆಧಾರದ ಮೇಲೆ ಆದ್ಯತೆಗಳನ್ನು ಮರುಹೊಂದಿಸುವುದನ್ನು ಕಲಿಯಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಯೋಜಿಸುತ್ತದೆ.

ಕಾರ್ಯಾಚರಣೆಗಳ ನಿರ್ವಹಣೆ ಮತ್ತು ಗುಣಮಟ್ಟ ನಿರ್ವಹಣೆಯನ್ನು ಒಳಗೊಂಡ ಕೆಲವು ಆನ್‌ಲೈನ್ ಕಾರ್ಯಾಚರಣೆ ಕೋರ್ಸ್‌ಗಳು ಮತ್ತು ಪ್ರಮಾಣೀಕರಣಗಳನ್ನು ಪರಿಶೀಲಿಸಿ .

2. ನಿಮ್ಮ ಪ್ರಸ್ತುತ ಪಾತ್ರಗಳು ಮತ್ತು ಜವಾಬ್ದಾರಿಗಳ ಕುರಿತು ವಿವರವಾಗಿ ಹಂಚಿಕೊಳ್ಳಿ ‘ಆಲೋಚನಾ ನಾಯಕ.’
ಶ್ರೀಮತಿ ರಶ್ಮಿ – ನಾನು ಚಿಂತನಶೀಲ ನಾಯಕನಾಗಿ ದೂರವಿದ್ದೇನೆ ಮತ್ತು ನಾನು ವಿವಿಧ ಆಹಾರ ವ್ಯವಹಾರಗಳು ಮತ್ತು ನಾಯಕರಿಂದ ನಿರಂತರವಾಗಿ ಕಲಿಯುತ್ತಿದ್ದೇನೆ.

ಯುವ ವ್ಯಾಪಾರವಾಗಿ, ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಎಲ್ಲಾ ಮಧ್ಯಸ್ಥಗಾರರ ಕಡೆಗೆ ನಾವು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೇವೆ.

3. ನಿಮ್ಮ ಕೆಲಸದ ಜೀವನದಲ್ಲಿ ಒಂದು ದಿನ ಹೇಗಿರುತ್ತದೆ?
ಶ್ರೀಮತಿ ರಶ್ಮಿ – ನನ್ನ ದಿನಗಳು ಹೊಸ ಜನರನ್ನು ಭೇಟಿಯಾಗುವುದು, ಹೊಸ ಆಹಾರ ಉತ್ಪನ್ನಗಳು ಮತ್ತು ಪದಾರ್ಥಗಳನ್ನು ಪ್ರಯತ್ನಿಸುವುದು, ಕಾರ್ಯಾಚರಣೆಯ ಸವಾಲುಗಳನ್ನು ಪರಿಹರಿಸುವುದು, ಹೊಸ ಬೆಳವಣಿಗೆಯ ಭಿನ್ನತೆಗಳನ್ನು ಕಂಡುಹಿಡಿಯುವುದು, ವ್ಯಾಪಾರದ ಮೆಟ್ರಿಕ್‌ಗಳನ್ನು ಪತ್ತೆಹಚ್ಚುವುದು ಸೇರಿದಂತೆ ಬಹಳಷ್ಟು ಉತ್ಸಾಹದಿಂದ ತುಂಬಿವೆ.

4. ಯಶಸ್ವಿ ವಾಣಿಜ್ಯೋದ್ಯಮಿಯಾಗಲು ನೀವು ಯಾವ ವ್ಯಾಪಾರ ಕಲಿಕೆಯ ಕೌಶಲ್ಯಗಳನ್ನು ಶಿಫಾರಸು ಮಾಡುತ್ತೀರಿ?
ಶ್ರೀಮತಿ ರಶ್ಮಿ – ಇಂದು ವ್ಯವಹಾರಗಳು ತುಂಬಾ ಕ್ರಿಯಾತ್ಮಕವಾಗಿವೆ ಮತ್ತು ಎಲ್ಲಾ ಕ್ಷೇತ್ರಗಳು ಬಹಳ ವೇಗವಾಗಿ ಬದಲಾವಣೆಗಳನ್ನು ಕಾಣುತ್ತಿವೆ. ಜನರ ಕೌಶಲ್ಯಗಳನ್ನು ನಿರ್ಮಿಸುವುದು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಮೊದಲ ತತ್ವಗಳನ್ನು ನಿರ್ಮಿಸುವುದು ಅತ್ಯಂತ ಪ್ರಮುಖ ಕೌಶಲ್ಯವಾಗಿದೆ.

