ಜೀವಿಗಳಲ್ಲಿ ವೈವಿಧ್ಯತೆ 9ನೇ ತರಗತಿ విಜ್ಞಾನ
ಜೀವಿಗಳಲ್ಲಿ ವೈವಿಧ್ಯತೆ
ಜೀವಿಗಳಲ್ಲಿ ವೈವಿಧ್ಯತೆ ಪ್ರಶೋತ್ತರ
ಜೀವಿಗಳಲ್ಲಿ ವೈವಿಧ್ಯತೆ ಪ್ರಶ್ನೆ ಉತ್ತರ
ಜೀವಿಗಳಲ್ಲಿ ವೈವಿಧ್ಯತೆ 9ನೇ ತರಗತಿ ವಿಜ್ಞಾನ ನೋಟ್ಸ್
ಜೀವಿಗಳಲ್ಲಿ ವೈವಿಧ್ಯತೆ ಕೊಶನ್ ಆನ್ಸರ್
ಜೀವಿಗಳಲ್ಲಿ ವೈವಿಧ್ಯತೆ ಪ್ರಶೋತ್ತರಗಳು
ಜೀವಿಗಳಲ್ಲಿ ವೈವಿಧ್ಯತೆ ನೋಟ್ಸ್
ಜೀವಿಗಳಲ್ಲಿ ವೈವಿಧ್ಯತೆ ಪಾಠ
9ನೇ ತರಗತಿ ವಿಜ್ಞಾನ ಭಾಗ-2
ಅಧ್ಯಾಯ -7
ಜೀವಿಗಳಲ್ಲಿ ವೈವಿಧ್ಯತೆ
ನೋಟ್ಸ್/ ಪ್ರಶ್ನೋತ್ತರಗಳು
Jivigalalli vaividyate question answer
jivigalalli vaividyate
jivigalalli vaividyate 9th class
jivigalalli vaividyate question answer in kannada
jivigalalli vaividyate samveda class
9th science jeevigalalli vaividyate question answer
ಪುಟ ಸಂಖ್ಯೆ 111
1. ನಾವು ಜೀವಿಗಳನ್ನು ಏಕೆ ವರ್ಗೀಕರಿಸಬೇಕು ?
ಉತ್ತರ:
ನಮ್ಮನ್ನು ದಿಗ್ಭ್ರಮೆಗೊಳಿಸುವ ನಮ್ಮ ಸುತ್ತಲಿನ ಈ ಜೀವವೈವಿಧ್ಯತೆಗಳು ಭೂಮಿಯ ಮೇಲೆ ಸುಮಾರು ಲಕ್ಷಾಂತರ ವರ್ಷಗಳಿಂದ ವಿಕಾಸವಾಗಿವೆ. ಆದಾಗ್ಯೂ, ಈ ಎಲ್ಲಾ ಜೀವಿಗಳ ಬಗ್ಗೆ ತಿಳಿಯಲು ಮತ್ತು ಅರ್ಥೈಸಿಕೊಳ್ಳಲು ನಮಗೆ ಅದರಲ್ಲಿನ ಅತ್ಯಲ್ಪ ಭಾಗಕ್ಕಿಂತ ಹೆಚ್ಚಿನ ಸಮಯವಿಲ್ಲ. ಆದ್ದರಿಂದ ನಾವು ಅವುಗಳನ್ನು ಒಂದೊಂದಾಗಿ ತಿಳಿಯಲೂ ಸಾಧ್ಯವಿಲ್ಲ. ಬದಲಾಗಿ, ನಾವು ಜೀವಿಗಳಲ್ಲಿ ಕಂಡುಬರುವ ಹೋಲಿಕೆಗಳನ್ನು
ಗಮನಿಸಿ, ಹೋಲಿಕೆಗನುಗುಣವಾಗಿ ಅವುಗಳನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸಿದ ನಂತರ ಪ್ರತಿಯೊಂದು ವರ್ಗವನ್ನು ಒಟ್ಟಾಗಿ ಪರಿಗಣಿಸಿ ಅಭ್ಯಸಿಸಬೇಕು.
2. ನೀವು ನಿಮ್ಮ ಸುತ್ತಲಿನ ಜೀವಿಗಳಲ್ಲಿ ಗಮನಿಸಿರುವ ವ್ಯತ್ಯಾಸಗಳಿಗೆ ಮೂರು ಉದಾಹರಣೆ ಕೊಡಿ.
