9th poem ninna muttina sattigeyannittu salahu question answer

Siri Kannada Text Book Class 9 Solutions Padya Chapter 7 Ninna Muttina Sattigeyannittu Salahu

 

Students can Download Kannada ninna muttina Sattigeyannittu Salahu Questions and Answers, Summary, Notes Pdf, 

 

Poem 15 Ninna Muttina sattigeyannittu salahu Padya Bhaga Chapter 15 Ninna Muttina Sattigeyannittu Salahu Questions and Answers, Summary, Notes , Karnataka State Board Solutions  complete Syllabus and score more marks in your exams.

 

Siri Kannada Text Book Class 9 Solutions Padya Bhaga Chapter 15 Ninna Muttina Sattigeyannittu Salahu

 

Ninna Muttina Sattigeyannittu Salahu Questions and Answers, Summary, Notes

9ನೇ ತರಗತಿ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ಕನ್ನಡ ನೋಟ್ಸ್ ಪ್ರಶೋತ್ತರಗಳು, 9th Standard Ninna Muttina Sattigeyanittu Salahu Notes Pdf Download in Kannada Medium Karnataka State Syllabus 2022, Kannada Notes Question Answer Kannada 15th Poem Notes

 

Ninna Muttina Sattigeyanittu Salahu 9th

 

Summary Guide Pdf Kseeb Solutions For Class 9 Kannada Poem 15 Notes Ninna Muttina Sattigeyanittu Salahu 9th Kannada Notes 9th Class

KANNADA NOTES

 

9th Standard Ninna Muttina Sattigeyanittu Salahu Kannada Poem Notes |ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್

9ನೇ ತರಗತಿ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು 9th Standard Ninna Muttina Sattigeyanittu Salahu Kannada Notes Question Answer Pdf Download, ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು  Question and Answer

 

ತರಗತಿ : 9ನೇ ತರಗತಿ

 

ಪದ್ಯದ ಹೆಸರು : ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು 

 

Kannada Pdf 

ದ್ಯ ಭಾಗ 15

ನಿನ್ನ ಮುತ್ತಿನ ಸತ್ತಿಗೆಯನ್ನಿಟ್ಟು ಸಲಹು

ಕವಿ ಪರಿಚಯ :

ರಾಘವಾಂಕನ ಕಾಲ ಕ್ರಿ.ಶ. 1225. ಹಂಪಿ ಇವನ ಸ್ಥಳ. ಪಂಪಾಪತಿ ವಿರೂಪಾಕ್ಷನ ಪರಮ ಭಕ್ತ. ರಗಳೆ ಕವಿ ಎಂದು ಪ್ರಸಿದ್ಧ ನಾದ ಹರಿಹರನ ಸೋದರಳಿಯ ಮತ್ತು ಶಿಷ್ಯ.

ಕೃತಿಗಳು: ಹರಿಶ್ಚಂದ್ರ ಕಾವ್ಯ,ಸಿದ್ಧರಾಮ ಚಾರಿತ್ರ, ವೀರೇಶ್ವರ ಚರಿತೆ, ಸೋಮನಾಥ ಚರಿತೆ, ಶರಭಚಾರಿತ್ರ, ಹರಿಹರ ಮಹತ್ವ.

ಬಿರುದು: ಉಭಯಕವಿ ಕಮಲರವಿ, ಕವಿಶರಭ ಭೇರುಂಡ,ಷಟ್ನದಿ ಬ್ರಹ್ಮ

ಈ ಪದ್ಯಭಾಗವನ್ನು ‘ಹರಿಶ್ಚಂದ್ರ ಕಾವ್ಯ’ ಗ್ರಂಥದ ಸಂಗ್ರಹದ ‘ವಿಶ್ವಾಮಿತ್ರಾಶ್ರಮ ಪ್ರವೇಶ’ ಭಾಗದಿಂದ ಆರಿಸಿಕೊಳ್ಳಲಾಗಿದೆ.

ಆಶಯಭಾವ:

ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಪರಿಪಾಲನೆಯ ಪರಾಕಾಷ್ಠೆಯನ್ನು ಕಾಣುತ್ತೇವೆ. ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ಎಂದು ಸಾಧಿಸಿ ತೋರಿಸಿದ ಸತ್ಯಸಂಧ ಹರಿಶ್ಚಂದ್ರ. ಇವನನ್ನು ಪರೀಕ್ಷಿಸಲು ವಿಶ್ವಾಮಿತ್ರನು ಗಾನರಾಣಿ ಯರನ್ನು ಹರಿಶ್ಚಂದ್ರನ ಬಳಿ ಕಳುಹಿಸುತ್ತಾನೆ. ಅವರು ತಮ್ಮ ಗಾನ, ನೃತ್ಯಗಳಿಂದ ಹರಿಶ್ಚಂದ್ರನನ್ನು ಸಂತೋಷ ಪಡಿಸುತ್ತಾರೆ. ಅದಕ್ಕೆ ಮೆಚ್ಚಿದ ರಾಜನು ಅವರಿಗೆ ತನ್ನ ಬಳಿ ಇದ್ದ ಮುತ್ತಿನ ಹಾರವನ್ನು ಬಹುಮಾನವಾಗಿ ಕೊಡಲು ಹೋಗುತ್ತಾನೆ. ಆದರೆ ಅವರು ತಿರಸ್ಕರಿಸುತ್ತಾರೆ. ಹರಿಶ್ಚಂದ್ರ ಮತ್ತು ಆ ಕನ್ನೆಯರ ನಡುವೆ ನಡೆದ ಸಂವಾದ ಇಲ್ಲಿದೆ.

