1 . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
1. ಗ್ರಾಹಕನಿಗಿರುವ ಮತ್ತೊಂದು ಹೆಸರು -ಬಳಕೆದಾರ
2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ
3. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಮಾರ್ಚ್ 15 ರಂದು ಆಚರಿಸುತ್ತೇವೆ.
4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ ಆಯೋಗಕ್ಕೆ ಸಲ್ಲಿಸಬೇಕು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
5. ಗ್ರಾಹಕ ಎಂದರೆ ಯಾರು?
ಗ್ರಾಹಕರೆಂದರೆ ವಸ್ತುಗಳನ್ನು ಕೊಳ್ಳುವವರು ಅಥವಾ ಸೇವೆಗಳನ್ನು ಬೆಲೆಯ ರೂಪದಲ್ಲಿ ಹಣ
ಅಥವಾ ವೇತನ ಪ್ರತಿಫಲ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಾಗಿದ್ದಾರೆ ಅಥವಾ ಪದಾರ್ಥಗಳನ್ನು
ಬಳಸಿಕೊಳ್ಳುವವರಾಗಿದ್ದಾರೆ.
6. ಗ್ರಾಹಕ ಆಂದೋಲನದ ಮೂಲ ಆಶಯ ಯಾವುದು?
ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ಮುಕ್ತಿಗೊಳಿಸುವುದು.
7. ಪ್ರತಿಯೊಬ್ಬ ಗ್ರಾಹಕನಿಗಿರುವ ಹಕ್ಕು ಯಾವುದು?
ಸರಿಯಾದ ಬೆಲೆಗೆ ಉತ್ತಮ ಗುಣಮಟ್ಟ ಹಾಗೂ ವಿಶ್ವಾಸಾರ್ಹ ವಸ್ತು ಅಥವಾ ಸೇವೆಯನ್ನ ಪಡೆಯುವುದು ಗ್ರಾಹಕರ ಹಕ್ಕು.
8. ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂತು?
ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986ರಲ್ಲಿ ಜಾರಿಗೆ ಬಂತು.
9. ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ಯಾರು ನೇಮಿಸುತ್ತಾರೆ?
ಜಿಲ್ಲಾ ಗ್ರಾಹಕ ನ್ಯಾಯಪೀಠದ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಿಸುತ್ತದೆ.
III ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.
10. ಗ್ರಾಹಕರು ಅನುಭವಿಸುತ್ತಿರುವ ಸಂಕಷ್ಟಗಳೇನು?
ಅನೇಕ ಸಂದರ್ಭಗಳಲ್ಲಿ ಮಾರಾಟಗಾರರು ಗ್ರಾಹಕರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅವರನ್ನು ಶೋಷಿಸುತ್ತಾರೆ ಹಾಗೂ ಮೋಸಗೊಳಿಸುತ್ತಾರೆ.ಉತ್ಪಾದಕರು ಹಾಗೂ ಗ್ರಾಹಕರು ಕೂಡಿ ನಿರ್ಧರಿಸಬೇಕಾದ ಬೆಲೆಯನ್ನು ಮಧ್ಯವರ್ತಿಗಳೇ ನಿರ್ಧರಿಸತೊಡಗುತ್ತಾರೆ. ಇದರಿಂದ ಗ್ರಾಹಕರಿಗೆ ಕಷ್ಟ, ನಷ್ಟ ಮತ್ತು ಸಮಸ್ಯೆಗಳು ಉಂಟಾಗುತ್ತವೆ.
11. ಬಳಕೆದಾರರ ಶೋಷಣೆಗೆ ಕಾರಣಗಳಾವುವು?
ಬೇಸಾಯದ ಉದ್ಯಮ ಹಲವು ರೀತಿಗಳಲ್ಲಿ ಬೆಳೆದಂತೆ ಮಾರಾಟ ವಿಧಾನವು ಬದಲಾಯಿತು. ಗ್ರಾಹಕ ಮತ್ತು ಪೂರೈಕೆದಾರರ ನಡುವಿನ ಅಂತರ ಹೆಚ್ಚಾಗಿ ಇವರಿಬ್ಬರ ನಡುವೆ ನೇರ ವ್ಯವಹಾರ ಇಲ್ಲವಾಯಿತು. ಉತ್ಪಾದಕರು ಹಾಗೂ ಗ್ರಾಹಕರು ಕೂಡಿ ನಿರ್ಧರಿಸಬೇಕಾದ ಬೆಲೆಯನ್ನು ಮಧ್ಯವರ್ತಿಗಳೇ ನಿರ್ಧರಿಸತೊಡಗಿದರು. ಇದರಿಂದ ಗ್ರಾಹಕರಿಗೆ ಕಷ್ಟ, ನಷ್ಟ ಮತ್ತು ಸಮಸ್ಯೆಗಳಾದವು.