ಉತ್ತರ:
i) ಮಂಗ ಮತ್ತು ಹಸುಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ii) ದೇಶೀ ಹಸು ಮತ್ತು ಜೆರ್ಸಿ ಆಕಳುಗಳಲ್ಲಿ ವ್ಯತ್ಯಾಸ ಇರುತ್ತದೆ.
iii) ಮಾನವರ ನಡುವೆಯೂ ವ್ಯತ್ಯಾಸ ಇರುತ್ತದೆ. (ಎತ್ತರ, ಗಿಡ್ಡ, ಮತ್ತು ಕೆಂಪು, ಬಿಳಿ ಬಣ್ಣಗಳು)
ಪುಟ ಸಂಖ್ಯೆ 113
1. ನಿಮ್ಮ ಆಲೋಚನೆಯ ಪ್ರಕಾರ ಜೀವಿಗಳ ವರ್ಗಿಕರಣದ ಮೂಲಭೂತ ಗುಣಲಕ್ಷಣ ಯಾವುದು ?
(ಎ) ಜೀವಿಗಳ ಆವಾಸ (ವಾಸಸ್ಥಳ)
(ಬಿ) ಯಾವ ವಿಧವಾದ ಕೋಶಗಳಿಂದ ಜೀವಿಗಳು ಮಾಡಲ್ಪಟ್ಟಿವೆ.
ಏಕೆ ?
ಉತ್ತರ: (ಎ) ಜೀವಿಗಳ ಆವಾಸ :
ಇದು ಜೀವಿಗಳನ್ನು ವರ್ಗೀಕರಿಸಿರುವ ಸರಳ ವಿಧಾನ, ಆದರೆ ಇದು ನಮ್ಮನ್ನು ತಪ್ಪು ದಾರಿಗೆ ಎಳೆಯುತ್ತದೆ. ಉದಾಹರಣೆಗೆ, ಸಮುದ್ರದಲ್ಲಿ ವಾಸಿಸುವ ಪ್ರಾಣಿಗಳು ಹವಳಗಳು, ತಿಮಿಂಗಿಲಗಳು ಅಕ್ಟೋಪಸ್‌ಗಳು, ನಕ್ಷತ್ರ ಮೀನು, ಶಾರ್ಕ್ ಇತ್ಯಾದಿಗಳನ್ನು ಒಳಗೊಂಡಿದೆ. ಹಲವು ಗುಣಗಳಲ್ಲಿ ಈ ಜೀವಿಗಳು ಒಂದಕ್ಕೊಂದು ವಿಭಿನ್ನವಾಗಿವೆ ಎಂದು ನಾವು ತಕ್ಷಣವೇ ಗುರುತಿಸಬಹುದು. ವಾಸ್ತವವಾಗಿ ನೋಡುವುದಾದರೆ ಕೇವಲ ಈ ಎಲ್ಲಾ ಜೀವಿಗಳ ಆವಾಸ ಸ್ಥಾನ ಒಂದೇ ಎಂಬ ಹೋಲಿಕೆ ಮಾತ್ರ ಕಂಡುಬರುತ್ತದೆ. ಜೀವಿಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಅವುಗಳನ್ನು ವರ್ಗೀಕರಿಸಲು ಇದು ಸೂಕ್ತವಾದ ವಿಧಾನವಲ್ಲ.
(ಬಿ) ಈ ಲಕ್ಷಣವು ವರ್ಗಿಕರಣದಲ್ಲಿ ಮೂಲಭೂತ ಗುಣಲಕ್ಷಣವಾಗಿದೆ.
ಎಲ್ಲಾ ಜೀವಿಗಳನ್ನು ವರ್ಗೀಕರಿಸಲು ಜೀವಕೋಶದ ರಚನೆಯಿಂದ ಪ್ರಾರಂಭಿಸಿ ಹಲವಾರು ಅಂತರ ಸಂಬಂಧಿ ಗುಣಲಕ್ಷಣಗಳನ್ನು ಗಮನಿಸುತ್ತೇವೆ. ಏಕೆಂದರೆ
ಈ ಗುಣಲಕ್ಷಣವು ಜೀವಿಯ ಬೇರೆ ಗುಣಲಕ್ಷಣಗಳ ಸ್ವರೂಪ ಮತ್ತು ಕಾರ್ಯಗಳನ್ನು ಅವಲಂಬಿಸಿರುವುದಿಲ್ಲ. ಮುಂದಿನ ಹಂತದಲ್ಲಿ ಬರುವ ಗುಣಲಕ್ಷಣಗಳು ಹಿಂದಿನ ಗುಣಲಕ್ಷಣಗಳನ್ನು ಅವಲಂಬಿಸಬಹುದು.
ಹಲವು ಜೀವಿಗಳಲ್ಲಿ ಕೋಶ ಕೇಂದ್ರದ ಸುತ್ತ ಪೊರೆ ಇದೆ. ಇನ್ನು ಕೆಲವು ಜೀವಿಗಳಲ್ಲಿ ಕೋಶ ಕೇಂದ್ರದ ಸುತ್ತ ಪೊರೆ ಇಲ್ಲ. ಈ ಲಕ್ಷಣಗಳು ಜೀವಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
2. ಯಾವ ಪ್ರಾಥಮಿಕ ಗುಣಲಕ್ಷಣದ ಆಧಾರದ ಮೇಲೆ
ಮೊದಲ ಹಂತದ ವರ್ಗಿಕರಣವನ್ನು ಮಾಡಲಾಗಿದೆ ?
