8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ಪ್ರಶ್ನೆ ಉತ್ತರಗಳು, 8th standard social science part 2 notes in Kannada,

ಅಧ್ಯಾಯ 16

ಮೌರ್ಯರು ಮತ್ತು  ಕುಶಾಣರು

8ನೇ ತರಗತಿ ಸಮಾಜ ವಿಜ್ಞಾನ ಭಾಗ 2

1 ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ,

1 ಚಾಣಕ್ಯನು ವಿಷ್ಣುಗುಪ್ತ ಎಂದು ಪ್ರಖ್ಯಾತನಾದವನು.

2 ಮೌರ್ಯರ ರಾಜಧಾನಿಪಾಟಲಿಪುತ್ರ

3 ಕುಶಾಣ ರಾಜ ಮನೆತನದ ಸಂಸ್ಥಾಪಕ ಕುಜಲಕಡ್ ಫೀಸಸ್.

4 ಕನಿಷ್ಠನ ರಾಜಾಳ್ವಿಕೆಯ ಹೊಸ ಯುಗವನ್ನು ಶಕ ಯುಗ ಎಂದು ಕರೆಯುತ್ತಾರೆ?

|| ಸಂಕ್ಷಿಪ್ತವಾಗಿ ಉತ್ತರಿಸಿ.

5 ಆಶೋಕನ ಕಾಲದ ಪ್ರಮುಖ ನಗರಗಳನ್ನು ಹೆಸರಿಸಿ.
ಅಶೋಕನ ಕಾಲದ ಪ್ರಮುಖ ನಗರಗಳು ಯಾವುವು ಎಂದರೆ, ಪಾಟಲಿಪುತ್ರ ,ತಕ್ಷಶಿಲ,ಉಜ್ಜಯಿನಿ,ಕಳಿಂಗ, ಸುವರ್ಣ ಗಿರಿ.

6. ಆಶೋಕನ ಆಡಳಿತದ ಬಗ್ಗೆ ವಿವರಣೆ ಕೊಡಿರಿ.
ವಿವಿಧ ಕೇಂದ್ರಗಳಿಂದ ವಿಶಾಲವಾದ ಭೂ ಪ್ರದೇಶದ ಆಡಳಿತವನ್ನು ಅಶೋಕನು ನಡೆಸಿದನು.  ಅವನ ಆಶೋತ್ತರಗಳನ್ನು ಶಾಸನಗಳ ಮೂಲಕ ವ್ಯಕ್ತಪಡಿಸಲಾಯಿತು.
ಅಶೋಕ ಮಹಾರಾಜನು ಕಳಿಂಗ ಯುದ್ಧದ ನಂತರ ಆದ ಪ್ರಾಣಹಾನಿಯಿಂದ ಬದಲಾದನು. ಬುದ್ಧನು ಬೋಧಿಸಿದ ‘ದಯೆ’ ಇವನನ್ನು ಪ್ರಭಾವಿಸಿತು. ನಂತರ ಅವನು ಬುದ್ಧನ ವಿಚಾರಗಳನ್ನು ದೇಶಾದ್ಯಂತ ಸಾರಿದನು. ಈ ಕಾರ್ಯಕ್ಕಾಗಿಯೇ ಧರ್ಮ ಮಹಾಮಾತ್ರರನ್ನು ನೇಮಿಸಿದನು.
ಕೃಷಿಯನ್ನು ಹೆಚ್ಚಿಸಲು ಅಶೋಕನ ಸರಕಾರ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿಶೇಷ ತೆರಿಗೆ ವಿನಾಯಿತಿಗಳನ್ನು ಈ ಹಿನ್ನೆಲೆಯಲ್ಲಿ ನೀಡಲಾಗಿತ್ತು. ವಿಶಾಲ ಭೂ ಪ್ರದೇಶದ ಆಳ್ವಿಕೆಯನ್ನು ನಡೆಸಲು ವಿವಿಧ ಅಧಿಕಾರಿಗಳಿದ್ದರು. ಶಾಶ್ವತ ಸೈನ್ಯದ ಅಗತ್ಯವೂ ಅವರಿಗಿತ್ತು. ಇವೆಲ್ಲವನ್ನು ನೆರವೇರಿಸಲು ತೆರಿಗೆ ಬೇಕಾಗಿತ್ತು. ಇದೇ ಅಲ್ಲದೆ ಭೂ ಕಂದಾಯವು ಸಹ ರಾಜನ ಮೂಲ ಆದಾಯವಾಗಿತ್ತು. ಇವುಗಳ ಸಂಗ್ರಹಣೆಯಲ್ಲಿಯು ವಿವಿಧ ಅಧಿಕಾರಿಗಳು ಶ್ರಮಿಸುತ್ತಿದ್ದರು. ಗೂಢಚಾರರು ಮಾಹಿತಿಗಳನ್ನು ರಾಜನಿಗೆ ತಿಳಿಸುತ್ತಿದ್ದರು. ನದಿ ಹಾಗೂ ಭೂ ಹಾದಿಗಳನ್ನು ನಿಯಂತ್ರಿಸುವ ಮೂಲಕ ವ್ಯಾಪಾರ ಹಾಗೂ ವಾಣಿಜ್ಯದ ಮೇಲೆ ಹತೋಟಿಯನ್ನು ಹೊಂದಿದ್ದರು. ಇವುಗಳ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸಲಾಗಿತ್ತು.

7 ಕುಶಾಣರು ಯಾವ ಸಂತತಿಗೆ ಸೇರಿದವರು ?

ಉತ್ತರ
ಕುಶಾಣರು ಯುಚಿ ಸಂತತಿಗೆ ಸೇರಿದವರು.

8 ಕನಿಷ್ಕನ ಸಾಮ್ರಾಜ್ಯದ ವಿಸ್ತರಣೆ’ ಎಲ್ಲಿಯವರೆಗೆ ಹರಡಿತ್ತು?

ಭಾರತದಲ್ಲಿ ಕನಿಷ್ಕನ ಆಳ್ವಿಕೆಯ ವ್ಯಾಪ್ತಿಯು ದಕ್ಷಿಣದ ಸಾಂಚಿ ಹಾಗೂ ಪೂರ್ವದ ಬನಾರಸ್ಸಿನವರೆಗೆ ಹರಡಿತ್ತು. ಮಧ್ಯ ಏಷ್ಯಾವನ್ನು ಒಳಗೊಂಡ ಇವನ ಆಳ್ವಿಕೆಯು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿತ್ತು. ಪುರುಷಪುರವು ಕನಿಷ್ಕನ ರಾಜಧಾನಿ.

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ-2

ಅಧ್ಯಾಯ 17

ಗುಪ್ತರು ಮತ್ತು ವರ್ಧನರು

ಅಭ್ಯಾಸಗಳು

| ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

| ಗುಪ್ತರು ತಮ್ಮ ನೆಲೆಯನ್ನು ಮಗಧ ಪ್ರದೇಶದಿಂದ ಕಂಡುಕೊಂಡರು.

2 ಮೊದಲನೆಯ ಚಂದ್ರಗುಪ್ತನು ಮಹಾರಾಜಾಧಿರಾಜ ಎಂದು ಕರೆಸಿಕೊಂಡನು.

3 ಕಾಳಿದಾಸನ ಅಭಿಜ್ಞಾನ ಶಾಕುಂತಲ ಶ್ರೇಷ್ಠ ನಾಟಕಗಳಲ್ಲಿ ಒಂದು.

4. ವಿಶಾಖದತ್ತನ ಕೃತಿ ಮುದ್ರಾ ರಾಕ್ಷಸ.

5. ಶೂದ್ರಕನು ಬರೆದ ಕೃತಿ ಮೃಚ್ಛಕಟಿಕ.

6 ವರ್ಧನ ವಂಶದ ಸ್ಥಾಪಕ ಪುಷ್ಯಭೂತಿ.

|| ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

7) ಎರಡನೆ ಚಂದ್ರಗುಪ್ತನ ಬಗ್ಗೆ ವಿವರಿಸಿ.
ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೆ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು. ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು ಗುಪ್ತರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಭಾರತದ ಅನೇಕ ರಾಜ ಮನೆತನಗಳೊಂದಿಗೆ ಈತನು ಮದುವೆ ಮೂಲಕ ಸಂಬಂಧವನ್ನು ಬೆಳೆಸಿ ಪ್ರಭಾವಿಯಾಗಿ ವಿಕ್ರಮಾದಿತ್ಯನೆಂಬ ಬಿರುದನ್ನು ಪಡೆದನು. ಇವನ ಕಾಲದಲ್ಲಿ ಯುದ್ಧಗಳಿಗಿಂತ ಸಾಹಿತ್ಯ ಹಾಗೂ ಕಲೆಗೆ ನೀಡಿದ ಪೋಷಣೆಯು ಸ್ಮರಣೀಯವಾಗಿದೆ. ಸುಪ್ರಸಿದ್ಧ ಸಂಸ್ಕೃತ ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೇ ಕಾಲಕ್ಕೆ ಸೇರಿದವನು. ಈತನು ಮೇಘದೂತ ಹಾಗೂ ಋತಸಂಹಾರಗಳೆಂಬ ಖಂಡಕಾವ್ಯಗಳನ್ನೂ ರಘುವಂಶ ಮತ್ತು ಕುಮಾರಸಂಭವ ಎಂಬ ಮಹಾಕಾವ್ಯಗಳನ್ನು ಬರೆದಿದ್ದಾನೆ. ಅಭಿಜ್ಞಾನ ಶಾಕುಂತಲವು ಅವನ ಶ್ರೇಷ್ಠ ನಾಟಕಗಳಲ್ಲಿ ಒಂದು. ಶೂದ್ರಕನ ಮೃಚ್ಛಕಟಿಕ ಹಾಗೂ ವಿಶಾಕದತ್ತನ ಮುದ್ರಾರಾಕ್ಷಸ ಈ ಕಾಲದ ಇತರ ಕೃತಿಗಳು.

8. ಗುಪ್ತರ ಸಾಮ್ರಾಜ್ಯದ ಪತನಕ್ಕೆ ಕಾರಣಗಳೇನು ?
ಹೂಣರ ದಾಳಿಗೆ ನಿರಂತರವಾಗಿ ಒಳಗಾಗಿ ಗುಪ್ತರ ಸಾಮ್ರಾಜ್ಯವು ಪತನ ಕಂಡಿತು. ಗುಪ್ತರು ಬೃಹತ್‌ ಸುಸಜ್ಜಿತ ಸೇನೆಯನ್ನೇನು ಹೊಂದಿರಲಿಲ್ಲ. ಸಾಮಂತರು, ಅಮಾತ್ಯರು, ಪುರೋಹಿತರು ತಮಗೆ ನೀಡಿದ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ರಾಜ್ಯಕ್ಕೆ ದ್ರೋಹ ಬಗೆದರು. ಅವರ ಕೈ ಕೆಳಗೆ ಇದ್ದ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಘೋಷಿಸಿಕೊಂಡರು. ಆಡಳಿತವು ವಿಕೇಂದ್ರೀಕೃತಗೊಂಡಿತ್ತು.  ಕ್ರಮೇಣವಾಗಿ ಆ ಪ್ರದೇಶದ ನಿವಾಸಿಗಳು, ಕೃಷಿಕರು, ಕುಶಲಕರ್ಮಿಗಳು,ಭೂಮಾಲೀಕರ ಕಟ್ಟುಪಾಡಿಗೆ ಅಧೀನರಾದರು. ಹೀಗೆ ಸಮಾಜವು ಸಂಕೀರ್ಣ ಹಾದಿಯತ್ತ ಸಾಗಿತ್ತು.

ಈ ಕಾಲದಲ್ಲಿ ಪಾಶ್ಚಾತ್ಯರೊಂದಿಗೆ ಗುಪ್ತರಿಗಿದ್ದ ವ್ಯಾಪಾರ ಕುಸಿಯಿತು. ಇದರಿಂದಾಗಿ ಗುಪ್ತರ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿತು. ಸಾಮ್ರಾಜ್ಯದ ಮೇಲೆ ಹೇರಲಾದ ನಿರ್ಬಂಧಗಳು ಆಂತರಿಕ ವ್ಯಾಪಾರವನ್ನು ಸಹ ಸ್ಥಗಿತಗೊಳಿಸಿತು. ವ್ಯಾಪಾರವು ಈಗ ಗ್ರಾಮಗಳಿಗೆ ಸೀಮಿತಗೊಂಡಿತು. ವ್ಯಾಪಾರಗಳಲ್ಲಿ ಕಂಡ ಕುಸಿತವು ನಗರಕೇಂದ್ರಗಳ ಅವನತಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಪಾಟಲೀಪುತ್ರವು ಕೇವಲ ಒಂದು ಗ್ರಾಮವಾಗಿ ಬದಲಾಯಿತು.

9. ಗುಪ್ತರ ಕಾಲದ ಶ್ರೇಷ್ಠ ವಿಜ್ಞಾನಿಗಳನ್ನು ಹೆಸರಿಸಿ.

ವರಾಹಮಿಹಿರ, ಭಾಸ್ಕರ- ಆರ್ಯಭಟ, ಚರಕ ಹಾಗೂ ಸುಶ್ರುತ ಗುಪ್ತರ ಕಾಲದ ಶ್ರೇಷ್ಠ ವಿಜ್ಞಾನಿಗಳು,

10 ವರ್ಧನರ ಆಡಳಿತವು ಯಾವ ರೀತಿ ನಡೆಯುತ್ತಿತ್ತು ?

ರಾಜನ ಆಳ್ವಿಕೆಯಲ್ಲಿ ಮಂತ್ರಿಮಂಡಲವು ಸಹಕರಿಸುತ್ತಿತ್ತು. ಮಹಾಸಂಧಿವಿಗ್ರಹ (ಅನುಸಂಧಾನಗಳನ್ನು ಮಾಡುವವ), ಮಹಾಬಲಾಧಿಕೃತ (ಮಹಾಸೇನಾಪತಿ), ಭೋಗಪತಿ (ಕಂದಾಯ ಅಧಿಕಾರಿ), ದೂತ ಮುಂತಾದವರಿಂದ ಅಧಿಕಾರ ವರ್ಗವು ಕೂಡಿತ್ತು. ರಾಜ್ಯವು ಪ್ರಾಂತ್ಯಗಳಾಗಿ ವಿಂಗಡಿಸಲ್ಪಟ್ಟಿತ್ತು.

ಭೂಕಂದಾಯವೇ ರಾಜ್ಯದ ಮುಖ್ಯ ಆದಾಯವಾಗಿತ್ತು. ಸಾಮಂತ ರಾಜರುಗಳು ಇವನಿಗೆ ಕಪ್ಪವನ್ನು ಕೊಡುತ್ತಿದ್ದರು. ರಾಜನು ಇವರಿಗೆ ಭೂಮಿಯನ್ನು ಕೊಡುಗೆಯಾಗಿ ಕೊಟ್ಟು ಪ್ರತಿಯಾಗಿ ಸೈನ್ಯದ ಸಹಾಯವನ್ನು ಪಡೆಯುತ್ತಿದ್ದನು.

11 ನಳಂದ ವಿಶ್ವವಿದ್ಯಾಲಯದ ಬಗ್ಗೆ ಬರೆಯಿರಿ.

ನಳಂದ ವಿಶ್ವವಿದ್ಯಾಲಯವು ಭಾರತದಲ್ಲಿದ್ದ ವಿಶ್ವವಿಖ್ಯಾತ ಪ್ರಾಚೀನ ವಿದ್ಯಾಲಯವಾಗಿದೆ. ಇಲ್ಲಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಶೋಕ, ಗುಪ್ತರ ದೊರೆಗಳು ಹಾಗೂ ಹರ್ಷವರ್ಧನ ಈ ವಿದ್ಯಾಲಯದ ಸುಪ್ರಸಿದ್ಧ ಪೋಷಕರು.
ಇಲ್ಲಿ ನಾಗಾರ್ಜುನ,ವಿಙ್ನಾಗ, ಧರ್ಮಪಾಲರೆಂಬ ಪ್ರಸಿದ್ಧ ವಿದ್ವಾಂಸರು ಬೋಧಿಸಿದ್ದರು.
ಚೀನಾದ ಪ್ರವಾಸಿಗ ಹೂಯನ್‌ ತ್ಸಾಂಗನು ಇಲ್ಲಿಗೆ ಭೇಟಿ ನೀಡಿ, ಕೆಲಕಾಲವಿದ್ದು ಈ ಪ್ರದೇಶದ ಬಗ್ಗೆ ಸವಿವರವಾದ ಬಣ್ಣನೆಯನ್ನು ಮಾಡಿದ್ದಾನೆ. ಈ ಪ್ರದೇಶದಲ್ಲಿ ಅನೇಕ ಸ್ತೂಪಗಳು, ಚೈತ್ಯ- ವಿಹಾರಗಳು, ವಿಶ್ರಾಂತಿಗೃಹಗಳು, ಅಲ್ಲಲ್ಲಿ ಕುಳಿತು ವಿಶ್ರಮಿಸಲು ಮೆಟ್ಟಿಲುಗಳು, ಧ್ಯಾನ ಕೊಠಡಿಗಳು, ಬೋಧನಾ ಕೊಠಡಿಗಳು ಹಾಗೂ ಇಲ್ಲಿನ ಇನ್ನಿತರ ಕಟ್ಟಡಗಳು ಇದರ ವೈಭವವನ್ನು ಸಾರುತ್ತವೆ.ಭಕ್ತಿಯಾರ್ ಖಿಲ್ಜಿಯ ಪೈಶಾಚಿಕ ದಾಳಿಯಿಂದಾಗಿ ನಳಂದ ತನ್ನ ವೈಭವವನ್ನು ಕಳೆದುಕೊಂಡು ಪಾಳು ಕಟ್ಟಡವಾಯಿತು.

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ-2

ಅಧ್ಯಾಯ 18

ದಕ್ಷಿಣ ಭಾರತದ ರಾಜವಂಶಗಳು ಶಾತವಾಹನರು,ಕದಂಬರು ಗಂಗರು

ಅಭ್ಯಾಸಗಳು

ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1.ಸಿಮುಖನು ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು.

2 ಹಾಲನು ಬರೆದ ಗಂಥ ಗಾಥಾ ಸಪ್ತಶತೀ.

3) ಕನ್ನಡದಲ್ಲಿ ದೊರೆತ ಮೊದಲ ಶಾಸನ ಹಲ್ಮಿಡಿ ಶಾಸನ.

4. ಕದಂಬರ ರಾಜಧಾನಿ ಬನವಾಸಿಯು ಈಗಿನ ಹಾವೇರಿ ಜಿಲ್ಲೆಯಲ್ಲಿದೆ.

5 ಗಂಗರ ಪ್ರಮುಖ ರಾಜ ದುರ್ವಿನೀತ.

6. ಚಾವುಂಡರಾಯನು ರಚಿಸಿದ ಗ್ರಂಥ ಚಾವುಂಡರಾಯ ಪುರಾಣ.

|| ಸಂಕ್ಷೇಪವಾಗಿ ಉತ್ತರಿಸಿ.

7 .ಶಾತವಾಹನರ ಕೊನೆಯ ಅರಸನಾರು ? ಈ ಸಂತತಿಯು ಹೇಗೆ ಕ್ಷೀಣಿಸಿತು ?
ಯಜ್ಞಶ್ರೀ ಶಾತಕರ್ಣಿಯು ಶಾತವಾಹನ ವಂಶದ ಕೊನೆಯರಸ.ಅವನ ಕಾಲದಲ್ಲಿ ನಿರಂತರ ದಾಳಿಯಿಂದಾಗಿ ಶಾತವಾಹನ ಸಾಮ್ರಾಜ್ಯವು ಪತನಗೊಂಡಿತು.

8. ಶಾತವಾಹನ ಕಲೆಯ ಬಗ್ಗೆ ಬರೆಯಿರಿ.
ಶಾತವಾಹನರ ಕಾಲದಲ್ಲಿ ಅಜಂತ, ಅಮರಾವತಿಯ ಚಿತ್ರಕಲೆಗಳು ರಚನೆಗೊಂಡವು. ದೇವಾಲಯ, ವಿಹಾರ ಮತ್ತು ಚೈತ್ಯಾಲಯಗಳನ್ನು ಕಟ್ಟಲಾಯಿತು. ಕಾರ್ಲೆಯಲ್ಲಿ ಚೈತ್ಯಾಲಯವನ್ನು ಬನವಾಸಿಯ ಶ್ರೀಮಂತ ವರ್ತಕ ಭೂತಪಾಲನು ನಿರ್ಮಿಸಿದನು.

9 ಗಂಗರ ಸಮಾಜವು ಯಾವ ಮೌಲ್ಯಗಳಿಂದ ಪ್ರಭಾವಿತವಾಗಿದ್ದಿತು?
ಗಂಗರ ಕಾಲದ ಸಮಾಜದಲ್ಲಿ ಸತ್ಯಶೀಲತೆ, ಸ್ವಾಮಿನಿಷ್ಠೆ, ಶೌರ್ಯ ಮತ್ತು ತಾಳ್ಮೆ ಎಂಬ ಸಾಮಾಜಿಕ ಮೌಲ್ಯಗಳು ಪ್ರಭಾವಿಯಾಗಿದ್ದವು.ಸಮಾಜ ಹಲವು ಪಂಗಡ, ಜಾತಿಗಳಾಗಿ ವಿಭಜಿತವಾಗಿದ್ದರೂ ಪರಸ್ಪರಾವಲಂಬಿಗಳಾಗಿದ್ದರು. ಪಿತೃ ಪ್ರಧಾನ ಅವಿಭಕ್ತ ಕುಟುಂಬ ಪದ್ಧತಿ ಸಾಮಾನ್ಯವಾಗಿತ್ತು.