ಕಾವ್ಯದ ಸಾರಾಂಶ:

ಬೇಟೆಗೆಂದು ಅರಣ್ಯಕ್ಕೆ ತೆರಳಿದ ಹರಿಶ್ಚಂದ್ರನು ಅರಿಯದ ವಿಶ್ವಾಮಿತ್ರನ ಆಶ್ರಮದೊಳಗೆ ಕಾಲಿಡುತ್ತಾನೆ. ಆಗ ಅವನಿಗೆ ಗುರುವಿನಾಜ್ಞೆ ಮೀರಿ ಬಂದದ್ದರ ಅರಿವಾಗುತ್ತದೆ. ಅದೇ ಸಮಯಕ್ಕೆ ವಿಶ್ವಾಮಿತ್ರನು, ಹರಿಶ್ಚಂದ್ರನ ಸತ್ಯಸಂಧತೆಯನ್ನು ಪರೀಕ್ಷಿಸಲು ತನ್ನ ತಪೋಬಲದಿಂದ ಗಾನರಾಣಿಯರನ್ನು ಸೃಷ್ಟಿಸಿ, ಹರಿಶ್ಚಂದ್ರನ ಬಳಿ ಕಳುಹಿಸುತ್ತಾನೆ. ಗಾನರಾಣಿಯರು ತಮ್ಮ ಹಾಡು, ನೃತ್ಯಗಳಿಂದ ಹರಿಶ್ಚಂದ್ರನನ್ನು ಸಂತೋಷಪಡಿಸುತ್ತಾರೆ. ಈ ಸಂದರ್ಭದಲ್ಲಿ ಗಾನರಾಣಿಯರಿಗೂ ಹರಿಶ್ಚಂದ್ರರಿಗೂ ನಡೆದ ಸಂವಾದ ಇಲ್ಲಿದೆ.

ವಿಶ್ವಾಮಿತ್ರನ ಕೋಪ, ಛಲದಿಂದ ಸೃಷ್ಟಿಯಾದ ಗಾನರಾಣಿಯರ ಮೈಬಣ್ಣ ಕಡುಗಪ್ಪಾಗಿರುತ್ತದೆ. ಕನ್ನೆಯರ ವರ್ಣನೆ ಇಲ್ಲಿದೆ. ಕಾರಿರುಳಿನಲ್ಲಿ ಕನ್ನೆಯರು ಹಗಲನ್ನು ನೋಡಲೆಂದು ಬಂದರೋ
ಎಂಬಂತೆ ಹರಿಶ್ಚಂದ್ರನ ಬಳಿ ಧಾವಿಸುತ್ತಾರೆ. ಸುರಾಸುರರು ಸಮುದ್ರಮಥನ ಮಾಡಿದಾಗ ಹುಟ್ಟಿದ ವಿಷ ಹೇಗೆ ಕಪ್ಪಾಗಿತ್ತೋ ಹಾಗೆ ಕಪ್ಪು ಬಣ್ಣದಿಂದ ಕೂಡಿದ್ದರು. ಈ ಕನ್ನೆಯರು (ಜಲದೇವಿಯರು) ತಮ್ಮ ಕಪ್ಪನೆಯ ಬಣ್ಣದಿಂದ ನೊಂದು, ಮನುಷ್ಯ ಜನ್ಮ ತಳೆದಿದ್ದರೇ ಎಂಬುದು ಕವಿಯ ಸ೦ಶಯ. ಕಮಲಜನು ನೀಲಿವರ್ಣದ ಸಾಲಭಂಜಿಕೆಗಳಿಗೆ ಜೀವ ತುಂಬಿರುವನೋ ಎಂಬಂತೆ ಅವರು ಸುಂದರವಾಗಿ ಕಾಣುತ್ತಿದ್ದರು. ಇಂತಹ ಕೃಷ್ಣವರ್ಣದ ಸುಂದರ ಗಾನರಾಣಿಯರು ಅರಸನ ಬಳಿ ನೃತ್ಯ ಮಾಡಲು ಬರುತ್ತಾರೆ.

ವಿಶ್ವಾಮಿತ್ರ ಸೃಷ್ಟಿಸಿದ ಈ ಮಾಯಾಂಗನೆಯರು, ಮಝ ಭಾಪು, ಭಾವದಟರಾಯ, ಮಝರೇರಾಯ, ರಾಯದಳವುಳಕಾರ, ರಾಯಕಂಟಕ, ರಾಯಜಗಜಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮಥನ, ರಾಯಜೀಯ ಸ್ಥಿರಂಜೀವ ಎಂದು ಹರಿಶ್ಚಂದ್ರನನ್ನು ಹೊಗಳುತ್ತಾ ಅವನಿಗೆ ನಮಸ್ಕರಿಸಿ ಹಾಡಲು ಪ್ರಾರಂಭಿಸಿದರು.

ಕಾಡುಹಂದಿಯನ್ನು ಬೇಟೆಯಾಡಲು ಬೆನ್ನಟ್ಟಿದ ಹರಿಶ್ಚಂದ್ರ ರಾಜನಿಗೆ ಆಯಾಸವಾಗಿ ತಿಳಿಯದೆ ವಿಶ್ವಾಮಿತ್ರನ ಆಶ್ರಮಕ್ಕೆ ಬಂದುಬಿಟ್ಟನು. ಆ ನಂತರ ತಾನು ತನ್ನ ಗುರುಗಳಾದ ವಸಿಷ್ಠರ ಆಜ್ಞೆ ಮೀರಿ ಇಲ್ಲಿಗೆ ಬಂದಿದ್ದಕ್ಕೆ ರಾಜನಿಗೆ ಭಯ ಆಗುತ್ತದೆ. ಇದರ ಜೊತೆಗೆ ತಾನು ಕಂಡ ಕೆಟ್ಟ ಕನಸಿನ ನೆನಪಾಗಿ ಅಂಜಿಕೆ ಮತ್ತಷ್ಟು ಜಾಸ್ತಿಯಾಗುತ್ತದೆ. ಆದರೆ, ಈ ಎಲ್ಲಾ ಆಯಾಸ, ಅಂಜಿಕೆಗಳು ದೂರವಾಗುವಂತೆ ಸಮಯೋಜಿತವಾದ ಗಾನರಾಣಿಯರ ಗಾನ- ನೃತ್ಯಗಳನ್ನು ಕೇಳಿ, ಕಂಡು ಸಂತೋಷವಾಗುತ್ತದೆ. ಈ ಸಂತಸದಿಂದ ರಾಜನು ನೃತ್ಯಗಾರ್ತಿಯರಿಗೆ ತನ್ನಲ್ಲಿದ್ದ ಆಭರಣವನ್ನು ಉಡುಗೊರೆಯಾಗಿ ಕೊಡುವನು.