5. ನಾಯಕತ್ವದ ಪಾತ್ರಗಳಿಗೆ ತೆರಳಲು ಮತ್ತು ನಾಯಕನಂತೆ ಬೆಳವಣಿಗೆಯ ತಂತ್ರಗಳನ್ನು ಪರಿಕಲ್ಪನೆ ಮಾಡಲು ನೀವು ಮಧ್ಯಮ ಮಟ್ಟದ ವ್ಯವಸ್ಥಾಪಕರಿಗೆ ಯಾವ ತಜ್ಞರ ಸಲಹೆಯನ್ನು ನೀಡುತ್ತೀರಿ?
Ms. ರಶ್ಮಿ – ವ್ಯವಹಾರದ ಫಲಿತಾಂಶಗಳಿಗೆ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಲಿಯುವುದು ನಾಯಕತ್ವದ ಕಡೆಗೆ ಚಲಿಸುವ ಮೊದಲ ಹೆಜ್ಜೆಯಾಗಿದೆ.

ಇಲ್ಲಿ ಕೆಲವು ಆನ್‌ಲೈನ್ ನಾಯಕತ್ವ ಕೋರ್ಸ್‌ಗಳು ಮತ್ತು ಪ್ರಮಾಣೀಕರಣಗಳನ್ನು ಅನ್ವೇಷಿಸಿ .

6. ನೀವು ವಾಣಿಜ್ಯೋದ್ಯಮಿಯಾಗಿ ಅಭಿವೃದ್ಧಿ ಹೊಂದಲು ಕಲಿತ ಕೆಲವು ಕಠಿಣ ಪಾಠಗಳ ಬಗ್ಗೆ ನಮಗೆ ತಿಳಿಸಿ.
ಶ್ರೀಮತಿ. ರಶ್ಮಿ – ವಾಣಿಜ್ಯೋದ್ಯಮವು ಪ್ರಯಾಣದ ರೀತಿಯಲ್ಲಿ ಏಕಾಂಗಿಯಾಗಿರಬಹುದು ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ನಿಮ್ಮನ್ನು ಪ್ರೇರೇಪಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳುವ ಅಗತ್ಯವಿದೆ. ಹೊಸದನ್ನು ಕಲಿಯಲು ಮತ್ತು ಮಾಡಲು ಹೊಸ ಪ್ರಾರಂಭವಾಗಿ ಪ್ರತಿ ದಿನವನ್ನು ಪ್ರಾರಂಭಿಸಲು ನಾನು ಕಲಿತಿದ್ದೇನೆ.

7. FreshMenu ಅನ್ನು 1 ಅಡಿಗೆ 35 ಕ್ಕೆ (ಕಲಿಕೆಗಳು ಮತ್ತು ಸವಾಲುಗಳು) ಹೆಚ್ಚಿಸಲು ನೀವು ಯಾವ ಅಳತೆಯನ್ನು ತೆಗೆದುಕೊಂಡಿದ್ದೀರಿ.
ಶ್ರೀಮತಿ ರಶ್ಮಿ – ಕಟ್ಟಡ ಉತ್ಪನ್ನಗಳು, ತಂತ್ರಜ್ಞಾನ, ಪೂರೈಕೆ ಸರಪಳಿ, ಪ್ರಕ್ರಿಯೆಗಳು ಮತ್ತು ಈ ವ್ಯಾಪಾರವನ್ನು ನಡೆಸುವ ಕೊನೆಯ ಆದರೆ ಕನಿಷ್ಠವಲ್ಲದ ಜನರು ಸೇರಿದಂತೆ ಆಹಾರ ವ್ಯಾಪಾರವನ್ನು ಅಳೆಯಲು ಇದು ಸವಾಲುಗಳು ಮತ್ತು ಕಲಿಕೆಗಳ ಹೋಸ್ಟ್ ಆಗಿದೆ.