12. ಗ್ರಾಹಕ ಸಂರಕ್ಷಣಾ ಕಾಯ್ದೆಯ ನಾಲ್ಕು ಮುಖ್ಯ ಉದ್ದೇಶಗಳನ್ನು ತಿಳಿಸಿರಿ.
ಗ್ರಾಹಕ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶಗಳು :
• ಗ್ರಾಹಕ ಸಂರಕ್ಷಣಾ ಕಾಯ್ದೆಯು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
• ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
• ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ಧತಿಗಳನ್ನು ತಡೆಗಟ್ಟುವುದು.
• ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.
13. ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮುಖ್ಯ ಕಾರ್ಯವೇನು?
ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ಗ್ರಾಹಕರಿಗೆ ದೊರೆಯುವಂತೆ ಮಾಡುವುದು ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮುಖ್ಯ ಕಾರ್ಯ. ಯಾವ ಗ್ರಾಹಕರಿಗೆ ಮಾರಾಟಗಾರರಿಂದ ನಷ್ಟವಾಗಿದೆಯೋ ಅವರಿಂದ ಬಂದ ದೂರುಗಳನ್ನು ಸ್ವೀಕರಿಸಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡುವುದು ಈ ಮಂಡಳಿಯ ಮುಖ್ಯ ಕಾರ್ಯವಾಗಿದೆ.
14. ಮೂರು ಹಂತದ ಗ್ರಾಹಕ ನ್ಯಾಯಾಲಯಗಳನ್ನು ತಿಳಿಸಿರಿ.
i) ಜಿಲ್ಲಾ ಆಯೋಗ : ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಜಿಲ್ಲಾ ಆಯೋಗ ಇರುತ್ತದೆ. ಜಿಲ್ಲಾ ಆಯೋಗದ ನ್ಯಾಯ ಪೀಠಕ್ಕೆ ರಾಜ್ಯ ಸರ್ಕಾರದಿಂದ ನಾಮಾಂಕಿತಗೊಂಡ ಜಿಲ್ಲಾ ನ್ಯಾಯಾಧೀಶರ ಅರ್ಹತೆಯುಳ್ಳ ವ್ಯಕ್ತಿಯು ಅಧ್ಯಕ್ಷರಾಗಿರುತ್ತಾರೆ. ಈ ವೇದಿಕೆಯು ಒಂದು ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ದೂರುಗಳನ್ನು ತೆಗೆದುಕೊಳ್ಳುತ್ತದೆ.
ii) ರಾಜ್ಯ ಆಯೋಗ : ಈ ಆಯೋಗಕ್ಕೆ ರಾಜ್ಯದ
ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಲೀ ಅಥವಾ ಹಾಲಿ ನ್ಯಾಯಾಧೀಶರಾಗಲಿ
ಅಧ್ಯಕ್ಷರಾಗಿರುತ್ತಾರೆ. ಈ ಆಯೋಗವು ಒಂದು ಕೋಟಿ
ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಹಾಗೂ ಹತ್ತು ಕೋಟಿ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ
ದೂರುಗಳನ್ನು ತೆಗೆದುಕೊಳ್ಳುತ್ತದೆ.
iii) ರಾಷ್ಟ್ರೀಯ ಆಯೋಗ : ಈ ಆಯೋಗವು ಕೇಂದ್ರ
ಸರ್ಕಾರದಿಂದ ನೇಮಿಸಲ್ಪಟ್ಟ ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶರ ಅಧ್ಯಕ್ಷತೆಯಿಂದ
ಕೂಡಿರುತ್ತದೆ. ಆಯೋಗವು
ಹತ್ತು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ದೂರುಗಳನ್ನು ತೆಗೆದುಕೊಂಡು ಇತ್ಯರ್ಥ
ಮಾಡುತ್ತದೆ.
15. ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳಾವುವು?
ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳು
• ದೂರುಗಳು ಕೈಬರಹದ ಅಥವಾ ಬೆರಳಚ್ಚಿನ ಮಾದರಿಯಲ್ಲಿರಬೇಕು.
• ಈ ಮಾಹಿತಿಯಲ್ಲಿ ದೂರುಕೊಡುವವನ ಹೆಸರು, ವಿಳಾಸ ಮತ್ತು ದೂರವಾಣಿಯ
ಸಂಖ್ಯೆ ಸರಿಯಾಗಿ ನಮೂದಿಸಿರಬೇಕು.
• ಯಾವ ವ್ಯಾಪಾರಿ ಅಥವಾ ಪೂರೈಕೆದಾರನ ವಿರುದ್ಧ ದೂರು ಕೊಡಬೇಕೆಂಬುದನ್ನು
ಪೂರ್ಣವಾಗಿ ನಮೂದಿಸಿರಬೇಕು.
