_KASS.INFO@KSGEA.TEAM.CSS_
ಪ್ರೀತಿಯ ನೌಕರ ಬಂಧುಗಳೇ…
➡️KASS ಸಂಬಂಧಿಸಿದಂತೆ HRMS ನಲ್ಲಿ ನೋಂದಣಿ ಮಾಡುವಾಗ ಯಾವುದೇ ಸಮಸ್ಯೆ ಬಂದರೂ ಮತ್ತು ಅದರಲ್ಲಿ ಏನೇ ಅನುಮಾನ ಇದ್ದರೂ ನಿಮ್ಮ ಡಿಡಿಓ ಅಥವಾ HRMS ಗೆ ಕರೆ ಸಮಸ್ಯೆ ಬಗೆಹರಿಸಿಕೊಳ್ಳಿ..ಸಂಪರ್ಕ ಮಾಡಬೇಕಾದ ನಂಬರ್ 08022372881. 08022372882.
( ಕಚೇರಿಯ ಸಮಯದಲ್ಲಿ ಕರೆ ಮಾಡಿ )
➡️ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ತಿಳಿಯಲು ಸಹಾಯವಾಣಿ ಗೆ ಕರೆ ಮಾಡಿ ..18004258330 ( 24/7 ಇದಕ್ಕೆ ಎಲ್ಲ ಸಮಯದಲ್ಲೂ ಕರೆ ಮಾಡಬಹುದು)
➡️ಆಸ್ಪತ್ರೆಗೆ ಸಂಬಂಧಪಟ್ಟಂತೆ. ರೋಗಿಯ ಚಿಕಿತ್ಸೆಗೆ ಹೋದಾಗ ಪ್ಯಾಕೇಜ್ ಬಗ್ಗೆ ಆಗಿರಬಹುದು. ಅಪ್ರೂವಲ್ ಬಗ್ಗೆ. ಚಿಕಿತ್ಸೆ ಗೆ ಸಂಬಂಧಿಸಿದ್ದು. ಮತ್ತು ಆಸ್ಪತ್ರೆಯಲ್ಲಿ ಪ್ಯಾಕೇಜ್ ಇಲ್ಲ ಎಂದು ಉತ್ತರಿಸಿದರೆ ಮುಂತಾದ ವಿಚಾರಗಳಿಗೆ ಈ ನಂಬರ್ ಗೆ ಸಂಪರ್ಕಿಸಿ 08022536210 ( ಕಚೇರಿಯ ಸಮಯದಲ್ಲಿ ಕರೆ ಮಾಡಿ )
➡️ಇನ್ನಿತರ ಬೇರೆ ಯಾವುದೇ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸಲು 9480819777 ನಂಬರ್ ಗೆ ವಾಟ್ಸಾಪ್ ಮುಖಾಂತರ ಸಂದೇಶಗಳನ್ನು ಕಳುಹಿಸಿ ಮತ್ತು ಈ ನಂಬರ್ ವಾಟ್ಸಾಪ್ ಅಷ್ಟೇ ಬಳಕೆಯಲ್ಲಿ ಇರುತ್ತದೆ. ದಯವಿಟ್ಟು ಕರೆ ಮಾಡಬೇಡಿ.
🩺💊💉🩸🩻🔬🧪🌡️🦠🩹💔
*_KSGEA NEWS BENGALURU_*
KASS Scheme hospital required documents
KASS SCHEME DOCUMENTS
* PATIENT ADHAR ORIGINAL
* EMPOLYEE ADHAAR ORIGINAL
* SALARY SLIP WITH DDO SIGN AND SEAL COMPULSARY
* HRMS COPY WITH DDO SIGN AND SEAL COMPULSARY
KASS DOCUMENTS
1- PAY SLIP
2- HRMS COPY
3- SERVICE LETTER
4-EMPLOYEE ID CARD
5-EMPLOYEE ADHAR CARD
6-PT ADHAR CARD WITH SIGNATURE
7- WITH PATIENT
KASS Scheme hospital required documents
ಈ ಕೆಳಕಂಡ ನೀಲಿ ಅಕ್ಷರಗಳನ್ನು ಮುಟ್ಟಿ. ಮತ್ತು ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಈ ಕೆಳಕಂಡ ನೀಲಿ ಅಕ್ಷರಗಳನ್ನು ಮುಟ್ಟಿ. ಮತ್ತು ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
KASS SCHEME ALL EMPTY FORMS PDF
ಯಾವ ಕರ್ನಾಟಕ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಹಣ ಕಟಾವಣೆ ಮಾಡಲು ಬಯಸುವುದಿಲ್ಲವೋ ಅವರು ಈ ಕೆಳಗಿನ ಫಾರಂ ಡೌನ್ಲೋಡ್ ಮಾಡಿಕೊಂಡು ತಮ್ಮ ಸಂಬಳ ಮಾಡುವ ಆಫೀಸಿಗೆ ಕೊಡುವುದು.
ಈ ಕೆಳಗಿನ ನೀಲಿ ಅಕ್ಷರಗಳು ಮುಟ್ಟಿ ಡೌನ್ಲೋಡ್ ಮಾಡಿಕೊಳ್ಳಿ.
ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ವಿಶೇಷ ಸೂಚನೆಗಳು :
1.ಅನುಬಂಭ 1 ನ್ನು ಕಛೇರಿಗೆ 2 ಪ್ರತಿಗಳಲ್ಲಿ ಸಲ್ಲಿಸುವುದು.