10 ಗಂಗರ ಕಾಲದ ನಾಲ್ಕು ಗ್ರಂಥಗಳನ್ನು ಹೆಸರಿಸಿ,
1.ಚಾವುಂಡರಾಯನ ‘ಚಾವುಂಡರಾಯ ಪುರಾಣ’,
2. ಶ್ರೀ ಪುರುಷನ ‘ಗಜಶಾಸ್ತ್ರ’,
3. ಎರಡನೇ ಶಿವಮಾಧವನ ‘ಗಜಾಷ್ಟಕ’.
4. ದುರ್ವಿ ನೀತನ ‘ಶಬ್ದಾವತಾರ’.
ಇವು ಗಂಗರ ಕಾಲದಲ್ಲಿ ಬರೆದ ಕೃತಿಗಳಾಗಿವೆ.

ಅಧ್ಯಾಯ19

ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು 

 8ನೇ ತರಗತಿ ಸಮಾಜ ವಿಜ್ಞಾನ ಭಾಗ 2

1 ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ,

| ಪುಲಿಕೇಶಿಯು ಸೋಲಿಸಿದ ಪಲ್ಲವರ ದೊರೆ ಮಹೇಂದ್ರ ವರ್ಮ.

2. ಕರ್ನಾಟಕ ಎಂಬ ಹೆಸರನ್ನು ಕೊಟ್ಟ ರಾಜವಂಶದವರುಬಾದಾಮಿಯ ಚಾಳುಕ್ಯರು.

3′ ‘ಹರ ಪಾರ್ವತೀಯ’ ಸಂಸ್ಕೃತ ನಾಟಕದ ಕರ್ತೃ ಶಿವ ಭಟ್ಟಾರಕ.

4 ‘ವಾತಾಪಿಕೊಂಡ’ ಎಂಬ ಬಿರುದು ಪಡೆದ ಪಲ್ಲವರ ರಾಜ  ಪ್ರಥಮ ನರಸಿಂಹವರ್ಮ.

5. ‘ಆರ್ಜುನನ ತಪಸ್ಸು’ ಎಂಬ ಕಲಾಕೃತಿಯು ಮಹಾಬಲಿಪುರ ದಲ್ಲಿದೆ.

||ಸಂಕ್ಷೇಪವಾಗಿ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.

6. ಎರಡನೇ ಪುಲಿಕೇಶಿ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದನು ?
ಚಾಳುಕ್ಯರ ರಾಜ ಇಮ್ಮಡಿ ಪುಲಿಕೇಶಿಯು ಗಂಗರು, ಕದಂಬರು ಮತ್ತು ಅಳುಪರನ್ನು ಗೆದ್ದು ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದನು.

ದಕ್ಷಿಣ ದಖನ್ನಿನಲ್ಲಿ ಪಲ್ಲವರು ತಮ್ಮ ವೈಭವ ಕಾಲದಲ್ಲಿದ್ದರು. ದೊರೆ ಮಹೇಂದ್ರವರ್ಮನು ಪುಲಿಕೇಶಿಯ ಪರಮಾಧಿಕಾರತ್ವವನ್ನು ಒಪ್ಪಿಕೊಳ್ಳದ ಕಾರಣ ಪುಲಿಕೇಶಿಯು ಆತನನ್ನು ಸೋಲಿಸಿದನು. ಉತ್ತರ ಭಾರತವನ್ನು ಆಳುತ್ತಿದ್ದ ಹರ್ಷವರ್ಧನನನ್ನು ನರ್ಮದಾ ನದಿಯ ದಂಡೆಯಲ್ಲಿ ತಡೆಗಟ್ಟಿ ಸೋಲಿಸಿ, ‘ದಕ್ಷಿಣಾ ಪಥೇಶ್ವರ’, ‘ತ್ರಿಸಾಗರಗಳಿಂದಾವೃತವಾದ ಪ್ರದೇಶದ ಅಧಿಪತಿ’ ಎಂಬ ಬಿರುದಾಂಕಿತನಾದನು,

7. ಚಾಳುಕ್ಯರ ಆಡಳಿತ ವ್ಯವಸ್ಥೆ ಬಗ್ಗೆ ತಿಳಿಸಿ
ಚಾಳುಕ್ಯರು ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದರು. ರಾಜ ಸಕ್ರಿಯವಾಗಿ ಆಡಳಿತದಲ್ಲಿ ಭಾಗವಹಿಸುತ್ತಿದ್ದನು. ರಾಜ್ಯವನ್ನು ವಿಷಯ (ಜಿಲ್ಲೆ) ಎಂಬುದಾಗಿ ವಿಂಗಡಿಸಿ ವಿಷಯಾಧಿಪತಿಯು ನೋಡಿಕೊಳ್ಳುತ್ತಿದ್ದನು. ಗ್ರಾಮವು ಆಡಳಿತ ಘಟಕಗಳಲ್ಲಿ ಅತ್ಯಂತ ಚಿಕ್ಕದು. ಗ್ರಾಮ ಮುಖ್ಯಸ್ಥರು ಲೆಕ್ಕಪತ್ರಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದರು.

8 ಚಾಳುಕ್ಯರು ಸಾಹಿತ್ಯ ಪ್ರಿಯರು ಉದಾಹರಣೆ ಸಹಿತ ವಿವರಿಸಿ.
ಬಾದಾಮಿಯ ಚಾಳುಕ್ಯರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಹಾಗೂ ಸಂಸ್ಕೃತ ಭಾಷೆಗಳು ಚೆನ್ನಾಗಿ ಬೆಳೆದವು. ಕನ್ನಡವು ಅವರ ದೇಶ ಭಾಷೆಯಾಗಿತ್ತು. ಈ ಕಾಲದ ಕಾವ್ಯದಲ್ಲಿ ತ್ರಿಪದಿ ಶೈಲಿಯು ಬೆಳವಣಿಗೆಯಾಯಿತು. ಕನ್ನಡದಲ್ಲಿ ಕೃತಿಗಳು ಇಲ್ಲವಾದರೂ ಅನೇಕ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿರುವುದು ಕಂಡುಬರುತ್ತದೆ.

ಈ ಕಾಲದ ಸಂಸ್ಕೃತ ವಿದ್ವಾಂಸರುಗಳೆಂದರೆ ರವಿಕೀರ್ತಿ, ವಿಜ್ಜಿಕ ಮತ್ತು ಆಕಳಂಕರು. ಎರಡನೇ ಪುಲಿಕೇಶಿಯ ಸೊಸೆಯಾದ ವಿಜ್ಜಿಕ’ ಎಂಬ ಕವಿಯತ್ರಿಯು ಬರೆದ ‘ಕೌಮುದಿ ಮಹೋತ್ಸವ’, ಶಿವಭಟ್ಟಾರಕನ ‘ಹರ ಪಾರ್ವತೀಯ’ ಮುಖ್ಯವಾದ ಸಂಸ್ಕೃತ ನಾಟಕಗಳಾಗಿವೆ.

9.ಕಂಚಿಯನ್ನಾಳಿದ ಪಲ್ಲವ ಅರಸರನ್ನು ಹೆಸರಿಸಿ.
ಶಿವಸ್ಕಂದವರ್ಮ,ಮಹೇಂದ್ರವರ್ಮ, ಪ್ರಥಮ ನರಸಿಂಹವರ್ಮ ಇವರು ಕಂಚಿಯನ್ನು ಆಳಿದ ಪ್ರಸಿದ್ಧ ಅರಸರು.

10. ಸಂಸ್ಕೃತಕ್ಕೆ ಮತ್ತು ತಮಿಳಿಗೆ ಪಲ್ಲವರು ಯಾವ ರೀತಿ ಪ್ರೋತ್ಸಾಹ ನೀಡಿದರು
ಪಲ್ಲವರು ಸಂಸ್ಕೃತ ಮತ್ತು ತಮಿಳು ಭಾಷೆಗಳೆರಡಕ್ಕೂ ಪ್ರೋತ್ಸಾಹ ನೀಡಿದರು. ಕಂಚಿಯು ಸಂಸ್ಕೃತ ಸಾಹಿತ್ಯದ ಕೇಂದ್ರವಾಗಿತ್ತು. ಪಲ್ಲವರ ಆಸ್ಥಾನದಲ್ಲಿದ್ದ ಕವಿಗಳು ಭಾರವಿ (ಕಿರಾತಾರ್ಜುನೀಯ) ಹಾಗೂ ದಂಡಿ (ದಶಕುಮಾರ ಚರಿತ), ರಾಜ ಮಹೇಂದ್ರವರ್ಮನು ಸ್ವತಃ ‘ಮತ್ತ ವಿಲಾಸ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಹಾಗೂ ‘ಭಗವದಜ್ಜುಕೀಯ’ ಗ್ರಂಥವನ್ನು ರಚಿಸಿದ್ದಾನೆ.

<span;>ಅಧ್ಯಾಯ 20 ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು
ಅಭ್ಯಾಸಗಳು

ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.

1 ರಾಷ್ಟ್ರಕೂಟರ ವಂಶದ ಸಂಸ್ಥಾಪಕ ದಂತಿದುರ್ಗ

2. ರಾಷ್ಟ್ರಕೂಟರ ಅವನತಿಗೆ ಕಾರಣನಾದ ಕಲ್ಯಾಣದ ಚಾಳುಕ್ಯರ ಅರಸ ಎರಡನೇ ತೈಲಪ.

3. ‘ಕವಿರಹಸ್ಯ’ ಕೃತಿಯನ್ನು ಬರೆದವನು ಹಲಾಯುಧ.

4 ಪೊನ್ನನು ರಚಿಸಿದ ಪ್ರಸಿದ್ಧ ಕಾವ್ಯ ಶಾಂತಿಪುರಾಣ.

5. ಕಲ್ಯಾಣ ಚಾಳುಕ್ಯರ ಪ್ರಸಿದ್ಧ ದೊರೆ ಆರನೆಯ ವಿಕ್ರಮಾದಿತ್ಯ.

6 ‘ಸಾಮಾಜಿಕ ಕ್ರಾಂತಿಯ ಹರಿಕಾರ’ ಎಂದು ಕರೆಯಬಹುದಾದವರು ಬಸವೇಶ್ವರರು.

|| ಕೆಳಕಂಡ ಪ್ರಶ್ನೆಗಳಿಗೆ ಸಂಕ್ಷೇಪವಾಗಿ ಉತ್ತರಿಸಿ.

? ರಾಷ್ಟ್ರಕೂಟರ ಆಡಳಿತ ವ್ಯವಸ್ಥೆ ಹೇಗಿತ್ತು ?ರಾಷ್ಟ್ರಕೂಟರ ರಾಜತ್ವವು ವಂಶಪಾರಂಪರ್ಯವಾಗಿತ್ತು. ಅರಸರಿಗೆ ಸಹಾಯ ಮಾಡಲು ಮ೦ತ್ರಿ ಮಂಡಲವಿರುತ್ತಿತ್ತು. ಮಂತ್ರಿ ಮ೦ಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂಧಿವಿಗ್ರಹಿಯೆಂಬ ಗಣ್ಯನು ಇದ್ದನು. ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ (ಮಂಡಲ), ವಿಷಯ. ನಾಡು, ಗ್ರಾಮಗಳಾಗಿ ವಿಭಜಿಸಲಾಗಿತ್ತು.

ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ ಗ್ರಾಮ ಲೆಕ್ಕಿಗ ಈತನ ಸಹಾಯಕ. ಗ್ರಾಮ ಸಭೆಗಳೂ ಇದ್ದವು. ನಾಡುಗಳಲ್ಲಿ ನಾಡಗಾವುಂಡ ಎಂಬ ಅಧಿಕಾರಿ ಇರುತ್ತಿದ್ದನು. ಇದೇ ರೀತಿ ವಿಷಯ ಮತ್ತು ರಾಷ್ಟ್ರಗಳ ಮೇಲೂ ಅಧಿಕಾರಿಗಳಿದ್ದರು. ವಿಷಯಪತಿ ಮತ್ತು ರಾಷ್ಟ್ರಪತಿ ಜಿಲ್ಲೆ ಅಥವಾ ವಿಷಯಕ್ಕೂ ಹಾಗೂ ರಾಷ್ಟ್ರಕ್ಕೂ ಅಧಿಕಾರಿಗಳಾಗಿದ್ದರು. ಭೂಕಂದಾಯ, ಸರಕು, ಮನೆ, ಅಂಗಡಿಗಳ ಮೇಲಿನ ಸುಂಕ, ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೊದಲಾದವು ರಾಜ್ಯದ ಆದಾಯವಾಗಿದ್ದವು. ವಿದೇಶಿ ವ್ಯಾಪಾರದಿಂದ ರಾಜ್ಯಕ್ಕೆ ಅಪಾರ ಸುಂಕ ಬರುತ್ತಿತ್ತು.

8. ರಾಷ್ಟ್ರಕೂಟರ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಬರೆಯಿರಿ.
ಅಗ್ರಹಾರಗಳು, ಮಠಗಳು ರಾಷ್ಟ್ರಕೂಟರ ಕಾಲದ ಪ್ರಮುಖ ಶೈಕ್ಷಣಿಕ ಕೇಂದ್ರಗಳಾಗಿದ್ದವು. ಸಂಸ್ಕೃತ, ವೇದ, ಜ್ಯೋತಿಷ್ಯ, ತರ್ಕಶಾಸ್ತ್ರ, ಪುರಾಣಗಳಲ್ಲಿ ಶಿಕ್ಷಣ ನೀಡುತ್ತಿದ್ದರು. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೊಟಗಿ ಪ್ರಮುಖ ವಿದ್ಯಾ ಕೇಂದ್ರಗಳಲ್ಲೊಂದಾಗಿತ್ತು.

9 ಎಲ್ಲೋರ ದೇವಸ್ಥಾನದ ಬಗ್ಗೆ ಬರೆಯಿರಿ.
ಒಂದನೇ ಕೃಷ್ಣನು ಕಟ್ಟಿಸಿದ ಎಲ್ಲೋರಾದ ಕೈಲಾಸನಾಥ ಮಂದಿರವು ಏಕಶಿಲೆಯ ಅದ್ಭುತ ರಚನೆಯಾಗಿದೆ. 100 ಅಡಿ ಎತ್ತರ, 276 ಅಡಿ ಉದ್ದ ಹಾಗೂ 154 ಅಡಿ ಅಗಲವಾಗಿದ್ದು, ಬೃಹತ್‌ ಬಂಡೆಯನ್ನು ಕೊರೆದು ಕಟ್ಟಲಾಗಿದೆ. ಅಲ್ಲಿಯೇ ಪ್ರಸಿದ್ಧ ದಶಾವತಾರ ಗುಹಾಲಯವಿದೆ.

10) ಕಲ್ಯಾಣ ಚಾಳುಕ್ಯರು ಸಾಹಿತ್ಯಕ್ಕೆ ಯಾವ ರೀತಿ ಉತ್ತೇಜನ ನೀಡಿದರು ?
ಚಾಳುಕ್ಯರ ಕಾಲದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು. ಜೈನ ವಿದ್ವಾಂಸರ ನೆರವಿನಿಂದ ಕನ್ನಡ ಸಾಹಿತ್ಯವು ಅಭಿವೃದ್ಧಿ ಹೊಂದಿತು. ರನ್ನನು ಬರೆದ ‘ಗದಾಯುದ್ಧ’ (ಸಾಹಸ ಭೀಮ ವಿಜಯ), ದುರ್ಗಸಿಂಹನ ‘ಪಂಚತಂತ್ರ’, ಬಿಲ್ದಣನ ‘ವಿಕ್ರಮಾಂಕದೇವ ಚರಿತ’, ನಯಸೇನನ ‘ಧರ್ಮಾಮೃತ’ ಹಾಗೂ ವಿಜ್ಞಾನೇಶ್ವರನು ಬರೆದ ಕಾನೂನು ಗ್ರಂಥ ‘ಮಿತಾಕ್ಷರ’ ಮುಖ್ಯವಾದ ಗ್ರಂಥಗಳಾಗಿವೆ. ರಾಜ ಮೂರನೆಯ ಸೋಮೇಶ್ವರನು ಬರೆದ ‘ಮಾನಸೋಲ್ಲಾಸ’ ಸಂಸ್ಕೃತ ವಿಶ್ವಕೋಶವೆನಿಸಿದೆ. ಚಾಳುಕ್ಯರ ಕಾಲದ ವಿಶಿಷ್ಟ ಕೊಡುಗೆ ವಚನ ಸಾಹಿತ್ಯ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾಚಯ್ಯ ಮುಂತಾದವರು ಗಣ್ಯವಚನಕಾರರಾಗಿದ್ದರು.

 8ನೇ ತರಗತಿ ಸಮಾಜ ವಿಜ್ಞಾನ ಭಾಗ 2

ಅಧ್ಯಾಯ 21

ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು

ಅಭ್ಯಾಸಗಳು

| ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1 ಚೋಳರ ರಾಜಧಾನಿ ತಂಜಾವೂರು.

2. ಚೋಳರ ಕಾಲದಲ್ಲಿದ್ದ ಪ್ರತಿ ಗ್ರಾಮಗಳ ಪ್ರಜಾಪ್ರತಿನಿಧಿಗಳ ಸಭೆಗೆ ಪೆರುಂ ಗುರಿ ಎನ್ನುತ್ತಿದ್ದರು.

3. ಅತ್ಯಂತ ಪ್ರಸಿದ್ಧವಾದ ಚೋಳ ವಿದ್ಯಾಕೇಂದ್ರ ಅಥವಾ ಅಗ್ರಹಾರ ಉತ್ತರ ಮೇರೂರು ಆಗಿತ್ತು.

4 ಚೋಳರು ಕಟ್ಟಿಸಿದ ಬೆಂಗಳೂರು ಬಳಿ ಇರುವ ಬೇಗೂರಿನ ದೇವಾಲಯ-ಚೋಳೇಶ್ವರ ದೇವಾಲಯ.

5 ಹೊಯ್ಸಳರ ಕಾಲದ ಅಂಗರಕ್ಷಕ ಪಡೆ ಗರುಡ.

5. ರಾಘವಾಂಕನು ರಚಿಸಿದ ಕಾವ್ಯ, ಹರಿಶ್ಚಂದ್ರ ಕಾವ್ಯ.

| ಕೆಳಕಂಡ ಪ್ರತಿ ಪ್ರಶ್ನೆಗೂ ಸಂಕ್ಷೇಪವಾಗಿ ಉತ್ತರಿಸಿ.

7 ಚೋಳ ಸಾಮ್ರಾಜ್ಯದ ಶಿಲ್ಪಿ ಯಾರು ?
ಚೋಳ ಸಾಮ್ರಾಜ್ಯದ ಶಿಲ್ಪಿ ಚೋಳರ ಪ್ರಮುಖ ರಾಜ ಒಂದನೆಯ ರಾಜರಾಜ.

ಶೂರ, ಶ್ರೇಷ್ಠ ಯೋಧ ಹಾಗೂ ದಕ್ಷ ಆಡಳಿತಗಾರನಾಗಿದ್ದನು. ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಚೇರರನ್ನು, ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು. ನೌಕಾ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು.

8. ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣದ ಬಗ್ಗೆ ಬರೆಯಿರಿ.
ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣವೆಂದರೆ ಗ್ರಾಮದ ಸ್ವಯಮಾಧಿಪತ್ಯದ ಬೆಳವಣಿಗೆ. ಗ್ರಾಮ ಸಭೆಗಳು ಪ್ರಥಮ ಸಭೆಗಳಾಗಿದ್ದವು. ತರ-ಕುರ್ರಂ ಒಂದು ಹಳ್ಳಿ, ಪ್ರತಿ ಕುರ್ರಂಗೂ ‘ಮಹಾಸಭಾ’ ಎನ್ನುವ ಗ್ರಾಮಸಭೆ ಇದ್ದಿತು. ಇದನ್ನು ‘ಪೆರುಂಗುರಿ’ ಎಂದು ಅದರ ಸದಸ್ಯರನ್ನು ‘ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು. ಸದಸ್ಯರನ್ನು ಚುನಾವಣೆ ಮೂಲಕ ಆರಿಸಲಾಗುತ್ತಿತ್ತು. ಆರನೆಯ ಇದ್ದರು ಆರಿಸಲಾಗುತ್ತಿತ್ತು. ಸಂಸ್ಕೃತ ವಿದ್ವಾಂಸರು ಹಾಗೂ ಶ್ರೀಮಂತರು ಈ ಚುನಾವಣೆಗೆ ಅರ್ಹರಾಗಿದ್ದರು

9 ಹೊಯ್ಸಳರು ಸಾಹಿತ್ಯಕ್ಕೆ ಯಾವ ರೀತಿ ಪ್ರೋತ್ಸಾಹ ನೀಡಿದ್ದರು ಎಂಬುದನ್ನು ತಿಳಿಸಿ.
ಹೊಯ್ಸಳರ ಕಾಲದಲ್ಲಿ ಕನ್ನಡ ಸಾಹಿತ್ಯವು ವಿಪುಲವಾಗಿ ಬೆಳೆಯಿತು. ರುದ್ರಭಟ್ಟನು ‘ಜಗನ್ನಾಥ ವಿಜಯ’ವನ್ನು ಕವಿಚಕ್ರವರ್ತಿ ಜನ್ನನು ‘ಯಶೋಧರ ಚರಿತೆ’ಯನ್ನು, ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಚಂಪೂ ಕಾವ್ಯವನ್ನು ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ ಹಾಗೂ ಕೇಶೀರಾಜನು ‘ಶಬ್ದಮಣಿದರ್ಪಣ’ವನ್ನು ರಚಿಸಿದ್ದಾರೆ. ಸಂಸ್ಕೃತದಲ್ಲೂ ರಾಮಾನುಜಾಚಾರ್ಯರ ಶ್ರೀಭಾಷ್ಯ, ಪರಾಶರಭಟ್ಟರ ಶ್ರೀ ಗುಣ ರತ್ನಕೋಶ ಮುಂತಾದವುಗಳು ರಚಿತವಾದವು.

