ಶಿವಮೊಗ್ಗ ಮಂಡಗದ್ದೆ ಉರ್ದು ಶಾಲೆಯಲ್ಲಿ ಮಕ್ಕಳಿಂದ ಹಂಚು ನ ಮೇಲಿನ ಕಸ ಗುಡಿಸುವಿಕೆ

ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಯಲ್ಲಿ ಇರುವ ಉರ್ದು ಶಾಲೆಯ ಶಿಕ್ಷಕ ಎರಡನೇ ತರಗತಿ ಮಗುವಿನಿಂದ ಶಾಲೆ ಮೇಲೆ ಹತ್ತಿಸಿ ಹಂಚು ಹಂಚಿನ ಕಸಗುಡಿಸಿದ್ದಾನೆ.

ಇದನ್ನು ಗಮನಿಸಿದ ಅಲ್ಲಿನ ಒಬ್ಬ ನಾಗರಿಕ ಪ್ರಜೆ ಶಹರುಖ್ ಎನ್ನುವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ

. ಹಂಚುಗಳ ಮೇಲೆ ನಡೆದು ಕಸಗೂಡಿಸಿದ ಶಾಲಾ ಮಕ್ಕಳು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಶಾಲೆಯಲ್ಲಿ ಘಟನೆ ನಡೆದಿದೆ ಏನಾದರೂ ಆದರೆ ಯಾರು ಹೊಣೆ ಎಂದು ಸ್ಥಳೀಯರ ಆಕ್ರೋಶ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಬಾರದು ಎಂದಿದ್ದ ಸರ್ಕಾರ ಶಿಕ್ಷಣ ಸಚಿವರ ಆದೇಶಕ್ಕೂ ಬಗ್ಗದ ಶಿವಮೊಗ್ಗ ಶಾಲಾ ಶಿಕ್ಷಕರು.

ಇತ್ತೀಚೆಗೆ ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದ ವಿದ್ಯಾರ್ಥಿಗಳ ಶಾಲೆಯಲ್ಲಿ ಕೆಲವು ಶಿಕ್ಷಕರನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ.

ಆದರೆ ಶಾಲೆಯ ಶಿಕ್ಷಕರು ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಬಿಡುತ್ತಿಲ್ಲ. ಶಾಲೆಗೆ ಬರುವ ಮಕ್ಕಳನ್ನು ತಮ್ಮ ಕೆಲಸದ ಆಳುಗಳಾಗಿ ಮಾಡಿಕೊಂಡಿದ್ದಾರೆ.

ಶಾಲೆಯಲ್ಲಿ ಇವರು ಊಟ ಮಾಡಿದ ತಟ್ಟೆ ಪಾತ್ರಗಳನ್ನು ತೊಳಿಸುವುದು ಶೌಚಾಲಯಗಳಿಗೆ ನೀರು ಹಾಕಿಸುವುದು ಶೌಚಾಲಯ ತೊಳಿಸುವುದು ಹಂಚು ಹತ್ತಿಸಿ ಕೆಲಸ ಮಾಡಿಸುವುದು ಇಷ್ಟೆಲ್ಲ ಕೆಲಸಗಳು ಆಗುತ್ತಿವೆ ಎಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಹರೂಕ್ ಎನ್ನುವ ನಾಗರಿಕ ಪ್ರಜೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 

ಶಾಲೆಯ ಶಿಕ್ಷಕರು ಶಾಲೆಗೆ ಬಂದ ಮಕ್ಕಳ ಮಕ್ಕಳಿಗೆ ಶಿಕ್ಷಣ ಕೊಡದೆ ಅವರನ್ನು ದುಡಿಸಿಕೊಳ್ಳುವಲ್ಲಿ ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿಯೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದಾರೆ ಎಂಬ ದೂರಿದೆ.

Leave a Comment