2 .ಅರ್ಜಿಯಲ್ಲಿನ ವಿವರಗಳನ್ನು ಕನ್ನಡ ಮತ್ತು ಆಂಗ್ಲ (CAPITAL LETTERS)ಭಾಷೆಯಲ್ಲಿ ತುಂಬುವುದು.
3. ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಲಗತ್ತಿಸುವುದು.
4. ಎಲ್ಲಾ ಅವಲಂಬಿತರ ಪ್ರತಿಯೊಬ್ಬರ ಭಾವಚಿತ್ರಗಳ ಹಿಂದೆ ಬಿಳಿಬಣ್ಣದ ಸೀನ್ನಲ್ಲಿರಬೇಕು ( Colour Photo With Wight BackGruond)
5.ನೌಕರರು ಅವಲಂಬಿತರ ಭಾವಚಿತ್ರದ ಮೇಲೆ ಸಹಿ ಮಾಡಿ ಮತ್ತು ದಿನಾಂಕವನ್ನು ನಮೂದಿಸಿ.
6. ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ನಲ್ಲಿಯೂ ತುಂಬಿ BEO ರವರ ಸಹಿಗಾಗಿ ಸಲ್ಲಿಸುವುದು.
7.ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳು ಒಂದುಸಾರಿ ಅಪ್ಲೋಡ್ ಆದಮೇಲೆ ಪುನಃ ಎಲ್ಲರ ಭಾವಚಿತ್ರಗಳನ್ನು 5ವರ್ಷಗಳ ನಂತರವೇ ಬದಲಾಯಿಸಲು ಅವಕಾಶವಿರುತ್ತದೆ.
8. ನೌಕರರಿಗೆ ಅನುಬಂಧ-1 ಸಲ್ಲಿಸಿದ ನಂತರದಲ್ಲಿ ಹೊಸಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಅವಕಾಶವಿದೆ.(ವಿವಾಹ, ಮಗುಜನನ, ಮರಣ ಇತ್ಯಾದಿ)ಇದಕ್ಕಾಗಿ FORM-A4 ಇರುತ್ತದೆ..
9.ಎಲ್ಲಾ ಅವಲಂಬಿತರ ಹೆಸರುಗಳನ್ನು ಆಧಾರ್ ಕಾರ್ಡ್ ನಲ್ಲಿರುವಂತೆಯೇ ತುಂಬಬೇಕು. ವ್ಯತ್ಯಾಸವಾದಲ್ಲಿ ಇಂದೀಕರಿಸಲು ಬರುವುದಿಲ್ಲ.
10. ನೌಕರ ಮತ್ತು ಎಲ್ಲಾ ಅವಲಂಬಿತರ ಭಾವಚಿತ್ರಗಳನ್ನು 5ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.
11. ಪುರುಷ ನೌಕರರಿಗೆ : ಹೆಂಡತಿ, ಮಕ್ಕಳು, ಮತ್ತು ತಂದೆತಾಯಿಗಳು ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಿರುತ್ತಾರೆ.( ಹೆಂಡತಿಯ ತಂದೆ,ತಾಯಿಗಳು ಬರುವುದಿಲ್ಲ)
12. ಮಹಿಳಾ ನೌಕರರಿಗೆ : ಗಂಡ,ಮಕ್ಕಳು ಮತ್ತು ತಮ್ಮಗಳ ತಂದೆ,ತಾಯಿಗಳು ಹಾಗೂ ಮಲತಾಯಿ ಮಾತ್ರ (ಗಂಡನ ತಂದೆ, ತಾಯಿ ಅಂದರೆ ಅತ್ತೆ,ಮಾವ ಬರುವುದಿಲ್ಲ.)
13.ಸರ್ಕಾರಿ ವಿವಾಹಿತ ನೌಕರರು ಎರಡು ಮದುವೆಯಾಗಿದ್ದರೆ ಮೊದಲನೇ ಹೆಂಡತಿ ಮತ್ತು ಮಕ್ಕಳು ಮಾತ್ರ ಈ ಯೋಜನೆ ಅನ್ವಯ ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಈ ಯೋಜನೆಗೆ ಅವಕಾಸವಿರುವುದಿಲ್ಲ.
ವಿಶೇಷ ಸೂಚನೆ : ಸರ್ಕಾರಿ ನೌಕರರು ಚಿಕಿತ್ಸೆ ಪಡೆಯಲು ಯೋಜನೆಗೆ ಒಳಪಟ್ಟ ಆಸ್ಪತ್ರೆಗೆ ಹೋದಾಗ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಮೂದಾಗಿರುವ ಎಲ್ಲಾ ಅವಲಂಬಿತರ ಹೆಸರು ಮತ್ತು ಭಾವಚಿತ್ರಗಳು ಗೋಚರಿಸುತ್ತವೆ. ಈ ಯೋಜನೆಗೆ ಒಳಪಡದಿದ್ದರೆ ಬರೀ ನೌಕರರ ಹೆಸರು ಮಾತ್ರ ಆಸ್ಪತ್ರೆಯ ವೆಬ್ಸೈಟ್ನಲ್ಲಿ ಗೋಚರಿಸುವುದರಿಂದ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗುತ್ತದೆ.