 8ನೇ ತರಗತಿ ಸಮಾಜ ವಿಜ್ಞಾನ ಭಾಗ 2

ಅಧ್ಯಾಯ 22

ಪ್ರಜಾಪ್ರಭುತ್ವ

ಅಭ್ಯಾಸಗಳು

ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1 ಡೆಮಾಕ್ರಸಿ ಎಂಬ ಪದವು ಡೆಮೋಕ್ರೀಷಿಯ ಎಂಬ ಗ್ರೀಕ್ ಪದದಿಂದ ಬಂದಿದೆ.

2 ವಿಧಾನಸಭೆಯಲ್ಲಿ ಪಕ್ಷವೊಂದು ಬಹುಮತವನ್ನು ಸಾಬೀತುಪಡಿಸಿ ಆಡಳಿತದ ಕಡೆ ಗಮನಹರಿಸಿದರೆ ಆ ಪಕ್ಷವನ್ನು ಆಡಳಿತ ಪಕ್ಷವೆಂದು ಕರೆಯುತ್ತಾರೆ.

3 ಭಾರತದಲ್ಲಿ ಮತಚಲಾಯಿಸುವ ಕನಿಷ್ಠ ವಯಸ್ಸು 18 ವರ್ಷಗಳು.

4 ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಗಳನ್ನು ನಿರ್ವಹಿಸಿದರೆ ಅಂತಹ ಚುನಾವಣೆಗಳನ್ನು ಸಾರ್ವತ್ರಿಕ ಚುನಾವಣೆಗಳು ಎಂದು ಕರೆಯುವರು.

|| ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

5. ಪ್ರಜಾಪ್ರಭುತ್ವದ ಅನುಕೂಲಗಳಾವುವು ?

1. ಪ್ರಜಾಪ್ರಭುತ್ವವು ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸ್ವತಂತ್ರ ನ್ಯಾಯಾಂಗದಡಿಯಲ್ಲಿ ರಕ್ಷಿಸುತ್ತದೆ.

2. ಪ್ರಜಾಪ್ರಭುತ್ವವು ಸಮಾನತೆಯ ತತ್ವಾಧಾರಿತವಾದುದಾಗಿದೆ.

3. ಪ್ರಜಾಪ್ರಭುತ್ವದಲ್ಲಿ ಜನರು ನಿರ್ಧಾರ ಕೈಗೊಳ್ಳುವಲ್ಲಿ ಭಾಗಿಯಾಗಿ ಸ್ವತಹ ಕಾನೂನು ರಚಿಸಿಕೊಳ್ಳುವ ಅವಕಾಶವಿರುತ್ತದೆ.

. 4. ಜನರು ತಮ್ಮ ಆಯ್ಕೆಯ ಪ್ರತಿನಿಧಿ ಹಾಗೂ ಸರ್ಕಾರವನ್ನು ಚುನಾಯಿಸಿಕೊಳ್ಳಬಹುದಾಗಿದೆ.

5. ಪ್ರಜಾಪ್ರಭುತ್ವದಲ್ಲಿ ನಿರ್ಧಾರಕ ತೀರ್ಪುಗಳು ತಮ್ಮ ಸಾರ್ವಜನಿಕರ ಅಭಿಪ್ರಾಯ ಮತ್ತು ಚರ್ಚೆಗಳ ಮೂಲಕ ನಿರ್ಧರಿಸಲಾಗುತ್ತವೆ.

6. ವಿರೋಧ ಪಕ್ಷವು ಆಡಳಿತ ಪಕ್ಷದ ದುರುಪಯೋಗವನ್ನು ಪರೀಕ್ಷಿಸಿ ತಡೆಗಟ್ಟುವ ಅವಕಾಶವಿದೆ.

7. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮೂಲಭೂತ ಹಕ್ಕು ಅವಕಾಶ ಕಲ್ಪಿಸುತ್ತದೆ.

8. ಪ್ರಜಾಪ್ರಭುತ್ವವು ಶಾಂತಿಯುತವಾಗಿ ಚುನಾವಣೆ ಮೂಲಕ ಸರ್ಕಾರಗಳನ್ನು ಬದಲಿಸಲು ಅವಕಾಶವಿರುವುದರಿಂದ ಕ್ರಾಂತಿಗಳನ್ನು ಪುರಸ್ಕರಿಸುವುದಿಲ್ಲ.

9. ಪ್ರಜಾಪ್ರಭುತ್ವವು ರಾಷ್ಟ್ರೀಯತೆ, ದೇಶಭಕ್ತಿ, ಪ್ರಜಾಗೌರವಗಳನ್ನು ಅಭಿವೃದ್ಧಿಗೊಳಿಸಿ ವಿವಿಧತೆಯಲ್ಲಿ ಏಕತೆಯನ್ನು ಹುಟ್ಟು ಹಾಕುತ್ತದೆ.

6 ವಿವಿಧ ಪ್ರಕಾರದ ಸರ್ಕಾರಗಳನ್ನು ತಿಳಿಸಿ ?

ರಾಜಪ್ರಭುತ್ವ ಸರ್ಕಾರ(Monarchy) : ರಾಜ ಅಥವಾ ಅರಸ ಈ ಸರ್ಕಾರದ ಅಧಿಪತಿ, ರಾಜನು ಪರಮಾಧಿಕಾರವನ್ನು ಹೊಂದಿರುತ್ತಾನೆ. ಕಾನೂನುಗಳ ನಿರ್ಮಾಪಕ ರಾಜನೇ ಆಗಿರುತ್ತಾನೆ.
ಸರ್ವಾಧಿಕಾರತ್ವ (Dictatorship) :  ಸರ್ವಾಧಿಕಾರಿ ಸರ್ಕಾರಗಳಲ್ಲಿ ಪಟ್ಟಾಭಿಷಿಕ್ತನಾಗಿ ವ್ಯಕ್ತಿಯೊಬ್ಬನ ಕೈಯಲ್ಲಿ ಸರ್ವ ಅಧಿಕಾರ ಕೇಂದ್ರೀಕೃತವಾಗಿರುತ್ತದೆ.
ಸೈನಿಕ ಸರ್ವಾಧಿಕಾರ (Military Dictatorship) : ಸೈನಿಕ ಸರ್ವಾಧಿಕಾರ ರೂಪದ ಸರ್ಕಾರದಲ್ಲಿ, ರಾಜಕೀಯ ಅಧಿಕಾರವು ಸೈನ್ಯದ ಉನ್ನತ ಅಧಿಕಾರಿಯ ಕೈಯಲ್ಲಿರುತ್ತದೆ.
ಕಮ್ಯೂನಿಸ್ಟ್ ಸರ್ಕಾರ (Communist Government) : ಕಮ್ಯೂನಿಸ್ಟ್ ಸರ್ಕಾರದಲ್ಲಿ ಜನರಿಗೆ ನಿರ್ಬಂಧಿತವಾದ ಸ್ವಾತಂತ್ರ್ಯವಿರುತ್ತದೆ. ಕಮ್ಯೂನಿಸ್ಟ್ ಪಕ್ಷವನ್ನು ಹೊರತುಪಡಿಸಿ ಬೇರಾವ ರಾಜಕೀಯ ಪಕ್ಷವೂ ಈ ದೇಶದಲ್ಲಿ ಉಳಿಯುವುದಿಲ್ಲ.
ಪ್ರಜಾಪ್ರಭುತ್ವ ಸರ್ಕಾರ: ಈ ಸರ್ಕಾರದಲ್ಲಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಚುನಾವಣೆಗಳ ಮೂಲಕ ಆರಿಸುತ್ತಾರೆ.

7 ಪ್ರತ್ಯಕ್ಷ ಪ್ರಜಾಪ್ರಭುತ್ವವು ಪರೋಕ್ಷ ಪ್ರಜಾಪ್ರಭುತ್ವದಿಂದ ಹೇಗೆ ಭಿನ್ನವಾಗಿದೆ?

ನೇರ ಪ್ರಜಾಪ್ರಭುತ್ವದಲ್ಲಿ, ಜನರು ತಮ್ಮ ಸಾರ್ವಭೌಮತ್ವ ಮತ್ತು ಅಧಿಕಾರವನ್ನು ನೇರವಾಗಿ ಚಲಾಯಿಸುತ್ತಾರೆ.

ಆದರೆ ಪರೋಕ್ಷ ಪ್ರಜಾಪ್ರಭುತ್ವದಲ್ಲಿ, ಜನರು ತಮ್ಮ ಸಾರ್ವಭೌಮತ್ವ ಮತ್ತು ಅಧಿಕಾರವನ್ನು ಪರೋಕ್ಷವಾಗಿ ತಮ್ಮ ಆಯ್ಕೆಮಾಡಿದ ಪ್ರತಿನಿಧಿಗಳ ಮೂಲಕ ಚಲಾಯಿಸುತ್ತಾರೆ.

ಪರೋಕ್ಷ ಪ್ರಜಾಪ್ರಭುತ್ವದಲ್ಲಿ, ಪ್ರತಿನಿಧಿಗಳು ಜನರಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿರುವುದರಿಂದ, ಈ ರೀತಿಯ ಪ್ರಜಾಪ್ರಭುತ್ವವನ್ನು ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂದೂ ಕರೆಯಲಾಗುತ್ತದೆ.

ನೇರ ಪ್ರಜಾಪ್ರಭುತ್ವದಲ್ಲಿ, ನಾಗರಿಕರು ನೇರವಾಗಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಮತ್ತು ಪ್ರತಿಯೊಬ್ಬ ನಾಗರಿಕರು ಕೇವಲ ಒಂದು ಮತಕ್ಕೆ ಮಾತ್ರ ಅರ್ಹರಾಗಿರುತ್ತಾರೆ.  ಈ ರೀತಿಯ ಚುನಾವಣೆಯನ್ನು ವರ್ಗ ಚುನಾವಣೆಗಳು ಮತ್ತು ಇತರ ಸಣ್ಣ ಸಾಂಸ್ಥಿಕ ಚುನಾವಣೆಗಳಲ್ಲಿ ಕಾಣಬಹುದು.

ಆದರೆ ಪರೋಕ್ಷ ಪ್ರಜಾಪ್ರಭುತ್ವದ ಸಂದರ್ಭದಲ್ಲಿ, ನಾಗರಿಕರು ಪ್ರತಿನಿಧಿಗೆ ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.  ಈ ಪ್ರತಿನಿಧಿಯು ಅವರ ಅಭಿಪ್ರಾಯಗಳಿಗೆ ಸಾಮಾನ್ಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾನೆ ಮತ್ತು ಸಮಸ್ಯೆಗಳ ಮೇಲೆ ಮತ ಚಲಾಯಿಸುತ್ತಾನೆ.

ಜನಸಂಖ್ಯೆ ಕಡಿಮೆ ಇರುವ ದೇಶಗಳಿಗೆ ನೇರ ಪ್ರಜಾಪ್ರಭುತ್ವ ಸೂಕ್ತವಾಗಿದೆ.

ಮತ್ತೊಂದೆಡೆ, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶಗಳಿಗೆ ಪರೋಕ್ಷ ಪ್ರಜಾಪ್ರಭುತ್ವ ಸೂಕ್ತವಾಗಿದೆ.

8 ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎಂದರೇನು ?

ಜನರು ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಆಯಾ ದೇಶಗಳಲ್ಲಿ ನಿಗದಿಪಡಿಸಿದ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರುಗಳು ಜಾತಿ, ಮತ, ವಿದ್ಯಾರ್ಹತೆ, ವರ್ಣ, ವರ್ಗ, ಧಾರ್ಮಿಕತೆ, ಭಾಷೆ, ಲಿಂಗ ಭೇದವಿಲ್ಲದೆ ಚಲಾಯಿಸಬಹುದಾದ ಮತದಾನದ ಹಕ್ಕನ್ನೇ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎನ್ನುವರು.

9 ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುವ ಅಂಶಗಳನ್ನು ಪಟ್ಟಿಮಾಡಿ.

ಪ್ರಜಾಪ್ರಭುತ್ವದ ಯಶಸ್ಸಿಗೆ ಅವಶ್ಯಕವಾಗುವ ಅಂಶಗಳು

1. ಪ್ರಜಾಪ್ರಭುತ್ವವನ್ನು ರಕ್ಷಿಸುವ ಮನೋಭಾವ ಜನರಲ್ಲಿರಬೇಕು.

2.ಜನರು ಸದಾ ಜಾಗರೂಕತೆಯಿಂದಿರಬೇಕು.

3. ಪ್ರಜಾಪ್ರಭುತ್ವದ ಯಶಸ್ಸು ಯಾವತ್ತೂ ತಾಳ್ಮೆಯನ್ನು ಅವಲಂಬಿಸಿರುವುದಾಗಿದೆ. ಜನರು ಕೊಡುವ ಹಾಗೂ ತೆಗೆದುಕೊಳ್ಳುವ ತತ್ವಪಾಲಕರಾಗಬೇಕು.

4. ಪ್ರಜಾಪ್ರಭುತ್ವದ ಯಶಸ್ಸು ಉತ್ತಮ ನಾಯಕತ್ವವನ್ನು ಅವಲಂಬಿಸಿರುತ್ತದೆ. ನಾಯಕನಾದವನು ಸಾಮಾನ್ಯ ಪ್ರಜೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ, ಅವುಗಳಿಗೆ ಪರಿಹಾರ ನೀಡುವ, ಸೇವಾ ಮನೋಭಾವ, ದೇಶಭಕ್ತಿ ಮತ್ತು ತ್ಯಾಗಮಾಡುವ ಗುಣಗಳನ್ನು ಹೊಂದಿರಬೇಕು,

5. ವಿರೋಧ ಪಕ್ಷವು ಆಡಳಿತ ಪಕ್ಷದ ಕಾರ್ಯ ವೈಖರಿಗಳ ಬಗ್ಗೆ ಸದಾ ಎಚ್ಚರಿಕೆಯಿಂದಿದ್ದು ಅವರುಗಳ ಸರ್ವಾಧಿಕಾರಿ ಧೋರಣೆಗಳನ್ನು ನಿಯಂತ್ರಿಸುತ್ತಿರಬೇಕು.

6. ವಿದ್ಯಾವಂತ ಮತ್ತು ಪ್ರಜ್ಞಾವಂತ ಮತದಾರ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣನಾಗಬಲ್ಲ.

7. ಪ್ರಜಾಪ್ರಭುತ್ವದ ಯಶಸ್ಸು ಜನರ ಮೇಲೆ ಅವಲಂಬಿತವಾಗಿದ್ದು, ಜನರು ಕಡ್ಡಾಯವಾಗಿ ಮತ ಚಲಾಯಿಸಬೇಕು ಮತ್ತು ಜನರು ಭ್ರಷ್ಟ ಹಾಗೂ ಅನಿಷ್ಟ ಮಾರ್ಗಗಳನ್ನು ಅನುಸರಿಸಬಾರದು. ಜನರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತಹ ಯೋಗ್ಯ ಹಾಗೂ ಭ್ರಷ್ಟರಲ್ಲದ ಅಭ್ಯರ್ಥಿಗಳನ್ನು ಚುನಾಯಿಸಬೇಕು.

8, ಸ್ವತಂತ್ರ ನಿರ್ಭಯ, ನಿಷ್ಪಕ್ಷಪಾತ ಪ್ರತಿಕಾ ಮಾಧ್ಯಮ ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ.

9, ಉತ್ತಮವಾಗಿ ಸಂಘಟಿತವಾದ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಸ್ಥಳೀಯ ಸಂಸ್ಥೆಗಳು ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ.

10 ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿರೋಧಪಕ್ಷದ ಅವಶ್ಯಕತೆ ಏಕೆ ಬೇಕಾಗಿದೆ ?

ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿರೋಧಪಕ್ಷದ ಅವಶ್ಯಕತೆ ಇದೆ ಏಕೆಂದರೆ,

(1) ಆಡಳಿತಸರ್ಕಾರವು ಸರ್ವಾಧಿಕಾರಿಯಾಗುವುದನ್ನು ತಡೆಯಲು ಮತ್ತು ಅದರ ಅಧಿಕಾರವನ್ನು ನಿರ್ಬಂಧಿಸಲು, ವಿರೋಧ ಪಕ್ಷಗಳು ಅವರ ಮೇಲೆ ನಿಗಾ ಇಡುತ್ತವೆ.
(2) ಸರ್ಕಾರದ ನೀತಿಗಳನ್ನು ಟೀಕಿಸುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯ.
(3) ಶಾಸಕಾಂಗದ ಹೊರಗೆ ವಿರೋಧ ಪಕ್ಷಗಳು ಪತ್ರಿಕೆಗಳ ಗಮನ ಸೆಳೆಯುತ್ತವೆ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಯ ಬಗ್ಗೆ ತಮ್ಮ ಟೀಕೆಗಳನ್ನು ವರದಿ ಮಾಡುತ್ತವೆ.
(4)  ವಿರೋಧ ಪಕ್ಷಗಳಿಗೆ ಸರ್ಕಾರದ ವೆಚ್ಚವನ್ನು ಪರಿಶೀಲಿಸುವ ಹಕ್ಕಿದೆ.
(5) ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷಗಳು ಸಾಮಾನ್ಯವಾಗಿ ಸರ್ಕಾರವನ್ನು ಟೀಕಿಸುತ್ತವೆ.

II ಪ್ರಜಾಪ್ರಭುತ್ವದ ಐದು ಗುಣಗಳನ್ನು  ತಿಳಿಸಿ,.

1. ಪ್ರಜಾಪ್ರಭುತ್ವವು ಜನತೆಯ ಸಮ್ಮತಿಯನ್ನು ಆಧರಿಸಿದೆ. ಇದು ಜನರ ಸರ್ಕಾರ.

2. ಇದು ಪ್ರಾತಿನಿಧಿಕ ಸರ್ಕಾರವಾಗಿದ್ದು ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ.

3. ಇದು ಸಾರ್ವತ್ರಿಕ ವಯಸ್ಕ ಮತದಾನದ ತತ್ವವನ್ನು ಆಧರಿಸಿದೆ.

4. ಇಲ್ಲಿ ಚುನಾವಣೆಗಳು ನಿಗದಿತ ಕಾಲಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ಮುಕ್ತವಾಗಿ ಚುನಾವಣೆಗಳು ನಡೆಯುತ್ತವೆ.

5. ಪ್ರಜಾಪ್ರಭುತ್ವ ಸರ್ಕಾರವು ಜನತೆಗೆ ಸ್ಪಂದಿಸುವ ಸರ್ಕಾರವಾಗಿದೆ.

12 ಪ್ರಜಾಪ್ರಭುತ್ವದಲ್ಲಿ ನಿಯತಕಾಲಿಕಾ ಚುನಾವಣೆಗಳು ಏಕೆ ಅವಶ್ಯಕ ?

ಉತ್ತರ.  ಸರ್ಕಾರದ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ನಿಯಮಿತ ಮಧ್ಯಂತರಗಳಲ್ಲಿ ಚುನಾವಣೆಗಳನ್ನು ನಡೆಸುವುದು ಅವಶ್ಯಕ.  ಉದಾ.  ಹಾಲಿ ಅಧಿಕಾರಾವಧಿ ಮುಗಿದರೂ ನಿಯಮಿತ ಚುನಾವಣೆಗಳು ನಡೆಯದಿದ್ದರೆ ಅದು ಅವ್ಯವಸ್ಥೆ ಮತ್ತು ಅರಾಜಕತೆಗೆ ಕಾರಣವಾಗುತ್ತದೆ.  ಯಾವುದೇ ಪಕ್ಷವು ಅಧಿಕಾರದಲ್ಲಿ ಇರುವುದಿಲ್ಲ. ಆದ್ದರಿಂದ ನಿರ್ವಾತವನ್ನು ರಚಿಸಲಾಗುವುದು. ಅದು ಸಮಾಜ ವಿರೋಧಿ ಶಕ್ತಿಗಳಿಗೆ ಅಧಿಕಾರವನ್ನು ಹಿಡಿಯಲು ಅವಕಾಶವನ್ನು ನೀಡುತ್ತದೆ. ಮತ್ತು ಅಂತಹ ಪರಿಸ್ಥಿತಿಯು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಆರೋಗ್ಯಕರವಾಗಿರುವುದಿಲ್ಲ.  ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ನಿಯಮಿತ ಚುನಾವಣೆಗಳು ನಡೆಯುವುದು ಅಗತ್ಯವಾಗಿದೆ.

13 ಪ್ರಜಾಪ್ರಭುತ್ವದ ಯಶಸ್ಸು ಮತದಾರನನ್ನು ಅವಲಂಬಿಸಿದೆ. ಚರ್ಚಿಸಿ.

ಪ್ರಜಾಪ್ರಭುತ್ವದಲ್ಲಿ ಮತದಾರ ಆರಿಸಿದ ಜನಪ್ರತಿನಿಧಿಯೇ ದೇಶವನ್ನು ಆಳುತ್ತಾನೆ ಜನಪ್ರತಿನಿಧಿ ಬುದ್ಧಿವಂತ ಮತ್ತು ದಕ್ಷ ನಾಗಿದ್ದರೆ ದೇಶವು ಅಭಿವೃದ್ಧಿ ಸಾಧಿಸಲು ಕಾರಣವಾಗುತ್ತದೆ. ಹಾಗಾಗಿ ಉತ್ತಮ ಸರ್ಕಾರದ ರಚನೆ ಪ್ರಜ್ಞಾವಂತ ಮತದಾರನ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಪ್ರಜ್ಞಾವಂತನೆನಿಸಿದ ಮತದಾರನು ಮತ ಚಲಾಯಿಸುವಾಗ ಜಾತಿ, ವರ್ಣ, ಹಣ, ಇತ್ಯಾದಿಗಳ ಶಿಫಾರಸ್ಸುಗಳಿಗೆ ಮಣಿಯದೆ ತನ್ನ ಅಭ್ಯರ್ಥಿಯ ಆಯ್ಕೆಯಲ್ಲಿ ಜಾಗರೂಕವಾಗಿರಬೇಕು. ಮತದಾರನು ಉತ್ತಮ ಗುಣ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು.

