9ನೇ ತರಗತಿ ಪಠ್ಯಪೂರಕ ಅಧ್ಯಯನ ಗುಣಸಾಗರಿ ಪಂಡರಿಬಾಯಿ ಪ್ರಶ್ನೋತ್ತರಗಳು ನೋಟ್ಸ್ ಸಾರಾಂಶ







ಪೂರಕ ಪಾಠ ಒಂದು

ಗುಣಸಾಗರಿ ಪಂಡರಿಬಾಯಿ

ಲೇಖಕಿಯ ಪರಿಚಯ:

ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದರು. ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ’ ಈ ವಿಷಯದಲ್ಲಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

ಇವರ ತಾಯಿಸಾಹೇಬ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ, ಈ ಚಿತ್ರದಲ್ಲಿನ ಅಭಿನಯಕ್ಕೆ ವಿಶೇಷ ರಾಷ್ಟ್ರಪ್ರಶಸ್ತಿ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಚಿತ್ರ ಎಂದು ಫಿಲ್ಮಫೇರ್ ಪ್ರಶಸ್ತಿ- ಹೀಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದಲ್ಲದೆ ರಾಜೀವ್‌ಗಾಂಧಿ ರಾಷ್ಟ್ರೀಯ ಸೌಹಾರ್ದ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ಲೋಬಲ್ ಮ್ಯಾನ್ ಪ್ರಶಸ್ತಿ, ಶಾಂತಾರಾಂ ಬಂಗಾರದ ಪದಕ ಬಂದಿದೆ. ಡಾ. ಜಯಮಾಲಾರವರು ಬರೆದಿರುವ ‘ಪಂಡರಿಬಾಯಿ’ ಕೃತಿಯ ಸಂಕ್ಷಿಪ್ತ ರೂಪ ಈ ಪಾಠ.

ಆಶಯಭಾವ:

ಪಂಡರಿಬಾಯಿಯವರ ಸಹೃದಯತೆ, ಕಲಾಪ್ರತಿಭೆ, ಮಾನವೀಯ ಹಾಗೂ ಉದಾತ್ತ ಗುಣಗಳನ್ನು ಪರಿಚಯಿಸುವ ಲೇಖನ ಇದು. ಇಂತಹ ಹಿರಿಯ ನಟಿಯ ಬದುಕು ಕಿರಿಯ ಕಲಾವಿದರಿಗೆ ಆದರ್ಶವಾಗಬೇಕು.

ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:

1. ಪಂಡರಿಬಾಯಿಯವರ ತಂದೆ-ತಾಯಿಯ ಹೆಸರೇನು?

ಉತ್ತರ: ಪಂಡರಿಬಾಯಿಯವರ ತಂದೆ ರಂಗರಾವ್‌, ತಾಯಿ ಕಾವೇರಿಬಾಯಿ.

2. ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?

ಉತ್ತರ: ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರ ‘ವಾಣಿ’.

3. ಪಂಡರಿಬಾಯಿ ನಾಟಕರಂಗ ಪ್ರವೇಶಿಸಬೇಕಾಗಿ ಬಂದದ್ದೇಕೆ?

ಉತ್ತರ: ಪಂಡರಿಬಾಯಿಯವರ ಅಣ್ಣ ವಿಮಲಾನಂದ “ಆದರ್ಶ ನಾಟಕ ಸಂಘ” ಎಂಬ ನಾಟಕ ಕಂಪನಿ ಸ್ಥಾಪಿಸಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು, ಒಮ್ಮೆ ಮುದುಕನ ಮದುವೆ ನಾಟಕಕ್ಕೆ ತಯಾರಿ ನಡೆದಿತ್ತು. ನಾಟಕ ಪ್ರದರ್ಶನವಾಗಲು ಕೇವಲ ಅರ್ಧಗಂಟೆ ಇರುವಾಗ ನಾಟಕದಲ್ಲಿ ಪಾತ್ರವಹಿಸಿದ್ದ ನಟಿ ‘ಬರುವುದಿಲ್ಲ’ ಎಂಬ ಸುದ್ದಿ ಕಳುಹಿಸಿದಳು. ಆ ಪಾತ್ರವನ್ನು ವಿಮಲಾನಂದರು, ತಂಗಿ ಪಂಡರಿಬಾಯಿಯವರಿಂದ ಮಾಡಿಸಿದರು. ಹೀಗೆ ಪಂಡರಿಬಾಯಿಯವರು ನಾಟಕರಂಗ ಪ್ರವೇಶಿಸಬೇಕಾಗಿ ಬಂದಿತು.