ಉತ್ತರ: ಎಲ್ಲಾ ಜೀವಿಗಳನ್ನು ವರ್ಗೀಕರಿಸಲು ಜೀವಕೋಶದ ರಚನೆಯಿಂದ ಪ್ರಾರಂಭಿಸಿ ಹಲವಾರು ಅಂತರ ಸಂಬಂಧಿ ಗುಣಲಕ್ಷಣಗಳನ್ನು ಗಮನಿಸುತ್ತೇವೆ.
3. ಯಾವ ಆಧಾರದ ಮೇಲೆ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೇರೆ ಬೇರೆ ಗುಂಪಿನಲ್ಲಿ ಇರಿಸಿದ್ದಾರೆ ?
ಉತ್ತರ: .
ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಮತ್ತು ಪ್ರಾಣಿಗಳು ಬೇರೆ ಜೀವಿಗಳಿಂದ ತಮ್ಮ ಆಹಾರವನ್ನು ಪಡೆಯಲು ವಿಭಿನ್ನ ರಚನೆಯನ್ನು ಹೊಂದಿವೆ. ಆದ್ದರಿಂದ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೇರೆ ಬೇರೆ ಗುಂಪಿನಲ್ಲಿ ಇರಿಸಿದ್ದಾರೆ.
ಪುಟ ಸಂಖ್ಯೆ 114
1. ಯಾವ ಜೀವಿಗಳನ್ನು ಪ್ರಾಚೀನ ಜೀವಿಗಳು ಎಂದು ಕರೆಯುತ್ತಾರೆ ? ಅವು ನವೀನ ಜೀವಿಗಳಿಗಿಂತ ಹೇಗೆ ಭಿನ್ನವಾಗಿವೆ ?
ಉತ್ತರ: ಸರಳ ಜೀವಿಗಳನ್ನು ಪ್ರಾಚೀನ ಜೀವಿಗಳು ಎಂದು ಕರೆಯುತ್ತಾರೆ. ನವೀನ ಜೀವಿಗಳು ಸಂಕೀರ್ಣ ರಚನೆಯನ್ನು ಹೊಂದಿದ್ದರೆ ಪ್ರಾಚೀನ ಜೀವಿಗಳು ಸರಳವಾಗಿರುತ್ತವೆ.
2. ಮುಂದುವರೆದ (advanced) ಜೀವಿಗಳು ಮತ್ತು ಸಂಕೀರ್ಣ ಜೀವಿಗಳು ಒಂದೇ ರೀತಿಯಲ್ಲಿವೆಯೇ? ಏಕೆ?
ಉತ್ತರ: ಮುಂದುವರೆದ ಜೀವಿಗಳು ಹಾಗೂ ಸಂಕೀರ್ಣ ಜೀವಿಗಳು ಒಂದೇ ರೀತಿಯಲ್ಲಿವೆ. ಏಕೆಂದರೆ ಇವು ಎರಡೂ ಸರಳ ರಚನೆಯನ್ನು ಹೊಂದಿರುವುದಿಲ್ಲ.
ಪುಟ ಸಂಖ್ಯೆ 118
1. ಜೀವಿಗಳನ್ನು ಮೊನೆರಾ ಮತ್ತು ಪ್ರೋಟಿಸ್ಟಾ ಸಾಮ್ರಾಜ್ಯಗಳಲ್ಲಿ ವರ್ಗಿಕರಿಸಲು ಹೊಂದಿರಬೇಕಾದ ನಿಯಮಗಳೇನು ?
ಉತ್ತರ: ಮೊನೆರಾ ಗುಂಪಿಗೆ ಸೇರಲು ಜೀವಿಗಳು ನಿರ್ದಿಷ್ಟ ಕೋಶಕೇಂದ್ರ ಅಥವಾ ಕಣದಂಗಗಳನ್ನಾಗಲೀ ಅಥವಾ ಯಾವುದೇ ಜೀವಿಯು, ಬಹುಕೋಶಿಯ ದೇಹರಚನೆಯನ್ನಾಗಲೀ ಹೊಂದಿರಬಾರದು.
ಪ್ರೋಟೆಸ್ಟ ಸಾಮ್ರಾಜ್ಯದಲ್ಲಿ ಹಲವು ಬಗೆಯ ಏಕಕೋಶಿಯ ಯುಕ್ಯಾರಿಯೋಟಿಕ್ ಜೀವಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕೆಲವು ಜೀವಿಗಳು ಚಲಿಸಲು ಕೂದಲಿನಂತಹ ಸೀಲಿಯಾ, ಅಥವಾ ಚಾಟಿಯಂತಹ ಕಶಾಂಗಗಳನ್ನು ಹೊಂದಿವೆ.
