Manava mattu samskruti 8th social science notes in Kannada, 8ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 10 ಮಾನವ ಮತ್ತು ಸಂಸ್ಕೃತಿ ನೋಟ್ಸ್ /ಪ್ರಶ್ನೋತ್ತರಗಳು

Students who visited this post will get 8th standard social science notes of chapter 10 Manava Mattu Sanskriti man and culture question and answer.

The answers get ready by expert technical Mohamed and you will score good marks in your examinations if you read this 8th standard class 8 social science notes manava mattu Sanskriti .

This chapter is in Karnataka state syllabus class 8 social book

ಎಂಟನೇ ತರಗತಿ ಅಧ್ಯಾಯ 10 ಮಾನವ ಮತ್ತು ಸಂಸ್ಕೃತಿ ನೋಟ್ಸ್ /ಪ್ರಶ್ನೋತ್ತರಗಳು

ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ,

| ಸಂಸ್ಕೃತಿ ಎಂದರೆ ಕೃಷಿ ಮಾಡು ಎಂದರ್ಥ.

2 ಲೋಕ ರೂಢಿಗಳೆಂದರೆ ನಾವು ದಿನನಿತ್ಯ ಜೀವನದಲ್ಲಿ ಮತ್ತೆ ಮತ್ತೆ ತೊಡಗಿಸಿಕೊಳ್ಳುವ ಚಟುವಟಿಕೆಗಳು.

3 ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಕಂಡುಬರುತ್ತದೆ.

|| ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

4 ಸಂಸ್ಕೃತಿ ಎಂದರೇನು?
ಉತ್ತರ:
ಮಾನವನು ಸಮಾಜದ ಸದಸ್ಯನಾಗಿದ್ದುಕೊಂಡು ಕಲಿತುಕೊಳ್ಳುವ ಜ್ಞಾನ, ಕಲೆ ,ನೈತಿಕ ನಿಯಮ ,ಕಾನೂನು ರೂಢಿ ,ಸಾಮರ್ಥ್ಯ ,ನೈಪುಣ್ಯಗಳನ್ನು ಒಳಗೊಂಡ ಒಂದು ಸಂಕೀರ್ಣ ವ್ಯವಸ್ಥೆಯೇ ಸಂಸ್ಕೃತಿಯಾಗಿದೆ.
ಅಥವಾ
ನಾವು ಏನಾಗಿದ್ದೇವೆಯೋ ಅದೇ ಸಂಸ್ಕೃತಿ.

5 ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಸಾಂಸ್ಕೃತಿಕ ವೈವಿಧ್ಯತೆಗೆ ಉದಾಹರಣೆ ಕೊಡಿ.
ಉತ್ತರ:-
ನಮ್ಮ ಸುತ್ತಮುತ್ತಲಿನ ಜನರು ಅನೇಕ ವಿಧದ ಉಡುಪುಗಳನ್ನು ಧರಿಸಿರುತ್ತಾರೆ.

6 ಆಚಾರ ವಿಚಾರಗಳು ಎಂದರೇನು?
ಉತ್ತರ:-
ಸಂಸ್ಕೃತಿಯ ಅಂಶಗಳಾದ ನಂಬಿಕೆಗಳು ಮೌಲ್ಯಗಳು ನಿಯಮಗಳು ಲೋಕ ರೂಢಿಗಳು ಮತ್ತು ನೈತಿಕ ಅಂಶಗಳನ್ನು ನಾವು ಆಚಾರ ವಿಚಾರಗಳು ಎನ್ನುತ್ತೇವೆ.

7 ಆಚಾರ ವಿಚಾರಗಳಿಗೆ ಉದಾಹರಣೆ ಕೊಡಿ,
ಉತ್ತರ:-
ಶುಚಿತ್ವ, ವಿಧೇಯತೆ ಇವು ಆಚಾರ-ವಿಚಾರಗಳಿಗೆ ಉದಾಹರಣೆಗಳು.

||| ಕೆಳಗಿನ ಪ್ರಶ್ನೆಗಳಿಗೆ ನಾಲೈದು ವಾಕ್ಯಗಳಲ್ಲಿ ಉತ್ತರಿಸಿ.

