ಸಿರಿಯನಿನ್ನೇನ ಬಣ್ಣಿಪೆನು? siriyaninnena bannipenu kannada notes pdf
ಪದ್ಯದ ಸರಳಾನುವಾದ (ಸಾರಾಂಶ) :
ಪದ್ಯ ಭಾಗ ೧೧ siriyaninnena bannipenu kannada notes pdf ,
pdf ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ.
ನಿಗದಿತ ಮೂಲ ನಡುಗನ್ನಡ (ಸಾಂಗತ್ಯ) ಪದ್ಯಪಾಠ.
ಗುರುವೇ ನಿನ್ನಲ್ಲಿ ನನ್ನದೊಂದು ಬಿನ್ನಹ, ಧ್ಯಾನವನ್ನು ಮಾಡಲು ಬೇಸರವಾದಾಗ ನಿನ್ನನ್ನೇ ಮೊದಲು ಮಾಡಿಕೊಂಡು ಕನ್ನಡದೊಳಗೆ ಒಂದು ಕಥೆಯನ್ನು ಹೇಳುತ್ತೇನೆ. ನನ್ನೊಡೆಯನೇ ನಿನ್ನ ಸೂಚನೆಯೆ? ||೧||
ಅಯ್ಯಯ್ಯ ಈ ಕಾವ್ಯವು ಎಷ್ಟೊಂದು ಚೆನ್ನಾಗಿದೆ ಎಂದು ಕನ್ನಡಿಗರು, ರಯ್ಯಾ ಮಂಚಿರಿ ಎನೆ ತೆಲುಗರು, ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು ಮೈ ಉಬ್ಬಿ ಕೇಳಬೇಕಣ್ಣ ।।೨।।
ಭೂತಳದ ಭರತಖಂಡದಲ್ಲಿ ಸಿಂಗಾರವಾದಂತಹ ಅಯೋಧ್ಯಾಪುರದಲ್ಲಿ ಮೂರು ಲೋಕಗಳು ಪೊಗಳುತ್ತಿರಲು ಭರತಚಕ್ರೇಶ್ವರನು ಸುಖದಿಂದ ರಾಜ್ಯವಾಳುತ್ತಿದ್ದನು. ಅವನ ಸಿರಿಯನ್ನು ಅದೇನು ಬಣ್ಣಿಸಲಿ? 1೩1
ಪುರುಪರಮೇಶನ ಹಿರಿಯ ಕುಮಾರನು, ಇವನು ನರಲೋಕದೊಳಗೆ ಒಬ್ಬನೇ ರಾಜನು. ಇವನು ಕೃಪೆತೋರಿದವರು ಆ ಕ್ಷಣದಲ್ಲಿಯೇ ಮುಕ್ತಿಯನ್ನು ಕಾಣುವರು. ಅಂಥ ಭರತಚಕ್ರಿಯ ಮಹಿಮೆಯನ್ನು ವರ್ಣಿಸಲು ಸಾಧ್ಯವೇ ॥೪॥
ಆ ಪಂಡಿತಮಾನ್ಯ ದೊರೆಯು ಒಂದು ದಿನ ಉದಯಕಾಲದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ, ಚಾವಡಿಗೆ ಬಂದು ಓಲಗದಲ್ಲಿ ಆಸೀನನಾದ ಶ್ರೀವಿಲಾಸವನ್ನು ಏನೆಂದು ಪೊಗಳಲಿ? ||೫||
ನವರತ್ನ ಹೇಮನಿರ್ಮಿತವಾದ ಆಸ್ಥಾನಭಾವನದೊಳಗೆ ಆ ರಾಜರತ್ನ ಛವಿಯು ಶೋಭಿಸಿದನು. ರತ್ನಪುಷ್ಪಕದಲ್ಲಿ ದೇವೇಂದ್ರನು ಒಪ್ಪುವಂತೆ ಅವನಿದ್ದನು. ||೬||
ತರಹತರಹದ ಬೀಸುತ್ತಿರುವ ಚಾಮರಗಳು ದೀರ್ಘ ದೀರ್ಘವಾದ ಚಾಮರಗಳು ಸಾಲುಸಾಲಾಗಿರಲು ಹರಿಯುತ್ತಿರುವ ಬಿಳಿ ಮೋಡದ ಮಧ್ಯೆ ಶೋಭಿಸುವ ಚಂದ್ರನೋ ಸೂರ್ಯನೋ ಎಂಬಂತೆ ಭರತೇಶನಿದ್ದನು. ॥೭॥
ಕಮಲಗಳೆಲ್ಲವೂ ಸೂರ್ಯನನ್ನು ನೋಡುತ್ತಿರುವಂತೆ, ಚ೦ದ್ರನನ್ನು ನೀಲೋತ್ಪಲಗಳು ನೋಡುವಂತೆ ತುಂಬಿದ ಸಭೆಯಲ್ಲವೂ ಹೆಚ್ಚಾಗಿ ನೃಪನನ್ನು ನೋಡುವ ಹಂಬಲದಲ್ಲಿದ್ದರು. ||೮||
ಸಿರಿಯನಿನ್ನೇನ ಬಣ್ಣಿಪೆನು? ಪ್ರಶ್ನೆ ಉತ್ತರಗಳು siriyaninnena bannipenu kannada notes pdf
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಉತ್ತರ: ರತ್ನಾಕರವರ್ಣಿಯು ‘ಭರತೇಶ ವೈಭವ’ ಕಾವ್ಯದ ಕಾವ್ಯಕರ್ತೃ.
2. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು?
ಉತ್ತರ: ಸ್ವರ್ಗ, ಮರ್ತ್ಯ, ಪಾತಾಳ- ಈ ಮೂರು ಲೋಕಗಳು ಭರತನನ್ನು ಹೊಗಳುತ್ತಿದ್ದವು.
3. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಉತ್ತರ: ತರಹತರಹದ ಚಲುವಿನ ಛತ್ರ ಚಾಮರಗಳ ಸಾಲಿನಲ್ಲಿ ಬಿಳಿಯ ಮೋಡಗಳ ಮರೆಯಲ್ಲಿನ ಸೂರ್ಯನೋ, ಚಂದಿರನೋ ಎಂಬಂತೆ ಭರತೇಶನು ಓಲಗಕ್ಕೆ ಬಂದನು.
4. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು?
ಉತ್ತರ: ಭರತೇಶ ಚಕ್ರವರ್ತಿಯು ರಾಜ ಭುವನದೊಳಗೆ ಕಮಲಗಳ ಗುಂಪಿನಲ್ಲಿಯ ಸೂರ್ಯನಂತೆ, ತಾರೆಗಳ ನಡುವಿನ ಚಂದ್ರನಂತೆ, ದೇವತೆಗಳಲ್ಲಿ ಇಂದ್ರನಂತೆ ಶೋಭಿಸುತ್ತಿದ್ದನು.
5. ತುಂಬಿದ ಸಭೆ ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು?
ಉತ್ತರ: ತುಂಬಿದ ಸಭೆಯು ಕಮಲಗಳೆಲ್ಲವೂ ಸೂರ್ಯ ನನ್ನು ಎದುರು ನೋಡುತ್ತಿದ್ದಂತೆ, ನೈದಿಲೆಗಳು ಚಂದ್ರನಿಗಾಗಿ ಬರವ ಹಾರೈಸುವಂತೆ ಸಭೆಯ ಜನರೆಲ್ಲರೂ ಕಾತರರಾಗಿ ದಾರಿ ಕಾಯುತ್ತಿದ್ದರು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಧ್ಯಾನ ಬೇಸರವಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಉತ್ತರ: ಧ್ಯಾನವು ಬೇಸರವಾದಾಗ ಭರತೇಶನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡು ಕನ್ನಡದಲ್ಲಿ ಒಂದುಕತೆಯನ್ನು ಅವನ ಆಜ್ಞೆಯ ಮೇರೆಗೆ ಹೇಳುವುದಾಗಿ ಕಪ್ಪು ಹೇಳುತ್ತಾನೆ.
2, ಬೇರೆ ಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು?
ಉತ್ತರ: ‘ಅಯ್ಯಯ್ಯ ಚೆನ್ನಾಗಿದೆ ಎಂದು ಕನ್ನಡಿಗರು, ರಯ್ಯಾ ಮಂಚಿದೆ ಎಂದು ತೆಲುಗರು, ಅಯ್ಯಯ್ಯ ಎಂಚ ಪೋರ್ಲಾಂಡ್(ಚಂದ ಆಯಿತು) ಎಂದು ತುಳುವರು ಮೈಯುಬ್ಬಿ ಕೇಳಿ ಹೊಗಳಬೇಕೆಂದು ಕವಿಯು ಬಯಸುವನು.
3. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭ ವನ್ನು ಬಣ್ಣಿಸಿ.