2. ಒಂದು ಏಕಕೋಶೀಯ, ಪ್ರೋಕ್ಯಾರಿಯೋಟಿಕ್ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವ ಜೀವಿಯನ್ನು ಯಾವ ಸಾಮ್ರಾಜ್ಯದಲ್ಲಿ ವರ್ಗಿಕರಿಸುವಿರಿ?
ಉತ್ತರ: ಮೊನೆರಾ.
3. ವರ್ಗಿಕರಣದ ಮಜಲುಗಳಲ್ಲಿ ಯಾವ ವರ್ಗವು ಕಡಿಮೆ ಸಂಖ್ಯೆಯ ಜೀವಿಗಳು ಹಾಗೂ ಹೆಚ್ಚು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಯಾವ ವರ್ಗವು ಅತಿಹೆಚ್ಚು ಜೀವಿಗಳನ್ನು ಒಳಗೊಂಡಿದೆ ?
ಉತ್ತರ: ವರ್ಗಿಕರಣದ ಮಜಲುಗಳಲ್ಲಿ ಪ್ರಭೇದ ವರ್ಗವು ಕಡಿಮೆ ಸಂಖ್ಯೆಯ ಹಾಗೂ ಹೆಚ್ಚು ಸಾಮಾನ್ಯ ಗುಣಲಕ್ಷಣಗಳನ್ನು ಒಳಗೊಂಡಿದೆ ಮತ್ತು ಸಾಮ್ರಾಜ್ಯವು ಅತಿ ಹೆಚ್ಚು ಜೀವಿಗಳನ್ನು ಒಳಗೊಂಡಿದೆ.
ಪುಟ ಸಂಖ್ಯೆ 123
1. ಸಸ್ಯಗಳಲ್ಲಿ ಅತ್ಯಂತ ಸರಳ ಜೀವಿಗಳನ್ನು ಒಳಗೊಂಡಿರುವ ವರ್ಗ ಯಾವುದು ?
ಉತ್ತರ: ಥ್ಯಾಲೋಫೈಟಾ ಅತ್ಯಂತ ಸರಳ ಜೀವಿಗಳನ್ನು ಒಳಗೊಂಡಿರುವ ವರ್ಗವಾಗಿದೆ.
2. ಪುಚ್ಛ ಸಸ್ಯಗಳು ಹೂಬಿಡುವ ಸಸ್ಯಗಳಿಗಿಂತ ಹೇಗೆ ಭಿನ್ನವಾಗಿವೆ ?
ಉತ್ತರ: ಪುಚ್ಛ ಸಸ್ಯಗಳು ನಗ್ನಭ್ರೂಣವನ್ನು ಹೊಂದಿದ್ದು ಅವುಗಳನ್ನು ಬೀಜಕಗಳು ಎನ್ನುತ್ತಾರೆ. ಪುಚ್ಛ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಅಂಗಗಳು ಅಸ್ಪಷ್ಟವಾಗಿರುತ್ತವೆ. ಆದ್ದರಿಂದ ಇವುಗಳನ್ನು ಕ್ರಿಪ್ಟೋಗ್ಯಾಮಿ ಅಥವಾ ಗುಪ್ತ ಸಂತಾನೋತ್ಪತ್ತಿಯ ಅಂಗಗಳು ಎನ್ನುವರು.
ಆದರೆ ಹೂ ಬಿಡುವ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಅಂಗಗಳು ಸ್ಪಷ್ಟವಾಗಿರುತ್ತವೆ. ಈ ಸಸ್ಯಗಳನ್ನು ಫೆನರೋಗ್ಯಾಮ್ ಗಳು ಎನ್ನುವರು.
ಹೀಗೆ ಪುಚ್ಛ ಸಸ್ಯಗಳು ಹೂ ಬಿಡುವ ಸಸ್ಯಗಳಿಗಿಂತ ಭಿನ್ನವಾಗಿವೆ.
3. ಅನಾವೃತ ಬೀಜ ಸಸ್ಯಗಳು ಮತ್ತು ಆವೃತ ಬೀಜಸಸ್ಯಗಳು ಪರಸ್ಪರ ಹೇಗೆ ಭಿನ್ನವಾಗಿವೆ?
ಉತ್ತರ: ಅನಾವೃತ ಬೀಜ ಸಸ್ಯಗಳಲ್ಲಿ ಬೀಜಗಳು ನಗ್ನವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಬಹುವಾರ್ಷಿಕ, ನಿತ್ಯಹರಿದ್ವರ್ಣ. ಗಟ್ಟಿಯಾದ ಕಾಂಡವನ್ನು ಹೊಂದಿರುತ್ತವೆ.