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ-2

ಅಧ್ಯಾಯ 23


ಸ್ಥಳೀಯ ಸ್ವಯಂ ಸರ್ಕಾರಗಳು

ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಲ

1.ಪ್ರಸ್ತುತ ಚಾಲಿಯಲ್ಲಿರುವ ಕರ್ನಾಟಕ ಪಂಚಾಯತ್‌ ರಾಜ್ ಕಾಯ್ದೆಯು ಜಾರಿಯಾದ ವರ್ಷ 1983

2.ಗ್ರಾಮದ ಎಲ್ಲಾ ಮತದಾರರು ಪಾಲ್ಗೊಳ್ಳಬಹುದಾದ ಗ್ರಾಮದ ಮಂಡಳಿಯನ್ನು ಗ್ರಾಮ ಸಭೆ ಎಂದು ಕರೆಯಲಾಗುತ್ತದೆ.

3 ತಾಲೂಕು ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಆಯ್ಕೆಮಾಡುವಾಗ ಪರ್ಯಾನಕ್ರಮವನ್ನು ಅನುಸರಿಸಲಾಗುತ್ತದೆ.

4 ಜಿಲ್ಲಾ ಪಂಚಾಯಿತಿಯ ದಿನಂಪ್ರತಿಯ ಕೆಲಸ ನೋಡಿಕೊಳ್ಳಲು ನೇಮಕಗೊಳ್ಳುವ ಅಧಿಕಾರಿಯನ್ನು -ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂದು ಕರೆಯುತ್ತಾರೆ.

5 ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿರುವ ಒಟ್ಟು 11 ನಗರ ಪಾಲಿಕೆಗಳ ಸಂಖ್ಯೆ ಆಗಿದೆ.

|| ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.

6. ಸ್ಥಳೀಯ ಸ್ವಯಂ ಸರ್ಕಾರಗಳ ಉದ್ದೇಶಗಳಾವುವು?

ಸ್ಥಳೀಯ ಸ್ವಯಂಸರ್ಕಾರಗಳ ಉದ್ದೇಶಗಳು :

1.ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯರನ್ನೇ ಬಳಸಿಕೊಳ್ಳುವುದು.

2.ಜನ ಸಾಮಾನ್ಯರಿಗೆ ಆಡಳಿತಜ್ಞಾನ ಒದಗಿಸುವುದು,

3.ಅಧಿಕಾರವನ್ನು ವಿಕೇಂದ್ರೀಕರಿಸಿ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದು. hea

4.ತಳಮಟ್ಟದ ಹಂತದಲ್ಲಿ ಜನರಿಗೆ ನಾಯಕತ್ವದಗುಣಲಕ್ಷಣಗಳನ್ನು ಅಭಿವೃದ್ಧಿಗೊಳಿಸುವುದು ಅಥವಾ ತರಬೇತಿ ನೀಡುವುದು.

7 ನಿಮ್ಮ ಕ್ಷೇತ್ರದ ಸ್ಥಳೀಯ ಮಂಡಳಿ ಹೇಗೆ ರಚಿತವಾಗಿದೆ?

ನಾನು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ನಗರ ಪಾಲಿಕೆಗೆ ಕಾರ್ಪೊರೇಟರ್ ಗಳನ್ನು ಆರಿಸುತ್ತಾರೆ. ಇವರನ್ನು ಮಹಾನಗರ ಪಾಲಿಕೆ ಸದಸ್ಯರು ಅಥವಾ ಕಾರ್ಪೊರೇಟರ್ ಎಂದು ಕರೆಯುತ್ತಾರೆ ಇಲ್ಲಿ ಮಹಾನಗರವನ್ನು 45 ವಾರ್ಡ್ ಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ವಾರ್ಡ್ ಗೆ ಒಬ್ಬ ಸದಸ್ಯರಂತೆ 45 ಸದಸ್ಯರು ಆಯ್ಕೆಯಾಗುತ್ತಾರೆ. ಈ ಸದಸ್ಯರು ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವನನ್ನು ಮೇಯರ್ ಅಥವಾ ಆಯುಕ್ತರು ಎಂದು ಕರೆಯುತ್ತಾರೆ. ಉಪಮೇಯರ್ ಕೂಡ ಆರಿಸುತ್ತಾರೆ. ಈ ಸದಸ್ಯರು ನಗರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಗಮನಹರಿಸುತ್ತಾರೆ.

8 ನಿಮ್ಮ ಸ್ಥಳೀಯ ಮಂಡಳಿಯ ಕಾರ್ಯಗಳನ್ನು ತಿಳಿಸಿ.

*ಆಯ-ವ್ಯಯ ಪಟ್ಟಿ ತಯಾರಿಸಿ ಮಂಡಳಿಯಿಂದ ಅನುಮೋದನೆ ಪಡೆಯುವುದು.

*ನಗರ ಅಥವಾ ಪಟ್ಟಣದ ಸಂಪೂರ್ಣ ಆಡಳಿತ ನೋಡಿಕೊಳ್ಳುವುದು.

*ಉತ್ತಮ ನಗರ ಯೋಜನೆಯನ್ನು ತಯಾರಿಸಿ ಕಾರ್ಯರೂಪಕ್ಕೆ ತರುವುದು.

*ಉತ್ತಮವಾದ ರಸ್ತೆ, ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ಶಿಕ್ಷಣ, ವಿದ್ಯುಚ್ಛಕ್ತಿ, ಮಾರುಕಟ್ಟೆ, ಆರೋಗ್ಯ ಹಾಗೂ ಇನ್ನಿತರೆ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಒದಗಿಸುವುದು.

• ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೌಕರ್ಯ ಕಲ್ಪಿಸಿ ಸ್ವಚ್ಚತೆ ಕಾಪಾಡುವುದು,

• ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವುದು. ನಗರ ಸಭೆಯ ಕಟ್ಟಡಗಳು ಹಾಗೂ ಆಸ್ತಿಯನ್ನು ರಕ್ಷಿಸುವುದು,

• ಜನನ ಮರಣಗಳ ನೋಂದಣಿ ಮಾಡಿಕೊಳ್ಳುವುದು.

• ಕ್ರೀಡಾಂಗಣ, ಮನರಂಜನಾ ಮಂದಿರ, ಉದ್ಯಾನವನಗಳನ್ನು ನಿರ್ಮಿಸಿ ಅವುಗಳನ್ನು ನಿರ್ವಹಿಸುವುದು.

*ನಗರದ ಕೊಳೆಗೇರಿವಾಸಿಗಳಿಗೆ ಸೌಕರ್ಯ ಒದಗಿಸುವುದರ ಮೂಲಕ ಅಲ್ಲಿನ ನಿವಾಸಿಗಳ ಜೀವನ ಮಟ್ಟ ಸುಧಾರಿಸುವಂತೆ ನೋಡಿಕೊಳ್ಳುವುದು.

* ಮಕ್ಕಳ ಕಲ್ಯಾಣ ಕೇಂದ್ರಗಳು, ವಾರಾಪರಾಧಿ ಗೃಹಗಳು ಭಿಕ್ಷುಕರ ಕಾಲೋನಿಗಳು, ಅನಾಥಾಶ್ರಮಗಳು, ಹೀಗೆ ಇತ್ಯಾದಿ ಸಹಾಯಕ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಿಕೊಂಡು ಹೋಗುವುದು.

*ಈಜುಕೊಳ, ಕ್ರೀಡಾಂಗಣ, ಸಂಗ್ರಹಾಲಯ, ವಾಹನ ನಿಲ್ದಾಣ, ವಾಚನಾಲಯ, ಸಾರ್ವಜನಿಕ ಗ್ರಂಥಾಲಯ, ಪಶುವೈದ್ಯಾಲಯ, ಸಿನಿಮಾ ಮಂದಿರ, ಮಾರುಕಟ್ಟೆ ಪ್ರಾಂಗಣ, ಶವಾಗಾರ, ಮುಂತಾದ ಕಟ್ಟಡಗಳ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯಗಳನ್ನು ಮಾಡುವುದು.

* ಮಳೆನೀರು ಕೊಯ್ಲು ವಿಕೆ ಯೋಜನೆ ನಿರ್ಮಿಸಿ ಕಾರ್ಯಗತಗೊಳಿಸುವುದು.

*ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು.

* ನಗರದ ಹಿಂದುಳಿದ ವರ್ಗದವರ ಮತ್ತು ದುರ್ಬಲ ವರ್ಗದವರ ಸುಧಾರಣೆ ಮತ್ತು ಪ್ರಗತಿಗಾಗಿ ಕ್ರಮ ಕೈಗೊಳ್ಳುವುದು.

* ನಗರ ಅಥವಾ ಪಟ್ಟಣವ ಸ್ವಚ್ಚ, ಸುಂದರ ಮತ್ತು ಹಸಿರಿನಿಂದ ಕಂಗೊಳಿಸಲು ಸೂಕ್ತ ಯೋಜನೆಗಳನ್ನು ಕೈಗೊಳ್ಳುವುದು.

9 ನಿಮ್ಮ ಸ್ಥಳೀಯ ಮಂಡಳಿಯ ಆದಾಯದ ಮೂಲಗಳಾವುವು?

ನನ್ನ ಸ್ಥಳೀಯ ಮಂಡಳಿ ಎಂದರೆ ಮಹಾನಗರಪಾಲಿಕೆಯಾಗಿದೆ.ನಾನು ದಾವಣಗೆರೆ ನಗರದಲ್ಲಿ ವಾಸಿಸುತ್ತಿದ್ದು ನಮ್ಮ ನಗರದ ಪ್ರಮುಖ ಆದಾಯದ ಪ್ರಮುಖ ಮೂಲಗಳೆಂದರೆ ಕಟ್ಟಡ ತೆರಿಗೆಗಳು, ಖಾಲಿಸ್ಥಳದ ಮೇಲಿನ ತೆರಿಗೆ, ಅಂಗಡಿ ಮತ್ತು ಮಾರಾಟಮಾಡುವ ತಳ್ಳು ಗಾಡಿಗಳ ಮೇಲೆ ವಿಧಿಸುವ ತೆರಿಗೆ, ನೀರಿನ ತೆರಿಗೆ, ಜೊತೆಗೆ ನಗರ ಸಭೆಗಳ ಅಧೀನದ ಕಟ್ಟಡಗಳು, ಮಾರುಕಟ್ಟೆಗಳಲ್ಲಿನ ಮಳಿಗೆಗಳಿಂದ ಬರುವ ಬಾಡಿಗೆ ಹಾಗೂ ಮಾರಾಟ ಮತ್ತು ಮನರಂಜನಾ ಉಪಕರ ಇತ್ಯಾದಿಗಳಾಗಿವೆ.

10 ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾಯಿಸಲು ಹಕ್ಕಿರುವ ಮತ್ತು ಹಕ್ಕಿಲ್ಲದ ಸದಸ್ಯರುಗಳನ್ನು ಪಟ್ಟಿ ಮಾಡಿ.

ನಾಮ ನಿರ್ದೇಶಿತ ಸದಸ್ಯರುಗಳಿಗೆ ಸಭೆಯ ಚರ್ಚೆಯಲ್ಲಿ ಭಾಗವಹಿಸುವ ಹಕ್ಕಿದ್ದು ಮತ ಹಾಕುವ ಹಕ್ಕಿಲ್ಲ. ಸ್ಥಳೀಯ ವಿಧಾನಸಭಾ ಶಾಸಕರು, ವಿಧಾನಪರಿಷತ್ತು ಶಾಸಕರು ಮತ್ತು ಲೋಕಸಭಾ ಸದಸ್ಯರುಗಳು ಸಭೆಗಳಲ್ಲಿ ಭಾಗವಹಿಸುವ ಮತ್ತು ಮತ ಹಾಕುವ ಹಕ್ಕನ್ನು ಹೊಂದಿರುತ್ತಾರೆ.

II ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿ ಸಮಿತಿಗಳನ್ನು ರಚಿಸಿಕೊಳ್ಳುವ ಅವಶ್ಯಕತೆಯನ್ನು ತಿಳಿಸಿ.

ಆಡಳಿತದ ಪರಿಣಾಮಕಾರಿ ನಿರ್ವಹಣೆಗಾಗಿ ಸ್ಥಾಯಿಸಮಿತಿಗಳನ್ನು ರಚಿಸಿಕೊಳ್ಳುವ ಅವಕಾಶವಿದ್ದು, ಸರ್ಕಾರವು ಆಡಳಿತ ಕ್ರಮಗಳನ್ನು ಸುಗಮಗೊಳಿಸಲು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸುತ್ತದೆ. ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳ ಕಾರ್ಯಗಳೊಂದಿಗೆ ಇನ್ನೂ ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಅವುಗಳೆಂದರೆ;

• ಗ್ರಾಮ ಪಂಚಾಯಿತಿಗಳ ವಾರ್ಷಿಕ ಯೋಜನಾ ಪ್ರಸ್ತಾವನೆಗಳನ್ನು ಕ್ರೋಡೀಕರಿಸಿ ಜಿಲ್ಲಾ ಪಂಚಾತಿಗಳಿಗೆ ಸಲ್ಲಿಸುವುದು.

• ರಾಜ್ಯ ಸರ್ಕಾರ ಅಥವಾ ಜಿಲ್ಲಾ ಪಂಚಾಯಿತಿಗಳು ಸೂಚಿಸುವ ಎಲ್ಲಾ ಕಲ್ಯಾಣದಾಯಕ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಕಾರ್ಯಗತಗೊಳಿಸುವುದು.

12: ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿಯನ್ನು ಕಲ್ಪಿಸಲಾಗಿರುವ ಸದಸ್ಯ ವರ್ಗದ ಪಟ್ಟಿ ನೀಡಿ.

ಸ್ಥಳೀಯ ಸಂಸ್ಥೆಗಳಲ್ಲಿ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿಯಿದೆ.

13 ಒಂದು ಪ್ರದೇಶವನ್ನು ಪಟ್ಟಣ ಮತ್ತು ನಗರವೆಂದು ವರ್ಗೀಕರಿಸಲು ಇರಬೇಕಾದ ಜನಸಂಖ್ಯಾ ಪ್ರಮಾಣವೆಷ್ಟು?

ನಗರ ಪ್ರದೇಶಗಳು ಜನಸಂಖ್ಯೆಯ ಆಧಾರವಾಗಿ ಪಟ್ಟಣ ಮತ್ತು ನಗರ ಪ್ರದೇಶಗಳೆಂದು ವರ್ಗೀಕರಿಸಲ್ಪಟ್ಟಿದ್ದು, 20ರಿಂದ 50 ಸಾವಿರದೊಳಗಿನ ಜನಸಂಖ್ಯೆಯನ್ನು ಹೊಂದಿದ್ದರೆ, ಅದನ್ನು ಪಟ್ಟಣವೆಂದು ಪರಿಗಣಿಸಲಾಗುತ್ತದೆ.
50 ಸಾವಿರದಿಂದ 3 ಲಕ್ಷದೊಳಗಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವನ್ನು ನಗರವೆಂತಲೂ ವರ್ಗೀಕರಿಸಲಾಗಿದೆ.
ಎರಡು ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಮತ್ತು ಕೋಟಿಗಿಂತಲೂ ಹೆಚ್ಚು ಆಧಾಯವಿರುವ ನಗರಪ್ರದೇಶಗಳಲ್ಲಿ ಮಹಾನಗರ ಪಾಲಿಕೆಗಳನ್ನು ರಚಿಸಲಾಗಿದೆ.

14 ಕರ್ನಾಟಕದಲ್ಲಿ ಪಂಚಾಯತಿ ರಾಜ್ಯದ ಮೂರು ಹಂತಗಳಾವುವು?

ಗ್ರಾಮ ಪಂಚಾಯತ್
ತಾಲೂಕು ಪಂಚಾಯತ್
ಜಿಲ್ಲಾ ಪಂಚಾಯತ್

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 2

ಅಧ್ಯಾಯ 24

ದಿನನಿತ್ಯ ಜೀವನದಲ್ಲಿ ಸಮಾಜಶಾಸ್ತ್ರ

| ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1 ನಮ್ಮ ಭಾವನೆಗಳನ್ನು ದೈಹಿಕ ಭಾಷೆಯ ಮೂಲಕ ಅಥವಾ ಮುಖಭಾವದ ಮೂಲಕ ವ್ಯಕ್ತಪಡಿಸುತ್ತೇವೆ.

2 ಸಮಾಜಶಾಸ್ತ್ರವು ಯಾವುದೇ ವಿಷಯವನ್ನು ಪೂರ್ವಾಗ್ರಹ ಇಲ್ಲದೆ ಅಧ್ಯಯನ ಮಾಡಲು ನೆರವಾಗುತ್ತದೆ.

3 ಸಾಮಾಜಿಕ ಅಂತರ್‌ಕ್ರಿಯೆಯ ಒಡನಾಟ ವನ್ನು ಸಾಮಾಜಿಕ ಅಂತರ್‌ಕ್ರಿಯೆ ಎಂದು ಕರೆಯುತ್ತೇವೆ.

| ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

4 ದಿನನಿತ್ಯದ ಜೀವನದಲ್ಲಿ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಮಾಜಶಾಸ್ತ್ರ ಹೇಗೆ ನೆರವಾಗುತ್ತದೆ?
ಸಮಾಜಶಾಸ್ತ್ರವು ನಮಗೆ ಸಮಾಜದ ಬಗೆಗೆ, ನಮ್ಮ ದಿನನಿತ್ಯದ ಜೀವನದ ಬಗೆಗೆ ಸರಿಯಾದ ಜ್ಞಾನವನ್ನು ನೀಡುತ್ತದೆ. ಯಾವುದೇ ವಿಚಾರವನ್ನು ಪೂರ್ವಾಗ್ರಹವಿಲ್ಲದೆ ಅಧ್ಯಯನ ಮಾಡಲು ನೆರವಾಗುತ್ತದೆ.

5 ಭಾಷೆಯ ಮಹತ್ವಕ್ಕೆ ಉದಾಹರಣೆಯನ್ನು ನೀಡಿ.

ಸಂವಹನ ನಡೆಸದೆ ನಮ್ಮ ದಿನನಿತ್ಯದ ಜೀವನವು ಮುನ್ನಡೆಯಲು ಸಾಧ್ಯವಿಲ್ಲ. ಸಂವಹನ ನಡೆಸಿ ಒಬ್ಬರು ಮತ್ತೊಬ್ಬರ ನಡವಳಿಕೆ ಮತ್ತು ಯೋಚನೆಯ ಮೇಲೆ ಪರಿಣಾಮ ಬೀರುವುದಾಗಿದೆ. ಈ ರೀತಿ ಸಂವಹನ ನಡೆಸಲು ಭಾಷೆ ಅಥವಾ ಸಂಕೇತಗಳು ಅತ್ಯಗತ್ಯವಾಗಿ ಬೇಕಾಗಿದೆ.
ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು.

6. ಪಾತ್ರಪ್ರಜ್ಞೆ ಎಂದರೇನು?

ಪ್ರತಿಯೊಬ್ಬ ವ್ಯಕ್ತಿಯೂ ತನಗೆ ವಹಿಸಿದ ಪಾತ್ರವನ್ನು ನಿರ್ವಹಿಸುವುದನ್ನೇ ಪಾತ್ರಪ್ರಜ್ಞೆ ಎಂದು ಕರೆಯುತ್ತೇವೆ.

||| ಕೆಳಗಿನ ಪ್ರಶ್ನೆಗಳಿಗೆ ನಾಲೈದು ವಾಕ್ಯಗಳಲ್ಲಿ ಉತ್ತರಿಸಿ.

7 ಭಾಷೆಗೂ ಮತ್ತು ಸಮಾಜಕ್ಕೂ ಇರುವ ಸಂಬಂಧವನ್ನು ವಿವರಿಸಿ.

ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಜನರೊಡನೆ ಒಡನಾಡುತ್ತೇವೆ.ಸಂವಹನ ನಡೆಸದೆ ನಮ್ಮ ದಿನನಿತ್ಯದ ಜೀವನವು ಮುನ್ನಡೆಯಲು ಸಾಧ್ಯವಿಲ್ಲ. ಈ ರೀತಿಯ ಜನರಲ್ಲಿ ಬೆರೆಯುವಿಕೆಯನ್ನು ಸಾಮಾಜಿಕ ಒಡನಾಟ ಎಂದು ಕರೆಯುತ್ತೇವೆ.ಹೀಗೆ ಸಮಾಜದಲ್ಲಿ ಬೇರೆಯವರೊಂದಿಗೆ ಬೆರೆತು ಅವರ ನಡವಳಿಕೆ ಮತ್ತು ಯೋಚನೆಗಳ ಮೇಲೆ ಪರಿಣಾಮ ಬೀರಲು ಭಾಷೆ ಮತ್ತು ಸಂಕೇತಗಳ ಮೂಲಕ ಸಂವಹನ ನಡೆಸುವುದುಅತ್ಯಗತ್ಯವಾಗಿದೆ.

8. ಪಾತ್ರಪ್ರಜ್ಞೆಯನ್ನು ಉದಾಹರಣೆಯೊಂದಿಗೆ ವಿವರಿಸಿ.

ಪ್ರತಿಯೊಬ್ಬ ವ್ಯಕ್ತಿಯೂ ತನಗೆ ವಹಿಸಿದ ಪಾತ್ರವನ್ನು ನಿರ್ವಹಿಸುವುದನ್ನೇ ಪಾತ್ರಪ್ರಜ್ಞೆ ಎಂದು ಕರೆಯುತ್ತೇವೆ.
ಉದಾಹರಣೆಗೆ
ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಿದ ಮೇಲೆ ಅದಕ್ಕೆ ಅಗತ್ಯವಾದ ಔಷಧಿಯನ್ನು ಮತ್ತು ಚಿಕಿತ್ಸೆಯನ್ನು ಸೂಚಿಸುತ್ತಾರೆ. ಅವರ ಸೂಚನೆಗೆ ಅನುಗುಣವಾಗಿ ದಾದಿಯು ಔಷಧಿಯನ್ನು ನೀಡಿ ರೋಗಿಯ ಶುಶೂಷೆಯನ್ನು ಮಾಡುತ್ತಾರೆ.