8 ಲೋಕರೂಢಿಗಳೆಂದರೇನು? ಉದಾಹರಣೆ ಕೊಡಿ.
ಉತ್ತರ:-
ಲೋಕರೂಢಿಗಳೆಂದರೆ ನಾವು ದಿನನಿತ್ಯದ ಜೀವನದಲ್ಲಿ ಮತ್ತೆ ಮತ್ತೆ ತೊಡಗುವ ಚಟುವಟಿಕೆಗಳು, ಉದಾಹರಣೆಗೆ-ಊಟ ಮಾಡುವುದು, ನಿದ್ರಿಸುವುದು, ಶುಭಾಶಯ ಹೇಳುವುದು ಇತ್ಯಾದಿ ಚಟುವಟಿಕೆಗಳನ್ನು ಹೆಚ್ಚು ಯೋಚಿಸದೆ ರೂಢಿಯ ಆಧಾರದ ಮೇಲೆ ಮಾಡುತ್ತೇವೆ. ನಾವು ಊಟ ಮಾಡುವಾಗ ಅಥವಾ ಶಾಲೆಯಲ್ಲಿ ಕುಳಿತುಕೊಳ್ಳುವಾಗ ಹೇಗೆ ಊಟ ಮಾಡಬೇಕು. ಹೇಗೆ ಕುಳಿತುಕೊಳ್ಳಬೇಕು ಎಂಬ ಪ್ರಶ್ನೆಯನ್ನು ದಿನವೂ ಕೇಳುವುದಿಲ್ಲ. ನಮಗೆ ರೂಢಿಯಿಂದಲೇ ಇವೆಲ್ಲಾ ಅಭ್ಯಾಸವಾಗಿರುತ್ತದೆ.

9 ಸಾಂಸ್ಕೃತಿಕ ವೈವಿಧ್ಯವನ್ನು ವಿವರಿಸಿ
ಉತ್ತರ:-
ನಮ್ಮ ಕಣ್ಣಿಗೆ ವಿವಿಧ ರೀತಿಯ ಉಡುಪುಗಳನ್ನುಟ್ಟ ಜನರು ಕಣ್ಣಿಗೆ ಬೀಳುತ್ತಾರೆ. ವಿವಿಧ ಜನಾಂಗದವರು ಕಾಣಿಸಿಕೊಳ್ಳುತ್ತಾರೆ. ವಿವಿಧ ಭಾಷೆಗಳಲ್ಲಿ ಜನರು ಸಂಭಾಷಿಸುವುದು ಕಂಡುಬರುತ್ತದೆ.ಯಾವುದೇ ಸಮಾಜದಲ್ಲಿ ಒಂದೇ ರೀತಿ ಎನ್ನುವ ಸಂಸ್ಕೃತಿ ಇರಲು ಸಾಧ್ಯವಿಲ್ಲ. ವಿವಿಧ ಧರ್ಮ, ಜೀವನ ವಿಧಾನ ಆಧರಿಸಿ ಬೇರೆ ಬೇರೆ ರೀತಿಯ ಸಂಸ್ಕೃತಿಗಳು ಕಂಡುಬರುತ್ತವೆ. ಇದನ್ನು ನಾವು ವೈವಿಧ್ಯಮಯ ಸಂಸ್ಕೃತಿ ಎಂದು ಕರೆಯುತ್ತೇವೆ.

10 ಸಂಸ್ಕೃತಿಯ ಗುಣಲಕ್ಷಣಗಳನ್ನು ತಿಳಿಸಿ,
ಉತ್ತರ:-
೧.ಸಂಸ್ಕೃತಿಯು ಆಯಾ ಸಮಾಜದ ಅವಲಂಬಿಸಿ ರೂಪುಗೊಂಡಿರುವ ಭೌಗೋಳಿಕ ರಚನೆ, ಪರಂಪರೆ, ಅಗತ್ಯಗಳು ಮುಂತಾದವುಗಳನ್ನು ಅವಲಂಬಿಸಿ ರೂಪುಗೊಂಡಿರುತ್ತದೆ.
೨.ಒಂದು ಸಮಾಜದ ಸಂಸ್ಕೃತಿಯು ಮತ್ತೊಂದು ಸಮಾಜದ ಸಂಸ್ಕೃತಿಗಿಂತ ಭಿನ್ನವಾಗಿರುತ್ತದೆ.
೩.ಸಂಸ್ಕೃತಿಯು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಯಾಗುತ್ತದೆ.
೪.ಸಂಸ್ಕೃತಿಯು ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುತ್ತದೆ.

Leave a Comment