ಆದರೆ ಆವೃತ ಬೀಜಸಸ್ಯಗಳಲ್ಲಿ ಬೀಜಗಳು ಹಣ್ಣಿನಂತಹ ಮಾರ್ಪಾಡಾದ ರಚನೆಯ ಒಳಗೆ ಬೀಜಗಳು ಬೆಳೆಯುತ್ತವೆ.
ಪುಟ ಸಂಖ್ಯೆ 131
1. ಪೋರಿಫೆರಾ ಜೀವಿಗಳು ಸಿಲೆಂಟರೇಟಾಗಳಿಗಿಂತ ಹೇಗೆ ಭಿನ್ನವಾಗಿವೆ ?
ಉತ್ತರ:
ಪೋರಿಫೆರಾ ಜೀವಿಗಳು ಹೆಚ್ಚಾಗಿ ಸಮುದ್ರವಾಸಿಗಳು,
ಚಲಿಸಲಾರದ ಜೀವಿಗಳು,ರಂಧ್ರಯುಕ್ತ ಜೀವಿಗಳು ಮತ್ತು
ಬಂಡೆಗಳಿಗೆ ಹತ್ತಿಕೊಂಡಿರುತ್ತವೆ.
ಇವು ಜೀವಕೋಶೀಯ ಸಂಘಟನೆಯನ್ನು ತೋರಿಸುತ್ತವೆ.
ಇವಕ್ಕೆ ಉದಾಹರಣೆಗಳು ಸ್ಪಾಂಗಿಲ್ಲಾ, ಯುಪ್ಲೆಕ್ಟೆಲ್ಲಾ, ಇತ್ಯಾದಿ.
ಸಿಲಿಂಟರೇಟ ಜೀವಿಗಳು ಸಮುದ್ರ ಪ್ರಾಣಿಗಳು.
ಅವು ವಸಾಹತುಗಳಲ್ಲಿ ವಾಸಿಸುತ್ತವೆ ಅಥವಾ
ಏಕಾಂತ ಜೀವನ ನಡೆಸುತ್ತವೆ.ವಿಭೇದತೆಯನ್ನು ಹೊಂದಿವೆ.
ಅವು ಅಂಗಾಂಶದ ಸಂಘಟನೆಯ ಮಟ್ಟವನ್ನು ತೋರಿಸುತ್ತವೆ. ಉದಾಹರಣೆ ಲೋಳೆ ಮೀನು, ಹೈಡ್ರಾ, ಕಡಲ ಹೂಗಳು ಇತ್ಯಾದಿ.
2. ವಲಯವಂತ ಪ್ರಾಣಿಗಳು ಸಂಧಿಪದಿಗಳಿಗಿಂತ ಹೇಗೆ ಭಿನ್ನವಾಗಿವೆ ?
ಉತ್ತರ: ವಲಯವಂತ ಪ್ರಾಣಿಗಳು ನೈಜವಾದ ದೇಹಾಂತರವಕಾಶ ಹೊಂದಿವೆ. ಇವುಗಳಲ್ಲಿ ಅಂಗಗಳು ವ್ಯಾಪಕ ಭಿನ್ನತೆಯಿಂದ ಕೂಡಿವೆ. ಈ ಭಿನ್ನತೆಯು ವಿಭಾಗಗಳಾಗಿ ಕಂಡುಬಂದಿದ್ದು, ಶಿರೋಭಾಗದಿಂದ ಬಾಲದವರೆಗೆ ಒಂದರ ಮೇಲೊಂದರಂತೆ ಖಂಡಗಳಾಗಿ ವಿಭಜಿತಗೊಂಡಿದೆ. ರಕ್ತಪರಿಚಲನಾ ವ್ಯವಸ್ಥೆ
ಮುಚ್ಚಿದೆ.
ಆದರೆ ಸಂಧಿಪದಿಗಳ ದೇಹವು ದ್ವಿಪಾರ್ಶ್ವ ಸಮ್ಮಿತಿ ಮತ್ತು ವಲಯಗಳಿ೦ದಾದ ದೇಹವನ್ನು ಹೊಂದಿವೆ. ಇವುಗಳಲ್ಲಿ ಕೀಲುಕಾಲುಗಳು ಕಂಡುಬರುತ್ತವೆ. ರಕ್ತಪರಿಚಲನಾ ವ್ಯವಸ್ಥೆ ತೆರೆದಿರುತ್ತದೆ.
ಹೀಗೆ ವಲಯವಂತಗಳು ಸಂಧಿಪದಿಗಳಿಗಿಂತ ಭಿನ್ನವಾಗಿವೆ.
3. ಉಭಯವಾಸಿಗಳು ಮತ್ತು ಸರೀಸೃಪಗಳಿಗಿರುವ ವ್ಯತ್ಯಾಸಗಳೇನು ?