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 2

ಅಧ್ಯಾಯ 25

ಸಮಾಜದ ಪ್ರಕಾರಗಳು

ಅಭ್ಯಾಸಗಳು

ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1 ಬೇಟೆಯಾಡುವ ಸಮಾಜದ ಸದಸ್ಯರು, ಬೇಟೆಯಾಡಲು ಕಲ್ಲಿನ – ಆಯುಧಗಳನ್ನು ಉಪಯೋಗಿಸುತ್ತಾರೆ.

2.ಕೃಷಿ ಸಮಾಜದಲ್ಲಿ ಉಳುಮೆಗೆ ನೇಗಿಲನ್ನು ಬಳಸುತ್ತಾರೆ.

3 ಕೌಶಲ್ಯದ ಕೆಲಸ ಹಂಚುವುದಕ್ಕೆ ಶ್ರಮವಿಭಜನೆ ಎಂದು ಹೆಸರು.

|| ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

4 ಪಶುಪಾಲನ ಸಮಾಜ ಎಂದರೇನು?
ತಮ್ಮ ಜೀವನಾಧಾರಕ್ಕೆ ಪೂರಕವಾಗಿ ಪಶುಗಳನ್ನು ಹಿಂಡು ಹಿಂಡಾಗಿ ಸಾಕುವ ಸಮಾಜವೇ ಪಶುಪಾಲನಾ ಸಮಾಜ,

5 ಕೃಷಿ ಸಮಾಜ ಎಂದರೇನು?
ಬೇಸಾಯವನ್ನು ಅವಲಂಬಿಸಿ ಬದುಕುವ ಸಮಾಜವನ್ನು ಕೃಷಿಸಮಾಜ ಎನ್ನುತ್ತಾರೆ.

6 ಕೈಗಾರಿಕಾ ಸಮಾಜ ಎಂದರೇನು?
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಅವಲಂಬಿಸಿ ಬದುಕುವ ಸಮಾಜವನ್ನು ಕೈಗಾರಿಕಾ ಸಮಾಜ ಎಂದು ಕರೆಯಲಾಗುತ್ತದೆ.
7 ಸಮಾಜದ ಪ್ರಕಾರಗಳು ಯಾವುವು?
1. ಬೇಟೆಯಾಡುವ ಮತ್ತು ಆಹಾರ ಸಂಗ್ರಹಿಸುವ ಸಮಾಜಗಳು
2. ಪಶುಪಾಲನ ಸಮಾಜ
3. ಕೃಷಿ ಸಮಾಜ
4. ಕೈಗಾರಿಕಾ ಸಮಾಜ

||| ಕೆಳಗಿನ ಪ್ರಶ್ನೆಗಳಿಗೆ ನಾಲೈದು ವಾಕ್ಯಗಳಲ್ಲಿ ಉತ್ತರಿಸಿ.

8 ಬೇಟೆಯಾಡುವ ಹಾಗೂ ಆಹಾರ ಸಂಗ್ರಹಿಸುವ ಸಮಾಜದ ಜೀವನ ಶೈಲಿ ವಿವರಿಸಿ.
ಈ ಸಮಾಜವು ಬಹಳ ಚಿಕ್ಕದಾಗಿದ್ದು, ಕೆಲವೇ ಮಂದಿ ಜನರನ್ನು ಒಳಗೊಂಡಿದ್ದು ಸಂಚಾರೀ ಸ್ವರೂಪದ ಜೀವನಶೈಲಿಯನ್ನು ಹೊಂದಿದೆ. ಇವರು ಉಪಯೋಗಿಸುವ ಆಯುಧಗಳು ಕಲ್ಲಿನಿಂದ ಮಾಡಿದ ಕೊಡಲಿ, ಈಟಿ, ಚೂರಿ ಮುಂತಾದವು. ಈ ಜನರು ತಮ್ಮ ಅಸ್ತಿತ್ವಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾರೆ ಹಾಗೂ ಪ್ರಕೃತಿ ಸಹಜವಾಗಿ ಬೆಳೆದಿರುವ ಹಣ್ಣುಗಳು, ಬೀಜಗಳು, ಗೆಡ್ಡೆ-ಗೆಣಸುಗಳು, ತರಕಾರಿಗಳನ್ನು ಸಂಗ್ರಹಿಸುತ್ತಾರೆ. ಸಂಪತ್ತನ್ನು ಸಂಪಾದಿಸುವ ಒಲವು ಇವರಿಗಿಲ್ಲ. ಹಂಚಿಕೊಂಡು ಬದುಕುವುದು ಇವರ ರೀತಿಯಾಗಿದೆ.

9 ಪಶುಪಾಲನ ಸಮಾಜದ ಲಕ್ಷಣಗಳನ್ನು ತಿಳಿಸಿ.
ಪಶುಪಾಲನ ಸಮಾಜದ ಗುಣಲಕ್ಷಣಗಳು

1. ಈ ಸಮಾಜ ದೊಡ್ಡದಾಗಿದ್ದು ಕೆಲವೊಮ್ಮೆ ನೂರಾರು ಹಾಗೂ ಸಾವಿರಾರು ಜನರನ್ನು ಒಳಗೊಂಡಿರುತ್ತವೆ.

2. ಈ ಸಮಾಜ ಸಾಮಾನ್ಯವಾಗಿ ಹುಲ್ಲುಗಾವಲು ಪ್ರದೇಶಗಳಲ್ಲಿ, ಬೆಟ್ಟ, ಗುಡ್ಡಪ್ರದೇಶಗಳಲ್ಲಿ, ಮರುಭೂಮಿ ಮತ್ತು ಕೃಷಿಗೆ ಅನುಕೂಲವಿಲ್ಲದ ಪ್ರದೇಶಗಳಲ್ಲಿ ಕಾಣಬಹುದು.

3. ಈ ಸಮಾಜದಲ್ಲಿ ಯಾರು ಹೆಚ್ಚು ಪಶುಗಳ ಒಡೆತನ ಹೊಂದಿರುತ್ತಾರೋ ಅವರು ಉಳಿದವರಿಗಿಂತ ಹೆಚ್ಚು ಪ್ರಭಾವಶಾಲಿಯಾಗುತ್ತಾರೆ. ಅವರು ಶ್ರೀಮಂತರೆನಿಸಿಕೊಂಡು ಇತರರಿಗೆ ನಾಯಕರಾಗುತ್ತಾರೆ.

10 ಕೃಷಿ ಸಮಾಜದ  ಲಕ್ಷಣಗಳನ್ನು ವಿವರಿಸಿ.
1. ಕೃಷಿಕ ಸಮಾಜದಲ್ಲಿ ಬೇಸಾಯವು ಪ್ರಮುಖ ಉದ್ಯೋಗವಾಗಿದೆ. ಆದುದರಿಂದ ಜನರು ಒಂದೇ ಕಡೆ ನೆಲೆಸಿ, ಗ್ರಾಮಗಳು ಹುಟ್ಟಿಕೊಂಡವು.

2. ನೇಗಿಲ ಸಂಶೋಧನೆ ಮತ್ತು ನೇಗಿಲನ್ನು ಎಳೆಯಲು ಪ್ರಾಣಿಗಳ ಬಳಕೆ ಇವುಗಳಿಂದ ಆಹಾರದ ಉತ್ಪಾದನೆ ಹೆಚ್ಚಾಯಿತು.

3. ಆಹಾರದ ಉತ್ಪಾದನೆ ಹೆಚ್ಚಾಗಿ, ಹೆಚ್ಚಿನ ಜನರು ಬೇರೆ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ವಿವಿಧ ಕೌಶಲ್ಯ ಗಳು ವೃಧ್ಧಿಯಾದವು.

11. ಕೈಗಾರಿಕಾ ಸಮಾಜದ ಲಕ್ಷಣಗಳನ್ನು ತಿಳಿಸಿ.

ಕೈಗಾರಿಕಾ ಸಮಾಜದ ಗುಣಲಕ್ಷಣಗಳು

1. ಹೊಸ ಹೊಸ ಶೋಧಗಳು ಸಾಮಾಜಿಕ ಪರಿವರ್ತನೆಯನ್ನೇ ಸೃಷ್ಟಿಸಿದವು. ಹಬೆಯಂತ್ರ, ಆಂತರಿಕ ದಹನ ಯಂತ್ರ, ವಿದ್ಯುತ್ ಶಕ್ತಿ, ಆಣುಶಕ್ತಿ ಮುಂತಾದವು ಬಹು ವ್ಯಾಪಕ ಸ್ವರೂಪದ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ತಂದಿವೆ ಮತ್ತು ತರುತ್ತಲಿವೆ.

2. ಕೈಗಾರಿಕೆಗಳನ್ನು ಸ್ಥಾಪಿಸಿರುವ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಜನ ವಲಸೆ ಬರುತ್ತಾರೆ. ಆದುದರಿಂದಾಗಿ ಜನಸಂಖ್ಯೆ ಪ್ರಮಾಣ ಜಾಸ್ತಿಯಾಗುತ್ತದೆ.

3. ಕೈಗಾರಿಕಾ ಸಮಾಜದ ಎಲ್ಲಾ ಅಂಗಗಳಲ್ಲಿಯೂ ಶ್ರಮವಿಭಜನೆ ಕಂಡು ಬರುತ್ತದೆ.

<span;>ಅಧ್ಯಾಯ 26 ಜಲಗೋಳ

ಬಿಟ್ಟಿರುವ ಸ್ಥಳವನ್ನು ಸೂಕ್ತ ಪದಗಳಿಂದ ಭರ್ತಿಮಾಡಿರಿ.

1. ಖಂಡಾವರಣ ಪ್ರದೇಶದ ಸರಾಸರಿ ಆಳವು 100ಫ್ಯಾದಂಗಳು ಆಗಿದೆ

2. ಒಂದು ಫ್ಯಾದಮ್ 6 ಅಡಿಗಳಿಗೆ ಸಮವಾಗಿರುತ್ತದೆ.

3 ಪೆಸಿಫಿಕ್‌ ಸಾಗರದ ಅತ್ಯಂತ ಆಳವಾದ ಸ್ಥಳ ಟೊಂಗ ಪ್ರಪಾತಆಗಿದೆ.

4 ಸಾಗರಗಳ ಸರಾಸರಿ ಲವಣತೆಯ ಪ್ರಮಾಣ 35/°°° ರಷ್ಟಿದೆ.

5 ಹುಣ್ಣಿಮೆಯ ದಿನಗಳಲ್ಲಿ ಕಂಡುಬರುವ ಉಬ್ಬರಗಳು ಅಧಿಕ ಉಬ್ಬರಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

6 ಜಲಗೋಳ ಎಂದರೇನು ?
ಜಲರಾಶಿಯಿಂದ ಕೂಡಿದ ಭೂಮಿಯ ಪ್ರದೇಶವನ್ನು ಜಲಗೋಳ ಎಂದು ಕರೆಯಲಾಗುತ್ತದೆ. ಭೂಮಿಯ ಮೇಲ್ಮೈಯ 70-78 ರಷ್ಟು ಭಾಗ ಅಂದರೆ ಸುಮಾರು 361 ದಶಲಕ್ಷ ಚಕಿಮೀ ಪ್ರದೇಶ ಜಲರಾಶಿಯಿಂದ ಕೂಡಿದೆ. ನೀರಿನ ಮೂಲಗಳಾದ ಕೊಳ, ಕೆರೆ, ನದಿ, ಸಮುದ್ರಗಳನ್ನು ಹೊಂದಿರುವ ಪ್ರದೇಶವನ್ನು ಒಟ್ಟಾಗಿ ಜಲಗೋಳ ಎಂದು ಕರೆಯಲಾಗುತ್ತದೆ.

7 ಸಾಗರತಳದ ಭೂ ಸ್ವರೂಪದ ನಾಲ್ಕು ಪ್ರಮುಖ ಭಾಗಗಳನ್ನು ತಿಳಿಸಿ
ಭೂ ಸ್ವರೂಪಗಳ ಗುಣಲಕ್ಷಣಗಳನ್ನು ಆಧರಿಸಿ ಸಾಗರ ತಳವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು, ಅವುಗಳೆಂದರೆ : ಖಂಡಾವರಣ ಪ್ರದೇಶ, ಖಂಡಾವರಣ ಇಳಿಜಾರು, ಆಳಸಾಗರ ಮೈದಾನ ಮತ್ತು ಸಾಗರ ತಗ್ಗುಗಳು.

ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ ಭಾಗವನ್ನೇ ಖಂಡಾವರಣ ಪ್ರದೇಶವೆನ್ನುವರು.

ಖಂಡಾವರಣ ಇಳಿಜಾರು ಸಾಗರತಳದ ಎರಡನೇ ಭಾಗವಾಗಿದ್ದು, ಕಡಿದಾದ ಇಳಿಜಾರಿನಿಂದ ಕೂಡಿದೆ.

ಸಾಗರಗಳ ತಳದಲ್ಲಿ ವಿಸ್ತಾರವಾದ ಮೈದಾನ ವಿರುವುದು. ಇದನ್ನು ಆಳಸಾಗರ ಮೈದಾನ ಅಥವಾ ‘ಆಬಿಸಲ್ ಮೈದಾನ’ ವೆನ್ನುವರು.

ಸಾಗರ ತಗ್ಗುಗಳನ್ನು ಸಾಗರ ಪ್ರಪಾತಗಳೆಂದು ಕರೆಯುವರು.

8 ಸಾಗರ ಪ್ರವಾಹಗಳಿಗೂ ಮತ್ತು ಉಬ್ಬರವಿಳಿತಗಳಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.
ನಿಶ್ಚಿತ ದಿಕ್ಕಿನಲ್ಲಿ ನಿರಂತರವಾಗಿ ಹರಿಯುವ ಸಾಗರದ ಮೇಲ್ಮೈ ನೀರನ್ನು ‘ಸಾಗರ ಪ್ರವಾಹ’ ಗಳೆಂದು ಕರೆಯುತ್ತಾರೆ.
ಸಮುದ್ರ  ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನೇ ‘ಉಬ್ಬರ ವಿಳಿತ’ ಎಂದು ಕರೆಯುವರು,

9 ಗರಿಷ್ಠ ಉಬ್ಬರ ಮತ್ತು ಕನಿಷ್ಠ ಉಬ್ಬರಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ಸಮುದ್ರ ಮತ್ತು ಸಾಗರಗಳ ನೀರಿನ ಮಟ್ಟವು ಏರುವುದನ್ನು ಗರಿಷ್ಠ ಪ್ರಮಾಣದ ಉಬ್ಬರ ಎನ್ನುವರು.
ಗರಿಷ್ಠ ಪ್ರಮಾಣದ ಉಬ್ಬರವು ಭೂಮಿ, ಚಂದ್ರ, ಸೂರ್ಯ ಇವುಗಳು ಒಂದೇ ಸರಳ ರೇಖೆಯಲ್ಲಿರುವ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ ಉಂಟಾಗುತ್ತದೆ.

ಸಮುದ್ರ ಮತ್ತು ಸಾಗರಗಳ ನೀರಿನ ಮಟ್ಟವು ಇಳಿಯುವುದನ್ನು ಕನಿಷ್ಠ ಪ್ರಮಾಣದ ಉಬ್ಬರ ಎನ್ನುವರು.ಕನಿಷ್ಠ ಉಬ್ಬರಗಳು ವೃದ್ಧಿಚಂದ್ರ ಮತ್ತು ಅರ್ದಾದಿತ್ಯ ಚಂದ್ರನ ದಿನಗಳಲ್ಲಿ ಕಂಡುಬರುತ್ತವೆ. ಕನಿಷ್ಠ ಉಬ್ಬರಗಳ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿದ್ದು ಚಂದ್ರನು ಭೂಮಿಗೆ ಲಂಬವಾಗಿರುತ್ತಾನೆ.

10 ಸಾಗರಗಳನ್ನು ನಾವು ಹೇಗೆ ಸಂರಕ್ಷಿಸಬೇಕು?
ಸಾಗರಗಳನ್ನು ಈ ಕೆಳಕಂಡ ಕ್ರಮಗಳ ಮೂಲಕ ರಕ್ಷಿಸಬಹುದು.
1. ಸಾಗರಗಳ ಮೂಲಕ ಹಡಗುಗಳಲ್ಲಿ ಕಚ್ಚಾ ತೈಲವನ್ನು ಸಾಗಿಸುವ ಬದಲು ಕೊಳವೆ ಮಾರ್ಗಗಳ ಮೂಲಕ ಸಾಗಿಸುವುದು.

2. ಅಣು ಇಂಧನ ತಾಜ್ಯವಸ್ತುಗಳನ್ನು ಸಾಗರಗಳಿಗೆ ಹಾಕುವುದನ್ನು ನಿಯಂತ್ರಿಸುವುದು,

3. ತೀರವಲಯದಲ್ಲಿರುವ ತೈಲ-ರಾಸಾಯನಿಕ ಕೈಗಾರಿಕೆಗಳು ಮಾಲಿನ್ಯ ಉಂಟುಮಾಡದಂತೆ ತೀವ್ರ ಕ್ರಮಕೈಗೊಳ್ಳುವುದು.

4. ಯಾವುದೇ ರೀತಿಯ ತ್ಯಾಜ್ಯ ವಸ್ತುಗಳನ್ನು ಬಂದರು ಹಾಗೂ ಹಡಗು ತಾಣಗಳಲ್ಲಿ ಎಸೆಯುವುದನ್ನು ನಿಯಂತ್ರಿಸುವುದು

5. ತೀರಗಳಲ್ಲಿ ಅದಿರುಗಳ ಸಂಗ್ರಹಣೆ, ಗಣಿಗಾರಿಕೆ ಮೊದಲಾದವುಗಳನ್ನು ನಿಯಂತ್ರಿಸುವುದು.

6.ಕರಾವಳಿಯ ಮರಳು ದಂಡೆಗಳನ್ನು ಬೀಚ್ ವಿವಿಧ ರೀತಿಯಲ್ಲಿ ಹಾಳುಗೆಡವುತ್ತಿದ್ದು , ಅವುಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ.

||| ಹೊಂದಿಸಿ ಬರೆಯಿರಿ,

II ಫ್ಯಾದಮ್      ಸಾಗರದ ಆಳ

12 ಓಯೋಶಿವೋ. ಶೀತ ಪ್ರವಾಹ

13. ಗಲ್ಫ್ ಸ್ಟ್ರೀಮ್. ಅಮೆರಿಕಾದ ಪೂರ್ವ ಕರಾವಳಿ (ಯುಎಸ್ಎ)

14. ಸಮುದ್ರ ಪರ್ವತಗಳು ಆಳ ಸಾಗರ ಮೈದಾನ

15 ಅಗುಲ್ಹಾಸ್ ಪ್ರವಾಹ. ಹಿಂದೂ ಮಹಾಸಾಗರ ಪ್ರವಾಹ

IN ಕೆಳಗಿನವುಗಳನ್ನು ಅರ್ಥೈಸಿ

16. ಖಂಡಾವರಣ ಇಳಿಜಾರು:
ಖಂಡಾವರಣ ಇಳಿಜಾರು ಸಾಗರತಳದ ಎರಡನೇ ಭಾಗವಾಗಿದ್ದು, ಕಡಿದಾದ ಇಳಿಜಾರಿನಿಂದ ಕೂಡಿದೆ. ಇದು ಖಂಡಾವರಣ ಪ್ರದೇಶ ಹಾಗೂ ಆಳಸಾಗರ ಮೈದಾನಗಳನ್ನು ಸಂಪರ್ಕಿಸುತ್ತದೆ. ಈ ವಲಯದಲ್ಲಿಯೇ ಸಾಗರದ ಕಂದರಗಳು  ಕಂಡು ಬರುತ್ತವೆ.

17. ಲವಣತೆಸಾಗರ ಅಥವಾ ಸಮುದ್ರದ ನೀರಿನಲ್ಲಿ ಕರಗಿರುವ ಉಪ್ಪಿನಾಂಶಗಳ ಪ್ರಮಾಣಗಳನ್ನು ‘ಲವಣತೆ’ ಎನ್ನುವರು. ನೀರಿನಲ್ಲಿ ಲವಣಾಂಶವು ಹೆಚ್ಚು ಕಂಡುಬರುವುದರಿಂದಲೇ ಸಮುದ್ರ ಹಾಗೂ ಸಾಗರದ ನೀರು ಉಪ್ಪಾಗಿರುವುದು. ಸಾಗರದ ನೀರಿನ ಲವಣತೆ 35/°°°(ಅಂದರೆ 1000 ಭಾಗದಲ್ಲಿ 35 ಭಾಗ ಎಂದರ್ಥ) ಸಾಗರದ ನೀರು ಆವಿಯಾಗಿ ಅದರಲ್ಲಿರುವ ಲವಣಗಳು ಅಲ್ಲಿಯೇ ಉಳಿದಿರುವುದರಿಂದ ನೀರು ನಿರಂತರವಾಗಿ ಉಪ್ಪಾಗಿ ಪರಿಣಮಿಸುವುದು.

18, ಉಷ್ಣ ಮತ್ತು ಶೀತ ಸಾಗರ ಪ್ರವಾಹಗಳು
ನಿಶ್ಚಿತ ದಿಕ್ಕಿನಲ್ಲಿ ನಿರಂತರವಾಗಿ ಹರಿಯುವ ಸಾಗರದ ಮೇಲ್ಮೈ ನೀರನ್ನು ‘ಸಾಗರ ಪ್ರವಾಹ’ ಗಳೆಂದು ಕರೆಯುತ್ತಾರೆ. ಸಾಗರ ಪ್ರವಾಹಗಳಲ್ಲಿ ಎರಡು ವಿಧಗಳಿವೆ.