• ಯಾವ ವಸ್ತುವಿನಿಂದ ನಷ್ಟವಾಗಿದೆ ಅಥವಾ ಮೋಸವಾಗಿದೆ ಎಂಬುದು ಮತ್ತು ನಷ್ಟ
ಹೊಂದಿರುವ ಮೊಬಲಗೆಷ್ಟೆಂಬುದನ್ನು ಸರಿಯಾಗಿ ನಮೂದಿಸಿರಬೇಕು.
• ನಷ್ಟದ ಸೂಕ್ತ ಪರಿಹಾರದ ಮೊಬಲಗು ಹಾಗೂ ಇದಕ್ಕೆ ಸಂಬಂಧಪಟ್ಟ ರಸೀದಿ ಅಥವ ಬಿಲ್ಲನ್ನು ಲಗತ್ತಿಸಬೇಕು.
• ದೂರಿಗೆ ಯಾವುದೇ ಶುಲ್ಕ ಅಥವಾ ನೋಂದಾವಣಿ ಶುಲ್ಕ ಇರುವುದಿಲ್ಲ.
• ಗ್ರಾಹಕನೇ ನೇರವಾಗಿ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು ವಕೀಲರು ಬೇಕಾಗಿಲ್ಲ.
IV. ಇಲ್ಲಿ ಕೊಟ್ಟಿರುವ ಚಿತ್ರವನ್ನು ಗಮನಿಸಿ ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಪ್ಯಾಕೆಟ್ ಮೇಲೆ ನಮೂದಿಸಿದ ಉತ್ಪಾದನಾ ಸಂಸ್ಥೆಯ ಹೆಸರೇನು?
ಖಜೋತಿ ಫಾರ್ಮಾ
2. ನಮೂದಿಸಿರುವ ಗರಿಷ್ಠ ಮಾರಾಟದ * ಬೆಲೆ ಎಷ್ಟು?
31 ರೂಗಳು
3. ಈ ವಸ್ತುವನ್ನು ತಯಾರಿಸಿದ ದಿನಾಂಕ ಯಾವುದು?
ಫೆಬ್ರವರಿ 2013.
4. ಯಾವ ದಿನಾಂಕದೊಳಗೆ ಇದನ್ನು ಬಳಸಬೇಕು?
ಜನವರಿ 2016
V. ಚಟುವಟಿಕೆಗಳು :
1. ನಿಮ್ಮ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಗ್ರಾಹಕ ವೇದಿಕೆಗೆ ಶಿಕ್ಷಕರೊಂದಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವಿಧಾನಗಳನ್ನು ಗಮನಿಸಿ ಮಾಹಿತಿ ಸಂಗ್ರಹಿಸಿರಿ.
2. ಗ್ರಾಹಕ ಜಾಗೃತಿ ಮೂಡಿಸಬಲ್ಲ ನಾಲ್ಕು ಘೋಷಣೆಗಳನ್ನು ಸಿದ್ಧಪಡಿಸಿರಿ.
ಎಚ್ಚರಗೊಳ್ಳಿ ಗ್ರಾಹಕರೇ ಎಚ್ಚರಗೊಳ್ಳಿ
ಯೋಗ್ಯ ಬೆಲೆ ಉತ್ತಮ ಗುಣಮಟ್ಟ ಗ್ರಾಹಕರ ಹಕ್ಕು
ಬಳಕೆದಾರರೇ ಉತ್ತಮವಾದುದನ್ನು ಬಳಸಿರಿ
ಗ್ರಾಹಕರೇ ಮೋಸ ಹೋಗಬೇಡಿ
ಮೋಸ ಮಾಡುವ ಮಾರಾಟಗಾರರಿಗೆ ಧಿಕ್ಕಾರ
3. ವಿಶ್ವಗ್ರಾಹಕ ದಿನಾಚರಣೆಯಂದು ಜಾಥ ಕೈಗೊಂಡು ಗ್ರಾಹಕ ಜಾಗೃತಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ.
4. ವಿವಿಧ ರೀತಿಯ ರಶೀದಿ(ಬಿಲ್ಲು)ಗಳನ್ನು ಸಂಗ್ರಹಿಸಿರಿ.
VI. ಕಾರ್ಯಯೋಜನೆ :
1. ವಸ್ತುವೊಂದರ ಖರೀದಿಯಲ್ಲಿ ನೀವು ಮೋಸಹೋದ ಒಂದು ಸಂದರ್ಭವನ್ನು ಕಲ್ಪಿಸಿಕೊಂಡು ಜಿಲ್ಲಾ ಗ್ರಾಹಕ ವೇದಿಕೆಗೆ ಸಲ್ಲಿಸುವ ದೂರನ್ನು ಸಿದ್ಧಪಡಿಸಿರಿ. ಸೂಕ್ತ ದಾಖಲೆಗಳನ್ನು ನೀವೇ ಸೃಷ್ಟಿಸಿಕೊಳ್ಳಿರಿ.