ಅಧ್ಯಾಯ 28 ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು
8ನೇ ತರಗತಿ ಸಮಾಜ ವಿಜ್ಞಾನ ಭಾಗ 2
ನೋಟ್ಸ್ ಪ್ರಶ್ನೋತ್ತರಗಳು
I ಈ ಪ್ರಶ್ನೆಗಳಿಗೆ ಉತ್ತರಿಸಿ
1. ಅರ್ಥಶಾಸ್ತ್ರದಲ್ಲಿ ಬೇಡಿಕೆ ಎಂಬುದರ ಆರ್ಥವೇನು?
ಬೇಡಿಕೆ ಬಯಕೆಯಲ್ಲಿ ಬಯಕೆಯ ಜೊತೆಗೆ ಕೊಳ್ಳುವ ಮನೋಭಾವ ಮತ್ತು ಹಣವನ್ನು ವೆಚ್ಚ ಮಾಡುವ ಶಕ್ತಿ ಇದ್ದರೆ ಮಾತ್ರ ಬೇಡಿಕೆ ಎನಿಸಿಕೊಳ್ಳುತ್ತದೆ.ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ ಪ್ರಮಾಣವೇ ಬೇಡಿಕೆ.
2. ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆ ಪ್ರಭಾವವೇನು?
ಉತ್ಪಾದನಾ ಕ್ಷೇತ್ರದ ಮೇಲೆ ಬೇಡಿಕೆಯ ಪ್ರಭಾವ ಅತಿ ಹೆಚ್ಚು. ಬೇಡಿಕೆ ಹೆಚ್ಚಾದಾಗ ಸಾಮಾನ್ಯವಾಗಿ ಉತ್ಪಾದನೆ, ಉದ್ಯೋಗ, ವರಮಾನ ಹಾಗೂ ಪೂರೈಕೆ ಅಧಿಕಗೊಳ್ಳುತ್ತದೆ.
ಬೇಡಿಕೆ ಕಡಿಮೆಯಾದಾಗ ಸಾಮಾನ್ಯವಾಗಿ ಉತ್ಪಾದನೆ ವರಮಾನ ಹಾಗೂ ಪೂರೈಕೆ ಇಳಿಯುತ್ತದೆ. ನಿರುದ್ಯೋಗ ಹೆಚ್ಚುತ್ತದೆ.
3. ವಿತರಣೆ ಎಂದರೇನು?
ವಿತರಣೆ ಒಂದು ಪ್ರಮುಖ ಆರ್ಥಿಕ ಚಟುವಟಿಕೆ. ಉತ್ಪಾದನಾ ಕಾರ್ಯ ದ ಪರಿಣಾಮವಾದ ರಾಷ್ಟ್ರೀಯ ವರಮಾನವನ್ನು ಉತ್ಪಾದನಾಂಗಗಳ ನಡುವೆ ಹಂಚುವಂತ ಮಹತ್ವದ ಕಾರ್ಯವೇ ವಿತರಣೆ.
4. ವಿತರಣೆ ಸಮರ್ಪಕ ರೀತಿಯಲ್ಲಿ ಮಾಡುವ ಬಗೆ ಹೇಗೆ?
ಆಯಾ ಉತ್ಪಾದನಾಂಗದ ಪಾತ್ರದ ಪ್ರಮಾಣ ಅನುಸಾರವಾಗಿ ವಿತರಣೆ ಮಾಡಬೇಕು. ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಕಾಪಾಡಿಕೊಂಡು ಬರುವಂತಿರಬೇಕು. ಉತ್ಪಾದನಾ ಕಾರ್ಯಕ್ಕೆ ಅಡ್ಡಿ-ಆತಂಕಗಳು ಉಂಟಾಗದಂತೆ ಇರಬೇಕು. ಯಾವ ಉತ್ಪಾದನಾ ಅಂಗಕ್ಕೂ ಪ್ರಾಶಸ್ಯವೂ ಇರಬಾರದು. ನಿರ್ಲಕ್ಷವೂ ಇರಬಾರದು . ಇದು ಆರ್ಥಿಕ ವ್ಯವಸ್ಥೆಯ ಸಮತೋಲನದ ಬೆಳವಣಿಗೆಗೆ ಅಗತ್ಯ.
5. ರಾಷ್ಟ್ರೀಯ ವರಮಾನ ಮತ್ತು ತಲಾ ವರಮಾನದ ವ್ಯತ್ಯಾಸಗಳನ್ನು ತಿಳಿಸಿ.
ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.
ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ. ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
ತಲಾ ಆದಾಯ = ರಾಷ್ಟೀಯ ಆದಾಯ / ಒಟ್ಟು ಜನಸಂಖ್ಯೆ
6. ಶ್ರಮದ ಮಹತ್ವವೇನು?
*ಶ್ರಮವು ಮುಖ್ಯವಾದ ಅತ್ಯವಶ್ಯಕವಾದ ಉತ್ಪಾದನಾಂಗವಾಗಿದೆ.
*ಭೂಮಿ ಮತ್ತು ಬಂಡವಾಳದ ಜೊತೆಗೆ ಮುಖ್ಯವಾದ ಉತ್ಪಾದನಾಂಗವಾಗಿದೆ.
*ಶ್ರಮದ ಸಹಾಯವಿಲ್ಲದೇ ಯಾವುದೇ ವಸ್ತುವನ್ನು ಉತ್ಪಾದಿಸಲು ಸಾಧ್ಯವಿಲ್ಲ.
*ಶ್ರಮವು ಉತ್ಪನ್ನಕಾರಕ ಅಂಶವಾಗಿದೆ.
*ಇತರೆ ಉತ್ಪಾದನಾಂಗಗಳನ್ನು ಚುರುಕುಗೊಳಿಸುತ್ತದೆ.
*ಉತ್ಪಾದನಾಂಗಗಳನ್ನು ಉತ್ಪಾದನಾ ಉದ್ದೇಶಗಳಿಗಾಗಿ ಉಪಯೋಗಗಕಾರಿಗಳನ್ನಾಗಿ ಮಾಡುತ್ತದೆ.
II ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ
7. ಬೇಡಿಕೆ ಹೆಚ್ಚಾದಾಗ ಉತ್ಪಾದನೆ ಅಧಿಕಗೊಳ್ಳುತ್ತದೆ
8. ಸರಕು ಸೇವೆಗಳನ್ನು ಬಯಕೆಯ ತೃಪ್ತಿಗಾಗಿ ಉಪಯೋಗಿಸುವುದು ಅನುಭೋಗ
9. ಒಂದು ರಾಷ್ಟ್ರದ ಆದಾಯವನ್ನು ರಾಷ್ಟ್ರದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಲಭಿಸುವುದೇ ತಲಾ ವರಮಾನ.
10, ಲಾರಿಗಳಿಂದ ಸರಕುಗಳನ್ನು ಇಳಿಸುವ ಕೆಲಸದಲ್ಲಿ ತೊಡಗಿರುವವರು ಬರುವ ಶ್ರಮ ವಿಭಾಗ ದೈಹಿಕ ಶ್ರಮ.
11. ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರು ಈ ಶ್ರಮಕ್ಕೆ ಉದಾಹರಣೆ ಮಾನಸಿಕಶ್ರಮ.

7. ಬೇಡಿಕೆ ಹೆಚ್ಚಾದಾಗ ಉತ್ಪಾದನೆ ಅಧಿಕಗೊಳ್ಳುತ್ತದೆ .