ಉಷ್ಣ ಸಾಗರ ಪ್ರವಾಹಗಳು: ಇವುಗಳು ಸಮಭಾಜಕ ವೃತ್ತ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪ ಧ್ರುವೀಯ ಪ್ರದೇಶಗಳ ಕಡೆಗೆ ಹರಿಯುತ್ತವೆ.

ಶೀತಸಾಗರ ಪ್ರವಾಹಗಳು: ಇವುಗಳು ಧ್ರುವಪ್ರದೇಶದಲ್ಲಿ ಪ್ರಾರಂಭವಾಗಿ ಸಮಭಾಜಕ ವೃತ್ತದ ಕಡೆಗೆ ಹರಿಯುತ್ತವೆ.

19, ಅಧಿಕ ಭರತ ಮತ್ತು ಕನಿಷ್ಪಭರತಸಮುದ್ರ ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನೇ ‘ಉಬ್ಬರ ವಿಳಿತ’ ಎಂದು ಕರೆಯುವರು.

ಉಬ್ಬರವಿಳಿತಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ ಅವುಗಳೆಂದರೆ ಆ) ಏರುಬ್ಬರ  : ಸಮುದ್ರ ಅಥವಾ ಸಾಗರದ ನೀರು ಒಮ್ಮೆ ಏರುವುದರಿಂದ ಉಂಟಾಗುತ್ತದೆ. ಇದನ್ನು ಏರುಬ್ಬರ ಅಥವಾ ಪ್ರವಾಹದ ಉಬ್ಬರ ಅಥವಾ ಅಧಿಭರವೆನ್ನುವರು. ಆ) ಇಳಿಉಬ್ಬರ : ಒಮ್ಮೆ ಏರುಉಬ್ಬರದ ಪ್ರಮಾಣದಷ್ಟೇ ನೀರಿನ ಮಟ್ಟ ಕೆಳಗೆ ಇಳಿಯುವುದು, ಇದನ್ನೇ ಇಳಿಉಬ್ಬರ ಅಥವಾ ಕನಿಷ್ಠ ಭರತ ಎಂದು ಕರೆಯುವರು.

20. ಬೆಂಗುಲಾಪ್ರವಾಹ ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತ ಸಾಗರ ಪ್ರವಾಹಗಳಲ್ಲಿ ಬೆಂಗ್ವುಲಾ ಪ್ರವಾಹ ಒಂದಾಗಿದೆ.ಇದು ಕೇಪ್ ಆಫ್ ಗುಡ್ ಹೋಪ್‌ನಿಂದ ಉತ್ತರಾಭಿಮುಖವಾಗಿ ಹರಿಯುತ್ತದೆ, ಅಲ್ಲಿ ಇದು ಪಶ್ಚಿಮ ಆಫ್ರಿಕಾದ ಕರಾವಳಿಯ ಸಮಭಾಜಕದ ಕಡೆಗೆ ಚಲಿಸುತ್ತದೆ.

21, ಉಬ್ಬರವಿಳಿತಗಳು ಸಮುದ್ರ  ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನೇ ‘ಉಬ್ಬರ ಎಳಿತ’ ಎಂದು ಕರೆಯುವರು, ಉಬ್ಬರವಿಳಿತಗಳಿಗೆ ಮುಖ್ಯಕಾರಣಗಳೆಂದರೆ, ಚಂದ್ರನ ಗುರುತ್ವಾಕರ್ಷಣ ಶಕ್ತಿ, ಸೂರ್ಯನ ಗುರುತ್ವಾಕರ್ಷಣ ಶಕ್ತಿ, ಭೂಮಿಯ ದೈನಂದಿನ ಚಲನೆ ಮತ್ತು ಭೂಮಿಯ ಕೇಂದ್ರಾಪಗಮನ ಶಕ್ತಿ.

<span;>ಅಧ್ಯಾಯ 27 ಜೀವಗೋಳ ಎಂಟನೇ ತರಗತಿ

ಅಭ್ಯಾಸಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1.ಜೀವಗೋಳವೆಂದರೇನು ?
ನಮಗೆ ತಿಳಿದಿರುವಂತೆ ವಿವಿಧ ಬಗೆಯ ಜೀವಿಗಳನ್ನು ಒಳಗೊಂಡಿರುವ ಏಕೈಕ ಗ್ರಹ ‘ನಮ್ಮ ಭೂಮಿ’. ಜೀವಗೋಳವು ಭೂಮಿಯ ನಾಲ್ಕನೆ ಆಯಾಮವಾಗಿ ಎಲ್ಲಾರೀತಿಯ ಜೀವಿಗಳನ್ನು ಒಳಗೊಂಡಿದೆ.

2 ‘ಜೀವಿ ಪರಿಸರ ಶಾಸ್ತ್ರ’ ವನ್ನು ವ್ಯಾಖ್ಯಾನಿಸಿ
ಜೀವಿ ಪರಿಸರ ಶಾಸ್ತ್ರವು ಜೀವಿಗಳು ಮತ್ತು ಅವುಗಳ
ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸರಗಳ ನಡುವಿನ ಸಂಬಂಧವನ್ನು ವಿವರಿಸುವ  ವಿಜ್ಞಾನವಾಗಿದೆ.

3 ಪರಿಸರ ಮಾಲಿನ್ಯದ ವಿಧಗಳನ್ನು ಹೆಸರಿಸಿ.
ಪರಿಸರ ಮಾಲಿನ್ಯದಲ್ಲಿ ಹಲವಾರು ವಿಧಗಳಿದ್ದು ಮಾಲಿನ್ಯಕಾರಕಗಳು ಮತ್ತು ಮಾಲಿನ್ಯದ ಸ್ವರೂಪದ ಆಧಾರದ ಮೇಲೆ ವಿಂಗಡಿಸಲಾಗಿದ್ದು ಅವುಗಳೆಂದರೆ- ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ ಮತ್ತು ಶಬ್ದಮಾಲಿನ್ಯ

4 ಜಲಮಾಲಿನ್ಯವನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳಾವುವು?
ಜಲಮಾಲಿನ್ಯ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೆಂದರೆ – ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸುವುದು, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವುದು, ಚರಂಡಿ ನೀರನ್ನು ಸಂಸ್ಕರಿಸುವುದು,ಕಸದ ರಾಶಿಗಳನ್ನು ಜಲರಾಶಿಗಳಲ್ಲಿ ಹಾಕುವುದನ್ನು ಜನರು ನಿಲ್ಲಿಸಬೇಕು.

5 ಜೀವಿ ವೈವಿಧ್ಯ ಎಂದರೇನು ?
ಒಂದು ಭೂ ಭಾಗದಲ್ಲಿ ಕಂಡುಬರುವ ಎಲ್ಲಾ ಬಗೆಯ ಸಸ್ಯಗಳು ಹಾಗೂ ಪ್ರಾಣಿ ಪ್ರಬೇಧಗಳನ್ನು ಅಲ್ಲಿಯ ‘ಜೀವ ವೈವಿಧ್ಯ’ ವೆಂದು ಕರೆಯುವರು.

|| ಈ ಕೆಳಗಿನವುಗಳನ್ನು ಅರ್ಥೈಸಿ.

6. ಜೀವಗೋಳ
ನಮಗೆ ತಿಳಿದಿರುವಂತೆ ವಿವಿಧ ಬಗೆಯ ಜೀವಿಗಳನ್ನು ಒಳಗೊಂಡಿರುವ ಏಕೈಕ ಗ್ರಹ ‘ನಮ್ಮ ಭೂಮಿ’. ಜೀವಗೋಳವು ಭೂಮಿಯ ನಾಲ್ಕನೆ ಆಯಾಮವಾಗಿ ಎಲ್ಲಾರೀತಿಯ ಜೀವಿಗಳನ್ನು ಒಳಗೊಂಡಿದೆ.

7, ಪರಿಸರ ಅಸಮತೋಲನ
ನೈಸರ್ಗಿಕ ಅಥವಾ ಮಾನವನಿಂದ ಉಂಟಾಗುವ ಅಡಚಣೆಗಳು ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸಿದಾಗ ಪರಿಸರ ಅಸಮತೋಲನ ಸಂಭವಿಸುತ್ತದೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಕೈಗಾರೀಕರಣ ಹಾಗೂ ಅರಣ್ಯ ನಾಶದಿಂದ ಇಂದು ಪರಿಸರ ಅಸಮತೋಲನವಾಗುತ್ತಿದೆ.ಮಾನವ ತನ್ನ ಬದುಕನ್ನು ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಆಸೆ, ದುರಾಸೆಗೆ ಒಳಗಾಗಿ ಪರಿಸರದ ಮೇಲೆ ಮಿತಿಮೀರಿ ದೌರ್ಜನ್ಯ ಎಸೆಗಿದಾಗ ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳು ಸಂಪೂರ್ಣವಾಗಿ ಬರಿದಾಗುವ ಸಾಧ್ಯತೆಯಿದೆ .

8. ಜಾಗತಿಕ ತಾಪಮಾನ
ಭೂಮಿಯ ಉಷ್ಣಾಂಶವು ದಿನಗಳು ಕಳೆದಂತೆ ನಿಧಾನವಾಗಿ ಹೆಚ್ಚುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ವಾಯುಮಂಡಲದ ಉಷ್ಣಾಂಶವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನೇ ‘ವಿಶ್ವ ಉಷ್ಣಾಂಶ ಹೆಚ್ಚಳ’ ಎಂದು ಕರೆಯುವರು. ಈ ಹೆಚ್ಚಳಕ್ಕೆ ಹಸಿರು ಮನೆಯ ಪರಿಣಾಮ ಕಾರಣವಾಗಿದ್ದು, ಇದರಿಂದ ವಾಯುಗುಣದ ವಲಯಗಳು ಬದಲಾವಣೆ ಹೊಂದುತ್ತಿವೆ, ಹಿಮನದಿಗಳು ಕರುಗುತ್ತಿವೆ ಮತ್ತು ಸಮುದ್ರದ ನೀರಿನ ಮಟ್ಟವು ಹೆಚ್ಚುತ್ತಿದೆ. ಹಿಮಾಲಯ ಹಾಗೂ ಅಂಟಾರ್ಕ್ಟಿಕ್ರಗಳಲ್ಲಿ ಈಗಾಗಲೇ ಹಿಮರಾಶಿಯು ಕರುಗುತ್ತಿದೆ.

9. ಹಸಿರುಮನೆ ಪರಿಣಾಮ
ಹಸಿರು ಮನೆಯ ಪರಿಣಾಮ (Green House Effect): ಭೂಮಿಯು ಸೂರ್ಯನಿಂದ ಶಕ್ತಿಯನ್ನು ವಿಕಿರಣದ ರೂಪದಲ್ಲಿ ಪಡೆಯುವುದು. ಹೀಗೆ ಪಡೆದ ಶಕ್ತಿಯಲ್ಲಿ ಬಹಳಷ್ಟನ್ನು ಭೂಮಿಯು ಪ್ರತಿಫಲಿಸುವುದು. ಈ ಕ್ರಿಯೆಗಳಿಂದಾಗಿಯೇ ಭೂಮಿಯು ಪಡೆಯುವ ಹಾಗೂ ಪ್ರತಿಫಲಿಸುವ ಶಕ್ತಿಯ ನಡುವೆ ಸಮತೋಲನವಿರುವುದು. ಇತ್ತೀಚಿಗೆ ಜೀವಾವಶೇಷ ಇಂಧನಗಳ ಬಳಕೆಯಿಂದ ಹಸಿರುಮನೆ ಅನಿಲಗಳ ಬಿಡುಗಡೆಯೂ ಸಹ ನಿರಂತರವಾಗಿ ಹೆಚ್ಚುತ್ತಿದೆ. ಇಂಗಾಲದ ಡೈ ಆಕ್ಸೆಡ್ ಮತ್ತು ಇತರೆ ಹಸಿರು ಮನೆ ಅನಿಲಗಳು ಬಿಡದೆ ಭೂಮಿಯಿಂದ ಬಿಡುಗಡೆಯಾಗುವ ಉಷ್ಣಾಂಶವನ್ನು ಹೊರಹೋಗಲು ಬಿಡದೆ ಹೀರಿ ಸಂಗ್ರಹಿಸುವುದರಿಂದ ವಾಯುಮಂಡಲದ ಉಷ್ಣಾಂಶ ಹೆಚ್ಚಾಗುವುದು. ಇದನ್ನೇ ‘ಹಸಿರು ಮನೆಯ ಪರಿಣಾಮ’ ಎಂದು ಕರೆಯುವರು.

10, ಓಜೋನ್ ತೆಳುವಾಗುವಿಕೆ
ಓಜೋನ್ ಪದರ ಕ್ಷೀಣತೆ: (Ozone Depletion): ವಾಯುಮಂಡಲದ ಸಮೋಷ್ಣ ವಲಯದಲ್ಲಿ ತೆಳುವಾದ ಓಜೋನ್ ಅನಿಲದ ಪದರವಿರುವುದು. ಇದು ಸೂರ್ಯನಿಂದ ಪ್ರಸರಿಸುವ ಅತ್ಯಂತ ಅಪಾಯಕಾರಿಯಾದ ಅತಿನೇರಳೆ (UV) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಬಗೆಯ ಜೀವರಾಶಿಗಳನ್ನು ರಕ್ಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಾತಾನುಕೂಲಗಳು (AC), ರೆಫ್ರಿಜಿರೇಟರ್, ಸ್ಟ್ರೇಯ‌ರ್, ಸುಗಂಧದ್ರವ್ಯಗಳ ಬಳಕೆ ಮೊದಲಾದುವುಗಳ ಅಪಾರ ಬಳಕೆಯಿಂದ ಕ್ಲೋರೋ ಫ್ಲೋರೋ ಕಾರ್ಬನ್‌ (CFC) ಗಳು ಹೆಚ್ಚಾಗಿ ಬಿಡುಗಡೆಗೊಂಡು ವಾಯುಮಂಡಲದ ಓಜೋನ್ ಪದರವನ್ನು ತೆಳುವಾಗಿಸುತ್ತಿದೆ. ಈಗಾಗಲೇ ಅಂಟಾರ್ಕ್ಟಿಕಾದ ವಾಯುಮಂಡಲದಲ್ಲಿ ಓಜೋನ್‌ ಪದರವು ತೆಳುವಾಗಿರುವುದನ್ನು ಕಂಡು ಹಿಡಿಯಲಾಗಿದೆ. ಈ ರೀತಿ ಓಜೋನ್ ತೆಳುವಾಗುವಿಕೆಯು ಓಜೋನ್ ರಂಧ್ರ ಉಂಟುಮಾಡುತ್ತಿದ್ದು ಇವನ್ನು ತಡೆಗಟ್ಟುವುದು ಮುಂದಿನ ಜನಾಂಗಗಳು ಭೂಮಿಯ ಮೇಲೆ ನಿರಾಂತಕವಾಗಿ ಬದುಕಲು ಅತ್ಯಾವಶ್ಯಕವಾಗಿದೆ.

11. ಆಮ್ಲಮಳೆ
ಆಮ್ಲೀಯ ಮಳೆ: (Acid Rain): ಮಳೆಯ ನೀರಿನಲ್ಲಿ ಸಲ್ಯೂರಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ಸೆಡ್ ಮೊದಲಾದ ಆಮ್ಲಗಳು ಹೆಚ್ಚಾಗಿರುವುದನ್ನೇ ‘ಆಮ್ಲೀಯ ಮಳೆ’ ಎಂದು ಕರೆಯಲಾಗಿದೆ. ಈ ರೀತಿಯ ಮಳೆ ಅತ್ಯಂತ ವಿಷಕಾರಿಯಾಗಿದ್ದು, ಜಲಚರಗಳ ನಾಶಕ್ಕೆ ಕಾರಣವಾಗುವುದು. ಅಲ್ಲದೆ ಆಮ್ಲೀಯ ಮಳೆಯಿಂದ ಅರಣ್ಯಗಳು, ವ್ಯವಸಾಯದ ಬೆಳೆಗಳು, ಕಟ್ಟಡಗಳು, ಸ್ಮಾರಕ ಮೊದಲಾದವುಗಳು ಹಾಳಾಗುತ್ತವೆ.

ಆಮ್ಲೀಯ ಮಳೆಯನ್ನು ‘ಲೇಕ್‌ಕಿಲ್ಲ‌ರ್’ ಎಂದು ಕರೆಯುತ್ತಾರೆ. ಪೋಲೆಂಡ್, ಜೆಕ್‌ಗಣರಾಜ್ಯ ಮತ್ತು ಆತ್ಮೀಯ ಜರ್ಮನಿಯ ಭಾಗಗಳು ಪ್ರಪಂಚದಲ್ಲೇ ಅತಿ ಹೆಚ್ಚು ಆಮ್ಲೀಯ ಮಳೆಯ ಪರಿಣಾಮಕ್ಕೆ ಒಳಪಟ್ಟಿರುವ ಪ್ರದೇಶಗಳಾಗಿರುವುದರಿಂದ ಇವುಗಳನ್ನು ಕಪ್ಪು ತ್ರಿಕೋಣ ಎನ್ನುವರು.

<span;>ಅಧ್ಯಾಯ 28 ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು

I ಈ ಪ್ರಶ್ನೆಗಳಿಗೆ ಉತ್ತರಿಸಿ

1. ಅರ್ಥಶಾಸ್ತ್ರದಲ್ಲಿ ಬೇಡಿಕೆ ಎಂಬುದರ ಆರ್ಥವೇನು?
ಬೇಡಿಕೆ ಬಯಕೆಯಲ್ಲಿ ಬಯಕೆಯ ಜೊತೆಗೆ ಕೊಳ್ಳುವ ಮನೋಭಾವ ಮತ್ತು ಹಣವನ್ನು ವೆಚ್ಚ  ಮಾಡುವ ಶಕ್ತಿ ಇದ್ದರೆ ಮಾತ್ರ ಬೇಡಿಕೆ ಎನಿಸಿಕೊಳ್ಳುತ್ತದೆ.ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ   ಕೊಳ್ಳುವ ಆರ್ಥಿಕ ಸರಕಿನ ಪ್ರಮಾಣವೇ ಬೇಡಿಕೆ.

2. ಉತ್ಪಾದನಾ ಕ್ಷೇತ್ರದಲ್ಲಿ ಬೇಡಿಕೆ ಪ್ರಭಾವವೇನು?
ಉತ್ಪಾದನಾ ಕ್ಷೇತ್ರದ ಮೇಲೆ ಬೇಡಿಕೆಯ ಪ್ರಭಾವ ಅತಿ ಹೆಚ್ಚು. ಬೇಡಿಕೆ ಹೆಚ್ಚಾದಾಗ ಸಾಮಾನ್ಯವಾಗಿ ಉತ್ಪಾದನೆ, ಉದ್ಯೋಗ, ವರಮಾನ ಹಾಗೂ ಪೂರೈಕೆ ಅಧಿಕಗೊಳ್ಳುತ್ತದೆ.
ಬೇಡಿಕೆ ಕಡಿಮೆಯಾದಾಗ ಸಾಮಾನ್ಯವಾಗಿ ಉತ್ಪಾದನೆ ವರಮಾನ ಹಾಗೂ ಪೂರೈಕೆ ಇಳಿಯುತ್ತದೆ. ನಿರುದ್ಯೋಗ ಹೆಚ್ಚುತ್ತದೆ.

3. ವಿತರಣೆ ಎಂದರೇನು?
ವಿತರಣೆ ಒಂದು ಪ್ರಮುಖ ಆರ್ಥಿಕ ಚಟುವಟಿಕೆ. ಉತ್ಪಾದನಾ ಕಾರ್ಯ ದ ಪರಿಣಾಮವಾದ ರಾಷ್ಟ್ರೀಯ ವರಮಾನವನ್ನು ಉತ್ಪಾದನಾಂಗಗಳ ನಡುವೆ ಹಂಚುವಂತ ಮಹತ್ವದ ಕಾರ್ಯವೇ ವಿತರಣೆ.

4. ವಿತರಣೆ ಸಮರ್ಪಕ ರೀತಿಯಲ್ಲಿ ಮಾಡುವ ಬಗೆ ಹೇಗೆ?
ಆಯಾ ಉತ್ಪಾದನಾಂಗದ ಪಾತ್ರದ ಪ್ರಮಾಣ ಅನುಸಾರವಾಗಿ ವಿತರಣೆ ಮಾಡಬೇಕು. ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಕಾಪಾಡಿಕೊಂಡು ಬರುವಂತಿರಬೇಕು. ಉತ್ಪಾದನಾ ಕಾರ್ಯಕ್ಕೆ ಅಡ್ಡಿ-ಆತಂಕಗಳು ಉಂಟಾಗದಂತೆ ಇರಬೇಕು. ಯಾವ ಉತ್ಪಾದನಾ ಅಂಗಕ್ಕೂ ಪ್ರಾಶಸ್ಯವೂ ಇರಬಾರದು. ನಿರ್ಲಕ್ಷವೂ ಇರಬಾರದು . ಇದು ಆರ್ಥಿಕ ವ್ಯವಸ್ಥೆಯ ಸಮತೋಲನದ ಬೆಳವಣಿಗೆಗೆ ಅಗತ್ಯ.

5. ರಾಷ್ಟ್ರೀಯ ವರಮಾನ ಮತ್ತು ತಲಾ ವರಮಾನದ ವ್ಯತ್ಯಾಸಗಳನ್ನು ತಿಳಿಸಿ.
ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.
ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ. ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

ತಲಾ ಆದಾಯ = ರಾಷ್ಟೀಯ ಆದಾಯ / ಒಟ್ಟು ಜನಸಂಖ್ಯೆ

6. ಶ್ರಮದ ಮಹತ್ವವೇನು?