ಬಡವನಿಗೆ ಆನೆ ಉಡುಗೊರೆಯಾಗಿ ದೊರಕಿದರೆ ಪ್ರಯೋಜನವಿದೆಯೇ? ಬಾಯಾರಿದವನಿಗೆ ತುಪ್ಪ ಸಿಕ್ಕರೆ ಅವನ ದಾಹ ಹಿಂಗುವುದೇ? ಕಾಯಿಲೆ ಬಂದು ಮಲಗಿದಾಗ ರಂಭೆಯಂತಹ ಸುಂದರ ಸ್ತ್ರೀ ದೊರೆತರೂ ಉಪಯೋಗವಿಲ್ಲ. ಸಾಯುವ ಸಮಯದಲ್ಲಿ ಅರಸುತನ ಒದಗಿದರೆ ಫಲವೇನು? ಬಿಸಿಲಿನಲ್ಲಿ ಒಣಗಿ ಬೆಂಡಾಗಿ ಬೀಳುತ್ತಿರುವ ನಮಗೆ ನೀನು ಮಣಿಯ ಆಭರಣಗಳನ್ನು ಕೊಟ್ಟರೆ ಪ್ರಯೋಜನ ಇದೆಯೇ? ಅರಸ ಹೇಳು ಎಂದು ನೃತ್ಯಗಾರ್ತಿಯರು ಅರಸನನ್ನು ಪ್ರಶ್ನಿಸುತ್ತಾರೆ.

ಕಡಲಿನಲ್ಲಿ ಈಜುವವನಿಗೆ ತೆಪ್ಪವನ್ನು ಉಡುಗೊರೆಯಾಗಿ ಕೊಡಬೇಕು. ಕಡು ಬಡವನಿಗೆ ಚಿನ್ನವನ್ನು ನೀಡಬೇಕು. ರೋಗಿಯಾದವನಿಗೆ ಅಮೃತ ಕುಡಿಸಬೇಕು. ಆಗ ಕೊಟ್ಟ ಉಡುಗೊರೆ ಪ್ರಯೋಜನವಾಗುತ್ತದೆ. ಅವರಿಗೂ ಅತೀವವಾದ ಸಂತಸವಾಗುತ್ತದೆ. ಸುಡು ಸುಡನೆ ಸುಡುವ, ಬಿರುಬಿಸಿಲ ಸೆಕೆಯಿಂದಾಗಿ ಉಸಿರಾಡುವುದೇ ಕಷ್ಟವಾಗಿದೆ. ಬಿಸಿಲಿನ ಪ್ರಖರತೆಯಿಂದ ನಮ್ಮಬಾಯಿ ಬತ್ತಿಹೋಗಿದೆ. ಸುತ್ತಲಿನ ಧಗೆಯಿಂದ ಸಾವು ಬಂದಂತೆ ಎನ್ನಿಸುತ್ತಿದೆ. ಇಂತಹ ಸಮಯದಲ್ಲಿ ನೀನು ನಮಗೆ ಆಸರೆಯಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು – ಇತ್ತು ಸಲಹು ಅರಸನೇ” ಎಂದು ಗಾನರಾಣಿಯರು ಹರಿಶ್ಚಂದ್ರನನ್ನು ಕೇಳಿಕೊಳ್ಳುವರು.

ಸೂರ್ಯವಂಶದ ಅರಸನಿಗೆ ಪಟ್ಟ ಕಟ್ಟುವಾಗ ಶ್ವೇತಛತ್ರ ಇಲ್ಲದಿದ್ದರೆ ಸಾಧ್ಯವಿಲ್ಲ. ಯುದ್ಧ ಮಾಡಲು ಹೊರಟಾಗ ರಥದ ಮೇಲೆ  ಬೆಳುಗೊಡೆ ಇರಲೇಬೇಕು. ಆಗಲೇ ಹಗೆಗಳು ಬಿಳಿಕೊಡೆಯನ್ನು ಕಂಡು ಅರಸನೆಂದು ಬಗೆದು ಭಯಪಡುವರು. ಶ್ವೇತಛತ್ರದ ನೆರಳಿನಲ್ಲಿ ಇರುವವನಿಗೆ ಯಾವುದೇ ರೀತಿಯ ತೊಂದರೆ, ದುಃಖ, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಯಾವುದೂ ಇರುವುದಿಲ್ಲ. ಇದನ್ನು ತಿಳಿದೂ ನೀವು ಸತ್ತಿಗೆಯನ್ನು ಕೇಳಬಹುದೇ ಹೇಳು ಎಂದು ಹರಿಶ್ಚಂದ್ರನು ನೃತ್ಯಗಾರ್ತಿಯರನ್ನು ಪ್ರಶ್ನಿಸುತ್ತಾನೆ.