ಉತ್ತರ: ನವರತ್ನ, ಹೇಮ (ಬಂಗಾರ)ಗಳಿಂದ ನಿರ್ಮಿತ ವಾದಂತಹ ಆಸ್ಥಾನ ಭುವನದಲ್ಲಿ ಆ ರಾಜರತ್ನನು ಕಾಂತಿಯುಕ್ತ ನಾಗಿ ಕುಳಿತಿರಲು ಸ್ವರ್ಗದಲ್ಲಿನ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಏಳು/ಎಂಟು ವಾಕ್ಯಗಳಲ್ಲಿ ಉತ್ತರಿಸಿ:
1. ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ.
ಉತ್ತರ: ರತ್ನಾಕರವರ್ಣಿಯ ಭರತೇಶ ವೈಭವವು ಶೃಂಗಾರ ರಸದ ಮಡುವಾಗಿದೆ. ಜೊತೆಜೊತೆಗೆ ಭರತೇಶನ ವೈಯಕ್ತಿಕ ಜೀವನ ಹಾಗೂ ರಾಜದರ್ಬಾರಿನ ವೈಭವಗಳಂತೂ ಕನ್ನಡ ಸಾಹಿತ್ಯದಲ್ಲಿಯೇ ಅಪರೂಪವೆನಿಸಿವೆ. ಭೂತಳಕ್ಕೆ ಸಿಂಗಾರವಾದಂತಹ ಅಯೋಧ್ಯಾಪುರದಲ್ಲಿ ಮೂರು ಲೋಕವು ಹೊಗಳುವಂತೆ ಭರತಚಕ್ರೇಶ್ವರನು ಸುಖದಿಂದ ಬಾಳುತ್ತಿದ್ದನು. ಅವನ ಆ ಸಿರಿವಂತಿಕೆಯನ್ನು ಆದೇನೆಂದು ಪೊಗಳಲಿ? ಎಂದು ಕವಿ ಉದ್ದರಿಸುತ್ತಾನೆ. ಪುರುಪರಮೇಶನ ಹಿರಿಯ ಕುಮಾರನಾದ ಆತನು ನರಲೋಕಕ್ಕೆ ಒಬ್ಬನೇ ರಾಜನೆಂದು ಖ್ಯಾತಿವೆತ್ತಿದ್ದನು. ಆ ಮಹಾರಾಜನು ಒಂದು ದಿನ ಉದಯ ಕಾಲದಲ್ಲಿ ಎದ್ದು ದೇವತಾ ಆರ್ಚನೆಯನ್ನು ಮಾಡಿ ರಾಜ ಓಲಗದಲ್ಲಿ ರಾರಾಜಿಸಿದ ಶ್ರೀವಿಲಾಸವನ್ನು ಏನೆಂದು ಹೊಗಳಲಿ, ನವರತ್ನ ಬಂಗಾರಗಳಿಂದ ನಿರ್ಮಿತವಾದ ಆಸ್ಥಾನ ಭುವನದಲ್ಲಿ ಆ ರಾಜಋಷಿಯು ದೇವೇಂದ್ರನಂತೆ ಒಪ್ಪುತ್ತಿದ್ದನು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಕನ್ನಡದೊಳಗೊಂದು ಕಥೆಯ ಪೇಳುವೆನು.
”ಪದ್ಯ – ಸಿರಿಯನಿನ್ನೇನ ಬಣ್ಣಿಪೆನು?
ಕವಿ – ರತ್ನಾಕರವರ್ಣಿ
ಆಕರ – ಭರತೇಶ ವೈಭವ ಆಸ್ಥಾನ ಸಂಧಿ
ಸಂದರ್ಭಸ್ವಾರಸ್ಯ: ರತ್ನಾಕರವರ್ಣಿಯು ತನ್ನ ಗುರುವನ್ನು ಧ್ಯಾನ ಮಾಡುತ್ತ ಬಿನ್ನಹ ಗುರುವೇ ನನಗೆ ಧ್ಯಾನ ಮಾಡಲು ಬೇಸರವಾದಾಗ ನಿನ್ನನ್ನೇ ಮುಂದು ಮಾಡಿಕೊಂಡು ಕನ್ನಡದೊಳಗೆ ಒಂದು ಕತೆಯನ್ನು ಹೇಳುತ್ತೇನೆ. ನನಗೆ ನೀನು ಅಪ್ಪಣೆಯನ್ನು ಕೊಡು.
2. “ಶ್ರೀ ವಿಲಾಸವನೇನನೆಂದೆ?”
ಪದ್ಯ – ಸಿರಿಯನಿನ್ನೇನ ಬಣ್ಣಿಪೆನು?