*ಶ್ರಮವು ಮುಖ್ಯವಾದ ಅತ್ಯವಶ್ಯಕವಾದ ಉತ್ಪಾದನಾಂಗವಾಗಿದೆ.
*ಭೂಮಿ ಮತ್ತು ಬಂಡವಾಳದ ಜೊತೆಗೆ ಮುಖ್ಯವಾದ ಉತ್ಪಾದನಾಂಗವಾಗಿದೆ.
*ಶ್ರಮದ ಸಹಾಯವಿಲ್ಲದೇ ಯಾವುದೇ ವಸ್ತುವನ್ನು ಉತ್ಪಾದಿಸಲು ಸಾಧ್ಯವಿಲ್ಲ.
*ಶ್ರಮವು ಉತ್ಪನ್ನಕಾರಕ ಅಂಶವಾಗಿದೆ.
*ಇತರೆ ಉತ್ಪಾದನಾಂಗಗಳನ್ನು ಚುರುಕುಗೊಳಿಸುತ್ತದೆ.
*ಉತ್ಪಾದನಾಂಗಗಳನ್ನು ಉತ್ಪಾದನಾ ಉದ್ದೇಶಗಳಿಗಾಗಿ ಉಪಯೋಗಗಕಾರಿಗಳನ್ನಾಗಿ ಮಾಡುತ್ತದೆ.

II ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ

7. ಬೇಡಿಕೆ ಹೆಚ್ಚಾದಾಗ ಉತ್ಪಾದನೆ ಅಧಿಕಗೊಳ್ಳುತ್ತದೆ .

8. ಸರಕು ಸೇವೆಗಳನ್ನು ಬಯಕೆಯ ತೃಪ್ತಿಗಾಗಿ ಉಪಯೋಗಿಸುವುದು ಅನುಭೋಗ

9. ಒಂದು ರಾಷ್ಟ್ರದ ಆದಾಯವನ್ನು ರಾಷ್ಟ್ರದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಲಭಿಸುವುದೇ ತಲಾ ವರಮಾನ.

10, ಲಾರಿಗಳಿಂದ ಸರಕುಗಳನ್ನು ಇಳಿಸುವ ಕೆಲಸದಲ್ಲಿ ತೊಡಗಿರುವವರು ಬರುವ ಶ್ರಮ ವಿಭಾಗ ದೈಹಿಕ ಶ್ರಮ.

11. ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರು ಈ ಶ್ರಮಕ್ಕೆ ಉದಾಹರಣೆ ಮಾನಸಿಕಶ್ರಮ.

ಅಧ್ಯಾಯ 29 ವಿವಿಧ ವ್ಯವಹಾರ ಸಂಘಟನೆಗಳ ಹುಟ್ಟು

ಅಭ್ಯಾಸಗಳು

ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ,

1 ಒಬ್ಬನೇ ವ್ಯಕ್ತಿಯಿಂದ ನಡೆಸಲ್ಪಡುವ ವ್ಯಾಪಾರಿ ಸಂಸ್ಥೆಯನ್ನು -ಏಕವ್ಯಕ್ತಿ ಮಾಲಿಕತ್ವದ ಸಂಸ್ಥೆಗಳು ಎಂದು ಕರೆಯುತ್ತಾರೆ.

2 ಪಾಲುಗಾರಿಕೆ ಸಂಸ್ಥೆಗಳನ್ನು ನಡೆಸಿಕೊಂಡು ಹೋಗಲು -1932ರಲ್ಲಿ ಪಾಲುಗಾರಿಕಾ ಸಂಸ್ಥೆಯ ಕಾನೂನು ಜಾರಿಗೆ ಬಂದಿತು,

3 ಹಣಕಾಸಿನ ವ್ಯವಹಾರ ಮಾಡುವ ಪಾಲುಗಾರಿಕಾ ಸಂಸ್ಥೆಯಲ್ಲಿ ಗರಿಷ್ಠ ಮಿತಿಸೀಮಿತವಾಗಿರುತ್ತದೆ. ಪಾಲುಗಾರರಿಗೆ

4 ಹಿಂದೂ ಅವಿಭಕ್ತ ಕುಟುಂಬ ವ್ಯವಹಾರ ಸಂಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುವನನ್ನು ಕರ್ತಎಂದು ಕರೆಯುತ್ತಾರೆ.

5. ಭಾರತದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆ ಹಿಂದೂ ಅವಿಭಕ್ತ ಕುಟುಂಬ ಸಂಸ್ಥೆಗಳು ಎಂದರೆ ಆಗಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

6. ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳಲ್ಲಿ ಮುಖ್ಯವಾದುವು ಯಾವುವು?
ಸಣ್ಣ ಪ್ರಮಾಣದ ಸಂಘಟನೆಗಳಲ್ಲಿ ಮುಖ್ಯವಾದುವು

*ಏಕವ್ಯಕ್ತಿ ಮಾಲೀಕತ್ವದ ಸಂಸ್ಥೆಗಳು (sole trading concerns)

*ಪಾಲುಗಾರಿಕೆ ಸಂಸ್ಥೆಗಳು (partnership firms)

*ಹಿಂದೂ ಅವಿಭಕ್ತ ಕುಟುಂಬ ಸಂಸ್ಥೆಗಳು (hindu undivided family firms)

7 ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳು ಗ್ರಾಹಕರಿಗೆ ಹೇಗೆ ಸಹಾಯ ಮಾಡುತ್ತವೆ?
ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳು ಗ್ರಾಹಕರಿಗೆ ಬೇಕಾದ ದೈನಂದಿನ ಇಷ್ಟಗಳನ್ನು ಅರಿತು ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಸರಬರಾಜು ಮಾಡುತ್ತವೆ. ಇವು ಗ್ರಾಹಕರ ಜೊತೆಯಲ್ಲಿ ನೇರ ಸಂಪರ್ಕ ಇಟ್ಟುಕೊಂಡಿರುತ್ತವೆ.

8. ಪಾಲುಗಾರಿಕೆ ಸಂಸ್ಥೆಯೆಂದರೇನು?
ಒಬ್ಬರಿಗಿಂತ ಹೆಚ್ಚು ಜನ ಕಲೆತು ವ್ಯವಹಾರ ಮಾಡುವ ಸಂಸ್ಥೆಗಳೇ ಪಾಲುಗಾರಿಕೆ ವ್ಯವಹಾರ ಸಂಸ್ಥೆಗಳು.

ಎಲ್ಲರೂ ಕೈಗೊಂಡಿರುವ ಅಥವಾ ಅದರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ ವ್ಯವಹಾರದ ಲಾಭಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ ಪಾಲುಗಾರಿಕೆಯಾಗಿದೆ.

9 ತಟಸ್ಥ ಪಾಲುಗಾರರೆಂದರೆ ಯಾರು? ತಿಳಿಸಿ.
ತಟಸ್ಥ ಪಾಲುಗಾರರು ಬಂಡವಾಳವನ್ನು ಹೂಡಿರುತ್ತಾರೆ. ಆದರೆ ದಿನವಹಿ ವಹಿವಾಟುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಇವರ ಬಂಡವಾಳದ ಅನುಪಾತಕ್ಕನುಗುಣವಾಗಿ ಲಾಭಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ನಷ್ಟ ಅಥವಾ ಜವಾಬ್ದಾರಿಗಳಿಗೂ ಕೂಡ ಹೊಣೆಯಾಗಿರುತ್ತಾರೆ.

I) ಪಾಲುಗಾರಿಕೆ ಸಂಸ್ಥೆಯ ವಿಸರ್ಜನೆ ಹೇಗೆ ಸರಳವಾಗಿದೆ ಬರೆಯಿರಿ.

ಪಾಲುಗಾರಿಕೆ ಸಂಸ್ಥೆಯನ್ನು ಸುಲಭವಾಗಿ ವಿಸರ್ಜಿಸಬಹುದು. ಯಾವುದೇ ಪಾಲುಗಾರ ಇತರ ಪಾಲುಗಾರರಿಗೆ 14 ದಿನಗಳ ಮುನ್ಸೂಚನೆ ಕೊಡಬಹುದು ಹಾಗೂ ಇತರ ಪಾಲುಗಾರರ ಸಮ್ಮತಿಯ ಮೇಲೆ ವಿಸರ್ಜಿಸಬಹುದು.

|| ಈ ಕೆಳಗಿನ ಪ್ರಶ್ನೆಗಳನ್ನು ಸೂಕ್ತ ರೀತಿಯ ಉತ್ತರಿಸಿ.

II ಏಕ ಮಾಲೀಕತ್ವ ಸಂಸ್ಥೆಯ ಯಾವುದಾದರೂ ನಾಲ್ಕು ಅನುಕೂಲತೆಗಳನ್ನು ತಿಳಿಸಿ.
ಏಕವ್ಯಕ್ತಿ ಮಾಲೀಕತ್ವ ವ್ಯವಹಾರ ಸಂಸ್ಥೆಗಳ ಅನುಕೂಲಗಳು:
* ಇವುಗಳನ್ನು ಪ್ರಾರಂಭಿಸಲು ಯಾವುದೇ ಕಾನೂನಿನ ಕಟ್ಟಲೆಗಳ ಅವಶ್ಯಕತೆ ಬೇಕಾಗಿಲ್ಲ.
* ಸ್ವಂತ ಬಂಡವಾಳದಿಂದಲೇ ಪ್ರಾರಂಭಿಸಬಹುದು. ದಿನ ವಹಿವಾಟುಗಳನ್ನು ನಡೆಸುವುದು ಅಷ್ಟೇನು ಕಷ್ಟವಲ್ಲ.
*ಸಂಸ್ಥೆ ಗಳಿಸಿದ ಎಲ್ಲ ಲಾಭಗಳನ್ನು ಏಕವ್ಯಕ್ತಿ ಮಾಲೀಕರೆ ಅನುಭವಿಸುತ್ತಾರೆ.
*ವ್ಯಾಪಾರದ ಮೇಲ್ವಿಚಾರಣೆ ಸ್ವತ: ತಾವೇ ನೋಡಿಕೊಳ್ಳುತ್ತಾರೆ.
* ಇವರು ಗ್ರಾಹಕರ ಜೊತೆಯಲ್ಲಿ ನೇರ ಸಂಪರ್ಕ ಇಟ್ಟುಕೊಂಡಿರುತ್ತಾರೆ.

12 ಏಕ ಮಾಲೀಕತ್ವ ಸಂಸ್ಥೆಯ ಯಾವುದಾದರೂ ನಾಲ್ಕು ದೋಷಗಳನ್ನು ತಿಳಿಸಿ.
ಈ ಸಂಸ್ಥೆಗಳು ಕೆಲವು ಪರಿಮಿತಿಗಳಿಂದ ದೂರವಾಗಿಲ್ಲ. ಅವುಗಳಲ್ಲಿ ಮುಖ್ಯವಾದುವೆಂದರೆ –
*ಬಂಡವಾಳ ಮಿತಿಯಾಗಿದ್ದು ದೊಡ್ಡದಾಗಿ ಬೆಳೆಸಲು ಕಷ್ಟವಾಗುವುದು, ಆಡಳಿತ ಕೌಶಲ್ಯಗಳು ಸೀಮಿತವಾಗಿರುತ್ತವೆ.
*ಯಾವಾಗಲೂ ಒಬ್ಬರಿಗಿಂತ ಇಬ್ಬರು ಅಥವಾ ಜಾಸ್ತಿ ವ್ಯಕ್ತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ.
*ಎಲ್ಲ ನಷ್ಟ ಅಥವ ಹೊಣೆಗಾರಿಕೆಗಳನ್ನು ಒಬ್ಬನೇ ಹೊರಬೇಕಾಗುತ್ತದೆ.
*ಮಾಲೀಕನ ನಿಧನ ಅಥವಾ ದಿವಾಳಿಯಿಂದಾಗಿ ಸಂಸ್ಥೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

13 ಪಾಲುಗಾರಿಕೆ ಸಂಸ್ಥೆಗಳು ಹೇಗೆ ಪ್ರಾರಂಭವಾಗುತ್ತವೆ? ಸಂಕ್ಷಿಪ್ತವಾಗಿ ವಿವರಿಸಿ
ಒಬ್ಬರಿಗಿಂತ ಹೆಚ್ಚು ಜನ ಕಲೆತು, ವ್ಯವಹಾರ ಪ್ರಾರಂಭಿಸಿದರೆ ಪಾಲುಗಾರಿಕಾ ಸಂಸ್ಥೆಗಳು ಅಸ್ತಿತ್ವಕ್ಕೆ ಬರುತ್ತವೆ. ಪಾಲುಗಾರಿಕೆ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ನಡೆಸಿಕೊಂಡು ಹೋಗಲು 1932 ರಲ್ಲಿ ಪಾಲುಗಾರಿಕೆ ಸಂಸ್ಥೆಯ ಕಾನೂನು ಜಾರಿಗೆ ಬಂದಿತು. ಈ ಕಾಯ್ದೆಯ 4ನೇ ಸೆಕ್ಷನ್ ಪ್ರಕಾರ ಎಲ್ಲರೂ ಕೈಗೊಂಡಿರುವ ಅಥವಾ ಅದರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ ವ್ಯವಹಾರದ ಲಾಭಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ ಪಾಲುಗಾರಿಕೆಯಾಗಿದೆ. ಹಣಕಾಸಿನ ವ್ಯವಹಾರ ಮಾಡುವುದಾದರೆ ಗರಿಷ್ಠ ಹತ್ತು ಜನ ಪಾಲುಗಾರರು ಹಾಗೂ ಸಾಮಾನ್ಯ ಪಾಲುಗಾರಿಕೆ ವ್ಯವಹಾರ ಮಾಡುವುದಾದರೆ ಗರಿಷ್ಠ ಇಪ್ಪತ್ತು ಜನ ಪಾಲುಗಾರರಿಗೂ ಸೀಮಿತವಾಗಿರುತ್ತದೆ. ಈ ಸಂಸ್ಥೆಗಳನ್ನು ಪಾಲುದಾರಿಕೆ ಸಂಸ್ಥೆಗಳೆಂದೂ ಪಾಲುಗಾರರನ್ನು ಪಾಲುಗಾರರೆಂದು ಕರೆಯುತ್ತಾರೆ.

14 ಪಾಲುಗಾರಿಕೆ ಸಂಸ್ಥೆಗಳ ವಿವಿಧ ರೀತಿಯ ಪಾಲುಗಾರರನ್ನು ತಿಳಿಸಿ.
ಪಾಲುಗಾರರ ವಿಧಗಳು: ಪಾಲುಗಾರರಲ್ಲಿ ಕೆಲವು ವಿಧಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವವದೆಂದರೆ:

1) ಕ್ರಿಯಾಶೀಲ ಅಥವ ಸಕ್ರಿಯ ಪಾಲುಗಾರರು: ಇವರು ನಿಗದಿತ ಬಂಡವಾಳ ಹೂಡಿರುತ್ತಾರೆ. ಲಾಭನಷ್ಟಗಳನ್ನು ಅನುಪಾತಕ್ಕನುಗುಣವಾಗಿ ಹಂಚಿಕೊಳ್ಳುತ್ತಾರೆ.

2) ತಟಸ್ಥ ಪಾಲುಗಾರರು: ಇವರು ಬಂಡವಾಳನ್ನು ಹೂಡಿರುತ್ತಾರೆ. ಆದರೆ ದಿನವಹಿ ವಹಿವಾಟುಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ.

3) ನಾಮಮಾತ್ರ ಪಾಲುಗಾರರು: ಇವರು ಬಂಡವಾಳವನ್ನು ಹೂಡುವುದಿಲ್ಲ. ಸಕ್ರಿಯವಾಗಿ ದೈನಂದಿನ ವಹಿವಾಟುಗಳಲ್ಲಿ ಭಾಗವಹಿಸುವುದಿಲ್ಲ.ಆದರೆ ಸಾಲಗಳಿಗೆ ಅನುಪಾತಕ್ಕನುಗುಣವಾಗಿ ಹೊಣೆಯಾಗಿರುತ್ತಾರೆ.

4) ಅಪ್ರಾಪ್ತ ವಯಸ್ಕ ಪಾಲುದಾರರು: 18 ವರ್ಷ ವಯಸ್ಸಿಗಿಂತ ಕಡಿಮೆ ಇರುವವರು ಪಾಲುಗಾರರಾಗಲು ಸಾಧ್ಯವಿಲ್ಲ. ಆದರೆ ಪಾಲುಗಾರರ ಸಮ್ಮತಿಯಂತೆ ಹಾಗೂ ಕರಾರಿನಂತೆ, ಸಂಸ್ಥೆಯ ಹಿತದೃಷ್ಟಿಯಿಂದ ಹದಿನೆಂಟು ವರ್ಷ ಮೀರದವರನ್ನೂ ಪಾಲುಗಾರರಾಗಿ ಸೇರಿಸಿಕೊಳ್ಳಬಹುದು.ಇವರು ಲಾಭಗಳಲ್ಲಿ ಮಾತ್ರ ತಮ್ಮ ಪಾಲನ್ನು ಪಡೆಯುತ್ತಾರೆ. ನಷ್ಟಗಳಿಗೆ ಇವರು ಹೊಣೆಯಾಗುವುದಿಲ್ಲ .

ಈ ವಿಧಗಳೇ ಅಲ್ಲದೆ ರಹಸ್ಯಪಾಲುದಾರರು, ಸೀಮಿತಪಾಲುಗಾರರು, ಅರೆಪಾಲುಗಾರರು, ಲಾಭದಲ್ಲಿ ಮಾತ್ರ ಪಾಲುಗಾರರು ಮುಂತಾದವರು ಇರುತ್ತಾರೆ.

15 ಪಾಲುಗಾರಿಕೆ ಸಂಸ್ಥೆಗಳ ಯಾವುದಾದರೂ ನಾಲ್ಕು ಅನುಕೂಲತೆಗಳನ್ನು ತಿಳಿಸಿ.
ಪಾಲುಗಾರಿಕೆ ಸಂಸ್ಥೆಯ ಅನುಕೂಲಗಳು

1. ಸುಲಭ ರಚನೆ: ಈ ಸಂಸ್ಥೆಯನ್ನು ನೊಂದಾಯಿಸುವುದು ಪಾಲುಗಾರರ ಐಚ್ಛಿಕ ನಿರ್ಧಾರಕ್ಕೆ ಸೇರಿದ್ದರಿಂದ ಹೆಚ್ಚಿನ ಕಾನೂನಿನ ನಿಬಂಧನೆಗಳಿರುವುದಿಲ್ಲ. ಹೀಗಾಗಿ ಈ ರೀತಿಯ ಸಂಸ್ಥೆಯ ಸುಲಭವಾಗಿ ರಚನೆಯಾಗುತ್ತದೆ.

2. ಹೆಚ್ಚಿನ ಬಂಡವಾಳ: ಈ ಸಂಸ್ಥೆಯು ಇಬ್ಬರು ಅಥವ ಹೆಚ್ಚಿನ ವ್ಯಕ್ತಿಗಳಿಂದ ರಚಿಸಲ್ಪಡುವುದರಿಂದ ಬಂಡವಾಳದ ಹೂಡಿಕೆ ಹೆಚ್ಚಾಗಿರುತ್ತದೆ.

3. ಹೆಚ್ಚಿನ ಪರಿಣತಿ: ಈ ಸಂಸ್ಥೆಯಲ್ಲಿ ಒಬ್ಬರಿಗಿಂತ ಹೆಚ್ಚಿನ ಮಾಲೀಕರಿದ್ದು ಶ್ರಮದ ವಿಭಜನೆಯ ತತ್ವವನ್ನು ಅಳವಡಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪರಿಣತಿ ಹೆಚ್ಚಿಸುತ್ತದೆ.

4. ಸರಳ ವಿಸರ್ಜನೆ: ಈ ಸಂಸ್ಥೆಯನ್ನು ಸುಲಭವಾಗಿ ವಿಸರ್ಜಿಸಬಹುದು, ಯಾವುದೇ ಪಾಲುಗಾರ ಇತರ ಪಾಲುಗಾರರಿಗೆ 14 ದಿನಗಳ ಮುನ್ಸೂಚನೆ ಕೊಡಬಹುದು ಹಾಗೂ ಇತರ ಪಾಲುಗಾರರ ಸಮ್ಮತಿಯ ಮೇಲೆ ವಿಸರ್ಜಿಸಬಹುದು.

16 ಪಾಲುಗಾರಿಕೆ ಸಂಸ್ಥೆಗಳ ಯಾವುದಾದರೂ ನಾಲ್ಕು ದೋಷಗಳನ್ನು ತಿಳಿಸಿ,
ಪಾಲುಗಾರಿಕೆ ವ್ಯವಹಾರ ಸಂಸ್ಥೆಯ ದೋಷಗಳು

1. ಕೆಲವು ಸಂದರ್ಭಗಳಲ್ಲಿ ಪಾಲುಗಾರರ ನಡುವೆ ಒಮ್ಮತ ಇಲ್ಲದೆ ಹೋದಾಗ ಅವರವರಲ್ಲಿ ತಾರತಮ್ಯಗಳು ಉಂಟಾಗುತ್ತವೆ.

2. ನಷ್ಟದ ಹೊಣೆಗಾರಿಕೆ ಅಪರಿಮಿತವಾಗಿದ್ದು ಹೆಚ್ಚು ಜನ ಪಾಲುಗಾರರಾಗಲು ಇಷ್ಟಪಡುವುದಿಲ್ಲ.

3. ಕೆಲವು ಪಾಲುಗಾರರ ಅಜಾಗರೂಕತೆ ಅಥವಾ ಅವಿವೇಕತನದ ನಿರ್ಧಾರಗಳು ಸಂಸ್ಥೆಯ ಹಿನ್ನಡೆಗೆ ಕಾರಣವಾಗುತ್ತದೆ.

4. ಪಾಲುದಾರಿಕೆ ಸಂಸ್ಥೆ ಸ್ಥಿರತೆಯ ಆಭಾವ ಹೊಂದಿರುತ್ತದೆ. ಯಾರಾದರೂ ಒಬ್ಬ ಪಾಲುಗಾರ ಮರಣ ಹೊಂದಿದರೆ ಆಥವಾ ದಿವಾಳಿಯಾದರೆ ಸಂಸ್ಥೆಯನ್ನು ವಿಸರ್ಜಿಸಬೇಕಾಗುತ್ತದೆ.