ಉತ್ತರ: ಉಭಯವಾಸಿಗಳು ನೀರು ಮತ್ತು ನೆಲದ ಮೇಲೆ ಕಂಡುಬರುತ್ತವೆ. ಇವು ಚರ್ಮಗಳಲ್ಲಿ ಶ್ಲೇಷ್ಮ ಗ್ರಂಥಿಗಳನ್ನು ಹೊಂದಿವೆ. ಇವು ನೀರಿನಲ್ಲಿ ಮೊಟ್ಟೆ ಇಡುತ್ತವೆ.ಇದು ಕಪ್ಪೆಗಳು, ನೆಲಗಪ್ಪೆಗಳು ಮತ್ತು ಒಳಗೊಂಡಿದೆ
ಸಲಾಮಾಂಡರ್ಸ್.
ಸರೀಸೃಪಗಳು ಹೆಚ್ಚಾಗಿ ಭೂ ಜೀವಿಗಳು.ಸರೀಸೃಪಗಳು ಹುರುಪೆಗಳಿಂದ ಕೂಡಿದ ಚರ್ಮ ಮತ್ತು ಶ್ವಾಸಕೋಶಗಳಿಂದ ಉಸಿರಾಟ ಕ್ರಿಯೆ ಮಾಡುತ್ತವೆ. ಇವು ಭೂಮಿಯ ಮೇಲೆ ಮೊಟ್ಟೆ ಇಡುತ್ತವೆ.ಉದಾ: ಹಲ್ಲಿಗಳು, ಹಾವುಗಳು, ಆಮೆಗಳು,ಗೋಸುಂಬೆಗಳು, ಇತ್ಯಾದಿ.
ಹೀಗೆ ಉಭಯವಾಸಿಗಳು ಮತ್ತು ಸರೀಸೃಪಗಳಿಗೆ ವ್ಯತ್ಯಾಸವಿದೆ.
4. ಪಕ್ಷಿಗಳು ಮತ್ತು ಸ್ತನಿಗಳ ಗುಂಪಿಗೆ ಸೇರಿಸುವ ಪ್ರಾಣಿಗಳ ನಡುವಿನ ವ್ಯತ್ಯಾಸಗಳೇನು ?
ಉತ್ತರ:
ಪಕ್ಷಿಗಳು ಮೊಟ್ಟೆಗಳನ್ನಿಡುವ ಪ್ರಾಣಿಗಳು. ಇವುಗಳ ದೇಹವು ಗರಿಗಳಿಂದ ಆವೃತವಾಗಿದೆ ಮತ್ತು ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಾಟಾಗಿದ್ದು ಹಾರಲು ಸಹಾಯಕವಾಗಿವೆ.
ಆದರೆ ಸ್ತನಿಗಳು, ತಮ್ಮ ಮರಿಗಳಿಗೆ ಹಾಲುಣಿಸಿ ಪೋಷಣೆ ನೀಡಲು ಸ್ತನ್ಯಗ್ರಂಥಿಗಳನ್ನು ಹೊಂದಿವೆ. ಇವುಗಳ ಚರ್ಮ ರೋಮಗಳಿಂದ ಕೂಡಿದ್ದು, ಬೆವರು ಗ್ರಂಥಿ ಮತ್ತು ತೈಲಗ್ರಂಥಿಗಳನ್ನು ಹೊಂದಿವೆ. ಎಲ್ಲಾ ಸ್ತನಿಗಳು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಅವುಗಳಲ್ಲಿ ಕೆಲವು ಅಂದರೆ ಪ್ಲಾಟಿಪಸ್ ಮತ್ತು ಎಕಿಡ್ನಾಗಳು ಮೊಟ್ಟೆ ಇಡುವ ಸ್ತನಿಗಳು.
ಈ ರೀತಿಯಾಗಿ ಪಕ್ಷಿಗಳಲ್ಲಿ ಮತ್ತು ಸ್ತನಿಗಳಲ್ಲಿ ವ್ಯತ್ಯಾಸಗಳಿವೆ.
ಅಭ್ಯಾಸ
1. ಜೀವಿಗಳ ವರ್ಗಿಕರಣದಿಂದಾಗುವ ಅನುಕೂಲಗಳೇನು?
ಉತ್ತರ
ಜೀವಿಗಳನ್ನು ವರ್ಗೀಕರಿಸುವ ಅನುಕೂಲಗಳು ಹೀಗಿವೆ:
→ ಇದು ಸಸ್ಯಗಳು ಮತ್ತು ಪ್ರಾಣಿಗಳ ವೈವಿಧ್ಯತೆಯ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ಮತ್ತು ಮಾಹಿತಿಯನ್ನು ನೀಡುತ್ತದೆ.