ಅನುನಯದಿಂದ ಏನು ಬೇಕಾದರೂ ಕೊಡಬಹುದು; ಅಥವಾ ಕೊಡದೆಯೂ ಇರಬಹುದು. ತಂದೆ, ತಾಯಿ, ಪ್ರಿಯತಮೆ, ದೈವ, ತನ್ನ ಪರಿವಾರ – ಹೀಗೆ ಇವೆಲ್ಲವನ್ನೂ ಕೊಡುವ ಮಹಾನ್ ಪುರುಷರು ಈವರೆಗೆ ಜನಿಸಿಲ್ಲ.

ಈ ಮೇಲೆ ಹೇಳಿದ ಯಾವುದನ್ನೂ ನೀನು ನಮಗೆ ಕೊಡಬೇಡ. ಕೇವಲ ಕೊಡೆಯನ್ನು ಮಾತ್ರ ಕೇಳುತ್ತಿದ್ದೇವೆ. ಅದರ ಬಗ್ಗೆ ಅಷ್ಟೊಂದು ಲೋಭವೇಕೆ ಎಂದು ಗಾನರಾಣಿಯರು ಕೇಳಿದಾಗ ‘ನನಗೆ – ಬೆಳ್ಗೊಡೆಯೇ ಮಾತಾಪಿತರು. ಬೆಳ್ಗೊಡೆ ಮಾತಾಪಿತರಿಗೆ ಸಮಾನ’ ಆದ್ದರಿಂದ ಕೊಡಲಾರೆನೆಂದು ಅರಸ ಹೇಳುತ್ತಾನೆ.

ಸತಿಯನ್ನು ಹೇಗೆ ಬೇರೆಯವರಿಗೆ ಕೊಡುವುದಿಲ್ಲವೋ ಹಾಗೆ ಸತ್ತಿಗೆಯನ್ನೂ ಜನಸಾಮಾನ್ಯರಿಗೆ ಕೊಡಬಾರದು. ಸತ್ತಿಗೆಯು ವಂಶಪಾರಂಗತವಾಗಿ ಬರುವುದರಿಂದ ಇದು ತಂದೆಗೆ ಸಮಾನ. ಪಟ್ಟ ಕಟ್ಟುವ ಸಮಯದಲ್ಲಿ ಸತ್ತಿಗೆಯ ಪೂಜೆಯನ್ನು ಮಾಡುವುದರಿಂದ ಇದು ದೈವಕ್ಕೆ ಸಮಾನ. ಬೆಳ್ಗೊಡೆಯು ತಂಪಾದ ನೆರಳನ್ನು ನೀಡುವುದರಿಂದ ಇದು ತಾಯಿಯಂತೆ. ಸತ್ತಿಗೆಯನ್ನು ಕಂಡು ರಣರಂಗದಲ್ಲಿ ವೈರಿಗಳು ಹಿಮ್ಮೆಟ್ಟುವುದರಿಂದ ಇದು ಚತುರಂಗಬಲಕ್ಕೆ ಸಮಾನ. ಇದೆಲ್ಲವನ್ನೂ ತಿಳಿದೂ ಅರಸನ ಮುತ್ತಿನ ಸತ್ತಿಗೆಯನ್ನು ಬೇಡುವವರನ್ನು ಅತಿ ಮರುಳರು ಎನ್ನುತ್ತದೆ. ಈ ಮೂಲೋಕ ಎಂದು ಹರಿಶ್ಚಂದ್ರ ಗಾನರಾಣಿಯರಿಗೆ ವಿವರಿಸುತ್ತಾನೆ.

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:

1. ಗಾನರಾಣಿಯರು ಆವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ?

ಉತ್ತರ: ಕಾರಿರುಳು ಹಗಲನ್ನು ನೋಡಲು ಬಂದಂತೆ ಗಾನರಾಣಿಯರು ಅವನೀಶನನ್ನು ನೋಡಲು ಬಂದರೆಂದು ಕವಿಯು ಹೇಳುತ್ತಾನೆ.

2. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನ ವನ್ನು ಕೊಟ್ಟನು?

ಉತ್ತರ: ಗಾನರಾಣಿಯರಿಗೆ ಹರಿಶ್ಚಂದ್ರನು ತನ್ನಲ್ಲಿದ್ದ ಆಭರಣಗಳನ್ನು ಬಹುಮಾನವಾಗಿ ಕೊಟ್ಟನು.

3.ಗಾನರಾಣಿಯರು ಹರಿಶ್ಚಂದ್ರನನ್ನು ಏನನ್ನು ಕೊಡು ಎಂದು ಕೇಳಿದರು?

ಉತ್ತರ: ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಗಾನರಾಣಿಯರು ಹರಿಶ್ಚಂದ್ರನನ್ನು ಕೇಳಿದರು.

4. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ?

ಉತ್ತರ: ಪಟ್ಟಕಟ್ಟುವ ಸಂದರ್ಭದಲ್ಲಿ ಸತ್ತಿಗೆಗೆ ಪೂಜೆ ಮಾಡುವುದರಿಂದ ಅದು ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:

1. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ಯೆಯರ ರೂಪ, ಲಾವಣ್ಯ ಹೇಗಿತ್ತು? ವಿವರಿಸಿ.