17 ಪಾಲುಗಾರಿಕೆ ಸಂಸ್ಥೆಗಳನ್ನು ನೊಂದಾಯಿಸುವುದರಿಂದಾಗುವ ಅನುಕೂಲತೆಗಳೇನು? ಪಾಲುಗಾರಿಕೆ ಸಂಸ್ಥೆಗಳ ನೋಂದಣಿಯಿಂದಾಗುವ ಉಪಯೋಗಗಳು

1.ನೋಂದಣಿ ಹೊಂದಿರುವ ಸಂಸ್ಥೆಯು ಒಂದು ನೂರು ರೂಗಳನ್ನು ಮೀರಿದ ಸಾಲದ ವಸೂಲಾತಿಗಾಗಿ ಮೂರನೆ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು.

2.ನೋಂದಣಿ ಆಗಿರುವ ಸಂಸ್ಥೆಗಳು ಸಾಲಗಳ ವಸೂಲಿಗಾಗಿ, ಇತರೆ ಪಾಲುಗಾರನ ಸಾಲ ವಸೂಲಿಗಾಗಿ ಆತನ ವಿರುದ್ಧವೂ ದಾವೆ ಹೂಡಬಹುದು.

3.ನೋಂದಣಿಯಾಗದ ಸಂಸ್ಥೆಯ ವಿರುದ್ಧ ಅಥವಾ ಅದರ ಪಾಲುಗಾರರ ವಿರುದ್ಧ ಮೂರನೇ ವ್ಯಕ್ತಿ ದಾವೆ ಹೂಡಬಹುದು.

4.ನೋಂದಣಿಯಾಗದ ಅಥವಾ ಅದರ ಪಾಲುಗಾರರ ವಿರುದ್ಧ ಯಾವುದೇ ಪಾಲುಗಾರನಾಗಲಿ, ಸಂಸ್ಥೆಯ ವಿಸರ್ಜನೆಗೆ ಅಥವಾ ಲೆಕ್ಕಪತ್ರಗಳು ಇತ್ಯರ್ಥಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.

18 ಹಿಂದೂ ಅವಿಭಕ್ತ ಕುಟುಂಬ ಪದ್ಧತಿಯ ವ್ಯವಹಾರ ಸಂಸ್ಥೆಯ ಬಗ್ಗೆ ಬರೆಯಿರಿ.
ಹಿಂದು ಅವಿಭಕ್ತ ಕುಟುಂಬ ವ್ಯವಹಾರ ಸಂಸ್ಥೆಗಳು ಭಾರತದಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಇವು ಹಿಂದೂ ಕಾನೂನಿನ ಅನ್ವಯ ಜಾರಿಗೆ ಬರುತ್ತವೆ. ಇವು ಹಿಂದೂ ಕುಟುಂಬದ ಎಲ್ಲ ಪುರುಷರಿಂದ ಕೂಡಿದ ಸಂಸ್ಥೆಗಳಾಗಿರುತ್ತವೆ. ನಿರಂತರವಾಗಿ ಮೂರು ತಲೆಮಾರುಗಳ ಪುರುಷ ಸದಸ್ಯರು ಈ ವ್ಯವಹಾರ ಸಂಸ್ಥೆಗಳ ಸದಸ್ಯರಾಗುತ್ತಾರೆ. ಅವಿಭಕ್ತ ಕುಟುಂಬದ ಅತ್ಯಂತ ಹಿರಿಯ ಪುರುಷ ಸದಸ್ಯ ವ್ಯವಹಾರದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ. ಅವನನ್ನು ‘ಕರ್ತ’ ಎಂದು ಕರೆಯುತ್ತಾರೆ. ಮಾಲಿಕತ್ವವು ಎಲ್ಲ ಸದಸ್ಯರದಾಗಿದ್ದರೂ ಆಡಳಿತವನ್ನು ಕರ್ತನು ನಿರ್ವಹಿಸುತ್ತಾನೆ. ಕರ್ತನ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ. ಇತರೆ ಸದಸ್ಯರ ಹೊಣೆಗಾರಿಕೆ ಅವರು ಹೂಡಿರುವ ಬಂಡವಾಳದ ಪ್ರಮಾಣಕ್ಕೆ ಸೀಮಿತವಾಗಿರುತ್ತದೆ.

<span;>ಅಧ್ಯಾಯ 30 ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು

<span;> <span;>8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ನೋಟ್ಸ್ ಪ್ರಶ್ನೋತ್ತರಗಳು

ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1 ಭಾರತದಲ್ಲಿ ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರಿ ಸಂಘಗಳ ಕಾಯಿದೆ . 1912ರಂತೆ ನಿಯಂತ್ರಿಸಲ್ಪಡುತ್ತದೆ.

2 ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಇಂಗ್ಲೆಂಡ್ದೇಶದಲ್ಲಿ  ರಾಬರ್ಟ್ ಓವನ್ಎಂಬುವವರಿಂದ ಸ್ಥಾಪಿತವಾಯಿತು.

3 ಸಹಕಾರಿ ಸಂಘಗಳ ಸದಸ್ಯರ ಸಂಖ್ಯೆಯ ಕನಿಷ್ಠ ಮಿತಿ 10.

4 ಸಹಕಾರಿ ಸಂಘಗಳು -ಪ್ರಾಂತ್ಯದ ನೋಂದಣಿ ಅಧಿಕಾರಿಗಳಿಂದ – ನೋಂದಣಿ ಪ್ರಮಾಣ ಪತ್ರ ಬಂದ ಮೇಲೆ ಅಸ್ತಿತ್ವಕ್ಕೆ ಬರುತ್ತವೆ.

5 ಕರ್ನಾಟಕದಲ್ಲಿ ಮೊದಲ ಸಹಕಾರಿ ಸಂಘವು -ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳ್ಎಂಬಲ್ಲಿ ಪ್ರಾರಂಭವಾಯಿತು.

6 ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಯ ಮೊದಲ ಹಂತ ಪ್ರವರ್ತನೆ/ ರಚನೆಆಗಿದೆ.

7 ಕೂಡು ಬಂಡವಾಳ ಸಂಸ್ಥೆಗಳ ಸ್ಥಾಪನೆಗೆ ಬೇಕಾದ ಅತ್ಯಂತ ಪ್ರಮುಖ ಪತ್ರಗಳು- ಸಂಘಟನೆಯ ಮನವಿ ಪತ್ರ- ಮತ್ತು ಲಿಖಿತ ಕಟ್ಟಳೆ ಆಗಿವೆ.

8.ಬಹುರಾಷ್ಟ್ರೀಯ ಕಂಪನಿಗಳು ಮೊದಲು ಅಮೆರಿಕ ಸಂಯುಕ್ತ ಸಂಸ್ಥಾನ ದೇಶದಲ್ಲಿ ಪ್ರಾರಂಭವಾದವು

9. ಭಾರತದ ತವರನ್ನು ಹೊಂದಿರುವ ಬಹು ರಾಷ್ಟ್ರೀಯ ಕಂಪನಿಗಳಿಗೆ ವಿಪ್ರೋ ಮತ್ತು ಇನ್ಫೋಸಿಸ್ ಉದಾಹರಣೆಯಾಗಿದೆ.

10.ಭಾರತದಲ್ಲಿ ಮೊಟ್ಟಮೊದಲ ಶೇರುಪೇಟೆ ಮುಂಬೈಎಂಬಲ್ಲಿ ಪ್ರಾರಂಭವಾಯಿತು.

ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಬರೆಯಿರಿ.

II ಲೋಕೋಪಯೋಗಿ ಸೇವಾ ಸಂಸ್ಥೆಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿ.
ಅಡಿಗೆ ಅನಿಲ, ನೀರು, ಅಂಚೆ ,ದೂರವಾಣಿ, ರೈಲ್ವೆ ಗಳು ಇವು ಲೋಕೋಪಯೋಗಿ ಸೇವಾ ಸಂಸ್ಥೆಗಳಿಗೆ ಉದಾಹರಣೆಗಳಾಗಿವೆ.

12 ಸಹಕಾರಿ ಸಂಘಗಳ ಯಾವುದಾದರೂ ಆರು ಲಕ್ಷಣ ಮತ್ತು ತತ್ವಗಳನ್ನು ತಿಳಿಸಿ.
ಸಹಕಾರಿ ಸಂಘಗಳ ಸಾಮಾನ್ಯ ಲಕ್ಷಣಗಳು

1.ಇವು ವ್ಯಕ್ತಿಗಳ ಸ್ವಯಂ ಪ್ರೇರಿತ ಸಂಸ್ಥೆಗಳಾಗಿವೆ.

2.ಇಲ್ಲಿನ ಸದಸ್ಯತ್ವವು ಜಾತಿ, ಧರ್ಮ, ವರ್ಗ ಮತ್ತು ಲಿಂಗ ಬೇಧವಿಲ್ಲದೆ ಎಲ್ಲ ವಯಸ್ಕರಿಗೂ ತೆರೆದಿರುತ್ತದೆ.

3.ಇಲ್ಲಿ ಸದಸ್ಯರ ಸಂಖ್ಯೆಗೆ ಗರಿಷ್ಠ ಮಿತಿ ಇರುವುದಿಲ್ಲ.

4.ಇಲ್ಲಿ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಇರುತ್ತದೆ ಅಂದರೆ ಸಂಘದ ಸರ್ವ ಸಾಮಾನ್ಯ ಸಭೆಗೆ ಎಲ್ಲ ಸದಸ್ಯರೂ ಹಾಜರಾಗಬಹುದು ಮತ್ತು ಪ್ರತಿ ಸದಸ್ಯನಿಗೂ ಎಷ್ಟೇ ಬಂಡವಾಳ ಹೂಡಿದ್ದರೂ ಒಂದೇ ಮತ ಚಲಾಯಿಸಲು ಹಕ್ಕಿರುತ್ತದೆ.

5.ಸಂಸ್ಥೆಯ ಲಾಭವನ್ನು ಬಂಡವಾಳ ಹೂಡಿಕೆಗನುಗುಣವಾದ ಪ್ರಮಾಣದಲ್ಲಿ ಹಂಚಲಾಗುತ್ತದೆ. (ಶೇ. 6,25 ಕ್ಕಿಂತ ಕಡಿಮೆ ಇಲ್ಲದಂತೆ)

6.ಲಾಭದ ಒಂದು ಭಾಗ ಸಂಘದ ಸಾಮಾನ್ಯ ನಿಧಿಗೆ ವರ್ಗಾಯಿಸಲಾಗುತ್ತದೆ.

7.ಇವುಗಳ ಸ್ಥಾನಮಾನ ಹಾಗೂ ನಿಯಂತ್ರಣ ಸರ್ಕಾರದ ಮೇಲ್ವಿಚಾರಣೆಗೆ ಒಳಗಾಗಿರುತ್ತದೆ.

13 ಸಹಕಾರಿ ಸಂಘಗಳ ವಿಧಗಳಾವುವು?
ಸಹಕಾರಿ ಸಂಘಗಳ ವಿಧಗಳು

1 ಸಾಲದ ಸಹಕಾರಿ ಸಂಘಗಳು.

2 ಮಾರುಕಟ್ಟೆ ಸಹಕಾರಿ ಸಂಘಗಳು.

3 ಉತ್ಪಾದಕರ ಸಹಕಾರಿ ಸಂಘಗಳು.

4 ಗ್ರಾಹಕರ ಸಹಕಾರಿ ಸಂಘಗಳು.

5 ಬೇಸಾಯಗಾರರ ಸಹಕಾರಿ ಸಂಘಗಳು .

6 ಗೃಹ ನಿರ್ಮಾಣ ಸಹಕಾರ ಸಂಘಗಳು.

7 ವಿವಿಧ ರೀತಿಯ ಸೇವೆಗಳಿಗಾಗಿ ಸಹಕಾರಿ ಸಂಘಗಳು,ಉದಾ: ವಿದ್ಯಾಭ್ಯಾಸ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ, ನೀರು

14 ಸಹಕಾರಿ ಸಂಘಗಳ ಮುಖ್ಯ ಪ್ರಯೋಜನಗಳು ಮತ್ತು ದೋಷಗಳನ್ನು ಪಟ್ಟಿ ಮಾಡಿ.
ಸಹಕಾರಿ ಸಂಘಗಳ ಪ್ರಯೋಜನಗಳು:
1.ಇವುಗಳ ರಚನೆ ಸುಲಭ. ಹೆಚ್ಚು ಬಂಡವಾಳದ ಅಗತ್ಯವಿಲ್ಲ.
2.ಎಲ್ಲ ಸದಸ್ಯರಿಗೂ ಸಮನಾದ ಹಕ್ಕು ಬಾಧ್ಯತೆಗಳಿರುತ್ತವೆ. ಸದಸ್ಯರಲ್ಲಿ ತಾರತಮ್ಯವಿರುವುದಿಲ್ಲ.
3.ಪ್ರಜಾಪ್ರಭುತ್ವ ಮಾದರಿಯ ರೀತಿಯಲ್ಲಿ ನಡೆಯುತ್ತದೆ. ಪ್ರತಿಸದಸ್ಯನಿಗೂ ಒಂದೇ ಮತದಾನದ ಹಕ್ಕಿರುತ್ತದೆ.
4.ಸದಸ್ಯರ ಹೊಣೆಗಾರಿಕೆ ಸೀಮಿತವಾಗಿರುತ್ತದೆ. ಸದಸ್ಯರು ಉಳಿತಾಯ ಮಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ.
5. ಇದು ಬಂಡವಾಳಶಾಹಿ ಮತ್ತು ಸಮಾಜಶಾಹಿ ವ್ಯವಸ್ಥೆಯಾಗಿದೆ. ‘ಎಲ್ಲರಿಗಾಗಿ ಒಬ್ಬನು ಮತ್ತು ಒಬ್ಬನಿಗಾಗಿ ಎಲ್ಲರು’ ಎಂಬುದು ಸಹಕಾರಿ ಸಂಘಗಳ ಪ್ರಮುಖ ಧ್ಯೇಯವಾಗಿದೆ.
ಸಹಕಾರಿ ಸಂಘಗಳ ದೋಷಗಳು
1.ಬಂಡವಾಳದ ಮಿತಿ ಇರುವುದರಿಂದ ದೊಡ್ಡ ಪ್ರಮಾಣದ ವಹಿವಾಟನ್ನು ನಡೆಸಲು ಸಾಧ್ಯವಿಲ್ಲ.
2. ಸರಿಯಾದ ನೌಕರರು ಸಿಗುವುದು ಕಷ್ಟವಾಗುತ್ತದೆ. ಆಡಳಿತದ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ.
3. ಹಣವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಗಳಿರುತ್ತವೆ. ಪಕ್ಷಪಾತ ಮತ್ತು ಲಂಚಗುಳಿತನಕ್ಕೆ ಅವಕಾಶಗಳಿರುತ್ತವೆ.

15 ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳಾವುವು?
ಕೂಡು ಬಂಡವಾಳ ಕಂಪನಿಗಳ ಸ್ಥಾಪನೆಯ ಹಂತಗಳು

1.ಪ್ರವರ್ತನೆ/ ರಚನೆ
2.ನೋಂದಣಿ
3. ಬಂಡವಾಳ ವಂತಿಕೆ ಅಥವಾ ಷೇರು ಬಂಡವಾಳವನ್ನು ಸಂಗ್ರಹಿಸುವುದು.
4. ವ್ಯಾಪಾರದ ಆರಂಭ.

16 ಕೂಡು ಬಂಡವಾಳ ಸಂಸ್ಥೆಗಳ ಅನುಕೂಲಗಳನ್ನು ತಿಳಿಸಿ,
1.ಕೂಡು ಬಂಡವಾಳ ಸಂಸ್ಥೆಗಳಲ್ಲಿ ಷೇರುದಾರರ ಗರಿಷ್ಠ ಮಿತಿ ಇರುವುದಿಲ್ಲ. ಆದುದರಿಂದ ಹೆಚ್ಚು ಬಂಡವಾಳ ದೊರಕುವ ಸಾಧ್ಯತೆ ಇರುತ್ತದೆ.

2.ಷೇರುದಾರರು ತಮ್ಮ ಷೇರುಗಳನ್ನು ಬೇರೆಯವರಿಗೆ ವರ್ಗಾಯಿಸುವ ಅವಕಾಶ ಇರುವುದರಿಂದ ಸಾರ್ವಜನಿಕರು ಹೆಚ್ಚು ಹೆಚ್ಚಾಗಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ.

3.ಕೂಡು ಬಂಡವಾಳ ಸಂಸ್ಥೆಗೆ ಕಾನೂನಿನ ರಕ್ಷಣೆ ಇರುವುದರಿಂದ ಯಾವುದೇ ನಿರ್ದೇಶಕನಾಗಲಿ ಅಥವಾ ಷೇರುದಾರನಾಗಲಿ ಮರಣ ಹೊಂದಿದರೆ ಅಥವ ದಿವಾಳಿಯಾದರೆ ಕಂಪನಿಯನ್ನು ಮುಚ್ಚಬೇಕಾಗಿಲ್ಲ. ವ್ಯವಹಾರ ನಡೆದುಕೊಂಡು ಹೋಗುತ್ತದೆ.

4.ಹೆಚ್ಚು ಬಂಡವಾಳ ಹಾಗೂ ಕಾರ್ಯಕೌಶಲತೆ ಇರುವುದರಿಂದ ದೊಡ್ಡಪ್ರಮಾಣದ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತದೆ.

5.ಹೆಚ್ಚು ಪ್ರಮಾಣದ ಉತ್ಪಾದನೆಗೆ ಅವಕಾಶವಿರುವುದರಿಂದ ಸಾಮಾನ್ಯವಾಗಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಕಡಿಮೆ ಇರುತ್ತದೆ ಹಾಗೂ ಸ್ವರ್ದಾತ್ಮಕ ಬೆಲೆಗೆ ಮಾರಲು ಸಾದ್ಯವಾಗುತ್ತದೆ.

6.ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುತ್ತವೆ. ಜನರಲ್ಲಿ ಉಳಿತಾಯ ಮನೋಭಾವ ಬೆಳೆಸುತ್ತವೆ ಹಾಗೂ ಸರ್ಕಾರಕ್ಕೆ ಕರ, ತೆರಿಗೆಗಳನ್ನು ಪಾವತಿ ಮಾಡುವುದರಿಂದ ದೇಶದ ಆದಾಯ ಹೆಚ್ಚಾಗುತ್ತದೆ.

7.ಈ ಸಂಸ್ಥೆಗಳ ಸದಸ್ಯರ (ಷೇರುದಾರರ) ಹೊಣೆಗಾರಿಕೆ ಅಥವಾ ಜವಾಬ್ದಾರಿ ಮಿತವಾಗಿರುತ್ತದೆ. ಅಂದರೆ ಕಂಪನಿ ಏನಾದರೂ ನಷ್ಟ ಅನುಭವಿಸಿದಾಗ ಮತ್ತು ಸಾಲಗಾರರಿಗೆ ಅವರ ಸಾಲ ಹಿಂದಿರುಗಿಸಲು ಸಾಧ್ಯವಿಲ್ಲದೆ ಹೋದಾಗ ಷೇರುದಾರರ ಜವಾಬ್ದಾರಿ ಅವರು ಹೂಡಿರುವ ಷೇರುಗಳ ಮೊತ್ತದಷ್ಟಕ್ಕೆ ಸೀಮಿತವಾಗಿರುತ್ತದೆ.

17 ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳೇನು?
ಬಹುರಾಷ್ಟ್ರೀಯ ಕಂಪನಿಗಳಿಂದ ತವರು ದೇಶಕ್ಕೆ ಆಗುವ ಪ್ರಯೋಜನಗಳು :

1 ಕಡಿಮೆ ಬೆಲೆಯಲ್ಲಿ ಆಶ್ರಯದಾತ ದೇಶಗಳಿಂದ ಕಚ್ಚಾ ಪದಾರ್ಥಗಳನ್ನು ಪಡೆಯಬಹುದಾಗಿದೆ.

2.ಆಶ್ರಯದಾತ ದೇಶಗಳಿಂದ ತಂತ್ರಜ್ಞಾನ ಹಾಗೂ ಆಡಳಿತ ಕೌಶಲ್ಯಗಳನ್ನು ಪಡೆಯಬಹುದು.

3.ಆಶ್ರಯದಾತ ದೇಶಗಳಿಗೆ ಕಚ್ಚಾ ಪದಾರ್ಥಗಳನ್ನು ಮತ್ತು ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡುವುದರಿಂದ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ.

4 .ಆಶ್ರಯದಾತ ದೇಶಗಳಿಂದ ಲಾಭಾಂಶದ ಜೊತೆಗೆ ರಾಜಧನ (Royalty) ಮತ್ತು ಆಡಳಿತಾತ್ಮಕ ಒಪ್ಪಂದಗಳಿಂದಲೂ ಭಾರಿ ಆದಾಯ ಗಳಿಸಲು ಸಾಧ್ಯವಾಗುತ್ತದೆ.

5. ತವರು ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತದೆ.

18 ಷೇರು ಮಾರುಕಟ್ಟೆಯ ಪ್ರಮುಖ ಕೆಲಸಗಳೇನು?
ಷೇರುಮಾರುಕಟ್ಟೆಗಳು ದ್ವಿತೀಯಕ ಷೇರುಮಾರುಕಟ್ಟೆಗಳಾಗಿದ್ದು ಕೇವಲ ನೋಂದಾಯಿತ ಕಂಪನಿಗಳ ಷೇರುಗಳ ಕ್ರಯ ಮತ್ತು ವಿಕ್ರಯಗಳಿಗೆ ಅವಕಾಶ ನೀಡುತ್ತವೆ.

9. ಗಾಂಧಾರ ಕಲೆಯ ಬಗ್ಗೆ ವಿವರಣೆ ತಿಳಿದು OKIES be

Leave a Comment