→ ಇದು ವಿವಿಧ ರೀತಿಯ ಜೀವಿಗಳ ಅಧ್ಯಯನವನ್ನು ಹೆಚ್ಚು ಸುಲಭಗೊಳಿಸುತ್ತದೆ.
→ ಇದು ವಿವಿಧ ಜೀವಿಗಳ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಹೇಳುತ್ತದೆ.
→ ಇದು ಜೀವಿಗಳ ವಿಕಾಸವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
→ ಇದು ಇತರ ಜೀವ ವಿಜ್ಞಾನಗಳ ಅಭಿವೃದ್ಧಿಗೆ ಸುಲಭವಾಗಿ ಸಹಾಯ ಮಾಡುತ್ತದೆ.
→ ಇದು ಪರಿಸರವಾದಿಗಳಿಗೆ ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆಯ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
2. ಎರಡು ಗುಣಗಳ ಬೆಳವಣಿಗೆ ವ್ಯತ್ಯಾಸಗಳನ್ನು ಆಧರಿಸಿ ಜೀವಿಗಳ ಕ್ರಮಾನುಗತ ವರ್ಗಿಕರಣವನ್ನು ಮಾಡುವಾಗ ಎರಡು ಗುಣಗಳ ನಡುವೆ ಹೇಗೆ ಆಯ್ಕೆ ಮಾಡಿ ಕೊಳ್ಳುತ್ತಾರೆ ?
ಉತ್ತರ: ಜೀವಿಗಳನ್ನು ಅವುಗಳ ಗುಣಲಕ್ಷಣಗಳ ಹಂತಗಳಲ್ಲಿ ಗುಂಪುಗಳಾಗಿ, ಉಪಗುಂಪುಗಳಾಗಿ ವರ್ಗಿಕರಿಸುತ್ತಾರೆ.
3. ಜೀವಿಗಳನ್ನು ಐದು ಸಾಮ್ರಾಜ್ಯಗಳಾಗಿ ವರ್ಗಿಕರಿಸಿರುವ ಅಂಶಗಳನ್ನು ವಿವರಿಸಿ.
ಉತ್ತರ: ಜೀವಿಗಳನ್ನು ಐದು ಸಾಮ್ರಾಜ್ಯಗಳಾಗಿ ವರ್ಗಿಕರಿಸಿರುವ ಅಂಶಗಳು ಈ ಕೆಳಗಿನಂತಿವೆ :
a) ಅವುಗಳು ಪ್ರೋಕ್ಯಾರಿಯೋಟಿಕ್ ಜೀವಕೋಶಗಳಿಂದ ಮಾಡಲ್ಪಟ್ಟಿವೆಯೇ ಅಥವಾ ಯೂಕ್ಯಾರಿಯೋಟಿಕ್ ಜೀವಕೋಶಗಳಿಂದ ಮಾಡಲ್ಪಟ್ಟಿವೆಯೇ?
b) ಅವುಗಳು ಏಕಕೋಶೀಯ ಜೀವಿಗಳೇ ಅಥವಾ ಬಹುಕೋಶೀಯ ಜೀವಿಗಳೇ ಮತ್ತು ಅವುಗಳು ಸಂಕೀರ್ಣ ಜೀವಿಗಳೇ?
c) ಅವುಗಳ ಜೀವಕೋಶಗಳು, ಕೋಶಭಿತ್ತಿಯನ್ನು ಹೊಂದಿವೆಯೇ ಮತ್ತು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆಯೇ?
ಈ ಲಕ್ಷಣಗಳ ಆಧಾರದ ಮೇಲೆ ಎಲ್ಲಾ ಜೀವಿಗಳನ್ನು ಐದು ಸಾಮ್ರಾಜ್ಯಗಳಾಗಿ ವಿಭಾಗಿಸಲಾಗಿದೆ.
4. ಸಸ್ಯಗಳ ಪ್ರಮುಖ ವಿಭಾಗಗಳಾವುವು ? ಇವುಗಳನ್ನು ಯಾವ ಆಧಾರದ ಮೇಲೆ ವಿಭಾಗಿಸಲಾಗಿದೆ?
ಉತ್ತರ: ಸಸ್ಯಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಥ್ಯಾಲೋಫೈಟಾಗಳು, ಹಾವಸೆ ಸಸ್ಯಗಳು, ಪುಚ್ಛ ಸಸ್ಯಗಳು, ಅನಾವೃತ ಬೀಜಸಸ್ಯಗಳು ಮತ್ತು ಆವೃತ ಬೀಜಸಸ್ಯಗಳು.