8. ನಿಮ್ಮ ಪ್ರಕಾರ, ಭಾರತದಲ್ಲಿ ಆಹಾರ-ತಂತ್ರಜ್ಞಾನದ ವ್ಯವಹಾರದ ವ್ಯಾಪ್ತಿ ಏನು ಮತ್ತು ಕೋವಿಡ್ ನಂತರದ ಸಮಯದಲ್ಲಿ ಅದು ಹೇಗೆ ರೂಪುಗೊಳ್ಳುತ್ತದೆ.
ಶ್ರೀಮತಿ ರಶ್ಮಿ – ಫುಡ್‌ಟೆಕ್ ಮತ್ತು ವಿಶೇಷವಾಗಿ ವಿತರಣಾ ಸ್ನೇಹಿ ಆಹಾರವು ಕೋವಿಡ್ ನಂತರದ ಜಗತ್ತಿನಲ್ಲಿ ಸಾಕಷ್ಟು ಬೆಳವಣಿಗೆಯ ನಿರೀಕ್ಷೆಗಳನ್ನು ಹೊಂದಿದೆ ಮತ್ತು ನಾವು ಅದನ್ನು ಎಚ್ಚರಿಕೆಯಿಂದ ಆಶಾವಾದದಿಂದ ನೋಡುತ್ತಿದ್ದೇವೆ. ಆಹಾರ ಪದ್ಧತಿಯನ್ನು ಬದಲಾಯಿಸುವ ಮತ್ತು ವಿತರಣಾ ಅನುಕೂಲವನ್ನು ನಂಬುವ ಗ್ರಾಹಕರ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಕ್ಷೇಮವನ್ನು ನಿರ್ಮಿಸಲು ಸಹಾಯ ಮಾಡುವ ಆಹಾರಕ್ಕಾಗಿ ಗ್ರಾಹಕರು ಕಾಳಜಿ ವಹಿಸುತ್ತಿದ್ದಾರೆ ಮತ್ತು ಆರೋಗ್ಯಕರ ಆಹಾರಕ್ಕಾಗಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಕ್ಲೌಡ್ ಕಿಚನ್‌ಗಳನ್ನು ಅತ್ಯುತ್ತಮವಾಗಿ ಸಜ್ಜುಗೊಳಿಸಲಾಗಿದೆ ಎಂದು ನಾವು ನೋಡುತ್ತೇವೆ.

9. ನೀವು ಯಾವ ಪ್ರಮಾಣೀಕರಣವನ್ನು ಹೊಂದಿದ್ದೀರಿ ಮತ್ತು ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಉನ್ನತ ಕೌಶಲ್ಯಕ್ಕಾಗಿ ಯಾವ ಕೌಶಲ್ಯ ಅಭಿವೃದ್ಧಿ ಮಾರ್ಗಗಳು, ಪುಸ್ತಕಗಳು ಅಥವಾ ಚಾನಲ್‌ಗಳನ್ನು ನೀವು ಶಿಫಾರಸು ಮಾಡುತ್ತೀರಿ?
Ms. ರಶ್ಮಿ – IIM ನಲ್ಲಿ MBA ಗೆ ಹೋಗುವ ಮೊದಲು ನಾನು ಇಂಜಿನಿಯರಿಂಗ್ ಪದವಿಯನ್ನು ಓದಿದೆ. ಕೆಲವು ವ್ಯಾಪಾರ ನಾಯಕರ ಜೀವನಚರಿತ್ರೆ ಮತ್ತು ಅವರ ಉದ್ಯಮಶೀಲತೆಯ ಪ್ರಯಾಣದಿಂದ ಕಲಿಯಲು ಬಹಳಷ್ಟು ಇದೆ. ಟೆಡ್ ಟಾಕ್‌ಗಳು ಮತ್ತು ಪಾಡ್‌ಕಾಸ್ಟ್‌ಗಳು ಸಹ ಕಲಿಯಲು ಉತ್ತಮ ವಿಷಯವನ್ನು ಹೊಂದಿವೆ.

10th social science notes pdf in kannada

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

10ನೇ ತರಗತಿ ಅಧ್ಯಾಯ 33  ನೋಟ್ಸ್ ಅಭ್ಯಾಸದ ಪ್ರಶ್ನೋತ್ತರಗಳು

1 . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.

1. ಗ್ರಾಹಕನಿಗಿರುವ ಮತ್ತೊಂದು ಹೆಸರು –ಬಳಕೆದಾರ

2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ

3. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನುಮಾರ್ಚ್ 15ರಂದು ಆಚರಿಸುತ್ತೇವೆ.

4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ    ಆಯೋಗಕ್ಕೆ ಸಲ್ಲಿಸಬೇಕು.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

5. ಗ್ರಾಹಕ ಎಂದರೆ ಯಾರು?

ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ
ಅಥವಾ ವೇತನ ಪ್ರತಿಫಲ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಾಗಿದ್ದಾರೆ ಅಥವಾ ಪದಾರ್ಥಗಳನ್ನು
ಬಳಸಿಕೊಳ್ಳುವವರಾಗಿದ್ದಾರೆ.

6. ಗ್ರಾಹಕ ಆಂದೋಲನದ ಮೂಲ ಆಶಯ ಯಾವುದು?

ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ಮುಕ್ತಿಗೊಳಿಸುವುದು.

7. ಪ್ರತಿಯೊಬ್ಬ ಗ್ರಾಹಕನಿಗಿರುವ ಹಕ್ಕು ಯಾವುದು?

ಸರಿಯಾದ ಬೆಲೆಗೆ ಉತ್ತಮ ಗುಣಮಟ್ಟ ಹಾಗೂ ವಿಶ್ವಾಸಾರ್ಹ ವಸ್ತು ಅಥವಾ ಸೇವೆಯನ್ನ ಪಡೆಯುವುದು ಗ್ರಾಹಕರ ಹಕ್ಕು.

8. ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂತು?

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986ರಲ್ಲಿ ಜಾರಿಗೆ ಬಂತು.

9. ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ಯಾರು ನೇಮಿಸುತ್ತಾರೆ?

ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಿಸುತ್ತದೆ.

III ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.

10. ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟಗಳೇನು?

ಅನೇಕ ಸಂದರ್ಭಗಳಲ್ಲಿ ಮಾರಾಟಗಾರರು ಗ್ರಾಹಕರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅವರನ್ನು ಶೋಷಿಸುತ್ತಾರೆ ಹಾಗೂ ಮೋಸಗೊಳಿಸುತ್ತಾರೆ.ಉತ್ಪಾದಕರು ಹಾಗೂ ಗ್ರಾಹಕರು ಕೂಡಿ ನಿರ್ಧರಿಸಬೇಕಾದ ಬೆಲೆಯನ್ನು ಮಧ್ಯವರ್ತಿಗಳೇ ನಿರ್ಧರಿಸತೊಡಗುತ್ತಾರೆ. ಇದರಿಂದ ಗ್ರಾಹಕರಿಗೆ ಕಷ್ಟ, ನಷ್ಟ ಮತ್ತು ಸಮಸ್ಯೆಗಳು ಉಂಟಾಗುತ್ತವೆ.

11. ಬಳಕೆದಾರರ ಶೋಷಣೆಗೆ ಕಾರಣಗಳಾವುವು?

ಬೇಸಾಯದ ಉದ್ಯಮ ಹಲವು ರೀತಿಗಳಲ್ಲಿ ಬೆಳೆದಂತೆ ಮಾರಾಟ ವಿಧಾನವು ಬದಲಾಯಿತು. ಗ್ರಾಹಕ ಮತ್ತು ಪೂರೈಕೆದಾರರ ನಡುವಿನ ಅಂತರ ಹೆಚ್ಚಾಗಿ ಇವರಿಬ್ಬರ ನಡುವೆ ನೇರ ವ್ಯವಹಾರ ಇಲ್ಲವಾಯಿತು. ಉತ್ಪಾದಕರು ಹಾಗೂ ಗ್ರಾಹಕರು ಕೂಡಿ ನಿರ್ಧರಿಸಬೇಕಾದ ಬೆಲೆಯನ್ನು ಮಧ್ಯವರ್ತಿಗಳೇನಿರ್ಧರಿಸತೊಡಗಿದರು. ಇದರಿಂದ ಗ್ರಾಹಕರಿಗೆ ಕಷ್ಟ, ನಷ್ಟ ಮತ್ತು ಸಮಸ್ಯೆಗಳಾದವು.

12. ಗ್ರಾಹಕ ಸಂರಕ್ಷಣಾ ಕಾಯ್ದೆಯ ನಾಲ್ಕು ಮುಖ್ಯ ಉದ್ದೇಶಗಳನ್ನು ತಿಳಿಸಿರಿ.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶಗಳು :

• ಗ್ರಾಹಕ ಸಂರಕ್ಷಣಾ ಕಾಯ್ದೆಯು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
• ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
• ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.
• ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.

13. ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮುಖ್ಯ ಕಾರ್ಯವೇನು?

ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ಗ್ರಾಹಕರಿಗೆ ದೊರೆಯುವಂತೆ ಮಾಡುವುದು ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮುಖ್ಯ ಕಾರ್ಯ. ಯಾವ ಗ್ರಾಹಕರಿಗೆ ಮಾರಾಟಗಾರರಿಂದ ನಷ್ಟವಾಗಿದೆಯೋ ಅವರಿಂದ ಬಂದ ದೂರುಗಳನ್ನು ಸ್ವೀಕರಿಸಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡುವುದು ಈ ಮಂಡಳಿಯ ಮುಖ್ಯ ಕಾರ್ಯವಾಗಿದೆ.

14. ಮೂರು ಹಂತದ ಗ್ರಾಹಕ ನ್ಯಾಯಾಲಯಗಳನ್ನು ತಿಳಿಸಿರಿ.

i) ಜಿಲ್ಲಾ ಆಯೋಗ : ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಜಿಲ್ಲಾ ಆಯೋಗ ಇರುತ್ತದೆ. ಜಿಲ್ಲಾ ಆಯೋಗದ ನ್ಯಾಯ ಪೀಠಕ್ಕೆ ರಾಜ್ಯ ಸರ್ಕಾರದಿಂದ ನಾಮಾಂಕಿತಗೊಂಡ ಜಿಲ್ಲಾ ನ್ಯಾಯಾಧೀಶರ ಅರ್ಹತೆಯುಳ್ಳ ವ್ಯಕ್ತಿಯು ಅಧ್ಯಕ್ಷರಾಗಿರುತ್ತಾರೆ. ಈ ವೇದಿಕೆಯು ಒಂದು ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ದೂರುಗಳನ್ನು ತೆಗೆದುಕೊಳ್ಳುತ್ii) ರಾಜ್ಯ ಆಯೋಗ : ಈ ಆಯೋಗಕ್ಕೆ ರಾಜ್ಯದ
ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಲೀ ಅಥವಾ ಹಾಲಿ ನ್ಯಾಯಾಧೀಶರಾಗಲಿ
ಅಧ್ಯಕ್ಷರಾಗಿರುತ್ತಾರೆ.  ಈ ಆಯೋಗವು ಒಂದು ಕೋಟಿ
ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಹಾಗೂ ಹತ್ತು ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ
ದೂರುಗಳನ್ನು ತೆಗೆದುಕೊಳ್ಳುತ್ತದೆ.
iii) ರಾಷ್ಟ್ರೀಯ ಆಯೋಗ  :ಈ ಆಯೋಗವು ಕೇಂದ್ರ
ಸರ್ಕಾರದಿಂದ ನೇಮಿಸಲ್ಪಟ್ಟ ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶರ ಅಧ್ಯಕ್ಷತೆಯಿಂದ
ಕೂಡಿರುತ್ತದೆ.  ಆಯೋಗವು
ಹತ್ತು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ದೂರುಗಳನ್ನು ತೆಗೆದುಕೊಂಡು ಇತ್ಯರ್ಥ
ಮಾಡುತ್ತದೆ.

15. ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳಾವುವು?

ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳು
• ದೂರುಗಳು ಕೈಬರಹದ ಅಥವಾ ಬೆರಳಚ್ಚಿನ ಮಾದರಿಯಲ್ಲಿರಬೇಕು.
• ಈ ಮಾಹಿತಿಯಲ್ಲಿ ದೂರುಕೊಡುವವನ ಹೆಸರು, ವಿಳಾಸ ಮತ್ತು ದೂರವಾಣಿಯ
ಸಂಖ್ಯೆ ಸರಿಯಾಗಿ ನಮೂದಿಸಿರಬೇಕು.
• ಯಾವ ವ್ಯಾಪಾರಿ ಅಥವಾ ಪೂರೈಕೆದಾರನ ವಿರುದ್ಧ ದೂರು ಕೊಡಬೇಕೆಂಬುದನ್ನು
ಪೂರ್ಣವಾಗಿ ನಮೂದಿಸಿರಬೇಕು.
• ಯಾವ ವಸ್ತುವಿನಿಂದ ನಷ್ಟವಾಗಿದೆ ಅಥವಾ ಮೋಸವಾಗಿದೆ ಎಂಬುದು ಮತ್ತು ನಷ್ಟ
ಹೊಂದಿರುವ ಮೊಬಲಗೆಷ್ಟೆಂಬುದನ್ನು ಸರಿಯಾಗಿ ನಮೂದಿಸಿರಬೇಕು.
• ನಷ್ಟದ ಸೂಕ್ತ ಪರಿಹಾರದ ಮೊಬಲಗು ಹಾಗೂ ಇದಕ್ಕೆ ಸಂಬಂಧಪಟ್ಟ ರಸೀದಿ ಅಥವ ಬಿಲ್ಲನ್ನು ಲಗತ್ತಿಸಬೇಕು.
• ದೂರಿಗೆ ಯಾವುದೇ ಶುಲ್ಕ ಅಥವಾ ನೋಂದಾವಣಿ ಶುಲ್ಕ ಇರುವುದಿಲ್ಲ.
• ಗ್ರಾಹಕನೇ ನೇರವಾಗಿ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು ವಕೀಲರು ಬೇಕಾಗಿಲ್ಲ.