ಉತ್ತರ: ವಿಶ್ವಾಮಿತ್ರನ ಸಿಟ್ಟು, ಛಲದಿಂದ ಸೃಷ್ಟಿಯಾದ ಗಾನರಾಣಿಯರ ಮೈಬಣ್ಣ ಕಾರಿರುಳಿನಂತೆ ಕಪ್ಪಾಗಿರುತ್ತದೆ. ಕಾರಿರುಳಿನಲ್ಲಿ ಕನ್ನೆಯರು ಹಗಲನ್ನು (ಹರಿಶ್ಚಂದ್ರ) ನೋಡಲೆಂದು ಬಂದರೋ ಎಂಬಂತೆ ಹರಿಶ್ಚಂದ್ರನ ಬಳಿ ಆಗಮಿಸುತ್ತಾರೆ. ಸುರಾಸುರರು ಸಮುದ್ರ ಮಥನ ಮಾಡಿದಾಗ ಹುಟ್ಟಿದ ವಿಷ ಹೇಗೆ ಕಪ್ಪಗಿತ್ತೋ ಆ ರೀತಿಯಲ್ಲಿ ಕಪ್ಪು ಬಣ್ಣ ಹೊಂದಿದ್ದರು. ತಮ್ಮ ಕಪ್ಪನೆಯ ಬಣ್ಣದಿಂದ ನೊಂದು ಮನುಷ್ಯರಾಗಿ ಬಂದರೋ ಎಂಬಂತೆ ಕಾಣುತ್ತಿದ್ದರು. ಬ್ರಹ್ಮನು ನೀಲವರ್ಣದ ಸಾಲಭಂಜಿಕೆ ಗಳಿಗೇ ಜೀವ ತುಂಬಿರುವನೊ ಎಂಬಂತೆ ಅವರು ಕೃಷ್ಣವರ್ಣ ದವರಾದರೂ ಸುಂದರವಾಗಿದ್ದರೆಂದು ಕವಿ ವರ್ಣಿಸುತ್ತಾನೆ.

2. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು? ವಿವರಿಸಿ.

ಉತ್ತರ: ಗಾನರಾಣಿಯರು ಹರಿಶ್ಚಂದ್ರನನ್ನು ಮಝ ಭಾಪದಟರಾಯ, ಮಝರೇರಾಯ, ರಾಯದಳವುಳಕಾರ, ರಾಯ ಕಂಟಕ, ರಾಯಜಗಜಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜ ಬಲಭೀಮ, ರಾಯಮಥನ, ರಾಯಜೀಯ, ಸ್ಥಿರಂಜೀವ ಎಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು.

3. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು?

ಉತ್ತರ: ರವಿಕುಲದ ರಾಜನಿಗೆ ಪಟ್ಟ ಕಟ್ಟುವಾಗ ಬೆಳ್ಗೊಡೆ ಬೇಕೆ ಬೇಕು. ಯುದ್ಧ ಮಾಡಲು ಹೊರಟಾಗ ರಥದ ಮೇಲೆ ಸತ್ತಿಗೆ ಇರುವುದು ಅಗತ್ಯ. ಆಗ ಹಗೆಗಳು ಬಿಳಿಕೊಡೆಯ ರಥದವನು ಅರಸನೆಂದು ಗುರುತಿಸಿ ಭಯಪಡುವರು. ಶ್ವೇತಛತ್ರದ ನೆರಳಿನಲ್ಲಿ ಇರುವವನಿಗೆ ಯಾವುದೇ ರೀತಿಯ ತೊಂದರೆ, ದುಃಖ, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಯಾವುದೂ ಇರುವುದಿಲ್ಲ. ಆ ಕಾರಣಕ್ಕೆ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ ಎಂದು ಗಾನರಾಣಿಯರಿಗೆ ಹರಿಶ್ಚಂದ್ರನು ಹೇಳುತ್ತಾನೆ.

4. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ?

ಉತ್ತರ: ಸತಿಯನ್ನು ಹೇಗೆ ಬೇರೆಯವರಿಗೆ ಕೊಡುವುದಿಲ್ಲವೋ ಹಾಗೆ ಸತ್ತಿಗೆಯನ್ನೂ ಜನಸಾಮಾನ್ಯರಿಗೆ ಕೊಡ ಬಾರದು. ಸತ್ತಿಗೆಯು ವಂಶ ಪಾರಂಗತವಾಗಿ ಬರುವುದರಿಂದ ಇದು ತಂದೆಗೆ ಸಮಾನ. ಪಟ್ಟಾಭಿಷೇಕದ ಸಮಯದಲ್ಲಿ ಸತ್ತಿಗೆಯ ಪೂಜೆಯನ್ನು ಮಾಡುವುದರಿಂದ ಇದು ದೈವಕ್ಕೆ ಸಮಾನ. ತಂಪಾದ ನೆರಳನ್ನು ಬೆಳ್ಗೊಡೆಯು ನೀಡುವುದರಿಂದ ಇದು ತಾಯಿಯ೦ತೆ ರಣರಂಗದಲ್ಲಿ ಸತ್ತಿಗೆಯನ್ನು ಕಂಡು ವೈರಿಗಳು ಹಿಮ್ಮೆಟ್ಟುವುದರಿಂದ ಇದು ಚತುರಂಗಬಲಕ್ಕೆ ಸಮಾನ. ಇಷ್ಟೊಂದು ಮಹತ್ವವಿರುವ ಸತ್ತಿಗೆಯನ್ನು ಉಡುಗೊರೆಯಾಗಿ ಕೊಡುವುದು ಅಸಾಧ್ಯ ಎಂದು ಅರಸ ಸತ್ತಿಗೆಯ ವಿಶೇಷತೆ ಬಗ್ಗೆ ಹೇಳುತ್ತಾನೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ.