ಇವುಗಳನ್ನು ಬೀಜೋತ್ಪಾದನಾ ಸಾಮರ್ಥ್ಯ ಮತ್ತು ಬೀಜಗಳು ಹಣ್ಣಿನ ಕವಚದಿಂದ ಆವೃತವಾಗಿರುವ ಲಕ್ಷಣಗಳನ್ನು ಆಧರಿಸಿ ವರ್ಗಿಕರಿಸಲಾಗಿದೆ.
5. ಸಸ್ಯಗಳನ್ನು ವಿಭಾಗಿಸಲು ತೆಗೆದುಕೊಂಡ ಮಾನದಂಡಗಳು ಪ್ರಾಣಿಗಳನ್ನು ಉಪವಿಭಾಗಗಳಾಗಿ ತೆಗೆದುಕೊಂಡ ಮಾನದಂಡಗಳಿಗಿಂತ ಹೇಗೆ ಭಿನ್ನವಾಗಿವೆ?
ಉತ್ತರ: ಸಸ್ಯಗಳನ್ನು ವರ್ಗಿಕರಣ ಮಾಡಲು ಬಳಸುವ ದೇಹರಚನೆಯ ಗುಣಲಕ್ಷಣಗಳು ಪ್ರಾಣಿಗಳನ್ನು ವರ್ಗಿಕರಿಸಲು ಬಳಸುವ ದೇಹರಚನೆಯ ಗುಣಲಕ್ಷಣಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತವೆ. ಏಕೆಂದರೆ ಇವುಗಳ ದೇಹದ ಮೂಲ ರಚನೆಯೇ ವಿಭಿನ್ನವಾಗಿರುತ್ತದೆ.
ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಮತ್ತು ಪ್ರಾಣಿಗಳು ಬೇರೆ ಜೀವಿಗಳಿಂದ ತಮ್ಮಆಹಾರವನ್ನು ಪಡೆಯಲು ವಿಭಿನ್ನ ರಚನೆಯನ್ನು ಹೊಂದಿವೆ.
ಆದ್ದರಿಂದ ಈ ರೀತಿಯ ರಚನಾ ವೈಶಿಷ್ಟ್ಯಗಳನ್ನು (ಉದಾಹರಣೆಗೆ ಅಸ್ತಿಪಂಜರವನ್ನು ಹೊಂದಿರುವುದು) ಜೀವಿಗಳನ್ನು ವಿಶಾಲ ವರ್ಗಗಳಲ್ಲಿ ವಿಭಜನೆ ಮಾಡುವುದರ ಬದಲು ಉಪವರ್ಗಗಳಾಗಿ ವಿಭಜಿಸಲು ಬಳಸಬಹುದು.
6. ಪ್ರಾಣಿಗಳಲ್ಲಿನ ಕಶೇರುಕಗಳ ಗುಂಪನ್ನು ಉಪವಿಭಾಗ ಗಳಾಗಿ ಹೇಗೆ ವರ್ಗಿಕರಿಸಲಾಗಿದೆ ?
ಉತ್ತರ: ಕಶೇರುಕಗಳ ಗುಂಪಿನ ಉಪವಿಭಾಗಗಳು :
1.ಹುರುಪೆಗಳಿ೦ದಾದ ಹೊರಕಂಕಾಲ ಮೂಳೆ ಗಳಿಂದಾದ, ಮೃದ್ವಸ್ಥಿಯಿಂದಾದ ಅಂತರ್‌ಕಂಕಾಲ, ಕಿವಿರುಗಳಿಂದ ಉಸಿರಾಟ ಉದಾ: ಮೀನುಗಳು
2.ಲಾರ್ವಾದಲ್ಲಿ ಕಿವಿರುಗಳು, ಪ್ರೌಢ ಹಂತದಲ್ಲಿ ಶ್ವಾಸ ಕೋಶಗಳು, ಲೋಳೆಯುಕ್ತ ಚರ್ಮ,ಉದಾ: ಉಭಯವಾಸಿಗಳು.
3.ಹುರುಪೆಗಳಿಂದ ಹೊರಕಂಕಾಲ, ನೀರಿನ ಹೊರಗೆ ಮೊಟ್ಟೆಗಳನ್ನಿಡುವುದು. ಉದಾ: ಸರೀಸೃಪಗಳು
4.ಗರಿಗಳಿಂದಾದ ಹೊರಕಂಕಾಲ, ನೀರಿನ ಹೊರಗಡೆ ಮೊಟ್ಟೆಯಿಡುವುದು, ಹಾರಲು ಸಾಧ್ಯತೆಗಳು, ಉದಾ: ಪಕ್ಷಿಗಳು
5.ರೋಮಗಳಿಂದಾದ ಹೊರಕಂಕಾಲ. ಹೊರಕಿವಿಗಳು, ಸಾಮಾನ್ಯವಾಗಿ ಮರಿಗಳಿಗೆ ಜನ್ಮಕೊಡುತ್ತವೆ. ಉದಾ: ಸ್ತನಿಗಳು.