IV. ಇಲ್ಲಿ ಕೊಟ್ಟಿರುವ ಚಿತ್ರವನ್ನು ಗಮನಿಸಿ ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಪ್ಯಾಕೆಟ್ ಮೇಲೆ ನಮೂದಿಸಿದ ಉತ್ಪಾದನಾ ಸಂಸ್ಥೆಯ ಹೆಸರೇನು?

ಖಜೋತಿ ಫಾರ್ಮಾ

2. ನಮೂದಿಸಿರುವ ಗರಿಷ್ಠ ಮಾರಾಟದ * ಬೆಲೆ ಎಷ್ಟು?

31 ರೂಗಳು

3. ಈ ವಸ್ತುವನ್ನು ತಯಾರಿಸಿದ ದಿನಾಂಕ ಯಾವುದು?

ಫೆಬ್ರವರಿ 2013.

4. ಯಾವ ದಿನಾಂಕದೊಳಗೆ ಇದನ್ನು ಬಳಸಬೇಕು?

ಜನವರಿ 2016

V. ಚಟುವಟಿಕೆಗಳು :

1. ನಿಮ್ಮ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಗ್ರಾಹಕ ವೇದಿಕೆಗೆ ಶಿಕ್ಷಕರೊಂದಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವಿಧಾನಗಳನ್ನು ಗಮನಿಸಿ ಮಾಹಿತಿ ಸಂಗ್ರಹಿಸಿರಿ.

2. ಗ್ರಾಹಕ ಜಾಗೃತಿ ಮೂಡಿಸಬಲ್ಲ ನಾಲ್ಕು ಘೋಷಣೆಗಳನ್ನು ಸಿದ್ಧಪಡಿಸಿರಿ.

ಎಚ್ಚರಗೊಳ್ಳಿ ಗ್ರಾಹಕರೇ ಎಚ್ಚರಗೊಳ್ಳಿ
ಯೋಗ್ಯ ಬೆಲೆ ಉತ್ತಮ ಗುಣಮಟ್ಟ ಗ್ರಾಹಕರ ಹಕ್ಕು
ಬಳಕೆದಾರರೇ ಉತ್ತಮವಾದುದನ್ನು ಬಳಸಿರಿ
ಗ್ರಾಹಕರೇ ಮೋಸ ಹೋಗಬೇಡಿ
ಮೋಸ ಮಾಡುವ ಮಾರಾಟಗಾರರಿಗೆ ಧಿಕ್ಕಾರ

3. ವಿಶ್ವಗ್ರಾಹಕ ದಿನಾಚರಣೆಯಂದು ಜಾಥ ಕೈಗೊಂಡು ಗ್ರಾಹಕ ಜಾಗೃತಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ.

4. ವಿವಿಧ ರೀತಿಯ ರಶೀದಿ(ಬಿಲ್ಲು)ಗಳನ್ನು ಸಂಗ್ರಹಿಸಿರಿ.

VI. ಕಾರ್ಯಯೋಜನೆ :

1. ವಸ್ತುವೊಂದರ ಖರೀದಿಯಲ್ಲಿ ನೀವು ಮೋಸಹೋದ ಒಂದು ಸಂದರ್ಭವನ್ನು ಕಲ್ಪಿಸಿಕೊಂಡು ಜಿಲ್ಲಾ ಗ್ರಾಹಕ ವೇದಿಕೆಗೆ ಸಲ್ಲಿಸುವ ದೂರನ್ನು ಸಿದ್ಧಪಡಿಸಿರಿ. ಸೂಕ್ತ ದಾಖಲೆಗಳನ್ನು ನೀವೇ ಸೃಷ್ಟಿಸಿಕೊಳ್ಳಿರಿ.

Leave a Comment