ಉತ್ತರ: ಬಡವನಿಗೆ ಆನೆ ಉಡುಗೊರೆಯಾಗಿ ದೊರಕಿದರೆ, ಬಾಯಾರಿದವನಿಗೆ ತುಪ್ಪ ಸಿಕ್ಕರೆ, ರೋಗಿಗೆ ರಂಭೆಯಂತಹ ಸ್ತ್ರೀ ದೊರೆತರೆ ಏನೂ ಪ್ರಯೋಜನವಿಲ್ಲ. ಸಾಯುವ ಸಮಯದಲ್ಲಿ ಅರಸುತನ ಒದಗಿದರೆ ಫಲವೇನು? ಬಿಸಿಲಿನಲ್ಲಿ ಒಣಗಿ ಬೆಂಡಾಗಿರುವ ನಮಗೆ ಸತ್ತಿಗೆಯನ್ನು ಕೊಡದೆ, ನಿನ್ನ ಆಭರಣಗಳನ್ನು ಕೊಟ್ಟರೆ ಪ್ರಯೋಜನವೇನು? ಎಂದು ಗಾನರಾಣಿಯರು ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸುತ್ತಾರೆ.

2. ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ,

ಉತ್ತರ: ಗಾನರಾಣಿಯರ ನೃತ್ಯಕ್ಕೆ ಮನಸೋತು ರಾಜನು ಅವರಿಗೆ ತನ್ನ ಆಭರಣಗಳನ್ನು ಬಹುಮಾನವಾಗಿ ಕೊಡುತ್ತಾನೆ. ಆದರೆ, ಗಾನರಾಣಿಯರು ಅದನ್ನು ತೆಗೆದುಕೊಳ್ಳುವುದಿಲ್ಲ. ಬಡವನಿಗೆ ಆನೆ ಕೊಟ್ಟರೆ, ಬಾಯಾರಿದವನಿಗೆ ತುಪ್ಪ ಸಿಕ್ಕರೆ, ರೋಗಿಗೆ ರಂಭೆಯಂತಹ ಸ್ತ್ರೀ ದೊರೆತರೆ, ಸಾಯುವ ಕಾಲದಲ್ಲಿ ಅರಸುತನ ಒದಗಿದರೆ ಪ್ರಯೋಜನವಿಲ್ಲ. ಬಿಸಿಲಿನಲ್ಲಿ ಒಣಗಿರುವ ನಮಗೆ ನಿನ್ನ ಆಭರಣಕ್ಕೆ ಬದಲಾಗಿ ನಿನ್ನ ಮುತ್ತಿನ ಸತ್ತಿಗೆಯನ್ನು ನೀಡು ಎಂದು ಹರಿಶ್ಚಂದ್ರನನ್ನು ಕೇಳುತ್ತಾರೆ.

ಕಡಲಿನಲ್ಲಿ ಈಜುವವನಿಗೆ ತೆಪ್ಪ ಬೇಕು; ಬಡವನಿಗೆ ಚಿನ್ನ ಅಗತ್ಯ; ರೋಗಿಗೆ ಅಮೃತ ಕುಡಿಸಬೇಕು. ಆಗ ಕೊಟ್ಟ ಉಡುಗೊರೆಯಿಂದ ಪ್ರಯೋಜನವಾಗುತ್ತದೆ. ಬಿರುಬಿಸಿಲಿನಲ್ಲಿ ಒಣಗುತ್ತಿರುವ ನಮಗೆ ಸತ್ತಿಗೆಯ ಅಗತ್ಯವಿದೆ. ಅಂತೆಯೇ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಡು ಎಂದು ರಾಜನನ್ನು ಕೇಳುತ್ತಾರೆ.

ಅರಸನಿಗೆ ಪಟ್ಟಕಟ್ಟುವಾಗ, ಯುದ್ಧಮಾಡಲು ಹೊರಟಾಗ ಸತ್ತಿಗೆಯ ಅಗತ್ಯ ಇದೆ. ಇದರ ನೆರಳಿನಲ್ಲಿದ್ದರೆ ಅರಸನಿಗೆ ಯಾವುದೆ ತೊಂದರೆಬಾರದು. ಇದು ತಿಳಿದೂ ಸತ್ತಿಗೆಯನ್ನು ಕೇಳುವುದು ತರವಲ್ಲ ಎಂದು ಹರಿಶ್ಚಂದ್ರನು ನೃತ್ಯಗಾರ್ತಿಯರಿಗೆ ಹೇಳುತ್ತಾನೆ. ಸತ್ತಿಗೆಯು ನನಗೆ ಮಾತಾಪಿತರಿಗೆ ಸಮಾನವಾದ್ದರಿಂದ ಅದನ್ನು ಕೊಡಲಾರೆನೆಂದೂ ಅರಸ ಹೇಳುತ್ತಾನೆ.

ಸತಿಯನ್ನು ಹೇಗೆ ಬೇರೆಯವರಿಗೆ ಕೊಡುವುದಿಲ್ಲವೋ ಹಾಗೆ ಸತ್ತಿಗೆಯನ್ನೂ ಕೊಡಬಾರದು. ಇದು ವಂಶಪಾರಂಗತವಾಗಿ ಬರುತ್ತದೆ. ಪಟ್ಟ ಕಟ್ಟುವಾಗ ಸತ್ತಿಗೆ ಬೇಕೇಬೇಕು. ಇದು ತಂದೆ, ತಾಯಿ, ಚತುರಂಗ ಬಲಕ್ಕೆ ಸಮಾನ. ಇಷ್ಟೊಂದು ವಿಶೇಷತೆ ಇರುವ ಮುತ್ತಿನ ಸತ್ತಿಗೆಯನ್ನು ಬೇರೆಯವರಿಗೆ ಕೊಡುವುದು ಅಸಾಧ್ಯ ಎಂದು ಹರಿಶ್ಚಂದ್ರನು ಗಾನರಾಣಿಯರಿಗೆ ಹೇಳುತ್ತಾನೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. ‘ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು

ಪದ್ಯ : ನಿನ್ನ ಮುತ್ತಿನ ಸತ್ತಿಗೆಯನ್ನಿಟ್ಟು ಸಲಹು

ಕವಿ: ರಾಘವಾಂಕ

ಆಕರ : ಹರಿಶ್ಚಂದ್ರ ಕಾವ್ಯ.