4. ಪಂಡರಿಬಾಯಿಯವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ?

ಉತ್ತರ: ಪಂಡರಿಭಾಯಿಯವರ ಜೀವಮಾನ ಸಾಧನೆಗಾಗಿ ಫಿಲ್ಮಫೇರ್ ಪ್ರಶಸ್ತಿ ನೀಡಲಾಗಿದೆ.

5, ಪಂಡರಿಬಾಯಿಯವರು ಅಮರರಾದರು? ಯಾರ ಮನಸ್ಸಿನಲ್ಲಿ

ಉತ್ತರ: ಪಂಡರಿಬಾಯಿಯವರು ಕಲಾರಸಿಕರ ಮನಸ್ಸಿನಲ್ಲಿ ಅಮರರಾದರು.

6. ಪಂಡರಿಬಾಯಿಯವರು, ನಾಟಕದಲ್ಲಿ ಬಣ್ಣ ಹಚ್ಚಲು ಕಾರಣವೇನು?

ಉತ್ತರ: ‘ವಾಣಿ’ ಚಿತ್ರದಲ್ಲಿ ನಟಿಸಿದ ನಂತರ ಕೆಲವು ವರ್ಷಗಳು ಇವರಿಗೆ ನಟನೆಗೆ ಅವಕಾಶ ಸಿಗಲಿಲ್ಲ. ಆಗ ಇವರು ಮುಂಬಯಿವರೆಗೆ ಪ್ರವಾಸ ಮಾಡಿ ನಾಟಕದಲ್ಲಿ ಆಭಿನಯಿಸಿ ಕುಟುಂಬಕ್ಕೆ ಆಸರೆಯಾಗಿ ನಿಂತರು. ‘ಶ್ರೀಕೃಷ್ಣ ಚೈತನ್ಯ ನಾಟಕ ಸಭಾ’ ಎಂಬ ತಂಡ ಕಟ್ಟಿ ನಾಡಿನಾದ್ಯಂತ ನಾಟಕಗಳನ್ನು ಪ್ರದರ್ಶಿಸಿ ಸಹಕಲಾವಿದರಿಗೆ ನೆರವು ನೀಡಿದರು.

7. ರಂಗರಾವ್ ಅವರು ಮಗಳ ಹೆಸರನ್ನು ಪಂಡರಿಬಾಯಿ
ಎಂದು ಬದಲಾಯಿಸಲು ಕಾರಣವೇನು?

ಉತ್ತರ: ಪಂಡರಿಬಾಯಿಯವರ ಮೂಲ ಹೆಸರು ಗೀತಾ. ಪಂಡರಾಪುರದ ಪಂಡರಿನಾಥನಲ್ಲಿ ಅತೀವ ಶ್ರದ್ಧೆ ಭಕ್ತಿಗಳನ್ನು ಹೊಂದಿದ್ದ ರಂಗರಾವ್, ಮಗಳ ಹೆಸರನ್ನು ಬದಲಾಯಿಸಿದರು.

8. ಪಂಡರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿದ ಅಂಶಗಳು ಯಾವುವು?

ಉತ್ತರ: ಪಂಡರಿಬಾಯಿಯವರ ತಂದೆ ಹರಿದಾಸರಾಗಿದ್ದು, ಹರಿಕಥೆ ಮಾಡುತ್ತಿದ್ದರು. ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ಮನೆಯಲ್ಲಿ ಬಡತನವಿದ್ದರೂ ಅತ್ಯಂತ ಶಿಸ್ತಿನಿಂದ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ನಡೆಯಬೇಕಾಗಿತ್ತು. ಇದರೊಂದಿಗೆ ಪಂಡರಿಬಾಯಿಯವರಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸ ಆಯಿತು. ಇವರೂ ಹರಿಕಥೆ ಮಾಡುತ್ತಿದ್ದರು. ಕೀರ್ತನೆ ಹಾಡುತ್ತಿದ್ದರು. ಮನೆಯಲ್ಲಿದ್ದ ಈ ಸೃಜನಶೀಲ ವಾತಾವರಣ ಪಂಡರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿತು.





Leave a Comment