ಕವಿ – ರತ್ನಾಕರವರ್ಣಿಆಕರ – ಭರತೇಶ ವೈಭವ ಆಸ್ಥಾನ ಸಂಧಿ
ಸಂದರ್ಭಸ್ವಾರಸ್ಯ: ಭರತೇಶ ಚಕ್ರವರ್ತಿ ಮಹಾರಾಜನು ಒಂದು ದಿನ ಉದಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ, ಆಡಳಿತವನ್ನು ನಡೆಸಲು ಅತ್ಯಂತ ರಾಜಠೀವಿಯಿಂದ ಚಾವಡಿಗೆ ಬಂದನು. ಆ ಶ್ರೀವಿಲಾಸವನ್ನು ಏನೆಂದು ವರ್ಣಿಸಲಿ? ಎಂದು ಕವಿ ರತ್ನಾಕರವರ್ಣಿಯು ಉದ್ಧಾರವನ್ನು ವ್ಯಕ್ತ ಮಾಡುತ್ತಾನೆ.
3. “ಚಂದಿರನೋ ಭಾಸ್ಕರನೋಯೆಂಬಂತೆ”
ಪದ್ಯ – ಸಿರಿಯನಿನ್ನೇನ ಬಣ್ಣಿಪೆನು?
ಕವಿ – ರತ್ನಾಕರವರ್ಣಿ
ಆಕರ – ಭರತೇಶ ವೈಭವ ಆಸ್ಥಾನ ಸಂಧಿ
ಸಂದರ್ಭಸ್ವಾರಸ್ಯ: ರತ್ನಾಕರವರ್ಣಿಯು ವಿಧ ವಿಧದ ಛಾತ್ರ ಚಾಮರಗಳ ಸೇವೆಯನ್ನು ಸ್ವೀಕರಿಸುವ ಚಾವಡಿಯಲ್ಲಿ ಒಳ್ಳೆಯ ರಾಜಠೀವಿಯಿಂದ ವಿರಾಜಮಾನನಾಗಿದ್ದ ಭರತೇಶನು ಹರಿದಾಡುವಂತಹ ಬೆಳ್ಮುಗಿಲ ಮಧ್ಯದಲ್ಲಿ ತೋರಿ ಮರೆಯಾಗುವ ಚಂದಿರನೋ, ಭಾಸ್ಕರನೋ ಎಂಬಂತಿದ್ದನು.
ಸಿರಿಯನಿನ್ನೇ ನಾ ಬಣ್ಣಿಪೆನು ಪಾಠದ ನೋಟ್ಸ್ ಪಿಡಿಎಫ್ ರೂಪದಲ್ಲಿ ನಿಮಗೆ ಬೇಕಾದಲ್ಲಿ ಈ ನೀಲಿ ಅಕ್ಷರಗಳನ್ನು ಒತ್ತಿ
ಸಿರಿಯಾನಿನ್ನೆನಾ ಬನ್ನಿಪೆನು ಕನ್ನಡ ಟಿಪ್ಪಣಿಗಳು ಪಿಡಿಎಫ್
ಉ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ:
1. ಬಿನ್ನಹ : ಅರಿಕೆ : ವಿಭು : ………..
ಉತ್ತರ: ಬಿನ್ನಹ : ಅರಿಕೆ :: ವಿಭು : ಪಂಡಿತ.
2. ಪೊಗಳು : ತೆಗಳು : ಕಾರ್ಮುಗಿಲ್ : ………….
ಉತ್ತರ: ಪೊಗಳು : ತೆಗಳು :: ಕಾರ್ಮುಗಿಲ್ : ಬೆಳ್ಮುಗಿಲ್
3. ಭರತ : ಅಯೋಧ್ಯೆ :: ಬಾಹುಬಲಿ : ………….
ಉ: ಭರತ : ಅಯೋಧ್ಯೆ :: ಬಾಹುಬಲಿ : ಪೌದನಪುರ,
4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :………..
ಉತ್ತರ: ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ: ಚಕ್ರ + ಈಶ್ವರ.
ಊ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠಮಾಡಿರಿ.
1.ಅಯ್ಯಯ್ಯ……………………………………………………………………………………………………………………………………………………..ಕೇಳಬೇಕಣ್ಣ
ಉತ್ತರ: ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು ರಯ್ಯಾ ಮಂಚಿದಿಯೆನೆ ತೆಲುಗ ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು ಮೈಯುಬ್ಬಿ ಕೇಳಬೇಕಣ್ಣ.
2, ‘ಅಂಬುಜವೆಲ್ಲವು………………………………………………………………………………………………………………………………………………………………….ಮರೆದುದಲ್ಲಲ್ಲಿ’
ಉತ್ತರ:
ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತು೦ಬಿದ ಸಭೆಯಲ್ಲಿ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