ಸಂದರ್ಭಸ್ವಾರಸ್ಯ: ವಿಶ್ವಾಮಿತ್ರನ ಹಠ, ಕೋಪ, ಛಲದಿಂದ ಸೃಷ್ಟಿಯಾದ ಗಾನರಾಣಿಯರ ಮೈಬಣ್ಣ ಕಡುಗಪ್ಪಾಗಿರುತ್ತದೆ.ಸಂದ ಕಾರಿರುಳಿನಲ್ಲಿ ಕೃಷ್ಣವರ್ಣದ ಕನ್ನೆಯರು ಹಗಲನ್ನು ನೋಡಲೆಂದು ಬಂದರೊ ಎಂಬಂತೆ ಹರಿಶ್ಚಂದ್ರನನ್ನು ನೋಡಲು ಕನ್ನೆಯರು ಆಗಮಿಸುತ್ತಾರೆ. ಇಲ್ಲಿ ಕವಿ ಹರಿಶ್ಚಂದ್ರನನ್ನು ಹಗಲಿಗೆ ಹೋಲಿಸಿದ್ದಾನೆ.

2. “ಬಡತನದ ಹೊತ್ತಾನೆ ದೊರಕಿ ಫಲವೇನು?”

ಪದ್ಯ : ನಿನ್ನ ಮುತ್ತಿನ ಸತ್ತಿಗೆಯನ್ನಿಟ್ಟು ಸಲಹು

ಆಕರ : ಹರಿಶ್ಚಂದ್ರ ಕಾವ್ಯ.

ಕವಿ : ರಾಘವಾಂಕ

ಸಂದರ್ಭಸ್ವಾರಸ್ಯ: ಗಾನರಾಣಿಯರ ಗಾನ-ನೃತ್ಯಕ್ಕೆ ಮನಸೋತು ಹರಿಶ್ಚಂದ್ರನು ಅವರಿಗೆ ತನ್ನ ಆಭರಣಗಳನ್ನು ಉಡುಗೊರೆಯಾಗಿ ಕೊಡಲು ಉದ್ಯುಕ್ತನಾಗುತ್ತಾನೆ. ಆಗ ಗಾನರಾಣಿಯರು ಬಡವನಿಗೆ ಆನೆ ಕೊಟ್ಟರೆ ಪ್ರಯೋಜನವಿದೆಯೆ? ಹಾಗೆ ನಮಗೂ ನಿನ್ನ ಆಭರಣದಿಂದ ಪ್ರಯೋಜನವಿಲ್ಲ. ನಿನ್ನ ಸತ್ತಿಗೆಯನ್ನು ಕೊಡು ಎಂದು ಹರಿಶ್ಚಂದ್ರನನ್ನು ಕೇಳುತ್ತಾರೆ.

3. ‘ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು ಭೂಭುಜಯೆಂದರು’

ಪದ್ಯ: ನಿನ್ನ ಮುತ್ತಿನ ಸತ್ತಿಗೆಯನ್ನಿಟ್ಟು ಸಲಹು

ಕವಿ : ರಾಘವಾಂಕ

ಆಕರ: ಹರಿಶ್ಚಂದ್ರ ಕಾವ್ಯ.

ಸಂದರ್ಭದ್ವಾರಸ್ಯ: ಕಡಲಿನಲ್ಲಿ ಈಜುವವನಿಗೆ ತೆಪ್ಪ, ಬಡವನಿಗೆ ಚಿನ್ನ, ರೋಗಿಗೆ ಅಮೃತ ಅಗತ್ಯ. ಆಗ ಕೊಟ್ಟ ಉಡುಗೊರೆಯಿಂದ ಪ್ರಯೋಜನವಾಗುತ್ತದೆ. ಬಿಸಿಲಿನಲ್ಲಿ ಬಾಗುತ್ತಿರುವ ನಮಗೆ ಸತ್ತಿಗೆಯ ಅಗತ್ಯವಿದೆ. ಆದ್ದರಿಂದ ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು ಎಂದು ಗಾನರಾಣಿಯರು ಹರಿಶ್ಚಂದ್ರನಿಗೆ ಹೇಳುತ್ತಾರೆ.

4. “ಅನುನಯದೊಳೆಲ್ಲವು ಕೊಡಬಹುದು ಬಿಡಬಹುದು”

ಪದ್ಯ : ನಿನ್ನ ಮುತ್ತಿನ ಸತ್ತಿಗೆಯನ್ನಿಟ್ಟು ಸಲಹು

ಕವಿ : ರಾಘವಾಂಕ

ಆಕರ : ಹರಿಶ್ಚಂದ್ರ ಕಾವ್ಯ.

ಸಂದರ್ಭದ್ವಾರಸ್ಯ: ಗಾನರಾಣಿಯರ ಗಾನ-ನೃತ್ಯಕ್ಕೆ ಮನಸೋತು ಹರಿಶ್ಚಂದ್ರನು ತನ್ನ ಆಭರಣಗಳನ್ನು ಉಡುಗೊರೆ ಯಾಗಿ ಕೊಡುತ್ತಾನೆ. ಆದರೆ, ಅವರು ಅದನ್ನು ತಿರಸ್ಕರಿಸಿ ನಮಗೆ ಉಪಯೋಗವಾಗುವ ಸತ್ತಿಗೆಯನ್ನು ಕೊಡು ಎಂದು ಕೇಳುತ್ತಾ ಗಾನರಾಣಿಯರು ಈ ಮಾತನ್ನು ಹೇಳುತ್ತಾರೆ. ತಂದೆ, ತಾಯಿ,ಪ್ರಿಯತಮೆ, ತನ್ನ ಪರಿವಾರ-ಹೀಗೆ ಏನು ಬೇಕಾದರೂ ಅನನುಯ ದಿಂದ ಕೊಡಬಹುದು ಅಥವಾ ಬಿಡಬಹುದು. ಆದರೆ ಇದಾವುದನ್ನೂ ಕೇಳದೆ ಕೇವಲ ಕೊಡೆಯನ್ನು ಮಾತ್ರ ಕೇಳುತ್ತಿದ್ದೇವೆ. ಲೋಭ ಮಾಡದೆ ನೀಡು ಎಂದು ಅರಸನಿಗೆ ಗಾನರಾಣಿಯರು ಹೇಳುತ್ತಾರೆ.

ಸೈದ್ಧಾಂತಿಕ ಭಾಷಾಭ್ಯಾಸ

ಷಟ್ಪದಿಯು ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ, ಷಟ್ಪದಿಯಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಎಂದು ಆರು ವಿಧ. ಷಟ್-ಆರು, ಪದಿ-ಸಾಲು. ಆರು ಸಾಲುಗಳ ಪದ್ಯ ಷಟ್ಪದಿ.

– 1, 2, 4 ಮತ್ತು 5ನೆಯ ಸಾಲುಗಳು ಸಮನಾಗಿರುತ್ತವೆ.

3 ಮತ್ತು 6ನೆಯ ಸಾಲುಗಳು ಸಮನಾಗಿದ್ದು ಉಳಿದ ಸಾಲುಗಳ ಒಂದೂವರೆಯಷ್ಟು ಮತ್ತು ಒಂದು ಗುರುವಿನಿಂದ ಕೂಡಿರುತ್ತದೆ.

– 3 ಮತ್ತು 6ನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರು ಎಂದೇ ಪರಿಗಣಿಸಬೇಕು.

ಒಟ್ಟು ಪದ್ಯದ ಮೊದಲ ಮೂರು ಸಾಲುಗಳನ್ನು ಪೂರ್ವಾರ್ಧವೆಂದೂ ಕೊನೆಯ ಮೂರು ಸಾಲುಗಳನ್ನು ಉತ್ತರಾರ್ಧವೆಂದೂ ತಿಳಿಯಲಾಗುವುದು.

ಆದಿಪ್ರಾಸ ನಿಯತವಾಗಿರುತ್ತದೆ.

ಭಾಮಿನಿ ಷಟ್ಪದಿ:

1, 2, 4 ಮತ್ತು 5ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ. 3 ಮತ್ತು 6ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.

ವಾರ್ಧಕ ಷಟ್ಪದಿ:

1, 2, 4 ಮತ್ತು 5ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ. 3 ಮತ್ತು 6ನೆಯ ಸಾಲುಗಳಲ್ಲಿ 5 ಮಾತ್ರೆಗಳ ಆರು ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ.

ಇದರ ಉತ್ತರಾರ್ಧವೂ ಹೀಗೆಯೇ ಇರುತ್ತದೆ.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಷಟ್ಪದಿ ಎಂದರೇನು? ವಿಧಗಳಾವವು?

ಉತ್ತರ: ಷಟ್ಪದಿ ಎಂದರೆ ಆರು ಸಾಲಿನ ಪದ್ಯ. ಇದರಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಎಂದು ಆರು ವಿಧಗಳಿವೆ.

2. ಭಾಮಿನಿ ಷಟ್ಪದಿಯ ಲಕ್ಷಣವೇನು?

ಉತ್ತರ: ಭಾಮಿನಿ ಷಟ್ಪದಿಯಲ್ಲಿ 1,24 ಮತ್ತು 5ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ. 3 ಮತ್ತು 6ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.

3. ವಾರ್ಧಕ ಷಟ್ಪದಿಯ ಲಕ್ಷಣವನ್ನು ವಿವರಿಸಿ.

ಉತ್ತರ: ವಾರ್ಧಕ ಷಟ್ಪದಿಯಲ್ಲಿ 1, 2, 4 ಮತ್ತು 5ನೆಯ ಸಾಲುಗಳಲ್ಲಿ 5 ಮಾತ್ರೆಗಳ 4 ಗಣಗಳಿರುತ್ತವೆ. 3 ಮತ್ತು 6ನೆಯ ಸಾಲುಗಳಲ್ಲಿ 5 ಮಾತ್ರೆಗಳ 6 ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ.

ಆ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

1. ಸಂದ ಕಾರಿರುಳು ………………….
…………………………………………
…………………………………………
………..ಬಂದರಂಗನೆಯರವನೀಶನೆಡೆಗೆ

ಉತ್ತರ:
ಸಂದ ಕಾರಿರುಳು ಕನ್ನೆಯರು ಹಗಲಂ ನೋಡ ಲೆಂದು ಬಂದರೂ ಸುರಾಸುರರಬುಧಿಯಂ ಮಥಿಸು ವಂದು ಹೊಸ ವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ ನೊಂದು ಮಾನಿಸರಾದರೋ ಕಮಲಜಂ ನೀಲ ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

2. ಬಡತನದ…………………………….
……………………………………………
…………………………………. ………
……………………………ಮತ್ತಿಂತೆಂದರು.

ಉತ್ತರ:
ಬಡತನದ ಹೊತ್ತಾನೆ ದೊರಕಿ ಫಲವೇನು ನೀ ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಲು ಹೊಡೆದು ಬೆಂಡಾಗಿ ಬೀಳೆಮಗೆ ನೀನೊಲಿದು ಮಣಿ ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು.

Leave a Comment